ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬ ಶ್ರದ್ಧಾ–ಭಕ್ತಿಯಿಂದ ಆಚರಣೆ ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.. ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. . ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ.ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ. ದೇವಸ್ಥಾನ. ಕಡಿಮೆ ಮಾರಮ್ಮನ ದೇವಸ್ಥಾನ . ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನ ಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು. ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ.ತಕ್ಕ ಹೆಜ್ಜೆ ಹಾಕಿದ್ದರು.

- :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧ ಚಿತ್ರದುರ್ಗ :ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ರೈತರು ಮಳೆಗಾಗಿ ದಿನ ಆಕಾಶವನ್ನು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ.. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ. ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ. ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ.1
- ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಮುಂದೆ ಧರಣಿ ಜನರ ಹಕ್ಕಿಗಾಗಿ ಮೊಳಗಿದ ಧ್ವನಿ… ಬಳ್ಳಾರಿ ಜಿಲ್ಲಾಧಿಕಾರಿಗಳ (DC) ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ, ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಟಿ. ದರಪ್ಪ ನಾಯಕ ಅವರು ಮಾತನಾಡಿದರು. ಸಮಾಜದ ಹಕ್ಕು, ನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಸದಾ ಧ್ವನಿಯಾಗಿರುವ ದರಪ್ಪ ನಾಯಕ ಅವರು, ಜನರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು ಮತ್ತು ಅವರ ನ್ಯಾಯಯುತ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬ ಆಶಯವನ್ನು ವ್ಯಕ್ತಪಡಿಸಿದರು. “ಅಧಿಕಾರಕ್ಕಿಂತ ಜನರ ಹಿತ ಮುಖ್ಯ; ಹುದ್ದೆಗಿಂತ ಜನಸೇವೆ ಶ್ರೇಷ್ಠ” ಎಂಬ ಧ್ಯೇಯದೊಂದಿಗೆ ಜನರ ಮಧ್ಯೆ ನಿಂತು ಅವರ ಧ್ವನಿಗೆ ಶಕ್ತಿ ತುಂಬುತ್ತಿರುವ ಟಿ. ದರಪ್ಪ ನಾಯಕ ಅವರ ಮಾತುಗಳು ಸಭೆಯಲ್ಲಿ ನೆರೆದಿದ್ದವರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿದವು. ಜನರೊಂದಿಗೆ… ಜನರಿಗಾಗಿ… ಜನರ ಹಕ್ಕಿಗಾಗಿ ಸದಾ ಮುಂಚೂಣಿಯಲ್ಲಿ — ಟಿ. ದರಪ್ಪ ನಾಯಕ. ಶ್ರೀ ಟಿ. ದರಪ್ಪ ನಾಯಕ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಬಳ್ಳಾರಿ ಜಿಲ್ಲಾ.1
- ಶೇ33 % ಮೀಸಲಾತಿ ನಮ್ಮ ಹಕ್ಕು - ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಶೇ33 % ಮೀಸಲಾತಿ ನಮ್ಮ ಹಕ್ಕು - ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮಹಿಳೆಯರಿಗೆ ಶೆೇ 33%ಮೀಸಲಾತಿ ಒದಗಿಸಿ , ಸರ್ಕಾರಗಳು ಆದೇಶ ಹೊರಡಿಸಬೇಕು. ಅದು ನಮ್ಮ ಹಕ್ಕು ಎಂದು ಸರ್ಕಾರಗಳಿಗೆ , ಜನವಾದಿ ಮಹಿಳಾ ಸಂಘ ಹಕ್ಕೊತ್ತಾಯ ಮಾಡಿದೆ. ಜನವಾದಿ ಮಹಿಳಾ ಸಂಘದ ತಾಲೂಕಾಧ್ಯಕ್ಷೆ ಟಿ.ಭಾಗ್ಯರವರ ನೇತೃತ್ವದಲ್ಲಿ , ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು ಸದಸ್ಯರು ಮಹಿಳೆಯರು ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಇದಕ್ಕೂ ಮುನ್ನ ಅವರು , ಗಾಂಧೀಚಿತಾಭಸ್ಮ ಸ್ಮಾರಕದಿಂದ. ಪ್ರತಿಭಟನಾ ಮೆರವಣಿಗೆ ಹೊರಟು , ಪಟ್ಟಣದ ಪ್ರಮುಖ ರಸ್ತೆಗಳು ವೃತ್ತಗಳ ಮೂಲಕ ತಹಶಿಲ್ದಾರರ ಕಚೇರಿ ತಲುಪಿದ್ದಾರೆ. ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದ ಸಮಾಜವಾದಿ ಮಹಿಳಾ ಸಂಘದ ಪದಾಧಿಕಾರಿಗಳು, ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಶೇ 33%ರಷ್ಟು ಮೀಸಲಾತಿ ನೀಡುವಂತೆ ಅಗ್ರಹಿಸಿದರು. ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ. ಮಹಿಳಾ ಹೋರಾಟಗಾರ್ತಿಯರು , ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!1
- ಹುಳಿಯಾರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಡಗರದ 'ಚಾಮುಂಡೇಶ್ವರಿ ವರ್ಧಂತಿ' ಆಚರಣೆ ಹುಳಿಯಾರು: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಪ್ರಯುಕ್ತ, ಮಂಗಳವಾರ ಪಟ್ಟಣದ ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಜರುಗಿದವು. ದೇವಸ್ಥಾನದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರ ದಂಡು ನೆರೆದಿತ್ತು. ಬೆಳಗಿನ ವಿಶೇಷ ಪೂಜೆಗಳು: ಮುಂಜಾನೆ ಅಮ್ಮನವರಿಗೆ ವಿಶೇಷ ಅಭಿಷೇಕ ಹಾಗೂ ಕುಂಕುಮಾರ್ಚನೆ ನೆರವೇರಿತು. ಪೂಜಾ ಸಮಯದಲ್ಲಿ 'ಲಲಿತಾ ಸಹಸ್ರನಾಮ' ಪಠಣ ನಡೆಯಿತು. ನಂತರ ನಡೆದ ಮಹಾಮಂಗಳಾರತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಪೂಜಾ ಕೈಂಕರ್ಯಗಳ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ವಿಶೇಷ ಅಲಂಕಾರ:ವರ್ಧಂತಿ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷವಾಗಿ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದಯ ಭಕ್ತರ ಮನಸೆಳೆಯುವಂತಿತ್ತು. ಸಂಜೆ ಸ್ಥಳೀಯ ಭಜನಾ ತಂಡದಿಂದ ಸುಮಧುರವಾದ ಭಜನಾ ಕಾರ್ಯಕ್ರಮ ಜರುಗಿತು. ತದನಂತರ ಅಮ್ಮನವರ 'ಮದಾಲ್‌ಸಿ ಉತ್ಸವ'ವು ವಿಜೃಂಭಣೆಯಿಂದ ನಡೆಯಿತು. ಉತ್ಸವದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಗಣ್ಯರ ಉಪಸ್ಥಿತಿ:ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಎಸ್. ಆರ್. ಎಸ್. ದಯಾನಂದ್, ಕನ್ವಿನಿಯರ್ ಪಟೇಲ್ ರಾಜಣ್ಣ, ಹಾಗೂ ದೇವಾಲಯದ ಗೌಡರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ದೇವರ ಕೃಪೆಗೆ ಪಾತ್ರರಾದರು. ದಿನಪೂರ್ತಿ ನಡೆದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.1
- ಶಿವಮೊಗ್ಗ-ಸಚಿವ ಮಧು ಬಂಗಾರಪ್ಪಗೆ ಶುಭ ಹಾರೈಸಿದ ಕಾಗೋಡು ತಿಮ್ಮಪ್ಪ ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಮಧುಬಂಗಾರಪ್ಪ ಇವರಿಗೆ ಮಾಜಿ ಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಶುಭಹಾರೈಸಿದ್ದಾರೆ. ಜಿಲ್ಲೆ, ತಾಲೂಕು ಹಾಗೂ ರಾಜ್ಯದಲ್ಲಿ ಉತ್ತಮ ಕೆಲಸ ನಿರ್ವಹಿಸುವಂತೆ ಶುಭಕೋರಿದ್ದಾರೆ.1
- ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡಿದ ರೈತರು ಮಾನವೀಯತೆ ಮೆರೆದಿದ್ದಾರೆ ಹುಣಸೆಕಟ್ಟೆ ಗ್ರಾಮದಲ್ಲಿ ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀಡುವ ಮೂಲಕ ರೈತ ಮುಖಂಡರು ಮಾನವೀಯತೆ ಮೆರೆದಿದ್ದಾರೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಜನ ಜಾನುವಾರುಗಳಿಗೆ ಆಹಾರ ನೀರಿನ ಕೊರತೆ ಉಂಟಾಗಿದ್ದು ಪ್ರಾಣಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇತ್ತ ಚಿತ್ರದುರ್ಗ ಜಿಲ್ಲೆ ಹುಣಸೆಕಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದಾಗಿ ಅಡವಿಗಳಲ್ಲಿ ಆಹರದ ಕೊರತೆ ಉಂಟಾಗಿದ್ದು ನೀರಿಗೂ ಆಹಾಕಾರ ಉಂಟಾಗಿದ್ದು ಪ್ರಾಣಿ ಪಕ್ಷಿಗಳು ನಲುಗಿ ಹೋಗಿವೆ. ಇನ್ನೂ ಗ್ರಾಮದ ರೈತ ಮುಖಂಡ ಕಾಂತರಾಜ್ ಅವರ ಜಮೀನಿಗಿಂದು ಆಹಾರ ಅರಸಿ ಬಂದ ನವಿಲುಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡುವ ಮೂಲಕ ಕಾಂತರಾಜ್ ಅವರು ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಆಹಾರದ ಕೊರತೆಯಿಂದಾಗಿ ನವಿಲುಗಳು ಅಕ್ಕಪಕ್ಕದ ಜಮೀನು ತೋಟಗಳಿಗೆ ಬರುತ್ತಿವೆ.1
- ಕೂಲಿ ಮಾಡುವ ಸ್ಥಳದಲ್ಲಿ ಕಾರ್ಮಿಕ ಮೃತಪಟ್ಟಲ್ಲಿ 20 ಲಕ್ಷ ಪರಿಹಾರ ನೀಡಬೇಕು. ಕೂಲಿ ಕೆಲಸಕ್ಕೆ ವಿದ್ಯಾವಂತ ಯುವಕರು ಬರುತ್ತಿರುವುದರಿಂದ ಕೌಶಲ ಆಧಾರಿತ ತರಬೇತಿ ನೀಡಬೇಕು. ರಾಮಜೀ ಕಾಮಗಾರಿಗಳು ನಗರ ಪ್ರದೇಶಕ್ಕೂ ವಿಸ್ತಾರ ಮಾಡಬೇಕು. ಚಳ್ಳಕೆರೆ:ಉದ್ಯೋಗ ಖಾತ್ರಿ ಅಸ್ತಿತ್ವವೇ ಬದಲಾಯಿಸುವ ದೃಷ್ಟಿಯಲ್ಲಿ ಜಾರಿ ಆಗಿರುವ ವಿಬಿರಾಮಜೀಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ ಎಂದು ತಾಲೂಕು ಪಂಚಾಯತಿ ಮುಂಭಾಗದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಾಪಂ ಇಒ ಎಚ್. ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು. ಉದ್ಯೋಗ ಖಾತ್ರಿ ನರೇಗಾ ಯೋಜನೆ ಹಳ್ಳಿ ಮಟ್ಟದ ಕೂಲಿಗಾರರಿಗೆ ಬದುಕಿನ ಭದ್ರತೆ ಆಗಿತ್ತು. ಇದರಿಂದ ಜಲ ಸಂರಕ್ಷಣೆಗಾಗಿ ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳಲ್ಲಿ ಹೂಳೆತ್ತುವ ಕಾಮಗಾರಿ ಕೆಲಸ ಸಿಗುತ್ತಿತ್ತು. ಆದರೆ, ವಿಬಿ ರಾಮಜೀ ಜಾರಿ ಮಾಡಿವ ಮೂಲಕ ಖಾತ್ರಿ ಕಾಮಗಾರಿಗಳ ಬದಲಾವಣೆ ಮಾಡಲಾಗಿದೆ. ಪಂಚಾಯತಿ ಹಂತದಲ್ಲಿ ಕೂಲಿ ಕೆಲಸ ನೀಡುತ್ತಿಲ್ಲ. ಪಿಡಿಒ ಗಳನ್ನು ಬೇಡಿದರೂ ಎನ್ಎಂಆರ್ ತೆಗೆದು ಕೆಲಸ ಕೊಡುತ್ತಿಲ್ಲ. ಪ್ರಸ್ತುತ ಮಳೆ ಕೊರತೆಯಿಂದ ಕೃಷಿ ಕೆಲಸಗಳಿಲ್ಲ. ಕೂಲಿ ಕಾರ್ಮಿಕರು ಗೂಳೆ ಹೋಗುವ ಪರಿಸ್ಥಿತಿ ಇದೆ. ರಾಮಜೀ ಯೋಜನೆಯಲ್ಲಿ ಹೂಳುತ್ತುವ ಕಾಮಗಾರಿಗೆ ಆದ್ಯತೆ ನೀಡಬೇಕು.ಕಾಮಗಾರಿಗಳ ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯತಿಗೆ ನೀಡಬೇಕು. ಕೂಲಿ ಮಾಡುವ ಸ್ಥಳದಲ್ಲಿ ಕಾರ್ಮಿಕ ಮೃತಪಟ್ಟಲ್ಲಿ 20 ಲಕ್ಷ ಪರಿಹಾರ ನೀಡಬೇಕು. ಕೂಲಿ ಕೆಲಸಕ್ಕೆ ವಿದ್ಯಾವಂತ ಯುವಕರು ಬರುತ್ತಿರುವುದರಿಂದ ಕೌಶಲ ಆಧಾರಿತ ತರಬೇತಿ ನೀಡಬೇಕು. ರಾಮಜೀ ಕಾಮಗಾರಿಗಳು ನಗರ ಪ್ರದೇಶಕ್ಕೂ ವಿಸ್ತಾರ ಮಾಡಬೇಕು. ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕುಂಠಿತವಾಗಿದೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಇಒ ಎಚ್. ಶಶಿಧರ್, ಪಂಚಾಯತಿ ಹಂತದಲ್ಲಿ ಕೆಲಸ ನೀಡಲು ಕ್ರಮ ವಹಿಸಲಾಗಿದೆ. ಈಗಾಗಲೇ, ಪರಶುರಾಮಪುರ ಗ್ರಾಮ ಪಂಚಾಯತಿಯಲ್ಲಿ 60 ಲಕ್ಷ ವೆಚ್ಚದ ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಪ್ರತಿ ಪಂಚಾಯತಿಯಲ್ಲೂ ಕಾರ್ಮಿಕರಿಗೆ ಕೆಲಸ ನೀಡುವ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಂಘಟನೆಯ ಟಿ. ಪರಮೇಶ್, ಎಂ.ಆರ್. ಸಂಧ್ಯಾ,ಇ. ಶೋಭಾ, ಆರ್.ಟಿ. ರೇಣುಕಾ, ನಾಗರಾಜ್, ಒ. ರಾಧಮ್ಮ, ನೀಲಮ್ಮ, ಅನ್ನಪೂರ್ಣ, ಶೃತಿ, ಎಚ್. ಸುರೇಶ್, ಗೋವಿಂದಪ್ಪ, ಅಂಜಿನಪ್ಪ, ಹನುಮಂತಪ್ಪ, ಗಿರಿಯಮ್ಮ, ಸ್ವಾಮಿ, ಲತಮ್ಮ ಇದ್ದರು.1
- ತುಮಕೂರು ಜಿಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ತುಮಕೂರು: ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಜೆಪಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡ ಅವರು ತಿಳಿಸಿದರು.1