Shuru
Apke Nagar Ki App…
ತುಮಕೂರು ಜಿಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ತುಮಕೂರು: ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಜೆಪಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡ ಅವರು ತಿಳಿಸಿದರು.
Lavanya
ತುಮಕೂರು ಜಿಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ತುಮಕೂರು: ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಜೆಪಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡ ಅವರು ತಿಳಿಸಿದರು.
More news from ಕರ್ನಾಟಕ and nearby areas
- ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!1
- ಬರಗಾಲ ಪರಿಹಾರ ವೀಕ್ಷಿಸಿದ ಬಿಜೆಪಿ ಅಧ್ಯಕ್ಷರು ಜೊತೆಯಲ್ಲಿ ಯಾರ್ ಯಾರಿದ್ರು ಗೊತ್ತಾ *ಕೊರಟಗೆರೆ ಬ್ರೇಕಿಂಗ್ ನ್ಯೂಸ್:-* *ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ* *"ದೇಶದ ಬೆನ್ನೆಲುಬು ರೈತ - ರಾಜ್ಯ ಸರ್ಕಾರ ಕೂಡಲೇ 10,000 ಕೋಟಿ ಪರಿಹಾರ ನೀಡಲಿ"* ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲನೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಖುದ್ದು ಆಲಿಸಿದರು. ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾ ಸಂಸ್ಥಾನ ಮಠ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿದ ಅವರು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ,"ದೇಶದ ಬೆನ್ನೆಲುಬು ರೈತ. ಈಗ ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು. ಕೇವಲ ಕೇಂದ್ರಕ್ಕೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಳ್ಳದೆ, ಸಂಕಷ್ಟದಲ್ಲಿರುವ ನಮ್ಮ ರೈತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ *10,000 ಕೋಟಿ ರೂ. ಪರಿಹಾರ* ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದರು. "ರೈತರ ಅನುಕೂಲಕ್ಕಾಗಿ ಪ್ರತಿದಿನ *7 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್* ನೀಡುವುದೂ ಸೇರಿದಂತೆ ಅನ್ನದಾತರ ನೆರವಿಗೆ ತಕ್ಷಣ ಧಾವಿಸಬೇಕು. ತಮ್ಮ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ಅನ್ನದಾತರ ಹಿತ ಕಾಯುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಬೇಕು" ಎಂದು ಅವರು ಹೇಳಿದರು. "ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಲೂ ಸ್ಪಂದಿಸದಿದ್ದರೆ ರೈತರ ಪರವಾಗಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ" ಎಂದು ವಿಜಯೇಂದ್ರ ಎಚ್ಚರಿಸಿದರು. ಈ ವೇಳೆ ಶಾಸಕರಾದ ಶ್ರೀ ಸುರೇಶ್ ಗೌಡ, ಶ್ರೀ ಜ್ಯೋತಿ ಗಣೇಶ್, ಶ್ರೀ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ಹಾಗೂ ಮಧುಗಿರಿ ಜಿಲ್ಲಾ ಅಧ್ಯಕ್ಷ ಶ್ರೀ ಚಿದಾನಂದ ಗೌಡ, ಕೊರಟಗೆರೆ ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ಮಂಡಲ ಅಧ್ಯಕ್ಷ ರುದ್ರೇಶ್, ಜಿಲ್ಲಾ ಪದಾಧಿಕಾರಿಗಳಾದ ದಯಾಮಣಿ, ದರ್ಶನ್, ಶ್ರೀಧರ್, ಶಿವಕುಮಾರ ಸ್ವಾಮಿ, ಅರುಣ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ದಾಸರಹಳ್ಳಿ, ಓಬಿಸಿ ಮೋರ್ಚಾ, ರೈತ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸೇರಿದಂತೆ ಹಲವಾರು ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.1
- ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬ ಶ್ರದ್ಧಾ–ಭಕ್ತಿಯಿಂದ ಆಚರಣೆ ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.. ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. . ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ.ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ. ದೇವಸ್ಥಾನ. ಕಡಿಮೆ ಮಾರಮ್ಮನ ದೇವಸ್ಥಾನ . ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನ ಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು. ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ.ತಕ್ಕ ಹೆಜ್ಜೆ ಹಾಕಿದ್ದರು.1
- ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ ಮುಖಂಡರು ಹೊಸದುರ್ಗದ ಹಿರಿಯ ಶಾಸಕ ಬಿ ಜಿ ಗೋವಿಂದಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಕುರುಬರ ಸಂಘದ ವತಿಯಿಂದ ಆಗ್ರಹ ಮಾಡಿದ್ದಾರೆ. ಈ ಕುರಿತು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಜಿಲ್ಲಾ ಕುರುಭರ ಸಂಘದ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಿ ಟಿ ಜಗದೀಶ್ ಅವರು ಮಾತನಾಡಿದ್ದು ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ನಮ್ಮ ಕುರುಬರ ಸಂಘದ ಶಾಸಕರನ್ನ ಕಡೆಗಣನೆ ಮಾಡಲಾಗಿದೆ. ಇಪ್ಪತ್ತು ನೂತನ ಸಚಿವರ ಪ್ರಮಾಣ ವಚನಕ್ಕೆ ಅಂತಿಮ ಪಟ್ಟಿ ಸಿದ್ದಪಡಿಸಿದ್ದು ಇದರಲ್ಲಿ ನಮ್ಮ ಸಮುದಾಯವನ್ನ ಸರ್ಕಾರ ಕಡೆಗಣನೆ ಮಾಡಲಾಗಿದೆ. ರಾಜ್ಯದ ಕುರುಬರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನ ಸರ್ಕಾರ ಕೊಟ್ಟಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಪ್ರಸ್ತಾಪ ಆಗಿದ್ದು ಕೊನೆ ಹಂತದಲ್ಲಿ ಸಚಿವ ಸ್ಥಾನವನ್ನ ಕೊಡದೆ ಅನ್ಯಾಯವಾಗಿದೆ. ಇಪ್ಪತ್ತರ ಪೈಕಿ ಕೇವಲ ಹತ್ತೊಂಬತ್ತು ಶಾಸಕರಿಗೆ ಸಚಿವ ಸ್ಥಾನ ನೀಡಿ ಒಂದನ್ನ ಹಾಗೆ ಉಳಿಸಿಕೊಂಡಿದ್ದು ಆ ಸ್ಥಾನವನ್ನ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾಗಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾಗಿ ಕೆಳಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದು ನಾಲ್ಕು ಬಾರಿ ಶಾಸಕರಾದ ನಮ್ಮ ಸಮುದಾಯದ ಹಿರಿಯ ಶಾಸಕ ಹೊಸದುರ್ಗದ ಬಿಜಿ ಗೋವಿಂದಪ್ಪ ಅವರಿಗೆ ಕೊಡಬೇಕು ಹಾಗೂ ಈ ಕುರಿತು ಮುಖ್ಯಮಂತ್ರಿಗಳ ಬಳಿ ನಿಯೋಗವನ್ನ ಸಹ ತೆಗೆದುಕೊಂಡು ಹೋಗಬೇಕು ಹಾಗೂ ನಮ್ಮ ಸಮುದಾಯದ ಮುಖಂಡರಿಗೆ ಹೆಚ್ಚಿನ ನಿಗಮ ಮಂಡಳಿ ಸ್ಥಾನವನ್ನ ಸಹ ನೀಡಬೇಕು ಎಂದು ಬಿ ಟಿ ಜಗದೀಶ್ ಅವರು ತಿಳಿಸಿದ್ದು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಸಮುದಾಯವನ್ನ ಒಗ್ಗೂಡಿಸಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.1
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದ ಆರನೇ ದಿನದ ರಾತ್ರಿ ಹೋರಾಟಗಾರರು ಭಜನೆಯಲ್ಲಿ ತಲ್ಲಿನರಾಗಿರುವುದು1
- ತುಮಕೂರು ಜಿಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ತುಮಕೂರು: ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಜೆಪಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡ ಅವರು ತಿಳಿಸಿದರು.1
- 7ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ. ಅಭಿಮಾನಿಗಳ ಅಗ್ರಹ. 7 ಬಾರಿ ಗೆದ್ದ ಶಾಸಕರಿಗೆ ಸಚಿವ ನೀಡದಿರವುದು ಅನ್ಯಾಯ ಅಭಿಮಾನಿಗಳ ಅಗ್ರಹ. ಮೊಳಕಾಲ್ಮುರು ಸುದ್ದಿ. ಏಳು ಬಾರಿ ಶಾಸಕರಾಗಿ ಜನರ ಅಪಾರಅನ್ಯಾಯ ಬೆಂಬಲದೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಎನ್ ವೈ ಗೋಪಾಲ ಕೃಷ್ಣ ಅಭಿಮಾನಿಗಳ ಬಳಗ ಇಂದು ರಸ್ತೆ ತೆಡೆದು ಪ್ರತಿಭಟನೆ ನಡೆಸಿದರು. ಎನ್ ವೈ ಗೋಪಾಲ ಕೃಷ್ಣ ರವರು ಹಲವು ದಶಕಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ. ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸತತವಾಗಿ ಜನರ ವಿಶ್ವಾಸ ಗಳಿಸಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಹೊರಗಿಡುವುದು ನ್ಯಾಯ ಸಮ್ಮತವಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕೆ ಪಿ ಸಿಸಿ ಹಾಗಿ ಎಐಸಿಸಿಗೆ ದಿಕ್ಕಾರ ಕೂಗಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುವ ಮಾತುಗಳು ಕೇಳಿ ಬಂದವು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಎನ್ ವೈ ಪಿ ಚೇತನ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅವರ ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಜನಸೇವೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರುಗಳಾದ ವಿಜಯ ಕುಮಾರ ಮಾತನಾಡಿ ನಮ್ಮ ಶಾಸಕರು 7ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ, ಅಂತಹ ಶಾಸಕರನ್ನು ಬಿಟ್ಟು ಒಂದು ಬಾರಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಾ ಎನ್ನುವ ಪ್ರಶ್ನೆ ಹೈ ಕಮಾಂಡ್ ಗೆ ಹಾಕಿದರು, ಮತ್ತು ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಪಧಾಧಿಕಾರಿಗಳ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಒತ್ತಾಯಿಸಿದರು. ಒಟ್ಟಾರೆಯಾಗಿ , ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ದೊರೆಯದಿರುವ ಬಗ್ಗೆ ಅವರ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಪಕ್ಷದ ನಾಯಕತ್ವ ಈ ಬೇಡಿಕೆಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗಮನಾರ್ಹ ವಿಷಯವಾಗಿದೆ. ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷರು ನಾಗಸಮುದ್ರ ಗೋವಿಂದಪ್ಪ, ಶಾಸಕರು ಸಹಾಯಕ ಆಪ್ತರು ಶ್ರೀಕಾಂತ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ತಮ್ಮೆನಹಳ್ಳಿ ನರಸಿಂಹ ರೆಡ್ಡಿ ಸಿದ್ದ ಬಸಪ್ಪ ಸಂತೆ ಗುಡ್ಡ ಇಸ್ಮಾಯಿಲ್ ತಮ್ಮೆನಹಳ್ಳಿ ಗೋವಿಂದಪ್ಪ, ಕೊಂಡಾಪುರ ಡಿ ಎಸ್ ಎಸ್ ಪರಮೇಶ್ವರಪ್ಪ, ಕರುನಾಡ ಜಿಯಾ ಉಲ್ಲಾ, ಎರ್ಜೆನಹಳ್ಳಿ ನಾಗರಾಜ್, ಮೇಸ್ತ್ರಿ ಗೋಪಾಲ, ರಾಂಪುರ ಭಾರತ್ ಕುಮಾರ್, ದೇವಸಮುದ್ರ ಪರಮೇಶ್ವರಪ್ಪ ಲಾಯೆರ್ ಮೂರ್ತಿ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.2