ಬರಗಾಲ ಪರಿಹಾರ ವೀಕ್ಷಿಸಿದ ಬಿಜೆಪಿ ಅಧ್ಯಕ್ಷರು ಜೊತೆಯಲ್ಲಿ ಯಾರ್ ಯಾರಿದ್ರು ಗೊತ್ತಾ *ಕೊರಟಗೆರೆ ಬ್ರೇಕಿಂಗ್ ನ್ಯೂಸ್:-* *ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ* *"ದೇಶದ ಬೆನ್ನೆಲುಬು ರೈತ - ರಾಜ್ಯ ಸರ್ಕಾರ ಕೂಡಲೇ 10,000 ಕೋಟಿ ಪರಿಹಾರ ನೀಡಲಿ"* ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲನೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಖುದ್ದು ಆಲಿಸಿದರು. ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾ ಸಂಸ್ಥಾನ ಮಠ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿದ ಅವರು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ,"ದೇಶದ ಬೆನ್ನೆಲುಬು ರೈತ. ಈಗ ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು. ಕೇವಲ ಕೇಂದ್ರಕ್ಕೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಳ್ಳದೆ, ಸಂಕಷ್ಟದಲ್ಲಿರುವ ನಮ್ಮ ರೈತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ *10,000 ಕೋಟಿ ರೂ. ಪರಿಹಾರ* ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದರು. "ರೈತರ ಅನುಕೂಲಕ್ಕಾಗಿ ಪ್ರತಿದಿನ *7 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್* ನೀಡುವುದೂ ಸೇರಿದಂತೆ ಅನ್ನದಾತರ ನೆರವಿಗೆ ತಕ್ಷಣ ಧಾವಿಸಬೇಕು. ತಮ್ಮ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ಅನ್ನದಾತರ ಹಿತ ಕಾಯುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಬೇಕು" ಎಂದು ಅವರು ಹೇಳಿದರು. "ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಲೂ ಸ್ಪಂದಿಸದಿದ್ದರೆ ರೈತರ ಪರವಾಗಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ" ಎಂದು ವಿಜಯೇಂದ್ರ ಎಚ್ಚರಿಸಿದರು. ಈ ವೇಳೆ ಶಾಸಕರಾದ ಶ್ರೀ ಸುರೇಶ್ ಗೌಡ, ಶ್ರೀ ಜ್ಯೋತಿ ಗಣೇಶ್, ಶ್ರೀ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ಹಾಗೂ ಮಧುಗಿರಿ ಜಿಲ್ಲಾ ಅಧ್ಯಕ್ಷ ಶ್ರೀ ಚಿದಾನಂದ ಗೌಡ, ಕೊರಟಗೆರೆ ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ಮಂಡಲ ಅಧ್ಯಕ್ಷ ರುದ್ರೇಶ್, ಜಿಲ್ಲಾ ಪದಾಧಿಕಾರಿಗಳಾದ ದಯಾಮಣಿ, ದರ್ಶನ್, ಶ್ರೀಧರ್, ಶಿವಕುಮಾರ ಸ್ವಾಮಿ, ಅರುಣ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ದಾಸರಹಳ್ಳಿ, ಓಬಿಸಿ ಮೋರ್ಚಾ, ರೈತ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸೇರಿದಂತೆ ಹಲವಾರು ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.

- ಬರಗಾಲ ಪರಿಹಾರ ವೀಕ್ಷಿಸಿದ ಬಿಜೆಪಿ ಅಧ್ಯಕ್ಷರು ಜೊತೆಯಲ್ಲಿ ಯಾರ್ ಯಾರಿದ್ರು ಗೊತ್ತಾ *ಕೊರಟಗೆರೆ ಬ್ರೇಕಿಂಗ್ ನ್ಯೂಸ್:-* *ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ* *"ದೇಶದ ಬೆನ್ನೆಲುಬು ರೈತ - ರಾಜ್ಯ ಸರ್ಕಾರ ಕೂಡಲೇ 10,000 ಕೋಟಿ ಪರಿಹಾರ ನೀಡಲಿ"* ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲನೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಖುದ್ದು ಆಲಿಸಿದರು. ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾ ಸಂಸ್ಥಾನ ಮಠ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿದ ಅವರು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ,"ದೇಶದ ಬೆನ್ನೆಲುಬು ರೈತ. ಈಗ ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು. ಕೇವಲ ಕೇಂದ್ರಕ್ಕೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಳ್ಳದೆ, ಸಂಕಷ್ಟದಲ್ಲಿರುವ ನಮ್ಮ ರೈತರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ *10,000 ಕೋಟಿ ರೂ. ಪರಿಹಾರ* ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದರು. "ರೈತರ ಅನುಕೂಲಕ್ಕಾಗಿ ಪ್ರತಿದಿನ *7 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್* ನೀಡುವುದೂ ಸೇರಿದಂತೆ ಅನ್ನದಾತರ ನೆರವಿಗೆ ತಕ್ಷಣ ಧಾವಿಸಬೇಕು. ತಮ್ಮ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ಅನ್ನದಾತರ ಹಿತ ಕಾಯುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಬೇಕು" ಎಂದು ಅವರು ಹೇಳಿದರು. "ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಲೂ ಸ್ಪಂದಿಸದಿದ್ದರೆ ರೈತರ ಪರವಾಗಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ" ಎಂದು ವಿಜಯೇಂದ್ರ ಎಚ್ಚರಿಸಿದರು. ಈ ವೇಳೆ ಶಾಸಕರಾದ ಶ್ರೀ ಸುರೇಶ್ ಗೌಡ, ಶ್ರೀ ಜ್ಯೋತಿ ಗಣೇಶ್, ಶ್ರೀ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ಹಾಗೂ ಮಧುಗಿರಿ ಜಿಲ್ಲಾ ಅಧ್ಯಕ್ಷ ಶ್ರೀ ಚಿದಾನಂದ ಗೌಡ, ಕೊರಟಗೆರೆ ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ಮಂಡಲ ಅಧ್ಯಕ್ಷ ರುದ್ರೇಶ್, ಜಿಲ್ಲಾ ಪದಾಧಿಕಾರಿಗಳಾದ ದಯಾಮಣಿ, ದರ್ಶನ್, ಶ್ರೀಧರ್, ಶಿವಕುಮಾರ ಸ್ವಾಮಿ, ಅರುಣ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ದಾಸರಹಳ್ಳಿ, ಓಬಿಸಿ ಮೋರ್ಚಾ, ರೈತ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸೇರಿದಂತೆ ಹಲವಾರು ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.1
- ತಾಲ್ಲೂಕಿನ ಹೇಮಾವತಿ ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಎನ್.ಡಿ.ಎ ಮೈತ್ರಿಕೂಟದ ಬೃಹತ್ ಪ್ರತಿಭಟನೆ ತುರುವೇಕೆರೆ, ಆಗಸ್ಟ್ 4: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿ ಕ್ಷೇತ್ರದ ಕೆರೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೆ.ಡಿ.ಎಸ್.–ಬಿಜೆಪಿ ಎನ್.ಡಿ.ಎ ಮೈತ್ರಿಕೂಟವು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ಕ್ಷೇತ್ರದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಮಳೆಯಾಗಿದ್ದು, ಯಾವುದೇ ರೈತರು ಬಿತ್ತನೆ ಮಾಡಿಲ್ಲ ಎಂದು ತಿಳಿಸಿದರು. ತುರುವೇಕೆರೆಯು ಬರಗಾಲ ಪೀಡಿತ ಪ್ರದೇಶವಾಗಿದೆ. ಕ್ಷೇತ್ರದ ಅನೇಕ ರೈತರ ಬೋರ್‌ವೆಲ್‌ಗಳು ಒಣಗಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಬೆಳೆಯಲು ಸಹ ನೀರಿಲ್ಲದಂತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಪಟ್ಟಿದ್ದಾರೆ ಎಂದರು.ಟಿ.ಬಿ.ಸಿ. ಚಾನೆಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಅನುಷ್ಠಾನಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಸರ್ಕಾರ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು. ತಾಲೂಕಿನ ರೈತರು ಅಡಿಕೆ ಹಾಗೂ ತೆಂಗನ್ನು ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಲಿಂಕ್ ಕೆನಾಲ್ ಯೋಜನೆಯನ್ನು ಹಿಂದೆ ಯಡಿಯೂರಪ್ಪನವರು ಕ್ಯಾಬಿನೆಟ್‌ನಲ್ಲಿ ರದ್ದು ಮಾಡಿದ್ದರು. ಕುಣಿಗಲ್‌ಗೆ ನಾಲೆಯನ್ನು ಅಗಲೀಕರಣ ಮಾಡಿ ನೀರು ಹರಿಸುವ ಬದಲು, ಅದನ್ನು ಬಿಟ್ಟು ರಾಮನಗರಕ್ಕೆ ನೀರನ್ನು ಹರಿಸಲು ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೀರಿ. ಈ ಯೋಜನೆಯನ್ನು ನಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ಮಾತನಾಡಿ, ಕ್ಷೇತ್ರದ ಕೆರೆ, ಬಾವಿ, ಕಟ್ಟೆಗಳೆಲ್ಲವೂ ಬರಿದಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ತೊಂದರೆಯಾಗಿದೆ ಎಂದರು. ಈ ಸರ್ಕಾರ ರೈತರಿಗೆ ಆತ್ಮಹತ್ಯೆಯ ಭಾಗ್ಯವನ್ನು ನೀಡಿದೆ ಎಂದು ಟೀಕಿಸಿದರು. ನಮ್ಮ ಸರ್ಕಾರದಲ್ಲಿ ಗೋಶಾಲೆಗಳನ್ನು ತೆರೆದಿದ್ದೆವು, ಅದನ್ನು ಈ ಸರ್ಕಾರ ಮುಚ್ಚಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಬಂದಿರುವುದರಿಂದ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಡ್ಯಾಂನಲ್ಲಿ ಈಗಾಗಲೇ 25 ಟಿ.ಎಂ.ಸಿ. ನೀರು ಕ್ರೂಢೀಕರಣವಾಗಿದೆ. ಕೊನೆಪಕ್ಷ ಕ್ಷೇತ್ರದ ಕೆರೆಗಳಿಗೆ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ, ದಿನಾಂಕ 10-8-2026ರೇ ಸೋಮವಾರ ಬೆಳಿಗ್ಗೆ 11.30ಕ್ಕೆ ಹೇಮಾವತಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಯನ್ನು ಎನ್.ಡಿ.ಎ ಮೈತ್ರಿಕೂಟದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಾದಯಾತ್ರೆಯನ್ನು ಮಾಡಿಯಾದರೂ ನೀರನ್ನು ಬಿಡಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ಬರಗಾಲದಂತಹ ಕಷ್ಟದ ಸಂದರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ರೈತರ ತೋಟಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಅನ್ನು ನೀಡುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೇಮಾವತಿ ಡ್ಯಾಂನಿಂದ ನಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದ ಈ ಕ್ಷೇತ್ರದ ಸಮಸ್ತ ರೈತ ಬಾಂಧವರು ಈ ಬೃಹತ್ ಪ್ರತಿಭಟನೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಪರವಾದ ಹೋರಾಟಕ್ಕೆ ಶಕ್ತಿ ತುಂಬಿಸಬೇಕಾಗಿ ಮನವಿ ಮಾಡಿದರು. ತಾಲೂಕಿನ ಎನ್.ಡಿ.ಎ ಮೈತ್ರಿಕೂಟದ ಸಮಸ್ತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ವಿ. ಪ್ರಕಾಶ್, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ಎನ್.ಆರ್ ಸುರೇಶ್, ಗುಂಡ ಸುರೇಶ್, ಚಿದಾನಂದ, ಸಂತೋಷ್ ಡಿ, ಕೊಂಡಜ್ಜಿ ವಿಶ್ವನಾಥ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮುತ್ತಣ್ಣ, ಮುನಿಯೂರು ರಂಗಸ್ವಾಮಿ, ಗೊಟ್ಟಿಕೆರೆ ಕಾಂತರಾಜು ಸೇರಿದಂತೆ ಎನ್.ಡಿ.ಎ ಮೈತ್ರಿಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.4
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದ ಆರನೇ ದಿನದ ರಾತ್ರಿ ಹೋರಾಟಗಾರರು ಭಜನೆಯಲ್ಲಿ ತಲ್ಲಿನರಾಗಿರುವುದು1
- ವಿದ್ಯಾಗಣಪತಿ ದೇವಾಲಯದಲ್ಲಿ ಚಾಮುಂಡೇಶ್ವರಿ ವರ್ಧಂತಿ, ಚಂಢಿಕಾ ಹೋಮ ಅಷ್ಟೋತ್ತರ ಪಾರಾಯಣ ಮಂಡ್ಯ ಆಷಾಢ ಮಾಸದ ಬಹುಳ ಷಷ್ಠಿ ದಿನವಾದ ಇಂದು ಚಾಮುಂಡೇಶ್ವರಿ ವರ್ದಂತಿ ಪ್ರಯುಕ್ತ ಮಂಡ್ಯದ ವಿದ್ಯಾನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮಾತ ಸೇವಾ ಟ್ರಸ್ಟ್ ನಿಂದ ಇಂದು ಚಂಡಿಕಾಯಾಗ,ಅಷ್ಟೋತ್ತರ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ಮಾತಾ ಟ್ರಸ್ಟ್ ನ ಪದಾದಿಕಾರಿ ಗಳಾದಪ್ರತಿಮಾರಮೇಶ್,ಮಾಲಾನಾಗೇಶ್,ಭಾರತೀಅಡಿಗ ಮತ್ತು ಟ್ರಸ್ಟಿಗಳು ಬಾಗವಹಿಸಿದ್ದರು. ದೇವಿಕೃಪೆಗೆಪಾತ್ರರಾಗಲು ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.1
- BESCOM| ಅದು ನಮ್ಮದಲ್ಲ ನಾವು ಮಾಡಿಲ್ಲ ಕೆಪಿಟಿಸಿಎಲ್ ಅವರನ್ನ ಕೇಳಿ ಅಂತಾರೆ...! BESCOM| ಅದು ನಮ್ಮದಲ್ಲ ನಾವು ಮಾಡಿಲ್ಲ ಕೆಪಿಟಿಸಿಎಲ್ ಅವರನ್ನ ಕೇಳಿ ಅಂತಾರೆ...!1
- ಗುಬ್ಬಿಶಾಸಕ ಶ್ರೀನಿವಾಸ್ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ? ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ಸಿಗೆ ಬರುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮುಂದಿನ ದಿನದಲ್ಲಿ ನಿಮಗೆ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದರು ಭರವಸೆ ಉಸಿಯಾಗಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಗುಬ್ಬಿ ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ1
- ಬಿಎಂಟಿಸಿ ಕಂಡಕ್ಟರ್ ನಿಂದ ದರ್ಪ ಬಿಕ್ಷುಕನ ಮೇಲೆ ದರ್ಪ ನಡೆಸಿರುವ ಬಿಎಂಟಿಸಿ ಕಂಡಕ್ಟರ್ ನೆಲಮಂಗಲ ತಾಲೂಕಿನ ಅರಿಶಿನ ಕುಂಟೆಯಲ್ಲಿ ನಡೆದ ಘಟನೆ ನೆಲಮಂಗಲ ಬಿಎಂಟಿಸಿ ಕಂಡಕ್ಟರ್ ನಿಂದ ದರ್ಪ ಬಿಕ್ಷುಕನ ಮೇಲೆ ದರ್ಪ ನಡೆಸಿರುವ ಬಿಎಂಟಿಸಿ ಕಂಡಕ್ಟರ್ ನೆಲಮಂಗಲ ತಾಲೂಕಿನ ಅರಿಶಿನ ಕುಂಟೆಯಲ್ಲಿ ನಡೆದ ಘಟನೆ ಅರಿಶಿನಕುಂಟೆ ಕೆಸ್ ಆರ್ ಟಿಸಿ ಬಸ್ ಸ್ಟಾಂಡ್ ಬಳಿ ಘಟನೆ ಬಸ್ ಹತ್ತಲು ಹೋಗಿದ್ದ ಬಿಕ್ಷುಕನನ್ನ ಕಾಲಿನಿಂದ ಒದ್ದು ದರ್ಪ ಬೈಕ್ ನಲ್ಲಿ ಬರ್ತಿದ್ದ ಹೆಲ್ಮೆಟ್ ಕ್ಯಾಮೆರಾಕಣ್ಣಿನಲ್ಲಿ ಅವಮಾನಿಯ ದೃಶ್ಯ ಸೆರೆ ಘಟನೆ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಕಂಡಕ್ಟರ್ ದರ್ಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ1