logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ರಾಹುಲ್ ಹುಂಡೈ ಶೋರೂಮ್‌ನಲ್ಲಿ ಅಗ್ನಿ ಅವಘಡ .ಶಿವಮೊಗ್ಗ: ನಗರದ ಶಂಕರ ಮಠ ರಸ್ತೆ ಯಲ್ಲಿರುವ ರಾಹುಲ್ ಹುಂಡೈ ಕಾರ್‌ ಶೋರೂಮ್‌ನಲ್ಲಿ ಗುರು ವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ವಿದ್ಯುತ್ ಶಾರ್ಟ್ ಸರ್ಕಿಟ್‌ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಶೋರೂಮ್‌ನ ಮೇಲ್ಭಾಗದಲ್ಲಿ ರುವ ನಾಮಫಲಕದ ಬಳಿ ಮೊದಲು ಬೆಂಕಿಯ ಜ್ವಾಲೆಗಳು ಕಾಣಿಸಿ ಕೊಂಡಿವೆ.ಕೂಡಲೇ ಎಚ್ಚೆತ್ತ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿ ಯನ್ನು ಸಂಪೂರ್ಣವಾಗಿ ನಂದಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಕೆಲ ಪೀಠೋಪ ಕರಣ ಸುಟ್ಟುಹೋಗಿವೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

12 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
12 hrs ago
bf0d6371-755b-4dc9-b845-21f1f16b0c7d

ಶಿವಮೊಗ್ಗ-ರಾಹುಲ್ ಹುಂಡೈ ಶೋರೂಮ್‌ನಲ್ಲಿ ಅಗ್ನಿ ಅವಘಡ .ಶಿವಮೊಗ್ಗ: ನಗರದ ಶಂಕರ ಮಠ ರಸ್ತೆ ಯಲ್ಲಿರುವ ರಾಹುಲ್ ಹುಂಡೈ ಕಾರ್‌ ಶೋರೂಮ್‌ನಲ್ಲಿ ಗುರು ವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ವಿದ್ಯುತ್ ಶಾರ್ಟ್ ಸರ್ಕಿಟ್‌ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಶೋರೂಮ್‌ನ ಮೇಲ್ಭಾಗದಲ್ಲಿ ರುವ ನಾಮಫಲಕದ ಬಳಿ ಮೊದಲು ಬೆಂಕಿಯ ಜ್ವಾಲೆಗಳು ಕಾಣಿಸಿ ಕೊಂಡಿವೆ.ಕೂಡಲೇ ಎಚ್ಚೆತ್ತ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿ ಯನ್ನು ಸಂಪೂರ್ಣವಾಗಿ ನಂದಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಕೆಲ ಪೀಠೋಪ ಕರಣ ಸುಟ್ಟುಹೋಗಿವೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

More news from ಕರ್ನಾಟಕ and nearby areas
  • ಕರ್ನಾಟಕ ರಾಜ್ಯದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ.
    1
    ಕರ್ನಾಟಕ ರಾಜ್ಯದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್' ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ. ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು. ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP 1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
    1
    ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ
ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. 
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ  ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್' ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ. ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು. ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum  ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP   1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP 1  ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಬರದ ನಾಡಿನಲ್ಲಿ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವೇದ ಸಂಸ್ಥೆಯ ಕಾರ್ಯ ಶ್ಲಾಘನೀಯ: ಸಚಿವ ಟಿ. ರಘುಮೂರ್ತಿ ಬಣ್ಣನೆ ಚಳ್ಳಕೆರೆ:ನಮ್ಮ ಈ ಬರದ ನಾಡಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ವೇದ ಶಿಕ್ಷಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಗ್ರಾಮೀಣ ಭಾಗದ ಬಡವರ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಶೈಕ್ಷಣಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಂಸ್ಥೆಯ ಕೊಡುಗೆ ಅಪಾರ ಎಂದು ರಾಜ್ಯ ಸರ್ಕಾರದ ಸಚಿವ ಟಿ. ರಘುಮೂರ್ತಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದರು. ಚಳ್ಳಕೆರೆ ತಾಲೂಕಿನ ಸಾಣಿಕೆರೆಯಲ್ಲಿರುವ ವೇದ ಶೈಕ್ಷಣಿಕ ಅಭಿವೃದ್ಧಿ ಅಕಾಡೆಮಿ ಹಾಗೂ ವೇದ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿದ ನೂತನ 'ಆದಿಯೋಗಿ' ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಸಂಸ್ಥಾಪಕರ ದಿನಾಚರಣೆ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಸಂಸ್ಥೆಯು ನೀಡುತ್ತಿರುವ ಶೈಕ್ಷಣಿಕ ಸೇವೆಯನ್ನು ಸಚಿವರು ಈ ಸಂದರ್ಭದಲ್ಲಿ ವಿಶೇಷವಾಗಿ ಶ್ಲಾಘಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ತುಮಕೂರು ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, "ಶಿಕ್ಷಣವು ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಏಕೈಕ ಮಾರ್ಗವಾಗಿದೆ. ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ. ವಿದ್ಯಾರ್ಥಿಗಳು ಅಕ್ಷರ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳಿಗೆ ಒತ್ತು ನೀಡಬೇಕು" ಎಂದು ಕಿವಿಮಾತು ಹೇಳಿದರು. ಸಿದ್ದರಬೆಟ್ಟದ ಶ್ರೀ ವೀರಭದ್ರ ಮಹಾಸ್ವಾಮಿಗಳು ಸಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ವೀರೇಂದ್ರ ಪಪ್ಪಿ ಅವರು ಸಹ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ವೇದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ.ಟಿ. ರವೀಂದ್ರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕಿರಣ್, ಅಧೀಕ್ಷಕರಾದ ವಿರೂಪಾಕ್ಷಪ್ಪ ಸಿ., ಪ್ರಾಂಶುಪಾಲರಾದ ಸಂದೀಪ್, ಮುಖ್ಯೋಪಾಧ್ಯಾಯಿನಿಯಾದ ಪುಷ್ಪರಾಣಿ, ಹಾಗೂ ಪ್ರಮುಖರಾದ ರವಿಕುಮಾರ್, ಯೋಗೇಶ್, ಸತೀಶ್, ಸಾಗರ್ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
    1
    ಬರದ ನಾಡಿನಲ್ಲಿ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವೇದ ಸಂಸ್ಥೆಯ ಕಾರ್ಯ ಶ್ಲಾಘನೀಯ: ಸಚಿವ ಟಿ. ರಘುಮೂರ್ತಿ ಬಣ್ಣನೆ

ಚಳ್ಳಕೆರೆ:ನಮ್ಮ ಈ ಬರದ ನಾಡಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ವೇದ ಶಿಕ್ಷಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಗ್ರಾಮೀಣ ಭಾಗದ ಬಡವರ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಶೈಕ್ಷಣಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಂಸ್ಥೆಯ ಕೊಡುಗೆ ಅಪಾರ ಎಂದು ರಾಜ್ಯ ಸರ್ಕಾರದ ಸಚಿವ ಟಿ. ರಘುಮೂರ್ತಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದರು.
ಚಳ್ಳಕೆರೆ ತಾಲೂಕಿನ ಸಾಣಿಕೆರೆಯಲ್ಲಿರುವ ವೇದ ಶೈಕ್ಷಣಿಕ ಅಭಿವೃದ್ಧಿ ಅಕಾಡೆಮಿ ಹಾಗೂ ವೇದ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿದ ನೂತನ 'ಆದಿಯೋಗಿ' ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಸಂಸ್ಥಾಪಕರ ದಿನಾಚರಣೆ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಸಂಸ್ಥೆಯು ನೀಡುತ್ತಿರುವ ಶೈಕ್ಷಣಿಕ ಸೇವೆಯನ್ನು ಸಚಿವರು ಈ ಸಂದರ್ಭದಲ್ಲಿ ವಿಶೇಷವಾಗಿ ಶ್ಲಾಘಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ತುಮಕೂರು ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, "ಶಿಕ್ಷಣವು ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಏಕೈಕ ಮಾರ್ಗವಾಗಿದೆ. ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ. ವಿದ್ಯಾರ್ಥಿಗಳು ಅಕ್ಷರ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳಿಗೆ ಒತ್ತು ನೀಡಬೇಕು" ಎಂದು ಕಿವಿಮಾತು ಹೇಳಿದರು. ಸಿದ್ದರಬೆಟ್ಟದ ಶ್ರೀ ವೀರಭದ್ರ ಮಹಾಸ್ವಾಮಿಗಳು ಸಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶಾಸಕ ವೀರೇಂದ್ರ ಪಪ್ಪಿ ಅವರು ಸಹ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ವೇದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ.ಟಿ. ರವೀಂದ್ರ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕಿರಣ್, ಅಧೀಕ್ಷಕರಾದ ವಿರೂಪಾಕ್ಷಪ್ಪ ಸಿ., ಪ್ರಾಂಶುಪಾಲರಾದ ಸಂದೀಪ್, ಮುಖ್ಯೋಪಾಧ್ಯಾಯಿನಿಯಾದ ಪುಷ್ಪರಾಣಿ, ಹಾಗೂ ಪ್ರಮುಖರಾದ ರವಿಕುಮಾರ್, ಯೋಗೇಶ್, ಸತೀಶ್, ಸಾಗರ್ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
    user_Kiran M J
    Kiran M J
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    3 hrs ago
  • ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ! ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು. ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು. ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!
    1
    ರೈತರ ಧ್ವನಿ ಅಡಗುವುದಿಲ್ಲ…
ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! 
ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ!
ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು.
ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು.
ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
ರೈತರ ಧ್ವನಿ ಅಡಗುವುದಿಲ್ಲ…
ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ
    1
    ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ 
ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    4 hrs ago
  • ಚಿತ್ರದುರ್ಗ:ಭದ್ರಾ ನೀರಿಗಾಗಿ ವಿರೋಧ ಪಕ್ಷಗಳಿಂದ ಬೃಹತ್ ಪ್ರತಿಭಟನೆ ಭದ್ರಾ ನೀರನ್ನು ಕಾಲುವೆಯಿಂದ ಹೊಸದುರ್ಗ ತಾಲೂಕಿನ ಕೆರೆಗೆ,ಹರಿಸುವುದರಿಂದ ಕೈ ಬಿಟ್ಟಿರುವುದು ಹಾಗೂ ಕಾಲುವೆ ಯೋಜನೆ ವಿಳಂಬ ನೀತಿ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ‌ ಪಕ್ಷಗಳು ಒಟ್ಟಾಗಿ ಹೊಸದುರ್ಗದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ಸಮಯದಲ್ಲಿ ಮಾತಾಡಿದ ಎಂಎಲ್ ಸಿ‌‌ ಕೆಎಸ್ ನವೀನ್,ಹೊಸದುರ್ಗದಿಂದಲೇ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯಬೇಕಿದೆ. ಆದರೆ ಹೊಸದುರ್ಗ ತಾಲೂಕಿಗೆ ನೀರು ಕೊಟ್ಟಿಲ್ಲ. ಇದಕ್ಕಾಗಿ ಹೋರಾಟ ಮಾಡುವ ಬೀದಿಗೆ ಬರುವ ಸ್ಥಿತಿ‌ ನಿರ್ಮಾಣವಾಗಿದೆ.ತಾಲೂಕಿಗೆ ನೀರು ಕೊಡದಿರುವುದು ನಮ್ಮ ರೈತರಿಗೆ ಮಾಡಿರುವ ಅನ್ಯಾಯವೆಂದರು. ಮತ್ತೊಬ್ಬ ಮುಖಂಡ ಲಿಂಗಮೂರ್ತಿ ಮಾತಾಡಿ,ಬರ ನಾಡಿಗೆ ನೀರು ಕೊಡುತ್ತಾರೆಂದು ಕಳೆದ ಮೂರು ವರ್ಷಗಳಿಮನದ ಕಾಯುತ್ತಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ ತಾಳಿದೆ. ಹಾಲಿ ಶಾಸಕರು ನಮ್ಮಗಳ ಬೆಂಬಲ‌ ಕೋರಿದಾಗ ಬೆಂಬಲ ಕೊಟ್ಟು ಸಹಕರಿಸಿದ್ದೇವೆ.ಆದರೆ ನೀರು ಮಾತ್ರ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    1
    ಚಿತ್ರದುರ್ಗ:ಭದ್ರಾ ನೀರಿಗಾಗಿ ವಿರೋಧ ಪಕ್ಷಗಳಿಂದ  ಬೃಹತ್ ಪ್ರತಿಭಟನೆ
ಭದ್ರಾ ನೀರನ್ನು ಕಾಲುವೆಯಿಂದ ಹೊಸದುರ್ಗ ತಾಲೂಕಿನ ಕೆರೆಗೆ,ಹರಿಸುವುದರಿಂದ ಕೈ ಬಿಟ್ಟಿರುವುದು ಹಾಗೂ  ಕಾಲುವೆ ಯೋಜನೆ ವಿಳಂಬ ನೀತಿ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್  ಬಿಜೆಪಿ‌ ಪಕ್ಷಗಳು ಒಟ್ಟಾಗಿ ಹೊಸದುರ್ಗದಲ್ಲಿ  ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ಸಮಯದಲ್ಲಿ ಮಾತಾಡಿದ ಎಂಎಲ್ ಸಿ‌‌ ಕೆಎಸ್ ನವೀನ್,ಹೊಸದುರ್ಗದಿಂದಲೇ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯಬೇಕಿದೆ.  ಆದರೆ ಹೊಸದುರ್ಗ ತಾಲೂಕಿಗೆ ನೀರು ಕೊಟ್ಟಿಲ್ಲ. ಇದಕ್ಕಾಗಿ ಹೋರಾಟ ಮಾಡುವ ಬೀದಿಗೆ ಬರುವ ಸ್ಥಿತಿ‌ ನಿರ್ಮಾಣವಾಗಿದೆ.ತಾಲೂಕಿಗೆ ನೀರು ಕೊಡದಿರುವುದು ನಮ್ಮ ರೈತರಿಗೆ ಮಾಡಿರುವ ಅನ್ಯಾಯವೆಂದರು. ಮತ್ತೊಬ್ಬ ಮುಖಂಡ ಲಿಂಗಮೂರ್ತಿ ಮಾತಾಡಿ,ಬರ ನಾಡಿಗೆ ನೀರು ಕೊಡುತ್ತಾರೆಂದು ಕಳೆದ ಮೂರು ವರ್ಷಗಳಿಮನದ ಕಾಯುತ್ತಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ ತಾಳಿದೆ. ಹಾಲಿ ಶಾಸಕರು ನಮ್ಮಗಳ ಬೆಂಬಲ‌ ಕೋರಿದಾಗ ಬೆಂಬಲ ಕೊಟ್ಟು ಸಹಕರಿಸಿದ್ದೇವೆ.ಆದರೆ ನೀರು ಮಾತ್ರ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    user_Kumara Swamy
    Kumara Swamy
    ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬಾಗೇನಹಾಳ್ ಗ್ರಾಮದಿಂದ ಕಲ್ಲೇನಹಳ್ಳಿಗೆ ಹೋಗುವ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಬಿರುಕು ಬಿಟ್ಟು ಕಬ್ಬಿಣದ ರಾಡುಗಳು ಕಾಣುತ್ತಿವೆ. ರೈತರ ಬಹುತೇಕ ಜಮೀನುಗಳು ಸಹ ಇದೇ ಮಾರ್ಗದಲ್ಲಿ ಇದ್ದು ವಾಹನ ಸವಾರರು ರೈತರು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ರೈತರು ರಾತ್ರಿ ವೇಳೆಯಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಶಾಲಾ ಮಕ್ಕಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದು ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರವಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆಯೂ ಕೂಡ ಆಗ್ರಹ ಮಾಡಿದ್ದಾರೆ.
    1
    ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ
ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬಾಗೇನಹಾಳ್ ಗ್ರಾಮದಿಂದ ಕಲ್ಲೇನಹಳ್ಳಿಗೆ ಹೋಗುವ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಬಿರುಕು ಬಿಟ್ಟು ಕಬ್ಬಿಣದ ರಾಡುಗಳು ಕಾಣುತ್ತಿವೆ. ರೈತರ ಬಹುತೇಕ ಜಮೀನುಗಳು ಸಹ ಇದೇ ಮಾರ್ಗದಲ್ಲಿ ಇದ್ದು ವಾಹನ ಸವಾರರು ರೈತರು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ರೈತರು ರಾತ್ರಿ ವೇಳೆಯಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಶಾಲಾ ಮಕ್ಕಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದು ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರವಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆಯೂ ಕೂಡ ಆಗ್ರಹ ಮಾಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಎತ್ತುಗಳ ಕೊರತೆ .ಶೇಂಗಾ ಬೆಳೆಯಲ್ಲಿ ಎಡೆಕುಂಟೆ ಹೋಡೆಯಲಿಕ್ಕೆ ಹಳೆ ಸೈಕಲ್ ಮೊರೆ ಹೊದ ರೈತ..ಯೂಟುಬ್ ನೋಡಿಕೊಂಡು ಅನುಪಯುಕ್ತ ಸೈಕಲ್ ನ್ನೆ ಎಡೆಕುಂಟೆ ಮಾಡಿಕೊಂಡ ರೈತ..
    1
    ಎತ್ತುಗಳ ಕೊರತೆ .ಶೇಂಗಾ ಬೆಳೆಯಲ್ಲಿ ಎಡೆಕುಂಟೆ ಹೋಡೆಯಲಿಕ್ಕೆ ಹಳೆ ಸೈಕಲ್ ಮೊರೆ ಹೊದ  ರೈತ..ಯೂಟುಬ್ ನೋಡಿಕೊಂಡು ಅನುಪಯುಕ್ತ ಸೈಕಲ್   ನ್ನೆ ಎಡೆಕುಂಟೆ ಮಾಡಿಕೊಂಡ ರೈತ..
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • BNSS ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ನೀಡಿ, ಬಂಧಿಸಿದ ಪೊಲೀಸರ ನಡೆಗೆ ಗರಂ ಆದ ನ್ಯಾಯಾಧೀಶರು. ಪೊಲೀಸರು BNSS ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ನೀಡಿ, ಆಗಸ್ಟ್ 27ರಂದು ಹಾಜರಾಗುವಂತೆ ಸೂಚಿಸಿದ್ದರು. ಆದರೆ ಹಾಜರಾಗಬೇಕಾದ ದಿನಾಂಕಕ್ಕೂ ಎರಡು ದಿನ ಮುಂಚಿತವಾಗಿ, ಆಗಸ್ಟ್ 25ರಂದು ಅವರನ್ನು ಬಂಧಿಸಲಾಯಿತು.
    1
    BNSS ಸೆಕ್ಷನ್ 35(3) ಅಡಿಯಲ್ಲಿ  ನೋಟಿಸ್ ನೀಡಿ, ಬಂಧಿಸಿದ ಪೊಲೀಸರ ನಡೆಗೆ ಗರಂ ಆದ ನ್ಯಾಯಾಧೀಶರು.
ಪೊಲೀಸರು BNSS ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ನೀಡಿ, ಆಗಸ್ಟ್ 27ರಂದು ಹಾಜರಾಗುವಂತೆ ಸೂಚಿಸಿದ್ದರು.
ಆದರೆ ಹಾಜರಾಗಬೇಕಾದ ದಿನಾಂಕಕ್ಕೂ ಎರಡು ದಿನ ಮುಂಚಿತವಾಗಿ, ಆಗಸ್ಟ್ 25ರಂದು ಅವರನ್ನು ಬಂಧಿಸಲಾಯಿತು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.