ಕೊರಟಗೆರೆ ಬ್ರೇಕಿಂಗ್..... ನಾಯಿಯ ಮೇಲೆ ಚಿರತೆ ದಾಳಿ ಆತಂಕಗೊಂಡ ಸಾರ್ವಜನಿಕರು...ಜೀವ ಕೈಯಲ್ಲಿಡು ಜೀವಿಸುವ ಸ್ಥಳೀಯ ನಿವಾಸಿಗಳ ವ್ಯಥೆ... ಪಟ್ಟಣದ 4ನೇ ವಾರ್ಡ್ ನ ಕಾವಲುಬೀಲು ಗ್ರಾಮದಲ್ಲಿನ ಪ್ರತ್ಯಕ್ಷವಾದ ಚಿರತೆ ಏಕಾಏಕಿ ಸಾಕು ನಾಯಿಯ ಮೇಲೆ ಮನೆಯ ಮುಂದೆಯೇ ದಾಳಿ ಮಾಡಿದ್ದು, ಮಕ್ಕಳು, ಮಹಿಳೆಯರು ಸುತ್ತಮುತ್ತಲಿನ ರೈತರು ಆತಂಕದ ಮಡುವಿನಲ್ಲಿ ಬದುಕುವ ಸಮಸ್ಯೆ ಸೃಷ್ಟಿ ಯಾಗಿದೆ.. ವಿಷಯ ತಿಳಿದು ತಕ್ಷಣ ಅರಣ್ಯ ಇಲಾಖೆ ಸೂಕ್ತಕ್ರಮ ವಹಿಸಲು ಮುಂದಾದ ಘಟನೆ ಬುಧವಾರ ಸಂಜೆ ನಡೆದಿದೆ... ಪಟ್ಟಣಕ್ಕೆ ಹೊಂದಕೊಂಡಂತಿರು ಹೀರೆಬೆಟ್ಟ ರಕ್ಷಿತ ಅರಣ್ಯ ಪ್ರದೇದಲ್ಲಿನ ಕಾಡು ಪ್ರಾಣಿಗಳ ಉಪಟಳದಿಂದ ಇಲ್ಲಿನ ಜನತೆ ಭೀತಿಯಿಂದ ತಿರುಗಾಡುವ ಪರಿಸ್ಥಿತಿ ಶೋಚನೀಯ... ಅರಣ್ಯ ಇಲಾಖೆ ಸಿಬ್ಬಂದಿಗಳು ಇನ್ನೂ ಮುಂದಾದರು ತತಕ್ಷಣ ಸೂಕ್ತಕ್ರಮವಹಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ... ಕೇಂದ್ರ ಸ್ಥಾನ ಮರೆತ ಆರ್.ಎಫ್ ಓ ಗಳಿಂದಲೇ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳು ಮೇಕೆ, ಕುರಿ, ನಾಯಿ ಸೇರಿದಂತೆ ಮನುಷ್ಯನ ಮೇಲೆ ಎರಗಲು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ... ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿ ಗಳು ಸ್ಥಳಕ್ಕೆ ಬೇಟಿ ಪರೀಶಿಲಿಸಿ ಸ್ಥಳೀಯರಿಗೆ ಸುರಕ್ಷತೆಗಳ ಬಗ್ಗೆ ಸಲಹೆ ಸೂಚನೆ ನೀಡಿದರು... ವರದಿ ಸತೀಶ್ ಎಸ್ ಕೊರಟಗೆರೆ
ಕೊರಟಗೆರೆ ಬ್ರೇಕಿಂಗ್..... ನಾಯಿಯ ಮೇಲೆ ಚಿರತೆ ದಾಳಿ ಆತಂಕಗೊಂಡ ಸಾರ್ವಜನಿಕರು...ಜೀವ ಕೈಯಲ್ಲಿಡು ಜೀವಿಸುವ ಸ್ಥಳೀಯ ನಿವಾಸಿಗಳ ವ್ಯಥೆ... ಪಟ್ಟಣದ 4ನೇ ವಾರ್ಡ್ ನ ಕಾವಲುಬೀಲು ಗ್ರಾಮದಲ್ಲಿನ ಪ್ರತ್ಯಕ್ಷವಾದ ಚಿರತೆ ಏಕಾಏಕಿ ಸಾಕು ನಾಯಿಯ ಮೇಲೆ ಮನೆಯ ಮುಂದೆಯೇ ದಾಳಿ ಮಾಡಿದ್ದು, ಮಕ್ಕಳು, ಮಹಿಳೆಯರು ಸುತ್ತಮುತ್ತಲಿನ ರೈತರು ಆತಂಕದ ಮಡುವಿನಲ್ಲಿ ಬದುಕುವ ಸಮಸ್ಯೆ ಸೃಷ್ಟಿ ಯಾಗಿದೆ.. ವಿಷಯ ತಿಳಿದು ತಕ್ಷಣ ಅರಣ್ಯ ಇಲಾಖೆ
ಸೂಕ್ತಕ್ರಮ ವಹಿಸಲು ಮುಂದಾದ ಘಟನೆ ಬುಧವಾರ ಸಂಜೆ ನಡೆದಿದೆ... ಪಟ್ಟಣಕ್ಕೆ ಹೊಂದಕೊಂಡಂತಿರು ಹೀರೆಬೆಟ್ಟ ರಕ್ಷಿತ ಅರಣ್ಯ ಪ್ರದೇದಲ್ಲಿನ ಕಾಡು ಪ್ರಾಣಿಗಳ ಉಪಟಳದಿಂದ ಇಲ್ಲಿನ ಜನತೆ ಭೀತಿಯಿಂದ ತಿರುಗಾಡುವ ಪರಿಸ್ಥಿತಿ ಶೋಚನೀಯ... ಅರಣ್ಯ ಇಲಾಖೆ ಸಿಬ್ಬಂದಿಗಳು ಇನ್ನೂ ಮುಂದಾದರು ತತಕ್ಷಣ ಸೂಕ್ತಕ್ರಮವಹಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ... ಕೇಂದ್ರ ಸ್ಥಾನ ಮರೆತ ಆರ್.ಎಫ್ ಓ ಗಳಿಂದಲೇ
ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳು ಮೇಕೆ, ಕುರಿ, ನಾಯಿ ಸೇರಿದಂತೆ ಮನುಷ್ಯನ ಮೇಲೆ ಎರಗಲು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ... ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿ ಗಳು ಸ್ಥಳಕ್ಕೆ ಬೇಟಿ ಪರೀಶಿಲಿಸಿ ಸ್ಥಳೀಯರಿಗೆ ಸುರಕ್ಷತೆಗಳ ಬಗ್ಗೆ ಸಲಹೆ ಸೂಚನೆ ನೀಡಿದರು... ವರದಿ ಸತೀಶ್ ಎಸ್ ಕೊರಟಗೆರೆ
- ಮಳವಳ್ಳಿ: 11 ವರ್ಷಗಳ ನಂತರ ಜ.15 ರಿಂದ ಜ. 23ರವರೆಗೆ ಕಲ್ಕುಣಿ ಗ್ರಾಮದ ಐತಿಹಾಸಿಕ ಸಪ್ತ ಮಾತೃಕಿಯರ ದೊಡ್ಡ ಜಾತ್ರಾ ಮಹೋತ್ಸವ ಮಳವಳ್ಳಿ :ತಾಲ್ಲೂಕಿನ ಕಲ್ಕುಣಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಹಾಶಕ್ತಿ ಮಂಚದ ಕಾಳಿಕಾಂಭ ಸಪ್ತ ಮಾತೃಕೆಯರ ದೊಡ್ಡ ಜಾತ್ರಾ ಮಹೋತ್ಸವ ಜ 15 ರಿಂದ ಜ.23 ರವರೆಗೆ ಲಕ್ಷಾಂತರ ಜನಸ್ತೋ ಮದ ನಡುವೆ ಬಹು ವಿಜೃಂಭಣೆ ಯಿಂದ ಜರುಗಲಿದೆ. ಈ ಸಂಬಂಧ ಕಲ್ಕುಣಿ ಗ್ರಾಮದ ಸೊಸೈಟಿ ಆವರಣದಲ್ಲಿ ಶ್ರೀ ಮಂಚದ ಕಾಳಿಕಾಂಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್ ನಂಜೇಗೌಡ ಮತ್ತು ಆಡಳಿತ ಮಂಡಳಿಯ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಹಬ್ಬದ ಆಚರಣೆ ಕುರಿತ ಪ್ರಮುಖ ಅಂಶಗ ಳನ್ನು ವಿವರಿಸಿದರು . ಈ ಸಂದರ್ಭದಲ್ಲಿ ಮಾಜಿ ಟಿಎಪಿಸಿ ಎಂಎಸ್ ಅಧ್ಯಕ್ಷರು ಆದ ಕೆ ಜೆ ದೇವರಾಜು ಅವರುಗಳು ಶ್ರೀ ಮಂಚದ ಕಾಳಿಕಾಂಭ, ಶ್ರೀ ವಿಜಯನಗರೇಶ್ವರಿ, ಶ್ರೀ ಹಿರಿಯ ಮಂಚದ ಕಾಳಿಕಾಂಭ, ಶ್ರೀ ಮನೆಯಮ್ಮ, ಶ್ರೀ ಬೆಟ್ಟದ ಅರಸಮ್ಮ, ಶ್ರೀ ಕನ್ನಕಡ್ಡಯ್ಯ, ಶ್ರೀ ಮುಖದ ದೇವರು, ಶ್ರೀ ಮೂಗದೇವಮ್ಮ, ಶ್ರೀ ಪಟ್ಟಲ ದಮ್ಮ ಸೇರಿದಂತೆ ಸಪ್ತ ಮಾತೃಕೆ ಯರ ಆರಾಧನೆಯ ಐತಿಹಾಸಿಕ ಹಬ್ಬ ಇದಾಗಿದೆ ಕಲ್ಕುಣಿ, ದೊಡ್ಡೇ ಗೌಡನ ಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ಪುಟ್ಟೇಗೌಡನ ಕೊಪ್ಪಲು, ಚಿಕ್ಕಕಲ್ಕುಣಿ ಹಾಗೂ ಇನ್ನಿತರ ಗ್ರಾಮಸ್ಥರು ಸೇರಿ ಆಚರಿಸುವ ಬಹುಕಟ್ಟುಪಾಡು ಗಳನ್ನು ಒಳಗೊಂಡ ಬಹು ಸಾಂಪ್ರದಾಯಿಕ ಹಬ್ಬ ಇದಾಗಿದೆ ಎಂದು ತಿಳಿಸಿದರು. ಪ್ರತೀ 5 ವರ್ಷ 7 ವರ್ಷ 9 ವರ್ಷಗಳಿಗೊಮ್ಮೆ ಈ ಹಬ್ಬ ನಡೆಯುತ್ತಿತ್ತಾದರೂ ಕರೋನದಿಂದಾಗಿ 11 ವರ್ಷದ ನಂತರ ಈ ಹಬ್ಬ ನಡೆಯುತ್ತಿದೆ. ಗ್ರಾಮದ ಹೊರವಲಯದ ವೀಳ್ಯದೆಲೆ ತೋಟವೊಂದರ ಭೂಮಾಂತ ಗರ್ಭದಲ್ಲಿ ನೆಲೆಗೊಂಡಿರುವ ಶ್ರೀ ಮಂಚದ ಕಾಳಿಕಾಂಭ ಮಹಾತಾ ಯಿಯ ವಿಗ್ರಹವನ್ನು ಜನವರಿ 15 ರಂದು ಮಧ್ಯರಾತ್ರಿ ಹೊರತೆಗೆದು ನಿಶ್ಯಬ್ದ ಸ್ಥಿತಿಯಲ್ಲಿ ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುವು ದರೊಂದಿಗೆ ಹಬ್ಬದ ಪ್ರಮುಖ ಘಟ್ಟ ಆರಂಭವಾಗಲಿದೆ ಎಂದು ಅವರು ವಿವರಿಸಿದರು. 8 ದಿನಗಳ ಕಾಲ ದೇವತೆಯರ ಉತ್ಸವ ಹೆಬ್ಬಾರೆಗಳ ಮೆರವಣಿಗೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ ಎಂದು ತಿಳಿಸಿದ ಅವರು 20 ರಂದು ಮಂಗಳವಾರ ಬಲಿ ಬೀಳುವುದರೊಂದಿ ಹಬ್ಬದ ಪ್ರಮುಖ ಅತ್ಯಾಕರ್ಷಕ ಗಟ್ಟ ಜರುಗಲಿದೆ .ಅಂದು ರಾತ್ರಿ 11.30 ರ ಸುಮಾರಿಗೆ ಮನೆಯಮ್ಮ ಲಕ್ಷ್ಮಿ ದೇವಮ್ಮ ದೇವಸ್ಥಾನದಲ್ಲಿ ಅರ್ಚಕರು ಬಲಿ ಬೀಳಲಿದ್ದು ಬಲಿಯನ್ನು ಚಾವಡಿ ಮುಂಭಾಗ ಪವಡಿಸಿರುವ ಶ್ರೀ ಮಂಚದ ಕಾಳಿಕಾಂಭ ದೇವಿಯ ಮುಂದೆ ತಂದು ಇಟ್ಟು ಮುಖದ ದೇವರು ಅದರ ಸುತ್ತ ಕುಣಿಯು ವುದು ಹಬ್ಬದ ಪ್ರಮುಖ ಹಂತವಾ ಗಿದೆ ಎಂದು ವಿವರಿಸಿದರು. ಇದಲ್ಲದೆ ಜನವರಿ 23 ರಂದು ಬೆಳಿಗ್ಗೆ ಗ್ರಾಮದ ದೊಡ್ಡ ಕೆರೆಯಲ್ಲಿ ಸಪ್ತಮಾತೃಕೆಯರ ತೆಪ್ಪೋತ್ಸವ ನಡೆಯಲಿದ್ದು ಜನವರಿ 25 ರಂದು ಮದ್ಯ ರಾತ್ರಿ ಶ್ರೀ ಮಂಚದ ಕಾಳಿಕಾಂಭ ದೇವಿಯನ್ನು ಮತ್ತೆ ಭೂಮಾಂತ ರ್ಗಕ್ಕೆ ಸೇರಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ ಎಂದು ವಿವರಿಸಿದರು. ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಈ ಹಬ್ಬಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಯಾವುದೇ ಲೋಪವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಈಗಾಗಲೇ ಸೂಚಿಸಿದ್ದಾರೆ ಎಂದು ದೇವರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾದನಾಯಕ, ಪರಮೇಶ್, ಮಾದೇವು, ಸೋಮಶೇಖರ್, ಚಂದನ್, ಮಲ್ಲಯ್ಯಪ್ಪ ಹಾಜರಿದ್ದರು.1
- *ಭಾರತ ನಲ್ಲಿ ವೈರಲ್*1
- ಹನೂರು: ತಾಲ್ಲೂಕಿನ ಮಹದೇಶ್ವರಬೆಟ್ಟ ರಸ್ತೆಯ ಕೋಣನಕೆರೆಯ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸುಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಂತಹ ಪ್ರಸಂಗ ಜರುಗಿದೆ ಕೊಣನಕೆರೆ ಗ್ರಾಮದ ಹತ್ತಿರ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಯಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ10 ಎಫ್ 0509 ಬಸ್ ಹಾಗೂ ಕೆಎ 09 ಜೆಎಸ್ 3871 ದ್ವಿ ಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು (35) ಸತ್ತಿ ಬಿನ್ ಮಾದೇವ (36)ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೆ ಸ್ಥಳಕ್ಕೆ ರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.1
- ಬಳ್ಳಾರಿ ತಾಲೂಕು ಹೊನ್ನಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಕೋಳಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಜನರು ಪಂದ್ಯಾವಳಿಯನ್ನು ಕುತೂಹಲದಿಂದ ವೀಕ್ಷಿಸಿದರು. ಹಬ್ಬದ ಸಂಭ್ರಮದ ನಡುವೆ ಕಾರ್ಯಕ್ರಮ ಸೌಹಾರ್ದಯುತವಾಗಿ ನಡೆಯಿತು.1
- ಸೊರಬ: ತಾಲೂಕಿನ ಆನವಟ್ಟಿ ತಿಮ್ಮಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮತ್ತು ಎಂಎಲ್ಸಿ ಭಾರತೀಯ ಶೆಟ್ಟಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪ ಭಕ್ತಾದಿಗಳು ಇಬ್ಬರನ್ನು ಸನ್ಮಾನಿಸಿದರು. ದೇವಸ್ಥಾನಕ್ಕೆ ತಮ್ಮ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಉಡುಗಣಿ, ಪ್ರಕಾಶ್ ತಲಕಾಲಕೊಪ್ಪ, ಕೃಷ್ಣಮೂರ್ತಿ, ಶಿವಪ್ರಸಾದ್ ಮತ್ತಿತರರು ಇದ್ದರು.4
- ಶ್ರೀ ಅಟ್ಟವಿ ಸುಕ್ಷೇತ್ರ ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ #ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ #tumkur2
- *ಭಾರತ ನಲ್ಲಿ ವೈರಲ್*1
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐ.ಜಿ.ಪಿ ಭೇಟಿ ನೀಡಿದರು. ಮೃತ ಬಾಲಕನ ಮನರಯವರೊಂದಿಗೂ ಮಾತುಕತೆ ನಡೆಸಿದರು. ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.1
- ಹಾನಗಲ್... ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಮರಿಚಿಕೆ. ಸಾಕಷ್ಟು ಹಣವಿದ್ದರು SDMC ಅಧ್ಯಕ್ಷನ ಗರ್ವದಿಂದ ಬಳಕೆಯಾಗದೆ ವೇತನವಿಲ್ಲದೆ ಅತಿಥಿ ಶಿಕ್ಷಕನೊಂದಿಗೆ ಆವರಣದಲ್ಲಿ ಬಡೆದಾಟ...1