Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಹಲಗೂರಿನಲ್ಲಿ ಡಿ ಎಸ್ ಪಿ ಗ್ಲೋಬಲ್ ಶಾಲಾ ವಾರ್ಷಿಕೋತ್ಸವಕ್ಕೆ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಚಾಲನೆ ಮಳವಳ್ಳಿ ವಿದ್ಯಾರ್ಥಿಗಳಿಗೆ ವಿನಯ ಸಂಸ್ಕೃತಿ ಅಮೂಲ್ಯವಾದದ್ದು, ಡಾ.ಉಮೇಶ್ ಮಠಪತಿ. ಮಳವಳ್ಳಿ ವಿದ್ಯಾರ್ಥಿಗಳಿಗೆ ವಿದ್ಯೆ ತಿಳಿದಿರುತ್ತದೆ ಆದರೆ ವಿನಯ ನಮ್ಮ ಸಂಸ್ಕೃತಿಗಳನ್ನು ನಾವುಗಳು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಖ್ಯಾತ ವೈದ್ಯಾಧಿಕಾರಿ ಉಮೇಶ್ ಮಠಪತಿ ತಿಳಿಸಿದರು. ಹಲಗೂರಿನ ಡಿ.ಎಸ್.ಪಿ. ಗ್ಲೋಬಲ್ ಸ್ಕೂಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಎರಡು ಅತಿ ಮುಖ್ಯ, ಯೋಗ ಮತ್ತು ವ್ಯಾಯಾಮ ದಿಂದ ಶಾರೀರಿಕ ಆರೋಗ್ಯವನ್ನು ಉತ್ತಮ ಮಾಡಿಕೊಳ್ಳಬಹುದು. ಆದರೆ ಈಗನಾವು ಎಲ್ಲವನ್ನು ಒತ್ತಡದಲ್ಲೇ ಸ್ವೀಕರಿಸುತ್ತೇವೆ ಆದ್ದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಈಗಿನ ಮಕ್ಕಳು ಮನೆಯಹೊರಗಡೆ ಆಟಗಳನ್ನು ಆಡುವುದಿಲ್ಲ ಮೊಬೈಲ್ಗಳಲ್ಲಿ ಮುಳುಗಿರುತ್ತವೆ ಇದರಿಂದ ನಮಗೆಅವರಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ಸಿಗುತ್ತಿವೆ .ಆದುದರಿಂದ ವಿದ್ಯಾರ್ಥಿಗಳ ಪೋಷಕರು ನಿಮ್ಮ ಮಕ್ಕಳನ್ನು ಜಾಗೃತಿಯಾಗಿ ನೋಡಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ವಿದ್ಯೆ ಗೊತ್ತಿರುತ್ತದೆ ಆದರೆ ವಿನಯ ಹಾಗೂ ನಮ್ಮ ಒಳ್ಳೆಯ ಸಂಸ್ಕಾರಗಳು ತಿಳಿದಿರುವುದಿಲ್ಲ ಅದನ್ನು ಕಲಿಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಬೇಕಾಗಿದೆ ಎಂದರು. ಸಬ್ ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡುತ್ತಾ, ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಅಂಕ ಪಡೆದಿರುತ್ತಾರೆ ಅದನ್ನು ನೋಡಿ ನೀವು ಪ್ರೋತ್ಸಾಹಿಸಿ, ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಲೇಬೇಕು ಎಂಬ ಒತ್ತಡವನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ನಮ್ಮ ದೇಶದಲ್ಲಿರುವ ಡಾಕ್ಟರ್ ಗಳು ಇಂಜಿನಿಯರ್ ಎಲ್ಲರೂ ನೂರಕ್ಕೆ ನೂರರಷ್ಟು ಅಂಕ ಪಡೆದವರು ಅಲ್ಲ .ಆಯಾಯ ವೃತ್ತಿಗೆ ಎಷ್ಟು ಅರ್ಹತೆ ಬೇಕು ಅಷ್ಟು ಅಂಕಗಳನ್ನು ಪಡೆಯಲು ಸಹಕರಿಸಿ. ಕೆಲವರು ಶಾಲೆಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಫೇಲಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ 21- 22ನೇ ವಯಸ್ಸಿಗೆ ಐಎಎಸ್ ,ಐಪಿಎಸ್ ಪರೀಕ್ಷೆ ಪಾಸ್ ಮಾಡುವ ಸಾಧ್ಯತೆ ಇದೆ ಇದಕ್ಕೆ ಅವರ ಕುಟುಂಬದ ಸಹಕಾರ ಬೆಂಬಲ ಇರಬೇಕು ಎಂದರು. ಶಾಲೆಯ ಸಹ ಸಂಸ್ಥಾಪಕ, ಎಂ. ಬೇಬಿ ವಿಕ್ಟೋರಿಯಾ ಮಾತನಾಡುತ್ತಾ, ನಿಮ್ಮ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ನೀಡಬೇಕು, ಅಂದರೆ ಮೊಬೈಲ್ಗಳಲ್ಲಿ ಬರಿ ಆಟ ಆಡಿಸುವುದಲ್ಲ ರೈಲ್ವೆ ಟಿಕೆಟ್ ಬುಕ್ ಮಾಡುವುದು ಆಧಾರ ಕಾರ್ಡ್, ಪಾನ್ ಕಾರ್ಡ್, ಬಿಪಿಎಲ್ ಕಾರ್ಡುಗಳನ್ನು ಬ್ಯಾಂಕುಗಳಿಗೆ ಲಿಂಕ್ ಮಾಡುವುದು, ಮತ್ತು ಡಿಜಿಟಲ್ ಸ್ಕ್ಯಾಮ್ ಗಳ ಬಗ್ಗೆ ತಿಳುವಳಿಕೆ ಹಾಗೂ ನಿಮ್ಮ ಮಕ್ಕಳನ್ನು ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗುವಂತೆ ಮನೆಯ ಹೊರಗಡೆ ಬೆಳಿಗ್ಗೆ ಸಂಜೆ ಬಿಸಿಲಿನಲ್ಲಿಆಟ ಆಡಿಸುವುದು ಮತ್ತು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಉತ್ತೇಜನ ನೀಡುವುದು ಇದನ್ನು ನಮ್ಮ ಶಾಲೆಯಲ್ಲಿ ಅಳವಡಿಸಿಕೊಂಡು ನಡೆಸಿಕೊಂಡು ಬರುತ್ತಿದ್ದೇವೆ, ಎಂದರು. ಕಾರ್ಯಕ್ರಮದಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು, ನಿವೃತ್ತಿ ಶಿಕ್ಷಕ ಮರಿದಾಸಪ್ಪ , ಶಾಲೆಯ ಮುಖ್ಯಸ್ಥರಾದ ಡಾ. ಪ್ರಭು ದಾಸ್,ಎಂ. ಬೇಬಿ ವಿಕ್ಟೋರಿಯಾ. ಸಹ ಕಾರ್ಯದರ್ಶಿ, ಜೇಮ್ಸ್ ವಿನೀತ್, ಶಾಲೆಯ ಅಧ್ಯಕ್ಷ ಶೀಬಾ ಸುಮ್ಮಿ ಮೋಲ್. ಪ್ರಿನ್ಸಿಪಾಲ್ ಮಂಗಳಮ್ಮ, ಉಪ ಪ್ರಿನ್ಸಿಪಾಲ್ ರೇಖಾ, ಮೇಲ್ವಿಚಾರಕಿ ರಮ್ಯ, ಸಹ ಶಿಕ್ಷಕಿಯರಾದ ಸಮಪದ, ಪ್ರಮೀಳಾ ಮತ್ತು ಸಹಾಯಕರು ಸೇರಿದಂತೆ ಇತರರು ಇದ್ದರು.1
- ಹನೂರು :ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ಸಮೀಪ ಜರುಗಿದೆ. ಹನೂರು ತಾಲೂಕಿನ ಬಸವನಗುಡಿ ಗ್ರಾಮದ ಸೋಲಿಗ ಸಮುದಾಯದ 17 ವರ್ಷದ ಅಪ್ಪು ಮೃತಪಟ್ಟ ಯುವಕನಾ ಗಿದ್ದಾನೆ. ಒಡೆಯರಪಾಳ್ಯದ ಟಿಬೆಟ್ ಕ್ಯಾಂಪ್ ನಿಂದ ಬಸವನಗುಡಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡಿದ್ದ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಪಡಿಸಿ ಖಾಸಗಿ ವಾಹನದ ಮೂಲಕ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐ.ಜಿ.ಪಿ ಭೇಟಿ ನೀಡಿದರು. ಮೃತ ಬಾಲಕನ ಮನರಯವರೊಂದಿಗೂ ಮಾತುಕತೆ ನಡೆಸಿದರು. ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.1
- ರಾಜ್ಯದಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಬುದವಾರ ಬೆಳಗ್ಗೆ 10 ಗಂಟೆಗೆ ಅವರು ಮಾತನಾಡಿದ್ದು ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದ್ದು ಪಾದಯಾತ್ರೆ ಮಾಡುವುದು ಸೂಕ್ತ ಎಂದು ಅನಿಸಿದೆ ವರಿಷ್ಠರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ1
- ಮುಳಬಾಗಿಲು : ಭಾರತೀಯ ಕಿಸಾನ್ ಸಂಘದ ವತಿಯಿಂದ ಮಕರ ಸಂಕ್ರಾಂತಿ ಸ್ವಾಗತ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.1
- ಚಿತ್ರದುರ್ಗ ಬ್ರೇಕಿಂಗ್.... ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ ಚಿತ್ರದುರ್ಗ ತಾಲೂಕಿನ ಬೆಳಗಟ್ಟ-ತುರುವನೂರು ರಸ್ತೆಯಲ್ಲಿ ಘಟನೆ ಭೀಮಗೊಂಡನಹಳ್ಳಿಯ ತಿಪ್ಪೇಸ್ವಾಮಿ(28), ಪ್ರಭು(42)ಮೃತ ದುರ್ದೈವಿಗಳು ಬೈಕ್ ಸವಾರನ ಅಜಾಗರೂಕ, ವೇಗದ ಚಾಲನೆ ಘಟನೆಗೆ ಕಾರಣ ಮಾಹಿತಿ ಸ್ಥಳಕ್ಕೆ ತುರುವನೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲು1
- *ಭಾರತ ನಲ್ಲಿ ವೈರಲ್*1