ಹಲಗೂರಿನಲ್ಲಿ DSP ಗ್ಲೋಬಲ್ ಶಾಲಾ ವಾರ್ಷಿಕೋತ್ಸವಕ್ಕೆ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಚಾಲನೆ ಹಲಗೂರಿನಲ್ಲಿ ಡಿ ಎಸ್ ಪಿ ಗ್ಲೋಬಲ್ ಶಾಲಾ ವಾರ್ಷಿಕೋತ್ಸವಕ್ಕೆ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಚಾಲನೆ ಮಳವಳ್ಳಿ ವಿದ್ಯಾರ್ಥಿಗಳಿಗೆ ವಿನಯ ಸಂಸ್ಕೃತಿ ಅಮೂಲ್ಯವಾದದ್ದು, ಡಾ.ಉಮೇಶ್ ಮಠಪತಿ. ಮಳವಳ್ಳಿ ವಿದ್ಯಾರ್ಥಿಗಳಿಗೆ ವಿದ್ಯೆ ತಿಳಿದಿರುತ್ತದೆ ಆದರೆ ವಿನಯ ನಮ್ಮ ಸಂಸ್ಕೃತಿಗಳನ್ನು ನಾವುಗಳು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಖ್ಯಾತ ವೈದ್ಯಾಧಿಕಾರಿ ಉಮೇಶ್ ಮಠಪತಿ ತಿಳಿಸಿದರು. ಹಲಗೂರಿನ ಡಿ.ಎಸ್.ಪಿ. ಗ್ಲೋಬಲ್ ಸ್ಕೂಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಎರಡು ಅತಿ ಮುಖ್ಯ, ಯೋಗ ಮತ್ತು ವ್ಯಾಯಾಮ ದಿಂದ ಶಾರೀರಿಕ ಆರೋಗ್ಯವನ್ನು ಉತ್ತಮ ಮಾಡಿಕೊಳ್ಳಬಹುದು. ಆದರೆ ಈಗನಾವು ಎಲ್ಲವನ್ನು ಒತ್ತಡದಲ್ಲೇ ಸ್ವೀಕರಿಸುತ್ತೇವೆ ಆದ್ದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಈಗಿನ ಮಕ್ಕಳು ಮನೆಯಹೊರಗಡೆ ಆಟಗಳನ್ನು ಆಡುವುದಿಲ್ಲ ಮೊಬೈಲ್ಗಳಲ್ಲಿ ಮುಳುಗಿರುತ್ತವೆ ಇದರಿಂದ ನಮಗೆಅವರಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ಸಿಗುತ್ತಿವೆ .ಆದುದರಿಂದ ವಿದ್ಯಾರ್ಥಿಗಳ ಪೋಷಕರು ನಿಮ್ಮ ಮಕ್ಕಳನ್ನು ಜಾಗೃತಿಯಾಗಿ ನೋಡಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ವಿದ್ಯೆ ಗೊತ್ತಿರುತ್ತದೆ ಆದರೆ ವಿನಯ ಹಾಗೂ ನಮ್ಮ ಒಳ್ಳೆಯ ಸಂಸ್ಕಾರಗಳು ತಿಳಿದಿರುವುದಿಲ್ಲ ಅದನ್ನು ಕಲಿಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಬೇಕಾಗಿದೆ ಎಂದರು. ಸಬ್ ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡುತ್ತಾ, ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಅಂಕ ಪಡೆದಿರುತ್ತಾರೆ ಅದನ್ನು ನೋಡಿ ನೀವು ಪ್ರೋತ್ಸಾಹಿಸಿ, ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಲೇಬೇಕು ಎಂಬ ಒತ್ತಡವನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ನಮ್ಮ ದೇಶದಲ್ಲಿರುವ ಡಾಕ್ಟರ್ ಗಳು ಇಂಜಿನಿಯರ್ ಎಲ್ಲರೂ ನೂರಕ್ಕೆ ನೂರರಷ್ಟು ಅಂಕ ಪಡೆದವರು ಅಲ್ಲ .ಆಯಾಯ ವೃತ್ತಿಗೆ ಎಷ್ಟು ಅರ್ಹತೆ ಬೇಕು ಅಷ್ಟು ಅಂಕಗಳನ್ನು ಪಡೆಯಲು ಸಹಕರಿಸಿ. ಕೆಲವರು ಶಾಲೆಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಫೇಲಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ 21- 22ನೇ ವಯಸ್ಸಿಗೆ ಐಎಎಸ್ ,ಐಪಿಎಸ್ ಪರೀಕ್ಷೆ ಪಾಸ್ ಮಾಡುವ ಸಾಧ್ಯತೆ ಇದೆ ಇದಕ್ಕೆ ಅವರ ಕುಟುಂಬದ ಸಹಕಾರ ಬೆಂಬಲ ಇರಬೇಕು ಎಂದರು. ಶಾಲೆಯ ಸಹ ಸಂಸ್ಥಾಪಕ, ಎಂ. ಬೇಬಿ ವಿಕ್ಟೋರಿಯಾ ಮಾತನಾಡುತ್ತಾ, ನಿಮ್ಮ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ನೀಡಬೇಕು, ಅಂದರೆ ಮೊಬೈಲ್ಗಳಲ್ಲಿ ಬರಿ ಆಟ ಆಡಿಸುವುದಲ್ಲ ರೈಲ್ವೆ ಟಿಕೆಟ್ ಬುಕ್ ಮಾಡುವುದು ಆಧಾರ ಕಾರ್ಡ್, ಪಾನ್ ಕಾರ್ಡ್, ಬಿಪಿಎಲ್ ಕಾರ್ಡುಗಳನ್ನು ಬ್ಯಾಂಕುಗಳಿಗೆ ಲಿಂಕ್ ಮಾಡುವುದು, ಮತ್ತು ಡಿಜಿಟಲ್ ಸ್ಕ್ಯಾಮ್ ಗಳ ಬಗ್ಗೆ ತಿಳುವಳಿಕೆ ಹಾಗೂ ನಿಮ್ಮ ಮಕ್ಕಳನ್ನು ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗುವಂತೆ ಮನೆಯ ಹೊರಗಡೆ ಬೆಳಿಗ್ಗೆ ಸಂಜೆ ಬಿಸಿಲಿನಲ್ಲಿಆಟ ಆಡಿಸುವುದು ಮತ್ತು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಉತ್ತೇಜನ ನೀಡುವುದು ಇದನ್ನು ನಮ್ಮ ಶಾಲೆಯಲ್ಲಿ ಅಳವಡಿಸಿಕೊಂಡು ನಡೆಸಿಕೊಂಡು ಬರುತ್ತಿದ್ದೇವೆ, ಎಂದರು. ಕಾರ್ಯಕ್ರಮದಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು, ನಿವೃತ್ತಿ ಶಿಕ್ಷಕ ಮರಿದಾಸಪ್ಪ , ಶಾಲೆಯ ಮುಖ್ಯಸ್ಥರಾದ ಡಾ. ಪ್ರಭು ದಾಸ್,ಎಂ. ಬೇಬಿ ವಿಕ್ಟೋರಿಯಾ. ಸಹ ಕಾರ್ಯದರ್ಶಿ, ಜೇಮ್ಸ್ ವಿನೀತ್, ಶಾಲೆಯ ಅಧ್ಯಕ್ಷ ಶೀಬಾ ಸುಮ್ಮಿ ಮೋಲ್. ಪ್ರಿನ್ಸಿಪಾಲ್ ಮಂಗಳಮ್ಮ, ಉಪ ಪ್ರಿನ್ಸಿಪಾಲ್ ರೇಖಾ, ಮೇಲ್ವಿಚಾರಕಿ ರಮ್ಯ, ಸಹ ಶಿಕ್ಷಕಿಯರಾದ ಸಮಪದ, ಪ್ರಮೀಳಾ ಮತ್ತು ಸಹಾಯಕರು ಸೇರಿದಂತೆ ಇತರರು ಇದ್ದರು.

- ಹಲಗೂರಿನಲ್ಲಿ ಡಿ ಎಸ್ ಪಿ ಗ್ಲೋಬಲ್ ಶಾಲಾ ವಾರ್ಷಿಕೋತ್ಸವಕ್ಕೆ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಚಾಲನೆ ಮಳವಳ್ಳಿ ವಿದ್ಯಾರ್ಥಿಗಳಿಗೆ ವಿನಯ ಸಂಸ್ಕೃತಿ ಅಮೂಲ್ಯವಾದದ್ದು, ಡಾ.ಉಮೇಶ್ ಮಠಪತಿ. ಮಳವಳ್ಳಿ ವಿದ್ಯಾರ್ಥಿಗಳಿಗೆ ವಿದ್ಯೆ ತಿಳಿದಿರುತ್ತದೆ ಆದರೆ ವಿನಯ ನಮ್ಮ ಸಂಸ್ಕೃತಿಗಳನ್ನು ನಾವುಗಳು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಖ್ಯಾತ ವೈದ್ಯಾಧಿಕಾರಿ ಉಮೇಶ್ ಮಠಪತಿ ತಿಳಿಸಿದರು. ಹಲಗೂರಿನ ಡಿ.ಎಸ್.ಪಿ. ಗ್ಲೋಬಲ್ ಸ್ಕೂಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಎರಡು ಅತಿ ಮುಖ್ಯ, ಯೋಗ ಮತ್ತು ವ್ಯಾಯಾಮ ದಿಂದ ಶಾರೀರಿಕ ಆರೋಗ್ಯವನ್ನು ಉತ್ತಮ ಮಾಡಿಕೊಳ್ಳಬಹುದು. ಆದರೆ ಈಗನಾವು ಎಲ್ಲವನ್ನು ಒತ್ತಡದಲ್ಲೇ ಸ್ವೀಕರಿಸುತ್ತೇವೆ ಆದ್ದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಈಗಿನ ಮಕ್ಕಳು ಮನೆಯಹೊರಗಡೆ ಆಟಗಳನ್ನು ಆಡುವುದಿಲ್ಲ ಮೊಬೈಲ್ಗಳಲ್ಲಿ ಮುಳುಗಿರುತ್ತವೆ ಇದರಿಂದ ನಮಗೆಅವರಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ಸಿಗುತ್ತಿವೆ .ಆದುದರಿಂದ ವಿದ್ಯಾರ್ಥಿಗಳ ಪೋಷಕರು ನಿಮ್ಮ ಮಕ್ಕಳನ್ನು ಜಾಗೃತಿಯಾಗಿ ನೋಡಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ವಿದ್ಯೆ ಗೊತ್ತಿರುತ್ತದೆ ಆದರೆ ವಿನಯ ಹಾಗೂ ನಮ್ಮ ಒಳ್ಳೆಯ ಸಂಸ್ಕಾರಗಳು ತಿಳಿದಿರುವುದಿಲ್ಲ ಅದನ್ನು ಕಲಿಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಬೇಕಾಗಿದೆ ಎಂದರು. ಸಬ್ ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡುತ್ತಾ, ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಅಂಕ ಪಡೆದಿರುತ್ತಾರೆ ಅದನ್ನು ನೋಡಿ ನೀವು ಪ್ರೋತ್ಸಾಹಿಸಿ, ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಲೇಬೇಕು ಎಂಬ ಒತ್ತಡವನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ನಮ್ಮ ದೇಶದಲ್ಲಿರುವ ಡಾಕ್ಟರ್ ಗಳು ಇಂಜಿನಿಯರ್ ಎಲ್ಲರೂ ನೂರಕ್ಕೆ ನೂರರಷ್ಟು ಅಂಕ ಪಡೆದವರು ಅಲ್ಲ .ಆಯಾಯ ವೃತ್ತಿಗೆ ಎಷ್ಟು ಅರ್ಹತೆ ಬೇಕು ಅಷ್ಟು ಅಂಕಗಳನ್ನು ಪಡೆಯಲು ಸಹಕರಿಸಿ. ಕೆಲವರು ಶಾಲೆಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಫೇಲಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ 21- 22ನೇ ವಯಸ್ಸಿಗೆ ಐಎಎಸ್ ,ಐಪಿಎಸ್ ಪರೀಕ್ಷೆ ಪಾಸ್ ಮಾಡುವ ಸಾಧ್ಯತೆ ಇದೆ ಇದಕ್ಕೆ ಅವರ ಕುಟುಂಬದ ಸಹಕಾರ ಬೆಂಬಲ ಇರಬೇಕು ಎಂದರು. ಶಾಲೆಯ ಸಹ ಸಂಸ್ಥಾಪಕ, ಎಂ. ಬೇಬಿ ವಿಕ್ಟೋರಿಯಾ ಮಾತನಾಡುತ್ತಾ, ನಿಮ್ಮ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ನೀಡಬೇಕು, ಅಂದರೆ ಮೊಬೈಲ್ಗಳಲ್ಲಿ ಬರಿ ಆಟ ಆಡಿಸುವುದಲ್ಲ ರೈಲ್ವೆ ಟಿಕೆಟ್ ಬುಕ್ ಮಾಡುವುದು ಆಧಾರ ಕಾರ್ಡ್, ಪಾನ್ ಕಾರ್ಡ್, ಬಿಪಿಎಲ್ ಕಾರ್ಡುಗಳನ್ನು ಬ್ಯಾಂಕುಗಳಿಗೆ ಲಿಂಕ್ ಮಾಡುವುದು, ಮತ್ತು ಡಿಜಿಟಲ್ ಸ್ಕ್ಯಾಮ್ ಗಳ ಬಗ್ಗೆ ತಿಳುವಳಿಕೆ ಹಾಗೂ ನಿಮ್ಮ ಮಕ್ಕಳನ್ನು ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗುವಂತೆ ಮನೆಯ ಹೊರಗಡೆ ಬೆಳಿಗ್ಗೆ ಸಂಜೆ ಬಿಸಿಲಿನಲ್ಲಿಆಟ ಆಡಿಸುವುದು ಮತ್ತು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಉತ್ತೇಜನ ನೀಡುವುದು ಇದನ್ನು ನಮ್ಮ ಶಾಲೆಯಲ್ಲಿ ಅಳವಡಿಸಿಕೊಂಡು ನಡೆಸಿಕೊಂಡು ಬರುತ್ತಿದ್ದೇವೆ, ಎಂದರು. ಕಾರ್ಯಕ್ರಮದಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು, ನಿವೃತ್ತಿ ಶಿಕ್ಷಕ ಮರಿದಾಸಪ್ಪ , ಶಾಲೆಯ ಮುಖ್ಯಸ್ಥರಾದ ಡಾ. ಪ್ರಭು ದಾಸ್,ಎಂ. ಬೇಬಿ ವಿಕ್ಟೋರಿಯಾ. ಸಹ ಕಾರ್ಯದರ್ಶಿ, ಜೇಮ್ಸ್ ವಿನೀತ್, ಶಾಲೆಯ ಅಧ್ಯಕ್ಷ ಶೀಬಾ ಸುಮ್ಮಿ ಮೋಲ್. ಪ್ರಿನ್ಸಿಪಾಲ್ ಮಂಗಳಮ್ಮ, ಉಪ ಪ್ರಿನ್ಸಿಪಾಲ್ ರೇಖಾ, ಮೇಲ್ವಿಚಾರಕಿ ರಮ್ಯ, ಸಹ ಶಿಕ್ಷಕಿಯರಾದ ಸಮಪದ, ಪ್ರಮೀಳಾ ಮತ್ತು ಸಹಾಯಕರು ಸೇರಿದಂತೆ ಇತರರು ಇದ್ದರು.1
- *ಭಾರತ ನಲ್ಲಿ ವೈರಲ್*1
- ಹನೂರು: ತಾಲ್ಲೂಕಿನ ಮಹದೇಶ್ವರಬೆಟ್ಟ ರಸ್ತೆಯ ಕೋಣನಕೆರೆಯ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸುಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಂತಹ ಪ್ರಸಂಗ ಜರುಗಿದೆ ಕೊಣನಕೆರೆ ಗ್ರಾಮದ ಹತ್ತಿರ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಯಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ10 ಎಫ್ 0509 ಬಸ್ ಹಾಗೂ ಕೆಎ 09 ಜೆಎಸ್ 3871 ದ್ವಿ ಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು (35) ಸತ್ತಿ ಬಿನ್ ಮಾದೇವ (36)ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೆ ಸ್ಥಳಕ್ಕೆ ರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.1
- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಅಂತರರಾಜ್ಯ ಕಳ್ಳಿಯನ್ನು ಬಂಧಿಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು!1
- ಶಿಡ್ಲಘಟ್ಟ ತಾಲೂಕಿನ ನೆಹರೂ ಕ್ರೀಡಾಂಗಣದಲ್ಲಿ ಜನವರಿ 13 ಸಂಜೆ 5 ಕ್ಕೆ ಕಲ್ಟ್ ಸಿನಿಮಾ ಪ್ರೊಫೆಷನಲ್ ಈವೆಂಟ್1
- ಚಿತ್ರದುರ್ಗ ಹೊರವಲಯದ ನಗರಸಭೆ ವ್ಯಾಪ್ತಿಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರದ ಅಧಿಕಾರಿಗಳು ಬಂದು ಜೆಸಿಬಿ ಬಳಸಿ ಕಟ್ಟಡಗಳನ್ನ ತೆರವು ಮಾಡುತ್ತಿದ್ದು ಇದರಿಂದಾಗಿ ರೊಚ್ಚಿಗೆದ್ದ ಬಡಾವಣೆಯ ನಿವಾಸಿಗಳು ಆಕ್ರೋಷವನ್ನ ಹೊರ ಹಾಕಿದ್ದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.1
- ಸೊರಬ: ತಾಲೂಕಿನ ಆನವಟ್ಟಿ ತಿಮ್ಮಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮತ್ತು ಎಂಎಲ್ಸಿ ಭಾರತೀಯ ಶೆಟ್ಟಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪ ಭಕ್ತಾದಿಗಳು ಇಬ್ಬರನ್ನು ಸನ್ಮಾನಿಸಿದರು. ದೇವಸ್ಥಾನಕ್ಕೆ ತಮ್ಮ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಉಡುಗಣಿ, ಪ್ರಕಾಶ್ ತಲಕಾಲಕೊಪ್ಪ, ಕೃಷ್ಣಮೂರ್ತಿ, ಶಿವಪ್ರಸಾದ್ ಮತ್ತಿತರರು ಇದ್ದರು.4
- ಮಳವಳ್ಳಿ: 11 ವರ್ಷಗಳ ನಂತರ ಜ.15 ರಿಂದ ಜ. 23ರವರೆಗೆ ಕಲ್ಕುಣಿ ಗ್ರಾಮದ ಐತಿಹಾಸಿಕ ಸಪ್ತ ಮಾತೃಕಿಯರ ದೊಡ್ಡ ಜಾತ್ರಾ ಮಹೋತ್ಸವ ಮಳವಳ್ಳಿ :ತಾಲ್ಲೂಕಿನ ಕಲ್ಕುಣಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಹಾಶಕ್ತಿ ಮಂಚದ ಕಾಳಿಕಾಂಭ ಸಪ್ತ ಮಾತೃಕೆಯರ ದೊಡ್ಡ ಜಾತ್ರಾ ಮಹೋತ್ಸವ ಜ 15 ರಿಂದ ಜ.23 ರವರೆಗೆ ಲಕ್ಷಾಂತರ ಜನಸ್ತೋ ಮದ ನಡುವೆ ಬಹು ವಿಜೃಂಭಣೆ ಯಿಂದ ಜರುಗಲಿದೆ. ಈ ಸಂಬಂಧ ಕಲ್ಕುಣಿ ಗ್ರಾಮದ ಸೊಸೈಟಿ ಆವರಣದಲ್ಲಿ ಶ್ರೀ ಮಂಚದ ಕಾಳಿಕಾಂಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್ ನಂಜೇಗೌಡ ಮತ್ತು ಆಡಳಿತ ಮಂಡಳಿಯ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಹಬ್ಬದ ಆಚರಣೆ ಕುರಿತ ಪ್ರಮುಖ ಅಂಶಗ ಳನ್ನು ವಿವರಿಸಿದರು . ಈ ಸಂದರ್ಭದಲ್ಲಿ ಮಾಜಿ ಟಿಎಪಿಸಿ ಎಂಎಸ್ ಅಧ್ಯಕ್ಷರು ಆದ ಕೆ ಜೆ ದೇವರಾಜು ಅವರುಗಳು ಶ್ರೀ ಮಂಚದ ಕಾಳಿಕಾಂಭ, ಶ್ರೀ ವಿಜಯನಗರೇಶ್ವರಿ, ಶ್ರೀ ಹಿರಿಯ ಮಂಚದ ಕಾಳಿಕಾಂಭ, ಶ್ರೀ ಮನೆಯಮ್ಮ, ಶ್ರೀ ಬೆಟ್ಟದ ಅರಸಮ್ಮ, ಶ್ರೀ ಕನ್ನಕಡ್ಡಯ್ಯ, ಶ್ರೀ ಮುಖದ ದೇವರು, ಶ್ರೀ ಮೂಗದೇವಮ್ಮ, ಶ್ರೀ ಪಟ್ಟಲ ದಮ್ಮ ಸೇರಿದಂತೆ ಸಪ್ತ ಮಾತೃಕೆ ಯರ ಆರಾಧನೆಯ ಐತಿಹಾಸಿಕ ಹಬ್ಬ ಇದಾಗಿದೆ ಕಲ್ಕುಣಿ, ದೊಡ್ಡೇ ಗೌಡನ ಕೊಪ್ಪಲು, ಚಿಕ್ಕಮಾಳಿಗೆ ಕೊಪ್ಪಲು, ಪುಟ್ಟೇಗೌಡನ ಕೊಪ್ಪಲು, ಚಿಕ್ಕಕಲ್ಕುಣಿ ಹಾಗೂ ಇನ್ನಿತರ ಗ್ರಾಮಸ್ಥರು ಸೇರಿ ಆಚರಿಸುವ ಬಹುಕಟ್ಟುಪಾಡು ಗಳನ್ನು ಒಳಗೊಂಡ ಬಹು ಸಾಂಪ್ರದಾಯಿಕ ಹಬ್ಬ ಇದಾಗಿದೆ ಎಂದು ತಿಳಿಸಿದರು. ಪ್ರತೀ 5 ವರ್ಷ 7 ವರ್ಷ 9 ವರ್ಷಗಳಿಗೊಮ್ಮೆ ಈ ಹಬ್ಬ ನಡೆಯುತ್ತಿತ್ತಾದರೂ ಕರೋನದಿಂದಾಗಿ 11 ವರ್ಷದ ನಂತರ ಈ ಹಬ್ಬ ನಡೆಯುತ್ತಿದೆ. ಗ್ರಾಮದ ಹೊರವಲಯದ ವೀಳ್ಯದೆಲೆ ತೋಟವೊಂದರ ಭೂಮಾಂತ ಗರ್ಭದಲ್ಲಿ ನೆಲೆಗೊಂಡಿರುವ ಶ್ರೀ ಮಂಚದ ಕಾಳಿಕಾಂಭ ಮಹಾತಾ ಯಿಯ ವಿಗ್ರಹವನ್ನು ಜನವರಿ 15 ರಂದು ಮಧ್ಯರಾತ್ರಿ ಹೊರತೆಗೆದು ನಿಶ್ಯಬ್ದ ಸ್ಥಿತಿಯಲ್ಲಿ ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುವು ದರೊಂದಿಗೆ ಹಬ್ಬದ ಪ್ರಮುಖ ಘಟ್ಟ ಆರಂಭವಾಗಲಿದೆ ಎಂದು ಅವರು ವಿವರಿಸಿದರು. 8 ದಿನಗಳ ಕಾಲ ದೇವತೆಯರ ಉತ್ಸವ ಹೆಬ್ಬಾರೆಗಳ ಮೆರವಣಿಗೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ ಎಂದು ತಿಳಿಸಿದ ಅವರು 20 ರಂದು ಮಂಗಳವಾರ ಬಲಿ ಬೀಳುವುದರೊಂದಿ ಹಬ್ಬದ ಪ್ರಮುಖ ಅತ್ಯಾಕರ್ಷಕ ಗಟ್ಟ ಜರುಗಲಿದೆ .ಅಂದು ರಾತ್ರಿ 11.30 ರ ಸುಮಾರಿಗೆ ಮನೆಯಮ್ಮ ಲಕ್ಷ್ಮಿ ದೇವಮ್ಮ ದೇವಸ್ಥಾನದಲ್ಲಿ ಅರ್ಚಕರು ಬಲಿ ಬೀಳಲಿದ್ದು ಬಲಿಯನ್ನು ಚಾವಡಿ ಮುಂಭಾಗ ಪವಡಿಸಿರುವ ಶ್ರೀ ಮಂಚದ ಕಾಳಿಕಾಂಭ ದೇವಿಯ ಮುಂದೆ ತಂದು ಇಟ್ಟು ಮುಖದ ದೇವರು ಅದರ ಸುತ್ತ ಕುಣಿಯು ವುದು ಹಬ್ಬದ ಪ್ರಮುಖ ಹಂತವಾ ಗಿದೆ ಎಂದು ವಿವರಿಸಿದರು. ಇದಲ್ಲದೆ ಜನವರಿ 23 ರಂದು ಬೆಳಿಗ್ಗೆ ಗ್ರಾಮದ ದೊಡ್ಡ ಕೆರೆಯಲ್ಲಿ ಸಪ್ತಮಾತೃಕೆಯರ ತೆಪ್ಪೋತ್ಸವ ನಡೆಯಲಿದ್ದು ಜನವರಿ 25 ರಂದು ಮದ್ಯ ರಾತ್ರಿ ಶ್ರೀ ಮಂಚದ ಕಾಳಿಕಾಂಭ ದೇವಿಯನ್ನು ಮತ್ತೆ ಭೂಮಾಂತ ರ್ಗಕ್ಕೆ ಸೇರಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ ಎಂದು ವಿವರಿಸಿದರು. ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಈ ಹಬ್ಬಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಯಾವುದೇ ಲೋಪವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಈಗಾಗಲೇ ಸೂಚಿಸಿದ್ದಾರೆ ಎಂದು ದೇವರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾದನಾಯಕ, ಪರಮೇಶ್, ಮಾದೇವು, ಸೋಮಶೇಖರ್, ಚಂದನ್, ಮಲ್ಲಯ್ಯಪ್ಪ ಹಾಜರಿದ್ದರು.1