Shuru
Apke Nagar Ki App…
ಶಿಡ್ಲಘಟ್ಟ ತಾಲೂಕಿನ ನೆಹರೂ ಕ್ರೀಡಾಂಗಣದಲ್ಲಿ ಜನವರಿ 13 ಸಂಜೆ 5 ಕ್ಕೆ ಕಲ್ಟ್ ಸಿನಿಮಾ ಪ್ರೊಫೆಷನಲ್ ಈವೆಂಟ್
Venu Gopal
ಶಿಡ್ಲಘಟ್ಟ ತಾಲೂಕಿನ ನೆಹರೂ ಕ್ರೀಡಾಂಗಣದಲ್ಲಿ ಜನವರಿ 13 ಸಂಜೆ 5 ಕ್ಕೆ ಕಲ್ಟ್ ಸಿನಿಮಾ ಪ್ರೊಫೆಷನಲ್ ಈವೆಂಟ್
More news from Chamarajanagara and nearby areas
- ಹನೂರು : ಹನೂರು ತಾಲೂಕು ವ್ಯಾಪ್ತಿಯಲ್ಲಿ ಬೇಸಿಗೆ ಮುನ್ನಡೆ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿರುವುದರಿಂದ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದವರು ಹನೂರು ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಯಾಗುತ್ತಿರುವುದು ಗಮನಕ್ಕೆ ಬಂದಿದೆ ಈ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತೇನೆ, ಈಗಾಗಲೇ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳಿಂದ ಸಮರ್ಪಕವಾಗಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ನಿರಂತರ ಹಾವಳಿಯಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇತ್ತೀಚೆಗೆ ಚಿರತೆ ದಾಳಿಗಳು ಹೆಚ್ಚಾಗಿರುವುದರಿಂದ ರೈತರು ಜಮೀನಿಗೆ ಹೋಗಲು ಭಯಪಡುತ್ತಿದ್ದಾರೆ ಈ ನಿಟ್ಟಿನಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಸೂಕ್ತ ಕ್ರಮ ವಹಿಸಬೇಕು ಎಂದರು. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವ ಯಾವ ಗ್ರಾಮಗಳಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ರೈತ ಸಂಘಟನೆಯಿಂದ ಮನವಿ: ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹನೂರು ಪಟ್ಟಣ ವ್ಯಾಪ್ತಿಯಲ್ಲಿನ ಹುಲ್ಲೇಪುರ ಗ್ರಾಮದ ಕೋಳಿ ಫಾರಂನಲ್ಲಿ ದುರ್ವಾಸನೆ ಬರುತ್ತಿರುವುದರಿಂದ ರೈತರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.1
- *ಭಾರತ ನಲ್ಲಿ ವೈರಲ್*1
- ಗ್ರಾಮಕ್ಕೆ ಯಾರು ಬಾರದಂತೆ ಕಳ್ಳೆ ಮುಳ್ಳು ಬೇಲಿ ಹಾಕಿ ದಿಗ್ಭಂಧನ... ಕಾವಲುಗಾರರ ನೇಮಕ. ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ನಗಂಗೆರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಮಾಡಲಾಗಿತ್ತಿದೆ.. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಕಳ್ಳೆ ಮುಳ್ಳು ಬೇಲಿ ಹಾಕಿ ಗ್ರಾಮಕ್ಕೆ ಬೇರೆ ಯಾರು ಬಾರದಂತೆ ದಿಗ್ಭಂಧನ ಹಾಕುತ್ತಾರೆ. ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ನಾಳೆ ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡಯಬಹುದಾಗಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ... ಸುರೇಶಬೆಳಗೆರೆ1
- ಸೊರಬ ತಾಲ್ಲೂಕಿನ ಉಳವಿ ಹೋಬಳಿ ಹೊರಬೈಲು ಗ್ರಾಮದ ಪಶು ವೈದ್ಯಾಧಿಕಾರಿ ನೀರಲ್ಲಿ ಮುಳುಗಿ ಸಾವು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ರೆ ಬಳಿಗೆ ಬ್ಯಾಕ್ ವಾಟರ್ ಗೆ ಕುಟುಂಬ ಸಮೇತರಾಗಿ ಮಾಸೂರಲ್ಲಿ ಪಶು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ಸುನೀಲ್ ಎಂಬುವರು ತೆರಳಿದ್ದರು. ಈಜು ಬರುತ್ತದೆ ಎಂಬುದಾಗಿ ಬ್ಯಾಕ್ ವಾಟರ್ ಗೆ ಇಳಿದಂತ ಅವರು, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮೃತದೇಹ ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1
- ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ–2026ರ ಅಂಗವಾಗಿ ರಾಯಚೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದಾದ್ಯಂತ ಭವ್ಯವಾದ ಸ್ವಚ್ಛತಾ ಓಟ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಸಂಸದ ಜಿ.ಕುಮಾರ್ ನಾಯಕ್ ಅವರು ನೇತೃತ್ವವಹಿಸಿ ಸ್ವಚ್ಛತಾ ಓಟಕ್ಕೆ ಅಧಿಕೃತ ಚಾಲನೆ ನೀಡಿದರು. ಸ್ವಚ್ಛತಾ ಓಟದ ಅಂಗವಾಗಿ ಮಾತನಾಡಿದ ಸಂಸದರು, ಯುವಜನತೆಗೆ ಸ್ವಾಮಿ ವಿವೇಕಾನಂದರ ಆದರ್ಶಗಳು, ಸದೃಢ ದೇಹ–ಮನಸ್ಸಿನ ಮಹತ್ವ ಹಾಗೂ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದ ಅಗತ್ಯತೆಯನ್ನು ನೆನಪಿಸಿದರು.1
- ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು1
- ಹನೂರು ತಾಲೂಕಿನ ಪಿಜಿ ಪಾಳ್ಯ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ಗ್ರಾಮದ 19 ವರ್ಷದ ಅಪ್ಪು ಎಂಬಾತ, ಮಂಗಳವಾ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿದ್ದಾರೆ. ಎದುರುಗಡೆ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಅಪ್ಪುವನ್ನು ತಕ್ಷಣ ಖಾಸಗಿ ವಾಹನದ ಮೂಲಕ ಹನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ1
- *ಭಾರತ ನಲ್ಲಿ ವೈರಲ್*1
- ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ವೃದ್ಧ ತಾನೇ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಕುಪ್ಪಿಗುಡ್ಡ ಗ್ರಾಮದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರು ಹಲವಾರು ಭಾರಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಿಡಿಒ ಗಮನಕ್ಕೆ ತಂದರೂ ಜನರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದರಿಂದ ಕೊನೆಗೆ ತಾವೇ ಸ್ವಚ್ಛತೆಗೆ ಮುಂದಾಗುತ್ತಿರುವುದು ಗ್ರಾಮದಲ್ಲಿ ಕಂಡುಬಂದಿದೆ. ಗ್ರಾಮದ 80 ವರ್ಷದ ಹೊನ್ನಪ್ಪ ಚಲುವಾದಿ ವೃದ್ಧ ತನ್ನ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.1