Shuru
Apke Nagar Ki App…
ಬಸವನಗುಡಿ ಬಳಿ ರಸ್ತೆ ಅಪಘಾತ ಓರ್ವನಿಗೆ ತೀವ್ರ ಪೆಟ್ಟು ಹನೂರು ತಾಲೂಕಿನ ಪಿಜಿ ಪಾಳ್ಯ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ಗ್ರಾಮದ 19 ವರ್ಷದ ಅಪ್ಪು ಎಂಬಾತ, ಮಂಗಳವಾ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿದ್ದಾರೆ. ಎದುರುಗಡೆ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಅಪ್ಪುವನ್ನು ತಕ್ಷಣ ಖಾಸಗಿ ವಾಹನದ ಮೂಲಕ ಹನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ
ಹನೂರು ನ್ಯೂಸ್ ಅಡ್ಡ
ಬಸವನಗುಡಿ ಬಳಿ ರಸ್ತೆ ಅಪಘಾತ ಓರ್ವನಿಗೆ ತೀವ್ರ ಪೆಟ್ಟು ಹನೂರು ತಾಲೂಕಿನ ಪಿಜಿ ಪಾಳ್ಯ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ಗ್ರಾಮದ 19 ವರ್ಷದ ಅಪ್ಪು ಎಂಬಾತ, ಮಂಗಳವಾ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿದ್ದಾರೆ. ಎದುರುಗಡೆ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಅಪ್ಪುವನ್ನು ತಕ್ಷಣ ಖಾಸಗಿ ವಾಹನದ ಮೂಲಕ ಹನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ
More news from Chamarajanagara and nearby areas
- ಹನೂರು: ತಾಲ್ಲೂಕಿನ ಮಹದೇಶ್ವರಬೆಟ್ಟ ರಸ್ತೆಯ ಕೋಣನಕೆರೆಯ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸುಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಂತಹ ಪ್ರಸಂಗ ಜರುಗಿದೆ ಕೊಣನಕೆರೆ ಗ್ರಾಮದ ಹತ್ತಿರ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಯಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ10 ಎಫ್ 0509 ಬಸ್ ಹಾಗೂ ಕೆಎ 09 ಜೆಎಸ್ 3871 ದ್ವಿ ಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು (35) ಸತ್ತಿ ಬಿನ್ ಮಾದೇವ (36)ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೆ ಸ್ಥಳಕ್ಕೆ ರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.1
- ಯಳಂದೂರು : ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ ಯಳಂದೂರು ಪಟ್ಟಣದ ತಹಸಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಹಸಿಲ್ದಾರ್ ನಯನ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು ತಹಸಿಲ್ದಾರ್ ನಯನ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲು ಅಧಿಕಾರಿಗಳು ಎಲ್ಲಾ ರೀತಿಯ ಸಹಕಾರದೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆಸೂಚನೆ ನೀಡಿ, ಮಾತನಾಡಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ನಂತರ ಶಾಲ ಮಕ್ಕಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ವೇದಿಕೆ ಕಾರ್ಯಕ್ರಮ ನಡೆಸಲು ಹಾಗೂ ತೀರ್ಮಾನ ಕೈಗೊಳ್ಳಲಾಯಿತು . ಶಾಲಾ– ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಸಿಪಿಐ ಸುಬ್ರಹ್ಮಣ್ಯ , ಪಟ್ನ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ಮಾರಾಯ್ಯ, ರಾಜ್ಯಶ್ವಾ ನಿರೀಕ್ಷಕ ಯದುಗಿರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್ , ಸೇರದಂತೆ ವಿವಿಧ ಇಲಾಖೆ ಅಧಿಕಾರಿಗಳು , ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದರು. . ವರದಿ ಎಸ್.ಪುಟ್ಟಸ್ವಾಮಿಹೊನ್ನೂರು3
- ಮಳವಳ್ಳಿ ತಾಲೂಕಿನ ಕಿಡಿಗೇಡಿಗಳ ದುಷ್ಕೃತ್ಯಕ್ಕೆ 15 ಕುರಿ ಒಂದು ಟಗರು ಸಾವು : ಕುಟುಂಬಸ್ಥರ ಅಕ್ರಂದನ ಮಳವಳ್ಳಿ ತಾಲೂಕಿನ ಚೆನ್ನಪಳ್ಳೆ ಕೊಪ್ಪಲು ಗ್ರಾಮದ ಜವನಿ ಸಿದ್ದಯ್ಯನವರ ಮಗ ಕರಿಯಪ್ಪನವರಿಗೆ ಸೇರಿದ 15 ಕುರಿ ಹಾಗೂ ಒಂದು ಟಗರು ವಿಷ ಪ್ರಾಸನದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಜರುಗಿದೆ . ಯಾರೋ ಕಿಡಿಗೇಡಿಗಳು ಕರಿಯಪ್ಪನವರ ಇತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೇಟಿಗೆ ವಿಷವನ್ನು ಹಾಕಿದ್ದು ,ಕುರಿಗಳು ದಿನನಿತ್ಯದಂತೆ ಬಕೇಟಿನಲ್ಲಿದ್ದ ನೀರನ್ನು ಕುಡಿದ ನಂತರ ವಿಲವಿಲನೆ ಒದ್ದಾಡಿ ಅಸುನೀಗಿರುತವೆ ಕಣ್ಣೆದುರೆ ತಾವು ಸಾಕಿದ ಕುರಿಗಳು ಸಾಯುತ್ತಿರುವುದನ್ನು ನೋಡಿ ಕರಿಯಪ್ಪನವರ ಕುಟುಂಬ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ.. ಲಕ್ಷಾಂತರ ರೂಗಳ ಕುರಿಗಳು ತನ್ನೆದುರೆ ಸತ್ತಿರುವುದು ಆ ಬಡ ಕುಟುಂಬಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ. ಈ ಕಿಡಿಗೇಡಿತನದ ಕೃತ್ಯ ನಡೆಸಿದ ಪಾಪಿಗಳಿಗೆ ಗ್ರಾಮಸ್ಥರು ಶಾಪವನ್ನು ಹಾಕುತ್ತಿದ್ದಾರೆ . ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಬಡ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮುಂದಾಗಿ ಸಂಕಷ್ಟದಲ್ಲಿ ಸಿಲುಕು ಇರುವ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ1
- *ಭಾರತ ನಲ್ಲಿ ವೈರಲ್*1
- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಅಂತರರಾಜ್ಯ ಕಳ್ಳಿಯನ್ನು ಬಂಧಿಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು!1
- ಶಿಡ್ಲಘಟ್ಟ ತಾಲೂಕಿನ ನೆಹರೂ ಕ್ರೀಡಾಂಗಣದಲ್ಲಿ ಜನವರಿ 13 ಸಂಜೆ 5 ಕ್ಕೆ ಕಲ್ಟ್ ಸಿನಿಮಾ ಪ್ರೊಫೆಷನಲ್ ಈವೆಂಟ್1
- ಚಿತ್ರದುರ್ಗ ಹೊರವಲಯದ ನಗರಸಭೆ ವ್ಯಾಪ್ತಿಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರದ ಅಧಿಕಾರಿಗಳು ಬಂದು ಜೆಸಿಬಿ ಬಳಸಿ ಕಟ್ಟಡಗಳನ್ನ ತೆರವು ಮಾಡುತ್ತಿದ್ದು ಇದರಿಂದಾಗಿ ರೊಚ್ಚಿಗೆದ್ದ ಬಡಾವಣೆಯ ನಿವಾಸಿಗಳು ಆಕ್ರೋಷವನ್ನ ಹೊರ ಹಾಕಿದ್ದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.1
- ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಅರಣ್ಯ ಪ್ರದೇಶದಿಂದ ಬಂದ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹುಲಿ ದಾಳಿ ವಿಚಾರ ತಿಳಿಯುತ್ತಿ ದ್ದಂತೆ ಸ್ಥಳೀಯ ಅರಣ್ಯಾ ಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ, ಹುಲಿ ತಿಂದು ಬಿಟ್ಟಿರುವ ಹಸುವಿನ ಕಳೇಬರವನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಮ.ಬೆಟ್ಟ ಸನಿಹದಲ್ಲಿರುವ ಗ್ರಾಮದ ನಿವಾಸಿಗಳು ಹುಲಿ ದಾಳಿಯಿಂದ ಭೀತಿಗೊಂಡಿದ್ದು, ಬೇರೆ ಕಡೆಯಿಂದ ಹುಲಿಯನ್ನು ತಂದು ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದರಿಂದ ಹುಲಿ ಹಸುವನ್ನು ಕೊಂದು ತಿಂದಿದೆ. ಶೀಘ್ರದಲ್ಲಿ ಹುಲಿಯನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದರು1