ತೀರ್ಥಹಳ್ಳಿ-ಆರಗ ಜ್ಞಾನೇಂದ್ರರ ಆಸ್ತಿ ವಿವರ ಶೀಘ್ರ ಬಿಡುಗಡೆ: ಡಿ.ಎಸ್.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರ ಪುತ್ರ, ಪುತ್ರಿ, ತಮಿಳುನಾಡಿನಲ್ಲಿ ಡಿಸಿಎಫ್‌ಓ ಅಧಿಕಾರಿ ಆಗಿರುವ ಅಳಿಯನ ಹೆಸರಲ್ಲಿ ಮಾಡಿರುವ ಆಸ್ತಿ ಮಾಹಿತಿ ಲಭ್ಯವಾಗಿದ್ದು ಆಸ್ತಿ ಶೀಘ್ರ ಬಿಡುಗಡೆ ಮಾಡುತ್ತೇನೆ. ಅವರ ತಪ್ಪು ಮುಚ್ಚಲು ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿ.ಎಸ್.ವಿಶ್ವನಾಥ ಶೆಟ್ಟಿ ಹೇಳಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಈವರೆಗೂ ಯಾವುದೇ ಪ್ರತಿಭಟನೆ ತೋರಿಲ್ಲ. 13 ವರ್ಷದಿಂದ ಅಧ್ಯಕ್ಷರಾಗಿರುವ ಅವರು ಪಕ್ಷ ಸಂಘಟನೆಯಲ್ಲಿ ಅಸಮರ್ಥರಾಗಿದ್ದಾರೆ. ಪಕ್ಷದ ಹಿತಕ್ಕಾಗಿ ಅವರನ್ನು ತಕ್ಷಣ ಹುದ್ದೆ ಯಿಂದ ಬಿಡುಗಡೆ ಮಾಡಬೇಕು ಎಂದು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದರು. ಪಕ್ಷದ ಸಂವಿಧಾನದ ಅನ್ವಯ 3 ವರ್ಷಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬದಲಾಗ ಬೇಕು. ಕೆಸ್ತೂರು ಮಂಜುನಾಥ್ 13 ವರ್ಷ ದಿಂದ ಹುದ್ದೆಯಲ್ಲಿರುವುದು ಸಮರ್ಥನೀಯ ವಿಷಯವಲ್ಲ. ಶಾಸಕ ಆರಗ ಜ್ಞಾನೇಂದ್ರ ಮಾಡುತ್ತಿರುವ ಸೇಡಿನ ರಾಜಕಾರಣ ವಿರೋಧಿಸಿ ಈವರೆಗೂ ಒಂದೇ ಒಂದು ಪತ್ರಿಕಾ ಹೇಳಿಕೆ ನೀಡಿಲ್ಲ. ಸಾರ್ವಜನಿಕ ಸಭೆಯಲ್ಲಿ ಟೀಕೆಯನ್ನು ಮಾಡಿಲ್ಲ. ಇಂತಹ ಅಸಮರ್ಥ ಪಕ್ಷದ ಅಧ್ಯಕ್ಷರಾಗಿರುವುದು ಸರಿಯಲ್ಲ ಎಂದರು. ದಬ್ಬಣಗದ್ದೆ ಗ್ರಾಮದಲ್ಲಿ ಕೆಸ್ತೂರು ಮಂಜುನಾಥ್ 10 ಎಕರೆ ಅವರ ತಂದೆ ದುಗ್ಗಪ್ಪಗೌಡ 15 ಎಕರೆ ಜಮೀನು ಕಾನೂನು ಬಾಹಿರವಾಗಿ ಹೊಂದಿದ್ದಾರೆ ಎಂದು ಆರಗ ಆರೋಪ ಮಾಡಿದ್ದಾರೆ. ಆಸ್ತಿ ಹೇಗೆ ಬಂತು ಎಂಬ ವಿಷಯವನ್ನು ಜನರಿಗೆ ತಿಳಿಸುವ ಪ್ರಯತ್ನ ಕೆಸ್ತೂರು ಮಾಡಿಲ್ಲ. ಶಾಸಕರನ್ನು ಕಂಡರೆ ಕೆಸ್ತೂರು ಮಂಜುನಾಥ್ ಹೆದರುತ್ತಾರೆ. ಇಂತವರು ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಧಾವಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಪಕ್ಷದ ನಾಯಕತ್ವ ಹೊಂದಿರುವ ಕಿಮ್ಮನೆ ರತ್ನಾಕರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಕ್ರಮಕ್ಕೆ ವಿರೋಧ ಇದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಅವರ ಕಿವಿ ಹಿಂಡುವ ಜವಾಬ್ದಾರಿಯನ್ನು ಅನಿವಾರ್ಯ ವಾಗಿ ಈಗ ನಿರ್ವಹಿಸಬೇಕಾಗಿದೆ. ತಪ್ಪು, ಸರಿ ಯಾವುದು ಎಂದು ಗಮನಿಸಿ ಪಕ್ಷದ ಚೌಕಟ್ಟಿನಲ್ಲಿ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ. ಆರಗ ಜ್ಞಾನೇಂದ್ರ ಮಾಡುತ್ತಿರುವ ಟೀಕೆಗೆ ಹೆದರಿ ಪಕ್ಷದ ಕಾರ್ಯಕರ್ತರನ್ನು ಕಿಮ್ಮನೆ ಕೈ ಬಿಡುತ್ತಿದ್ದಾರೆ ಎಂದು ದೂರಿದರು. ಪಟ್ಟಣ ಪಂಚಾಯಿತಿ ಸದಸ್ಯ ಟಿ.ರಹಮತ್ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ, ಹಾರೋಗೊಳಿಗೆ ವಿಶ್ವನಾಥ್, ಬೆಟ್ಟಮಕ್ಕಿ ನಾಗರಾಜ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವರಲಕ್ಷ್ಮೀ ಇದ್ದರು.

- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- "Indian monkey man" ಎಂದೆ ಖ್ಯಾತಿ ಹೊಂದಿದ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರು ಬರಿಗೈಲಿ ಕೋಟೆ ಹತ್ತಿ ಪ್ರವಾಸಿಗರನ್ನ ರಂಜಿಸಿದ್ದಾರೆ1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- ಮದುವೆ ಮಾಡಿಲ್ಲ ಎಂದು ಹೆತ್ತ ತಂದೆಯನ್ನೇ ಕೊಂದ ಪಾಪಿ ಮಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿ ಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿ1
- ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾ... ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಜನಾರ್ಧನ ರೆಡ್ಡಿ ಸಾಕ್ಷಿ ನಾಶಪಡಿಸಲು ರಾಜಶೇಖರ್ ಮೃ*ತದೇಹವನ್ನ ಹೂಳುವ ಬದಲು ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಶಾನದ ಸಿಬ್ಬಂದಿ ಮಾತನಾಡಿರೋ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ1
- Post by AAJ KI DASTAK NEWS KARNATAKA1
- *ಭಾರತ ನಲ್ಲಿ ವೈರಲ್*1
- 20 ಅಡಿ ಎತ್ತರದ ಬಾರೆ ನಿರ್ಮಾಣದ ಗುಡಿ ಹತ್ತಿ ಕಳಸ ಕಿತ್ತ ವೀರಗಾಗರು ರೋಮಾಂಚನಗೊಳಿಸಿದ ಬಾರೆಕಳ್ಳೆ ಹತ್ತುವ ಸಹಸದ ದೃಶ್ಯ.. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಜಾತ್ರೆ...ಕೇತೆಲಿಂಗನ ಪರೀಷೆ...1