*ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಾಂಗ್ರೆಸ್ ಮುಖಂಡ ಜಿ.ಎಲ್.ಶಂಕರ್ ವಾಗ್ದಾಳಿ:ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ" ಆರೋಪ* *"ಅನಾಥನೆಂದು ಹೇಳಿ ಟಿಕೆಟ್ ಪಡೆದು ಗೆದ್ದರು,ಅಭಿವೃದ್ಧಿಗೆ ಕೊಡುಗೆಯೇ ಇಲ್ಲ":ಪ್ರದೀಪ್ ಈಶ್ವರ್ ವಿರುದ್ಧ ಹರಿದಾಯ್ದ ಜಿ.ಎಲ್. ಶಂಕರ್* ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಎಲ್. ಶಂಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೆ ಸುಧಾಕರ್ ಅವರು ನಂತರ ಬಿಜೆಪಿಗೆ ಹೋದರು.ಆ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಮರಳಿ ಪಡೆಯಲು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿದರು.ಆ ಸಮಯದಲ್ಲಿ ಪ್ರದೀಪ್ ಈಶ್ವರ್ ತಮ್ಮನ್ನು ಅನಾಥನೆಂದು ಕರೆದುಕೊಂಡು ಬಂದು ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದರು.ಶಾಸಕರಾದ ನಂತರ ಪ್ರದೀಪ್ ಈಶ್ವರ್ ಅವರು ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿ ಇರುವಂತೆ ಮಾತನಾಡುತ್ತಾ,ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳುತ್ತಿದ್ದಾರೆ.ಆದರೆ ದಲಿತರ ಮತ್ತು ಬಡವರ ನಿಜವಾದ ಅಭಿವೃದ್ಧಿಗೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ ಹಾಗೂ ಯಾವುದೇ ಬೃಹತ್ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆರೋಪಿಸಿದರು. ಬಲಿಜ ಹಾಗೂ ದಲಿತ ಸಮುದಾಯದ ಜನರನ್ನು ಓಲೈಸಲು ಯತ್ನಿಸುತ್ತಾ,ವಿವಿಧ ಜಾತಿ-ಸಮುದಾಯಗಳ ನಡುವೆ ಗೊಂದಲ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಶಂಕರ್ ಹರಿದಾಯ್ದರು. ಶಾಸಕರಾಗಿ ಸುಮಾರು ಮೂರುವರೆ ವರ್ಷ ಕಳೆದರೂ ಸಹ ಯಾವುದೇ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ವಿಶೇಷ ಅನುದಾನ ತರಲು ವಿಫಲರಾಗಿದ್ದಾರೆ.ರಾಜ್ಯದ 224 ಶಾಸಕರಲ್ಲಿ ಈ ರೀತಿಯಾಗಿ ಅನುದಾನ ತರದೆ ಶೂನ್ಯ ಸಾಧನೆ ಮಾಡುತ್ತಿರುವ ಏಕೈಕ ಶಾಸಕ ಪ್ರದೀಪ್ ಈಶ್ವರ್ ಎಂದು ಜಿ.ಎಲ್. ಶಂಕರ್ ಕಟುವಾಗಿ ವಿಮರ್ಶಿಸಿದರು.
*ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಾಂಗ್ರೆಸ್ ಮುಖಂಡ ಜಿ.ಎಲ್.ಶಂಕರ್ ವಾಗ್ದಾಳಿ:ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ" ಆರೋಪ* *"ಅನಾಥನೆಂದು ಹೇಳಿ ಟಿಕೆಟ್ ಪಡೆದು ಗೆದ್ದರು,ಅಭಿವೃದ್ಧಿಗೆ ಕೊಡುಗೆಯೇ ಇಲ್ಲ":ಪ್ರದೀಪ್ ಈಶ್ವರ್ ವಿರುದ್ಧ ಹರಿದಾಯ್ದ ಜಿ.ಎಲ್. ಶಂಕರ್* ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಎಲ್. ಶಂಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ
ಪ್ರದೀಪ್ ಈಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೆ ಸುಧಾಕರ್ ಅವರು ನಂತರ ಬಿಜೆಪಿಗೆ ಹೋದರು.ಆ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಮರಳಿ ಪಡೆಯಲು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿದರು.ಆ ಸಮಯದಲ್ಲಿ ಪ್ರದೀಪ್ ಈಶ್ವರ್ ತಮ್ಮನ್ನು ಅನಾಥನೆಂದು ಕರೆದುಕೊಂಡು ಬಂದು ಕಾಂಗ್ರೆಸ್
ಟಿಕೆಟ್ ಪಡೆದು ಗೆಲುವು ಸಾಧಿಸಿದರು.ಶಾಸಕರಾದ ನಂತರ ಪ್ರದೀಪ್ ಈಶ್ವರ್ ಅವರು ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿ ಇರುವಂತೆ ಮಾತನಾಡುತ್ತಾ,ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳುತ್ತಿದ್ದಾರೆ.ಆದರೆ ದಲಿತರ ಮತ್ತು ಬಡವರ ನಿಜವಾದ ಅಭಿವೃದ್ಧಿಗೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ ಹಾಗೂ ಯಾವುದೇ ಬೃಹತ್ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆರೋಪಿಸಿದರು. ಬಲಿಜ ಹಾಗೂ ದಲಿತ ಸಮುದಾಯದ ಜನರನ್ನು ಓಲೈಸಲು ಯತ್ನಿಸುತ್ತಾ,ವಿವಿಧ
ಜಾತಿ-ಸಮುದಾಯಗಳ ನಡುವೆ ಗೊಂದಲ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಶಂಕರ್ ಹರಿದಾಯ್ದರು. ಶಾಸಕರಾಗಿ ಸುಮಾರು ಮೂರುವರೆ ವರ್ಷ ಕಳೆದರೂ ಸಹ ಯಾವುದೇ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ವಿಶೇಷ ಅನುದಾನ ತರಲು ವಿಫಲರಾಗಿದ್ದಾರೆ.ರಾಜ್ಯದ 224 ಶಾಸಕರಲ್ಲಿ ಈ ರೀತಿಯಾಗಿ ಅನುದಾನ ತರದೆ ಶೂನ್ಯ ಸಾಧನೆ ಮಾಡುತ್ತಿರುವ ಏಕೈಕ ಶಾಸಕ ಪ್ರದೀಪ್ ಈಶ್ವರ್ ಎಂದು ಜಿ.ಎಲ್. ಶಂಕರ್ ಕಟುವಾಗಿ ವಿಮರ್ಶಿಸಿದರು.
- ಪ್ರಧಾನಿ ನರೇಂದ್ರ ಮೋದಿ ರಾಜಕೀಯದ ಅಧಿಕಾರಕ್ಕೆ 25 ವರ್ಷ.. ಎಲ್ಲೆಡೆ ಸಂಭ್ರಮ. ದೇವನಹಳ್ಳಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯದ ಅಧಿಕಾರಕ್ಕೆ 25 ವರ್ಷ.. ಎಲ್ಲೆಡೆ ಸಂಭ್ರಮ. ಬಿಜೆಪಿ ಕಾರ್ಯಕರ್ತರಿಂದ ವಿಕಸಿತ ಭಾರತಕ್ಕಾಗಿ ಪ್ರತಿಜ್ಞೆ ಕಾರ್ಯಕ್ರಮ. ದೇವನಹಳ್ಳಿ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ. ಪ್ರತಿಜ್ಞೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗಿ. ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಭಾಗಿ. ದೇವನಹಳ್ಳಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಂಬರೀಶ್ ಗೌಡ ನೇತೃತ್ವದಲ್ಲಿ ಸಭೆ.ಸೇವಾ ಜ್ಯೋತಿ' ಯಾತ್ರೆ ವಾಹನಕ್ಕೆ ಕಮಲ ನಾಯಕರಿಂದ ಚಾಲನೆ. ಬಿಜೆಪಿ ಕಾರ್ಯಕರ್ತರಿಗೆ ಪ್ರತಿಜ್ಞೆ ಬೋಧಿಸಿದ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ. ಪ್ರತಿಜ್ಞೆ ಸಭೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿ. ಪ್ರಧಾನಿ ಮೋದಿಯವರ ಸಾಧನೆಗಳನ್ನ ಸ್ಮರಿಸದ ಬಿಜೆಪಿ ನಾಯಕರು ಮತ್ತು ಕಾರ್ಯರ್ತರು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ.3
- ಆಹಾರ ಹುಡುಕಾಟಕ್ಕೆ ಕಾರು ತಡೆದ ಆನೆ; ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು ಆಹಾರ ಹುಡುಕಾಟಕ್ಕೆ ಕಾರು ತಡೆದ ಆನೆ; ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು1
- ಬೆಂಗಳೂರಿನ ಕಲ್ಕೆರೆಯಲ್ಲಿ ಮಂತ್ರಾಲಯ,! ರಾಘವೇಂದ್ರ ಸ್ವಾಮಿಗಳ ರೂಪದಲ್ಲಿ ಮುದ್ದು ಗಣಪ, ಏನು ಅಂತೀರಾ ವೈಭವ!1
- ಸ್ಟಿಂಗ್ ಆಪರೇಶನ್ ಮಾಡಿ ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದರು ಎಂದು ಆರೋಪಿಸಿದ ಹೆಚ್.ಡಿ.ಕುಮಾರಸ್ವಾಮಿ *ಕಾಂಗ್ರೆಸ್ ಹೈಕಮಾಂಡ್, ಸಿಎಂ ಡಿಕೆಶಿ, ಒಂದು ಸುದ್ದಿವಾಹಿನಿ ಸೇರಿ ಸಿದ್ದರಾಮಯ್ಯ ವಿರುದ್ಧ ಸಂಚು ಎಂದು ಆರೋಪ ಬೆಂಗಳೂರು: ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಡೆಸಿದ 'ಸ್ಟಿಂಗ್ ಆಪರೇಷನ್'ನಿಂದಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜು ಅವರಿಗಿಂತ ಹೆಚ್ಚಿನ ಅವಧಿಗೆ ರಾಜ್ಯವನ್ನು ಆಳಿದವರು. ಅಹಿಂದಾ ವರ್ಗಕ್ಕೆ ದೊಡ್ಡ ನಾಯಕರು. ಅವರ ಮೇಲಿನ ಪ್ರೀತಿಗೆ ಅಭಿಮಾನಿಗಳು ಅವರ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅಂತಹ ವ್ಯಕ್ತಿ ಡಿಕೆಶಿ ಸ್ಟಿಂಗ್ ಆಪರೇಷನ್ ಗೆ ಬಲಿಯಾದರು ಎಂದು ಆರೋಪಿಸಿದರು. ತನ್ನ ಸಂಪುಟದ ಸಚಿವರ ವಿರುದ್ಧ ಸ್ಟಿಂಗ್ ಆಪರೇಶನ್ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಸಂಪುಟ ಸಭೆಯಲ್ಲಿ ಹೇಳಿರುವುದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗುತ್ತಿದ್ದಂತೆಯೇ ಕೇಂದ್ರ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು. ಡಿಕೆಶಿ ಮಾಡಿದ ಸ್ಟಿಂಗ್ ಆಪರೇಷನ್ ನಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಅಪಮಾನಕಾರಿಯಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿತು. ಡಿಕೆಶಿ ಜತೆ ಒಂದು ಸುದ್ದಿವಾಹಿನಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾದ ಪರಿಣಾಮ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿತು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದಾರೆ ಎಂದು ನಂಬಿ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವಿಷಯ ತಿಳಿಸಿ ರಾಜೀನಾಮೆ ಪಡೆದುಕೊಳ್ಳಲಾಯಿತು ಎಂದು ಕುಮಾರಸ್ವಾಮಿ ಅವರು ದೂರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಯಿತು ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಅವರ ರಾಜಿನಾಮೆ ಪಡೆದ ರೀತಿ ಸರಿಯಲ್ಲ. ಅಂತಹ ಹಿರಿಯ ನಾಯಕನನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೆಲ್ಲವನ್ನೂ ಯಾರು ಮಾಡಿದ್ದಾರೆ? ಇದರ ಹಿಂದೆ ಯಾರು ಯಾರು ಇದ್ದಾರೆ? ಯಾವ ಮಾಧ್ಯಮ ಸಂಸ್ಥೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನನ್ನೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರಿಗೆ ಈಗ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದ ಸಚಿವರು; ಸ್ಟಿಂಗ್ ಮಾಡಿರುವುದು ಅವರು, ರಮೇಶ್ ಜಾರಕಿಹೊಳಿ, ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ? ಇಂತಹ ವಿಷಯದಲ್ಲಿ ಅವರು ದೊಡ್ಡ ಅನುಭವಸ್ತರು. ಅವರೇ ಎಲ್ಲವನ್ನೂ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದ ವ್ಯಕ್ತಿಯೇ ನಮ್ಮ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಆರೋಪಿಸಿದರು. ಸ್ಟಿಂಗ್ ಮಾಡುವುದರಲ್ಲಿ ಅವರು ನಿಪುಣರು (ಮಾಸ್ಟರ್). ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರು ಎಲ್ಲಾ ಸಚಿವರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು. ದೇವೇಗೌಡರ ಕುಟುಂಬವನ್ನು ಮುಗಿಸಲು ಮುಖ್ಯಮಂತ್ರಿ ಇಂಥದ್ದೇ ಸಂಚು ರೂಪಿಸಿದ್ದರು. 'ತಡಿಯಪ್ಪಾ ಒಬ್ಬರನ್ನು ಕರೆಸಿ ಮಾಡೋಷ್ಟೊತ್ಟಿಗೆ ಸಾಕಾಗಿದೆ' ಎಂದು ಹೇಳಿದವರು ಯಾರಪ್ಪಾ? ಈಗ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಈ ಮುಖ್ಯಮಂತ್ರಿ ಅದೇ ಕುತಂತ ಬಳಸುತ್ತಿದ್ದಾರೆ ಎಂದು ಸಚಿವರು ದೂರಿದರು. ಹಿಂದೆ ಸಂಪುಟ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಡಿಕೆಶಿ ಕಾಲದಲ್ಲಿ ಹನಿಟ್ರಾಪ್, ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಆಗುತ್ತಿದೆ. ಇದು ಈ ರಾಜ್ಯಕ್ಕೆ ಬಂದು ಒದಗಿಸಿರುವ ದುಸ್ಥಿತಿ ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು. ಅಂತೂ ಇಂತೂ ಮುಖ್ಯಮಂತ್ರಿ ಆಗಿರುವ ಈ ವ್ಯಕ್ತಿ ಜನರ ಕೆಲಸ ಮಾಡುತ್ತಿಲ್ಲ. ಬದಲಿಗೆ ಬೆಳಗ್ಗೆಯಿಂದ ಸಂಜೆವರೆಗೂ ಸ್ಟಿಂಗ್ ಆಪರೇಷನ್ ಮಾಡಿಕೊಂಡು ಕೂತಿರುತ್ತಾರೆ. ಅವರ ಪಕ್ಷದ ಶಾಸಕರೇ ಬಂದು ಹೇಳುತ್ತಾರೆ ನನಗೆ. ಈಗ ಅದೇ ವಿಷಯ ಮೀಡಿಯಾದಲ್ಲಿ ಬರುತ್ತಿದೆ. ಒಂದು ವೇಳೆ ನಾನು ಸ್ಟಿಂಗ್ ಮಾಡಿದರೆ ಕ್ರಮ ಕೈಗೊಳ್ಳಲಿ. ಇವರ ಬಳಿ ಎಸ್ ಐಟಿ ಇದೆಯಲ್ಲವೇ? ಅದಕ್ಕೆ ₹35 ಲಕ್ಷ ಬಹುಮಾನ ಬೇರೆ ಕೊಟ್ಟಿದ್ದಾರೆ! ತನಿಖೆ ಮಾಡಿಸಲಿ. ಬೇಡ ಅಂದವರು ಯಾರು? ವಿಧಾನಸಭೆಯಲ್ಲಿ ರಾಜಣ್ಣ ಏನು ಹೇಳಿದ್ದರು. ನನ್ನದಷ್ಟೇ ಅಲ್ಲ, ಇನ್ನೂ ನಲವತ್ತು ಜನರ ಸ್ಟಿಂಗ್ ಮಾಡಿಸಿದ್ದಾರೆ ಎಂದು ಹೇಳಿರಲ್ಲವೇ? ಅವರ ಹೇಳಿಕೆ ಏನಾಯಿತು? ನಂತರ ಅವರ ಬಾಯಿ ಮುಚ್ಚಿಸಿದರು ಎಂದು ಸಚಿವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನ ಸ್ನೇಹಿತರೇ ನನಗೆ ಡಿಕೆಶಿ ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಆಗಿದ್ದಾರೆ ಎಂದು ನನಗೆ ಹೇಳಿದ್ದಾರೆ. ಹಿಂದೆಯೂ ಕೆಲವು ಸಚಿವರು ಸ್ಟೇ ತೆಗೆದುಕೊಂಡರು. ಆ ರೀತಿ ಕೋರ್ಟಿನಿಂದ ಸ್ಟೇ ತೆಗೆದುಕೊಂಡಿರುವ ವೃತ್ತಿ ಅಯೋಧ್ಯೆ, ನೇಪಾಳ ಮತ್ತು ಕೆನಡಾಗೆ ಹೋಗಿ ಏನೋ ಷಡ್ಯಂತ್ರ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ಸಚಿವರು ಹೇಳಿದರು. ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ವಕ್ತಾರ ಹೆಚ್.ಎನ್. ದೇವರಾಜು ಮುಂತಾದವರು ಸಚಿವರ ಜತೆಯಲ್ಲಿದ್ದರು.1
- ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಅಧಿಕಾರಕ್ಕೆ 25 ವರ್ಷ.. ಎಲ್ಲೆಡೆ ಸಂಭ್ರಮ ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಅಧಿಕಾರಕ್ಕೆ 25 ವರ್ಷ ಆಗಿರುವ ಹಿನ್ನೆಲೆ ಎಲ್ಲೆಡೆ ಸಂಭ್ರಮ ನಡೆಯುತ್ತಿದೆ.ದೇವನಹಳ್ಳಿ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ದೇವನಹಳ್ಳಿ ತಾಲ್ಲೂಕಿನ ಬಿಜೆಪಿ ಅಧ್ಯಕ್ಷ ಅಂಬರೀಶ್ ಗೌಡ ನೇತೃತ್ವದಲ್ಲಿ ಸಭೆ ನಡೆದಿದೆ.ಬಿಜೆಪಿ ಕಾರ್ಯಕರ್ತರಿಂದ ವಿಕಸಿತ ಭಾರತಕ್ಕಾಗಿ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಪ್ರತಿಜ್ಞೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಭಾಗಿಯಾಗಿದ್ದಾರೆ.ಇನ್ನೂ 'ಸೇವಾ ಜ್ಯೋತಿ' ಯಾತ್ರೆ ವಾಹನಕ್ಕೆ ಕಮಲ ನಾಯಕರಿಂದ ಚಾಲನೆ ನೀಡಲಾಗಿದೆ.ಬಿಜೆಪಿ ಕಾರ್ಯಕರ್ತರಿಗೆ ಪ್ರತಿಜ್ಞೆಯನ್ನ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಬೋಧಿಸಿದರು.ಪ್ರತಿಜ್ಞೆ ಸಭೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.ಪ್ರಧಾನಿ ಮೋದಿಯವರ ಸಾಧನೆಗಳನ್ನ ಬಿಜೆಪಿ ನಾಯಕರು ಮತ್ತು ಕಾರ್ಯರ್ತರು ಸ್ಮರಿಸದರು.1
- ಕೋಲಾರ ಬಿಜೆಪಿ ಅದ್ದೂರಿಯಾಗಿ ನಡೆದ ಸೇವಾ ಜ್ಯೋತಿ ಯಾತ್ರೆ ಹಾಗೂ ಬೈಕ್ ರ‍್ಯಾಲಿ. ಕೋಲಾರ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರ ನೇತೃತ್ವದಲ್ಲಿ ಬುಧವಾರ ಕೋಲಾರದಲ್ಲಿ “ಸೇವಾ ಜ್ಯೋತಿ ಯಾತ್ರೆ”ಯನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ರಾಷ್ಟ್ರೀಯ ನಾಯಕ ಹಾಗೂ ತಮಿಳುನಾಡು ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಅವರು ಯಾತ್ರೆಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಿದ ಸಂದೇಶವನ್ನು ಕಾರ್ಯಕರ್ತರು ವೀಕ್ಷಿಸಿದರು.ಸಾವಿರಾರು ಬೈಕ್ ರಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು ಯಾತ್ರೆಯನ್ನು ಯಶಸ್ವಿಗೊಳಿಸಿದರು. ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಸಂಪಂಗಿ ಸೇರಿದಂತೆ ಬಿಜೆಪಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.1
- *ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಾಂಗ್ರೆಸ್ ಮುಖಂಡ ಜಿ.ಎಲ್.ಶಂಕರ್ ವಾಗ್ದಾಳಿ:ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ" ಆರೋಪ* *"ಅನಾಥನೆಂದು ಹೇಳಿ ಟಿಕೆಟ್ ಪಡೆದು ಗೆದ್ದರು,ಅಭಿವೃದ್ಧಿಗೆ ಕೊಡುಗೆಯೇ ಇಲ್ಲ":ಪ್ರದೀಪ್ ಈಶ್ವರ್ ವಿರುದ್ಧ ಹರಿದಾಯ್ದ ಜಿ.ಎಲ್. ಶಂಕರ್* ಚಿಂತಾಮಣಿ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಎಲ್. ಶಂಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೆ ಸುಧಾಕರ್ ಅವರು ನಂತರ ಬಿಜೆಪಿಗೆ ಹೋದರು.ಆ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಮರಳಿ ಪಡೆಯಲು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿದರು.ಆ ಸಮಯದಲ್ಲಿ ಪ್ರದೀಪ್ ಈಶ್ವರ್ ತಮ್ಮನ್ನು ಅನಾಥನೆಂದು ಕರೆದುಕೊಂಡು ಬಂದು ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದರು.ಶಾಸಕರಾದ ನಂತರ ಪ್ರದೀಪ್ ಈಶ್ವರ್ ಅವರು ದಲಿತ ಸಮುದಾಯದ ಬಗ್ಗೆ ಅಪಾರ ಕಾಳಜಿ ಇರುವಂತೆ ಮಾತನಾಡುತ್ತಾ,ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳುತ್ತಿದ್ದಾರೆ.ಆದರೆ ದಲಿತರ ಮತ್ತು ಬಡವರ ನಿಜವಾದ ಅಭಿವೃದ್ಧಿಗೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ ಹಾಗೂ ಯಾವುದೇ ಬೃಹತ್ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆರೋಪಿಸಿದರು. ಬಲಿಜ ಹಾಗೂ ದಲಿತ ಸಮುದಾಯದ ಜನರನ್ನು ಓಲೈಸಲು ಯತ್ನಿಸುತ್ತಾ,ವಿವಿಧ ಜಾತಿ-ಸಮುದಾಯಗಳ ನಡುವೆ ಗೊಂದಲ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಶಂಕರ್ ಹರಿದಾಯ್ದರು. ಶಾಸಕರಾಗಿ ಸುಮಾರು ಮೂರುವರೆ ವರ್ಷ ಕಳೆದರೂ ಸಹ ಯಾವುದೇ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ವಿಶೇಷ ಅನುದಾನ ತರಲು ವಿಫಲರಾಗಿದ್ದಾರೆ.ರಾಜ್ಯದ 224 ಶಾಸಕರಲ್ಲಿ ಈ ರೀತಿಯಾಗಿ ಅನುದಾನ ತರದೆ ಶೂನ್ಯ ಸಾಧನೆ ಮಾಡುತ್ತಿರುವ ಏಕೈಕ ಶಾಸಕ ಪ್ರದೀಪ್ ಈಶ್ವರ್ ಎಂದು ಜಿ.ಎಲ್. ಶಂಕರ್ ಕಟುವಾಗಿ ವಿಮರ್ಶಿಸಿದರು.4
- *ಕಾರು ಡಿವೈಡರ್‌ಗೆ ಡಿಕ್ಕಿ:ಎರಡು ವರ್ಷದ ಕಂದಮ್ಮ ಸಾವು, ಐವರಿಗೆ ಗಂಭೀರ ಗಾಯ* *ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಮಿನುಗುವ ಲೈಟ್ ಗಳು ಅಳವಡಿಸಲು ಅಗ್ರಹ.* ಜೋರು ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಸರಿಯಾಗಿ ಕಾಣಿಸದೆ,ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ದುರ್ಘಟನೆ ಚಿಂತಾಮಣಿ-ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದ ಬಳಿ ರಾತ್ರಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಮೃತಪಟ್ಟಿದ್ದು,ಕಾರಿನಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಎರಡು ವರ್ಷದ ರಶದಾನ್ ಆಲಿ ಎಂಬ ಮಗು ಮೃತಪಟ್ಟಿದೆ.ಸಫಿನಬಾನು(45), ಚಾಲಕ ಮೊಹಮ್ಮದ್ ಶರೀಫ್(50), ನಸರೀನ್ ತಾಜ್ (40)ಹೈದರ್ ಶರೀಫ್(55)ಮತ್ತು ಶಾಹಿನ(45) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ಜೋರು ಮಳೆಯ ಪರಿಣಾಮ ಡಿವೈಡರ್ ಸ್ಪಷ್ಟವಾಗಿ ಕಾಣಿಸದೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ಐವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.4