logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ರಾಪಂ ಆಡಳಿತಾಧಿಕಾರಿಗಳಿಗೆ ಶಾಸಕ ಅಶೋಕ ಮನಗೂಳಿ ಸೂಚನೆ ಸಿಂದಗಿ : ಮತಕ್ಷೇತ್ರದ ಆಲಮೇಲ ಮತ್ತು ಸಿಂದಗಿ ತಾಲೂಕಿನ ಗ್ರಾಮ ಪಂಚಾಯತನ ಆಡಳಿತಾಧಿಕಾರಿಗಳು, ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು. ನಗರದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡೂ ತಾಲೂಕಿನ 29 ಗ್ರಾಪಂಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು. ಅಧ್ಯಕ್ಷ ಅವಧಿ ಮುಗಿದ ಗ್ರಾಪಂಗಳಿಗೆ ಆಡಳಿತಾಧಿಕಾರಿಯಾಗಿ ನೇಮಕವಾದ ಪಿಡಿಒಗಳು ನಿರಂತರ ಗ್ರಾಪಂ ವ್ಯಾಪ್ತಿಯ ಗ್ರಾಮಗಳೊಂದಿಗೆ ಸಂಪರ್ಕ ಇಟ್ಟುಕೊಂಡು, ನೀರಿನ ಸಮಸ್ಯೆ ಹೆಚ್ಚಳವಾಗದಂತೆ ಗಮನ ಹರಿಸಬೇಕು ಎಂದು ಹೇಳಿದರು. ತೆರಿಗೆ ವಸೂಲಾತಿಯಲ್ಲಿ ವಿಜಯಪುರ ಜಿಲ್ಲೆ ಗ್ರಾಪಂ ಮಟ್ಟದಲ್ಲಿ ಶೇ. 55.41ರಷ್ಟು ಪ್ರಗತಿ ಕಂಡಿದ್ದು, ಅದರಲ್ಲಿ ಸಿಂದಗಿ ತಾಲೂಕು ಶೇ.70.26 ರಷ್ಟು ಪ್ರಗತಿ ಗುರಿಯನ್ನು ಸರಿಗಟ್ಟಿ, ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೇ ಎಂದರು. ಇದೇ ವೇಳೆ ಶೇ.100ಕ್ಕೂ ಹೆಚ್ಚು ತೆರಿಗೆ ವಸೂಲಾತಿಯಲ್ಲಿ ಪ್ರಗತಿ ತೋರಿದ, ತಾಲೂಕಿನ ಯಂಕಂಚಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ, ಹಾಗೂ ಸುಂಗಠಾಣ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಬಸವರಾಜ ಶಹಾಪುರ ಅವರನ್ನು ಶಾಸಕರು ಗೌರವಿಸಿ ಸನ್ಮಾನಿಸಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಆಲಮೇಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಫರೀದಾ ಪಠಾಣ, ತಾಪಂ ಸಹಾಯಕ ನಿರ್ದೇಶಕ ಎ.ಎ.ದುರ್ಗದ, ಪಂಚಾಯತ್ ರಾಜ್, ಎಲ್ಲ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

2 hrs ago
user_Ravichandra Malled
Ravichandra Malled
Journalist ಸಿಂದಗಿ, ವಿಜಯಪುರ, ಕರ್ನಾಟಕ•
2 hrs ago
e7f1c341-43fd-4c77-8190-a4ea19b597ad

ಗ್ರಾಪಂ ಆಡಳಿತಾಧಿಕಾರಿಗಳಿಗೆ ಶಾಸಕ ಅಶೋಕ ಮನಗೂಳಿ ಸೂಚನೆ ಸಿಂದಗಿ : ಮತಕ್ಷೇತ್ರದ ಆಲಮೇಲ ಮತ್ತು ಸಿಂದಗಿ ತಾಲೂಕಿನ ಗ್ರಾಮ ಪಂಚಾಯತನ ಆಡಳಿತಾಧಿಕಾರಿಗಳು, ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು. ನಗರದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡೂ ತಾಲೂಕಿನ 29 ಗ್ರಾಪಂಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು. ಅಧ್ಯಕ್ಷ ಅವಧಿ ಮುಗಿದ ಗ್ರಾಪಂಗಳಿಗೆ ಆಡಳಿತಾಧಿಕಾರಿಯಾಗಿ ನೇಮಕವಾದ ಪಿಡಿಒಗಳು ನಿರಂತರ ಗ್ರಾಪಂ ವ್ಯಾಪ್ತಿಯ ಗ್ರಾಮಗಳೊಂದಿಗೆ ಸಂಪರ್ಕ ಇಟ್ಟುಕೊಂಡು, ನೀರಿನ ಸಮಸ್ಯೆ ಹೆಚ್ಚಳವಾಗದಂತೆ ಗಮನ ಹರಿಸಬೇಕು ಎಂದು ಹೇಳಿದರು. ತೆರಿಗೆ ವಸೂಲಾತಿಯಲ್ಲಿ ವಿಜಯಪುರ ಜಿಲ್ಲೆ ಗ್ರಾಪಂ ಮಟ್ಟದಲ್ಲಿ ಶೇ. 55.41ರಷ್ಟು ಪ್ರಗತಿ ಕಂಡಿದ್ದು, ಅದರಲ್ಲಿ ಸಿಂದಗಿ ತಾಲೂಕು ಶೇ.70.26 ರಷ್ಟು ಪ್ರಗತಿ ಗುರಿಯನ್ನು ಸರಿಗಟ್ಟಿ, ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೇ ಎಂದರು. ಇದೇ ವೇಳೆ ಶೇ.100ಕ್ಕೂ ಹೆಚ್ಚು ತೆರಿಗೆ ವಸೂಲಾತಿಯಲ್ಲಿ ಪ್ರಗತಿ ತೋರಿದ, ತಾಲೂಕಿನ ಯಂಕಂಚಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ, ಹಾಗೂ ಸುಂಗಠಾಣ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಬಸವರಾಜ ಶಹಾಪುರ ಅವರನ್ನು ಶಾಸಕರು ಗೌರವಿಸಿ ಸನ್ಮಾನಿಸಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಆಲಮೇಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಫರೀದಾ ಪಠಾಣ, ತಾಪಂ ಸಹಾಯಕ ನಿರ್ದೇಶಕ ಎ.ಎ.ದುರ್ಗದ, ಪಂಚಾಯತ್ ರಾಜ್, ಎಲ್ಲ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

More news from ಕರ್ನಾಟಕ and nearby areas
  • ಬಬಲೇಶ್ವರ: ಸಕ್ಕರೆ ಕಾರ್ಖಾನೆ ಮೋಸ ರೈತರಿಂದ ಪ್ರತಿಭಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಬುಧವಾರ ರೈತರು ಸಕ್ಕರೆ ಕಾರ್ಖಾನೆ ಮುಂದೆ ಕಬ್ಬು ಚೆಲ್ಲಿ ಪ್ರತಿಭಟನೆ ನಡೆಸಿದರು. ಕೂಡಲೇ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಬ್ಬು ತೂಕದ ಮೋಸವನ್ನು ಸರಿಪಡಿಸಬೇಕೆಂದು ಅವರು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    1
    ಬಬಲೇಶ್ವರ: ಸಕ್ಕರೆ ಕಾರ್ಖಾನೆ ಮೋಸ ರೈತರಿಂದ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಬುಧವಾರ ರೈತರು ಸಕ್ಕರೆ ಕಾರ್ಖಾನೆ ಮುಂದೆ ಕಬ್ಬು ಚೆಲ್ಲಿ ಪ್ರತಿಭಟನೆ ನಡೆಸಿದರು. ಕೂಡಲೇ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಬ್ಬು ತೂಕದ ಮೋಸವನ್ನು ಸರಿಪಡಿಸಬೇಕೆಂದು ಅವರು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    2 hrs ago
  • Post by Star Kannada News 24×7
    1
    Post by Star Kannada News 24×7
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    6 hrs ago
  • ಇದು ಚಿಗರಳ್ಳಿ ಯಡ್ರಾಮಿ ರಸ್ತೆ ಕಣ್ರೀ 🚨🚨
    1
    ಇದು ಚಿಗರಳ್ಳಿ  ಯಡ್ರಾಮಿ ರಸ್ತೆ ಕಣ್ರೀ 🚨🚨
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    6 hrs ago
  • ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ, ಭೀಮು ನಾಯಕ್ ಮಲ್ಲಿಭಾವಿ, ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
    1
    ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ
ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು.
ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. 
ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ,  ಭೀಮು ನಾಯಕ್ ಮಲ್ಲಿಭಾವಿ,  ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    ಶೋರಾಪುರ, ಯಾದಗಿರಿ, ಕರ್ನಾಟಕ•
    18 hrs ago
  • Post by ಸುಭಾಷ ಗೋಡಿ
    1
    Post by ಸುಭಾಷ ಗೋಡಿ
    user_ಸುಭಾಷ ಗೋಡಿ
    ಸುಭಾಷ ಗೋಡಿ
    Voice of people ಕುಸ್ನೂರ್, ಕಲಬುರಗಿ, ಕರ್ನಾಟಕ•
    23 hrs ago
  • ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಶ್ರೀ ಅಣವೀರಬದ್ರೇಶ್ವರ ಜಾತ್ರೆ ಉತ್ಸವ ಆರಂಭವಾಗಿದೆ ನಾನು ಕಲ್ಲಪ್ಪ ಸಾಹುಕಾರ ಹಾಲಕಾಯಿ ಇಂಗನಕಲ್ ನಮ್ಮ ಮನೆಯ ಆರಾಧ್ಯ ದೈವ
    2
    ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಶ್ರೀ ಅಣವೀರಬದ್ರೇಶ್ವರ ಜಾತ್ರೆ ಉತ್ಸವ ಆರಂಭವಾಗಿದೆ ನಾನು ಕಲ್ಲಪ್ಪ ಸಾಹುಕಾರ ಹಾಲಕಾಯಿ ಇಂಗನಕಲ್ ನಮ್ಮ ಮನೆಯ ಆರಾಧ್ಯ ದೈವ
    user_User1523
    User1523
    Chittapur, Kalaburagi•
    14 hrs ago
  • ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ
    1
    ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ
    user_Bhimahejje News
    Bhimahejje News
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    4 hrs ago
  • ನಾಗಠಾಣ: ರಸ್ತೆಗಳಿಗೆ ಹಿಂದೂಗಳ ಹೆಸರು ಇಟ್ಟಿದ್ದೇನೆ ; ಶಾಸಕ ಯತ್ನಾಳ ವಿಜಯಪುರ ನಗರದ ಪ್ರಮುಖ ರಸ್ತೆಗಳಿಗೆ ಹಿಂದೂ ಮುಖಂಡರು ಹಾಗೂ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ತಿಳಿಸಿದರು. ಈ ಹಿಂದೆ ಕೆಲವು ಅನ್ಯ ಧರ್ಮದ ಮುಖಂಡರ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗಿತ್ತು, ಅವುಗಳನ್ನು ತೆಗೆದುಹಾಕಿ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ಹೇಳಿದರು.
    1
    ನಾಗಠಾಣ: ರಸ್ತೆಗಳಿಗೆ ಹಿಂದೂಗಳ ಹೆಸರು ಇಟ್ಟಿದ್ದೇನೆ ; ಶಾಸಕ ಯತ್ನಾಳ
ವಿಜಯಪುರ ನಗರದ ಪ್ರಮುಖ ರಸ್ತೆಗಳಿಗೆ ಹಿಂದೂ ಮುಖಂಡರು ಹಾಗೂ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ತಿಳಿಸಿದರು. ಈ ಹಿಂದೆ ಕೆಲವು ಅನ್ಯ ಧರ್ಮದ ಮುಖಂಡರ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗಿತ್ತು, ಅವುಗಳನ್ನು ತೆಗೆದುಹಾಕಿ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ಹೇಳಿದರು.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.