ರಾಜ್ಯದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ, ಪ್ರತಿ ಪಂಚಾಯ್ತಿಗೆ ಸರಾಸರಿ 1 ಕೋಟಿ ಮೊತ್ತದ ಕಾಮಗಾರಿಗೆ ಅವಕಾಶ ಕಲ್ಪಿಸಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಿದೆ. ಹೀಗಾಗಿ ಮನರೇಗಾ ಉಳಿಸಿ ಅಭಿಯಾನವನ್ನು ಜ.26ರಿಂದ ಆರಂಭಿಸಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5-10 ಕಿ.ಮೀ ಪಾದಯಾತ್ರೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. "ಮನರೇಗಾ ಉಳಿಸಿ ಅಭಿಯಾನವನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚೆ ಮಾಡಲು ಎರಡು ದಿನ ವಿಶೇಷ ಅಧಿವೇಶನ ಕರೆಯುವ ಆಲೋಚನೆ ಸಹ ಇದೆ. ಆಮೂಲಕ ಇದರಿಂದ ಗ್ರಾಮೀಣ ಪ್ರದೇಶದ ಮೇಲೆ ಹೇಗೆ ದುಷ್ಪರಿಣಾಮ ಬೀರಲಿದೆ ಎಂದು ಜನರಲ್ಲಿ ಅರಿವು ಮೂಡಿಸಲಾಗುವುದು. ಜ.6ರಿಂದ ಫೆ.2ರವರೆಗೆ ತಾಲ್ಲೂಕು ಮಾಟ್ಟದಲ್ಲಿ ಪಂಚಾಯತಿ ಸದಸ್ಯರನ್ನು, ಫಲಾನುಭವಿ ಕಾರ್ಮಿಕರುಗಳನ್ನು ಒಳಗೊಂಡು ಪಾದಯಾತ್ರೆ ನಡೆಸಲಾಗುವುದು. ನರೇಗಾ ಯೋಜನೆ ಫಲಾನುಭವಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಮೂಡಿಸಲಾಗುವುದು. ಮತ್ತೆ ನರೇಗಾವನ್ನು ಮರುಸ್ಥಾಪಿಸುವ ತನಕ ಹೋರಾಟ ಮಾಡಲಾಗುವುದು" ಎಂದು ವಿವರಿಸಿದರು. ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಕೇಳಿದಾಗ, "ಪಕ್ಷ ನನಗೆ ಜವಾಬ್ದಾರಿ ನೀಡಿದ್ದು, ಇದರ ಬಗ್ಗೆ ಪಕ್ಷದ ನಾಯಕರ ಬಳಿ ಚರ್ಚೆ ನಡೆಸುತ್ತೇನೆ" ಎಂದರು. ಎಸ್.ಪಿ ಮತ್ತು ಕಮಿಷನರ್ ವರ್ಗಾವಣೆ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದಾಗ, "ದಿನಾ ಆರೋಪ ಮಾಡ್ತಾ ಇರಲಿ, ದಿನಾ ಆರೋಪ ಕೇಳುತ್ತಾ ಇರೋಣ" ಎಂದರು. ರಾಜ್ಯಪಾಲರು ಮೂರು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಬಗ್ಗೆ ಕೇಳಿದಾಗ, "ಸಂಜೆ ಮುಖ್ಯಮಂತ್ರಿಯವರು ಬರುತ್ತಾರೆ ಅವರ ಬಳಿ ಕೇಳಿ" ಎಂದರು. ವರದಿ: ಶಂಶೀರ್ ಬುಡೋಳಿ

- Post by AAJ KI DASTAK NEWS KARNATAKA1
- *ಭಾರತ ನಲ್ಲಿ ವೈರಲ್*1
- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- "Indian monkey man" ಎಂದೆ ಖ್ಯಾತಿ ಹೊಂದಿದ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರು ಬರಿಗೈಲಿ ಕೋಟೆ ಹತ್ತಿ ಪ್ರವಾಸಿಗರನ್ನ ರಂಜಿಸಿದ್ದಾರೆ1
- ಯತ್ತಂಬಾಡಿ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆ ಮಾಡುವ ಗುರಿ ನಮ್ಮದು , ಉದ್ಯಮಿ ಹೇಮಂತ್. ಹಲಗೂರು:- ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಿದ್ದೇವೆ .ಯತ್ತಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲೆ ಯಲ್ಲೇ ಅಲ್ಲ ರಾಜ್ಯದಲ್ಲೇ ನಾನು ಮತ್ತು ನಮ್ಮ ಸ್ನೇಹಿತರು ಸೇರಿ ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನಾಗಿ ಇಟ್ಟುಕೊಂಡಿದ್ದೇವೆ .ಎಂದು ಬೆಂಗಳೂರಿನ ಉದ್ಯಮಿ ಹೇಮಂತ್ ತಿಳಿಸಿದರು. ಸಮೀಪದ ಯತ್ತಂಬಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಈಗ ಸರ್ಕಾರಿ ಶಾಲೆ ಎಂದರೆ ಅದು ಸರ್ಕಾರಕ್ಕೆ ಸೇರಿದ ಶಾಲೆ, ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ,ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲಾ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ ,ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಜಯರಾಮು ರವರ ಮೂಲಕ ನಾವು ಈ ಊರಿಗೆ ಕಾಲಿಟ್ಟಿದ್ದೇವೆ ಈ ಊರಿಗೂ ನಮಗೂ ಒಂದು ಋಣಾನುಬಂಧ ಬೆಳೆದಿದೆ .ಈ ಶಾಲೆಯಲ್ಲಿ ನಮಗೊಂದು ಸ್ಥಾನ ಸಿಕ್ಕಿದೆ ಅದು ಉಳಿಯಬೇಕಿದ್ದರೆ ಈ ಶಾಲೆ ಅತ್ಯುನ್ನತ ಮಟ್ಟಕ್ಕೆ ತಲುಪಬೇಕಾದರೆ ಏನೇನುಅಗತ್ಯವಿದೆ ಅದನ್ನೆಲ್ಲ ನಾವು ಪೂರೈಸಲು ಸಿದ್ಧರಿದ್ದೇವೆ. ನಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಟ್ಟುಈ ಶಾಲೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆಯಾಗಿಮಾಡಲು ನನ್ನ ಸ್ನೇಹಿತರ ಸಹಕಾರ ಇದೆ ಎಂಬ ಭಾವನೆಯಿಂದ ಮಾತು ಕೊಡುತ್ತೇನೆ. ಪೋಷಕರೆ ನಿಮ್ಮ ಸಹಕಾರ ನಿಮ್ಮ ಮಕ್ಕಳಿಗೆ ಇರಲಿ, ಗುರುಗಳಿಗೂ ಇರಲಿ ಈ ಮಕ್ಕಳನ್ನು ಉನ್ನತ ಮಟ್ಟದಲ್ಲಿ ನೋಡಲು ಬಯಸುತ್ತೇವೆ. ಇತರ ಶಾಲೆಗಳಿಗೂ ಇದು ಒಂದು ಮಾದರಿ ಶಾಲೆ ಆಗಬೇಕು ಹಾಗೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಉದ್ದಮಿ, ಜಯ ರಾಮು ಮಾತನಾಡುತ್ತಾ, ಹಳ್ಳಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ ,ಅಂತಹ ಸಂದರ್ಭದಲ್ಲಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬಸಂಕ್ರಾಂತಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ನಮ್ಮ ಕಣ್ಮನ ತುಂಬಿಸಿದ ಇಲ್ಲಿಯ ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಹಳ್ಳಿಯ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿ ಪಟ್ಟಣಗಳಲ್ಲಿ ಉದ್ಯೋಗ ನಿಮಿತ್ತ ಒತ್ತಡದ ಜೀವನ ನಡೆಸುತ್ತಿರುವ ನನ್ನ ಕುಟುಂಬದವರು ಮತ್ತು ಸಹೋದ್ಯೋಗಿಗಳನ್ನು ಕರೆತಂದು ಇಲ್ಲಿ ಸಮಯ ಕಳೆದದ್ದಕ್ಕೆ ಅವರಿಗೂ ಧನ್ಯವಾದಗಳು. ದೂರದ ಬೆಟ್ಟ ನುಣ್ಣಗೆ ಎಂದು ಪೋಷಕರು ತಮ್ಮ ಮಕ್ಕಳನ್ನು ಹಳ್ಳಿ ಶಾಲೆ ಬಿಟ್ಟು ಪಟ್ಟಣದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಹಳ್ಳಿ ಶಾಲೆಗಳು ಮುಚ್ಚಲ್ಪಡುತ್ತಿವೆ ಆದುದರಿಂದ ನಾವು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದರು. ಶಾಲೆಯ ಮೈದಾನದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದಧಾನ್ಯಗಳ ರಾಶಿ, ರಟ್ಟಿನಲ್ಲಿ ನಿರ್ಮಿಸಲಾದ ಹಳ್ಳಿಮನೆ, ನೀರು ಸೇದುವ ಬಾವಿ, ಎತ್ತಿನ ಬಂಡಿ ,ಒಣ ಹುಲ್ಲಿನ ಮೆದೆ, ಮೊರಗಳಲ್ಲಿ ತುಂಬಿಟ್ಟ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಹೆಂಗಸು ಮತ್ತುಗಂಡಸಿನ ಚಿತ್ರವನ್ನು ಬಿಡಿಸಿರುವ ಮಡಿಕೆಗಳು, ಪಕ್ಷಿಗಳಿಂದ ಧಾನ್ಯವನ್ನು ಸಂರಕ್ಷಿಸಲು ಹೊಲಗಳಲ್ಲಿರಿಸುವ ಬೆದರು ಬೊಂಬೆಗಳು,ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆಯ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು. ಇದೇ ಸಂದರ್ಭದಲ್ಲಿ ಯತ್ತಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ, ಪುಟ್ಟಸ್ವಾಮಾಚಾರಿ, ಸಿ ಆರ್. ಪಿ .ಶಿಕ್ಷಕ ರೇವಣ್ಣ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಜಯರಾಮು ಶಿವಕುಮಾರ್, ವೀರಣ್ಣ, ಹೇಮಂತ್ ಮತ್ತು ಇತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಸೇರದಂತೆ ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಮೇಶ್, ಉಪಾಧ್ಯಕ್ಷರಾದ ಸೋಮಶೇಖರ್, ಶಿವಲಿಂಗೇಗೌಡ, ಕೆಂಚೇಗೌಡ, ಕೆಂಪೇಗೌಡ, ಕೆಂಪರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು.1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- ಹನೂರು: ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ ಭಾನುವಾರ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬಂದಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಕಲ್ಲುಬಂಡೆಗಳ ನಡುವೆ ವೇಗವಾಗಿ ಹರಿಯುವ ಕಾವೇರಿ ನದಿಯ ರುದ್ರ–ರಮಣೀಯ ದೃಶ್ಯವನ್ನು ಸವಿದರು. ಜಲಪಾತ ವೀಕ್ಷಣೆ ಬಳಿಕ ಸ್ಥಳೀಯ ಮೀನು ಖಾದ್ಯಗಳನ್ನು ಸವಿಯಲು ಜನಸಂದಣಿ ಕಂಡುಬಂದಿತು. ಈ ವೇಳೆ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನದಿಯ ಅಪಾಯಕರ ಪ್ರದೇಶಗಳಿಗೆ ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.1
- *ಭಾರತ ನಲ್ಲಿ ವೈರಲ್*1