logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ನಾಳೆನೂ ಕರೆಂಟ್ ಇರಲ್ವಂತೆ ನೋಡಿ ಎಲ್ಲೆಲ್ಲಿಅಂತ..! ಶಿವಮೊಗ್ಗ : ತಾವರೆ ಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 02 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಈ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಗಿನ ಗ್ರಾಮ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಶ್ವತ್‌ನಗರ, ಕೀರ್ತಿನಗರ, ದೇವಂಗಿ 1ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್‌ಮಿಲ್, ಸೇವಾಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್‌ಮಿಲ್, ದೇವಂಗಿ ತೋಟ, ತಾವರೆ ಚಟ್ನಹಳ್ಳಿ ಯು.ಜಿ.ಡಿ ಪ್ಲಾಂಟ್, ಗುಂಡಪ್ಪ ಶೆಡ್ ಯು.ಜಿ.ಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಬೊಮ್ಮನಕಟ್ಟೆ ಎ ಯಿಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಜೆ.ಎನ್.ಸಿ.ಸಿ ಇಂಜಿನಿಯರಿಂಗ್ ಕಾಲೇಜ್, ಅಕ್ಷರನಗರ, ಕೃಷಿಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನ ಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನ ಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ ಕೆಳಗಿನ ತಾಂಡ/ಮೇಲಿನ ತಾಂಡ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೇಸ್, ಕೊಮ್ಮನಾಳು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕೃಷರ್‌ಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು ವಿದ್ಯುತ್ ಗ್ರಾಹಕರು ಮೆಸ್ಕಾಂ ನೊಂದಿಗೆ ಸಹಕರಿಸಬೇಕು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

5 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
5 hrs ago
bf7e0d5b-3097-49a4-8513-d285be1ae70a

ಶಿವಮೊಗ್ಗ-ನಾಳೆನೂ ಕರೆಂಟ್ ಇರಲ್ವಂತೆ ನೋಡಿ ಎಲ್ಲೆಲ್ಲಿಅಂತ..! ಶಿವಮೊಗ್ಗ : ತಾವರೆ ಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 02 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಈ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಗಿನ ಗ್ರಾಮ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಶ್ವತ್‌ನಗರ, ಕೀರ್ತಿನಗರ, ದೇವಂಗಿ 1ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್‌ಮಿಲ್, ಸೇವಾಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್‌ಮಿಲ್, ದೇವಂಗಿ ತೋಟ, ತಾವರೆ ಚಟ್ನಹಳ್ಳಿ ಯು.ಜಿ.ಡಿ ಪ್ಲಾಂಟ್, ಗುಂಡಪ್ಪ ಶೆಡ್ ಯು.ಜಿ.ಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಬೊಮ್ಮನಕಟ್ಟೆ ಎ ಯಿಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಜೆ.ಎನ್.ಸಿ.ಸಿ ಇಂಜಿನಿಯರಿಂಗ್ ಕಾಲೇಜ್, ಅಕ್ಷರನಗರ, ಕೃಷಿಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನ ಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನ ಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ ಕೆಳಗಿನ ತಾಂಡ/ಮೇಲಿನ ತಾಂಡ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೇಸ್, ಕೊಮ್ಮನಾಳು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕೃಷರ್‌ಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು ವಿದ್ಯುತ್ ಗ್ರಾಹಕರು ಮೆಸ್ಕಾಂ ನೊಂದಿಗೆ ಸಹಕರಿಸಬೇಕು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

More news from ಕರ್ನಾಟಕ and nearby areas
  • ನಾಯಕನಹಟ್ಟಿ ಪಟ್ಟಣದಲ್ಲಿ ಸಿಹಿ ಹಂಚಿ ಕಾರ್ಮಿಕರ ದಿನ ಸಂಭ್ರಮಚಾರಣೆ. ಚಳ್ಳಕೆರೆ:ನಾಯಕನಹಟ್ಟಿ: ಶುಕ್ರವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ಸೇಟ್ ಕನ್ ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ಕಟ್ಟಡ ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೂಡಿ ಸರ್ಕಾರದ ಆದೇಶದಂತೆ ಮೇ 1ರಂದು ಪ್ರತಿ ವರ್ಷ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕಾರ್ಮಿಕರ ನೆರವಿಗೆ ಮುಂದಾಗಬೇಕು ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎಂದರು. ಈ ಸಮಯದಲ್ಲಿ ಹೋಬಳಿ ಘಟಕ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ. ತಿಪ್ಪೇಸ್ವಾಮಿ ಮಾತನಾಡಿದರು ಪ್ರತಿ ವರ್ಷ ಮೇ ಒಂದರಂದು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುವುದು ಸಂತಸದ ವಿಷಯ ನಮ್ಮ ಕಾರ್ಮಿಕರು ಸಂಘಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಇದೇ ವೇಳೆ ಕರ್ನಾಟಕ ಸೇಟ್ ಕನ್ ಸ್ಪೆಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್‌ ಚಿತ್ರದುರ್ಗ ಗೌರವಾಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಎಂ. ಸಿ. ಮಚ್ಚೇಂದ್ರಪ್ಪ, ಸಹ ಕಾರ್ಯದರ್ಶಿ ಗೋಪಾಲ್, ಖಜಾಂಚಿ ನಾಗರಾಜ್ ಕಾರ್ಯದರ್ಶಿ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವು ಹಾಗೂ ನಾಯಕನಹಟ್ಟಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಾಯಕನಹಟ್ಟಿ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್ ಸಿ. ತಿಪ್ಪೇಸ್ವಾಮಿ, ಖಜಾಂಚಿ ರೇಖಲಗೆರೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಬೋಸಯ್ಯ, ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.
    1
    ನಾಯಕನಹಟ್ಟಿ ಪಟ್ಟಣದಲ್ಲಿ ಸಿಹಿ ಹಂಚಿ ಕಾರ್ಮಿಕರ ದಿನ ಸಂಭ್ರಮಚಾರಣೆ.
ಚಳ್ಳಕೆರೆ:ನಾಯಕನಹಟ್ಟಿ:
ಶುಕ್ರವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ಸೇಟ್ ಕನ್ ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್  ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ಕಟ್ಟಡ ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕೂಡಿ ಸರ್ಕಾರದ ಆದೇಶದಂತೆ ಮೇ 1ರಂದು ಪ್ರತಿ ವರ್ಷ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕಾರ್ಮಿಕರ ನೆರವಿಗೆ ಮುಂದಾಗಬೇಕು ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎಂದರು.
ಈ ಸಮಯದಲ್ಲಿ ಹೋಬಳಿ ಘಟಕ ಅಧ್ಯಕ್ಷ  ಚನ್ನಬಸಯ್ಯನಹಟ್ಟಿ ಬಿ. ತಿಪ್ಪೇಸ್ವಾಮಿ ಮಾತನಾಡಿದರು ಪ್ರತಿ ವರ್ಷ ಮೇ ಒಂದರಂದು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುವುದು ಸಂತಸದ ವಿಷಯ ನಮ್ಮ ಕಾರ್ಮಿಕರು ಸಂಘಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಇದೇ ವೇಳೆ ಕರ್ನಾಟಕ ಸೇಟ್ ಕನ್ ಸ್ಪೆಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್‌ ಚಿತ್ರದುರ್ಗ ಗೌರವಾಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಎಂ. ಸಿ. ಮಚ್ಚೇಂದ್ರಪ್ಪ, ಸಹ ಕಾರ್ಯದರ್ಶಿ ಗೋಪಾಲ್, ಖಜಾಂಚಿ ನಾಗರಾಜ್ ಕಾರ್ಯದರ್ಶಿ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಶಿವು ಹಾಗೂ ನಾಯಕನಹಟ್ಟಿ
ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ನಾಯಕನಹಟ್ಟಿ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎನ್ ಸಿ. ತಿಪ್ಪೇಸ್ವಾಮಿ, ಖಜಾಂಚಿ  ರೇಖಲಗೆರೆ ಮಲ್ಲಿಕಾರ್ಜುನ,  ಕಾರ್ಯದರ್ಶಿ ಬೋಸಯ್ಯ,  ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ದಲಿತರಿಗೆ ಅಗ್ರಸ್ಥಾನ ಕೊಟ್ಟ ಪಕ್ಷ ಅದು ಕಾಂಗ್ರೆಸ್ ಆಗಿದೆ. ಕೇಂದ್ರದ ನಾಯಕರು ದಲಿತರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಕೂಡ ದಲಿತರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿದ್ದಾರೆ.ರಾಜ್ಯದಲ್ಲೂ ಕೂಡ ದಲಿತರಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಎಷ್ಟು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನ ದಲಿತರಿಗೆ ಕೊಟ್ಟಿದ್ದಾರೆ ಮಿಸ್ಟರ್ ಕಾರಜೋಳ್ ಎಂದು ಹೆಚ್ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಎಂದರೆ ಎಂದರೆ ಸಾಮಾಜಿಕ ನ್ಯಾಯ, ಸಾಮಾಜಿಕ ನ್ಯಾಯ ಎಂದರೆ ಕಾಂಗ್ರೆಸ್ ಆಗಿದೆ ಎಂದು ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ
    1
    ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ದಲಿತರಿಗೆ ಅಗ್ರಸ್ಥಾನ ಕೊಟ್ಟ ಪಕ್ಷ ಅದು ಕಾಂಗ್ರೆಸ್ ಆಗಿದೆ. ಕೇಂದ್ರದ ನಾಯಕರು ದಲಿತರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಕೂಡ ದಲಿತರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿದ್ದಾರೆ.ರಾಜ್ಯದಲ್ಲೂ ಕೂಡ ದಲಿತರಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಎಷ್ಟು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನ ದಲಿತರಿಗೆ ಕೊಟ್ಟಿದ್ದಾರೆ ಮಿಸ್ಟರ್ ಕಾರಜೋಳ್ ಎಂದು ಹೆಚ್ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಎಂದರೆ ಎಂದರೆ ಸಾಮಾಜಿಕ ನ್ಯಾಯ, ಸಾಮಾಜಿಕ ನ್ಯಾಯ ಎಂದರೆ ಕಾಂಗ್ರೆಸ್ ಆಗಿದೆ ಎಂದು ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
  • ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು. ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು. ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು. ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.
    1
    ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು.
ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು.
ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು.
ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು.
ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.
    user_Ajay  Reporter
    Ajay Reporter
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    9 hrs ago
  • ​*ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔 *​ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ
    1
    ​*ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔
*​ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ
    user_Ranganath Kandagal
    Ranganath Kandagal
    Photographer ಮುಂಡರಗಿ, ಗದಗ, ಕರ್ನಾಟಕ•
    23 hrs ago
  • ತುಮಕೂರು : ಕರ್ನಾಟಕದಲ್ಲಿ ರೈಲ್ವೆ ಪೊಲೀಸ್ ರವರಿಂದ ಅಮೋಘವಾದ ಪ್ರಯತ್ನ ತಾವೇ ಸ್ವತಹ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಹಿಳಾ ಪೊಲೀಸ್ ಅಧಿಕಾರಿ ಯೊಬ್ಬರು ರೈಲಿನ ಕಿಟಕಿ ಯಲ್ಲಿ ಮಲಗಿದ್ದ ವ್ಯಕ್ತಿ ಯನ್ನು ಮಾತಾಡಿಸಿ ಕಳ್ಳತನದ ಬಗ್ಗೆ ಅರಿವು ಮೂಡಿಸಿ , ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಆಗುತ್ತೆ ಎಂದು ವಿವರವಾಗಿ ಅರಿವು ಮೂಡಿಸಿದರು. ಈ ರೀತಿಯಾಗಿ ಎಲ್ಲ ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಅರಿವು ಮೂಡಿಸಿದರೆ ಸಾರ್ವಜನಿಕರು ಎಚ್ಚರಗೊಳ್ಳುತ್ತಾರೆ.
    1
    ತುಮಕೂರು :  ಕರ್ನಾಟಕದಲ್ಲಿ ರೈಲ್ವೆ ಪೊಲೀಸ್ ರವರಿಂದ ಅಮೋಘವಾದ ಪ್ರಯತ್ನ ತಾವೇ ಸ್ವತಹ  ರೈಲ್ವೆ ನಿಲ್ದಾಣದಲ್ಲಿ  ರೈಲ್ವೆ ಮಹಿಳಾ  ಪೊಲೀಸ್ ಅಧಿಕಾರಿ ಯೊಬ್ಬರು ರೈಲಿನ ಕಿಟಕಿ ಯಲ್ಲಿ ಮಲಗಿದ್ದ ವ್ಯಕ್ತಿ ಯನ್ನು ಮಾತಾಡಿಸಿ   ಕಳ್ಳತನದ ಬಗ್ಗೆ ಅರಿವು ಮೂಡಿಸಿ  , ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಆಗುತ್ತೆ ಎಂದು  ವಿವರವಾಗಿ ಅರಿವು ಮೂಡಿಸಿದರು.
ಈ ರೀತಿಯಾಗಿ ಎಲ್ಲ ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಅರಿವು ಮೂಡಿಸಿದರೆ ಸಾರ್ವಜನಿಕರು ಎಚ್ಚರಗೊಳ್ಳುತ್ತಾರೆ.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    21 hrs ago
  • 1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಷಯವಾಗಿ ಮೇ 3ರಂದು ಕಿತ್ತೂರು ಸಂಸ್ಥಾನದ ವಂಶಜರು ರಾ.ಹ. ದೇಶಪಾಂಡೆ ಭವನದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಸಂಸ್ಥಾನ ಕುರಿತು ಸಾಕಷ್ಟು ಕೃತಿಗಳು, ಸಂಶೋಧನೆಗಳು ಈಗಾಗಲೇ ನಡೆದಿವೆ. ಜೊತೆಗೆ ಸಂಸ್ಥಾನದ ವಂಶಜರ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿಯೂ ಇಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 3ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮಾಜಿ ಸದಸ್ಯ ಸಿ.ಎಸ್‌. ಪಾಟೀಲ ಉದ್ಘಾಟಿಸುವರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ, ಡಾ.ಅರವಿಂದ ಯಾಳಗಿ ಆಶಯ ನುಡಿ ಹೇಳಲಿದ್ದಾರೆ ಎಂದರು.
    1
    1824ರ ನಂತರದ ಕಿತ್ತೂರು ಸಂಸ್ಥಾನದ ಹೊಸ ಸಂಶೋಧನೆಗಳು ಹಾಗೂ ವಂಶಜರು ವಿಷಯವಾಗಿ ಮೇ 3ರಂದು ಕಿತ್ತೂರು ಸಂಸ್ಥಾನದ ವಂಶಜರು ರಾ.ಹ. ದೇಶಪಾಂಡೆ ಭವನದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಸಂಸ್ಥಾನ ಕುರಿತು ಸಾಕಷ್ಟು ಕೃತಿಗಳು, ಸಂಶೋಧನೆಗಳು ಈಗಾಗಲೇ ನಡೆದಿವೆ. ಜೊತೆಗೆ ಸಂಸ್ಥಾನದ ವಂಶಜರ ಬಗ್ಗೆ ಕನ್ನಡಿಗರಿಗೆ ಅಷ್ಟೊಂದು ಮಾಹಿತಿಯೂ ಇಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 3ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮಾಜಿ ಸದಸ್ಯ ಸಿ.ಎಸ್‌. ಪಾಟೀಲ ಉದ್ಘಾಟಿಸುವರು. ಮಾಜಿ ಶಾಸಕ ಎ.ಬಿ. ದೇಸಾಯಿ ಅಧ್ಯಕ್ಷತೆ, ಡಾ.ಅರವಿಂದ ಯಾಳಗಿ ಆಶಯ ನುಡಿ ಹೇಳಲಿದ್ದಾರೆ ಎಂದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    20 min ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    11 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಚಿತ್ರದುರ್ಗದ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅನಿರೀಕ್ಷಿತ ಬೇಟಿ ನೀಡಿದ್ದಾರೆ. ಈ ವೇಳೆ ಅವರು ಕಚೇರಿಯ ಖಡತಗಳನ್ನ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನ ಸರೊಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
    1
    ಚಿತ್ರದುರ್ಗದ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅನಿರೀಕ್ಷಿತ ಬೇಟಿ ನೀಡಿದ್ದಾರೆ. ಈ ವೇಳೆ ಅವರು ಕಚೇರಿಯ ಖಡತಗಳನ್ನ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನ ಸರೊಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.