Shuru
Apke Nagar Ki App…
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ಸ್ಪಂದಿಸದ ತಹಶೀಲ್ದಾರ್ ವಿರುದ್ಧ ರೈತರು ಮತ್ತು ಕೆಆರ್‌ಎಸ್ (KRS) ಪಕ್ಷದ ಸೈನಿಕರು ಆಕ್ರೋಶಗೊಂಡು ಇಂದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಹಿರೇಮನಕಟ್ಟಿ ಕೆರೆ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಶಿಗ್ಗಾವಿ ತಹಶೀಲ್ದಾರ್ ಅವರಿಗೆ ತೀವ್ರ ಒತ್ತಾಯ ಹೇರಿದ್ದಾರೆ.
ಬಸವರಾಜ ವೀ ಎಚ್
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ಸ್ಪಂದಿಸದ ತಹಶೀಲ್ದಾರ್ ವಿರುದ್ಧ ರೈತರು ಮತ್ತು ಕೆಆರ್‌ಎಸ್ (KRS) ಪಕ್ಷದ ಸೈನಿಕರು ಆಕ್ರೋಶಗೊಂಡು ಇಂದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಹಿರೇಮನಕಟ್ಟಿ ಕೆರೆ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಶಿಗ್ಗಾವಿ ತಹಶೀಲ್ದಾರ್ ಅವರಿಗೆ ತೀವ್ರ ಒತ್ತಾಯ ಹೇರಿದ್ದಾರೆ.
More news from ಕರ್ನಾಟಕ and nearby areas
- ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ಸ್ಪಂದಿಸದ ತಹಶೀಲ್ದಾರ್ ವಿರುದ್ಧ ರೈತರು ಮತ್ತು ಕೆಆರ್‌ಎಸ್ (KRS) ಪಕ್ಷದ ಸೈನಿಕರು ಆಕ್ರೋಶಗೊಂಡು ಇಂದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಹಿರೇಮನಕಟ್ಟಿ ಕೆರೆ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಶಿಗ್ಗಾವಿ ತಹಶೀಲ್ದಾರ್ ಅವರಿಗೆ ತೀವ್ರ ಒತ್ತಾಯ ಹೇರಿದ್ದಾರೆ.1
- ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮನಕಟ್ಟಿ ಗ್ರಾಮದ ಕೆರೆ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಮತ್ತು ಕೆಆರ್‌ಎಸ್ (KRS) ಪಕ್ಷದ ಸೈನಿಕರು ಇಂದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ತಹಶೀಲ್ದಾರ್ ಅವರಿಗೆ ತೀವ್ರ ಒತ್ತಾಯ ಹೇರಿದ್ದಾರೆ.1
- ಶ್ರಾವಣ ಮಾಸದ ಹಿನ್ನೆಲೆಯಲ್ಲಿ ತುಮಕೂರಿನ ಗಾರ್ಡನ್ ರಸ್ತೆಯ ಶನೈಚ್ಚರ ದೇವಸ್ಥಾನಕ್ಕೆ ಸಹಸ್ರಾರು ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ದೇವಸ್ಥಾನವು ಭಕ್ತರಿಂದ ತುಂಬಿ ತುಳುಕುತ್ತಿದೆ.1
- ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರವಾಗಿದೆ. ಆದರೆ ಕುಕನೂರು ಪಟ್ಟಣದಲ್ಲಿರುವ ಅವರದೇ ಹೆಸರಿನ ಗಾಂಧಿನಗರಕ್ಕೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ 12ನೇ ವಾರ್ಡ್‌ನ ಗಾಂಧಿನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಕಸಕಡ್ಡಿಗಳೆಲ್ಲ ಮನೆಗಳ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುವಂತಾಗಿದ್ದು, ವಿವಿಧ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ಚರಂಡಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ದಾರಿ ಕಲ್ಪಿಸಿಕೊಡುವಂತೆ 12ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಗಾಂಧಿನಗರಕ್ಕೆ ಸ್ವಾತಂತ್ರ್ಯ ಸಿಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದರೂ, ತಾಲೂಕು ಕೇಂದ್ರವಾದ ಪಟ್ಟಣದಲ್ಲಿಯೇ ಇಂತಹ ದುಸ್ಥಿತಿ ಇದೆ ಎಂದರೆ ಇನ್ನು ಹಳ್ಳಿಗಳ ಪಾಡೇನು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ವಚ್ಛತೆಯ ಕೊರತೆಯ ಜೊತೆಗೆ ಗಾಂಧಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರಿಯಾದ ಸಮಯಕ್ಕೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ತಮ್ಮ ಮತಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರಬೇಕು ಎಂದು ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯನ್ನಾದರೂ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಗಾಂಧಿನಗರಕ್ಕೆ ಸ್ವಚ್ಛತೆಯ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಚನ್ನಯ್ಯ ಹಿರೇಮಠ, ಕುಕನೂರು)4
- ಖಾನಾಪೂರ ತಾಲೂಕಿನ ಹಂದೂರ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಸಕ ವಿಠ್ಠಲ ಹಲಗೇಕರ್ ಅವರು ಹಂದೂರ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಕರೆ ನೀಡಲಾಗಿದೆ.1
- ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲಾ ಸಭಾಂಗಣದಲ್ಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ನೇತೃತ್ವದಲ್ಲಿ ಸಿಟಿ ಬಸ್ ಮಾಲೀಕರು, ಚಾಲಕರು ಮತ್ತು ನಿರ್ವಾಹಕರ ವಿಶೇಷ ಸಭೆ ನಡೆಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಈ ಸಭೆಯಲ್ಲಿ ಎಲ್ಲಾ ಸಿಟಿ ಬಸ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ. ಪ್ರಯಾಣಿಕರನ್ನು ನಿಗದಿತ ಬಸ್ ನಿಲ್ದಾಣಗಳಲ್ಲೇ ಹತ್ತಿಸಬೇಕು ಮತ್ತು ಇಳಿಸಬೇಕು ಎಂದು ಸೂಚಿಸಲಾಗಿದೆ. ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ, ಅನುಚಿತ ವರ್ತನೆ ಹಾಗೂ ಅಸಭ್ಯ ಹಾಡುಗಳ ಪ್ರಸಾರದ ವಿರುದ್ಧ ಸಾರ್ವಜನಿಕರು ತಕ್ಷಣ ದೂರು ನೀಡಲು ಅನುಕೂಲವಾಗುವಂತೆ “Public Eye”, ಸಂಚಾರ ಪೊಲೀಸ್ ಸಹಾಯವಾಣಿ ಮತ್ತು ತುರ್ತು ಸಂಖ್ಯೆ 112 ಒಳಗೊಂಡ ಜಾಗೃತಿ ಪೋಸ್ಟರ್‌ಗಳನ್ನು ಬಸ್‌ಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಪೊಲೀಸರು ಆದೇಶಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದು, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಸಭೆಯಲ್ಲಿ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.1
- ಬರಗಾಲದ ಹಣೆಪಟ್ಟಿ ಹೊತ್ತು, ಕೇವಲ ಮಳೆಯನ್ನೇ ನೆಚ್ಚಿಕೊಂಡಿರುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದಾಗಿ ಗ್ರಾಮೀಣ ಭಾಗದಲ್ಲಿ ಸೂರ್ಯಕಾಂತಿ ಹಾಗೂ ರಾಗಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ರೈತರು ತೀವ್ರ ಕಂಗಾಲಾಗಿದ್ದಾರೆ. ಮಳೆಯ ಕೊರತೆಯಿಂದಾಗಿ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ತೀವ್ರ ಬಿಸಿಲಿಗೆ ಒಣಗಿ ಹೋಗುತ್ತಿವೆ. ತಾಲೂಕಿನ ಕಾನ ಹೊಸಳ್ಳಿ ಹೋಬಳಿಯಲ್ಲಿ ಅಲ್ಪಸ್ವಲ್ಪ ಬಿದ್ದ ಮಳೆಗೆ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಮಾಡಲಾಗಿದ್ದರೂ, ಬೆಳೆ ಉಳಿಸಿಕೊಳ್ಳಲು ರೈತರು ಪ್ರತಿದಿನ ಆಕಾಶದ ಕಡೆಗೆ ಮುಖ ಮಾಡಿ ಕಾಯುವಂತಾಗಿದೆ. ಇತ್ತ ಗುಡೇಕೋಟೆ ಹೊಸಳ್ಳಿ ಹೋಬಳಿಯ ಪ್ರಮುಖ ಬೆಳೆಯಾದ ಶೇಂಗಾವನ್ನು ಬಿತ್ತನೆ ಮಾಡಲಾಗದ ಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರುಣನ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಕನಸುಗಳೆಲ್ಲ ನುಚ್ಚುನೂರಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.1
- ಬಿಜೆಪಿ ಆಡಳಿತದಲ್ಲಿ ಮಂದಿರಗಳಲ್ಲಿ ಕಳವು ನಡೆದಿದೆ ಹಾಗೂ ಮಂದಿರಗಳನ್ನು ಬೀಳಿಸುವ ಕೆಲಸ ಕೂಡ ನಡೆದಿದೆ. ಉತ್ತರ ಪ್ರದೇಶದ ಚಂದೌಲಿಯಲ್ಲಿ ಕಾಳಿ ಮಾತೆಯ ಮಂದಿರವನ್ನು ಬೀಳಿಸುವ ಸಂದರ್ಭದಲ್ಲಿ 58 ವರ್ಷದ ಪಿಡಬ್ಲ್ಯೂಡಿ (PWD) ಕರ್ಮಚಾರಿಯೊಬ್ಬರು ಸಾವನ್ನಪ್ಪಿದ್ದಾರೆ.1