logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಶೇಂಗಾ ಹಾಗೂ ಹೆಸರು ಬೆಳೆಗಳು ಒಣಗುವ ಹಂತ ತಲುಪಿವೆ. ಕೈಗೆ ಬಂದ ಬೆಳೆ ಕೈತಪ್ಪಿ ಹೋಗುವ ಭೀತಿಯಲ್ಲಿರುವ ಅನ್ನದಾತರು, ತಮ್ಮ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಲಭ್ಯವಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು, ಸ್ಪಿಂಕ್ಲ‌ರ್ (ತುಂತುರು ನೀರಾವರಿ) ಮೂಲಕ ಹೊಲಗಳಿಗೆ ನೀರು ಹರಿಸುತ್ತಾ, ಬೆಳೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ತವಕಿಸುತ್ತಿದ್ದಾರೆ. ಸ್ಪಿಂಕ್ಲ‌ರ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿರುವ ಈ ರೈತರ ಗೋಳು ಮುಗಿಲು ಮುಟ್ಟಿದೆ.

9 hrs ago
user_ಲೋಕಲ್ ಸ್ಟಾರ್ ನ್ಯೂಸ್
ಲೋಕಲ್ ಸ್ಟಾರ್ ನ್ಯೂಸ್
ಶೋರಾಪುರ, ಯಾದಗಿರಿ, ಕರ್ನಾಟಕ•
9 hrs ago

ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಶೇಂಗಾ ಹಾಗೂ ಹೆಸರು ಬೆಳೆಗಳು ಒಣಗುವ ಹಂತ ತಲುಪಿವೆ. ಕೈಗೆ ಬಂದ ಬೆಳೆ ಕೈತಪ್ಪಿ ಹೋಗುವ ಭೀತಿಯಲ್ಲಿರುವ ಅನ್ನದಾತರು, ತಮ್ಮ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಲಭ್ಯವಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು, ಸ್ಪಿಂಕ್ಲ‌ರ್ (ತುಂತುರು ನೀರಾವರಿ) ಮೂಲಕ ಹೊಲಗಳಿಗೆ ನೀರು ಹರಿಸುತ್ತಾ, ಬೆಳೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ತವಕಿಸುತ್ತಿದ್ದಾರೆ. ಸ್ಪಿಂಕ್ಲ‌ರ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿರುವ ಈ ರೈತರ ಗೋಳು ಮುಗಿಲು ಮುಟ್ಟಿದೆ.

More news from ಕರ್ನಾಟಕ and nearby areas
  • ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿವಿಧ ಕೆಲಸಗಳಿಗಾಗಿ ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದ ಜನರು ಅಧಿಕಾರಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ 10:40 ಆದರೂ ಒಬ್ಬರೂ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ ಎಂದು ವರದಿಯಾಗಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿ ತೋರಲಾಗುತ್ತಿದೆ ಎಂದು ಆರೋಪಿಸಿದ್ದು, ಕಚೇರಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    1
    ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿವಿಧ ಕೆಲಸಗಳಿಗಾಗಿ ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದ ಜನರು ಅಧಿಕಾರಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ 10:40 ಆದರೂ ಒಬ್ಬರೂ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ ಎಂದು ವರದಿಯಾಗಿದೆ.

ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿ ತೋರಲಾಗುತ್ತಿದೆ ಎಂದು ಆರೋಪಿಸಿದ್ದು, ಕಚೇರಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    9 hrs ago
  • ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದ ರಾಜೀ ಸಂಧಾನದ ವೇಳೆ ಕರೆತರಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಕರಿಕಲ್ ಗ್ರಾಮದ 70 ವರ್ಷದ ರಾಜೇಸಾಬ್ ವಾಲಿಕಾರ್ ಎಂದು ಗುರುತಿಸಲಾಗಿದೆ. ಅವರ ಸಾವಿಗೆ ಪೊಲೀಸರ ಹಲ್ಲೆಯೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಾಜೇಸಾಬ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸುವ ವೇಳೆ ಠಾಣೆಯ ಎಎಸ್‌ಐ ಸಂಗಪ್ಪ ಅವರು ರಾಜೇಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಯಿಂದ ಅಸ್ವಸ್ಥಗೊಂಡ ರಾಜೇಸಾಬ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
    1
    ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದ ರಾಜೀ ಸಂಧಾನದ ವೇಳೆ ಕರೆತರಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಕರಿಕಲ್ ಗ್ರಾಮದ 70 ವರ್ಷದ ರಾಜೇಸಾಬ್ ವಾಲಿಕಾರ್ ಎಂದು ಗುರುತಿಸಲಾಗಿದೆ. ಅವರ ಸಾವಿಗೆ ಪೊಲೀಸರ ಹಲ್ಲೆಯೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಾಜೇಸಾಬ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸುವ ವೇಳೆ ಠಾಣೆಯ ಎಎಸ್‌ಐ ಸಂಗಪ್ಪ ಅವರು ರಾಜೇಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಯಿಂದ ಅಸ್ವಸ್ಥಗೊಂಡ ರಾಜೇಸಾಬ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
    user_ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    Electrician ಹುಣಸಗಿ, ಯಾದಗಿರಿ, ಕರ್ನಾಟಕ•
    14 min ago
  • ವಿಜಯಪುರ ಜಿಲ್ಲೆಯ ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ ಸೋಮವಾರ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸೇವಾ ಸಮಿತಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ರಾಜವಾಡೆ ಆವರಣದಲ್ಲಿ ನಡೆಯಿತು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಜೋಡಿಗಳ ವಿವಾಹವನ್ನು ನೆರವೇರಿಸಲಾಯಿತು. ಬೆಕಿನಾಳದ ಮಹೇಶ ಮುತ್ಯಾ, ಮಾವಿನಭಾವಿಯ ಬಸವರಾಜ ದೇವರು, ಕೋಳೂರಿನ ಸಂತೋಷ ಸ್ವಾಮೀಜಿ, ಜಮ್ಮಲದಿನ್ನಿಯ ಸಿದ್ದರಾಮ ದೇವರು ಹಾಗೂ ರಕ್ಕಸಗಿಯ ಶ್ರೀ ಶರಣಯ್ಯ ಸ್ವಾಮೀಜಿ ಅವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ನವದಂಪತಿಗಳಿಗೆ ಆಶೀರ್ವಾದ ನೀಡಿ ಆಶೀರ್ವಚನ ಮಾಡಿದರು. ಇದೇ ಸಂದರ್ಭದಲ್ಲಿ, ವೇದಿಕೆಯಲ್ಲಿದ್ದ ಎಲ್ಲಾ ಪೂಜ್ಯರು ರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡ್ತಿ ಪಾಟೀಲ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಕಾರ್ಯಕ್ರಮಕ್ಕೆ ಹಿಕ್ಕನ ಗುತ್ತಿಯ ಪೂಜ್ಯ ಪ್ರಭುಲಿಂಗ ಮಹಾಸ್ವಾಮಿಗಳು ಮತ್ತು ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡತಿ ಪಾಟೀಲ ಅವರು ನೇತೃತ್ವ ವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಕಾಟಾಪೂರ, ವಿಶ್ವನಾಥ ಪಾಟೀಲ, ರೇಣುಕಾ ಪಾಟೀಲ, ಅಂಬಿಕಾ ಪಾಟೀಲ, ಕಾಶಿಬಾಯಿ ಶರಣರ, ವಿದ್ಯಾ ವಿಶ್ವನಾಥ ಪಾಟೀಲ, ಶಿವಲೀಲಾ ಲಿಂಗದಳ್ಳಿ, ರೇಣುಕಾ ಪಾಟೀಲ, ಶಿವಲಂಗಮ್ಮ ಪಾಟೀಲ, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚೆನ್ನಮ್ಮಾಜಿಯ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
    1
    ವಿಜಯಪುರ ಜಿಲ್ಲೆಯ ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ ಸೋಮವಾರ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸೇವಾ ಸಮಿತಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ರಾಜವಾಡೆ ಆವರಣದಲ್ಲಿ ನಡೆಯಿತು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಜೋಡಿಗಳ ವಿವಾಹವನ್ನು ನೆರವೇರಿಸಲಾಯಿತು. ಬೆಕಿನಾಳದ ಮಹೇಶ ಮುತ್ಯಾ, ಮಾವಿನಭಾವಿಯ ಬಸವರಾಜ ದೇವರು, ಕೋಳೂರಿನ ಸಂತೋಷ ಸ್ವಾಮೀಜಿ, ಜಮ್ಮಲದಿನ್ನಿಯ ಸಿದ್ದರಾಮ ದೇವರು ಹಾಗೂ ರಕ್ಕಸಗಿಯ ಶ್ರೀ ಶರಣಯ್ಯ ಸ್ವಾಮೀಜಿ ಅವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ನವದಂಪತಿಗಳಿಗೆ ಆಶೀರ್ವಾದ ನೀಡಿ ಆಶೀರ್ವಚನ ಮಾಡಿದರು. ಇದೇ ಸಂದರ್ಭದಲ್ಲಿ, ವೇದಿಕೆಯಲ್ಲಿದ್ದ ಎಲ್ಲಾ ಪೂಜ್ಯರು ರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡ್ತಿ ಪಾಟೀಲ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಈ ಕಾರ್ಯಕ್ರಮಕ್ಕೆ ಹಿಕ್ಕನ ಗುತ್ತಿಯ ಪೂಜ್ಯ ಪ್ರಭುಲಿಂಗ ಮಹಾಸ್ವಾಮಿಗಳು ಮತ್ತು ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡತಿ ಪಾಟೀಲ ಅವರು ನೇತೃತ್ವ ವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಕಾಟಾಪೂರ, ವಿಶ್ವನಾಥ ಪಾಟೀಲ, ರೇಣುಕಾ ಪಾಟೀಲ, ಅಂಬಿಕಾ ಪಾಟೀಲ, ಕಾಶಿಬಾಯಿ ಶರಣರ, ವಿದ್ಯಾ ವಿಶ್ವನಾಥ ಪಾಟೀಲ, ಶಿವಲೀಲಾ ಲಿಂಗದಳ್ಳಿ, ರೇಣುಕಾ ಪಾಟೀಲ, ಶಿವಲಂಗಮ್ಮ ಪಾಟೀಲ, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚೆನ್ನಮ್ಮಾಜಿಯ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
    user_ಸಮೃದ್ಧ ಕರ್ನಾಟಕ ನ್ಯೂಸ್
    ಸಮೃದ್ಧ ಕರ್ನಾಟಕ ನ್ಯೂಸ್
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    8 hrs ago
  • ಯಾದಗಿರಿ ಜಿಲ್ಲಾ ಕೇಂದ್ರವಾಗಿ ೧೬ ವರ್ಷಗಳಾಗಿದ್ದರೂ, ಸುಮಾರು ೧೩ ಎಕ್ಸ್‌ಪ್ರೆಸ್ ರೈಲುಗಳು ಇನ್ನೂ ನಿಲ್ಲದಿರುವುದು ಜಿಲ್ಲೆಯ ದುರದೃಷ್ಟಕರ ಸಂಗತಿ ಎಂದು ಅಖಿಲ ಭಾರತೀಯÀ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮತ್ತು ಇಂಟರ್‌ಸಿಟಿ ರೈಲು ಮರು ಪ್ರಾರಂಭಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ. ತಾಲೂಕಿನ ಠಾಣಗುಂದಿ (ವಿಶ್ವಾಸಪೂರ) ತಾಂಡಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ವಿನೂತನ ಅಭಿಯಾನಕ್ಕೆ ದೇವಸ್ಥಾನದ ಪೂಜಾರಿ ರಡ್ಡಿ ಪೂಜಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರೈಲು ನಿಲ್ದಾಣದ ಮೂಲಕ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್, ಅಹಮದಾಬಾದ್ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್, ರಾಜಕೋಟ್ ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸೂಪರ್ ಫಾಸ್ಟ್, ಗೋರಕ್‌ಪುರ ಎಕ್ಸ್‌ಪ್ರೆಸ್, ವಿವೇಕ್ ಎಕ್ಸ್‌ಪ್ರೆಸ್ ರೈಲುಗಳಿಗೆ ತಕ್ಷಣ ನಿಲುಗಡೆ ಒದಗಿಸಬೇಕು ಎಂದು ಮುದ್ನಾಳ್ ಒತ್ತಾಯಿಸಿದರು. ಮುಖ್ಯವಾಗಿ ಕೊರೊನಾ ಸಮಯದಲ್ಲಿ ರದ್ದಾಗಿರುವ ಇಂಟರ್‌ಸಿಟಿ ರೈಲನ್ನು ಮತ್ತೆ ಪುನರಾರಂಭಿಸಬೇಕು ಎಂದೂ ಅವರು ಆಗ್ರಹಿಸಿದರು. ಈ ನಿರ್ಲಕ್ಷ್ಯಕ್ಕೆ ಸೊಲ್ಲಾಪುರ ಗುಂತಕಲ್ ಸಿಕಿಂದ್ರಾಬಾದ್ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಸಂಬಂಧಪಟ್ಟ ರೈಲ್ವೆ ಸಚಿವರೇ ನೇರ ಹೊಣೆ ಎಂದು ಅವರು ದೂರಿದ್ದಾರೆ. ರೈಲು ನಿಲ್ದಾಣದಲ್ಲಿ ವಿಶೇಷ ಮೂಲಭೂತ ಸೌಕರ್ಯಗಳಾದ ಲಿಫ್ಟ್ ವ್ಯವಸ್ಥೆ, ಅಂಗವಿಕಲರು ಮತ್ತು ವಯೋವೃದ್ಧರಿಗೆ ಅನುಕೂಲವಾಗಲು ವಿಶೇಷ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ, ರೈಲು ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಸಂಪೂರ್ಣ ಮೇಲ್ಛಾವಣಿ ವ್ಯವಸ್ಥೆ ಮತ್ತು ಆಸನದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಗುಂತಕಲ್ ಹೊರತುಪಡಿಸಿದರೆ ಯಾದಗಿರಿ ಅತಿ ಹೆಚ್ಚು ಆದಾಯ ನೀಡುವ ರೈಲು ನಿಲ್ದಾಣವಾಗಿದೆ ಎಂದು ಮುದ್ನಾಳ್ ಹೇಳಿದ್ದಾರೆ. ಅಲ್ಲದೆ, ಈ ಭಾಗದಿಂದ ಗುಳೆ ಹೋಗುವ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಾಗುವವರೆಗೆ ಈ ಅಭಿಯಾನ ಹಂತ ಹಂತವಾಗಿ ಮುಂದುವರಿಯಲಿದೆ ಎಂದು ಉಮೇಶ ಕೆ. ಮುದ್ನಾಳ್ ತಿಳಿಸಿದ್ದಾರೆ. ಸಾಕಷ್ಟು ಬಾರಿ ಹೋರಾಟದ ಮೂಲಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ, ಸಾಮಾಜಿಕ ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ೫ ಸಾವಿರ ಜನರನ್ನು ಸೇರಿಸಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಅಭಿಯಾನದಲ್ಲಿ ಪವನ, ವಿಶಾಲ, ಗೋವಿಂದ ಪವಾರ್, ಗೋಬ್ರು ಪವಾರ್, ವಿಜಯ ಪವಾರ್, ಬಜನ್ ಪವಾರ್, ತಿರುಮಲ ರಾಟೋಡ್, ರಾಜು ರಾಥೋಡ್, ರೋಹಿತ್, ಚಾನ್ಸಿಂಗ್, ದೇವ್ ಜಿ ನಾಯಕ್, ಮುತ್ತು ಪವಾರ್, ರವಿ ಜಾದವ್, ಕಿಶನ್ ಪವಾರ್, ಶಂಕರ, ವಿಜಯ್ ಪವಾರ್, ಪ್ರಕಾಶ, ರಾಮು, ತಾರಾಸಿ, ವಿಠ್ಠಲ್, ವಿನೋದ್, ಲಾಲ್ ಬಹದ್ದೂರ್, ಅರ್ಜುನ್, ವಿಕಾಸ್, ಕರಾಣ, ಯುವರಾಜ್, ವಿಕಾಸ್, ಸಂಜೆ ಬಾಸು, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
    1
    ಯಾದಗಿರಿ ಜಿಲ್ಲಾ ಕೇಂದ್ರವಾಗಿ ೧೬ ವರ್ಷಗಳಾಗಿದ್ದರೂ, ಸುಮಾರು ೧೩ ಎಕ್ಸ್‌ಪ್ರೆಸ್ ರೈಲುಗಳು ಇನ್ನೂ ನಿಲ್ಲದಿರುವುದು ಜಿಲ್ಲೆಯ ದುರದೃಷ್ಟಕರ ಸಂಗತಿ ಎಂದು ಅಖಿಲ ಭಾರತೀಯÀ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮತ್ತು ಇಂಟರ್‌ಸಿಟಿ ರೈಲು ಮರು ಪ್ರಾರಂಭಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ತಾಲೂಕಿನ ಠಾಣಗುಂದಿ (ವಿಶ್ವಾಸಪೂರ) ತಾಂಡಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ವಿನೂತನ ಅಭಿಯಾನಕ್ಕೆ ದೇವಸ್ಥಾನದ ಪೂಜಾರಿ ರಡ್ಡಿ ಪೂಜಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರೈಲು ನಿಲ್ದಾಣದ ಮೂಲಕ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್, ಅಹಮದಾಬಾದ್ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್, ರಾಜಕೋಟ್ ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸೂಪರ್ ಫಾಸ್ಟ್, ಗೋರಕ್‌ಪುರ ಎಕ್ಸ್‌ಪ್ರೆಸ್, ವಿವೇಕ್ ಎಕ್ಸ್‌ಪ್ರೆಸ್ ರೈಲುಗಳಿಗೆ ತಕ್ಷಣ ನಿಲುಗಡೆ ಒದಗಿಸಬೇಕು ಎಂದು ಮುದ್ನಾಳ್ ಒತ್ತಾಯಿಸಿದರು. ಮುಖ್ಯವಾಗಿ ಕೊರೊನಾ ಸಮಯದಲ್ಲಿ ರದ್ದಾಗಿರುವ ಇಂಟರ್‌ಸಿಟಿ ರೈಲನ್ನು ಮತ್ತೆ ಪುನರಾರಂಭಿಸಬೇಕು ಎಂದೂ ಅವರು ಆಗ್ರಹಿಸಿದರು. ಈ ನಿರ್ಲಕ್ಷ್ಯಕ್ಕೆ ಸೊಲ್ಲಾಪುರ ಗುಂತಕಲ್ ಸಿಕಿಂದ್ರಾಬಾದ್ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಸಂಬಂಧಪಟ್ಟ ರೈಲ್ವೆ ಸಚಿವರೇ ನೇರ ಹೊಣೆ ಎಂದು ಅವರು ದೂರಿದ್ದಾರೆ.

ರೈಲು ನಿಲ್ದಾಣದಲ್ಲಿ ವಿಶೇಷ ಮೂಲಭೂತ ಸೌಕರ್ಯಗಳಾದ ಲಿಫ್ಟ್ ವ್ಯವಸ್ಥೆ, ಅಂಗವಿಕಲರು ಮತ್ತು ವಯೋವೃದ್ಧರಿಗೆ ಅನುಕೂಲವಾಗಲು ವಿಶೇಷ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆ, ರೈಲು ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಸಂಪೂರ್ಣ ಮೇಲ್ಛಾವಣಿ ವ್ಯವಸ್ಥೆ ಮತ್ತು ಆಸನದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಗುಂತಕಲ್ ಹೊರತುಪಡಿಸಿದರೆ ಯಾದಗಿರಿ ಅತಿ ಹೆಚ್ಚು ಆದಾಯ ನೀಡುವ ರೈಲು ನಿಲ್ದಾಣವಾಗಿದೆ ಎಂದು ಮುದ್ನಾಳ್ ಹೇಳಿದ್ದಾರೆ. ಅಲ್ಲದೆ, ಈ ಭಾಗದಿಂದ ಗುಳೆ ಹೋಗುವ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಾಗುವವರೆಗೆ ಈ ಅಭಿಯಾನ ಹಂತ ಹಂತವಾಗಿ ಮುಂದುವರಿಯಲಿದೆ ಎಂದು ಉಮೇಶ ಕೆ. ಮುದ್ನಾಳ್ ತಿಳಿಸಿದ್ದಾರೆ. ಸಾಕಷ್ಟು ಬಾರಿ ಹೋರಾಟದ ಮೂಲಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ, ಸಾಮಾಜಿಕ ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ೫ ಸಾವಿರ ಜನರನ್ನು ಸೇರಿಸಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಅಭಿಯಾನದಲ್ಲಿ ಪವನ, ವಿಶಾಲ, ಗೋವಿಂದ ಪವಾರ್, ಗೋಬ್ರು ಪವಾರ್, ವಿಜಯ ಪವಾರ್, ಬಜನ್ ಪವಾರ್, ತಿರುಮಲ ರಾಟೋಡ್, ರಾಜು ರಾಥೋಡ್, ರೋಹಿತ್, ಚಾನ್ಸಿಂಗ್, ದೇವ್ ಜಿ ನಾಯಕ್, ಮುತ್ತು ಪವಾರ್, ರವಿ ಜಾದವ್, ಕಿಶನ್ ಪವಾರ್, ಶಂಕರ, ವಿಜಯ್ ಪವಾರ್, ಪ್ರಕಾಶ, ರಾಮು, ತಾರಾಸಿ, ವಿಠ್ಠಲ್, ವಿನೋದ್, ಲಾಲ್ ಬಹದ್ದೂರ್, ಅರ್ಜುನ್, ವಿಕಾಸ್, ಕರಾಣ, ಯುವರಾಜ್, ವಿಕಾಸ್, ಸಂಜೆ ಬಾಸು, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    23 hrs ago
  • ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿ ಅವರು ಮಾನ್ವಿ ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿ, ದಲಿತ-ಆದಿವಾಸಿ ರೈತರ ಜಮೀನುಗಳಿಗೆ ನೀರು ಒದಗಿಸಲು ಉದ್ದೇಶಿಸಿದ್ದ ಟಿಎಸ್‌ಪಿ ಯೋಜನೆಯ ಹಣದಲ್ಲಿ ಸವರ್ಣೀಯರ ಜಮೀನುಗಳಿಗೆ ಚೆಕ್‌ಡ್ಯಾಂ ನಿರ್ಮಿಸಿ, ಕಳಪೆ ಕಾಮಗಾರಿ ನಡೆಸಿ ಕೋಟಿಗಟ್ಟಲೆ ಲೂಟಿ ಮಾಡಿದ ಅಧಿಕಾರಿಗಳನ್ನು ತಕ್ಷಣ ಜೈಲಿಗೆ ಕಳಿಸುವಂತೆ ಒತ್ತಾಯಿಸಿದ್ದಾರೆ. ಮಾನ್ವಿ-ಸಿರವಾರ ತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆಯು 80ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ಮತ್ತು ಕಳಪೆ ಗುಣಮಟ್ಟದಲ್ಲಿ ನಿರ್ಮಿಸಿದೆ ಎಂದು ನಕ್ಕುಂದಿ ಆರೋಪಿಸಿದರು. ಈ ಡ್ಯಾಂಗಳು ಒಂದು ಮಳೆಗೂ ನಿಲ್ಲುವುದಿಲ್ಲ ಎಂದು ಹೇಳಿದ ಅವರು, ಇದರ ಹಿಂದೆ ದೊಡ್ಡ ಭ್ರಷ್ಟಾಚಾರ ಅಡಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ಜಮೀನಿನ ಬಳಿ ಡ್ಯಾಂ ಕಟ್ಟಬೇಕಾಗಿದ್ದರೂ, ಅಧಿಕಾರಿಗಳು ದಲಿತರ ಹೆಸರಲ್ಲಿ ಬಂದ ಅನುದಾನವನ್ನು ದುರುಪಯೋಗಪಡಿಸಿಕೊಂಡು, ಸಾಮಾನ್ಯ ವರ್ಗದ ಶ್ರೀಮಂತ ರೈತರ ಜಮೀನುಗಳಲ್ಲಿ ಡ್ಯಾಂ ಕಟ್ಟಿದ್ದಾರೆ. ಇದು ಸಾಮಾಜಿಕ ನ್ಯಾಯದ ಕಗ್ಗೊಲೆ ಮತ್ತು ದಲಿತ ರೈತರಿಗೆ ಮಾಡಿದ ಐತಿಹಾಸಿಕ ದ್ರೋಹ ಎಂದು ನಕ್ಕುಂದಿ ಕಿಡಿಕಾರಿದರು. ಈ ಕೂಡಲೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಚೆಕ್‌ಡ್ಯಾಂ ಹಗರಣದ ತನಿಖೆ ನಡೆಸಬೇಕು. ಹಗರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಲ್ಲವಾದರೆ, ಡಿಎಸ್‌ಎಸ್ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಧರಣಿಯಲ್ಲಿ ಡಿಎಸ್‌ಎಸ್, ದಲಿತ ಸಮರ ಸೇನೆ, ಕಾರ್ಮಿಕ ಸಂಘ ಸೇರಿದಂತೆ 5 ಸಂಘಟನೆಗಳ ನೂರಾರು ಹೋರಾಟಗಾರರು ಭಾಗವಹಿಸಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷ ಪರಶುರಾಮ್ ಬಾಗಲವಾಡ, ದಲಿತ ಚಳುವಳಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ನಾಯಕ, ಅನೀಲ್‌ ಕುಮಾರ, ನರಸರೆಡ್ಡಿ, ಪ್ರಶಾಂತ್‌ ಜಾಗೀರ್ ಪನ್ನೂರ್, ವೆಂಕಟೇಶ್, ಅಮರೇಶ್, ಶಾಂತರಾಜ್ ಪನ್ನೂರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
    1
    ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿ ಅವರು ಮಾನ್ವಿ ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿ, ದಲಿತ-ಆದಿವಾಸಿ ರೈತರ ಜಮೀನುಗಳಿಗೆ ನೀರು ಒದಗಿಸಲು ಉದ್ದೇಶಿಸಿದ್ದ ಟಿಎಸ್‌ಪಿ ಯೋಜನೆಯ ಹಣದಲ್ಲಿ ಸವರ್ಣೀಯರ ಜಮೀನುಗಳಿಗೆ ಚೆಕ್‌ಡ್ಯಾಂ ನಿರ್ಮಿಸಿ, ಕಳಪೆ ಕಾಮಗಾರಿ ನಡೆಸಿ ಕೋಟಿಗಟ್ಟಲೆ ಲೂಟಿ ಮಾಡಿದ ಅಧಿಕಾರಿಗಳನ್ನು ತಕ್ಷಣ ಜೈಲಿಗೆ ಕಳಿಸುವಂತೆ ಒತ್ತಾಯಿಸಿದ್ದಾರೆ.

ಮಾನ್ವಿ-ಸಿರವಾರ ತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆಯು 80ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ಮತ್ತು ಕಳಪೆ ಗುಣಮಟ್ಟದಲ್ಲಿ ನಿರ್ಮಿಸಿದೆ ಎಂದು ನಕ್ಕುಂದಿ ಆರೋಪಿಸಿದರು. ಈ ಡ್ಯಾಂಗಳು ಒಂದು ಮಳೆಗೂ ನಿಲ್ಲುವುದಿಲ್ಲ ಎಂದು ಹೇಳಿದ ಅವರು, ಇದರ ಹಿಂದೆ ದೊಡ್ಡ ಭ್ರಷ್ಟಾಚಾರ ಅಡಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ಜಮೀನಿನ ಬಳಿ ಡ್ಯಾಂ ಕಟ್ಟಬೇಕಾಗಿದ್ದರೂ, ಅಧಿಕಾರಿಗಳು ದಲಿತರ ಹೆಸರಲ್ಲಿ ಬಂದ ಅನುದಾನವನ್ನು ದುರುಪಯೋಗಪಡಿಸಿಕೊಂಡು, ಸಾಮಾನ್ಯ ವರ್ಗದ ಶ್ರೀಮಂತ ರೈತರ ಜಮೀನುಗಳಲ್ಲಿ ಡ್ಯಾಂ ಕಟ್ಟಿದ್ದಾರೆ. ಇದು ಸಾಮಾಜಿಕ ನ್ಯಾಯದ ಕಗ್ಗೊಲೆ ಮತ್ತು ದಲಿತ ರೈತರಿಗೆ ಮಾಡಿದ ಐತಿಹಾಸಿಕ ದ್ರೋಹ ಎಂದು ನಕ್ಕುಂದಿ ಕಿಡಿಕಾರಿದರು.

ಈ ಕೂಡಲೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಚೆಕ್‌ಡ್ಯಾಂ ಹಗರಣದ ತನಿಖೆ ನಡೆಸಬೇಕು. ಹಗರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಲ್ಲವಾದರೆ, ಡಿಎಸ್‌ಎಸ್ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಧರಣಿಯಲ್ಲಿ ಡಿಎಸ್‌ಎಸ್, ದಲಿತ ಸಮರ ಸೇನೆ, ಕಾರ್ಮಿಕ ಸಂಘ ಸೇರಿದಂತೆ 5 ಸಂಘಟನೆಗಳ ನೂರಾರು ಹೋರಾಟಗಾರರು ಭಾಗವಹಿಸಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷ ಪರಶುರಾಮ್ ಬಾಗಲವಾಡ, ದಲಿತ ಚಳುವಳಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ನಾಯಕ, ಅನೀಲ್‌ ಕುಮಾರ, ನರಸರೆಡ್ಡಿ, ಪ್ರಶಾಂತ್‌ ಜಾಗೀರ್ ಪನ್ನೂರ್, ವೆಂಕಟೇಶ್, ಅಮರೇಶ್, ಶಾಂತರಾಜ್ ಪನ್ನೂರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    6 hrs ago
  • ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮೂರಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ಗ್ರಾಮದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ, ಯಾವುದೇ ಭೇದಭಾವವಿಲ್ಲದೆ, ಒಂದೇ ತಾಯಿಯ ಮಕ್ಕಳಾಗಿ ಸಡಗರದಿಂದ ಪಾಲ್ಗೊಂಡರು. ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಮಾತನಾಡಿ, ತಮ್ಮ ಗ್ರಾಮದಲ್ಲಿ ಯಾವುದೇ ಭೇದಭಾವವಿಲ್ಲದೆ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು, ಇದು ಗ್ರಾಮದ ಸೌಹಾರ್ದಯುತ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. ವರದಿಗಾರ ಶರಣಗೌಡ ಪಾಟೀಲರು ಮುದ್ದೇಬಿಹಾಳದಿಂದ ಈ ಕುರಿತು ವರದಿ ಮಾಡಿದ್ದಾರೆ.
    1
    ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮೂರಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ಗ್ರಾಮದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ, ಯಾವುದೇ ಭೇದಭಾವವಿಲ್ಲದೆ, ಒಂದೇ ತಾಯಿಯ ಮಕ್ಕಳಾಗಿ ಸಡಗರದಿಂದ ಪಾಲ್ಗೊಂಡರು. ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಮಾತನಾಡಿ, ತಮ್ಮ ಗ್ರಾಮದಲ್ಲಿ ಯಾವುದೇ ಭೇದಭಾವವಿಲ್ಲದೆ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು, ಇದು ಗ್ರಾಮದ ಸೌಹಾರ್ದಯುತ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. ವರದಿಗಾರ ಶರಣಗೌಡ ಪಾಟೀಲರು ಮುದ್ದೇಬಿಹಾಳದಿಂದ ಈ ಕುರಿತು ವರದಿ ಮಾಡಿದ್ದಾರೆ.
    user_Sharanugouda Patil
    Sharanugouda Patil
    Muddebihal, Vijayapura•
    3 hrs ago
  • ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ನಡೆದ ಆರು ಜನರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಪಾರಿ ಕಿಲ್ಲರ್ ಮಹೇಶ್ ತಳವಾರ್ ಅಲಿಯಾಸ್ ಮಹೇಶ್‌ನನ್ನು ಚಡಚಣ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕಳೆದ 23 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಆರೋಪಿಯನ್ನು ಕೊನೆಗೂ ಖಾಕಿ ಬಲೆಗೆ ಕೆಡವಲು ಪೊಲೀಸರು ಯಶಸ್ವಿಯಾಗಿದ್ದಾರೆ.
    1
    ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ನಡೆದ ಆರು ಜನರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಪಾರಿ ಕಿಲ್ಲರ್ ಮಹೇಶ್ ತಳವಾರ್ ಅಲಿಯಾಸ್ ಮಹೇಶ್‌ನನ್ನು ಚಡಚಣ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕಳೆದ 23 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಆರೋಪಿಯನ್ನು ಕೊನೆಗೂ ಖಾಕಿ ಬಲೆಗೆ ಕೆಡವಲು ಪೊಲೀಸರು ಯಶಸ್ವಿಯಾಗಿದ್ದಾರೆ.
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    13 hrs ago
  • ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಶೇಂಗಾ ಹಾಗೂ ಹೆಸರು ಬೆಳೆಗಳು ಒಣಗುವ ಹಂತ ತಲುಪಿವೆ. ಕೈಗೆ ಬಂದ ಬೆಳೆ ಕೈತಪ್ಪಿ ಹೋಗುವ ಭೀತಿಯಲ್ಲಿರುವ ಅನ್ನದಾತರು, ತಮ್ಮ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಲಭ್ಯವಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು, ಸ್ಪಿಂಕ್ಲ‌ರ್ (ತುಂತುರು ನೀರಾವರಿ) ಮೂಲಕ ಹೊಲಗಳಿಗೆ ನೀರು ಹರಿಸುತ್ತಾ, ಬೆಳೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ತವಕಿಸುತ್ತಿದ್ದಾರೆ. ಸ್ಪಿಂಕ್ಲ‌ರ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿರುವ ಈ ರೈತರ ಗೋಳು ಮುಗಿಲು ಮುಟ್ಟಿದೆ.
    1
    ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ, ಶೇಂಗಾ ಹಾಗೂ ಹೆಸರು ಬೆಳೆಗಳು ಒಣಗುವ ಹಂತ ತಲುಪಿವೆ. ಕೈಗೆ ಬಂದ ಬೆಳೆ ಕೈತಪ್ಪಿ ಹೋಗುವ ಭೀತಿಯಲ್ಲಿರುವ ಅನ್ನದಾತರು, ತಮ್ಮ ಬೆಳೆಗಳನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಲಭ್ಯವಿರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು, ಸ್ಪಿಂಕ್ಲ‌ರ್ (ತುಂತುರು ನೀರಾವರಿ) ಮೂಲಕ ಹೊಲಗಳಿಗೆ ನೀರು ಹರಿಸುತ್ತಾ, ಬೆಳೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ತವಕಿಸುತ್ತಿದ್ದಾರೆ. ಸ್ಪಿಂಕ್ಲ‌ರ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿರುವ ಈ ರೈತರ ಗೋಳು ಮುಗಿಲು ಮುಟ್ಟಿದೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.