Shuru
Apke Nagar Ki App…
ಇಳಕಲ್ ನಗರದಲ್ಲಿ ಮಡಿವಾಳ ಸಮಾಜದ ವತಿಯಿಂದ ಮಾಧ್ಯಮ ಘೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಯುವಕರ ಕಣ್ಮಣಿ ಹಾಗೂ ಅಭಿವೃದ್ಧಿಯ ಹರಿಕಾರರೆಂದು ಗುರುತಿಸಿಕೊಂಡಿರುವ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಲಾಯಿತು. ಮಾಧ್ಯಮ ಘೋಷ್ಠಿಯಲ್ಲಿ ಮಡಿವಾಳ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು. ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕೆಂದು ಮಡಿವಾಳ ಸಮಾಜದ ಮುಖಂಡರು ಬಲವಾಗಿ ಆಗ್ರಹಿಸಿದರು.
ಶರಣಗೌಡ ಕಂದಕೂರ
ಇಳಕಲ್ ನಗರದಲ್ಲಿ ಮಡಿವಾಳ ಸಮಾಜದ ವತಿಯಿಂದ ಮಾಧ್ಯಮ ಘೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಯುವಕರ ಕಣ್ಮಣಿ ಹಾಗೂ ಅಭಿವೃದ್ಧಿಯ ಹರಿಕಾರರೆಂದು ಗುರುತಿಸಿಕೊಂಡಿರುವ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಲಾಯಿತು. ಮಾಧ್ಯಮ ಘೋಷ್ಠಿಯಲ್ಲಿ ಮಡಿವಾಳ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು. ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕೆಂದು ಮಡಿವಾಳ ಸಮಾಜದ ಮುಖಂಡರು ಬಲವಾಗಿ ಆಗ್ರಹಿಸಿದರು.
More news from ಕರ್ನಾಟಕ and nearby areas
- ಇಳಕಲ್ ನಗರದಲ್ಲಿ ಮಡಿವಾಳ ಸಮಾಜದ ವತಿಯಿಂದ ಮಾಧ್ಯಮ ಘೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಯುವಕರ ಕಣ್ಮಣಿ ಹಾಗೂ ಅಭಿವೃದ್ಧಿಯ ಹರಿಕಾರರೆಂದು ಗುರುತಿಸಿಕೊಂಡಿರುವ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಲಾಯಿತು. ಮಾಧ್ಯಮ ಘೋಷ್ಠಿಯಲ್ಲಿ ಮಡಿವಾಳ ಸಮಾಜದ ಮುಖಂಡರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು. ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕೆಂದು ಮಡಿವಾಳ ಸಮಾಜದ ಮುಖಂಡರು ಬಲವಾಗಿ ಆಗ್ರಹಿಸಿದರು.3
- ವಿಜಯಪುರ ಜಿಲ್ಲೆಯ ಐತಿಹಾಸಿಕ ತಾಳಿಕೋಟಿ ಪಟ್ಟಣದಲ್ಲಿ, ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ನಿರ್ಮಾಣ ಸೇವಾ ಸಮಿತಿಯ ವತಿಯಿಂದ ಅದರ ಮೂರನೇ ವಾರ್ಷಿಕೋತ್ಸವದ ನಿಮಿತ್ತ ಪುರಾಣ ಕಾರ್ಯಕ್ರಮವನ್ನು ರಾಜವಾಡೆ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಈ ದೇಶದ ರೈತರು ಅನ್ನದಾತರಾಗಿದ್ದು, ದೇಶಕ್ಕೆ ಅನ್ನ ನೀಡುವ ಅವರ ಸೇವೆ ದೇವರ ಸೇವೆಗೆ ಸಮಾನವಾಗಿದೆ ಎಂದು ಹೇಳಿದರು. ರೈತರನ್ನು ಸನ್ಮಾನಿಸಿರುವುದು ಹೆಮ್ಮೆಯ ವಿಷಯ ಎಂದು ಅವರು ಬಣ್ಣಿಸಿದರು. ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ರೈತ ಮುಖಂಡರಾದ ದಶರಥಸಿಂಗ್ ಮನಗೂಳಿ ಅವರು ಮಾತನಾಡಿ, ಹುಟ್ಟು ಹೋರಾಟಗಾರ್ತಿಯಾದ ನೀಲಮ್ಮಗೌಡತಿ ಪಾಟೀಲ ಅವರು ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಅವರಿಗೆ ಎಲ್ಲರ ಸಹಕಾರ ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 15 ಜೋಡಿ ರೈತ ದಂಪತಿಗಳನ್ನು ಸನ್ಮಾನಿಸಲಾಯಿತು. ಕಿತ್ತೂರಾಣಿ ಚೆನ್ನಮ್ಮಳ ನೂರಾರು ಅಭಿಮಾನಿಗಳು ಈ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.1
- ಯಾದಗಿರಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಸಂದಣಿ ವಿಪರೀತ ಹೆಚ್ಚಾಗಿದ್ದು, ರೋಗಿಗಳು ಓಪಿಡಿ (ಹೊರರೋಗಿ ವಿಭಾಗ) ಬರೆಸಲು ತೀವ್ರ ಪರದಾಡುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಅಧಿಕವಾಗಿದೆ. ವೈದ್ಯರನ್ನು ಭೇಟಿಯಾಗಲು ಮತ್ತು ಓಪಿಡಿ ಟಿಕೆಟ್ ಪಡೆಯಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ.1
- ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಅಳವಡಿಸಲಾಗಿರುವ ಹೈ ಮಾಸ್ಕ್ ದೀಪ ಇಂದಿಗೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹೈ ಮಾಸ್ಕ್ ದೀಪ ಸರಿಯಾಗಿ ಆನ್ ಆಗದಿರುವುದು ಮುಖ್ಯ ಸಮಸ್ಯೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು 'ನೋಡೋಣ' ಎಂದು ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ.1
- ವಿಜಯಪುರದಲ್ಲಿ ಶನಿವಾರ ಬಿಜೆಪಿ ಮುಖಂಡ ವಿವೇಕ್ ಡಬ್ಬಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು 60 ವರ್ಷ ಆಳಿದರೂ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಭಿವೃದ್ಧಿಯ ಮೂಲ ಮಂತ್ರ ಮಾಡಿಕೊಂಡಿರುವ ನರೇಂದ್ರ ಮೋದಿ ಅವರ ಕುರಿತು ಮಾತನಾಡುವ ಅರ್ಹತೆ ಕಾಂಗ್ರೆಸ್‌ಗೆ ಇಲ್ಲ ಎಂದು ಡಬ್ಬಿ ಹೇಳಿದರು.1
- ಆಝಾದ್ ನಗರದಲ್ಲಿ, ಎಳೆನೀರು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಜೀವಾಂತ್ಯ ಮಾಡಿಕೊಂಡಿದ್ದಾನೆ.1
- ಬೆಂಗಳೂರಿನಲ್ಲಿ ಕರ್ನಾಟಕ ಜನತಾ ಸೇನಾ ದಳ ಆಯೋಜಿಸಿದ್ದ ಸಂಗಮ ಸಮಾವೇಶ ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಪತ್ರಕರ್ತ ನಜೀರ್ ಅಹ್ಮದ್ ಚೋರಗಸ್ತಿ ಅವರಿಗೆ 'ಭಾರತ ಬುದ್ಧ ಶ್ರೀ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅವರ ಸಮಾಜಮುಖಿ ಸೇವೆ, ಪತ್ರಿಕೋದ್ಯಮ ಕ್ಷೇತ್ರದ ಕೊಡುಗೆ ಹಾಗೂ ಜನಪರ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಂಗಳೂರಿನ ಶ್ರೀ ಬೇಲಿ ಮಠ ಮಹಾಸಂಸ್ಥಾನದ ಶ್ರೀ ಶ್ರೀ ಪರಮಪೂಜ್ಯ ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ವಹಿಸಿದ್ದರು. ಸನ್ಮಾನ್ಯ ಶ್ರೀ ಪುರುಷೋತ್ತಮ ಬಿಳಿಮಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಹಾಗೂ ಬೆಂಗಳೂರು ಉಪ ಪೊಲೀಸ್ ಆಯುಕ್ತರಾದ ಶ್ರೀ ಮಂಜುನಾಥ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನತಾ ಸೇನಾ ದಳದ ಗೌರವಾಧ್ಯಕ್ಷರು, ಖ್ಯಾತ ಪತ್ರಕರ್ತರು, ನಾಟಕಕಾರರು, ಲೇಖಕರು, ನಿರ್ದೇಶಕರು, ಚಲನಚಿತ್ರ ತಂತ್ರಜ್ಞರು, ಪರಿಸರ ಪ್ರೇಮಿಗಳು, ಚಿಂತಕರು, ಸಾಹಿತಿಗಳು, ಸಮಾಜಸೇವಕರು ಹಾಗೂ ವಾಸ್ತು-ಜ್ಯೋತಿಷ್ಯ ತಜ್ಞರಾದ ಡಾ. ಕೆಂಚನೂರ್ ಶಂಕರ್ ಸ್ವಾಗತ ಭಾಷಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜನತಾ ಸೇನಾ ದಳದ ರಾಜ್ಯಾಧ್ಯಕ್ಷರಾದ ಶ್ರೀ ಎಚ್. ಸದಾಶಿವ, ಜಿಲ್ಲಾ ಕಾರ್ಮಿಕ ಅಧ್ಯಕ್ಷರಾದ ಡಾ. ಸಿದ್ದು ಕಲ್ಲೂರ್, ಶ್ರೀ ಆನಂದ ಜಾದವ್ ಸೇರಿದಂತೆ ಹಲವು ಗಣ್ಯರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಸಮಾಜಸೇವಕರು ಉಪಸ್ಥಿತರಿದ್ದರು.1
- ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ ಹತ್ತಲು ಪ್ರಯತ್ನಿಸುವಾಗ ಓರ್ವ ವ್ಯಕ್ತಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.1