Shuru
Apke Nagar Ki App…
#holimilan#belgaum #happyholi
Udaysingh Patel
#holimilan#belgaum #happyholi
More news from ಕರ್ನಾಟಕ and nearby areas
- ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಭರ್ಜರಿ ಕಲರ್‌ಫುಲ್ ಹೋಳಿ ಸಂಭ್ರಮ ಜೋರಾಗಿ ನಡೆಯಿತು. ಎಸ್.ಆರ್.ಎ ಮೈದಾನದಲ್ಲಿ ಆಯೋಜಿಸಿದ್ದ ರಂಗಿನ ಹೋಳಿ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಬಣ್ಣದಾಟದಲ್ಲಿ ಮಿಂದೇಳಿದರು. ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಡಿಜೆ ಆಪರೇಟರ್‌ಗಳಾದ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಡಿಜೆ ಸದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಹೋಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ನೇತೃತ್ವದಲ್ಲಿ ಈ ಹೋಳಿ ಉತ್ಸವವನ್ನು ಆಯೋಜಿಸಲಾಗಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.1
- ವಿನಾಶತಾರಿ ಅಸ್ತ್ರಗಳು ದೇಶಕ್ಕೆ ಮಾರಕ1
- ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೂ ಕಾಮದಹನ ಅಗ್ನಿಯ ಕೆಂಡವನ್ನು ಮನೆಗೆ ತಂದು ಕಡಲೆಕಾಳುಗಳನ್ನು ಅದರಲ್ಲಿ ಹುರಿದುಕೊಂಡು ತಿನ್ನುವುದು ಸಂಪ್ರದಾಯವಿದೆ. ಇನ್ನೂ ರೖತಾಪಿ ವರ್ಗದವರು ಕುಸುಬಿ ಗಿಡವನ್ನು ಸುಟ್ಟು ಮನೆಯಲ್ಲಿ ಕಟ್ಟುವರು ಇದರಿಂದ ಮನೆಗೆ ಹಾಗೂ ಪಶುಗಳಿಗೆ ಯಾವದೇ ತರಹದ ದೃಷ್ಟಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಆಗದು ಎಂಬ ನಂಬಿಕೆಯಿದೆ. ಗ್ರಾಮದ ಕಾಮನಕಟ್ಟೆ ಎಂಬಲ್ಲಿ ಶತಮಾನಗಳಿಂದ ರತಿಮನ್ಮಥರ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು. ನಂತರ ಬಂಡಿ ಉತ್ಸವದ ಮೂಲಕ ರತಿಮನ್ಮಥರ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಮನಕಟ್ಟೆಗೆ ತಲುಪಿ ಕಾಮದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಕಾಮನ ಭಾವಚಿತ್ರದ ಕಾಗದಕ್ಕೆ ಆಗ್ನಿ ಸ್ಪರ್ಶ ಮಾಡಿದಾಗ ಅದು ಯಾವ ದಿಕ್ಕಿನ ಕಡೆಗೆ ಕಾಗದ ತುಂಡು ಬೀಳುತ್ತೂ ಆಕಡೆಗೆ ಹೆಚ್ಚು ಮಳೆ ಬೆಳೆ ಸಮೃದ್ಧಿ ಯಾಗುವುದು ಎಂಬದು ರೖತಾಪಿವರ್ಗದ ನಂಬುಗೆಯಾಗಿದೆ. ಒಟ್ಟಾರೆಯಾಗಿ ನೆಗಳೂರಿನಲ್ಲಿ ಹೋಳಿ ಹಬ್ಬ ಸಂಭ್ರಮವೂ ಮನೆ ಮನೆಗಳಲ್ಲಿ ತುಂಬಿದೆ. ಇನ್ನೂ ಮನೆಗಳಲ್ಲಿ ಹಬ್ಬದ ನಿಮಿತ್ಯ ಸಿಹಿ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ಮಗ್ನರಾಗಿದ್ದಾರೆ.10
- ವಿಜಯಪುರ: ಹಸಿರು ಹೊದಿಕೆಗೆ ಎಂ ಬಿ ಪಾಟೀಲ್ ಕೊಡುಗೆ ಅಪಾರ ವಿಜಯಪುರ ಜಿಲ್ಲೆಯಲ್ಲಿ ಶೇಕಡ ಒಂದಕ್ಕಿಂತ ಕಡಿಮೆ ಹಸಿರು ಹೊದಿಕೆ ಇರುವುದನ್ನು ಗಮನಿಸಿ, ಸಚಿವ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಕೋಟಿ ವೃಕ್ಷ ಅಭಿಯಾನದ ಮೂಲಕ ಹಸಿರೀಕರಣಕ್ಕೆ ಒತ್ತು ನೀಡಿದ್ದಾರೆ. ಬುಧವಾರ ವಿಜಯಪುರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆಯಿಂದಲೂ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.1
- ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಗೋರಬಾಳ ಗ್ರಾಮದಿಂದ ಆಗಮಿಸಿದ ಶ್ರೀಶೈಲ ಮಲ್ಲಯ್ಯನ ಕಂಬಿಗೆ, ಭಕ್ತಾದಿಗಳಿಗೆ ಭಕ್ತಿ ಭಾವದಿಂದ ಸ್ವಾಗತಿಸಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಮಲ್ಲಯ್ಯನ ಕಂಬಿಗೆ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರಿಂದ ಮಲ್ಲಯ್ಯನ ಪಾದಯಾತ್ರೆಗಳಿಗೆ, ಹಣ್ಣುಗಳನ್ನು ಪಾನಕಗಳನ್ನು ನೀಡಿ ಭಕ್ತಿ ಮೆರೆದರು. ವರದಿಗಾರರು; ಶರಣಗೌಡ ಕಂದಕೂರ2
- ಹಾವೇರಿ ಜಿಲ್ಲಾ ಹಾನಗಲ್ ತಾಲ್ಲೂಕು ಯತ್ತಿನಹಳ್ಳಿಯಲ್ಲಿ ಹಳೆಯ ಪುರಾತನ ಕಾಲದ ಇತಿಹಾಸ ಪ್ರಸಿದ್ಧ ವಾಗಿರತಕ್ಕಂತಹ ಶ್ರೀ ವೀರಭದ್ರೇಶ್ವರ ದೇವಾಲಯವು ಶಿತಲಗೊಂಡಿರುವುದರಿಂದ ಎತ್ತಿನಹಳ್ಳಿ ಗ್ರಾಮದ ಶ್ರೀ ವೇ ವೀರಯ್ಯ ಶಾಸ್ತ್ರಿಗಳು ಹಿರೇಮಠ್ ಇವರ ಮಾರ್ಗದರ್ಶನದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಚೆನ್ನಬಸಪ್ಪ ಗೌಡ್ರು ಯಂಕನಗೌಡ ಪಾಟೀಲ್ ಕಮಿಟಿಯ ಎಲ್ಲಾ ಸದಸ್ಯರು ಗ್ರಾಮದ ಭಕ್ತರು ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಸದ್ದಭಕ್ತರು ಸೇರಿ ದೇವಾಲಯವನ್ನು ನಿರ್ಮಾಣ ಮಾಡಿ ನೂತನ ದೇವಾಲಯಕ್ಕೆ ತಕ್ಕಂತೆ ನೂತನವಾದ ಶ್ರೀ ವೀರಭದ್ರೇಶ್ವರ ಹಾಗೂ ನಂದಿಶ್ವರ ಮೂರ್ತಿಯನ್ನು ನೂತನವಾಗಿ ನಿರ್ಮಾಣವನ್ನು ಮಾಡಿರುತ್ತಾರೆ ದಿನಾಂಕ 20.03.2026 ರಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಪುರಾಣ ಪ್ರವಚನ ಕಾರ್ಯಕ್ರಮವು ನಡೆಯುತ್ತದೆ ದಿನಾಂಕ:-25.03.2026 ನೇ ಬುಧವಾರ ಶ್ರೀ ನೂತನ ವೀರಭದ್ರೇಶ್ವರ ಹಾಗೂ ನಂದೀಶ್ವರ ಶಿಲಾಮೂರ್ತಿಯ ಪುನರ್ಪುರಾಣ ಪ್ರತಿಷ್ಠಾಪನೆ ಕುಂಭಾಭಿಷೇಕ ಹೋಮ ಹವನಾದಿಗಳು ದಿನಾಂಕ 28.03.2026ನೇ ಶನಿವಾರ ಪುಷ್ಪರಥೋತ್ಸವ ದಿನಾಂಕ 29.03.206ನೇ ಭಾನುವಾರ ದೊಡ್ಡ ರಥೋತ್ಸವವೂ ನಾಡಿನ ಹರ ಗುರು ಚರಮೂರ್ತಿಗಳ ಹಾಗೂ ರಾಜ್ಯದ ರಾಜಕೀಯ ಗಣ್ಯಮಾನ್ಯರ ನೇತೃತ್ವದಲ್ಲಿ ಗುಗ್ಗಳ ಡೊಳ್ಳು ವಿವಿಧ ವಾದ್ಯ ವೈಭವಗಳೊಂದಿಗೆ ರಥೋತ್ಸವವು ನೆರವೇರುವುದು1
- Post by @april14news1
- ಹೊಸ ಮುರನಾಳ: ಹೊಳಿ ಹುಣ್ಣಿಮೆಯ ಪ್ರಯುಕ್ತ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ಕಾಮದೇವನಿಗೆ ಪೂಜೆ ಸಲ್ಲಿಸಿ ಬಳಿಕ ಕಾಮದಹನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಸಂಜೆ ವೇಳೆ ಗ್ರಾಮಸ್ಥರು ಸೇರಿಕೊಂಡು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಕಟ್ಟಿದ ಚಿತೆಯಲ್ಲಿ ಕಾಮದೇವನ ಪ್ರತಿಕೃತಿಗೆ ಅಗ್ನಿ ಹಚ್ಚಿ ‘ಕಾಮದಹನ’ ಆಚರಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮದ ಹಿರಿಯರು ಹಬ್ಬದ ಮಹತ್ವವನ್ನು ವಿವರಿಸಿ, ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಸತ್ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳುವ ಸಂದೇಶ ನೀಡಿದರು. ಹಬ್ಬದ ಅಂಗವಾಗಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸೌಹಾರ್ದತೆಯ ವಾತಾವರಣ ನಿರ್ಮಾಣವಾಯಿತು. ಹೋಳಿ ಹುಣ್ಣಿಮೆ ಹಬ್ಬವು ದುಷ್ಟದ ಮೇಲೆ ಶಿಷ್ಟದ ಜಯವನ್ನು ಸಾರುವ ಪವಿತ್ರ ದಿನವೆಂದು ಗ್ರಾಮಸ್ಥರು ತಿಳಿಸಿದರು.1
- ತುಮಕೂರು ಎಪಿಎಂಸಿ ರೋಗದ ಕೇಂದ್ರವಾಗಿದೆ ಕಾರ್ಯದರ್ಶಿ ನಿರ್ಲಕ್ಷಕ್ಕೆ ತಲೆ ತಂಡ ಯಾವಾಗ ಸಚಿವರೆ?1