Shuru
Apke Nagar Ki App…
ತೊಂಡಿಹಾಳ ಸಮೀಪ ಮರ್ಡ*ರ್ ನೋಡಲು ಜನವೋ ಜನ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ತೊಂಡಿಹಾಳ ಸಮೀಪದ, ಮಾಗ೯ದಶ೯ನ ಶಿಕ್ಷಣ ಸಂಸ್ಥೆಯ ಹತ್ತಿರದ ಅಡವಿಯೊಳಗೆ ರುಂಡ ಇಲ್ಲದ ಪುರುಷನ ಶವವೊಂದನ್ನು ನೋಡಲು, ತಂಡೋಪ ತಂಡ ಜನರು ಆಗಮಿಸುತ್ತಿದ್ದಾರೆ. ಕೊಲೈಯಾದ ವ್ಯಕ್ತಿಯ ಗುರುತು ಮತ್ತು ರುಂಡ ಇನ್ನೂ ಪತ್ತೆಯಾಗಿಲ್ಲ ಪೋಲಿಸರು, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಹಾಗೂ ಶ್ವಾನದಳ ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸಿದ್ದಾರೆ.
Aaryan Ganiger
ತೊಂಡಿಹಾಳ ಸಮೀಪ ಮರ್ಡ*ರ್ ನೋಡಲು ಜನವೋ ಜನ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ತೊಂಡಿಹಾಳ ಸಮೀಪದ, ಮಾಗ೯ದಶ೯ನ ಶಿಕ್ಷಣ ಸಂಸ್ಥೆಯ ಹತ್ತಿರದ ಅಡವಿಯೊಳಗೆ ರುಂಡ ಇಲ್ಲದ ಪುರುಷನ ಶವವೊಂದನ್ನು ನೋಡಲು, ತಂಡೋಪ ತಂಡ ಜನರು ಆಗಮಿಸುತ್ತಿದ್ದಾರೆ. ಕೊಲೈಯಾದ ವ್ಯಕ್ತಿಯ ಗುರುತು ಮತ್ತು ರುಂಡ ಇನ್ನೂ ಪತ್ತೆಯಾಗಿಲ್ಲ ಪೋಲಿಸರು, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಹಾಗೂ ಶ್ವಾನದಳ ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸಿದ್ದಾರೆ.
More news from ಕರ್ನಾಟಕ and nearby areas
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು. ಬೈಕ್ ರ‍್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್‌ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ‍್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಇಂದು ಬಾಗಲಕೋಟೆ ನಗರದಲ್ಲಿ ಮಹತ್ವದ ಘಟನೆ ನಡೆದಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ ಸಂಘಟನೆ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ದಿನಾಂಕ ೧೮.೦೨.೨೦೨೬ ರಂದು ಬೆಳಿಗ್ಗೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಪ್ರಾಧಿಕಾರದ ಮುಖ್ಯ ದ್ವಾರದ ಎದುರು ಸೇರಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಪರಿಣಾಮವಾಗಿ ಕೆಲ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸಾರ್ವಜನಿಕರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಇದೀಗ ಪ್ರಾಧಿಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.1
- ಇಂದು ಫೆಬ್ರವರಿ 19ರಂದು ಜರುಗಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬುಧವಾರ ಮುಂಜಾಗೃತ ಕ್ರಮ ಕೈಗೊಂಡಿದೆ. ಎಸ್‌ಪಿ ಸಿದ್ದಾರ್ಥ ಗೋಯಲ್ ಅವರ ಆದೇಶದ ಮೇರೆಗೆ ಡಿವೈಎಸ್‌ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ, ಪಿಐ ಆನಂದ ವಾಘಮೋಡೆ ಹಾಗೂ ಪಿಎಸ್‌ಐ ಜಯಶ್ರೀ ನಧಾಪ್ ಮತ್ತು ಶಾಂತಾ ಹಳ್ಳಿ ಅವರ ಮುಂದಾಳತ್ವದಲ್ಲಿ ನಗರ ಪ್ರಮುಖ ರಸ್ತೆಗಳಲ್ಲಿಪೊಲೀಸ್ ಪಥಸಂಚಲನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.1
- ನಾವು ಭೂಮಿ ಪೂಜೆ ಮಾಡಿ ಹೋಗುವ ಗಿರಾಕಿಗಳು ಅಲ್ಲ : ಮಾಜಿ ಶಾಸಕ ಬಸವರಾಜ್ ದಡೆಸಗೂರು ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ #ಕೊಪ್ಪಳ #koppal #karatagi #ಕಾರಟಗಿ #kanakagiri #ಕನಕಗಿರಿ #ಬಸವರಾಜ_ದಡೆಸಗೂರು #ಶಿವರಾಜ_ತಂಗಡಗಿ #ಗಂಗಾವತಿ #Gangavati #ಕುಕನೂರು #ಯಲಬುರ್ಗಾ #ಕುಷ್ಟಗಿ #mla1
- ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ1
- ಮಂಗಳಮುಖಿ ಸುಹಾಸಿನಿ, ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು ಮಂಗಳಮುಖಿ ಸುಹಾಸಿನಿ,ಯುವಕ ಶೇಖರ್ ಸಾವು ಆತ್ಮಹತ್ಯೆನಾ?ಪ್ರಕರಣ ಪೊಲೀಸ್ ತನಿಖೆ ಚುರುಕು1
- ಮುಧೋಳ : ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಮುಂಜಾಗ್ರತಾ ದೃಷ್ಠಿಯಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ಪಿಎಸ್ಐ ಅಜಿತ ಹೊಸಮನಿ ಅವರ ಮುಂದಾಳತ್ವದಲ್ಲಿ ನಡೆದ ಪಥಸಂಚಲನ ನಗರದ ಶಿವಾಜಿ ವೃತ್ತ, ಗಡದನ್ನವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.4
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ತೊಂಡಿಹಾಳ ಸಮೀಪದ, ಮಾಗ೯ದಶ೯ನ ಶಿಕ್ಷಣ ಸಂಸ್ಥೆಯ ಹತ್ತಿರದ ಅಡವಿಯೊಳಗೆ ರುಂಡ ಇಲ್ಲದ ಪುರುಷನ ಶವವೊಂದನ್ನು ನೋಡಲು, ತಂಡೋಪ ತಂಡ ಜನರು ಆಗಮಿಸುತ್ತಿದ್ದಾರೆ. ಕೊಲೈಯಾದ ವ್ಯಕ್ತಿಯ ಗುರುತು ಮತ್ತು ರುಂಡ ಇನ್ನೂ ಪತ್ತೆಯಾಗಿಲ್ಲ ಪೋಲಿಸರು, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಹಾಗೂ ಶ್ವಾನದಳ ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸಿದ್ದಾರೆ.2