logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜಮಖಂಡಿಯ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ – 20 ಏಕರೆಗೂ ಹೆಚ್ಚು ಅರಣ್ಯ ಭಸ್ಮ!

1 hr ago
user_@april14news
@april14news
ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
1 hr ago

ಜಮಖಂಡಿಯ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ – 20 ಏಕರೆಗೂ ಹೆಚ್ಚು ಅರಣ್ಯ ಭಸ್ಮ!

More news from ಕರ್ನಾಟಕ and nearby areas
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    1 hr ago
  • ಮುಧೋಳ: ಚುನಾವಣೆಯಲ್ಲಿ ಹಣ ನೀಡಿ ಮತ ಪಡೆಯುವ ಸಂಸ್ಕೃತಿ ಪ್ರಜಾಪ್ರಭುತ್ವದ ಅಧಃಪತನಕ್ಕೆ ನಾಂದಿಯಾಗುತ್ತಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯು ಗುಣಮಟ್ಟದ ಬದಲು ಅನಗತ್ಯ ವಿವಾದಗಳ ಕೇಂದ್ರವಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದರು. ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದರು. ಇಂದು ಶಾಲೆಗಳು ಜ್ಞಾನ ದೇಗುಲಗಳಾಗುವ ಬದಲು ಹಿಜಾಬ್, ಜನಿವಾರ, ಕುಂಕುಮದಂತಹ ಅನಗತ್ಯ ವಿವಾದಗಳ ಕೇಂದ್ರವಾಗುತ್ತಿವೆ. ಸರ್ಕಾರಗಳು ಇಂತಹ ಭಾವನಾತ್ಮಕ ವಿಷಯಗಳಿಗೆ ನೀಡುವ ಆದ್ಯತೆಯನ್ನು ಶಿಕ್ಷಣದ ಗುಣಮಟ್ಟಕ್ಕೆ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಇಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ತಾಯ್ನುಡಿ ಕನ್ನಡ ಪತ್ರಿಕೆಯಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಶೋಚನೀಯ. 80 ಅಂಕಗಳ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದವರನ್ನು ಪಾಸ್ ಮಾಡುವ ಇಂದಿನ ಸಿಸ್ಟಮ್‌ನಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಕರಿಲ್ಲದ ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು. ಹಣ ನೀಡಿ ಮತ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಪವಿತ್ರತೆಯನ್ನು ಹಾಳುಮಾಡುತ್ತಿದೆ. ಜನರು ಮತ್ತು ರಾಜಕಾರಣಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ವ್ಯವಸ್ಥೆ ಬುಡಮೇಲಾಗುವುದು ಖಚಿತ ಎಂದು ಎಚ್ಚರಿಸಿದರು. ಹಿಂದಿನ ಸರ್ಕಾರಗಳಲ್ಲಿ ಶಿಕ್ಷಣಕ್ಕೆ ಸಿಗುತ್ತಿದ್ದ ಮಹತ್ವ ಈಗ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಸರ್ಕಾರ ಶಿಕ್ಷಕರ ನೇಮಕಾತಿ ಮತ್ತು ಮೂಲಸೌಕರ್ಯದತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
    1
    ಮುಧೋಳ: ಚುನಾವಣೆಯಲ್ಲಿ ಹಣ ನೀಡಿ ಮತ ಪಡೆಯುವ ಸಂಸ್ಕೃತಿ ಪ್ರಜಾಪ್ರಭುತ್ವದ ಅಧಃಪತನಕ್ಕೆ ನಾಂದಿಯಾಗುತ್ತಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯು ಗುಣಮಟ್ಟದ ಬದಲು ಅನಗತ್ಯ ವಿವಾದಗಳ ಕೇಂದ್ರವಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದರು.
ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದರು.
ಇಂದು ಶಾಲೆಗಳು ಜ್ಞಾನ ದೇಗುಲಗಳಾಗುವ ಬದಲು ಹಿಜಾಬ್, ಜನಿವಾರ, ಕುಂಕುಮದಂತಹ ಅನಗತ್ಯ ವಿವಾದಗಳ ಕೇಂದ್ರವಾಗುತ್ತಿವೆ. ಸರ್ಕಾರಗಳು ಇಂತಹ ಭಾವನಾತ್ಮಕ ವಿಷಯಗಳಿಗೆ ನೀಡುವ ಆದ್ಯತೆಯನ್ನು ಶಿಕ್ಷಣದ ಗುಣಮಟ್ಟಕ್ಕೆ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಇಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ತಾಯ್ನುಡಿ ಕನ್ನಡ ಪತ್ರಿಕೆಯಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಶೋಚನೀಯ. 80 ಅಂಕಗಳ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದವರನ್ನು ಪಾಸ್ ಮಾಡುವ ಇಂದಿನ ಸಿಸ್ಟಮ್‌ನಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಕರಿಲ್ಲದ ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.
ಹಣ ನೀಡಿ ಮತ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಪವಿತ್ರತೆಯನ್ನು ಹಾಳುಮಾಡುತ್ತಿದೆ. ಜನರು ಮತ್ತು ರಾಜಕಾರಣಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ವ್ಯವಸ್ಥೆ ಬುಡಮೇಲಾಗುವುದು ಖಚಿತ ಎಂದು ಎಚ್ಚರಿಸಿದರು.
ಹಿಂದಿನ ಸರ್ಕಾರಗಳಲ್ಲಿ ಶಿಕ್ಷಣಕ್ಕೆ ಸಿಗುತ್ತಿದ್ದ ಮಹತ್ವ ಈಗ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಸರ್ಕಾರ ಶಿಕ್ಷಕರ ನೇಮಕಾತಿ ಮತ್ತು ಮೂಲಸೌಕರ್ಯದತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    59 min ago
  • ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದುದು :ಶಾಸಕ ಲಕ್ಷ್ಮಣ ಸವದಿ ಅಥಣಿಯಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ. ಅಥಣಿ : "ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದುದು. ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಮತ್ತು ಅವರ ಹಿತರಕ್ಷಣೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಬೇಕು" ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು. ​ನಗರದ ಶಿವಯೋಗಿ ವೃತ್ತದಲ್ಲಿ ಮೇ 1ರ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ತಾಲೂಕು ಕಾರ್ಮಿಕ ಇಲಾಖೆ ಹಾಗೂ ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ​ ಸಮಾಜದ ಬೆನ್ನೆಲುಬಾಗಿರುವ ಕಾರ್ಮಿಕರು ಗೌರವಯುತ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮೇ ಒಂದರಂದು ಪ್ರತಿವರ್ಷ ಕಾರ್ಮಿಕರ ಬದುಕಿನ ಬಗ್ಗೆ ಅವಲೋಕನ ಮಾಡುವುದರ ಜೊತೆಗೆ ಅವರ ಬದುಕಿನ ಕಷ್ಟ ಪರಿಹಾರ ಮಾಡಲು ಅವಶ್ಯಕ ಕ್ರಮ ಕೈಗೊಳ್ಳಲು ಪೂರಕವಾಗಿದೆ. ಹಾಗೆಯೇ ಕಾರ್ಮಿಕರ ಬದುಕಿನಲ್ಲಿ ಚೈತನ್ಯ, ನೀಡುವುದಾಗಿದೆ. ಇಲಾಖೆ ಕಾರ್ಮಿಕರ ಬದುಕಿಗೆ ಆಧಾರ್ ಸ್ಥoಭವಾಗಿ ಅವರ ಬದುಕಿಗೆ ಬೆಳಕು ತರುವುದಾಗಿದೆ.ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಕಾರ್ಮಿಕ ಖಾತೆಯ ಮಂತ್ರಿಗಳಾಗಿ ತುಂಬಾ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ.ಲಾಡ್ ಅವರು ಕಾರ್ಮಿಕರ ಬದುಕಿಗೆ ಬೆಳಕು ನೀಡಿದ ವ್ಯಕ್ತಿ ಎಂದು ಶ್ಲಾಘಿಸಿದರು. ಜೊತೆಗೆ ಕಾರ್ಮಿಕರು ಕಾಯಕದಲ್ಲಿ ಸಂತೋಷ ಕಂಡವರು. ಜನತೆ ಇಂದು ಪ್ರತಿಯೊಬ್ಬ ಸುಖವಾಗಿ ಇರಬೇಕಾದರೆ ಅದರ ಹಿಂದೆ ಕಾರ್ಮಿಕರ ಶ್ರಮ ತುಂಬಾ ಇದೆ. ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರು ಕಾರ್ಮಿಕರಾಗಿ ಮುಂದುವರಿಯದಂತೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ. ಹೀಗಾಗಿ ಕಾರ್ಮಿಕರ ಮಕ್ಕಳಿಗೆ 36 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ನಾವು ಇದೆ ವರ್ಷ ತಮ್ಮ ಸಂಘಟನೆಗೆ ಒಂದು ಸ್ಥಳ ಹಾಗೂ ಶಾಸಕರ ನಿಧಿಯಿಂದ 10ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ​ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಗುತ್ತಿಗೆದಾರ ರಾಜು ಅಲಬಾಳ ಪ್ರತಿಭಾವಂತ ಮಕ್ಕಳಿಗೆ ಸೈಕಲ್ ನೀಡಿ ಪ್ರೋತ್ಸಾಹ ನೀಡಿದರು. ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಭುವನೇಶ್ವರಿ ಢಾಲೆ ಮಾತನಾಡಿ ಕಾರ್ಮಿಕ ದಿನಾಚರಣೆ ಹಿನ್ನೆಲೆ ಹಾಗೂ ಮಹತ್ವ ವಿವರಿಸಿ ಮೊದಲುಕಾರ್ಮಿಕರು 14 ಗಂಟೆ ದುಡಿಯಬೇಕಾಗಿತ್ತು ಅದನ್ನು ಎಂಟು ಗಂಟೆಗೆ ಇಳಿಸಲಾಯಿತು.ಮಹಿಳಾ ಹೆರಿಗೆ ರಜೆ ಜೊತೆಗೆ ಸರಕಾರ ಕೂಡಾ ಹಲವಾರು ಯೋಜನೆ ಜಾರಿಗೆ ತಂದಿದೆ.ಶೈಕ್ಷಣಿಕವಾಗಿ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶೀಪ ಸೇರಿದಂತೆ ಅಫಘಾತ ವಿಮೆ, ಆರೋಗ್ಯ ವಿಮೆ,ಮುಪ್ಪಿನಲ್ಲಿ ವೃದ್ಯಾಪ ವೇತನ ಸೇರಿದಂತೆ ಹಲವಾರು ಯೋಜನೆಗಳ ಲಾಭ ಪಡೆಯಬೇಕು ಎಂದು ಅಧಿಕಾರಿ ಢಾಲೆ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ​ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಶ್ರಮಜೀವಿಗಳ ಬದುಕು ಹಸನಾಗಲಿ ಎಂದು ಹಾರೈಸಿದರು. ​ಕಾರ್ಯಕ್ರಮದಲ್ಲಿ ಅಥಣಿ ನಗರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಗುತ್ತಿಗೆದಾರ ರಾಜು ಅಲಬಾಳ, ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ್ ನಿಕ್ಕಂ,ಉಪಾಧ್ಯಕ್ಷ ಕೇದಾರಿ ಹಳದಮಳ, ಚಂದ್ರಶೇಖರ ಐಗಳಿ, ಸುರೇಶ ಮೊಪಗಾರ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೆ, ಹಾಗೂ ತಾಲೂಕು ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
    1
    ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದುದು :ಶಾಸಕ ಲಕ್ಷ್ಮಣ ಸವದಿ 
ಅಥಣಿಯಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ.
ಅಥಣಿ : "ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದುದು. ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಮತ್ತು ಅವರ ಹಿತರಕ್ಷಣೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಬೇಕು" ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
​ನಗರದ ಶಿವಯೋಗಿ ವೃತ್ತದಲ್ಲಿ ಮೇ 1ರ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ತಾಲೂಕು ಕಾರ್ಮಿಕ ಇಲಾಖೆ ಹಾಗೂ ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
​
ಸಮಾಜದ ಬೆನ್ನೆಲುಬಾಗಿರುವ ಕಾರ್ಮಿಕರು ಗೌರವಯುತ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮೇ ಒಂದರಂದು ಪ್ರತಿವರ್ಷ ಕಾರ್ಮಿಕರ ಬದುಕಿನ ಬಗ್ಗೆ ಅವಲೋಕನ ಮಾಡುವುದರ ಜೊತೆಗೆ ಅವರ ಬದುಕಿನ ಕಷ್ಟ ಪರಿಹಾರ ಮಾಡಲು ಅವಶ್ಯಕ ಕ್ರಮ ಕೈಗೊಳ್ಳಲು ಪೂರಕವಾಗಿದೆ. ಹಾಗೆಯೇ ಕಾರ್ಮಿಕರ ಬದುಕಿನಲ್ಲಿ ಚೈತನ್ಯ, ನೀಡುವುದಾಗಿದೆ. ಇಲಾಖೆ ಕಾರ್ಮಿಕರ ಬದುಕಿಗೆ   ಆಧಾರ್ ಸ್ಥoಭವಾಗಿ ಅವರ ಬದುಕಿಗೆ ಬೆಳಕು ತರುವುದಾಗಿದೆ.ಕಾರ್ಮಿಕ ಸಚಿವರಾದ  ಸಂತೋಷ ಲಾಡ ಅವರು ಕಾರ್ಮಿಕ ಖಾತೆಯ ಮಂತ್ರಿಗಳಾಗಿ ತುಂಬಾ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ.ಲಾಡ್ ಅವರು  ಕಾರ್ಮಿಕರ  ಬದುಕಿಗೆ ಬೆಳಕು ನೀಡಿದ ವ್ಯಕ್ತಿ ಎಂದು ಶ್ಲಾಘಿಸಿದರು. ಜೊತೆಗೆ ಕಾರ್ಮಿಕರು ಕಾಯಕದಲ್ಲಿ ಸಂತೋಷ ಕಂಡವರು. ಜನತೆ ಇಂದು ಪ್ರತಿಯೊಬ್ಬ ಸುಖವಾಗಿ ಇರಬೇಕಾದರೆ ಅದರ ಹಿಂದೆ ಕಾರ್ಮಿಕರ ಶ್ರಮ ತುಂಬಾ ಇದೆ. ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರು ಕಾರ್ಮಿಕರಾಗಿ ಮುಂದುವರಿಯದಂತೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ. ಹೀಗಾಗಿ ಕಾರ್ಮಿಕರ ಮಕ್ಕಳಿಗೆ 36 ಕೋಟಿ ವೆಚ್ಚದಲ್ಲಿ ವಸತಿ  ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ನಾವು ಇದೆ ವರ್ಷ ತಮ್ಮ ಸಂಘಟನೆಗೆ ಒಂದು ಸ್ಥಳ ಹಾಗೂ ಶಾಸಕರ ನಿಧಿಯಿಂದ 10ಲಕ್ಷ ಅನುದಾನ ನೀಡಲಾಗುವುದು ಎಂದು  ಶಾಸಕರು ತಿಳಿಸಿದರು.
​ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಗುತ್ತಿಗೆದಾರ ರಾಜು ಅಲಬಾಳ ಪ್ರತಿಭಾವಂತ ಮಕ್ಕಳಿಗೆ ಸೈಕಲ್ ನೀಡಿ ಪ್ರೋತ್ಸಾಹ ನೀಡಿದರು. 
ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಭುವನೇಶ್ವರಿ ಢಾಲೆ ಮಾತನಾಡಿ ಕಾರ್ಮಿಕ ದಿನಾಚರಣೆ ಹಿನ್ನೆಲೆ ಹಾಗೂ  ಮಹತ್ವ ವಿವರಿಸಿ  ಮೊದಲುಕಾರ್ಮಿಕರು  14 ಗಂಟೆ ದುಡಿಯಬೇಕಾಗಿತ್ತು ಅದನ್ನು ಎಂಟು ಗಂಟೆಗೆ ಇಳಿಸಲಾಯಿತು.ಮಹಿಳಾ ಹೆರಿಗೆ ರಜೆ ಜೊತೆಗೆ ಸರಕಾರ ಕೂಡಾ  ಹಲವಾರು ಯೋಜನೆ ಜಾರಿಗೆ ತಂದಿದೆ.ಶೈಕ್ಷಣಿಕವಾಗಿ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶೀಪ ಸೇರಿದಂತೆ ಅಫಘಾತ ವಿಮೆ, ಆರೋಗ್ಯ ವಿಮೆ,ಮುಪ್ಪಿನಲ್ಲಿ ವೃದ್ಯಾಪ ವೇತನ ಸೇರಿದಂತೆ ಹಲವಾರು ಯೋಜನೆಗಳ ಲಾಭ ಪಡೆಯಬೇಕು ಎಂದು ಅಧಿಕಾರಿ  ಢಾಲೆ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
​ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಶ್ರಮಜೀವಿಗಳ ಬದುಕು ಹಸನಾಗಲಿ ಎಂದು ಹಾರೈಸಿದರು.
​ಕಾರ್ಯಕ್ರಮದಲ್ಲಿ ಅಥಣಿ ನಗರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಗುತ್ತಿಗೆದಾರ ರಾಜು ಅಲಬಾಳ, ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ್ ನಿಕ್ಕಂ,ಉಪಾಧ್ಯಕ್ಷ ಕೇದಾರಿ ಹಳದಮಳ, ಚಂದ್ರಶೇಖರ ಐಗಳಿ, ಸುರೇಶ ಮೊಪಗಾರ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೆ, ಹಾಗೂ ತಾಲೂಕು ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    4 hrs ago
  • ನಡು ರಸ್ತೆಯಲ್ಲಿ ಕಾರಲ್ಲಿ ಕುಳಿತು ಕಚೇರಿ ಕಡತಗಳಿಗೆ ಸಹಿ ಮಾಡಿದ ಬಾಗಲಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತರಿಸಿ ಸಹಿ ಮಾಡಿದ ಆರೋಪ,ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿ, ಕಾರಲ್ಲಿ ಕುಳಿತು ಸಹಿ ಮಾಡಿದ ಅಧಿಕಾರಿ ವಿಡಿಯೋ ವೈರಲ್ ಬಾಗಲಕೋಟೆ ನವನಗರದಲ್ಲಿ ನಡೆದ ಘಟನೆ.
    1
    ನಡು ರಸ್ತೆಯಲ್ಲಿ ಕಾರಲ್ಲಿ ಕುಳಿತು ಕಚೇರಿ ಕಡತಗಳಿಗೆ ಸಹಿ ಮಾಡಿದ ಬಾಗಲಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತರಿಸಿ ಸಹಿ ಮಾಡಿದ ಆರೋಪ,ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿ,
ಕಾರಲ್ಲಿ ಕುಳಿತು ಸಹಿ ಮಾಡಿದ ಅಧಿಕಾರಿ ವಿಡಿಯೋ ವೈರಲ್ ಬಾಗಲಕೋಟೆ ನವನಗರದಲ್ಲಿ ನಡೆದ ಘಟನೆ.
    user_Raju  Bukitagar
    Raju Bukitagar
    ಬಿಳಗಿ, ಬಾಗಲಕೋಟೆ, ಕರ್ನಾಟಕ•
    6 hrs ago
  • security life story Kannada short film
    1
    security life story Kannada short film
    user_SK news Bijapur
    SK news Bijapur
    ವಿಜಯಪುರ, ವಿಜಯಪುರ, ಕರ್ನಾಟಕ•
    7 hrs ago
  • ವಿಜಯಪುರ ಗೃಹ ಕಚೇರಿಯಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನೇರಪ್ರಸಾರ...
    1
    ವಿಜಯಪುರ ಗೃಹ ಕಚೇರಿಯಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನೇರಪ್ರಸಾರ...
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    8 hrs ago
  • "ಜನರಿಗೆ ನೀರಿಗಾಗಿ ಪರದಾಟ ಇವರಿಗೆ ನೀರಿನ ಟ್ಯಾಂಕಿ ತುಂಬುವ ಚೆಲ್ಲಾಟ" ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಕದಾoಪೂರ ಆರ್. ಸಿ. ಗ್ರಾಮದಲ್ಲಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಾಗಿದೆ ಬೇಸಿಗೆ ಕಾಲದಲ್ಲಿ ಜನರು ನೀರು ಇಲ್ಲ ಅನ್ನುತ್ತಾರೆ ಆದರೆ ಇವರಿಗೆ ' ಕದಾಂಪೂರ. ಆರ್ ಸಿ. ಗ್ರಾಮದ ನಿವಾಸಿ ಮನೆಯ ಮುಂದೆ ಮುತ್ತಪ್ಪ ಕಟಗೇರಿ ಅವರ ಮನೆಯ ಮುಂದೆ ಕುಡಿಯುವ ನೀರು ಇವರು ತುಂಬುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಕುಡಿಯುವ ನೀರು ತಮ್ಮ ಜೀವನಕ್ಕೆ ಮಾರಾಟ ಮಾಡುತ್ತಾರೆ ನೀರಿನ ಟ್ಯಾಂಕಿನ ನೀರು ತುಂಬಿ ಜನರಿಗೆ ತೊಂದರೆ ಉಂಟಾಗುತ್ತಿದೆ ಈ ಕೂಡಲೇ ಶಿಗಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು.
    1
    "ಜನರಿಗೆ ನೀರಿಗಾಗಿ ಪರದಾಟ ಇವರಿಗೆ ನೀರಿನ ಟ್ಯಾಂಕಿ ತುಂಬುವ ಚೆಲ್ಲಾಟ"
ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಕದಾoಪೂರ ಆರ್. ಸಿ. ಗ್ರಾಮದಲ್ಲಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಾಗಿದೆ ಬೇಸಿಗೆ ಕಾಲದಲ್ಲಿ ಜನರು ನೀರು ಇಲ್ಲ ಅನ್ನುತ್ತಾರೆ ಆದರೆ ಇವರಿಗೆ ' ಕದಾಂಪೂರ. ಆರ್ ಸಿ. ಗ್ರಾಮದ ನಿವಾಸಿ ಮನೆಯ ಮುಂದೆ ಮುತ್ತಪ್ಪ ಕಟಗೇರಿ  ಅವರ ಮನೆಯ ಮುಂದೆ ಕುಡಿಯುವ ನೀರು ಇವರು ತುಂಬುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಕುಡಿಯುವ ನೀರು ತಮ್ಮ ಜೀವನಕ್ಕೆ  ಮಾರಾಟ ಮಾಡುತ್ತಾರೆ ನೀರಿನ ಟ್ಯಾಂಕಿನ ನೀರು ತುಂಬಿ ಜನರಿಗೆ ತೊಂದರೆ ಉಂಟಾಗುತ್ತಿದೆ ಈ ಕೂಡಲೇ ಶಿಗಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು.
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • ಕೊಪ್ಪ ಎಸ್ ಕೆ : ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ. ಅಧರ್ಮ. ದೌರ್ಜನ್ಯ.ದಬ್ಬಾಳಿಕೆಗಳನ್ನ ಮನೋಜ್ಞವಾಗಿ ಅಭಿನಯಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಲಾವಿದರ ಸಮಾಜ ಮುಖಿ ಸೇವೆ ಅಮೋಘವಾದದ್ದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು ‌‌ ಎಸ್. ಕೆ. ಕೊಪ್ಪ ಗ್ರಾಮದಲ್ಲಿ ದುರ್ಗಾದೇವಿಯ ಅಗ್ನಿ ಪ್ರವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಡಾ. ಬಿ ಆರ್ ಅಂಬೇಡ್ಕರ್ ತರುಣ ನಾಟ್ಯ ಸಂಘದವರು ಆಯೋಜಿಸಿದ ರೈತ ಹರಿಸಿದ ರಕ್ತದೋಕುಳಿ ನಾಟಕದ ಉದ್ಘಾಟನಾ ಸಮಾರಂಭದ ಸಮ್ಮುಕತ್ವವನ್ನು ವಹಿಸಿ ಸಸಿಗೆ ನೀರೆರೆದು ಮಾತನಾಡುತ್ತ ನಾಟಕ ಕಲೆಯು ಅದೊಂದು ನಮ್ಮ ಬದುಕಿನ ಪ್ರತಿಬಿಂಬ. ರಂಗಭೂಮಿಯಲ್ಲಿ ಬರುವ ಸೃಜನಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯೂನ್ಯತೆಗಳನ್ನ ತಿದ್ದುವಲ್ಲಿ ಇಂದಿನ ಯುವಕರು ಮುಂದೆ ಬರಬೇಕೆಂದರು. ಮುಂದುವರೆದು ಮಾತನಾಡುತ್ತಾ ರಂಗ ಭೂಮಿ ಕಲೆಯು ಪವಿತ್ರವಾದದ್ದು. ಇಲ್ಲಿ ದ್ವಂದ್ವಾರ್ಥಕ್ಕೆ. ಅಶ್ಲೀಲತೆಗೆ ಅವಕಾಶ ಕೊಡಬಾರದು ಎಂದರು. ಪಾವನ ಸನ್ನಿಧಾನ ವಹಿಸಿದ ಪರಮಪೂಜ್ಯರಾದ ಹಿರೇಮಠದ ಓಂಕಾರಯ್ಯ ಶ್ರೀಗಳು ಜ್ಯೋತಿಯನ್ನು ಬೆಳಗಿಸಿ ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕೆಂದರು.ಜೆಮ್ಮ ಶುಗರ್ ದ ವೆಂಕಣ್ಣ ವಜ್ಜರಮಟ್ಟಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಡಿ.ವೈ.ಎಸ್.ಪಿ. ವಿಜಯಕುಮಾರ ಮಡಿವಾಳ ಉದ್ಘಾಟಿಸಿದರು. ಗ್ರಾಮದ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಬಿಆರ್ ಅಂಬೇಡ್ಕರ್ ತರುಣ ಸಂಘದ ಮುಖಂಡರಾದ ರಾಮಚಂದ್ರಪ್ಪ ಅಸೂದೆ.ಹಿರಿಯ ಭಜನಾ ಕಲಾವಿದರಾದ ರಾಮನಗೌಡ ವಜ್ಜರಮಟ್ಟಿ ಶ್ರೀಗಳನ್ನು.ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಲಾವಿದರು ಅಭಿನಯದ ಮೂಲಕ ಜನರ ಮನಸನ್ನು ಸೆಳೆಯುವಲ್ಲಿ ಯಶಸ್ವಿಯಾದರು
    1
    ಕೊಪ್ಪ ಎಸ್ ಕೆ :   ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ. ಅಧರ್ಮ.  ದೌರ್ಜನ್ಯ.ದಬ್ಬಾಳಿಕೆಗಳನ್ನ ಮನೋಜ್ಞವಾಗಿ ಅಭಿನಯಿಸಿ ಜನರಲ್ಲಿ  ಜಾಗೃತಿಯನ್ನು ಮೂಡಿಸುವ ಕಲಾವಿದರ ಸಮಾಜ ಮುಖಿ ಸೇವೆ ಅಮೋಘವಾದದ್ದು ಎಂದು ಮುಗಳಖೋಡದ              ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು  
‌‌ ಎಸ್. ಕೆ. ಕೊಪ್ಪ ಗ್ರಾಮದಲ್ಲಿ ದುರ್ಗಾದೇವಿಯ ಅಗ್ನಿ ಪ್ರವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ  ಡಾ. ಬಿ ಆರ್ ಅಂಬೇಡ್ಕರ್  ತರುಣ ನಾಟ್ಯ ಸಂಘದವರು ಆಯೋಜಿಸಿದ ರೈತ ಹರಿಸಿದ ರಕ್ತದೋಕುಳಿ ನಾಟಕದ ಉದ್ಘಾಟನಾ ಸಮಾರಂಭದ ಸಮ್ಮುಕತ್ವವನ್ನು ವಹಿಸಿ ಸಸಿಗೆ ನೀರೆರೆದು ಮಾತನಾಡುತ್ತ ನಾಟಕ ಕಲೆಯು  ಅದೊಂದು ನಮ್ಮ ಬದುಕಿನ ಪ್ರತಿಬಿಂಬ. ರಂಗಭೂಮಿಯಲ್ಲಿ ಬರುವ ಸೃಜನಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯೂನ್ಯತೆಗಳನ್ನ ತಿದ್ದುವಲ್ಲಿ ಇಂದಿನ ಯುವಕರು ಮುಂದೆ ಬರಬೇಕೆಂದರು. ಮುಂದುವರೆದು ಮಾತನಾಡುತ್ತಾ ರಂಗ ಭೂಮಿ ಕಲೆಯು  ಪವಿತ್ರವಾದದ್ದು. ಇಲ್ಲಿ ದ್ವಂದ್ವಾರ್ಥಕ್ಕೆ. ಅಶ್ಲೀಲತೆಗೆ ಅವಕಾಶ ಕೊಡಬಾರದು ಎಂದರು. ಪಾವನ ಸನ್ನಿಧಾನ ವಹಿಸಿದ ಪರಮಪೂಜ್ಯರಾದ ಹಿರೇಮಠದ ಓಂಕಾರಯ್ಯ ಶ್ರೀಗಳು ಜ್ಯೋತಿಯನ್ನು ಬೆಳಗಿಸಿ ಮಾತನಾಡಿ  ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕೆಂದರು.ಜೆಮ್ಮ ಶುಗರ್ ದ ವೆಂಕಣ್ಣ  ವಜ್ಜರಮಟ್ಟಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಡಿ.ವೈ.ಎಸ್.ಪಿ. ವಿಜಯಕುಮಾರ ಮಡಿವಾಳ ಉದ್ಘಾಟಿಸಿದರು. ಗ್ರಾಮದ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಬಿಆರ್ ಅಂಬೇಡ್ಕರ್ ತರುಣ ಸಂಘದ ಮುಖಂಡರಾದ ರಾಮಚಂದ್ರಪ್ಪ ಅಸೂದೆ.ಹಿರಿಯ ಭಜನಾ ಕಲಾವಿದರಾದ ರಾಮನಗೌಡ ವಜ್ಜರಮಟ್ಟಿ  ಶ್ರೀಗಳನ್ನು.ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಲಾವಿದರು ಅಭಿನಯದ ಮೂಲಕ ಜನರ ಮನಸನ್ನು ಸೆಳೆಯುವಲ್ಲಿ ಯಶಸ್ವಿಯಾದರು
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.