Shuru
Apke Nagar Ki App…
ಚಿಕ್ಕನಾಯಕನಹಳ್ಳಿ ವಿವೇಕ್ ಜಾಗೃತ ಬಳಗದ ವತಿಯಿಂದ ಇಂದು 'ವಿಶೇಷ ಸತ್ಸಂಗ' ಕಾರ್ಯಕ್ರಮ ಚಿಕ್ಕನಾಯಕನಹಳ್ಳಿ: ಇಂದು 'ವಿಶೇಷ ಸತ್ಸಂಗ' ಕಾರ್ಯಕ್ರಮ ------------------ ಚಿಕ್ಕನಾಯಕನಹಳ್ಳಿ: ಇಲ್ಲಿನ ವಿವೇಕ್ ಜಾಗೃತ ಬಳಗದ ವತಿಯಿಂದ ಇಂದು (ಆಗಸ್ಟ್ 26, 2026) "ವಿಶೇಷ ಸತ್ಸಂಗ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಟ್ಟಣದ ಚೌಡಗಲ್ ರಸ್ತೆಯಲ್ಲಿರುವ ಶಿಲ್ಪಾ ಧರಣೇಶ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀ ರಾಮು ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸತ್ಸಂಗ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಆಯೋಜಕರು ಕೋರಿದ್ದಾರೆ.
Huliyarkiran
ಚಿಕ್ಕನಾಯಕನಹಳ್ಳಿ ವಿವೇಕ್ ಜಾಗೃತ ಬಳಗದ ವತಿಯಿಂದ ಇಂದು 'ವಿಶೇಷ ಸತ್ಸಂಗ' ಕಾರ್ಯಕ್ರಮ ಚಿಕ್ಕನಾಯಕನಹಳ್ಳಿ: ಇಂದು 'ವಿಶೇಷ ಸತ್ಸಂಗ' ಕಾರ್ಯಕ್ರಮ ------------------ ಚಿಕ್ಕನಾಯಕನಹಳ್ಳಿ: ಇಲ್ಲಿನ ವಿವೇಕ್ ಜಾಗೃತ ಬಳಗದ ವತಿಯಿಂದ ಇಂದು (ಆಗಸ್ಟ್ 26, 2026) "ವಿಶೇಷ ಸತ್ಸಂಗ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಟ್ಟಣದ ಚೌಡಗಲ್ ರಸ್ತೆಯಲ್ಲಿರುವ ಶಿಲ್ಪಾ ಧರಣೇಶ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀ ರಾಮು ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸತ್ಸಂಗ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಆಯೋಜಕರು ಕೋರಿದ್ದಾರೆ.
More news from ಕರ್ನಾಟಕ and nearby areas
- ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ------------- ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 27 ಪಂಚಾಯಿತಿಗಳಲ್ಲೂ ಸಂಘ ರಚನೆ: ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.1
- ಮರ್ಯಾದೆ ಪುರುಷ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಿ ಭಕ್ತಿ ಹೆಚ್ಚಲಿ, ಭಕ್ತರು ಭಗವಂತನಿಗೆ ಪ್ರೀತಿ ಪಾತ್ರರಾಗಿ ಭಕ್ತಿ ಹೆಚ್ಚಿಸಿ ಭಗವಂತನೇ ಒಬ್ಬನೇ ಶಾಶ್ವತ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವ ಧೂತ ಸ್ವಾಮಿಜಿ ಮರ್ಯಾದೆ ಪುರುಷ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಿ ಭಕ್ತಿ ಹೆಚ್ಚಲಿ, ಭಕ್ತರು ಭಗವಂತನಿಗೆ ಪ್ರೀತಿ ಪಾತ್ರರಾಗಿ ಭಕ್ತಿ ಹೆಚ್ಚಿಸಿ ಭಗವಂತನೇ ಒಬ್ಬನೇ ಶಾಶ್ವತ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವ ಧೂತ ಸ್ವಾಮಿಜಿ ಹೇಳಿದರು ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಶ್ರೀರಾಮ ನೂತನ ದೇವಸ್ಥಾನದ ವಿಗ್ರಹ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ದೇವಸ್ಥಾನಗಳ ಪರಂಪರೆಯನ್ನು ಕೆಲವು ಸಾವಿರ ವರ್ಷಗಳ ಹಿಂದೆ ನಾವು ಮಾಡಿದ್ದು ನಮ್ಮ ನೋವು ನಲಿವು ದುಃಖಗಳನ್ನು ದೇವರಿಗೆ ಸಮರ್ಪಿಸುವ ಮೂಲಕ ನೆಮ್ಮದಿ ಕಾಣಲು ಭಕ್ತ ಮತ್ತು ಭಗವಂತನ ನಡುವಿನ ಒಪ್ಪಂದವೇ ದೇವಸ್ಥಾನಗಳ ನಿರ್ಮಿಸಿ ನಮಗೂ ಜಗತ್ತಿಗೆ ಒಳ್ಳೆಯದನ್ನು ಬಯಸುತ್ತೇವೆ, ಪ್ರಕೃತಿಯೇ ದೇವರು ಪಂಚಮ ಭೂತಗಳನ್ನು ದೇವರೆಂದು ಪೂಜಿಸಿ ನಂಬಿದವರು, ನಿರಾಕಾರ ಆಕಾರವಿಲ್ಲ ಇಡೀ ಬ್ರಹ್ಮಾಂಡವೇ ಅವನ ಅಸ್ತಿತ್ವವಾಗಿದೆ ಎಂದು ನಂಬಿದವರು ಎಂದರು. ಶ್ರೀ ರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ ಬೊಪ್ಪಣ್ಣ ಮಾತನಾಡಿ 1972ರಲ್ಲಿ ಶ್ರೀ ರಾಮನ ಪುಟ್ಟ ಗುಡಿ ನಿರ್ಮಿಸಿ ಪೂಜೆ, ಪುನಸ್ಕಾರ ನೆರವೇರಿಸುತ್ತಿದ್ದೆವು ಕಳೆದ ಮೂರು ವರ್ಷಗಳಿಂದ ನೂತನ ದೇವಾಲಯ ನಿರ್ಮಾಣದ ಕಾರ್ಯ ಆರಂಭಿಸಿ ಇಂದು ಶ್ರೀರಾಮ ಭಕ್ತರ ದರ್ಶನಕ್ಕೆ ಅನುವು ಮಾಡಲಾಗಿದೆ, ಬರಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಹಾಲಗುಂಡೆಗೌಡ ಮಾತನಾಡಿ ಶಿರಾ ತಾಲೂಕಿನಲ್ಲಿ ಸಾಕಷ್ಟು ಬರದ ಛಾಯೆ ಆವರಿಸುತ್ತಿದ್ದು ಬೋರ್ ಗಳಲ್ಲಿ ನೀರು ಸೇರಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವಂತೆ ಶ್ರೀಗಳು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮದಲೂರು ಕೆರೆಗೆ ನೀರು ಹರಿಸುವಂತೆ ಹೇಳಿದರು. ಬರಗೂರುಗೆ ಆಗಮಿಸಿದ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀರಾಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಗೌರವ ಅಧ್ಯಕ್ಷ ಬಿ.ಕೆ.ಲಕ್ಷ್ಮಣಗೌಡ, ಉಪಾಧ್ಯಕ್ಷ ಬಿ.ಸಿ. ರಮೇಶ್, ಕಾರ್ಯದರ್ಶಿ ಬಿ.ವಿ.ರೇಣುಕಾ ಪ್ರಸಾದ್, ಸಹ ಕಾರ್ಯದರ್ಶಿ, ಮುದ್ದುಕೃಷ್ಣೇಗೌಡ, ಖಜಾಂಚಿ ಹನುಮಂತರಾಯಪ್ಪ, ಸಂಘಟನಾ ಕಾರ್ಯದರ್ಶಿ ಜಯರಾಮಯ್ಯ, ಮುಖಂಡ ಬೀರಲಿಂಗೇಗೌಡ, ಸತೀಶ್, ಓಂಕಾರಪ್ಪ, ಮಂಜುನಾಥ್ ಆರ್, ಶ್ರೀರಾಮ ದೇವಸ್ಥಾನ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ.. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ.. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.1
- ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ. ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ. ದೇವೇಂದ್ರಪ್ಪ. ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.1
- ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗೆ ಅದ್ದೂರಿ ಸ್ವಾಗತ ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿ್ಕ ಎಲ್ಲೆಡೆ ಇಂದು ಅಬ್ಬರ ಆರಂಬಿಸಿದೆ. ಅದರಂತೆ ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಹಾಗೂ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಾಕ್ಸಿಕ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ಬೆಳಗ್ಗೆ 5.30 ಕ್ಕೆ ಟಾಕ್ಸಿಕ್ ಮೊದಲ ಶೋ ಪ್ರಾರಂಬವಾಗಿದ್ದು ಮೊದಲ ದಿನವೇ ಟಾಕ್ಸಿಕ್ ಕೆ ಬಿಗ್ ರೆಸ್ಪಾನ್ಸ್ ದೊರೆತಿದ್ದು ಥಿಯೇಟರ್ ಗಳು ಹೌಸ್ ಫುಲ್ ಆಗಿವೆ. ಅಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ಹಿನ್ನೆಲೆ ಥಿಯೇಟರ್ ಅನ್ನ ಮದುವಣಗಿತ್ತಿಯಂತೆ ಸಿಂಗರಿಸಿದ್ದು ಯಶ್ ಅಭಿಮಾನಿಗಳು ಸಿನಿ ಪ್ರಿಯರು ಬೆಳಗ್ಗೆಯೇ ಆಗಮಿಸಿದ್ದು ದೊಡ್ಡದಾದ ಯಶ್ ತ ಕಟೌಟ್ ಗೆ ದೊಡ್ಡದಾದ ಹೂಮಾಲೆ ಹಾಕಿ ಪುಷ್ಪವೃಷ್ಟಿ ಮಾಡಿದ್ದು ಟಾಕ್ಸಿಕ್ ಸಿನಿಮಾದ ಪರ ಘೋಷಣೆಗಳನ್ನ ಕೂಗಿದ್ದು ಕುಂಬಳಕಾಯಿ ಒಡೆದು ಕರ್ಪೂರ ಬೆಳಗಿ ಟಾಕ್ಸಿಕ್ ಗೆ ಶುಭಹಾರೈಸಿದ್ದು ಶತದಿನೋತ್ಸವ ಆಚರಿಸಲಿ ಎಂದು ಶುಭಕೋರಿದ್ದಾರೆ. ಇನ್ನೂ ಥಿಯೇಟರ್ ನಲ್ಲಿ ಸಿನಿಮಾ ಆರಂಬವಾಗುತ್ತಿದ್ದಂತೆ ಯಶ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಹೂಮಳೆ ಸುರಿಸಿ ಸ್ಟೆಪ್ ಹಾಕಿದ ಅಭಿಮಾನಿಗಳು ಟಾಕ್ಸಿಕ್ ಸಿನಿಮಾವನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ1
- ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.4
- ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಫ್ಲೋ......1
- ಹಿರಿಯೂರು ತಾಲೂಕಿನ ರೈತರೊಂದಿಗೆ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ.1