ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿನ ವಿವಿಧ ಇಲಾಖೆಗಳ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳ ಹಾಜರಾತಿಯ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ. ಸರ್ಕಾರವು ಇತ್ತೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ 'ಕರ್ತವ್ಯ ಆಪ್' ಮೂಲಕ ಆನ್ಲೈನ್ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಅಧಿಕಾರಿಗಳು ಬೆಳಿಗ್ಗೆ 10:00 ಗಂಟೆಗೆ ಲಾಗಿನ್ ಮತ್ತು ಸಂಜೆ 5:30 ಕ್ಕೆ ಲಾಗ್ ಔಟ್ ಆಗಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10.30 ರಿಂದ 11.00 ರ ಸಮಯದಲ್ಲಿ ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆಯೇ, ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ ಮತ್ತು ಒಂದು ವೇಳೆ ಅವರು ಕ್ಷೇತ್ರ ಭೇಟಿಗೆ ಹೋಗಿದ್ದರೆ ಅದನ್ನು ಕರ್ತವ್ಯ ಆಪ್‌ನಲ್ಲಿ ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಿ ಪ್ರಶ್ನಿಸಿದ್ದಾರೆ. ಅನೇಕ ಕಚೇರಿಗಳಲ್ಲಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತಗೆದುಕೊಂಡಿದ್ದು, ಗೈರುಹಾಜರಿಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಕರ್ತವ್ಯ ಆಪ್‌ನಲ್ಲಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡುತ್ತಾರೆ ಎಂದು ಊಹಿಸದ ಸಿಬ್ಬಂದಿ ಸಂಪೂರ್ಣ ಗಾಬರಿಗೊಂಡಿದ್ದು, ಇಂತಹ ದಿಢೀರ್ ತಪಾಸಣೆಗಳಿಂದ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿ ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿನ ವಿವಿಧ ಇಲಾಖೆಗಳ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳ ಹಾಜರಾತಿಯ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ. ಸರ್ಕಾರವು ಇತ್ತೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ
'ಕರ್ತವ್ಯ ಆಪ್' ಮೂಲಕ ಆನ್ಲೈನ್ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಅಧಿಕಾರಿಗಳು ಬೆಳಿಗ್ಗೆ 10:00 ಗಂಟೆಗೆ ಲಾಗಿನ್ ಮತ್ತು ಸಂಜೆ 5:30 ಕ್ಕೆ ಲಾಗ್ ಔಟ್ ಆಗಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10.30 ರಿಂದ 11.00 ರ ಸಮಯದಲ್ಲಿ ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆಯೇ, ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ ಮತ್ತು ಒಂದು ವೇಳೆ ಅವರು ಕ್ಷೇತ್ರ ಭೇಟಿಗೆ ಹೋಗಿದ್ದರೆ ಅದನ್ನು ಕರ್ತವ್ಯ ಆಪ್‌ನಲ್ಲಿ
ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಿ ಪ್ರಶ್ನಿಸಿದ್ದಾರೆ. ಅನೇಕ ಕಚೇರಿಗಳಲ್ಲಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತಗೆದುಕೊಂಡಿದ್ದು, ಗೈರುಹಾಜರಿಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಕರ್ತವ್ಯ ಆಪ್‌ನಲ್ಲಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡುತ್ತಾರೆ ಎಂದು ಊಹಿಸದ ಸಿಬ್ಬಂದಿ ಸಂಪೂರ್ಣ ಗಾಬರಿಗೊಂಡಿದ್ದು, ಇಂತಹ ದಿಢೀರ್ ತಪಾಸಣೆಗಳಿಂದ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿ ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.
- ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿನ ವಿವಿಧ ಇಲಾಖೆಗಳ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳ ಹಾಜರಾತಿಯ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ. ಸರ್ಕಾರವು ಇತ್ತೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ 'ಕರ್ತವ್ಯ ಆಪ್' ಮೂಲಕ ಆನ್ಲೈನ್ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಅಧಿಕಾರಿಗಳು ಬೆಳಿಗ್ಗೆ 10:00 ಗಂಟೆಗೆ ಲಾಗಿನ್ ಮತ್ತು ಸಂಜೆ 5:30 ಕ್ಕೆ ಲಾಗ್ ಔಟ್ ಆಗಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10.30 ರಿಂದ 11.00 ರ ಸಮಯದಲ್ಲಿ ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆಯೇ, ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ ಮತ್ತು ಒಂದು ವೇಳೆ ಅವರು ಕ್ಷೇತ್ರ ಭೇಟಿಗೆ ಹೋಗಿದ್ದರೆ ಅದನ್ನು ಕರ್ತವ್ಯ ಆಪ್‌ನಲ್ಲಿ ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಿ ಪ್ರಶ್ನಿಸಿದ್ದಾರೆ. ಅನೇಕ ಕಚೇರಿಗಳಲ್ಲಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತಗೆದುಕೊಂಡಿದ್ದು, ಗೈರುಹಾಜರಿಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಕರ್ತವ್ಯ ಆಪ್‌ನಲ್ಲಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡುತ್ತಾರೆ ಎಂದು ಊಹಿಸದ ಸಿಬ್ಬಂದಿ ಸಂಪೂರ್ಣ ಗಾಬರಿಗೊಂಡಿದ್ದು, ಇಂತಹ ದಿಢೀರ್ ತಪಾಸಣೆಗಳಿಂದ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿ ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.3
- ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣೀಕೆರೆಯ ನೀರು ಸಮೀಪದ ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ಹರಿಯುತ್ತಿದ್ದು, ಇದರಿಂದ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತಿದೆ. ಜಿಲ್ಲಾಡಳಿತದ ಆದೇಶದಂತೆ ಜುಲೈ 10 ರಂದು ಶಾಸಕ ಟಿ. ರಘುಮೂರ್ತಿ ಅವರು ಕೆರೆಯಿಂದ ಒಂದು ಅಡಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಸದ್ಯ ಮೊದಲ ಚೆಕ್ ಡ್ಯಾಂ ತುಂಬಿ ಎರಡನೇ ಚೆಕ್ ಡ್ಯಾಂಗೆ ನೀರು ಪ್ರವೇಶಿಸಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಆದೇಶದಂತೆ ಒಟ್ಟು 15 ದಿನಗಳ ಕಾಲ ನೀರು ಹರಿಯಲಿದ್ದು, ಇದರಿಂದ ಒಟ್ಟು 4 ಚೆಕ್ ಡ್ಯಾಂಗಳು ಭರ್ತಿಯಾಗಲಿವೆ. ಪ್ರಸಕ್ತ ಮುಂಗಾರು ಕಾಲದಲ್ಲೂ ಮಳೆಯಿಲ್ಲದ ಕಾರಣ, ಅಡವಿಯಲ್ಲಿನ ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಇದನ್ನು ಮನಗಂಡು ಮೀರಾಸಾಬಿಹಳ್ಳಿ, ವಿಡುಪನಕುಂಟೆ, ರಂಗವ್ವನಹಳ್ಳಿ, ಕರೀಕೆರೆ ಮತ್ತು ವಿಶ್ವೇಶ್ವರಪುರ ಗ್ರಾಮಸ್ಥರು ಚೆಕ್ ಡ್ಯಾಂಗಳಿಗೆ ನೀರು ಹರಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದರು. ಈ ನೀರು ಹರಿವಿನಿಂದಾಗಿ ಅಂತರ್ಜಲ ವೃದ್ಧಿಯಾಗಲಿದ್ದು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರ ಕೊಳವೆಬಾವಿಗಳು ಮತ್ತು ಕುಡಿಯುವ ನೀರಿನ ಬೋರ್‌ವೆಲ್‌ಗಳಿಗೆ ಅನುಕೂಲವಾಗಲಿದೆ. ಇದೇ ವೇಳೆ, ನೀರು ನೋಡಲು ಮತ್ತು ಈಜಾಡಲು ಮಕ್ಕಳು ಡ್ಯಾಂಗಳ ಬಳಿ ಹೋಗದಂತೆ ತಡೆಯಲು ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರು ಜಾಗೃತಿ ಮೂಡಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಬರಡು ಭೂಮಿಗೆ ಹರಿದು ಬಂದಿರುವ ನೀರನ್ನು ಕಂಡು ಹರ್ಷಗೊಂಡಿರುವ ಐದಾರು ಗ್ರಾಮಗಳ ಜನರು, ಗಂಗಾ ಮಾತೆಗೆ ವಿಶೇಷ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲು ಹಾಗೂ ನೀರು ಹರಿಸಲು ಕಾರಣರಾದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮೈಸೂರು ಮಹಾರಾಜರ ಕಾಲದಲ್ಲಿ ಅಂದರೆ 1907 ರಲ್ಲಿ ನಿರ್ಮಾಣಗೊಂಡಿರುವ ಈ ರಾಣೀಕೆರೆಯು ರಾಜ್ಯದಲ್ಲೇ ಎರಡನೇ ದೊಡ್ಡ ಕೆರೆ ಎನ್ನುವ ಹೆಗ್ಗಳಿಕೆ ಹೊಂದಿದೆ. 582.76 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಕೆರೆಯು ಐದಾರು ಗ್ರಾಮಗಳ ವ್ಯಾಪ್ತಿಯ 891 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಆಧಾರವಾಗಿದೆ. ರಾಣೀಕೆರೆ ಪೂರಕ ನಾಲೆ ಹೋರಾಟಗಾರರ ಒಕ್ಕೂಟದ ಪದಾಧಿಕಾರಿಗಳಾದ ವಿ.ಆರ್. ಸಿದ್ದೇಶ್ವರಪ್ಪ ಮತ್ತು ಡಿ. ರಾಜಣ್ಣ ಅವರು, ಈ ಕೆರೆಯ ಸಂರಕ್ಷಣೆಗಾಗಿ ಭದ್ರಾ ಮೇಲ್ದಂಡೆ ಮತ್ತು ಬೊಂಬೇರಹಳ್ಳಿ ವೇದಾವತಿ ಡ್ಯಾಂನಿಂದ ನೀರು ಹರಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದ್ದಾರೆ.1
- ಕಾಂಕ್ರೀಟ್ ಜಂಗಲ್‌ನ ಯಾಂತ್ರಿಕ ಬದುಕಿನ ಮಧ್ಯೆ ಸಿಲುಕಿ ಧೂಳು, ವಾಹನಗಳ ಕರ್ಕಶ ಸದ್ದಿನಿಂದ ಬೇಸತ್ತಿರುವ ಚಿತ್ರದುರ್ಗದ ನಗರವಾಸಿಗಳಿಗೆ ಅಲ್ಲಿನ ನಗರ ಪ್ರಾಧಿಕಾರವು 'ಆರೋಗ್ಯ ಭಾಗ್ಯ' ಕಲ್ಪಿಸಿದೆ. ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯನ್ನೇ ಪ್ರಧಾನ ಆಶಯವಾಗಿಟ್ಟುಕೊಂಡು ನಗರದ ಪ್ರಮುಖ ವಲಯಗಳಲ್ಲಿ ಅತ್ಯಾಧುನಿಕ ಉದ್ಯಾನವನಗಳನ್ನು (High-Tech Parks) ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪಾರ್ಕ್‌ಗಳು ಕೇವಲ ಹಸಿರು ಗಿಡ-ಮರಗಳ ತಾಣವಾಗಿ ಉಳಿಯದೆ, ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಮತ್ತು ಉಲ್ಲಾಸ ನೀಡುವ ನೆಚ್ಚಿನ ಆರೋಗ್ಯ ಕೇಂದ್ರಗಳಾಗಿ ಬದಲಾಗುತ್ತಿವೆ. ಪ್ರಾಧಿಕಾರವು ಜನರಿಲ್ಲದ ಯಾವುದೋ ಮೂಲೆಯಲ್ಲಿ ಪಾರ್ಕ್ ನಿರ್ಮಿಸುವ ಬದಲು, ನಿವಾಸಿಗಳಿಗೆ ತೀರಾ ಹತ್ತಿರವಾಗುವ ಹಾಗೂ ಸಂಜೆ ವೇಳೆ ಸುಲಭವಾಗಿ ಬಂದು ಹೋಗಬಹುದಾದ ಪ್ರಮುಖ ಬಡಾವಣೆಗಳ ಆಯಕಟ್ಟಿನ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದೆ. ಇಲ್ಲಿ ಧೂಳು ಮತ್ತು ಕಿರಿಕಿರಿ ಮುಕ್ತ ಹೈಟೆಕ್ ವಾಕಿಂಗ್ ಪಾತ್, ಉಚಿತ ದೈಹಿಕ ಕಸರತ್ತಿಗೆ ಸುಸಜ್ಜಿತ 'ಓಪನ್ ಜಿಮ್', ಚಿಣ್ಣರ ಮನರಂಜನೆಗೆ ಬಣ್ಣ ಬಣ್ಣದ ಉಯ್ಯಾಲೆಗಳು ಹಾಗೂ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಆಕರ್ಷಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜನನಿಬಿಡ ಪ್ರದೇಶಗಳ ಮಧ್ಯೆಯೇ ಇಂತಹ ಪ್ರಶಾಂತ ಹಸಿರು ದ್ವೀಪಗಳನ್ನು ನಿರ್ಮಿಸಿರುವುದು ನಗರವಾಸಿಗಳ ಸಂಜೆಯ ಹರಟೆ ಮತ್ತು ನಡಿಗೆಗೆ ಹೊಸ ಕಳೆಯನ್ನು ತಂದಿದೆ. ದುಬಾರಿ ಜಿಮ್‌ಗಳ ಶುಲ್ಕ ಭರಿಸಲು ಸಾಧ್ಯವಾಗದ ಮಧ್ಯಮ ವರ್ಗದ ಜನರಿಗೆ ಉದ್ಯಾನವನದಲ್ಲಿರುವ ಅತ್ಯಾಧುನಿಕ 'ಓಪನ್ ಜಿಮ್' ಉಪಕರಣಗಳು ವರದಾನವಾಗಿವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಯುವಕ-ಯುವತಿಯರು ಹಾಗೂ ಹಿರಿಯ ನಾಗರಿಕರು ಪ್ರಕೃತಿಯ ಶುದ್ಧ ಗಾಳಿಯ ಮಧ್ಯೆ ಉಚಿತವಾಗಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲದೆ, ರಸ್ತೆ ಬದಿಯ ಧೂಳು ಮತ್ತು ವೇಗದ ವಾಹನಗಳ ಆತಂಕವಿಲ್ಲದೆ ಸುರಕ್ಷಿತವಾಗಿ ಹೆಜ್ಜೆ ಹಾಕಲು ಅನುಕೂಲಕರವಾದ ಪರಿಸರ ಸ್ನೇಹಿ ಹಾಗೂ ಉತ್ತಮ ಗ್ರಿಪ್ ಉಳ್ಳ 'ಹೈಟೆಕ್ ವಾಕಿಂಗ್ ಪಾತ್' ನಿರ್ಮಿಸಲಾಗಿದ್ದು, ಮಂಡಿ ನೋವಿನ ಸಮಸ್ಯೆ ಇರುವ ಹಿರಿಯರಿಗೂ ಸಹ ಇದು ನಿರಾಳತೆ ನೀಡಿದೆ.1
- ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್. ಹನುಮಂತಪ್ಪ ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರು, ಶ್ರೀ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ (ರಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸದ್ಯ ಹೊಳಲ್ಕೆರೆ ರಸ್ತೆಯ ನೆಹರು ನಗರದಲ್ಲಿರುವ ಮೃತರ ನಿವಾಸದ ಬಳಿ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಜಮಾಯಿಸಿದ್ದು, ಅಂತಿಮ ದರ್ಶನ ಪಡೆಯುತ್ತಿದ್ದಾರೆ.1
- ಚಿತ್ರದುರ್ಗದ ಹಿರಿಯ ರಾಜಕಾರಣಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಚ್. ಹನುಮಂತಪ್ಪ ಅವರು ನಿಧನರಾಗಿದ್ದಾರೆ. ಜನನಾಯಕ ಹನುಮಂತಪ್ಪ ಅವರ ಅಗಲಿಕೆ ರಾಜಕೀಯ ವಲಯಕ್ಕೆ ತೀವ್ರ ದುಃಖ ತಂದಿದ್ದು, ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅಂತಿಮ ನಮನಗಳನ್ನು ಸಲ್ಲಿಸಲಾಗುತ್ತಿದೆ.1
- ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರೇಮಾ ಅವರಿಗೆ ಸಿಎಂ ನಿವಾಸದ ಒಳಗೆ ಪ್ರವೇಶಿಸಲು ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಅವರನ್ನು ಭೇಟಿಯಾಗಲು ಇಂದು ನಟಿ ಪ್ರೇಮಾ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಆಗಮಿಸಿದ್ದರು. ಆದರೆ ಭದ್ರತೆ ಮತ್ತು ನಿಯಮಾವಳಿಗಳ ಕಾರಣ ನೀಡಿ ಸಿಬ್ಬಂದಿ ಅವರನ್ನು ಒಳಗಡೆ ಬಿಡದೆ ತಡೆದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕಾದರೆ ಅವರ ಗೃಹ ಕಚೇರಿ 'ಕೃಷ್ಣಾ'ಗೆ ಬಂದು ಭೇಟಿಯಾಗುವಂತೆ ಸಿಬ್ಬಂದಿ ನಟಿ ಪ್ರೇಮಾ ಅವರಿಗೆ ತಿಳಿಸಿ, ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ನಟಿ ಪ್ರೇಮಾ ಅವರು ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ನಿರಾಸೆಯಿಂದ ಮರಳುವಂತಾಯಿತು.1
- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹೊರವಲಯದ ಕಣಿವೆ ಬಳಿ ಭಾನುವಾರ ತಡರಾತ್ರಿ ಲಾರಿ ಮತ್ತು ಥಾರ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಮೂಲದ ಮಾರುತಿ ಗ್ಯಾಸ್ ಏಜೆನ್ಸಿ ಮಾಲೀಕರ ಮಗ ಲೋಹಿತ್ ಪ್ರಸಾದ್ ಹಾಗೂ ಅವರ ಪತ್ನಿ ನಿತ್ಯಶ್ರೀ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಇವರ ಜೊತೆಯಲ್ಲಿದ್ದ ಚಿಕ್ಕ ಮಗುವೊಂದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದೆ. ಶಿವಮೊಗ್ಗ ಕಡೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಕಾರು ಮತ್ತು ಕುಷ್ಟಗಿಯಿಂದ ಚಿತ್ರದುರ್ಗ ಮಾರ್ಗವಾಗಿ ಮಲ್ಲಾಡಿಹಳ್ಳಿಗೆ ತೆರಳುತ್ತಿದ್ದ ಲಾರಿ ನಡುವೆ ಈ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಲಾರಿ ಕೂಡ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1