logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಂಡ್ಲುಪೇಟೆ:ಹೊನ್ನೇಗೌಡನಹಳ್ಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ; ರೈತರಲ್ಲಿ ಆತಂಕ. ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಹಸುವಿನ ಮೇಲೆ ಶುಕ್ರವಾರ ಸಂಜೆ ಹುಲಿ ದಾಳಿ ನಡೆಸಿದೆ. ಹುಲಿ ಹಸುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಗಮನಿಸಿದ ರೈತರು ಜೋರಾಗಿ ಕೂಗಿದಾಗ, ಹೆದರಿದ ಹಸುವನ್ನು ಬಿಟ್ಟು ಕಾಡಿನತ್ತ ಓಡಿಹೋಗಿದೆ. ಘಟನೆಯಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹುಲಿ ಹಾಗೂ ಚಿರತೆ ದಾಳಿಗಳು ಪದೇಪದೇ ನಡೆಯುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಳಿಗೆ ಒಳಗಾದ ಜಾನುವಾರುಗಳಿಗೆ ತಕ್ಷಣ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಹುಲಿ–ಚಿರತೆ ದಾಳಿ ನಿಯಂತ್ರಣಕ್ಕೆ ವಿಶೇಷ ಕ್ರಮ ಕೈಗೊಂಡು, ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

1 hr ago
user_Tara Nagendra
Tara Nagendra
Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
1 hr ago
e7d55422-8c05-49eb-87dc-e907fd0c8297
29400026-6a5e-4359-8f6e-61fad22875dc

ಗುಂಡ್ಲುಪೇಟೆ:ಹೊನ್ನೇಗೌಡನಹಳ್ಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ; ರೈತರಲ್ಲಿ ಆತಂಕ. ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಹಸುವಿನ ಮೇಲೆ ಶುಕ್ರವಾರ ಸಂಜೆ ಹುಲಿ ದಾಳಿ ನಡೆಸಿದೆ. ಹುಲಿ ಹಸುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಗಮನಿಸಿದ ರೈತರು ಜೋರಾಗಿ ಕೂಗಿದಾಗ, ಹೆದರಿದ ಹಸುವನ್ನು ಬಿಟ್ಟು ಕಾಡಿನತ್ತ ಓಡಿಹೋಗಿದೆ. ಘಟನೆಯಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹುಲಿ ಹಾಗೂ ಚಿರತೆ ದಾಳಿಗಳು ಪದೇಪದೇ ನಡೆಯುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಳಿಗೆ ಒಳಗಾದ ಜಾನುವಾರುಗಳಿಗೆ ತಕ್ಷಣ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಹುಲಿ–ಚಿರತೆ ದಾಳಿ ನಿಯಂತ್ರಣಕ್ಕೆ ವಿಶೇಷ ಕ್ರಮ ಕೈಗೊಂಡು, ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

More news from ಕರ್ನಾಟಕ and nearby areas
  • ಗುಂಡ್ಲುಪೇಟೆ: ₹5 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ಗುಂಡ್ಲುಪೇಟೆ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (CMIDP) ಅಡಿಯಲ್ಲಿ ಗುಂಡ್ಲುಪೇಟೆ ಪುರಸಭೆಗೆ ಮಂಜೂರಾಗಿರುವ ₹50 ಕೋಟಿ ವಿಶೇಷ ಅನುದಾನದಲ್ಲಿ ₹5 ಕೋಟಿ ವೆಚ್ಚದಲ್ಲಿ ಕೆ.ಇ.ಬಿ. ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್ ಅವರ ಸೂಚನೆಯಂತೆ ಕೆ.ಆರ್.ಐ.ಡಿ.ಎಲ್. ವತಿಯಿಂದ ಕಾಮಗಾರಿ ಆರಂಭಿಸಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಎಸ್. ಶರವಣ ಅವರು ಕೆ.ಆರ್.ಐ.ಡಿ.ಎಲ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಹಾಗೂ ಪುರಸಭೆ ಎಂಜಿನಿಯರ್ ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿಗೆ ಸೂಕ್ತ ಇಳಿಜಾರು ನೀಡಬೇಕು. ಪಾದಚಾರಿ ಮಾರ್ಗವನ್ನು ನೇರವಾಗಿ ಹಾಗೂ ಗುಣಮಟ್ಟದೊಂದಿಗೆ ನಿರ್ಮಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ರೀತಿಯಲ್ಲಿ ವ್ಯವಸ್ಥಿತ ಫುಟ್‌ಪಾತ್ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಮುಖ್ಯಾಧಿಕಾರಿ ಸೂಚಿಸಿದರು. ಪಟ್ಟಣದ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಮಗಾರಿ ಪೂರಕವಾಗಲಿದೆ ಎಂದು ಅವರು ತಿಳಿಸಿದರು.
    3
    ಗುಂಡ್ಲುಪೇಟೆ: ₹5 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ.
ಗುಂಡ್ಲುಪೇಟೆ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (CMIDP) ಅಡಿಯಲ್ಲಿ ಗುಂಡ್ಲುಪೇಟೆ ಪುರಸಭೆಗೆ ಮಂಜೂರಾಗಿರುವ ₹50 ಕೋಟಿ ವಿಶೇಷ ಅನುದಾನದಲ್ಲಿ ₹5 ಕೋಟಿ ವೆಚ್ಚದಲ್ಲಿ ಕೆ.ಇ.ಬಿ. ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್ ಅವರ ಸೂಚನೆಯಂತೆ ಕೆ.ಆರ್.ಐ.ಡಿ.ಎಲ್. ವತಿಯಿಂದ ಕಾಮಗಾರಿ ಆರಂಭಿಸಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಎಸ್. ಶರವಣ ಅವರು ಕೆ.ಆರ್.ಐ.ಡಿ.ಎಲ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಹಾಗೂ ಪುರಸಭೆ ಎಂಜಿನಿಯರ್ ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿಗೆ ಸೂಕ್ತ ಇಳಿಜಾರು ನೀಡಬೇಕು. ಪಾದಚಾರಿ ಮಾರ್ಗವನ್ನು ನೇರವಾಗಿ ಹಾಗೂ ಗುಣಮಟ್ಟದೊಂದಿಗೆ ನಿರ್ಮಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ರೀತಿಯಲ್ಲಿ ವ್ಯವಸ್ಥಿತ ಫುಟ್‌ಪಾತ್ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಮುಖ್ಯಾಧಿಕಾರಿ ಸೂಚಿಸಿದರು.
ಪಟ್ಟಣದ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಮಗಾರಿ ಪೂರಕವಾಗಲಿದೆ ಎಂದು ಅವರು ತಿಳಿಸಿದರು.
    user_Tara Nagendra
    Tara Nagendra
    Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    1 hr ago
  • ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ. ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಪ್ರದೀಪ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    4
    ಹೆಬ್ಬಾಲೆಯಲ್ಲಿ 25 ಲಕ್ಷದಲ್ಲಿ  ಪ್ರೇಕ್ಷಕ ಗ್ಯಾಲರಿ ಬನಶಂಕರಿ ಅಮ್ಮನವರ ರಂಗ ಮಂದಿರ ಉದ್ಘಾಟನಾ ಸಮಾರಂಭ.
ಕೊಡಗು: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ಇನ್ನುಳಿಕೆ ಆಗಿರುವ ಪ್ರೇಕ್ಷಕ ಗ್ಯಾಲರಿಯನ್ನು 15 ಲಕ್ಷ ರೂ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಡುವುದಾಗಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಭರವಸೆ ನೀಡಿದರು. ತಾಲೂಕಿನ ಹೆಬ್ಬಾಲೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೇಕ್ಷಕರ ಗ್ಯಾಲರಿ ಮತ್ತು 5 ಲಕ್ಷದಲ್ಲಿ ಬನಶಂಕರಿ ಅಮ್ಮನವರ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೇನು ನೀಡಿದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನಾ ಅಧ್ಯಕ್ಷರಾದ ವಿಪಿ ಶಶಿಧರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಶಾಲಾ ಅಭಿವೃದ್ಧಿ  ಅಧ್ಯಕ್ಷರಾದ ಪ್ರದೀಪ್  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರಿ, ದಿನೇಶ್, ರಾಜಶೇಖರ್ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮುಂತಾದ ನಾಯಕರು ಹಾಜರಿದ್ದರು.
    user_ಹೆಚ ಟಿ ಸತ್ಯನಾರಾಯಣ ಪ್ರಸಾದ್
    ಹೆಚ ಟಿ ಸತ್ಯನಾರಾಯಣ ಪ್ರಸಾದ್
    Teacher ನಂಜನಗೂಡು, ಮೈಸೂರು, ಕರ್ನಾಟಕ•
    3 hrs ago
  • ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ : ಸಚಿವ ಸಿ. ಪುಟ್ಟರಂಗಶೆಟ್ಟಿ ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ : ಸಚಿವ ಸಿ. ಪುಟ್ಟರಂಗಶೆಟ್ಟಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಬಹು ಮುಖ್ಯವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ತಾಲೂಕು ಮಟ್ಟದ ಶಾಲಾ ಶಿಕ್ಷಣ (ಪದವಿ ಪೂರ್ವ) ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಎಷ್ಟೇ ಚಟುವಟಿಕೆಗಳಿದ್ದರು ಕ್ರೀಡಾ ಚಟುವಟಿಕೆ ಅತ್ಯಂತ ಅವಶ್ಯವಾಗಿದೆ. ಆರೋಗ್ಯ ಜೀವನಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ದೈಹಿಕವಾಗಿ ಸಧೃಡರಾಗಲು ಕ್ರೀಡೆ ಆಟೋಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು. ಕ್ರೀಡಾ ಆಸಕ್ತರಿಗೆ ಉತ್ತೇಜನ ನೀಡುವ ಸಲುವಾಗಿ ಇನ್ನಷ್ಟು ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಹಾಗೂ ಈಜುಕೊಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ್ ಅವರ ಅವಧಿಯಲ್ಲಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಯಿತು. ಕ್ರೀಡಾ ಚಟುವಟಿಕೆಗಳಿಗೆ ಈ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು. ಪ್ರಸ್ತುತ ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು. ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವಕಾಶ ಮಾಡಿಕೊಡಲು ಪ್ರೋತ್ಸಾಹ ನೀಡಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸೋಲಿಗೆ ಧೃತಿಗೆಡಬಾರದು ಗೆಲುವು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠಾಧ್ಯಕ್ಷರು ಹಾಗೂ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಿಂದ ಸಾಧ್ಯವಾಗಲಿದೆ. ಧ್ಯಾನ, ಯೋಗದಂತಹ ಆಧ್ಯಾತ್ಮಿಕ ಶಿಕ್ಷಣವು ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹೆಚ್.ಎನ್. ಪುಟ್ಟಗೌರಮ್ಮ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ. ಪ್ರಿಯಾ ಶಂಕರ್, ಖಜಾಂಚಿ ಹೆಚ್.ಎನ್ ಸ್ವಾಮಿ, ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ. ಮಧು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ವಿಶ್ರಾಂತ ಪ್ರಾಂಶುಪಾಲರಾದ ಸೋಮಣ್ಣ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
    4
    ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ :  ಸಚಿವ ಸಿ. ಪುಟ್ಟರಂಗಶೆಟ್ಟಿ
ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ :  ಸಚಿವ ಸಿ. ಪುಟ್ಟರಂಗಶೆಟ್ಟಿ
ವರದಿ: ಹೊಮ್ಮನಂಜುಂಡನಾಯಕ
ಚಾಮರಾಜನಗರ:
ಆರೋಗ್ಯಕರ ಬದುಕಿಗೆ ಕ್ರೀಡಾ ಚಟುವಟಿಕೆಗಳು ಬಹು ಮುಖ್ಯವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಸಿ. ಪುಟ್ಟರಂಗಶೆಟ್ಟಿ  ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ತಾಲೂಕು ಮಟ್ಟದ ಶಾಲಾ ಶಿಕ್ಷಣ (ಪದವಿ ಪೂರ್ವ) ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ  ಮಾತನಾಡಿದರು.
ಜೀವನದಲ್ಲಿ ಎಷ್ಟೇ ಚಟುವಟಿಕೆಗಳಿದ್ದರು ಕ್ರೀಡಾ ಚಟುವಟಿಕೆ ಅತ್ಯಂತ ಅವಶ್ಯವಾಗಿದೆ. ಆರೋಗ್ಯ ಜೀವನಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ದೈಹಿಕವಾಗಿ ಸಧೃಡರಾಗಲು ಕ್ರೀಡೆ ಆಟೋಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.  
ಕ್ರೀಡಾ ಆಸಕ್ತರಿಗೆ ಉತ್ತೇಜನ ನೀಡುವ ಸಲುವಾಗಿ ಇನ್ನಷ್ಟು ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಹಾಗೂ ಈಜುಕೊಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ್ ಅವರ ಅವಧಿಯಲ್ಲಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಯಿತು. ಕ್ರೀಡಾ ಚಟುವಟಿಕೆಗಳಿಗೆ ಈ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು. 
ಪ್ರಸ್ತುತ ನಡೆಯುತ್ತಿರುವ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು. ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು. 
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವಕಾಶ ಮಾಡಿಕೊಡಲು ಪ್ರೋತ್ಸಾಹ ನೀಡಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸೋಲಿಗೆ ಧೃತಿಗೆಡಬಾರದು ಗೆಲುವು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. 
ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠಾಧ್ಯಕ್ಷರು ಹಾಗೂ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಿಂದ ಸಾಧ್ಯವಾಗಲಿದೆ. ಧ್ಯಾನ, ಯೋಗದಂತಹ ಆಧ್ಯಾತ್ಮಿಕ ಶಿಕ್ಷಣವು ಅಗತ್ಯವಾಗಿದೆ.  ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ತಿಳಿಸಿದರು. 
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹೆಚ್.ಎನ್. ಪುಟ್ಟಗೌರಮ್ಮ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ. ಪ್ರಿಯಾ ಶಂಕರ್, ಖಜಾಂಚಿ ಹೆಚ್.ಎನ್ ಸ್ವಾಮಿ, ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ. ಮಧು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ವಿಶ್ರಾಂತ ಪ್ರಾಂಶುಪಾಲರಾದ ಸೋಮಣ್ಣ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    4 hrs ago
  • ಅಧಿಕಾರಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಚಪನ್ ಶಾಲಾ ಮಕ್ಕಳು ಮೈಸೂರು: ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬಚಪನ್ ಶಾಲೆಯ ಮಕ್ಕಳು ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಶಾಲೆಯ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು. ಮಕ್ಕಳು ಸರ್ಕಾರಿ ನೌಕರರು, ವೈದ್ಯರು, ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ರಾಖಿ ಕಟ್ಟಿದರು. ಈ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ಸಹೋದರತ್ವ ಹಾಗೂ ಪ್ರೀತಿಯ ಬಾಂಧವ್ಯವನ್ನು ಬೆಳೆಸುವ ಸಂದೇಶ ನೀಡಿದರು. ಪೊಲೀಸ್ ಇಲಾಖೆ ಕಚೇರಿಗೆ ತೆರಳಿದ ಮಕ್ಕಳು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರೊಂದಿಗೆ ಮಕ್ಕಳು ಆತ್ಮೀಯವಾಗಿ ಬೆರೆತು ಸಂಭ್ರಮಿಸಿದರು. ಇದೇ ವೇಳೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೂ ರಾಖಿ ಕಟ್ಟಿ, ಜನರ ಆರೋಗ್ಯ ಕಾಪಾಡುವ ಅವರ ಸೇವೆಯನ್ನು ಸ್ಮರಿಸಿದರು. ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿದ ಮಕ್ಕಳು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿಯೂ ಅಧಿಕಾರಿಗಳು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ರಾಖಿ ಕಟ್ಟಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳ ಈ ವಿಶೇಷ ಆಚರಣೆ ಅಧಿಕಾರಿಗಳಲ್ಲಿಯೂ ಸಂತಸ ಮೂಡಿಸಿತು. ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ನಡುವಿನ ಹಬ್ಬವಲ್ಲ, ಪರಸ್ಪರ ಪ್ರೀತಿ, ಗೌರವ, ಕಾಳಜಿ ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುವ ಹಬ್ಬ ಎಂಬ ಸಂದೇಶವನ್ನು ಮಕ್ಕಳು ಸಾರಿದರು. ಬಚಪನ್ ಶಾಲೆಯ ಶಿಕ್ಷಕರು ಮಕ್ಕಳಿಗೆ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗೌರವಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳ ಈ ವಿಭಿನ್ನ ಆಚರಣೆ ಸಾರ್ವಜನಿಕರ ಗಮನ ಸೆಳೆಯಿತು.
    1
    ಅಧಿಕಾರಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಚಪನ್ ಶಾಲಾ ಮಕ್ಕಳು

ಮೈಸೂರು: ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬಚಪನ್ ಶಾಲೆಯ ಮಕ್ಕಳು ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಿದರು. ಶಾಲೆಯ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು.
ಮಕ್ಕಳು ಸರ್ಕಾರಿ ನೌಕರರು, ವೈದ್ಯರು, ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ರಾಖಿ ಕಟ್ಟಿದರು. ಈ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ಸಹೋದರತ್ವ ಹಾಗೂ ಪ್ರೀತಿಯ ಬಾಂಧವ್ಯವನ್ನು ಬೆಳೆಸುವ ಸಂದೇಶ ನೀಡಿದರು.
ಪೊಲೀಸ್ ಇಲಾಖೆ ಕಚೇರಿಗೆ ತೆರಳಿದ ಮಕ್ಕಳು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರೊಂದಿಗೆ ಮಕ್ಕಳು ಆತ್ಮೀಯವಾಗಿ ಬೆರೆತು ಸಂಭ್ರಮಿಸಿದರು. ಇದೇ ವೇಳೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೂ ರಾಖಿ ಕಟ್ಟಿ, ಜನರ ಆರೋಗ್ಯ ಕಾಪಾಡುವ ಅವರ ಸೇವೆಯನ್ನು ಸ್ಮರಿಸಿದರು.
ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿದ ಮಕ್ಕಳು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿಯೂ ಅಧಿಕಾರಿಗಳು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ರಾಖಿ ಕಟ್ಟಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಮಕ್ಕಳ ಈ ವಿಶೇಷ ಆಚರಣೆ ಅಧಿಕಾರಿಗಳಲ್ಲಿಯೂ ಸಂತಸ ಮೂಡಿಸಿತು. ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ನಡುವಿನ ಹಬ್ಬವಲ್ಲ, ಪರಸ್ಪರ ಪ್ರೀತಿ, ಗೌರವ, ಕಾಳಜಿ ಮತ್ತು ಸಹೋದರತ್ವದ ಭಾವನೆಯನ್ನು ಬೆಳೆಸುವ ಹಬ್ಬ ಎಂಬ ಸಂದೇಶವನ್ನು ಮಕ್ಕಳು ಸಾರಿದರು.
ಬಚಪನ್ ಶಾಲೆಯ ಶಿಕ್ಷಕರು ಮಕ್ಕಳಿಗೆ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗೌರವಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದರು. ಮಕ್ಕಳ ಈ ವಿಭಿನ್ನ ಆಚರಣೆ ಸಾರ್ವಜನಿಕರ ಗಮನ ಸೆಳೆಯಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    8 hrs ago
  • ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ‌ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    1
    ಮೈಸೂರು : ಅರಣ್ಯ ಭವನದಲ್ಲಿ ನಮ್ಮ  ದಸರಾ‌ ಗಜಪಡೆ ಭರ್ಜರಿ  ರಿಲ್ಯಾಕ್ಸ್
ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್  ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews
    1
    News by dailynews 
ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ!
ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ.
#tanveersait #viral #mysuru #cmdkshivakumar #viralnews
News by dailynews 
ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ!
ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ.
#tanveersait #viral #mysuru #cmdkshivakumar #viralnews
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ಬಾಳೆಹೊನ್ನಿಗ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಹಸು ಸಾವು ಮತ್ತೊಂದು ಕಡೆ ಕೂಲಿಕಾರನ ಮೇಲೆ ದಾಳಿ ಕಾಲು ಮುರಿತ ಗ್ರಾಮಸ್ಥರಲ್ಲಿ ಆತಂಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಮುನ್ನೆಚ್ಚರಿಕೆ ಕ್ರಮ ಒಂಟಿ ಸಲಗದ ಪುಂಡಾಟಕ್ಕೆ ಇಲಾತಿ ಹಸು ಸಾವು, ರೈತನಿಗೆ ಕಾಲುಮುರಿತ. ಹಲಗೂರು:- ಭೀಮನ ಕಿಂಡಿ, ಕಬ್ಬಾಳು ಅರಣ್ಯ ಪ್ರದೇಶದಿಂದ ಗುರುವಾರ ತಡರಾತ್ರಿ ಐದು ಕಾಡಾನೆಗಳು ಆಹಾರ ಹುಡುಕಿಕೊಂಡು ಬಂದು ಅದರಲ್ಲಿ ಮೂರು ಕಾಡಾನೆಗಳು ಮತ್ತೆ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹೊರಟು ಹೋದರೆ ಮತ್ತೆ ಎರಡು ಆನೆಗಳು ಗುಂಡಾಪುರ ಮತ್ತು ನಂದಿಪುರ ರಸ್ತೆಗಳ ಬಯಲಿನಲ್ಲಿ ಓಡಾಡಿ ನಂತರ ಒಂದು ಕಾಡಾನೆ ಬಸನ ಬೆಟ್ಟಕ್ಕೆ ಹೋದರೆ ಮತ್ತೊಂದು ಒಂಟಿ ಸಲಗ ಮತ್ತೆ ಕಬ್ಬಾಳು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗುವ ದಾರಿ ಮಧ್ಯೆ ಸಿಗುವ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜಶೇಖರ ಎಂಬುವರಿಗೆ ಸೇರಿದ ಇಲಾತಿ ಹಸುವನ್ನು ಸೊಂಡಲಿಂದ ಹೊಡೆದು ಒಗೆದು ಸಾಯಿಸಿರುತ್ತದೆ. ನಂತರ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಳ್ಳಾಡಿ ಜೋಗಯ್ಯ ಅವರಿಗೆ ಆನೆ ತುಳಿದಿದ್ದು, ಆತನ ಕಾಲಿನ ಮೂಳೆ ಮುರಿದಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಹಲಗೂರು ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಜರುಗಿರುತ್ತದೆ. ಕಾಡಾನೆ ಬಂದಿರೋ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಧ್ವನಿ ವರ್ಧಕ ಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದರ ಮುಖಾಂತರ ಮುಂದೆ ಆಗುವ ಅಪಾಯವನ್ನು ತಪ್ಪಿಸು ನಿಟ್ಟಿನಲ್ಲಿ ಮುಂದಾದರು. ಆದರೂ ಸಹ ಒಂಟಿ ಸಲಗ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಗ್ರಾಮದ ಕುಳ್ಳಾಡಿ ಜೋಗಯ್ಯ ಅವರಿಗೆ ತುಳಿದಿದ್ದು ಕಾಲಿನ ಮೂಳೆ ಮುರಿದಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಗಾಯಗೊಂಡವನನ್ನು ಅರಣ್ಯ ಇಲಾಖೆಯ ಆರ್ ಎಫ್ ಪ್ರಮೋದ್ ಮತ್ತು ಸಿಬ್ಬಂದಿ ತಕ್ಷಣ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಇಲಾತಿ ಹಸುವನ್ನು ಕಳೆದುಕೊಂಡ ಅದರ ಮಾಲೀಕರಾದ ರಾಜಶೇಖರ್ ಎಂಬವರು ಮಾತನಾಡಿ, ನಮ್ಮ ತೋಟದ ರೇಷ್ಮೆ ಹುಳು ಸಾಕಾಣಿಕೆಯ ಮನೆಯ ಮುಂಭಾಗ ತೆಂಗಿನ ಮರಕ್ಕೆ ಕಟ್ಟಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಳೆಬಾಳುವ ಇಲಾತಿಹಸುವನ್ನು ಕಾಡಾನೆ ದಾಳಿ ಮಾಡಿದ್ದರಿಂದ ಮೃತಪಟ್ಟಿರುತ್ತದೆ. ಇದರಿಂದ ನನಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ್ದು, ನಾವು ವ್ಯವಸಾಯ ಮಾಡಿಕೊಂಡು ಹಾಗೂ ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕಾಡಾನೆಗಳಿಂದ ನಮಗೆ ರಕ್ಷಣೆ ನೀಡಬೇಕು. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಎಂಬುವರು ಮಾತನಾಡಿ, ಇತ್ತೀಚೆಗೆ ಕಾಡಾನೆಗಳ ಪುಂಡಾಟ ಜಾಸ್ತಿಯಾಗಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಮ್ಮ ಕ್ಷೇತ್ರದ ಶಾಸಕರು ಹಾಗೂ ಕೃಷಿ ಸಚಿವರು ಆದ ಪಿ.ಎಂ. ನರೇಂದ್ರಸ್ವಾಮಿ ಅವರು ರೈತರ ಬಗ್ಗೆ ಹಾಗೂ ಅವರು ಬೆಳೆಯುವ ಫಸಲಿನ ಬಗ್ಗೆ ಇಲ್ಲಿ ಸಿಗುವ ಆದಾಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವುದರಿಂದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ,ಅವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿಎಸ್ಐ ಲೋಕೇಶ್ ಮತ್ತು ಸಿಬ್ಬಂದಿಯ ಸಹಕಾರ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಪಟಾಕಿ ಮದ್ದು ಸಿಡಿಸಿ ಮದ್ಯಾಹ್ನ ನಂತರ ಭೀಮನಕಿಂಡಿ ಅರಣ್ಯ ಪ್ರದೇಶದತ್ತ ಆನೆಯನ್ನು ಹಿಂದುರುಗಿಸಲಾಯಿತು. ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್, ಸಿ.ಅನಿಲ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ನಭಿಲಾಲ್, ಯಲಗೂರೇಶ ಹಕ್ಕಲ್, ರಿಜ್ವಾನ್, ಶ್ರೇಯಂಷು, ಮಹದೇವು ನ್ಯಾಮ್ಗೋಡು, ಸಾಮಾಜಿಕ ಅರಣ್ಯ ಪಾಲಕರಾದ ಪಿ.ಎಂ.ಕೃಷ್ಣ, ಸಿದ್ದಪ್ಪ, ಚಾಲಕ ಬಾಲರಾಜು, ಚೇತನ್, ಪೊಲೀಸ್ ಸಿಬ್ಬಂದಿ ಮೋಹನ್, ಶ್ರೀಕಾಂತ್ ಹಿರೇಹೊಳೆ, ಚನ್ನಪಟ್ಟಣ ಆನೆ ಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಚಿತ್ರ28hgr1 ಕಾಡಾನೆ ದಾಳಿಗೆ ಇಲಾತಿ ಹಸು ಮೃತಪಟ್ಟಿರುವುದು. 28hgr, 2 ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 28hgr3 ಬಾಳೆಹೊನ್ನಿಗ ಸಮೀಪ ಒಂಟಿ ಸಲಗ ಬಯಲು ಪ್ರದೇಶದಲ್ಲಿ ಇರುವುದು. 28hgr4 ಗುಂಡಾಪುರ ಮತ್ತು ನಂದಿಪುರ ಗ್ರಾಮಗಳ ಮಧ್ಯೆ ಇರುವ ಮೊಗೊಕೆರೆಯಲ್ಲಿ ನೀರು ಕುಡಿದು ಸ್ನಾನ ಮಾಡುತ್ತಿರುವ ಒಂಟಿ ಕಾಡಾನೆ. 28hgr5 ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಚಿತ್ರ.
    1
    ಬಾಳೆಹೊನ್ನಿಗ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಹಸು ಸಾವು ಮತ್ತೊಂದು ಕಡೆ ಕೂಲಿಕಾರನ ಮೇಲೆ ದಾಳಿ ಕಾಲು ಮುರಿತ ಗ್ರಾಮಸ್ಥರಲ್ಲಿ ಆತಂಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಮುನ್ನೆಚ್ಚರಿಕೆ ಕ್ರಮ
ಒಂಟಿ ಸಲಗದ ಪುಂಡಾಟಕ್ಕೆ ಇಲಾತಿ ಹಸು ಸಾವು, ರೈತನಿಗೆ ಕಾಲುಮುರಿತ.
ಹಲಗೂರು:- ಭೀಮನ ಕಿಂಡಿ, ಕಬ್ಬಾಳು ಅರಣ್ಯ ಪ್ರದೇಶದಿಂದ ಗುರುವಾರ ತಡರಾತ್ರಿ ಐದು ಕಾಡಾನೆಗಳು ಆಹಾರ ಹುಡುಕಿಕೊಂಡು ಬಂದು ಅದರಲ್ಲಿ ಮೂರು ಕಾಡಾನೆಗಳು ಮತ್ತೆ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹೊರಟು ಹೋದರೆ ಮತ್ತೆ ಎರಡು ಆನೆಗಳು ಗುಂಡಾಪುರ ಮತ್ತು ನಂದಿಪುರ ರಸ್ತೆಗಳ ಬಯಲಿನಲ್ಲಿ ಓಡಾಡಿ ನಂತರ ಒಂದು ಕಾಡಾನೆ ಬಸನ ಬೆಟ್ಟಕ್ಕೆ ಹೋದರೆ ಮತ್ತೊಂದು ಒಂಟಿ ಸಲಗ ಮತ್ತೆ ಕಬ್ಬಾಳು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗುವ ದಾರಿ ಮಧ್ಯೆ ಸಿಗುವ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜಶೇಖರ ಎಂಬುವರಿಗೆ ಸೇರಿದ ಇಲಾತಿ ಹಸುವನ್ನು ಸೊಂಡಲಿಂದ ಹೊಡೆದು ಒಗೆದು ಸಾಯಿಸಿರುತ್ತದೆ. ನಂತರ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಳ್ಳಾಡಿ ಜೋಗಯ್ಯ ಅವರಿಗೆ ಆನೆ ತುಳಿದಿದ್ದು, ಆತನ ಕಾಲಿನ ಮೂಳೆ ಮುರಿದಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಹಲಗೂರು ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಜರುಗಿರುತ್ತದೆ.
ಕಾಡಾನೆ ಬಂದಿರೋ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಧ್ವನಿ ವರ್ಧಕ ಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದರ ಮುಖಾಂತರ ಮುಂದೆ ಆಗುವ ಅಪಾಯವನ್ನು ತಪ್ಪಿಸು ನಿಟ್ಟಿನಲ್ಲಿ ಮುಂದಾದರು. ಆದರೂ ಸಹ ಒಂಟಿ ಸಲಗ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಗ್ರಾಮದ ಕುಳ್ಳಾಡಿ ಜೋಗಯ್ಯ ಅವರಿಗೆ  ತುಳಿದಿದ್ದು ಕಾಲಿನ ಮೂಳೆ ಮುರಿದಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಗಾಯಗೊಂಡವನನ್ನು ಅರಣ್ಯ ಇಲಾಖೆಯ ಆರ್ ಎಫ್ ಪ್ರಮೋದ್ ಮತ್ತು ಸಿಬ್ಬಂದಿ ತಕ್ಷಣ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.
ಇಲಾತಿ ಹಸುವನ್ನು
ಕಳೆದುಕೊಂಡ ಅದರ ಮಾಲೀಕರಾದ
ರಾಜಶೇಖರ್ ಎಂಬವರು ಮಾತನಾಡಿ, ನಮ್ಮ  ತೋಟದ ರೇಷ್ಮೆ ಹುಳು ಸಾಕಾಣಿಕೆಯ ಮನೆಯ ಮುಂಭಾಗ ತೆಂಗಿನ ಮರಕ್ಕೆ ಕಟ್ಟಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಳೆಬಾಳುವ ಇಲಾತಿಹಸುವನ್ನು ಕಾಡಾನೆ ದಾಳಿ ಮಾಡಿದ್ದರಿಂದ ಮೃತಪಟ್ಟಿರುತ್ತದೆ. ಇದರಿಂದ ನನಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ್ದು,
ನಾವು ವ್ಯವಸಾಯ ಮಾಡಿಕೊಂಡು ಹಾಗೂ ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕಾಡಾನೆಗಳಿಂದ ನಮಗೆ ರಕ್ಷಣೆ ನೀಡಬೇಕು. ಹಾಗೂ ಸಂಬಂಧಪಟ್ಟ ಅಧಿಕಾರಿಗಳು
ಸೂಕ್ತ ಪರಿಹಾರ ನೀಡಬೇಕು ಎಂದು  ಮನವಿ ಮಾಡಿದ್ದಾರೆ.
ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಎಂಬುವರು ಮಾತನಾಡಿ, ಇತ್ತೀಚೆಗೆ ಕಾಡಾನೆಗಳ ಪುಂಡಾಟ ಜಾಸ್ತಿಯಾಗಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ  ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ  ಕಾರ್ಯನಿರ್ವಹಿಸಬೇಕಾಗಿದೆ.  ನಮ್ಮ ಕ್ಷೇತ್ರದ ಶಾಸಕರು ಹಾಗೂ ಕೃಷಿ ಸಚಿವರು ಆದ ಪಿ.ಎಂ. ನರೇಂದ್ರಸ್ವಾಮಿ ಅವರು ರೈತರ ಬಗ್ಗೆ ಹಾಗೂ ಅವರು ಬೆಳೆಯುವ ಫಸಲಿನ ಬಗ್ಗೆ ಇಲ್ಲಿ ಸಿಗುವ ಆದಾಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವುದರಿಂದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ,ಅವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿಎಸ್ಐ ಲೋಕೇಶ್ ಮತ್ತು ಸಿಬ್ಬಂದಿಯ ಸಹಕಾರ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ  ಪಟಾಕಿ ಮದ್ದು ಸಿಡಿಸಿ ಮದ್ಯಾಹ್ನ ನಂತರ ಭೀಮನಕಿಂಡಿ ಅರಣ್ಯ ಪ್ರದೇಶದತ್ತ ಆನೆಯನ್ನು ಹಿಂದುರುಗಿಸಲಾಯಿತು.
ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್, ಸಿ.ಅನಿಲ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ನಭಿಲಾಲ್, ಯಲಗೂರೇಶ ಹಕ್ಕಲ್, ರಿಜ್ವಾನ್, ಶ್ರೇಯಂಷು, ಮಹದೇವು ನ್ಯಾಮ್ಗೋಡು, ಸಾಮಾಜಿಕ ಅರಣ್ಯ ಪಾಲಕರಾದ ಪಿ.ಎಂ.ಕೃಷ್ಣ, ಸಿದ್ದಪ್ಪ, ಚಾಲಕ ಬಾಲರಾಜು, ಚೇತನ್, ಪೊಲೀಸ್ ಸಿಬ್ಬಂದಿ ಮೋಹನ್, ಶ್ರೀಕಾಂತ್ ಹಿರೇಹೊಳೆ, ಚನ್ನಪಟ್ಟಣ ಆನೆ ಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿತ್ರ28hgr1 ಕಾಡಾನೆ ದಾಳಿಗೆ ಇಲಾತಿ ಹಸು ಮೃತಪಟ್ಟಿರುವುದು.
28hgr, 2 ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
28hgr3 ಬಾಳೆಹೊನ್ನಿಗ ಸಮೀಪ ಒಂಟಿ ಸಲಗ ಬಯಲು ಪ್ರದೇಶದಲ್ಲಿ ಇರುವುದು.
28hgr4 ಗುಂಡಾಪುರ ಮತ್ತು ನಂದಿಪುರ ಗ್ರಾಮಗಳ ಮಧ್ಯೆ ಇರುವ ಮೊಗೊಕೆರೆಯಲ್ಲಿ ನೀರು ಕುಡಿದು ಸ್ನಾನ ಮಾಡುತ್ತಿರುವ ಒಂಟಿ ಕಾಡಾನೆ.
28hgr5 ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಚಿತ್ರ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    37 min ago
  • ಗುಂಡ್ಲುಪೇಟೆ: ಪಾಳುಬಿದ್ದ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನಕ್ಕೆ ನೀಡಲು ಮನವಿ. ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೈಸೂರು–ಊಟಿ ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಪಕ್ಕದ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳುಬಿದ್ದಿರುವ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನವಾಗಿ ಬಳಸಲು ಅವಕಾಶ ನೀಡುವಂತೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ. ಗುರುವಾರ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಅವರು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಅವರಿಗೆ ಮನವಿ ಸಲ್ಲಿಸಿದರು. ಬಳಕೆಯಾಗದೆ ಇರುವ ಕಟ್ಟಡದ ಸುತ್ತಮುತ್ತ ಮದ್ಯಪಾನ ಹಾಗೂ ಮೂತ್ರವಿಸರ್ಜನೆಯಿಂದ ಅಶುಚಿತ್ವ ಉಂಟಾಗಿದೆ. ಪಟ್ಟಣದಲ್ಲಿ ಕನ್ನಡಭವನ ಇಲ್ಲದ ಕಾರಣ ಕಟ್ಟಡವನ್ನು ಕನ್ನಡಪರ ಸಂಘಟನೆಗಳ ಸಭೆ–ಸಮಾರಂಭಗಳಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಸ್. ಸರವಣ ಅವರು ಕಟ್ಟಡದ ಸುತ್ತಮುತ್ತ ಶೀಘ್ರ ಸ್ವಚ್ಛತೆ ಕೈಗೊಂಡು, ಕನ್ನಡಭವನಕ್ಕೆ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಚಾಲಕ ಮಿಮಿಕ್ರಿ ರಾಜು ಉಪಸ್ಥಿತರಿದ್ದರು.
    3
    ಗುಂಡ್ಲುಪೇಟೆ: ಪಾಳುಬಿದ್ದ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನಕ್ಕೆ ನೀಡಲು ಮನವಿ.
ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೈಸೂರು–ಊಟಿ ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಪಕ್ಕದ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳುಬಿದ್ದಿರುವ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನವಾಗಿ ಬಳಸಲು ಅವಕಾಶ ನೀಡುವಂತೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ.
ಗುರುವಾರ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಅವರು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಅವರಿಗೆ ಮನವಿ ಸಲ್ಲಿಸಿದರು.
ಬಳಕೆಯಾಗದೆ ಇರುವ ಕಟ್ಟಡದ ಸುತ್ತಮುತ್ತ ಮದ್ಯಪಾನ ಹಾಗೂ ಮೂತ್ರವಿಸರ್ಜನೆಯಿಂದ ಅಶುಚಿತ್ವ ಉಂಟಾಗಿದೆ. ಪಟ್ಟಣದಲ್ಲಿ ಕನ್ನಡಭವನ ಇಲ್ಲದ ಕಾರಣ ಕಟ್ಟಡವನ್ನು ಕನ್ನಡಪರ ಸಂಘಟನೆಗಳ ಸಭೆ–ಸಮಾರಂಭಗಳಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಸ್. ಸರವಣ ಅವರು ಕಟ್ಟಡದ ಸುತ್ತಮುತ್ತ ಶೀಘ್ರ ಸ್ವಚ್ಛತೆ ಕೈಗೊಂಡು, ಕನ್ನಡಭವನಕ್ಕೆ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಚಾಲಕ ಮಿಮಿಕ್ರಿ ರಾಜು ಉಪಸ್ಥಿತರಿದ್ದರು.
    user_Tara Nagendra
    Tara Nagendra
    Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.