ಬಾಳೆಹೊನ್ನಿಗ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಹಸು ಸಾವು ಮತ್ತೊಂದು ಕಡೆ ಕೂಲಿಕಾರನ ಮೇಲೆ ದಾಳಿ ಕಾಲು ಮುರಿತ ಗ್ರಾಮಸ್ಥರಲ್ಲಿ ಆತಂಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಮುನ್ನೆಚ್ಚರಿಕೆ ಕ್ರಮ ಒಂಟಿ ಸಲಗದ ಪುಂಡಾಟಕ್ಕೆ ಇಲಾತಿ ಹಸು ಸಾವು, ರೈತನಿಗೆ ಕಾಲುಮುರಿತ. ಹಲಗೂರು:- ಭೀಮನ ಕಿಂಡಿ, ಕಬ್ಬಾಳು ಅರಣ್ಯ ಪ್ರದೇಶದಿಂದ ಗುರುವಾರ ತಡರಾತ್ರಿ ಐದು ಕಾಡಾನೆಗಳು ಆಹಾರ ಹುಡುಕಿಕೊಂಡು ಬಂದು ಅದರಲ್ಲಿ ಮೂರು ಕಾಡಾನೆಗಳು ಮತ್ತೆ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹೊರಟು ಹೋದರೆ ಮತ್ತೆ ಎರಡು ಆನೆಗಳು ಗುಂಡಾಪುರ ಮತ್ತು ನಂದಿಪುರ ರಸ್ತೆಗಳ ಬಯಲಿನಲ್ಲಿ ಓಡಾಡಿ ನಂತರ ಒಂದು ಕಾಡಾನೆ ಬಸನ ಬೆಟ್ಟಕ್ಕೆ ಹೋದರೆ ಮತ್ತೊಂದು ಒಂಟಿ ಸಲಗ ಮತ್ತೆ ಕಬ್ಬಾಳು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗುವ ದಾರಿ ಮಧ್ಯೆ ಸಿಗುವ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜಶೇಖರ ಎಂಬುವರಿಗೆ ಸೇರಿದ ಇಲಾತಿ ಹಸುವನ್ನು ಸೊಂಡಲಿಂದ ಹೊಡೆದು ಒಗೆದು ಸಾಯಿಸಿರುತ್ತದೆ. ನಂತರ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಳ್ಳಾಡಿ ಜೋಗಯ್ಯ ಅವರಿಗೆ ಆನೆ ತುಳಿದಿದ್ದು, ಆತನ ಕಾಲಿನ ಮೂಳೆ ಮುರಿದಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಹಲಗೂರು ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಜರುಗಿರುತ್ತದೆ. ಕಾಡಾನೆ ಬಂದಿರೋ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಧ್ವನಿ ವರ್ಧಕ ಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದರ ಮುಖಾಂತರ ಮುಂದೆ ಆಗುವ ಅಪಾಯವನ್ನು ತಪ್ಪಿಸು ನಿಟ್ಟಿನಲ್ಲಿ ಮುಂದಾದರು. ಆದರೂ ಸಹ ಒಂಟಿ ಸಲಗ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಗ್ರಾಮದ ಕುಳ್ಳಾಡಿ ಜೋಗಯ್ಯ ಅವರಿಗೆ ತುಳಿದಿದ್ದು ಕಾಲಿನ ಮೂಳೆ ಮುರಿದಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಗಾಯಗೊಂಡವನನ್ನು ಅರಣ್ಯ ಇಲಾಖೆಯ ಆರ್ ಎಫ್ ಪ್ರಮೋದ್ ಮತ್ತು ಸಿಬ್ಬಂದಿ ತಕ್ಷಣ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಇಲಾತಿ ಹಸುವನ್ನು ಕಳೆದುಕೊಂಡ ಅದರ ಮಾಲೀಕರಾದ ರಾಜಶೇಖರ್ ಎಂಬವರು ಮಾತನಾಡಿ, ನಮ್ಮ ತೋಟದ ರೇಷ್ಮೆ ಹುಳು ಸಾಕಾಣಿಕೆಯ ಮನೆಯ ಮುಂಭಾಗ ತೆಂಗಿನ ಮರಕ್ಕೆ ಕಟ್ಟಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಳೆಬಾಳುವ ಇಲಾತಿಹಸುವನ್ನು ಕಾಡಾನೆ ದಾಳಿ ಮಾಡಿದ್ದರಿಂದ ಮೃತಪಟ್ಟಿರುತ್ತದೆ. ಇದರಿಂದ ನನಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ್ದು, ನಾವು ವ್ಯವಸಾಯ ಮಾಡಿಕೊಂಡು ಹಾಗೂ ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕಾಡಾನೆಗಳಿಂದ ನಮಗೆ ರಕ್ಷಣೆ ನೀಡಬೇಕು. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಎಂಬುವರು ಮಾತನಾಡಿ, ಇತ್ತೀಚೆಗೆ ಕಾಡಾನೆಗಳ ಪುಂಡಾಟ ಜಾಸ್ತಿಯಾಗಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಮ್ಮ ಕ್ಷೇತ್ರದ ಶಾಸಕರು ಹಾಗೂ ಕೃಷಿ ಸಚಿವರು ಆದ ಪಿ.ಎಂ. ನರೇಂದ್ರಸ್ವಾಮಿ ಅವರು ರೈತರ ಬಗ್ಗೆ ಹಾಗೂ ಅವರು ಬೆಳೆಯುವ ಫಸಲಿನ ಬಗ್ಗೆ ಇಲ್ಲಿ ಸಿಗುವ ಆದಾಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವುದರಿಂದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ,ಅವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿಎಸ್ಐ ಲೋಕೇಶ್ ಮತ್ತು ಸಿಬ್ಬಂದಿಯ ಸಹಕಾರ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಪಟಾಕಿ ಮದ್ದು ಸಿಡಿಸಿ ಮದ್ಯಾಹ್ನ ನಂತರ ಭೀಮನಕಿಂಡಿ ಅರಣ್ಯ ಪ್ರದೇಶದತ್ತ ಆನೆಯನ್ನು ಹಿಂದುರುಗಿಸಲಾಯಿತು. ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್, ಸಿ.ಅನಿಲ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ನಭಿಲಾಲ್, ಯಲಗೂರೇಶ ಹಕ್ಕಲ್, ರಿಜ್ವಾನ್, ಶ್ರೇಯಂಷು, ಮಹದೇವು ನ್ಯಾಮ್ಗೋಡು, ಸಾಮಾಜಿಕ ಅರಣ್ಯ ಪಾಲಕರಾದ ಪಿ.ಎಂ.ಕೃಷ್ಣ, ಸಿದ್ದಪ್ಪ, ಚಾಲಕ ಬಾಲರಾಜು, ಚೇತನ್, ಪೊಲೀಸ್ ಸಿಬ್ಬಂದಿ ಮೋಹನ್, ಶ್ರೀಕಾಂತ್ ಹಿರೇಹೊಳೆ, ಚನ್ನಪಟ್ಟಣ ಆನೆ ಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಚಿತ್ರ28hgr1 ಕಾಡಾನೆ ದಾಳಿಗೆ ಇಲಾತಿ ಹಸು ಮೃತಪಟ್ಟಿರುವುದು. 28hgr, 2 ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 28hgr3 ಬಾಳೆಹೊನ್ನಿಗ ಸಮೀಪ ಒಂಟಿ ಸಲಗ ಬಯಲು ಪ್ರದೇಶದಲ್ಲಿ ಇರುವುದು. 28hgr4 ಗುಂಡಾಪುರ ಮತ್ತು ನಂದಿಪುರ ಗ್ರಾಮಗಳ ಮಧ್ಯೆ ಇರುವ ಮೊಗೊಕೆರೆಯಲ್ಲಿ ನೀರು ಕುಡಿದು ಸ್ನಾನ ಮಾಡುತ್ತಿರುವ ಒಂಟಿ ಕಾಡಾನೆ. 28hgr5 ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಚಿತ್ರ.

- ಬಾಳೆಹೊನ್ನಿಗ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಹಸು ಸಾವು ಮತ್ತೊಂದು ಕಡೆ ಕೂಲಿಕಾರನ ಮೇಲೆ ದಾಳಿ ಕಾಲು ಮುರಿತ ಗ್ರಾಮಸ್ಥರಲ್ಲಿ ಆತಂಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಮುನ್ನೆಚ್ಚರಿಕೆ ಕ್ರಮ ಒಂಟಿ ಸಲಗದ ಪುಂಡಾಟಕ್ಕೆ ಇಲಾತಿ ಹಸು ಸಾವು, ರೈತನಿಗೆ ಕಾಲುಮುರಿತ. ಹಲಗೂರು:- ಭೀಮನ ಕಿಂಡಿ, ಕಬ್ಬಾಳು ಅರಣ್ಯ ಪ್ರದೇಶದಿಂದ ಗುರುವಾರ ತಡರಾತ್ರಿ ಐದು ಕಾಡಾನೆಗಳು ಆಹಾರ ಹುಡುಕಿಕೊಂಡು ಬಂದು ಅದರಲ್ಲಿ ಮೂರು ಕಾಡಾನೆಗಳು ಮತ್ತೆ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹೊರಟು ಹೋದರೆ ಮತ್ತೆ ಎರಡು ಆನೆಗಳು ಗುಂಡಾಪುರ ಮತ್ತು ನಂದಿಪುರ ರಸ್ತೆಗಳ ಬಯಲಿನಲ್ಲಿ ಓಡಾಡಿ ನಂತರ ಒಂದು ಕಾಡಾನೆ ಬಸನ ಬೆಟ್ಟಕ್ಕೆ ಹೋದರೆ ಮತ್ತೊಂದು ಒಂಟಿ ಸಲಗ ಮತ್ತೆ ಕಬ್ಬಾಳು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗುವ ದಾರಿ ಮಧ್ಯೆ ಸಿಗುವ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜಶೇಖರ ಎಂಬುವರಿಗೆ ಸೇರಿದ ಇಲಾತಿ ಹಸುವನ್ನು ಸೊಂಡಲಿಂದ ಹೊಡೆದು ಒಗೆದು ಸಾಯಿಸಿರುತ್ತದೆ. ನಂತರ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಳ್ಳಾಡಿ ಜೋಗಯ್ಯ ಅವರಿಗೆ ಆನೆ ತುಳಿದಿದ್ದು, ಆತನ ಕಾಲಿನ ಮೂಳೆ ಮುರಿದಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಹಲಗೂರು ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಜರುಗಿರುತ್ತದೆ. ಕಾಡಾನೆ ಬಂದಿರೋ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಧ್ವನಿ ವರ್ಧಕ ಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದರ ಮುಖಾಂತರ ಮುಂದೆ ಆಗುವ ಅಪಾಯವನ್ನು ತಪ್ಪಿಸು ನಿಟ್ಟಿನಲ್ಲಿ ಮುಂದಾದರು. ಆದರೂ ಸಹ ಒಂಟಿ ಸಲಗ ಎಲೆ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಗ್ರಾಮದ ಕುಳ್ಳಾಡಿ ಜೋಗಯ್ಯ ಅವರಿಗೆ ತುಳಿದಿದ್ದು ಕಾಲಿನ ಮೂಳೆ ಮುರಿದಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಗಾಯಗೊಂಡವನನ್ನು ಅರಣ್ಯ ಇಲಾಖೆಯ ಆರ್ ಎಫ್ ಪ್ರಮೋದ್ ಮತ್ತು ಸಿಬ್ಬಂದಿ ತಕ್ಷಣ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಇಲಾತಿ ಹಸುವನ್ನು ಕಳೆದುಕೊಂಡ ಅದರ ಮಾಲೀಕರಾದ ರಾಜಶೇಖರ್ ಎಂಬವರು ಮಾತನಾಡಿ, ನಮ್ಮ ತೋಟದ ರೇಷ್ಮೆ ಹುಳು ಸಾಕಾಣಿಕೆಯ ಮನೆಯ ಮುಂಭಾಗ ತೆಂಗಿನ ಮರಕ್ಕೆ ಕಟ್ಟಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಳೆಬಾಳುವ ಇಲಾತಿಹಸುವನ್ನು ಕಾಡಾನೆ ದಾಳಿ ಮಾಡಿದ್ದರಿಂದ ಮೃತಪಟ್ಟಿರುತ್ತದೆ. ಇದರಿಂದ ನನಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ್ದು, ನಾವು ವ್ಯವಸಾಯ ಮಾಡಿಕೊಂಡು ಹಾಗೂ ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕಾಡಾನೆಗಳಿಂದ ನಮಗೆ ರಕ್ಷಣೆ ನೀಡಬೇಕು. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಎಂಬುವರು ಮಾತನಾಡಿ, ಇತ್ತೀಚೆಗೆ ಕಾಡಾನೆಗಳ ಪುಂಡಾಟ ಜಾಸ್ತಿಯಾಗಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಮ್ಮ ಕ್ಷೇತ್ರದ ಶಾಸಕರು ಹಾಗೂ ಕೃಷಿ ಸಚಿವರು ಆದ ಪಿ.ಎಂ. ನರೇಂದ್ರಸ್ವಾಮಿ ಅವರು ರೈತರ ಬಗ್ಗೆ ಹಾಗೂ ಅವರು ಬೆಳೆಯುವ ಫಸಲಿನ ಬಗ್ಗೆ ಇಲ್ಲಿ ಸಿಗುವ ಆದಾಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವುದರಿಂದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ,ಅವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿಎಸ್ಐ ಲೋಕೇಶ್ ಮತ್ತು ಸಿಬ್ಬಂದಿಯ ಸಹಕಾರ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಪಟಾಕಿ ಮದ್ದು ಸಿಡಿಸಿ ಮದ್ಯಾಹ್ನ ನಂತರ ಭೀಮನಕಿಂಡಿ ಅರಣ್ಯ ಪ್ರದೇಶದತ್ತ ಆನೆಯನ್ನು ಹಿಂದುರುಗಿಸಲಾಯಿತು. ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್, ಸಿ.ಅನಿಲ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ನಭಿಲಾಲ್, ಯಲಗೂರೇಶ ಹಕ್ಕಲ್, ರಿಜ್ವಾನ್, ಶ್ರೇಯಂಷು, ಮಹದೇವು ನ್ಯಾಮ್ಗೋಡು, ಸಾಮಾಜಿಕ ಅರಣ್ಯ ಪಾಲಕರಾದ ಪಿ.ಎಂ.ಕೃಷ್ಣ, ಸಿದ್ದಪ್ಪ, ಚಾಲಕ ಬಾಲರಾಜು, ಚೇತನ್, ಪೊಲೀಸ್ ಸಿಬ್ಬಂದಿ ಮೋಹನ್, ಶ್ರೀಕಾಂತ್ ಹಿರೇಹೊಳೆ, ಚನ್ನಪಟ್ಟಣ ಆನೆ ಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಚಿತ್ರ28hgr1 ಕಾಡಾನೆ ದಾಳಿಗೆ ಇಲಾತಿ ಹಸು ಮೃತಪಟ್ಟಿರುವುದು. 28hgr, 2 ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 28hgr3 ಬಾಳೆಹೊನ್ನಿಗ ಸಮೀಪ ಒಂಟಿ ಸಲಗ ಬಯಲು ಪ್ರದೇಶದಲ್ಲಿ ಇರುವುದು. 28hgr4 ಗುಂಡಾಪುರ ಮತ್ತು ನಂದಿಪುರ ಗ್ರಾಮಗಳ ಮಧ್ಯೆ ಇರುವ ಮೊಗೊಕೆರೆಯಲ್ಲಿ ನೀರು ಕುಡಿದು ಸ್ನಾನ ಮಾಡುತ್ತಿರುವ ಒಂಟಿ ಕಾಡಾನೆ. 28hgr5 ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಚಿತ್ರ.1
- ಮಳವಳ್ಳಿ ತಾಲೂಕು ನಲ್ಲಿ ಅಕ್ರಮ ಮಣ್ಣು ದಂದೆ ಮಳವಳ್ಳಿ : ಮಳವಳ್ಳಿ ತಾಲೂಕಿನಲ್ಲಿ ಮಣ್ಣಿನ ದಂಧೆ ಅಕ್ರಮವಾಗಿ ನಡೆಯುತ್ತಿದ್ದು ಕೆಲ ಗ್ರಾಮಗಳಲ್ಲಿ ಅವೇರಳ್ಳಿ ಹೆಬ್ಬಣಿ ಮುಂತಾದ ಗ್ರಾಮಗಳಲ್ಲಿ ಮಣ್ಣಿನ ದಂಧೆ ಸಾಗುತ್ತಿದೆ ಇದಕ್ಕೆ ಗ್ರಾಮಸ್ಥರ ಆಕ್ರೋಶ ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸೂಕ್ತವಾದ ಕಾನೂನಿ ಕ್ರಮವನ್ನು ಜರಗಿಸಬೇಕು ಎಂದು ತಹಸಿಲ್ದಾರ್ ಜಿಲ್ಲಾ ಕಚೇರಿ ನಲ್ಲಿ ಮನವಿ ಮಾಡಲು ತೀರ್ಮಾನಿಸಿದ್ದಾರೆ1
- ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.1
- ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ1
- ಹನೂರು: ತಾಲೂಕಿನ ಪೊನ್ನಾಚ್ಚಿ ಸಮೀಪದ ಮರೂರು ಗ್ರಾಮದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ವರದಿಯಾಗಿದೆ. ಮರೂರು ಗ್ರಾಮದ ಅಕ್ಕಯ್ಯ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಗ್ರಾಮದ ನಾಗೇಶ್ ಅವರ ಮನೆಯಿಂದ ಬೆಳ್ಳಿಯ ಕೈ ಕಡಗ, ಕಾಲು ಚೈನ್ ಹಾಗೂ ಚಿನ್ನದ ಕಿವಿ ಮತ್ತು ಮೂಗಿನ ಆಭರಣಗಳು, ಜುಮಿಕಿ, ಓಲೆ ಸೇರಿದಂತೆ ಆಭರಣಗಳು ಕಳವಾಗಿವೆ ಎಂದು ತಿಳಿದುಬಂದಿದೆ. ಇನ್ನು ಶಿವಣ್ಣ ಅವರ ಮನೆಯಿಂದ ಸುಮಾರು 2.5 ಲಕ್ಷ ನಗದು ಕಳವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಬ್ಬಾಳಮ್ಮ ಅವರ ಮನೆಯಿಂದ 2,000 ನಗದು ಹಾಗೂ ಸುಮಾರು 3.50 ಲಕ್ಷ ಮೌಲ್ಯದ ಮಾಂಗಲ್ಯ ಸರ, ತಾಳಿ ಮತ್ತು ತಾಳಿ ಗುಂಡು ಕಳವಾಗಿರುವುದಾಗಿ ತಿಳಿದುಬಂದಿದೆ. ಶಿವಮಾದಮ್ಮ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಹದೇಶ್ವರಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನಕ್ಕೊಳಗಾದ ಮನೆಗಳನ್ನು ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಹನೂರು: ತಾಲೂಕಿನ ಪೊನ್ನಾಚ್ಚಿ ಸಮೀಪದ ಮರೂರು ಗ್ರಾಮದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವುದು ವರದಿಯಾಗಿದೆ. ಮರೂರು ಗ್ರಾಮದ ಅಕ್ಕಯ್ಯ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಗ್ರಾಮದ ನಾಗೇಶ್ ಅವರ ಮನೆಯಿಂದ ಬೆಳ್ಳಿಯ ಕೈ ಕಡಗ, ಕಾಲು ಚೈನ್ ಹಾಗೂ ಚಿನ್ನದ ಕಿವಿ ಮತ್ತು ಮೂಗಿನ ಆಭರಣಗಳು, ಜುಮಿಕಿ, ಓಲೆ ಸೇರಿದಂತೆ ಆಭರಣಗಳು ಕಳವಾಗಿವೆ ಎಂದು ತಿಳಿದುಬಂದಿದೆ. ಇನ್ನು ಶಿವಣ್ಣ ಅವರ ಮನೆಯಿಂದ ಸುಮಾರು 2.5 ಲಕ್ಷ ನಗದು ಕಳವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಬ್ಬಾಳಮ್ಮ ಅವರ ಮನೆಯಿಂದ 2,000 ನಗದು ಹಾಗೂ ಸುಮಾರು 3.50 ಲಕ್ಷ ಮೌಲ್ಯದ ಮಾಂಗಲ್ಯ ಸರ, ತಾಳಿ ಮತ್ತು ತಾಳಿ ಗುಂಡು ಕಳವಾಗಿರುವುದಾಗಿ ತಿಳಿದುಬಂದಿದೆ. ಶಿವಮಾದಮ್ಮ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಹದೇಶ್ವರಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನಕ್ಕೊಳಗಾದ ಮನೆಗಳನ್ನು ಪರಿಶೀಲಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.2
- ಹನೂರಿನಲ್ಲಿ ತಾಲೂಕು ಆಡಳಿತದಿಂದ ನುಲಿಯ ಚಂದಯ್ಯ ಜಯಂತಿ ಆಚರಣೆ: ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ಹನೂರು: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶರಣ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ನಂತರ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಶರಣರ ತತ್ವಾದರ್ಶಗಳು ಮತ್ತು ಕಾಯಕ ನಿಷ್ಠೆ ಸಮಾಜಕ್ಕೆ ಸದಾ ಪ್ರೇರಣಾದಾಯಕ ಎಂದು ನುಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ, ಸಮುದಾಯದ ರಾಜ್ಯಾಧ್ಯಕ್ಷ ಪಂಚಾಕ್ಷರಿ, ತಾಲೂಕು ಅಧ್ಯಕ್ಷ ಮಾದೇಶ್ ಹಾಗೂ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು. ಅಲ್ಲದೆ, ಅನುಷ್ಠಾನ ಸಮಿತಿ ಸದಸ್ಯೆ ರಾಣಿ, ಉಪಾಧ್ಯಕ್ಷರಾದ ರಾಜು, ಶಾಂತರಾಜು, ರಾಮಚಂದ್ರ, ಶಿವಕುಮಾರ್, ರಾಮು ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.4
- ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...1
- ಒಂಟಿಸಲಗನ ಪುಂಡಾಟ: ಹಸು ಬಲಿ , ರೈತನಿಗೆ ತೀವ್ರಗಾಯ ಆಸ್ಪತ್ರೆಗೆ ದಾಖಲು ಮಳವಳ್ಳಿ: ಒಂಟಿ ಸಲಗದ ಪುಂಡಾಟಕ್ಕೆ ಒಂದು ಹಸು ಬಲಿಯಾಗಿ ರೈತನಿಗೆ ಕಾಲು ಮುರಿತಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಬಳಿ ನಡೆದಿದೆ. ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ರಾಜಶೇಖರರವರಿಗೆ ಸೇರಿದ ಹಸುವೇ ಸಾವನ್ನಪ್ಪಿದ್ದು , ಇದಲ್ಲದೇ ಎಲೆತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಳ್ಳಾಡಿ ಜೋಗಯ್ಯ ಎಂಬುವರ ಮೇಲೆ ದಾಳಿ ಮಾಡಿ ಕಾಲು ಮುರಿತಗೊಂಡಿದೆ. ಗಾಯಗೊಂಡ ವ್ಯಕ್ತಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿಗಳು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಆಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಹಲಗೂರು ಪೊಲೀಸರು ಕಾಡಾನೆಯನ್ನು ಬೀಮನಕಿಂಡಿ ಅರಣ್ಯ ಪ್ರದೇಶಕ್ಕೆ ಓಡಿಸಲು ಹರಸಾಹಸ ಪಟ್ಟರು ಎನ್ನಲಾಗಿದೆ.1