ಹನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾತೃ ಶ್ರೀ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು. ತಾಲೂಕಿನ ಕಣ್ಣೂರು ಗ್ರಾಮದ ಕಮಲಮ್ಮ ಹಾಗೂ ಪಾಳ್ಯದ ಮಸಣಮ್ಮ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ನಂತರ ಅವರು ಮಾತನಾಡಿದರು. ಧರ್ಮಸ್ಥಳದ ಮಾತೃಶ್ರೀ ಅಮ್ಮನವರ ಕೃಪಾ ಆಶೀರ್ವಾದದಿಂದ ಮನೆ ಇಲ್ಲದಂತಹ ಕುಟುಂಬಸ್ಥರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನೂತನವಾಗಿ ಮನೆಯನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಅದರಂತೆ ಕಣ್ಣೂರು ಗ್ರಾಮದ ಕೃಷ್ಣಮ್ಮ ಅವರಿಗೆ ಇಂದು ನೂತನ ಮನೆಯನ್ನು ಹಸ್ತಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಗವಂತ ಇವರಿಗೆ ಒಳ್ಳೆಯದನ್ನೇ ಬಯಸಲಿ ಎಂದು ಹರಸಿದರು. ಹನೂರು ತಾಲೂಕು ವೀರಶೈವ ಮಾಜಿ ಅಧ್ಯಕ್ಷ ಕೆ.ಎಂ ಬಸವ ರಾಜಪಪ್ಪ ಮಾತನಾಡಿದರು. ಇದೇ ವೇಳೆಯಲ್ಲಿ ಕಣ್ಣೂರು ಗ್ರಾಮದ ಒಕ್ಕೂಟ ಅಧ್ಯಕ್ಷರು ಜಗದೀಶ್, ಪದಾಧಿಕಾರಿಗಳಾದ ಪ್ರಭುಸ್ವಾಮಿ, ಊರಿನ ಗಣ್ಯರಾದ ನಾಗೇಂದ್ರ ಸ್ವಾಮಿ, ಯೋಗೇಶ್ ಮಾದೇಶ್, ವಸಂತಮ್ಮ, ಚೈತ್ರ, ರತ್ತಮ್ಮ, ಹಾಗೂ ವಲಯದ ಮೇಲ್ವಿಚಾರಕರಾದ ಪ್ರದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾನುಪ್ರಿಯ ,ಸೇವಪ್ರತಿನಿಧಿ ಕಲಾವತಿ, ಸುವಿದ ನಂದಿನಿ, ಸ್ಥಳೀಯರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಹನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾತೃ ಶ್ರೀ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು. ತಾಲೂಕಿನ ಕಣ್ಣೂರು ಗ್ರಾಮದ
ಕಮಲಮ್ಮ ಹಾಗೂ ಪಾಳ್ಯದ ಮಸಣಮ್ಮ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ನಂತರ ಅವರು ಮಾತನಾಡಿದರು. ಧರ್ಮಸ್ಥಳದ ಮಾತೃಶ್ರೀ ಅಮ್ಮನವರ ಕೃಪಾ ಆಶೀರ್ವಾದದಿಂದ ಮನೆ ಇಲ್ಲದಂತಹ ಕುಟುಂಬಸ್ಥರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನೂತನವಾಗಿ ಮನೆಯನ್ನು ನಿರ್ಮಾಣ
ಮಾಡಿಕೊಡಲಾಗುತ್ತಿದೆ. ಅದರಂತೆ ಕಣ್ಣೂರು ಗ್ರಾಮದ ಕೃಷ್ಣಮ್ಮ ಅವರಿಗೆ ಇಂದು ನೂತನ ಮನೆಯನ್ನು ಹಸ್ತಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಗವಂತ ಇವರಿಗೆ ಒಳ್ಳೆಯದನ್ನೇ ಬಯಸಲಿ ಎಂದು ಹರಸಿದರು. ಹನೂರು ತಾಲೂಕು ವೀರಶೈವ ಮಾಜಿ ಅಧ್ಯಕ್ಷ ಕೆ.ಎಂ ಬಸವ ರಾಜಪಪ್ಪ ಮಾತನಾಡಿದರು. ಇದೇ ವೇಳೆಯಲ್ಲಿ ಕಣ್ಣೂರು ಗ್ರಾಮದ ಒಕ್ಕೂಟ
ಅಧ್ಯಕ್ಷರು ಜಗದೀಶ್, ಪದಾಧಿಕಾರಿಗಳಾದ ಪ್ರಭುಸ್ವಾಮಿ, ಊರಿನ ಗಣ್ಯರಾದ ನಾಗೇಂದ್ರ ಸ್ವಾಮಿ, ಯೋಗೇಶ್ ಮಾದೇಶ್, ವಸಂತಮ್ಮ, ಚೈತ್ರ, ರತ್ತಮ್ಮ, ಹಾಗೂ ವಲಯದ ಮೇಲ್ವಿಚಾರಕರಾದ ಪ್ರದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾನುಪ್ರಿಯ ,ಸೇವಪ್ರತಿನಿಧಿ ಕಲಾವತಿ, ಸುವಿದ ನಂದಿನಿ, ಸ್ಥಳೀಯರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
- ಪ್ರದೀಪ್ಹನೂರು, ಚಾಮರಾಜನಗರ, ಕರ್ನಾಟಕ🙏🙏💐💐9 hrs ago
- ಮೈಸೂರು ಜಿಲ್ಲೆಯ “ದಕ್ಷಿಣ ಕಾಶಿ” ಎಂಬ ಹೆಗ್ಗಳಿಕೆಯನ್ನು ಪಡೆದ ಪವಿತ್ರ ಕ್ಷೇತ್ರಗಳಲ್ಲಿ ನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯದೊಂದಿಗೆ ತಿ. ನರಸೀಪುರದಲ್ಲಿರುವ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನ ವಿಶೇಷ ಸ್ಥಾನ ಹೊಂದಿದೆ. ಪರಶುರಾಮರಿಂದ ನಿರ್ಮಾಣಗೊಂಡ ನಂಜನಗೂಡು ದೇವಾಲಯದಂತೆ, ಅಗಸ್ತ್ಯ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿದೆ ಎಂಬ ನಂಬಿಕೆ ಇರುವ ಈ ದೇವಸ್ಥಾನವೂ ಭಕ್ತರ ಆಸ್ಥೆಯ ಕೇಂದ್ರವಾಗಿದೆ. ಇಂದು ತಿ. ನರಸೀಪುರದ ತ್ರಿವೇಣಿ ಸಂಗಮ ತಟದಲ್ಲಿರುವ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ರಥೋತ್ಸವವು ಭಕ್ತಿ ಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದ ಬಳಿಕ ದೇವಾಲಯದ ಮುಂಭಾಗದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ರಥ ಎಳೆಯಲು ಅವಕಾಶ ಮಾಡಿಕೊಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ಹರ ಹರ ಮಹಾದೇವ ಘೋಷಣೆಗಳ ನಡುವೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥ ಸಾಗುವ ವೇಳೆ ಭಕ್ತರು ಹಣ್ಣು, ಜವನ ಹಾಗೂ ಪುಷ್ಪಗಳನ್ನು ಅರ್ಪಿಸಿ ಧಾರ್ಮಿಕ ಉತ್ಸಾಹ ಮೆರೆದರು. ಬಿಸಿಲಿನ ತಾಪದ ನಡುವೆಯೂ ಭಕ್ತರ ಸಂಭ್ರಮ ಕಡಿಮೆಯಾಗದೇ ಇದ್ದು, ದಾನಿಗಳಿಂದ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿ ಭಕ್ತರ ದಾಹ ನೀಗಿಸಲಾಯಿತು. ತ್ರಿವೇಣಿ ಸಂಗಮ ತಟದಲ್ಲಿ ನಡೆಯುವ ಈ ಮಹಾ ರಥೋತ್ಸವವು ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಉತ್ಸವವಾಗಿ ಗಮನ ಸೆಳೆಯಿತು.1
- ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಇಂದು ಮಧ್ಯಾಹ್ನ 3:00 ಸಮಯದಲ್ಲಿ ಸರ್ವೇ ನಂಬರ್ 210 ಜಮೀನಿನ ಪಕ್ಕದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ . ರೈತನ ಹೆಸರು ಗೋಪಾಲ ಶೆಟ್ಟಿ ತಿಳಿದುಬಂದಿದೆ, ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ,1
- ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ, ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು. ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು. ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.1
- ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಮೂರನೇ ವಾರ್ಡ್‌ನಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೀಗ ಪರಿಹಾರಗೊಂಡಿದ್ದು, ಗ್ರಾಮಸ್ಥರಲ್ಲಿ ಹರ್ಷ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ನೀರಿನ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆಯರು ಹಾಗೂ ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಮೋಟಾರ್ ದೋಷದ ಕಾರಣದಿಂದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದರೂ, ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡದ ಹಿನ್ನೆಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗೆ ಎಚ್ಚೆತ್ತ ಗ್ರಾಮಪಂಚಾಯಿತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಮೋಟಾರ್ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದರು. ಇದರ ಪರಿಣಾಮವಾಗಿ ಮೂರನೇ ವಾರ್ಡ್‌ಗೆ ಮತ್ತೆ ನೀರಿನ ಸರಬರಾಜು ಆರಂಭವಾಗಿದೆ.1
- Post by Md Aleemulla Shariff1
- EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews1
- ಮಳವಳ್ಳಿ:ಭಾರತೀಯ ಜನತಾ ಪಕ್ಷದ ಮಂಡಳ ಅಧ್ಯಕ್ಷರಾಗಿ ಮಧುಗಂಗಾಧರ್ ಅಧಿಕಾರ ಸ್ವೀಕಾರ • ಸ್ಥಳಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸಮಾಡಿ -ಡಾ.ಇಂದ್ರೇಶ್ ಕರೆ ಮಳವಳ್ಳಿ:ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಮಧು ಗಂಗಾಧರ್ ನಿಕಟಪೂರ್ವ ಅಧ್ಯಕ್ಷ ಕೃಷ್ಣ ರವರಿಂದ ಭಾನುವಾರ ಅಧಿಕಾರ ಸ್ವೀಕರಿಸಿದರು. ಪಟ್ಟಣದ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ವೈಭವ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣರವರಿಂದ ಬಿಜೆಪಿ ಬಾವುಟ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಮುಧು ಗಂಗಾಧರ್ ಭಾವುಟವನ್ನು ಎತ್ತಿ ಹಿಡಿಯುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಪಕ್ಷವನ್ನು ತಳಮಟ್ಟದಿಂದಲೂ ಸಂಘಟಿಸುವುದರೊAದಿಗೆ ಮುಂಬರುವ ಜಿ.ಪಂ ಮತ್ತು ತಾ.ಪಂ ಪುರಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತನೆಂದರು. ಕಾರ್ಯಕ್ರಮದಲ್ಲಿ ಬಾಜಪ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್,ರಾಜ್ಯ ಮುಖಂಡರಾದ ಡಾ.ಸಿದ್ದರಾಮಯ್ಯ,ಅಶೋಕ್‌ಜಯರಾಂ,ಹೆಚ್.ಅರ್.ಅಶೋಕ್‌ಕುಮಾರ್,ಮದ್ದೂರುಸ್ವಾಮಿ, ಸಚ್ಚಿದಾನಂದ,ವೈ.ಎಸ್.ಸಿದ್ದರಾಜು,ದೋರನಹಳ್ಳಿ ಕುಮಾರಸ್ವಾಮಿ ಮಾತನಾಡಿ, ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಎಲ್ಲ ಕಾರ್ಯಕರ್ತರು ಸಣಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು,ಮುಂಬರುವ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಕಾರ್ಯಕರ್ತರು ಕಂಕಣಬದ್ದರಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾ,ಸದಾನಂದ,ನಿತ್ಯಾನAದ,ಮುಖAಡರಾದ ಎನ್.ಕೆ.ಕುಮಾರ್,ಕೆ.ಸಿ ನಾಗೇಗೌಡ,ಚಿಕ್ಕಣ್ಣ,ಅಶೋಕ,ಶಶಿಕುಮಾರ್,ಶಿವಲಿಂಗಸ್ವಾಮಿ,ಕಾAತರಾಜು ಸೇರಿದಂತೆ ನೂರಾರು ಮುಖಂಡರು,ಕಾರ್ಯಕರ್ತರು ಬಾಗವಹಿಸಿದ್ದರು. ಚಿತ್ರ-೩೦-೨ ಪಟ್ಟಣದ ವೈಭವ ಸಭಾಂಗಣದಲ್ಲಿ ನಡೆದ ಬಾಜಪ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಬಾಜಪ ಜಿಲ್ಲಾ ಅಧ್ಯಕ್ಷ ಡಾ.ಇಂದ್ರೇಶ್ ,ರಾಜ್ಯ ಮುಖಂಡ ಡಾ.ಸಿದ್ದರಾಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.1
- ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಬಿಸಾಡಿದ ಪರಿಣಾಮ ಸ್ಥಳ ಗಲೀಜಾಗಿರುವುದು ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರ ಗಮನಕ್ಕೆ ಬಂತು.* *ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹಾಗೂ ಮುಖಂಡರೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.*1