logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದಕ್ಷಿಣ ಕಾಶಿಯಲ್ಲಿ ಅದ್ಧೂರಿಯಾಗಿ ನಡೆದ ಗೌತಮ ಪಂಚ ಮಹಾರಥೋತ್ಸವ; ಹಕೀಂ ನಂಜುಂಡನಿಗೆ ಜಯಘೋಷ ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ, ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು. ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು. ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು‌. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು‌‌. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.

9 hrs ago
user_Mysore update
Mysore update
ನಂಜನಗೂಡು, ಮೈಸೂರು, ಕರ್ನಾಟಕ•
9 hrs ago

ದಕ್ಷಿಣ ಕಾಶಿಯಲ್ಲಿ ಅದ್ಧೂರಿಯಾಗಿ ನಡೆದ ಗೌತಮ ಪಂಚ ಮಹಾರಥೋತ್ಸವ; ಹಕೀಂ ನಂಜುಂಡನಿಗೆ ಜಯಘೋಷ ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ, ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು. ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು. ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು‌. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು‌‌. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.

More news from Mysuru and nearby areas
  • ಮೈಸೂರು ಜಿಲ್ಲೆಯ “ದಕ್ಷಿಣ ಕಾಶಿ” ಎಂಬ ಹೆಗ್ಗಳಿಕೆಯನ್ನು ಪಡೆದ ಪವಿತ್ರ ಕ್ಷೇತ್ರಗಳಲ್ಲಿ ನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯದೊಂದಿಗೆ ತಿ. ನರಸೀಪುರದಲ್ಲಿರುವ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನ ವಿಶೇಷ ಸ್ಥಾನ ಹೊಂದಿದೆ. ಪರಶುರಾಮರಿಂದ ನಿರ್ಮಾಣಗೊಂಡ ನಂಜನಗೂಡು ದೇವಾಲಯದಂತೆ, ಅಗಸ್ತ್ಯ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿದೆ ಎಂಬ ನಂಬಿಕೆ ಇರುವ ಈ ದೇವಸ್ಥಾನವೂ ಭಕ್ತರ ಆಸ್ಥೆಯ ಕೇಂದ್ರವಾಗಿದೆ. ಇಂದು ತಿ. ನರಸೀಪುರದ ತ್ರಿವೇಣಿ ಸಂಗಮ ತಟದಲ್ಲಿರುವ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ರಥೋತ್ಸವವು ಭಕ್ತಿ ಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದ ಬಳಿಕ ದೇವಾಲಯದ ಮುಂಭಾಗದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ರಥ ಎಳೆಯಲು ಅವಕಾಶ ಮಾಡಿಕೊಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ಹರ ಹರ ಮಹಾದೇವ ಘೋಷಣೆಗಳ ನಡುವೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥ ಸಾಗುವ ವೇಳೆ ಭಕ್ತರು ಹಣ್ಣು, ಜವನ ಹಾಗೂ ಪುಷ್ಪಗಳನ್ನು ಅರ್ಪಿಸಿ ಧಾರ್ಮಿಕ ಉತ್ಸಾಹ ಮೆರೆದರು. ಬಿಸಿಲಿನ ತಾಪದ ನಡುವೆಯೂ ಭಕ್ತರ ಸಂಭ್ರಮ ಕಡಿಮೆಯಾಗದೇ ಇದ್ದು, ದಾನಿಗಳಿಂದ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿ ಭಕ್ತರ ದಾಹ ನೀಗಿಸಲಾಯಿತು. ತ್ರಿವೇಣಿ ಸಂಗಮ ತಟದಲ್ಲಿ ನಡೆಯುವ ಈ ಮಹಾ ರಥೋತ್ಸವವು ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಉತ್ಸವವಾಗಿ ಗಮನ ಸೆಳೆಯಿತು.
    1
    ಮೈಸೂರು ಜಿಲ್ಲೆಯ “ದಕ್ಷಿಣ ಕಾಶಿ” ಎಂಬ ಹೆಗ್ಗಳಿಕೆಯನ್ನು ಪಡೆದ ಪವಿತ್ರ ಕ್ಷೇತ್ರಗಳಲ್ಲಿ ನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯದೊಂದಿಗೆ ತಿ. ನರಸೀಪುರದಲ್ಲಿರುವ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನ ವಿಶೇಷ ಸ್ಥಾನ ಹೊಂದಿದೆ. ಪರಶುರಾಮರಿಂದ ನಿರ್ಮಾಣಗೊಂಡ ನಂಜನಗೂಡು ದೇವಾಲಯದಂತೆ, ಅಗಸ್ತ್ಯ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿದೆ ಎಂಬ ನಂಬಿಕೆ ಇರುವ ಈ ದೇವಸ್ಥಾನವೂ ಭಕ್ತರ ಆಸ್ಥೆಯ ಕೇಂದ್ರವಾಗಿದೆ.
ಇಂದು ತಿ. ನರಸೀಪುರದ ತ್ರಿವೇಣಿ ಸಂಗಮ ತಟದಲ್ಲಿರುವ ಮನೋನ್ಮಣಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ರಥೋತ್ಸವವು ಭಕ್ತಿ ಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದ ಬಳಿಕ ದೇವಾಲಯದ ಮುಂಭಾಗದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ರಥ ಎಳೆಯಲು ಅವಕಾಶ ಮಾಡಿಕೊಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ಹರ ಹರ ಮಹಾದೇವ ಘೋಷಣೆಗಳ ನಡುವೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥ ಸಾಗುವ ವೇಳೆ ಭಕ್ತರು ಹಣ್ಣು, ಜವನ ಹಾಗೂ ಪುಷ್ಪಗಳನ್ನು ಅರ್ಪಿಸಿ ಧಾರ್ಮಿಕ ಉತ್ಸಾಹ ಮೆರೆದರು.
ಬಿಸಿಲಿನ ತಾಪದ ನಡುವೆಯೂ ಭಕ್ತರ ಸಂಭ್ರಮ ಕಡಿಮೆಯಾಗದೇ ಇದ್ದು, ದಾನಿಗಳಿಂದ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿ ಭಕ್ತರ ದಾಹ ನೀಗಿಸಲಾಯಿತು. ತ್ರಿವೇಣಿ ಸಂಗಮ ತಟದಲ್ಲಿ ನಡೆಯುವ ಈ ಮಹಾ ರಥೋತ್ಸವವು ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಉತ್ಸವವಾಗಿ ಗಮನ ಸೆಳೆಯಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    2 hrs ago
  • ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ, ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು. ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು. ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು‌. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು‌‌. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.
    1
    ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ  ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ
ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ,  ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ  ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು.  ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ
ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು. ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ  ಬಸ್ ವ್ಯವಸ್ಥೆ ಮಾಡಲಾಗಿತ್ತು‌.  ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ  ಜಿಲ್ಲೆಗಳಿಂದ  ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. 
ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು‌‌. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.
    user_Mysore update
    Mysore update
    ನಂಜನಗೂಡು, ಮೈಸೂರು, ಕರ್ನಾಟಕ•
    9 hrs ago
  • Post by Md Aleemulla Shariff
    1
    Post by Md Aleemulla Shariff
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    46 min ago
  • EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews
    1
    EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಾನೆಗಳು ದಾಂಧಲೆ ನಡೆಸಿವೆ. ಮುಖ್ಯ ರಸ್ತೆಗೆ ಬಂದು ಅಡ್ಡಾಡಿಡ್ಡಿ ಓಡಿದ ಕಾಡಾನೆಗಳು ಕೆಲಕಾಲ ಆತಂಕ ಸೃಷ್ಟಿಸಿವೆ. ಕಾಡಾನೆ ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂಧಿಗಳು ಇದ್ದ ಜೀಪ್ ಜಖಂಗೊಳಿಸಿದೆ. ಅದೃಷ್ಟವಶಾತ್ ಜೀಪ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊನೆಗೂ ಕಾಡಿಗೆ ಆನೆಗಳನ್ನು ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದ್ದಾರೆ.
    1
    ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಾನೆಗಳು ದಾಂಧಲೆ ನಡೆಸಿವೆ.
ಮುಖ್ಯ ರಸ್ತೆಗೆ ಬಂದು ಅಡ್ಡಾಡಿಡ್ಡಿ ಓಡಿದ ಕಾಡಾನೆಗಳು ಕೆಲಕಾಲ ಆತಂಕ ಸೃಷ್ಟಿಸಿವೆ.
ಕಾಡಾನೆ ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂಧಿಗಳು ಇದ್ದ ಜೀಪ್ ಜಖಂಗೊಳಿಸಿದೆ. 
ಅದೃಷ್ಟವಶಾತ್ ಜೀಪ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊನೆಗೂ ಕಾಡಿಗೆ ಆನೆಗಳನ್ನು ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದ್ದಾರೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಇಂದು ಮಧ್ಯಾಹ್ನ 3:00 ಸಮಯದಲ್ಲಿ ಸರ್ವೇ ನಂಬರ್ 210 ಜಮೀನಿನ ಪಕ್ಕದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ . ರೈತನ ಹೆಸರು ಗೋಪಾಲ ಶೆಟ್ಟಿ ತಿಳಿದುಬಂದಿದೆ, ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ,
    1
    ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಇಂದು ಮಧ್ಯಾಹ್ನ 3:00 ಸಮಯದಲ್ಲಿ  ಸರ್ವೇ ನಂಬರ್ 210 ಜಮೀನಿನ ಪಕ್ಕದಲ್ಲಿ  ಹುಲಿ ದಾಳಿಗೆ ಹಸು ಬಲಿಯಾಗಿದೆ . ರೈತನ ಹೆಸರು  ಗೋಪಾಲ ಶೆಟ್ಟಿ ತಿಳಿದುಬಂದಿದೆ, ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ,
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    6 hrs ago
  • ಮಳವಳ್ಳಿ:ಭಾರತೀಯ ಜನತಾ ಪಕ್ಷದ ಮಂಡಳ ಅಧ್ಯಕ್ಷರಾಗಿ ಮಧುಗಂಗಾಧರ್ ಅಧಿಕಾರ ಸ್ವೀಕಾರ • ಸ್ಥಳಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸಮಾಡಿ -ಡಾ.ಇಂದ್ರೇಶ್ ಕರೆ ಮಳವಳ್ಳಿ:ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಮಧು ಗಂಗಾಧರ್ ನಿಕಟಪೂರ್ವ ಅಧ್ಯಕ್ಷ ಕೃಷ್ಣ ರವರಿಂದ ಭಾನುವಾರ ಅಧಿಕಾರ ಸ್ವೀಕರಿಸಿದರು. ಪಟ್ಟಣದ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ವೈಭವ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣರವರಿಂದ ಬಿಜೆಪಿ ಬಾವುಟ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಮುಧು ಗಂಗಾಧರ್ ಭಾವುಟವನ್ನು ಎತ್ತಿ ಹಿಡಿಯುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಪಕ್ಷವನ್ನು ತಳಮಟ್ಟದಿಂದಲೂ ಸಂಘಟಿಸುವುದರೊAದಿಗೆ ಮುಂಬರುವ ಜಿ.ಪಂ ಮತ್ತು ತಾ.ಪಂ ಪುರಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತನೆಂದರು. ಕಾರ್ಯಕ್ರಮದಲ್ಲಿ ಬಾಜಪ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್,ರಾಜ್ಯ ಮುಖಂಡರಾದ ಡಾ.ಸಿದ್ದರಾಮಯ್ಯ,ಅಶೋಕ್‌ಜಯರಾಂ,ಹೆಚ್.ಅರ್.ಅಶೋಕ್‌ಕುಮಾರ್,ಮದ್ದೂರುಸ್ವಾಮಿ, ಸಚ್ಚಿದಾನಂದ,ವೈ.ಎಸ್.ಸಿದ್ದರಾಜು,ದೋರನಹಳ್ಳಿ ಕುಮಾರಸ್ವಾಮಿ ಮಾತನಾಡಿ, ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಎಲ್ಲ ಕಾರ್ಯಕರ್ತರು ಸಣಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು,ಮುಂಬರುವ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಕಾರ್ಯಕರ್ತರು ಕಂಕಣಬದ್ದರಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾ,ಸದಾನಂದ,ನಿತ್ಯಾನAದ,ಮುಖAಡರಾದ ಎನ್.ಕೆ.ಕುಮಾರ್,ಕೆ.ಸಿ ನಾಗೇಗೌಡ,ಚಿಕ್ಕಣ್ಣ,ಅಶೋಕ,ಶಶಿಕುಮಾರ್,ಶಿವಲಿಂಗಸ್ವಾಮಿ,ಕಾAತರಾಜು ಸೇರಿದಂತೆ ನೂರಾರು ಮುಖಂಡರು,ಕಾರ್ಯಕರ್ತರು ಬಾಗವಹಿಸಿದ್ದರು. ಚಿತ್ರ-೩೦-೨ ಪಟ್ಟಣದ ವೈಭವ ಸಭಾಂಗಣದಲ್ಲಿ ನಡೆದ ಬಾಜಪ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಬಾಜಪ ಜಿಲ್ಲಾ ಅಧ್ಯಕ್ಷ ಡಾ.ಇಂದ್ರೇಶ್ ,ರಾಜ್ಯ ಮುಖಂಡ ಡಾ.ಸಿದ್ದರಾಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
    1
    ಮಳವಳ್ಳಿ:ಭಾರತೀಯ ಜನತಾ ಪಕ್ಷದ  ಮಂಡಳ ಅಧ್ಯಕ್ಷರಾಗಿ  ಮಧುಗಂಗಾಧರ್ ಅಧಿಕಾರ ಸ್ವೀಕಾರ
•	ಸ್ಥಳಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸಮಾಡಿ -ಡಾ.ಇಂದ್ರೇಶ್ ಕರೆ 
ಮಳವಳ್ಳಿ:ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಮಧು ಗಂಗಾಧರ್ ನಿಕಟಪೂರ್ವ ಅಧ್ಯಕ್ಷ ಕೃಷ್ಣ ರವರಿಂದ ಭಾನುವಾರ ಅಧಿಕಾರ ಸ್ವೀಕರಿಸಿದರು.
ಪಟ್ಟಣದ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ವೈಭವ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣರವರಿಂದ ಬಿಜೆಪಿ  ಬಾವುಟ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಮುಧು ಗಂಗಾಧರ್ ಭಾವುಟವನ್ನು  ಎತ್ತಿ ಹಿಡಿಯುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಪಕ್ಷವನ್ನು ತಳಮಟ್ಟದಿಂದಲೂ ಸಂಘಟಿಸುವುದರೊAದಿಗೆ ಮುಂಬರುವ ಜಿ.ಪಂ ಮತ್ತು ತಾ.ಪಂ ಪುರಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತನೆಂದರು.
ಕಾರ್ಯಕ್ರಮದಲ್ಲಿ ಬಾಜಪ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್,ರಾಜ್ಯ ಮುಖಂಡರಾದ ಡಾ.ಸಿದ್ದರಾಮಯ್ಯ,ಅಶೋಕ್‌ಜಯರಾಂ,ಹೆಚ್.ಅರ್.ಅಶೋಕ್‌ಕುಮಾರ್,ಮದ್ದೂರುಸ್ವಾಮಿ, ಸಚ್ಚಿದಾನಂದ,ವೈ.ಎಸ್.ಸಿದ್ದರಾಜು,ದೋರನಹಳ್ಳಿ ಕುಮಾರಸ್ವಾಮಿ ಮಾತನಾಡಿ,  ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಎಲ್ಲ ಕಾರ್ಯಕರ್ತರು ಸಣಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು,ಮುಂಬರುವ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಕಾರ್ಯಕರ್ತರು ಕಂಕಣಬದ್ದರಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ  ಡಾ,ಸದಾನಂದ,ನಿತ್ಯಾನAದ,ಮುಖAಡರಾದ ಎನ್.ಕೆ.ಕುಮಾರ್,ಕೆ.ಸಿ ನಾಗೇಗೌಡ,ಚಿಕ್ಕಣ್ಣ,ಅಶೋಕ,ಶಶಿಕುಮಾರ್,ಶಿವಲಿಂಗಸ್ವಾಮಿ,ಕಾAತರಾಜು ಸೇರಿದಂತೆ ನೂರಾರು ಮುಖಂಡರು,ಕಾರ್ಯಕರ್ತರು ಬಾಗವಹಿಸಿದ್ದರು.
ಚಿತ್ರ-೩೦-೨
ಪಟ್ಟಣದ ವೈಭವ ಸಭಾಂಗಣದಲ್ಲಿ ನಡೆದ ಬಾಜಪ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಬಾಜಪ ಜಿಲ್ಲಾ ಅಧ್ಯಕ್ಷ ಡಾ.ಇಂದ್ರೇಶ್ ,ರಾಜ್ಯ ಮುಖಂಡ ಡಾ.ಸಿದ್ದರಾಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    6 hrs ago
  • ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಬಿಸಾಡಿದ ಪರಿಣಾಮ ಸ್ಥಳ ಗಲೀಜಾಗಿರುವುದು ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರ ಗಮನಕ್ಕೆ ಬಂತು.* *ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹಾಗೂ ಮುಖಂಡರೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.*
    1
    ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಬಿಸಾಡಿದ ಪರಿಣಾಮ ಸ್ಥಳ ಗಲೀಜಾಗಿರುವುದು ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರ ಗಮನಕ್ಕೆ ಬಂತು.*
*ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹಾಗೂ ಮುಖಂಡರೊಂದಿಗೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.*
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.