Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ ತಾಲೂಕಿನ ಕಿಡಿಗೇಡಿಗಳ ದುಷ್ಕೃತ್ಯಕ್ಕೆ 15 ಕುರಿ ಒಂದು ಟಗರು ಸಾವು : ಕುಟುಂಬಸ್ಥರ ಅಕ್ರಂದನ ಮಳವಳ್ಳಿ ತಾಲೂಕಿನ ಚೆನ್ನಪಳ್ಳೆ ಕೊಪ್ಪಲು ಗ್ರಾಮದ ಜವನಿ ಸಿದ್ದಯ್ಯನವರ ಮಗ ಕರಿಯಪ್ಪನವರಿಗೆ ಸೇರಿದ 15 ಕುರಿ ಹಾಗೂ ಒಂದು ಟಗರು ವಿಷ ಪ್ರಾಸನದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಜರುಗಿದೆ . ಯಾರೋ ಕಿಡಿಗೇಡಿಗಳು ಕರಿಯಪ್ಪನವರ ಇತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೇಟಿಗೆ ವಿಷವನ್ನು ಹಾಕಿದ್ದು ,ಕುರಿಗಳು ದಿನನಿತ್ಯದಂತೆ ಬಕೇಟಿನಲ್ಲಿದ್ದ ನೀರನ್ನು ಕುಡಿದ ನಂತರ ವಿಲವಿಲನೆ ಒದ್ದಾಡಿ ಅಸುನೀಗಿರುತವೆ ಕಣ್ಣೆದುರೆ ತಾವು ಸಾಕಿದ ಕುರಿಗಳು ಸಾಯುತ್ತಿರುವುದನ್ನು ನೋಡಿ ಕರಿಯಪ್ಪನವರ ಕುಟುಂಬ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ.. ಲಕ್ಷಾಂತರ ರೂಗಳ ಕುರಿಗಳು ತನ್ನೆದುರೆ ಸತ್ತಿರುವುದು ಆ ಬಡ ಕುಟುಂಬಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ. ಈ ಕಿಡಿಗೇಡಿತನದ ಕೃತ್ಯ ನಡೆಸಿದ ಪಾಪಿಗಳಿಗೆ ಗ್ರಾಮಸ್ಥರು ಶಾಪವನ್ನು ಹಾಕುತ್ತಿದ್ದಾರೆ . ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಬಡ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮುಂದಾಗಿ ಸಂಕಷ್ಟದಲ್ಲಿ ಸಿಲುಕು ಇರುವ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ1
- ಹನೂರು: ತಾಲ್ಲೂಕಿನ ಮಹದೇಶ್ವರಬೆಟ್ಟ ರಸ್ತೆಯ ಕೋಣನಕೆರೆಯ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸುಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಂತಹ ಪ್ರಸಂಗ ಜರುಗಿದೆ ಕೊಣನಕೆರೆ ಗ್ರಾಮದ ಹತ್ತಿರ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಯಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ನಂ ಕೆಎ10 ಎಫ್ 0509 ಬಸ್ ಹಾಗೂ ಕೆಎ 09 ಜೆಎಸ್ 3871 ದ್ವಿ ಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು (35) ಸತ್ತಿ ಬಿನ್ ಮಾದೇವ (36)ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಕೂಡಲೆ ಸ್ಥಳಕ್ಕೆ ರಾಮಪುರ ಠಾಣೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.1
- ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಅಂತರರಾಜ್ಯ ಕಳ್ಳಿಯನ್ನು ಬಂಧಿಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು!1
- ಶಿಡ್ಲಘಟ್ಟ ತಾಲೂಕಿನ ನೆಹರೂ ಕ್ರೀಡಾಂಗಣದಲ್ಲಿ ಜನವರಿ 13 ಸಂಜೆ 5 ಕ್ಕೆ ಕಲ್ಟ್ ಸಿನಿಮಾ ಪ್ರೊಫೆಷನಲ್ ಈವೆಂಟ್1
- *ಮಂಗಳೂರು ದಕ್ಷಿಣ ಕನ್ನಡ* Mng Bjp Mlc Byte ವಿವಾದಿತ ಜಿ ರಾಮ್ ಜಿ ಕಾಯ್ದೆ: ಬಹಿರಂಗ ಚರ್ಚೆಗೆ ರೆಡಿ ಎಂದ ಬಿಜೆಪಿ ಎಂಎಲ್‌ಸಿ ಜಿ ರಾಮ್ ಜಿ ಕಾಯ್ದೆ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ದವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ. ಅವರು ಮಂಗಳವಾರ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮನ್‌ರೇಗಾದ ನ್ಯೂನತೆಗಳನ್ನು ಸರಿಪಡಿಸಿ ಹೊಸ ಕಾಯ್ದೆ ತರಲಾಗಿದೆ. ಜಿ ರಾಮ್ ಜಿ ಕಾಯ್ದೆಯಲ್ಲಿ ಗಾಂಧೀಜಿಯವರ ಪ್ರೀತಿಯ ರಾಮನ ಹೆಸರನ್ನು ತರಲಾಗಿದೆ ಎಂದರು. ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ನಡೆಸುವ ಮಾತನ್ನಾಡುತ್ತಿದ್ದಾರೆ. ಆದರೆ, ಕೇಂದ್ರದ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸುವುದು ಅಸಂವಿಧಾನಿಕ. ಈ ನಿರ್ಧಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದರು. ಸಿಎಂ ಸಿದ್ದರಾಮಮಯ್ಯ ಅವರು ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಕಳೆದ ಬಜೆಟ್‌ನ ಶೇ.50ರಷ್ಟು ಅನುದಾನವೂ ಖರ್ಚಾಗಿಲ್ಲ. ಇನ್ನು ಎರಡು ತಿಂಗಳಲ್ಲಿ ಮತ್ತೆ ಬಜೆಟ್ ಬರಲಿದೆ. ಗಾಳಿ ಹೊರತುಪಡಿಸಿ ಬೇರೆ ಎಲ್ಲದಕ್ಕೂ ರಾಜ್ಯ ಸರಕಾರ ತೆರಿಗೆ ಹಾಕುತ್ತಿದೆ ಅಥವಾ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆ ಹೊಂಡವನ್ನೂ ಮುಚ್ಚುತ್ತಿಲ್ಲ ಎಂದು ದೂರಿದರು. ಪ್ರೆಸ್ ಮೀಟ್ ನಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಜಿಲ್ಲಾ ವಕ್ತಾರರಾದ ಸತೀಶ್ ಪ್ರಭು, ಅರುಣ್ ಶೇಟ್, ರಾಜಗೋಪಾಲ ರೈ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಮಾಧ್ಯಮ ಪ್ರಮುಖ್ ಮನೋಹರ ಶೆಟ್ಟಿ ಹಾಜರಿದ್ದರು. ವರದಿ: ಶಂಶೀರ್ ಬುಡೋಳಿ1
- ಸೊರಬ: ತಾಲೂಕಿನ ಆನವಟ್ಟಿ ತಿಮ್ಮಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮತ್ತು ಎಂಎಲ್ಸಿ ಭಾರತೀಯ ಶೆಟ್ಟಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪ ಭಕ್ತಾದಿಗಳು ಇಬ್ಬರನ್ನು ಸನ್ಮಾನಿಸಿದರು. ದೇವಸ್ಥಾನಕ್ಕೆ ತಮ್ಮ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಉಡುಗಣಿ, ಪ್ರಕಾಶ್ ತಲಕಾಲಕೊಪ್ಪ, ಕೃಷ್ಣಮೂರ್ತಿ, ಶಿವಪ್ರಸಾದ್ ಮತ್ತಿತರರು ಇದ್ದರು.4
- *ಭಾರತ ನಲ್ಲಿ ವೈರಲ್*1