ತುಮಕೂರು: ತಮ್ಮನನ್ನೇ ಕೊಲೆಗೈದ ಅಣ್ಣ ಹಾಗೂ ಆತನಿಗೆ ಸಹಾಯ ಮಾಡಿದ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಸ್ಟಾಲಿನ್ (29) ಎಂದು ಗುರುತಿಸಲಾಗಿದೆ. ಇದೇ ತಿಂಗಳ 22ರಂದು ತುಮಕೂರಿನ ಬನಶಂಕರಿ ಪ್ರದೇಶದಲ್ಲಿ ಘಟನೆ ನಡೆದಿತ್ತು. ಮೃತನ ಅಣ್ಣ ನವೀನ್ ಹಾಗೂ ತಂದೆ ಜಾನ್ ಪಾಲ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಬಳಿಕ ನಾಟಕ ಕೊಲೆ ನಡೆದ ಬಳಿಕ, ಸ್ಟಾಲಿನ್ ಮನೆಯಲ್ಲಿ ಕುಸಿದು ಬಿದ್ದಿದ್ದಾನೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಚಿಕಿತ್ಸೆ ಫಲಿಸದೇ ಸಿದ್ದಗಂಗಾ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಮೃತದೇಹ ಹಸ್ತಾಂತರಕ್ಕೂ ಮುನ್ನ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈ ವೇಳೆ ಅನುಮಾನ ಹುಟ್ಟಿದೆ. ಶವಪರೀಕ್ಷೆ ವೇಳೆ ಸತ್ಯ ಬಹಿರಂಗ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಟಾಲಿನ್ ದೇಹದಲ್ಲಿ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾಗಿವೆ. ಆದರೂ ಶವಪರೀಕ್ಷೆ ನಡೆಸಬಾರದು ಎಂದು ತಂದೆ ಮತ್ತು ಅಣ್ಣ ಒತ್ತಾಯಿಸಿದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಯಿತು. ಕುಟುಂಬ ಕಲಹವೇ ಕಾರಣ ವಿಚಾರಣೆ ವೇಳೆ ಹೊರಬಂದ ಮಾಹಿತಿಯ ಪ್ರಕಾರ: ನವೀನ್ ಈಗಾಗಲೇ ಮದುವೆಯಾಗಿದ್ದು, ಪತ್ನಿ ಗರ್ಭಿಣಿ ಸ್ಟಾಲಿನ್ ಮದುವೆ ಜನಿಫರ್ ಜೊತೆ ನಿಶ್ಚಯವಾಗಿತ್ತು ಆದರೆ ಸ್ಟಾಲಿನ್ ಮತ್ತು ಅತ್ತಿಗೆ ನಡುವೆ ಅಕ್ರಮ ಸಂಬಂಧ ಇದೆ ಎಂದು ಜನಿಫರ್ ಆರೋಪ ಇದೇ ವಿಷಯವಾಗಿ ಒಂದು ವಾರದಿಂದ ಮನೆಯಲ್ಲಿ ಗಲಾಟೆ ಈ ಗಲಾಟೆಯ ಮಧ್ಯೆ ಅಣ್ಣ ನವೀನ್, ತಂದೆಯ ಸಹಾಯದಿಂದ ತಮ್ಮ ಸ್ಟಾಲಿನ್‌ನನ್ನು ಕೊಲೆ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಬಂಧನ ಮತ್ತು ತನಿಖೆ ಪ್ರಕರಣ ಸಂಬಂಧ ನವೀನ್ ಮತ್ತು ಜಾನ್ ಪಾಲ್ ಇಬ್ಬರನ್ನೂ ಬಂಧಿಸಲಾಗಿದೆ. ಜಯನಗರ ಪೊಲೀಸರು ಪ್ರಕರಣದ ಕುರಿತು ಮುಂದುವರಿದ ತನಿಖೆ ನಡೆಸುತ್ತಿದ್ದಾರೆ.
ತುಮಕೂರು: ತಮ್ಮನನ್ನೇ ಕೊಲೆಗೈದ ಅಣ್ಣ ಹಾಗೂ ಆತನಿಗೆ ಸಹಾಯ ಮಾಡಿದ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಸ್ಟಾಲಿನ್ (29) ಎಂದು ಗುರುತಿಸಲಾಗಿದೆ. ಇದೇ ತಿಂಗಳ 22ರಂದು ತುಮಕೂರಿನ ಬನಶಂಕರಿ ಪ್ರದೇಶದಲ್ಲಿ ಘಟನೆ ನಡೆದಿತ್ತು. ಮೃತನ ಅಣ್ಣ ನವೀನ್ ಹಾಗೂ ತಂದೆ ಜಾನ್ ಪಾಲ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಬಳಿಕ ನಾಟಕ ಕೊಲೆ ನಡೆದ ಬಳಿಕ, ಸ್ಟಾಲಿನ್ ಮನೆಯಲ್ಲಿ ಕುಸಿದು ಬಿದ್ದಿದ್ದಾನೆ ಎಂದು
ಹೇಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಚಿಕಿತ್ಸೆ ಫಲಿಸದೇ ಸಿದ್ದಗಂಗಾ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಮೃತದೇಹ ಹಸ್ತಾಂತರಕ್ಕೂ ಮುನ್ನ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈ ವೇಳೆ ಅನುಮಾನ ಹುಟ್ಟಿದೆ. ಶವಪರೀಕ್ಷೆ ವೇಳೆ ಸತ್ಯ ಬಹಿರಂಗ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಟಾಲಿನ್ ದೇಹದಲ್ಲಿ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾಗಿವೆ. ಆದರೂ ಶವಪರೀಕ್ಷೆ ನಡೆಸಬಾರದು ಎಂದು ತಂದೆ ಮತ್ತು ಅಣ್ಣ ಒತ್ತಾಯಿಸಿದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಯಿತು. ಕುಟುಂಬ ಕಲಹವೇ ಕಾರಣ ವಿಚಾರಣೆ ವೇಳೆ ಹೊರಬಂದ ಮಾಹಿತಿಯ ಪ್ರಕಾರ: ನವೀನ್ ಈಗಾಗಲೇ
ಮದುವೆಯಾಗಿದ್ದು, ಪತ್ನಿ ಗರ್ಭಿಣಿ ಸ್ಟಾಲಿನ್ ಮದುವೆ ಜನಿಫರ್ ಜೊತೆ ನಿಶ್ಚಯವಾಗಿತ್ತು ಆದರೆ ಸ್ಟಾಲಿನ್ ಮತ್ತು ಅತ್ತಿಗೆ ನಡುವೆ ಅಕ್ರಮ ಸಂಬಂಧ ಇದೆ ಎಂದು ಜನಿಫರ್ ಆರೋಪ ಇದೇ ವಿಷಯವಾಗಿ ಒಂದು ವಾರದಿಂದ ಮನೆಯಲ್ಲಿ ಗಲಾಟೆ ಈ ಗಲಾಟೆಯ ಮಧ್ಯೆ ಅಣ್ಣ ನವೀನ್, ತಂದೆಯ ಸಹಾಯದಿಂದ ತಮ್ಮ ಸ್ಟಾಲಿನ್‌ನನ್ನು ಕೊಲೆ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಬಂಧನ ಮತ್ತು ತನಿಖೆ ಪ್ರಕರಣ ಸಂಬಂಧ ನವೀನ್ ಮತ್ತು ಜಾನ್ ಪಾಲ್ ಇಬ್ಬರನ್ನೂ ಬಂಧಿಸಲಾಗಿದೆ. ಜಯನಗರ ಪೊಲೀಸರು ಪ್ರಕರಣದ ಕುರಿತು ಮುಂದುವರಿದ ತನಿಖೆ ನಡೆಸುತ್ತಿದ್ದಾರೆ.
- ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಪರ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದರು.1
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲದ ಜೋಶಿಗಲ್ಲಿಯನ ಹನುಮಂತ ದೇವಸ್ಥಾನಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದರ್ಶನವನ್ನು ಪಡೆದುಕೊಂಡರು. ಶಾಸಕರನ್ನು ದೇವಸ್ಥಾನ ಜಿರ್ಣೋದ್ಧಾರ ಸಮಿತಿ ವತಿಯಿಂದ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಸುಶೀಲ ಕಾಖಂಡಕಿ, ನಗರಸಭೆ ಮಾಜಿ ಸದಸ್ಯ ಮೌಲೇಶಬಂಡಿವಡ್ಡರ, ಹಾಗೂ ವಾರ್ಡಿನ ಗುರು ಹಿರಿಯರು ಯುವಕರು ಇದ್ದರು.2
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1
- ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಶ್ರೀರಾಮುಲು, ಹದಡಿ ಹಾಗೂ ಹೂಸನಾಯಕನಹಳ್ಳಿ ,ಕೈದಾಳ ಗ್ರಾಮದಲ್ಲಿ ಅದ್ದೂರಿ ಪ್ರಚಾರ ಆರಂಭಿಸಿದರು. ಈ ವೇಳೆ ಸ್ಥಳಿಯರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ನವರನ್ನು ಹಾಗೂ ಆರ್ ಅಶೋಕ್ ಶ್ರೀರಾಮುಲು ರವರಿಗೆ ಬೃಹತ್ ಗಾತ್ರದ ಆಪಲ್ ಆರ್ ಹಾಕುವ ಮೂಲಕ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಶುಭವಾಗಲಿ ಎಂದು ಹಾರೈಸಿದರು... ಈ ಸಂದರ್ಭದಲ್ಲಿ ಹರಿಹರದ ಶಾಸಕ ಬಿಪಿ ಹರೀಶ್ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಸಿಮೆಂಟ್ ರವಿಕುಮಾರ್, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಯಶವಂತ ರಾವ್ ಜಾಧವ್ , ಬಿ, ರಾಜನಹಳ್ಳಿ ಶಿವಕುಮಾರ್, ಬಿಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕೊಳೆನಹಳ್ಳಿ ಸತೀಶ್ ಜಿ.ಬಿ ವಿನಯ್ ಕುಮಾರ್, ಎಸ್, , ಶಿವನಹಳ್ಳಿ ರಮೇಶ್ ,ಸೇರಿದಂತೆ. ಜೆಡಿಎಸ್ ಜಿಲ್ಲಾ ಬಿಜೆಪಿ ನಾಯಕರು ವಾರ್ಡ್ ಸದಸ್ಯರ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರು. ಬಿಜೆಪಿ ಮುಖಂಡರು ಸದಸ್ಯರು ಸ್ಥಳಿಯರು ಇದ್ದರೂ1
- ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.1
- Post by Suresh Belagere1
- ವೀಕ್ಷಕರೇ, ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಆಸ್ಪತ್ರೆ ಕೂಡ ಒಂದು. ಕೊರೋನಾ ಎಂಬ ಮಹಾಮಾರಿ ಸಮಯದಲ್ಲಿ ನಮಗೆ ಮೊದಲಿಗೆ ನೆನಪಾಗಿದ್ದು ಆಸ್ಪತ್ರೆಯೇ. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಒಂದು ಮಾತ್ರ — ಚಿಕಿತ್ಸೆ… ಡಾಕ್ಟರ್ ಯಾರು? ಆಸ್ಪತ್ರೆ ಯಾವುದು? ಎನ್ನುವುದು ಮುಖ್ಯವಾಗಿರಲಿಲ್ಲ. ಆದರೆ ವೀಕ್ಷಕರೇ, ಇಂತಹ ಪವಿತ್ರ ಸೇವಾ ಕ್ಷೇತ್ರದಲ್ಲೇ ಕೆಲವು ಪ್ರಶ್ನೆಗಳು ಉದ್ಭವವಾಗುತ್ತಿವೆ… ಜನ ಸೇವೆ ಮಾಡಲಾಗುತ್ತಿದೆಯಾ? ಅಥವಾ ಹಣದ ಲಾಭಕ್ಕಾಗಿ ಕೆಲಸ ಮಾಡಲಾಗುತ್ತಿದೆಯಾ? ಹೌದು ವೀಕ್ಷಕರೇ, ನಾವು ಈಗ ಮಾತನಾಡುತ್ತಿರುವುದು ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಅಕ್ಕಿಮರಡಿ ಆಸ್ಪತ್ರೆ ಕುರಿತು. ಈ ಪ್ರಕರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ ಏನೆಂದರೆ — ಸರ್ಕಾರಕ್ಕೆ ಮೋಸ ಮಾಡಿರುವುದು. ವೀಕ್ಷಕರೇ, ಒಂದು ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರ ಜೊತೆಗೆ, ಕೃಷಿ ಜಮೀನನ್ನು ಬಳಸಬೇಕಾದರೆ ಅದನ್ನು “ಬಿನ್ ಶೆಥ್ಕಿ” ಮಾಡಿ ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ ಇಲ್ಲಿ ನಡೆದಿರುವುದು ಏನು? ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದೆಯೇ? — ಸ್ಪಷ್ಟ ಮಾಹಿತಿ ಇಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಉತ್ತರ ಸಿಗಲಿಲ್ಲ ಇನ್ನೂ ಗಂಭೀರ ವಿಷಯ ಏನೆಂದರೆ — ಸರ್ವೆ ನಂ. 135/7ರಲ್ಲಿ 1 ಎಕರೆ ಜಮೀನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿದೆ ಆದರೆ ಅಲ್ಲಿ ಕಟ್ಟಡ ಇಲ್ಲ, ಕೃಷಿಯೇ ನಡೆಯುತ್ತಿದೆ ಆದರೆ... ಸರ್ವೆ ನಂ. 133/1+2A/4ರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೇ ಆಸ್ಪತ್ರೆ ಕಟ್ಟಲಾಗಿದೆ ಈ ಕುರಿತು ಸ್ಥಳೀಯ ಪತ್ರಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಬೀಳಗಿ ತಹಶೀಲ್ದಾರರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಈಗ ಪ್ರಶ್ನೆ ಏನೆಂದರೆ ವೀಕ್ಷಕರೇ... ಇದು ಕಾನೂನು ಪ್ರಕಾರ ಸರಿಯೇ? ತಪ್ಪೇ? ಒಬ್ಬ ಬಡವನು ತಾತ್ಕಾಲಿಕ ಗುಡಿಸಲು ಹಾಕಿದರೆ ಕೂಡ ಪ್ರಕರಣ ದಾಖಲಿಸಿ ತೆರವು ಮಾಡಲಾಗುತ್ತದೆ ಆದರೆ ಇಲ್ಲಿ — ಸ್ಪಷ್ಟವಾಗಿ ಉಲ್ಲಂಘನೆ ಇದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಯಾಕೆ? ಇದು ನಿರ್ಲಕ್ಷ್ಯವೇ? ಅಥವಾ ಇನ್ನಾವುದೋ ಪ್ರಭಾವವೇ? ಇದೀಗ ಎಲ್ಲರ ಗಮನ ಒಂದೇ ಕಡೆ — ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಇದಿಷ್ಟು ಇವತ್ತಿನ ವಿಶೇಷ ವರದಿ… ಇನ್ನಷ್ಟು ಸುದ್ದಿಗಳಿಗೆ ನಮ್ಮ ಜೊತೆ ಇರಿ… ಭೀಮ ಹೆಜ್ಜೆ ನ್ಯೂಸ್ – ನೇರ ನ್ಯಾಯ, ನಿರಂತರ ಸುದ್ದಿ1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4