Shuru
Apke Nagar Ki App…
ಹನುಮ ಜಯಂತಿ ಅಂಗವಾಗಿ : ಸಂಭ್ರಮದ ಮಾರುತೇಶ್ವರನ ತೊಟ್ಟಿಲೋತ್ಸವ ಜರುಗಿತು ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಹನುಮ ಜಯಂತಿ ಅಂಗವಾಗಿ : ಸಂಭ್ರಮದ ಮಾರುತೇಶ್ವರನ ತೊಟ್ಟಿಲೋತ್ಸವ ಜರುಗಿತು ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
More news from ಕರ್ನಾಟಕ and nearby areas
- ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.1
- ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಉಪಚುನಾವಣೆ ಇದೀಗ ತೀವ್ರ ಹಂತ ತಲುಪಿದೆ. ಶಾಸಕ ಎಚ್. ವೈ. ಮೇಟಿ ಅವರ ಅಕಾಲಿಕ ನಿಧನದ ನಂತರ ನಡೆಯುತ್ತಿರುವ ಈ ಬೈಎಲೆಕ್ಷನ್‌ನಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಖಾಡಕ್ಕಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಭ್ಯರ್ಥಿಯಾಗಿ ಬಲಿಷ್ಠ ಸವಾಲು ಒಡ್ಡಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ: ಅನುಕಂಪ ಗೆಲ್ಲುತ್ತಾ ಅಥವಾ ಅಭಿವೃದ್ಧಿ ಗೆಲ್ಲುತ್ತಾ. ಕೆಲವರು ಅಭಿವೃದ್ಧಿ ವಿಚಾರದಲ್ಲಿ ಚರಂತಿಮಠ ಪರ ಮಾತು ಮತ್ತೊಂದೆಡೆ ಮಹಿಳೆಯರು ‘ಗೃಹ ಲಕ್ಷ್ಮಿ’ ಯೋಜನೆಯ ಆಧಾರದ ಮೇಲೆ ಕಾಂಗ್ರೆಸ್ ಪರ ಒಲವು ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆದಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ವಿಡಿಯೋ ಇಷ್ಟವಾದರೆ Like ಮಾಡಿ ಇನ್ನಷ್ಟು ನಿಖರ ಸುದ್ದಿಗಳಿಗೆ Subscribe ಮಾಡಿ – ಭೀಮ ಹೆಜ್ಜೆ ನ್ಯೂಸ್, ಬಾಗಲಕೋಟೆ..1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲದ ಜೋಶಿಗಲ್ಲಿಯನ ಹನುಮಂತ ದೇವಸ್ಥಾನಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದರ್ಶನವನ್ನು ಪಡೆದುಕೊಂಡರು. ಶಾಸಕರನ್ನು ದೇವಸ್ಥಾನ ಜಿರ್ಣೋದ್ಧಾರ ಸಮಿತಿ ವತಿಯಿಂದ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಸುಶೀಲ ಕಾಖಂಡಕಿ, ನಗರಸಭೆ ಮಾಜಿ ಸದಸ್ಯ ಮೌಲೇಶಬಂಡಿವಡ್ಡರ, ಹಾಗೂ ವಾರ್ಡಿನ ಗುರು ಹಿರಿಯರು ಯುವಕರು ಇದ್ದರು.2
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1
- ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- Post by Sharanugouda Patil1
- ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ದ ಶಿವಶರಣರ ಮಠದ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ರಥೋತ್ಸವ ಗುರುವಾರ ನಡೆಯಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗೊಂಬೆ ಕುಣಿತ, ಡೊಳ್ಳು, ಕರಡಿಮಜಲಿನ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಸಂಜೆ 6.30ಗಂಟೆಗೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನಡೆಯಿತು. ಜಾತ್ರಾಮಹೋತ್ಸವದಲ್ಲಿ ಆಳಂದದ ಶಿವಶರಣಮಠದ ಚನ್ನಬಸವ ಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದ ಶಿವಶರಣರು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಸೋಮಯ್ಯ ಶಾಸ್ತ್ರೀಗಳು, ಗುರಪ್ಪಗೌಡ ಪಾಟೀಲ, ಲಕ್ಷ್ಮಣ ದಡ್ಡಿ, ಬಿ.ಬಿ.ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ರಾಮಸ್ವಾಮಿ, ಮಲ್ಲಿಕಾರ್ಜುನ ಸೂಡಿ, ನಾಗೇಶ ಸಿದ್ದಣ್ಣವರ, ಪುರುಷೋತ್ತಮ ಗಂಡಿ,ನಾರಾಯಣಪ್ಪ ಚಿತ್ರಗಾರ, ಬಸವಂತಪ್ಪ, ಶರಣಪ್ಪ ದಿಂಡಿ, ಬಸಪ್ಪ ದಿಂಡಿ, ಸಂಗಪ್ಪ ರಕ್ಕಸಗಿ,ಮೇಟಿ ಸೇರಿದಂತೆ ಗುಳೇದಗುಡ್ಡ ಕೋಟೆಕಲ್, ಪರ್ವತಿ, ಚೌಡಾಪುರ, ಶಿರೂರು, ಹಳ್ಳೂರು, ಆಚನೂರ, ಸೀತಿಮನಿ, ಹುಲಸಗೇರಿ, ಜಮ್ಮನಕಟ್ಟಿ ಲಕ್ಕಸಕೊಪ್ಪ, ಸುರಳಿಕಲ್ಲ, ಸಂಗಾಪೂರ, ಮಂಗಳಗುಡ್ಡ, ಯಂಕಂಚಿ ಮಣಿನಾಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.1