Shuru
Apke Nagar Ki App…
ಗೋವರ್ಧನ ಗಿರಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ 67ನೇ ವರ್ಷದ ಕಾಮನ ಹುಣ್ಣಿಮೆ ಹಬ್ಬದ ಪ್ರಯುಕ್ತ
Venu Gopal
ಗೋವರ್ಧನ ಗಿರಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ 67ನೇ ವರ್ಷದ ಕಾಮನ ಹುಣ್ಣಿಮೆ ಹಬ್ಬದ ಪ್ರಯುಕ್ತ
More news from ಕರ್ನಾಟಕ and nearby areas
- ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ನಂದಿ ಬೆಟ್ಟದ ತಪ್ಪಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಸುಲ್ತಾನ್‌ಪೇಟೆ ಕಡೆಯ ತಪ್ಪಲಿನಿಂದ ಆರಂಭವಾದ ಬೆಂಕಿ, ಒಣಗಿದ ಹುಲ್ಲು ಮತ್ತು ಗಿಡಗಂಟಿಗಳ ಕಾರಣದಿಂದಾಗಿ ವೇಗವಾಗಿ ಬೆಟ್ಟದ ಮೇಲ್ಭಾಗಕ್ಕೆ ಹರಡಿದೆ.1
- ಈ ದಿನ ಅಂಜನಿ ಚಿತ್ರಮಂದಿರದಲ್ಲಿ ಮನಶಂಕರ ವರಪ್ರಸಾದ್ ಗಾರು ಸಿನಿಮಾ 50 ದಿನದ ಅಂಗವಾಗಿ ಚಿಂತಾಮಣಿ ಮೇಗಾ ಫ್ಯಾಮಿಲಿ ಫ್ಯಾನ್ಸ್ ಕ್ಲಬ್ ವತ್ತಿಯಿಂದ ಕೇಕ್ ಕಟ್ ಮಾಡಿ ಚಿತ್ರ ವಿಕ್ಷಿಸಲು ಬಂದ ಎಲ್ಲಾ ಪ್ರೇಕ್ಷಕರಿಗು ಸಿಹಿ ಅಂಚಿ ಸಂಭ್ರಮಾಚರಣೆ ಮಾಡಲಾಯ್ತು. ನಂತರ ಅಖಿಲ ಭಾರತ ಚಿರಂಜೀವಿ ಯುವತ ಅಧ್ಯಕ್ಷರಾದ ಸತ್ಯನಾರಾಯಣ ಮಹೇಶ್ ರವರ ಕಡೆಯಿಂದ ಅಂಜನಿ ಚಿತ್ರಮಂದಿರಕ್ಕೆ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಚಿಂತಾಮಣಿ ಮೇಗಾ ಫ್ಯಾಮಿಲಿ ಫ್ಯಾನ್ಸ್ ಕ್ಲಬ್ ನ ಸುನೀಲ್, ಅಮರೇಶ್, ಜಾಲಾರಿ ಶ್ರೀನಿವಾಸ, ಸುರೇಶ್ ಸ್ವಾಮಿ, ಅರುಣ್, ವೇಣು, ಮೋಹನ್, ಸುರೇಶಾಚಾರಿ, ಶೇಖರ್ ಬಾಬು, ಹಾಗೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.1
- ತೂಬಗೆರೆ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ತೂಬಗೆರೆಯ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇಂದು ಭಕ್ತಿಪೂರ್ಣವಾಗಿ ಬ್ರಹ್ಮರಥೋತ್ಸವ ನಡೆಯಿತು. ಬ್ರಹ್ಮರಥೋತ್ಸವದ ಅಂಗವಾಗಿ ದೇಗುಲವನ್ನು ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿತ್ತು.. ಇಂದು ಬೆಳಿಗ್ಗೆ 11.30ರಿಂದ 11.47 ಗಂಟೆಯೊಳಗೆ ಅಭಿಜಿತ್ ಲಗ್ನದಲ್ಲಿ ಭಗವಂತನ ಅನುಗ್ರಹದಿಂದ ಬ್ರಹ್ಮರಥೋತ್ಸವ ನೆರವೇರಿತು. ಇಂದು ಮುಂಜಾನೆಯಿಂದಲೇ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿವಿಧ ಸಂಘಟನೆಗಳ ವತಿಯಿಂದ ಪಾನಕ ಮತ್ತು ಮಜ್ಜಿಗೆ ವಿತರಣೆ ನಡೆಯಿತು. ಇದೇ ವೇಳೆ, ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮಧ್ಯಾಹ್ನ 1.00 ಗಂಟೆಗೆ ಮುಚ್ಚಲಾಗುತ್ತದೆ. ಗ್ರಹಣ ದೋಷ ನಿವಾರಣೆ ಬಳಿಕ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ನೆರವೇರಿಸಿ, ಸಂಜೆ 7.30ರಿಂದ ಭಕ್ತರಿಗೆ ಮತ್ತೆ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ 8.00 ಗಂಟೆಗೆ ವರ್ಣರಂಜಿತ ಬಾಣಬಿರುಸುಗಳ ಪ್ರದರ್ಶನದೊಂದಿಗೆ ಸ್ವಾಮಿಗೆ ಸೂರ್ಯಮಂಡಲೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.1
- SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........1
- ಶಿಷ್ಟಾಚಾರ ಮರೆತ ಹುಮನಾಬಾದ್ ಶಾಸಕ: ಸರ್ಕಾರಿ ಅನುದಾನದ ಶಾಲಾ ಕಟ್ಟಡ ಭೂಮಿ ಪೂಜೆ ವೇಳೆ ಹೈಡ್ರಾಮಾ!#JB_NEWS_KANNADA1
- ಬೆಂಗಳೂರು: ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗುತ್ತಿಗೆದಾರ ರಮೇಶ್ ಬಾಬು ಅವರ ಪತ್ನಿ ಸವಿತಾ (53) ಸಾವನ್ನಪ್ಪಿದ್ದಾರೆ. ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಅಂತಸ್ತಿನ ಮನೆಯ 3ನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಜ್ಞೆ ತಪ್ಪಿದ್ದ ಮೂವರನ್ನು ರಕ್ಷಿಸಿದ್ದಾರೆ. ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1
- ಪುರಾತನ ಪೂಜಮ್ಮ ದೇವಸ್ಥಾನಕ್ಕೆ ಸಮಾಜ ಸೇವಕ ನರಸಿಂಹಮೂರ್ತಿ ಭೇಟಿ: ರೈತರು ಹಾಗೂ ವ್ಯಾಪಾರಸ್ಥರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ. ಶಿಡ್ಲಘಟ್ಟ : ಈ ಭಾಗದ ಅತ್ಯಂತ ಶ್ರದ್ಧಾ ಕೇಂದ್ರವಾಗಿರುವ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುರಾತನ ಪೂಜಮ್ಮ ದೇವಸ್ಥಾನಕ್ಕೆ ಮೀನಾಕ್ಷಿ ಫೌಂಡೇಶನ್ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಆದ ಬೀರಪ್ಪನಹಳ್ಳಿ ಗೌಡನವರ ನರಸಿಂಹಮೂರ್ತಿ ಅವರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ದೇವಸ್ಥಾನದ ಅಭಿವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಅಳಿಲು ಸೇವೆಯನ್ನು ಅರ್ಪಿಸುವುದಾಗಿ ಭರವಸೆ ನೀಡಿದರು. ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಿಯ ಕರಗ ಮಹೋತ್ಸವ ಅಂಗವಾಗಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ದೇವಾಲಯಕ್ಕೆ ಭೇಟಿ ತಾಯಿಯ ದರ್ಶನ ಪಡೆದು ಕ್ಷೇತ್ರದ ಜನತೆಯ ಒಳತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು . ಸ್ಥಳೀಯ ಮುಖಂಡರಾದ ಮುನಿಯಪ್ಪಣ್ಣ ಅವರ ವಿಶೇಷ ಆಹ್ವಾನದ ಮೇರೆಗೆ ದೇವಸ್ಥಾನಕ್ಕೆ ಆಗಮಿಸಿದ ನರಸಿಂಹಮೂರ್ತಿ ಅವರಿಗೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ದಾರಿಯಲ್ಲಿ ತಾವು ನಿರಂತರವಾಗಿ ಸಂಚರಿಸುತ್ತಿರುವುದಾಗಿ ಮತ್ತು ಈ ಪುರಾತನ ದೇವಸ್ಥಾನದೊಂದಿಗೆ ತಮಗೆ ಮೊದಲಿನಿಂದಲೂ ಭಾವನಾತ್ಮಕ ಸಂಬಂಧವಿದೆ ಎಂದು ಸ್ಮರಿಸಿದರು. ಮುನಿಯಪ್ಪಣ್ಣ ಅವರ ಕರೆಯ ಮೇರೆಗೆ ಇಂದು ಇಲ್ಲಿಗೆ ಬಂದು ದೇವಿಯ ಸೇವೆ ಮಾಡುವ ಸೌಭಾಗ್ಯ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಪೂಜಮ್ಮ ದೇವಿಯ ಕರಗ ಮಹೋತ್ಸವದಲ್ಲಿ ಭಾಗವಹಿಸಿದ ಅವರು, "ನಮ್ಮ ಕೈಲಾದ ಅಳಿಲು ಸೇವೆಯನ್ನು ಈ ಪುಣ್ಯಕ್ಷೇತ್ರಕ್ಕೆ ಸಲ್ಲಿಸುತ್ತಿದ್ದೇವೆ. ಭಕ್ತಿಯಿಂದ ಮಾಡುವ ಸಣ್ಣ ಸೇವೆಯೂ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ" ಎಂದು ಅಭಿಪ್ರಾಯಪಟ್ಟರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡುವ ಆಶಯವನ್ನು ಅವರು ವ್ಯಕ್ತಪಡಿಸಿದರು. ಮುಖ್ಯವಾಗಿ ಈ ಭಾಗದ ಶ್ರಮಿಕ ವರ್ಗದವರ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, "ಪೂಜಮ್ಮ ತಾಯಿಯ ಆಶೀರ್ವಾದ ಸಮಾಜದ ಪ್ರತಿಯೊಬ್ಬರಿಗೂ ಸಿಗಬೇಕು. ವಿಶೇಷವಾಗಿ ನಮ್ಮ ಬೆನ್ನೆಲುಬಾಗಿರುವ ರೈತರು ಮತ್ತು ಜೀವನೋಪಾಯಕ್ಕಾಗಿ ಶ್ರಮಿಸುವ ವ್ಯಾಪಾರಸ್ಥರಿಗೆ ತಾಯಿ ಒಳ್ಳೆಯದು ಮಾಡಲಿ" ಎಂದು ಹಾರೈಸಿದರು. ಈ ಭಾಗದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಮತ್ತು ಎಲ್ಲರ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಅವರು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಕಮಿಟಿಯವರು ಮಾತನಾಡಿ ಹುಣ್ಣಿಮೆಯ ದಿವಸ ಗ್ರಹಣ ಇರುವುದರಿಂದ ಸಂಜೆ 3 ಗಂಟೆಗೆ ಪೂಜಾ ಕಾರ್ಯಕ್ರಮಗಳನ್ನು ನಿಲ್ಲಿಸಿ ಗ್ರಹಣ ಮುಗಿದ ಬಳಿಕ ದೇವಾಲಯವನ್ನು ಸ್ವಚ್ಛಗೊಳಿಸಿ ರಾತ್ರಿ 11 ಗಂಟೆಗೆ ಕರಗ ಮಹೋತ್ಸವ ಪ್ರಾರಂಭವಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೂಜಮ್ಮ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾದ ಚಿಕ್ಕಮುನಿಯಪ್ಪ, ಉಪಾಧ್ಯಕ್ಷರಾದ ಆರ್.ಗಣೇಶ್, ಕೆ. ಮಂಜುನಾಥ್, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಚಿಕ್ಕಮುನಿಯಪ್ಪ, ಬೀರಪ್ಪನಹಳ್ಳಿ ದ್ಯಾವಪ್ಪ,ಬಿ.ಎಂ.ಕೃಷ್ಣ, ಹರಿಕೃಷ್ಣ, ಕುರುಬರಪೇಟೆ ಚಂದ್ರಶೇಖರ್,ವಿಘ್ನೇಶ್,ಸೇರಿದಂತೆ ನಗರದ ಪೂಜ ಮ್ಮ ದೇವಿ ಭಕ್ತರು ಪಾಲ್ಗೊಂಡಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ1
- ಚಂದ್ರ ಗ್ರಹಣ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯ ದೇವಾಲಯ ಕ್ಲೋಸ್1
- ಶಿಷ್ಟಾಚಾರ ಉಲ್ಲಂಘನೆ ಆರೋಪ: ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸಿದ್ದು ಪಾಟೀಲ್ ಕಿಡಿ #JB_NEWS_KANNADA #bidar #humnabad1