ರೈತರಿಗೆ ಮೊಸಳೆ ಕಣ್ಣೀರು ಸುರಿಸುವ ಪಕ್ಷಗಳು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಯಶವಂತಪುರ : ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರೈತರಿಗೆ ಮೊಸಳೆ ಕಣ್ಣೀರು ಸುರಿಸುವ ಪಕ್ಷಗಳು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಣಿಪುರದ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಅಧಿಕಾರಕ್ಕೆ ಬರುವ ಮುನ್ನ ರೈತರ ಪರ, ರೈತರಿಗಾಗಿ ಹೋರಾಟ, ಅಧಿಕಾರ ಸಿಕ್ಕ ನಂತರ ರೈತರಿಗೆ ದೋಖಾ. ಮೂರು ಪಕ್ಷಗಳು ಬೋಗಸ್ ಎಂದು ಹರಿಹಾಯ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶದ ಮೇರೆಗೆ ಮಂಡ್ಯ ಡೈರಿ ಅವ್ಯವಹಾರದ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ಸೂಪರ್ ಸೀಡ್ ಮಾಡಲು ತೆರಳುವ ಮಾರ್ಗ ಮಧ್ಯದಲ್ಲಿ ಮಾಜಿ ಪ್ರಧಾನಿ ಮತ್ತು ಅವರ ಮಗ ಮಾಜಿ ಮುಖ್ಯಮಂತ್ರಿ ಕರೆ ಮಾಡಿ ಸೂಪರ್ ಸೀಡ್ ಮಾಡದಂತೆ ತಡೆಯೊಡ್ಡುವ ಕೆಲಸಕ್ಕೆ ಮುಂದಾಗಿದ್ದರು, ನಂತರ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡವರ ಕರೆಗಳು ಬರುತ್ತಿವೆ, ವಾಪಾಸ್ ಬಾ ಎಂದು ಕರೆಸಿಕೊಂಡರು. ಇಲ್ಲಿಯವರೆಗೂ ಮಂಡ್ಯ ಹಾಲು ಒಕ್ಕೂಟಕ್ಕೆ ನ್ಯಾಯ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂದು ನೈಸ್ ಸಂಸ್ಥೆಯವರು ಎಕರಗೆ ಕೇವಲ ಹತ್ತು ರೂಪಾಯಿಗೆ 900 ಎಕರೆ ಭೂಮಿ ವಶಪಡಿಸಿಕೊಂಡು ಇಂದು ಟೌನ್ ಶಿಪ್ ಮಾಡಲು ಹೊರಟಿದೆ.ಬಿಡದಿಯಲ್ಲಿ ಎಕರೆಗೆ 2 ಕೋಟಿ ನಿಗದಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಎಕರೆಗೆ 40 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿರುವುದು ಏಕೆ.? ಎಂದು ಪ್ರಶ್ನಿಸಿದರು. ನೈಸ್ ರಸ್ತೆಯ ಮೇಲ್ಸೇತುವೆ ಕಿರಿದಾಗಿದೆ. ರೈತರಿಗೆ ಪರಿಹಾರದ ನಿವೇಶನ ನೀಡಿಲ್ಲ, 30 ವರ್ಷ ಭೋಗ್ಯದ ಸಮಯ ಮುಗಿದ ಹಿನ್ನೆಲೆಯಲ್ಲಿ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು ಇಲ್ಲವೇ ಸರ್ಕಾರ ವಶಕ್ಕೆ ತೆಗೆದುಕೊಂಡು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಹಲವು ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಬಮೂಲ್ ನಿರ್ದೇಶಕ ಕಾವೇರಿ ಕೃಷ್ಣಪ್ಪ, ಗೋಣಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷೆ ರಾಜಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹೇಶ್, ಚಿಕ್ಕ ರಾಜು, ಮುಖಂಡರಾದ ಲಕ್ಷ್ಮಯ್ಯ, ನಾರಾಯಣ ಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

- ಕನಸಿನ ಕೆಟಿಎಂ ಬೈಕ್ ಕಳ್ಳರ ಪಾಲು ಸಿಸಿಟಿವಿಯಲ್ಲಿ ಸೆರೆಯಾದ ಕ್ಷಣಾರ್ಧ ಕಳ್ಳತನ1
- ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.3
- अंग्रेजी स्टाइल में प्यार करूंगी...',पलंग से बांधकर गर्लफ्रेंड ने बनाए संबंध, फिर केरोसिन डालकर जिंदा जलाया बेंगलुरु में प्रेम प्रसंग का खौफनाक अंत सामने आया, जहां एक युवती ने कथित तौर पर अपने प्रेमी को घर बुलाकर जिंदा जला दिया। रिश्ते में दरार और धोखे की आशंका इस वारदात की वजह बताई जा रही है. पुलिस ने आरोपी को हिरासत में लेकर जांच शुरू कर दी है, मामले में कई चौंकाने वाले खुलासे हो रहे हैं. कर्नाटक में बेंगलुरु के ब्यावराहल्ली पुलिस थाना क्षेत्र के अंजनानगर में एक चौंकाने वाली घटना सामने आई है, जहां 21 अप्रैल को दोपहर करीब 2 बजे एक युवक को उसकी प्रेमिका ने कथित तौर पर जिंदा जला दिया. पीड़ित की पहचान किरण के रूप में हुई है. वह उस समय महिला के घर गया था जब वहां कोई और मौजूद नहीं था. पुलिस सूत्रों के अनुसार, आरोपी महिला ने कथित तौर पर किरण से कहा कि वह उसे अंग्रेजी स्टाइल में प्रपोज करेगी. इसके बाद उसने कथित तौर पर उसके हाथ-पैर रस्सी से बांध दिए .1
- ಟೊಮೊಟೊ ಬೇಯಿಸಿದ ಸಾಂಬಾರ್/ಗೊಜ್ಜು * #Tomatogojju #Tomatocurry #Karnatakastyle #Tomatogravy #Premarecipes Description (YOGi writes) : - ಶೀಘ್ರವಾಗಿ ಮಾಡುವ ಸಾಂಬಾರ್ ಗಳಲ್ಲಿ ಇದು ಒಂದು ,ನಾಲಿಗೆಗೆ ರುಚಿ ಕೊಡುವ ಟೊಮೆಟೊ ಗೊಜ್ಜು, ಮೊದಲಿಗೆ ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಬೇಯಿಸಿ , ನಂತರ ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ , ಜೀರಿಗೆ, ಉಪ್ಪು ಹಾಕಿ, ಸಾಂಬಾರ್ ತಯಾರಿಸಬಹುದು | TOMATO GOJJU RECIPE | TOMATO CURRY | RECIPES #Tomatosambar #Tomatosaaru #Tomatokurma #Tomatokorma #Assistant #KSGE #DIPR #YOGi #ವಾರ್ತೆ #Government #Employee #fda #sda #clark ► Subscribe to I, Yogi , will give you tips that will put your min1
- ward no 32 kolar masjid ahle hadees k road me ugd ka gilazat bhara huwa pani road par April 23, 20261
- KOLAR KI.AWAAZ KOUSAR NEWS1
- Post by Chand Pasha1
- ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಕ್ರೂರವಾಗಿ ಕೊಲೆಗೈದ ಆರೋಪದ ಮೇಲೆ ಪ್ರೇಯಸಿ ಪ್ರೇಮಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮನಕಲಕುವಂತಿದೆ. ಪ್ರೇಮಾಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕುಟುಂಬಸ್ಥರು ಮತ್ತು ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ನಿಜಾಸತ್ಯ ಹೊರಬರಬೇಕಿದೆ.1