ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ? ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಬಿಜೆಪಿ ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆ ಮಣೆ ಹಾಕಿದೆ. ಸಾಮಾಜಿಕ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಶ್ರೀನಿವಾಸ ದಾಸಕರಿಯಪ್ಪ ತಂದೆ ದಾಸಕರಿಯಪ್ಪ ಹಮಾಲಿ ಕೆಲಸದಿಂದ ಮೇಲೆ ಬಂದಿದ್ದು, ಮೂಲ ಜನತಾಪರಿವಾರದವರು. ಈಗ ಮಗ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿಯಲ್ಲಿದ್ದು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿ ಪರಿಗಣಿಸಲ್ಪಡುವ ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿನ್ನೆಲೆ, ಎಸ್‌ಟಿ ಸಮುದಾಯದ ಅಭ್ಯರ್ಥಿಗೆ ಆದ್ಯತೆ ನೀಡಲಾಗಿದೆ. ಈ ನಿರ್ಧಾರದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆಯೇ ಶ್ರೀನಿವಾಸ್ ದಾಸಕರಿಯಪ್ಪ ಅವರ ಮನೆ ಎದುರು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ “ಈ ಬಾರಿ ಬಿಜೆಪಿ… ಈ ಬಾರಿ ಬಿಜೆಪಿ” ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ತಂಡೋಪತಂಡವಾಗಿ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಮನೆ ಎದುರು ಹಬ್ಬದಂತ ವಾತಾವರಣ ಕಂಡುಬರುತ್ತಿದೆ.

- Post by Suresh Belagere1
- ಚಿತ್ರದುರ್ಗದ ಐಯ್ಯಣ್ಣನ ಪೇಟೆಯ ವಾಸವಿ ಶಾಲೆ ರಸ್ತೆ ಬಳಿ ಆಕಸ್ಮಿಕ ಬೆಂಕಿ ಬಿದ್ದು ವಿದ್ಯುತ್ ಕಂಬ ಹೊತ್ತಿ ಉರಿದಿದೆ. ಗುರುವಾರ ಬೆಳಗ್ಗೆ 11 ಗಂಟೆ ವೇಳೆ ಘಟನೆ ನಡೆಸಿದ್ದು ಸಾರ್ವಜನಿಕರು ಓಡಾಡಲು ಬಯ ಪಡುವ ಪರಿಸ್ಥಿತಿ ಉಂಟಾಗಿದೆ.1
- ಶಿವಮೊಗ್ಗ-ಬಿಸಿಲಿನ ತಾಪಕ್ಕೆ ಸೊರಗಿದ್ದ ಜನತೆಗೆ ತಂಪೆರೆದ ಆಲಿಕಲ್ಲಿನ ಮಳೆ2
- ಚಳ್ಳಕೆರೆ ತಾಲೂಕಿನ ದೊಡ್ಡೇರಿ ಶ್ರೀಕನ್ನೇಶ್ವರ ಆಶ್ರಮದಲ್ಲಿ ಯುಗಾದಿ ಅಂಗವಾಗಿ ಪಲ್ಲಕ್ಕಿ ಉತ್ಸವ ದೊಂದಿಗೆ ಯುಗಾದಿ ಸಂಭ್ರಮಾಚರಣೆ ನಡೆಯಿತು1
- “ಕೊಪ್ಪಳ ತಾಲೂಕಿನ ಬಸಾಪುರ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ… ಈ ಘಟನೆದಿಂದ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ… ಇದು ಹೊಸ ಸಮಸ್ಯೆಯಲ್ಲ… ದಶಕಗಳಿಂದ ಕಾಲುವೆಗಳ ನಿರ್ವಹಣೆ ಇಲ್ಲದ ಪರಿಣಾಮ… ಬೇಸಿಗೆಯಲ್ಲಿ ಒಂದು ಹನಿ ನೀರು ಕೂಡ ಅಮೂಲ್ಯ… ಆದರೆ ಇಲ್ಲಿ ಲಕ್ಷಾಂತರ ಲೀಟರ್ ನೀರು ಹೀಗೆ ಪೋಲಾಗುತ್ತಿದೆ… ನಾಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ರೆ ಯಾರು ಹೊಣೆ? ಜನರ ಆಗ್ರಹ ಒಂದೇ… ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ ಕೊಡಬೇಕು ಇದು ಕೇವಲ ಕಾಲುವೆ ಒಡೆದ ಘಟನೆ ಅಲ್ಲ… ಇದು ವ್ಯವಸ್ಥೆಯ ವೈಫಲ್ಯ!” 🔥1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ಯುಗಾದಿ ಹಬ್ಬಕ್ಕೆ ಮಾವಿನ ಸೊಪ್ಪು, ಹೂವು ಮತ್ತು ಬೇವಿನ ಸೊಪ್ಪು ಖರೀದಿಸುವುದು ಒಂದು . ಸಂಪ್ರದಾಯ. ಈ ವಸ್ತುಗಳು ಯುಗಾದಿ ಹಬ್ಬದ ವಿಶೇಷ ಅಂಶಗಳಾಗಿವೆ. ಮಾವಿನ ಸೊಪ್ಪು: ಮಾವಿನ ಸೊಪ್ಪು ಹೊಸ ಆರಂಭ ಮತ್ತು ಶುಭತೆಯನ್ನು ಸೂಚಿಸುತ್ತದೆ. -ಹೂವು: ಹೂವುಗಳು ಸೌಂದರ್ಯ ಮತ್ತು ಸಂತೋಷವನ್ನು ಸೂಚಿಸುತ್ತವೆ. - ಬೇವಿನ ಸೊಪ್ಪು: ಬೇವಿನ ಸೊಪ್ಪು ಕಹಿಯನ್ನು ಸೂಚಿಸುತ್ತದೆ, ಇದು ಜೀವನದ ಕಹಿ ಅನುಭವಗಳನ್ನು ನೆನಪಿಸುತ್ತದೆ. ನೀವು ಯುಗಾದಿ ಹಬ್ಬಕ್ಕೆ ಈ ವಸ್ತುಗಳನ್ನು ಖರೀದಿಸಲು ಜನ ಮುಗಿಬಿದ್ದದ್ದರು.1
- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜೆಬಿ ಹಳ್ಳಿ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಗಾಳಿ-ಮಳೆಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಅನೇಕ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಗಿಡಗಳು ನೆಲಕ್ಕುರುಳಿ ನಾಶವಾಗಿವೆ. ವರ್ಷಪೂರ್ತಿ ಶ್ರಮಪಟ್ಟ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತ ಶಿವಣ್ಣ ತಮ್ಮ ನೋವನ್ನು ಹಂಚಿಕೊಂಡು ಸರ್ಕಾರದಿಂದ ತುರ್ತು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. #ಚಿತ್ರದುರ್ಗ #ಮೊಳಕಾಲ್ಮೂರು #ಜೆಬಿಹಳ್ಳಿ #ಗಾಳಿಮಳೆ #ರೈತನಷ್ಟ #ಬಾಳೆಬೆಳೆ #ಕರ್ನಾಟಕಸುದ್ದಿ #BreakingNews #FarmersLoss #RainDamage #KarnatakaNews #BananaCrop #Agriculture #WeatherDamage1
- ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏1