logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮತ್ತು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಬಸವಣ್ಣನನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಕರೆ ನೀಡಿದರು. ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಮತ್ತು ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು, ಯುದ್ಧ ನಿಲ್ಲಿಸದೆ ಹಠಕ್ಕೆ ಬಿದ್ದಿರುವ ದೇಶಗಳಿಗೆ ಬುದ್ಧನ 'ವೈರಿಯಿಂದ ವೈರಿ ನಾಶವಾಗುವುದಿಲ್ಲ. ಆ ವೈರಿಯಿಂದ ವೈರಿ ನಾಶವಾಗುತ್ತದೆ' ಎಂಬ ಸತ್ಯ ಸಂದೇಶವನ್ನು ತಲುಪಿಸಬೇಕು ಎಂದು ಹೇಳಿದರು. ಅಲ್ಲದೆ, ಲೋಕ ಬದುಕಿನ ಧರ್ಮವನ್ನು ಸಾರುವ ಶಿವಶರಣರ ವಚನಗಳನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಬೇಕು ಎಂದೂ ಪ್ರತಿಪಾದಿಸಿದರು. ಅಂಬೇಡ್ಕರ್ ಜಯಂತಿಯು ವರ್ಣರಂಜಿತ ಮತ್ತು ಡಿಜೆ ಸಂಭ್ರಮದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪ್ರತಿದಿನದ ವ್ಯವಹಾರಿಕ ಕ್ಷೇತ್ರ ಸೇರಿ ಆಡಳಿತ ಮತ್ತು ವಿದೇಶಾಂಗ ವ್ಯವಹಾರದಲ್ಲಿ ಉಲ್ಲೇಖಿತರಾಗುವ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ನಿತ್ಯವೂ ಜಯಂತಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಯಲ್ಲಪ್ಪ, ನ್ಯಾಯ ಬೆಲೆ ಅಂಗಡಿ ಮಾಲೀಕ ಎಚ್. ಚನ್ನಿಗರಾಮಯ್ಯ, ಸಾಮಾಜಿಕ ಹೋರಾಟಗಾರ ಎಸ್.ಎಸ್. ಸೈಯದ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಬಿ.ಸಿ. ವೆಂಕಟೇಶ್ ಮೂರ್ತಿ, ಬಿ.ಸಿ. ಸತೀಶ್ ಕುಮಾರ್, ಕಾರ್ತಿಕ್, ಅಜ್ಮತ್ ವುಲ್ಲಾ, ಪಿ. ಚಿದಾನಂಯ್ಯ, ಎಂ. ಶೇಖರಪ್ಪ, ಕೆ. ರುದ್ರಮುನಿ, ಲಕ್ಷ್ಮಿಪುರ ರಾಜಶೇಖರಪ್ಪ, ದ್ಯಾಮಣ್ಣ, ನಾಗರಾಜ್, ಲೋಹಿತ್, ಎಂ.ಎನ್. ಮೃತ್ಯುಂಜಯ, ವಿಷ್ಣುಮೂರ್ತಿ ರಾವ್, ಗುತ್ತಿಗೆದಾರ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

2 hrs ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
2 hrs ago

ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮತ್ತು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಬಸವಣ್ಣನನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಕರೆ ನೀಡಿದರು. ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಮತ್ತು ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು, ಯುದ್ಧ ನಿಲ್ಲಿಸದೆ ಹಠಕ್ಕೆ ಬಿದ್ದಿರುವ ದೇಶಗಳಿಗೆ ಬುದ್ಧನ 'ವೈರಿಯಿಂದ ವೈರಿ ನಾಶವಾಗುವುದಿಲ್ಲ. ಆ ವೈರಿಯಿಂದ ವೈರಿ ನಾಶವಾಗುತ್ತದೆ' ಎಂಬ ಸತ್ಯ ಸಂದೇಶವನ್ನು ತಲುಪಿಸಬೇಕು ಎಂದು ಹೇಳಿದರು. ಅಲ್ಲದೆ, ಲೋಕ ಬದುಕಿನ ಧರ್ಮವನ್ನು ಸಾರುವ ಶಿವಶರಣರ ವಚನಗಳನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಬೇಕು ಎಂದೂ ಪ್ರತಿಪಾದಿಸಿದರು. ಅಂಬೇಡ್ಕರ್ ಜಯಂತಿಯು ವರ್ಣರಂಜಿತ ಮತ್ತು ಡಿಜೆ ಸಂಭ್ರಮದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪ್ರತಿದಿನದ ವ್ಯವಹಾರಿಕ ಕ್ಷೇತ್ರ ಸೇರಿ ಆಡಳಿತ ಮತ್ತು ವಿದೇಶಾಂಗ ವ್ಯವಹಾರದಲ್ಲಿ ಉಲ್ಲೇಖಿತರಾಗುವ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ನಿತ್ಯವೂ ಜಯಂತಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಯಲ್ಲಪ್ಪ, ನ್ಯಾಯ ಬೆಲೆ ಅಂಗಡಿ ಮಾಲೀಕ ಎಚ್. ಚನ್ನಿಗರಾಮಯ್ಯ, ಸಾಮಾಜಿಕ ಹೋರಾಟಗಾರ ಎಸ್.ಎಸ್. ಸೈಯದ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಬಿ.ಸಿ. ವೆಂಕಟೇಶ್ ಮೂರ್ತಿ, ಬಿ.ಸಿ. ಸತೀಶ್ ಕುಮಾರ್, ಕಾರ್ತಿಕ್, ಅಜ್ಮತ್ ವುಲ್ಲಾ, ಪಿ. ಚಿದಾನಂಯ್ಯ, ಎಂ. ಶೇಖರಪ್ಪ, ಕೆ. ರುದ್ರಮುನಿ, ಲಕ್ಷ್ಮಿಪುರ ರಾಜಶೇಖರಪ್ಪ, ದ್ಯಾಮಣ್ಣ, ನಾಗರಾಜ್, ಲೋಹಿತ್, ಎಂ.ಎನ್. ಮೃತ್ಯುಂಜಯ, ವಿಷ್ಣುಮೂರ್ತಿ ರಾವ್, ಗುತ್ತಿಗೆದಾರ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಲಭಿಸಲಿ ಎಂದು ಪ್ರಾರ್ಥಿಸಿ ಕೇರಳದ ಕೊಟ್ಟಿಯೂರಿನ ಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿರಿಯೂರು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ಜಿಲ್ಲೆಯಲ್ಲಿ ಪೈಪೋಟಿ ಆರಂಭವಾಗಿದ್ದು, ಜಿಲ್ಲೆಯ ಶಾಸಕರ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಈ ವಿಶೇಷ ಪೂಜೆಯನ್ನು ಚಿತ್ರದುರ್ಗದ ಟಿ. ರಘುಮೂರ್ತಿ ಯುವ ಸೇನೆಯ ವತಿಯಿಂದ ಕೆ.ಟಿ. ಶಿವಕುಮಾರ್ ಅವರು ಕೇರಳಕ್ಕೆ ತೆರಳಿ ನೆರವೇರಿಸಿದರು. ಕೊಟ್ಟಿಯೂರಿನ ಶಿವನ ದೇವಸ್ಥಾನದಲ್ಲಿ ಶಾಸಕ ಟಿ. ರಘುಮೂರ್ತಿ ಅವರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಶಿವಕುಮಾರ್, ಸತತ ಮೂರು ಗಂಟೆಗಳ ಕಾಲ ಮಳೆಯನ್ನು ಲೆಕ್ಕಿಸದೆ ನೆನೆದುಕೊಂಡೇ ಪೂಜೆ ಮಾಡಿದರು. ಶಾಸಕ ಟಿ. ರಘುಮೂರ್ತಿ ಅವರಿಗೆ ದೇವರ ಕೃಪೆಯಿಂದ ಸಚಿವ ಸ್ಥಾನ ಸಿಗಲಿ ಎಂದು ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
    1
    ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಲಭಿಸಲಿ ಎಂದು ಪ್ರಾರ್ಥಿಸಿ ಕೇರಳದ ಕೊಟ್ಟಿಯೂರಿನ ಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿರಿಯೂರು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ಜಿಲ್ಲೆಯಲ್ಲಿ ಪೈಪೋಟಿ ಆರಂಭವಾಗಿದ್ದು, ಜಿಲ್ಲೆಯ ಶಾಸಕರ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ.

ಈ ವಿಶೇಷ ಪೂಜೆಯನ್ನು ಚಿತ್ರದುರ್ಗದ ಟಿ. ರಘುಮೂರ್ತಿ ಯುವ ಸೇನೆಯ ವತಿಯಿಂದ ಕೆ.ಟಿ. ಶಿವಕುಮಾರ್ ಅವರು ಕೇರಳಕ್ಕೆ ತೆರಳಿ ನೆರವೇರಿಸಿದರು. ಕೊಟ್ಟಿಯೂರಿನ ಶಿವನ ದೇವಸ್ಥಾನದಲ್ಲಿ ಶಾಸಕ ಟಿ. ರಘುಮೂರ್ತಿ ಅವರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಶಿವಕುಮಾರ್, ಸತತ ಮೂರು ಗಂಟೆಗಳ ಕಾಲ ಮಳೆಯನ್ನು ಲೆಕ್ಕಿಸದೆ ನೆನೆದುಕೊಂಡೇ ಪೂಜೆ ಮಾಡಿದರು. ಶಾಸಕ ಟಿ. ರಘುಮೂರ್ತಿ ಅವರಿಗೆ ದೇವರ ಕೃಪೆಯಿಂದ ಸಚಿವ ಸ್ಥಾನ ಸಿಗಲಿ ಎಂದು ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
  • ಕೊಪ್ಪಳದಲ್ಲಿ BALDOTA ಮತ್ತು MSMP ಸಂಸ್ಥೆಗಳ ಸಹಯೋಗದಲ್ಲಿ ನೂರಾರು ಫಲಾನುಭವಿಗಳಿಗಾಗಿ 13ನೇ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರವು 16, 17 ಮತ್ತು 18 ರಂದು ಮೂರು ದಿನಗಳ ಕಾಲ ನಡೆಯಿತು, ಅಗತ್ಯವಿರುವವರಿಗೆ ನೆರವು ನೀಡಿತು.
    1
    ಕೊಪ್ಪಳದಲ್ಲಿ BALDOTA ಮತ್ತು MSMP ಸಂಸ್ಥೆಗಳ ಸಹಯೋಗದಲ್ಲಿ ನೂರಾರು ಫಲಾನುಭವಿಗಳಿಗಾಗಿ 13ನೇ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರವು 16, 17 ಮತ್ತು 18 ರಂದು ಮೂರು ದಿನಗಳ ಕಾಲ ನಡೆಯಿತು, ಅಗತ್ಯವಿರುವವರಿಗೆ ನೆರವು ನೀಡಿತು.
    user_YUVA JAGRUTI NEWS
    YUVA JAGRUTI NEWS
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    8 hrs ago
  • ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ. ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    4
    ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ.

ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    19 hrs ago
  • ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ರಾಜ್ಯ ರಾಜಕಾರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿದ್ದರಾಮಯ್ಯನವರ ಬುದ್ಧಿವಂತಿಕೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿರಾಣಿ ಅವರ ಪ್ರಕಾರ, ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು, ಆದರೆ ಅವರು ಯಾವಾಗ ಯಾವ ಗೊಂಬೆ ಆಟ ಆಡಿಸುತ್ತಾರೆ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲ.
    1
    ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ರಾಜ್ಯ ರಾಜಕಾರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿದ್ದರಾಮಯ್ಯನವರ ಬುದ್ಧಿವಂತಿಕೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿರಾಣಿ ಅವರ ಪ್ರಕಾರ, ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು, ಆದರೆ ಅವರು ಯಾವಾಗ ಯಾವ ಗೊಂಬೆ ಆಟ ಆಡಿಸುತ್ತಾರೆ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲ.
    user_H M ಹರಕುಣಿ
    H M ಹರಕುಣಿ
    Local News Reporter Haveri, Karnataka•
    20 hrs ago
  • ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನಲ್ಲಿ, ದುಂಡಶಿ ವಲಯ ಅರಣ್ಯಾಧಿಕಾರಿಗಳು ಬಡ ರೈತನ ಮೇಲೆ ದೌರ್ಜನ್ಯ ಎಸಗಿರುವ ಘಟನೆಯನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿಗ್ಗಾಂವ್ ತಾಲೂಕಾ ಘಟಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಈ ದೌರ್ಜನ್ಯವು ಕೋಣನಕೇರಿ ಶುಗರ್‌ಫ್ಯಾಕ್ಟರಿ ಸಮೀಪದ ಜಮೀನಿನಲ್ಲಿ ನಡೆದಿದ್ದು, ಶಿವಪುರ ಗ್ರಾಮದ ಈರಪ್ಪ ಸೋಮಪ್ಪ ಲಮಾಣಿ ಎಂಬ ರೈತನ ಕುಟುಂಬವು ಮೂರು ತಲೆಮಾರುಗಳಿಂದ ಈ ಭೂಮಿಯನ್ನು ಸಾಗುವಳಿ ಮಾಡುತ್ತಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ ತಿಳಿಸಿದ್ದಾರೆ. 1994ರಲ್ಲಿ ಕೆಲವು ರೈತರಿಗೆ ಸಾಗುವಳಿ ಪತ್ರವನ್ನು ಸಹ ನೀಡಲಾಗಿದ್ದು, ಅದರಂತೆಯೇ ಈ ರೈತರು ಸಾಗುವಳಿ ಮುಂದುವರಿಸಿದ್ದಾರೆ ಎಂದು ಕೆಳಗಿನಮನಿ ಹೇಳಿದ್ದಾರೆ. ಕಳೆದ ವಾರ, ರೈತ ಈರಪ್ಪ ಲಮಾಣಿ ಅವರು ತಮ್ಮ ಜಮೀನಿನಲ್ಲಿ ಗೋವಿನಜೋಳ ಬಿತ್ತನೆ ಮಾಡುತ್ತಿದ್ದಾಗ, ದುಂಡಶಿ ವಲಯದ ಅರಣ್ಯ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಬಂದು ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. “ಇಲ್ಲೇಕೆ ಉಳುಮೆ ಮಾಡುತ್ತೀಯಾ?” ಎಂದು ತಕರಾರು ತೆಗೆದು, ಬಂಕಾಪುರ ಪೊಲೀಸರ ಸಹಯೋಗದೊಂದಿಗೆ ರೈತನನ್ನು ಎಳೆದಾಡಿ, ಹೊಲದಿಂದ ಹೊರಹಾಕುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ರೈತ ಸಂಘದವರು ದೂರಿದ್ದಾರೆ. ರೈತ ಸಂಘಟನೆಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ತಲೆಮಾರುಗಳಿಂದ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ತಕ್ಷಣವೇ ಹಕ್ಕುಪತ್ರ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಮೇಲೆ ನಿರಂತರವಾಗಿ ಇಂತಹ ದೌರ್ಜನ್ಯ ಎಸಗಿದರೆ, ರೈತ ಸಂಘವು ಸುಮ್ಮನಿರುವುದಿಲ್ಲ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಅನಿಲ್ ಡೊಳ್ಳಿನ, ರಾಜ್ಯ ಸಂಚಾಲಕರು ಬಸವರಾಜ್ ತಳವಾರ, ಗಿರಧರಗೌಡ ಪಾಟೀಲ, ಭೀಮಪ್ಪ ಗೊಟಗೋಡಿ, ವೀರಪ್ಪ ಲಮಾಣಿ, ರಾಮಪ್ಪ ಲಮಾಣಿ, ಶಾಂತವ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನಲ್ಲಿ, ದುಂಡಶಿ ವಲಯ ಅರಣ್ಯಾಧಿಕಾರಿಗಳು ಬಡ ರೈತನ ಮೇಲೆ ದೌರ್ಜನ್ಯ ಎಸಗಿರುವ ಘಟನೆಯನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿಗ್ಗಾಂವ್ ತಾಲೂಕಾ ಘಟಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಈ ದೌರ್ಜನ್ಯವು ಕೋಣನಕೇರಿ ಶುಗರ್‌ಫ್ಯಾಕ್ಟರಿ ಸಮೀಪದ ಜಮೀನಿನಲ್ಲಿ ನಡೆದಿದ್ದು, ಶಿವಪುರ ಗ್ರಾಮದ ಈರಪ್ಪ ಸೋಮಪ್ಪ ಲಮಾಣಿ ಎಂಬ ರೈತನ ಕುಟುಂಬವು ಮೂರು ತಲೆಮಾರುಗಳಿಂದ ಈ ಭೂಮಿಯನ್ನು ಸಾಗುವಳಿ ಮಾಡುತ್ತಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ ತಿಳಿಸಿದ್ದಾರೆ. 1994ರಲ್ಲಿ ಕೆಲವು ರೈತರಿಗೆ ಸಾಗುವಳಿ ಪತ್ರವನ್ನು ಸಹ ನೀಡಲಾಗಿದ್ದು, ಅದರಂತೆಯೇ ಈ ರೈತರು ಸಾಗುವಳಿ ಮುಂದುವರಿಸಿದ್ದಾರೆ ಎಂದು ಕೆಳಗಿನಮನಿ ಹೇಳಿದ್ದಾರೆ.

ಕಳೆದ ವಾರ, ರೈತ ಈರಪ್ಪ ಲಮಾಣಿ ಅವರು ತಮ್ಮ ಜಮೀನಿನಲ್ಲಿ ಗೋವಿನಜೋಳ ಬಿತ್ತನೆ ಮಾಡುತ್ತಿದ್ದಾಗ, ದುಂಡಶಿ ವಲಯದ ಅರಣ್ಯ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಬಂದು ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. “ಇಲ್ಲೇಕೆ ಉಳುಮೆ ಮಾಡುತ್ತೀಯಾ?” ಎಂದು ತಕರಾರು ತೆಗೆದು, ಬಂಕಾಪುರ ಪೊಲೀಸರ ಸಹಯೋಗದೊಂದಿಗೆ ರೈತನನ್ನು ಎಳೆದಾಡಿ, ಹೊಲದಿಂದ ಹೊರಹಾಕುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ರೈತ ಸಂಘದವರು ದೂರಿದ್ದಾರೆ. ರೈತ ಸಂಘಟನೆಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ತಲೆಮಾರುಗಳಿಂದ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ತಕ್ಷಣವೇ ಹಕ್ಕುಪತ್ರ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಮೇಲೆ ನಿರಂತರವಾಗಿ ಇಂತಹ ದೌರ್ಜನ್ಯ ಎಸಗಿದರೆ, ರೈತ ಸಂಘವು ಸುಮ್ಮನಿರುವುದಿಲ್ಲ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಅನಿಲ್ ಡೊಳ್ಳಿನ, ರಾಜ್ಯ ಸಂಚಾಲಕರು ಬಸವರಾಜ್ ತಳವಾರ, ಗಿರಧರಗೌಡ ಪಾಟೀಲ, ಭೀಮಪ್ಪ ಗೊಟಗೋಡಿ, ವೀರಪ್ಪ ಲಮಾಣಿ, ರಾಮಪ್ಪ ಲಮಾಣಿ, ಶಾಂತವ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    35 min ago
  • ಕೈಲಾಶ್ ಅವರು ಪ್ಲಂಬಿಂಗ್ ಸೇವೆಯನ್ನು ನೀಡುತ್ತಿದ್ದು, ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡಲಾಗುವುದು. ಈ ಸೇವೆಗಾಗಿ 9353624221 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
    1
    ಕೈಲಾಶ್ ಅವರು ಪ್ಲಂಬಿಂಗ್ ಸೇವೆಯನ್ನು ನೀಡುತ್ತಿದ್ದು, ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡಲಾಗುವುದು. ಈ ಸೇವೆಗಾಗಿ 9353624221 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
    user_Babusab Tambakad
    Babusab Tambakad
    Electrician ಶಿಗ್ಗಾಂವ್, ಹಾವೇರಿ, ಕರ್ನಾಟಕ•
    22 hrs ago
  • ಚಳ್ಳಕೆರೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ, ಇಂಜಿನಿಯರ್ ಕಾಲೇಜು, ಡಿಟಿಟಿಸಿ ಕೇಂದ್ರ, ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ವೇದಾವತಿ ನದಿಯಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕ ಟಿ. ರಘುಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಡುಗೊಲ್ಲ ಸಂಘ ಹಾಗೂ ಟಿ. ರಘುಮೂರ್ತಿ ಅಭಿಮಾನಿ ಬಳಗ ಒತ್ತಾಯಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡುಗೊಲ್ಲ ಸಂಘದ ಉಪಾಧ್ಯಕ್ಷರಾದ ಜಿ.ಟಿ. ಶಶಿಧರ್ ಮತ್ತು ಸಿದ್ದಾಪುರ ಮಂಜುನಾಥ್, ರಘುಮೂರ್ತಿ ಅವರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ. ಶಶಿಧರ್, ಸಣ್ವೀರಣ್ಣ, ತಿಪ್ಪೇಸ್ವಾಮಿ (ಜೋಗಿ), ಸಿದ್ದಾಪುರ ಮಂಜುನಾಥ್, ವೈ. ಕಾಂತರಾಜ್, ಶಿವಮೂರ್ತಿ, ಯೂತ್ ಕಾಂಗ್ರೆಸ್‌ನ ಬಾನು ಸ್ಟುಡಿಯೋ ವೀರೇಶ್, ಮಹೇಂದ್ರ, ಹೊಟ್ಟೆಪ್ಪನಹಳ್ಳಿ ನಾಗರಾಜ್, ಮಹಾಲಿಂಗಪ್ಪ ಸೇರಿದಂತೆ ಕಾಡುಗೊಲ್ಲ ಸಮುದಾಯದ ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
    1
    ಚಳ್ಳಕೆರೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ, ಇಂಜಿನಿಯರ್ ಕಾಲೇಜು, ಡಿಟಿಟಿಸಿ ಕೇಂದ್ರ, ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ವೇದಾವತಿ ನದಿಯಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕ ಟಿ. ರಘುಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಡುಗೊಲ್ಲ ಸಂಘ ಹಾಗೂ ಟಿ. ರಘುಮೂರ್ತಿ ಅಭಿಮಾನಿ ಬಳಗ ಒತ್ತಾಯಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡುಗೊಲ್ಲ ಸಂಘದ ಉಪಾಧ್ಯಕ್ಷರಾದ ಜಿ.ಟಿ. ಶಶಿಧರ್ ಮತ್ತು ಸಿದ್ದಾಪುರ ಮಂಜುನಾಥ್, ರಘುಮೂರ್ತಿ ಅವರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ. ಶಶಿಧರ್, ಸಣ್ವೀರಣ್ಣ, ತಿಪ್ಪೇಸ್ವಾಮಿ (ಜೋಗಿ), ಸಿದ್ದಾಪುರ ಮಂಜುನಾಥ್, ವೈ. ಕಾಂತರಾಜ್, ಶಿವಮೂರ್ತಿ, ಯೂತ್ ಕಾಂಗ್ರೆಸ್‌ನ ಬಾನು ಸ್ಟುಡಿಯೋ ವೀರೇಶ್, ಮಹೇಂದ್ರ, ಹೊಟ್ಟೆಪ್ಪನಹಳ್ಳಿ ನಾಗರಾಜ್, ಮಹಾಲಿಂಗಪ್ಪ ಸೇರಿದಂತೆ ಕಾಡುಗೊಲ್ಲ ಸಮುದಾಯದ ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಹೊಸದುರ್ಗ ತಾಲ್ಲೂಕಿನ ಜೋಡಿ ಶ್ರೀರಂಗಾಪುರ ಭೋವಿಹಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕರಿಯಮ್ಮ ಮತ್ತು ಕೃಷ್ಣಮೂರ್ತಿ ಎಂಬ ಅಣ್ಣ-ತಂಗಿ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ, ಗಾಯಗೊಂಡ ಇಬ್ಬರೂ ಪ್ರಸ್ತುತ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಆರೋಪದ ಪ್ರಕಾರ, ಕರಿಯಮ್ಮ ಅವರ ಮನೆಯ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಲು ಹೋದಾಗ, ವೀರಣ್ಣ, ಮಣಿಕಂಠ, ಮಂಜು ಮತ್ತು ಸತೀಶ್ ಎಂಬ ನಾಲ್ವರು ಅವರ ಮೇಲೆ ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರು ಕರಿಯಮ್ಮ ಅವರ ಮನೆಯ ಬಾಗಿಲಿಗೆ ಕಲ್ಲುಗಳಿಂದ ಹೊಡೆದು ಹಾನಿ ಮಾಡಿದ್ದಲ್ಲದೆ, ಮನೆಯ ಹೆಂಚುಗಳನ್ನೂ ಸಹ ಹಾನಿಗೊಳಿಸಿದ್ದಾರೆ.
    1
    ಹೊಸದುರ್ಗ ತಾಲ್ಲೂಕಿನ ಜೋಡಿ ಶ್ರೀರಂಗಾಪುರ ಭೋವಿಹಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕರಿಯಮ್ಮ ಮತ್ತು ಕೃಷ್ಣಮೂರ್ತಿ ಎಂಬ ಅಣ್ಣ-ತಂಗಿ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ, ಗಾಯಗೊಂಡ ಇಬ್ಬರೂ ಪ್ರಸ್ತುತ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳ ಆರೋಪದ ಪ್ರಕಾರ, ಕರಿಯಮ್ಮ ಅವರ ಮನೆಯ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಲು ಹೋದಾಗ, ವೀರಣ್ಣ, ಮಣಿಕಂಠ, ಮಂಜು ಮತ್ತು ಸತೀಶ್ ಎಂಬ ನಾಲ್ವರು ಅವರ ಮೇಲೆ ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರು ಕರಿಯಮ್ಮ ಅವರ ಮನೆಯ ಬಾಗಿಲಿಗೆ ಕಲ್ಲುಗಳಿಂದ ಹೊಡೆದು ಹಾನಿ ಮಾಡಿದ್ದಲ್ಲದೆ, ಮನೆಯ ಹೆಂಚುಗಳನ್ನೂ ಸಹ ಹಾನಿಗೊಳಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 hrs ago
  • ಬ್ಯಾಡಗಿ ನಗರದಲ್ಲಿ ಸಾಯಂಕಾಲ ಧಾರಾಕಾರ ಮಳೆ ಸುರಿದಿದ್ದು, ಇದರ ಪರಿಣಾಮವಾಗಿ ಚಾವಡಿ ರಸ್ತೆ ಮತ್ತು ಮುಖ್ಯ ರಸ್ತೆಗಳು ನೀರಿನಿಂದ ಆವೃತವಾಗಿ ಸಂಪೂರ್ಣವಾಗಿ ಮುಳುಗಿವೆ. ಈ ಪರಿಸ್ಥಿತಿಯನ್ನು ಗಮನಿಸಿದ ಪುರಸಭೆಯು ತಕ್ಷಣವೇ ಕ್ಷಿಪ್ರ ಕಾರ್ಯಾಚರಣೆಯನ್ನು ಆರಂಭಿಸಿದೆ.
    1
    ಬ್ಯಾಡಗಿ ನಗರದಲ್ಲಿ ಸಾಯಂಕಾಲ ಧಾರಾಕಾರ ಮಳೆ ಸುರಿದಿದ್ದು, ಇದರ ಪರಿಣಾಮವಾಗಿ ಚಾವಡಿ ರಸ್ತೆ ಮತ್ತು ಮುಖ್ಯ ರಸ್ತೆಗಳು ನೀರಿನಿಂದ ಆವೃತವಾಗಿ ಸಂಪೂರ್ಣವಾಗಿ ಮುಳುಗಿವೆ. ಈ ಪರಿಸ್ಥಿತಿಯನ್ನು ಗಮನಿಸಿದ ಪುರಸಭೆಯು ತಕ್ಷಣವೇ ಕ್ಷಿಪ್ರ ಕಾರ್ಯಾಚರಣೆಯನ್ನು ಆರಂಭಿಸಿದೆ.
    user_H M ಹರಕುಣಿ
    H M ಹರಕುಣಿ
    Local News Reporter Haveri, Karnataka•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.