ಚಳ್ಳಕೆರೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ, ಇಂಜಿನಿಯರ್ ಕಾಲೇಜು, ಡಿಟಿಟಿಸಿ ಕೇಂದ್ರ, ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ವೇದಾವತಿ ನದಿಯಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕ ಟಿ. ರಘುಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಡುಗೊಲ್ಲ ಸಂಘ ಹಾಗೂ ಟಿ. ರಘುಮೂರ್ತಿ ಅಭಿಮಾನಿ ಬಳಗ ಒತ್ತಾಯಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡುಗೊಲ್ಲ ಸಂಘದ ಉಪಾಧ್ಯಕ್ಷರಾದ ಜಿ.ಟಿ. ಶಶಿಧರ್ ಮತ್ತು ಸಿದ್ದಾಪುರ ಮಂಜುನಾಥ್, ರಘುಮೂರ್ತಿ ಅವರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ. ಶಶಿಧರ್, ಸಣ್ವೀರಣ್ಣ, ತಿಪ್ಪೇಸ್ವಾಮಿ (ಜೋಗಿ), ಸಿದ್ದಾಪುರ ಮಂಜುನಾಥ್, ವೈ. ಕಾಂತರಾಜ್, ಶಿವಮೂರ್ತಿ, ಯೂತ್ ಕಾಂಗ್ರೆಸ್‌ನ ಬಾನು ಸ್ಟುಡಿಯೋ ವೀರೇಶ್, ಮಹೇಂದ್ರ, ಹೊಟ್ಟೆಪ್ಪನಹಳ್ಳಿ ನಾಗರಾಜ್, ಮಹಾಲಿಂಗಪ್ಪ ಸೇರಿದಂತೆ ಕಾಡುಗೊಲ್ಲ ಸಮುದಾಯದ ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
ಚಳ್ಳಕೆರೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ, ಇಂಜಿನಿಯರ್ ಕಾಲೇಜು, ಡಿಟಿಟಿಸಿ ಕೇಂದ್ರ, ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ವೇದಾವತಿ ನದಿಯಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕ ಟಿ. ರಘುಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಡುಗೊಲ್ಲ ಸಂಘ ಹಾಗೂ ಟಿ. ರಘುಮೂರ್ತಿ ಅಭಿಮಾನಿ ಬಳಗ ಒತ್ತಾಯಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡುಗೊಲ್ಲ ಸಂಘದ ಉಪಾಧ್ಯಕ್ಷರಾದ ಜಿ.ಟಿ. ಶಶಿಧರ್ ಮತ್ತು ಸಿದ್ದಾಪುರ ಮಂಜುನಾಥ್, ರಘುಮೂರ್ತಿ ಅವರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿ.ಟಿ. ಶಶಿಧರ್, ಸಣ್ವೀರಣ್ಣ, ತಿಪ್ಪೇಸ್ವಾಮಿ (ಜೋಗಿ), ಸಿದ್ದಾಪುರ ಮಂಜುನಾಥ್, ವೈ. ಕಾಂತರಾಜ್, ಶಿವಮೂರ್ತಿ, ಯೂತ್ ಕಾಂಗ್ರೆಸ್‌ನ ಬಾನು ಸ್ಟುಡಿಯೋ ವೀರೇಶ್, ಮಹೇಂದ್ರ, ಹೊಟ್ಟೆಪ್ಪನಹಳ್ಳಿ ನಾಗರಾಜ್, ಮಹಾಲಿಂಗಪ್ಪ ಸೇರಿದಂತೆ ಕಾಡುಗೊಲ್ಲ ಸಮುದಾಯದ ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.
- ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ವಯಸ್ಸಿನ ಭೇದವಿಲ್ಲದೆ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಇದಕ್ಕೆ ಮತ್ತೊಂದು ಆಘಾತಕಾರಿ ಉದಾಹರಣೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ 4 ವರ್ಷದ ಪುಟ್ಟ ಬಾಲಕನೊಬ್ಬ ತೀವ್ರ ಎದೆನೋವಿನಿಂದ ಮೃತಪಟ್ಟಿರುವ ದುರದೃಷ್ಟಕರ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ (4) ಮೃತಪಟ್ಟ ಬಾಲಕ. ಮಗು ಇದ್ದಕ್ಕಿದ್ದಂತೆ ತೀವ್ರವಾದ ಎದೆ ಉರಿಯಿಂದ ಬಳಲಲಾರಂಭಿಸಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ. ಮಗುವಿನ ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಹೃದಯಾಘಾತದಿಂದಾಗಿರಬಹುದು ಎಂದು ಶಂಕಿಸಲಾಗಿದೆ.1
- ರಾಜ್ಯಾಧ್ಯಕ್ಷರಾದ ಹೆಚ್ ಎಂ ರೇವಣ್ಣ ಅವರು ಚಿತ್ರದುರ್ಗದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದೀಕಾರದ ಕಚೇರಿಗೆ ಭೇಟಿ ನೀಡಿದ್ದಾರೆ. ಬುಧವಾರ ಮಧ್ಯಾಹ್ನ 12.15 ಕ್ಕೆ ಕಚೇರಿಗೆ ಭೇಟಿ ನೀಡಿದ ಹೆಚ್ ಎಂ ರೇವಣ್ಣ ಅವರು ಪರಿಶೀಲನೆ ನಡೆಸಿದರು. ಇದೇ ವೇಳೆ, ಕಾಂಗ್ರೆಸ್ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದೀಕಾರದ ವತಿಯಿಂದ ಹೆಚ್ ಎಂ ರೇವಣ್ಣ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳ ಮಲ್ಲಾಪುರ ಗ್ರಾಮದಲ್ಲಿ ಯಾವುದೇ ಕಂಪನಿಯ ನೆಟ್‌ವರ್ಕ್ ಸೌಲಭ್ಯ ಲಭ್ಯವಿಲ್ಲದೆ ಇರುವುದರಿಂದ ಸಮಸ್ತ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯಿಂದ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರವಾಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದರೊಂದಿಗೆ, ಶಾಸಕರು ಈ ವಿಷಯದ ಬಗ್ಗೆ ಕೂಡಲೇ ಸ್ಪಂದಿಸಬೇಕೆಂದೂ ಅವರು ಕೋರಿದ್ದಾರೆ. ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ವೀರೇಂದ್ರ ಪಾಟೀಲ್ ಮತ್ತು ಡಿ. ನಾಗರಾಜ್, ಮಾಜಿ ಉಪಾಧ್ಯಕ್ಷ ಎಮ್. ಗಾಳೆಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ಹೆಚ್. ಜಿತೇಂದ್ರ, ಹಾಗೂ ಮಾಳಿಗೆ ಸಿದ್ದಪ್ಪ, ಟೈಲರ್ ವೀರೇಶ, ಬಳಿಗೇರ ಬಸವರಾಜ, ತಳವಾರ್ ಮಹೇಶ, ಕೆಂಚಜ್ಜರ ವೀರೇಶ, ಹೆಚ್. ಯುವರಾಜ್, ಹೆಚ್. ಪ್ರವೀಣ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.4
- ನ್ಯೂ ತೈಪೆ ಸಿಟಿ ಅಥ್ಲೆಟಿಕ್ಸ್ ಓಪನ್ 2026ರಲ್ಲಿ ಭಾರತದ ಅಥ್ಲೀಟ್ ಶೈಲಿ ಸಿಂಗ್ ಅವರು 6.24 ಮೀಟರ್ ದೂರ ಜಿಗಿದು ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ. ಈ ಸಾಧನೆಯು ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮತ್ತು ಅಚಲ ಆತ್ಮವಿಶ್ವಾಸದ ಫಲಿತಾಂಶವಾಗಿದೆ. ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮತ್ತೊಮ್ಮೆ ಹಾರಿಸುವ ಮೂಲಕ ಶೈಲಿ ಸಿಂಗ್ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಮಹತ್ವದ ಸಾಧನೆಯು ದೇಶದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಕನಸುಗಳನ್ನು ನನಸಾಗಿಸಲು ಶ್ರಮ ಮತ್ತು ಸಮರ್ಪಣೆ ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ಮರಳಿನ ಅಂಗಳದಲ್ಲಿ ಮೂಡಿದ ಈ ಚಿನ್ನದ ಹೆಜ್ಜೆಗುರುತು ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ದಾಖಲಾಗಿದೆ, ಮತ್ತು ಅವರ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳು ವ್ಯಕ್ತವಾಗಿವೆ.1
- ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮತ್ತು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಬಸವಣ್ಣನನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಕರೆ ನೀಡಿದರು. ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಮತ್ತು ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು, ಯುದ್ಧ ನಿಲ್ಲಿಸದೆ ಹಠಕ್ಕೆ ಬಿದ್ದಿರುವ ದೇಶಗಳಿಗೆ ಬುದ್ಧನ 'ವೈರಿಯಿಂದ ವೈರಿ ನಾಶವಾಗುವುದಿಲ್ಲ. ಆ ವೈರಿಯಿಂದ ವೈರಿ ನಾಶವಾಗುತ್ತದೆ' ಎಂಬ ಸತ್ಯ ಸಂದೇಶವನ್ನು ತಲುಪಿಸಬೇಕು ಎಂದು ಹೇಳಿದರು. ಅಲ್ಲದೆ, ಲೋಕ ಬದುಕಿನ ಧರ್ಮವನ್ನು ಸಾರುವ ಶಿವಶರಣರ ವಚನಗಳನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಬೇಕು ಎಂದೂ ಪ್ರತಿಪಾದಿಸಿದರು. ಅಂಬೇಡ್ಕರ್ ಜಯಂತಿಯು ವರ್ಣರಂಜಿತ ಮತ್ತು ಡಿಜೆ ಸಂಭ್ರಮದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪ್ರತಿದಿನದ ವ್ಯವಹಾರಿಕ ಕ್ಷೇತ್ರ ಸೇರಿ ಆಡಳಿತ ಮತ್ತು ವಿದೇಶಾಂಗ ವ್ಯವಹಾರದಲ್ಲಿ ಉಲ್ಲೇಖಿತರಾಗುವ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ನಿತ್ಯವೂ ಜಯಂತಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಯಲ್ಲಪ್ಪ, ನ್ಯಾಯ ಬೆಲೆ ಅಂಗಡಿ ಮಾಲೀಕ ಎಚ್. ಚನ್ನಿಗರಾಮಯ್ಯ, ಸಾಮಾಜಿಕ ಹೋರಾಟಗಾರ ಎಸ್.ಎಸ್. ಸೈಯದ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಬಿ.ಸಿ. ವೆಂಕಟೇಶ್ ಮೂರ್ತಿ, ಬಿ.ಸಿ. ಸತೀಶ್ ಕುಮಾರ್, ಕಾರ್ತಿಕ್, ಅಜ್ಮತ್ ವುಲ್ಲಾ, ಪಿ. ಚಿದಾನಂಯ್ಯ, ಎಂ. ಶೇಖರಪ್ಪ, ಕೆ. ರುದ್ರಮುನಿ, ಲಕ್ಷ್ಮಿಪುರ ರಾಜಶೇಖರಪ್ಪ, ದ್ಯಾಮಣ್ಣ, ನಾಗರಾಜ್, ಲೋಹಿತ್, ಎಂ.ಎನ್. ಮೃತ್ಯುಂಜಯ, ವಿಷ್ಣುಮೂರ್ತಿ ರಾವ್, ಗುತ್ತಿಗೆದಾರ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.1
- ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಹಾಗೂ ಗೃಹ ಇಲಾಖೆಯ ಸಹಯೋಗದೊಂದಿಗೆ, ಶಿರಾ ನಗರ ಪೊಲೀಸ್ ಠಾಣೆಯು ಇಂದು ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ 'ಮನೆ ಮನೆ ಪೊಲೀಸ್' ಎಂಬ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು 'ಮನೆ ಮನೆ ಪೊಲೀಸ್ - ನಮ್ಮ ನಡೆ ಜಾಗೃತಿ ಕಡೆ' ಎಂಬ ಘೋಷವಾಕ್ಯದೊಂದಿಗೆ ಆರಂಭಿಸಲಾಗಿದೆ.1