logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜೂನ್ 24 ರ ಬುಧವಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಎನ್ ಎಸ್ ಬೋಸರಾಜು ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಈ ಧರಣಿಯನ್ನು ಆಯೋಜಿಸಲಾಗಿತ್ತು. ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ರಾಮು, ಬೋಸರಾಜು ಅವರು ಕಳೆದ ಎರಡು ವರ್ಷಗಳಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪರವಾಗಿ ಉಪ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

3 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
3 hrs ago

ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜೂನ್ 24 ರ ಬುಧವಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಎನ್ ಎಸ್ ಬೋಸರಾಜು ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಈ ಧರಣಿಯನ್ನು ಆಯೋಜಿಸಲಾಗಿತ್ತು. ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ರಾಮು, ಬೋಸರಾಜು ಅವರು ಕಳೆದ ಎರಡು ವರ್ಷಗಳಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪರವಾಗಿ ಉಪ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

More news from ಕರ್ನಾಟಕ and nearby areas
  • ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜೂನ್ 24 ರ ಬುಧವಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಎನ್ ಎಸ್ ಬೋಸರಾಜು ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಈ ಧರಣಿಯನ್ನು ಆಯೋಜಿಸಲಾಗಿತ್ತು. ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ರಾಮು, ಬೋಸರಾಜು ಅವರು ಕಳೆದ ಎರಡು ವರ್ಷಗಳಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪರವಾಗಿ ಉಪ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
    1
    ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜೂನ್ 24 ರ ಬುಧವಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಎನ್ ಎಸ್ ಬೋಸರಾಜು ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಈ ಧರಣಿಯನ್ನು ಆಯೋಜಿಸಲಾಗಿತ್ತು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ರಾಮು, ಬೋಸರಾಜು ಅವರು ಕಳೆದ ಎರಡು ವರ್ಷಗಳಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪರವಾಗಿ ಉಪ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ರಾಯಚೂರು ಜಿಲ್ಲೆಯ ದೇವದುರ್ಗ ಪುರಸಭೆಯಲ್ಲಿ ಕಳೆದ 10-15 ವರ್ಷಗಳಿಂದ ಸುದೀರ್ಘವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೈತ ಸಂಘದ ಅಧ್ಯಕ್ಷರಾದ ಹನುಮಂತ್ರಾಯ ದೊರೆ ಸಿಪ್ಪತ್ತಿಗೆರ ಅವರು ಪ್ರಶ್ನಿಸಿದಾಗ, ಪಿಡಿ ಈರಣ್ಣ ಎಂಬ ಅಧಿಕಾರಿಯು ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಮುನ್ನೆಲೆಗೆ ಬಂದಿದೆ. ಲಭ್ಯವಿರುವ ಆಡಿಯೋದಲ್ಲಿ, ಹನುಮಂತ್ರಾಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ “ಏನು ಕ್ರಮ ತಗೊಂಡಿದ್ದೀರಿ?” ಎಂದು ಕೇಳಿದಾಗ, ಅಧಿಕಾರಿಗಳು “ನಾವು ಇನ್ನು ಯಾವುದೇ ಕ್ರಮ ತಗೊಂಡಿಲ್ಲ” ಎಂದು ನಿರ್ಲಕ್ಷ್ಯದ ಧಾಟಿಯಲ್ಲಿ ಉತ್ತರಿಸಿದ್ದಾರೆ. ಮುಂದೆ ಹನುಮಂತ್ರಾಯ ಅವರು, “ಕ್ರಮ ಕೈಗೊಳ್ಳಲು ಆಗದಿದ್ದರೆ ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡಿ, ಮುಂದಿನ ಹೋರಾಟ ಅಥವಾ ಕ್ರಮಕ್ಕೆ ಅನುಕೂಲವಾಗುತ್ತದೆ” ಎಂದು ಕೋರಿಕೊಂಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯು, “ನಾವು ಯಾವುದನ್ನೂ ಬರೆದುಕೊಡುವುದಿಲ್ಲ, ಆಗಲ್ಲ ಅಂತ ಬಾಯಿ ಮಾತಲ್ಲೇ ಹೇಳುತ್ತಿದ್ದೇವಲ್ಲ” ಎಂದು ಖಾರವಾಗಿ ಉತ್ತರಿಸಿ, ಲಿಖಿತ ಪತ್ರ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದರ ಜೊತೆಗೆ, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಾರ್ವಜನಿಕರು ಅಥವಾ ರೈತ ಸಂಘಟನೆಯ ಅಧ್ಯಕ್ಷರು ಕೇಳುವ ಪ್ರಶ್ನೆಗಳಿಗೆ ಈ ರೀತಿ ಬೇಜವಾಬ್ದಾರಿಯಿಂದ ಉತ್ತರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    1
    ರಾಯಚೂರು ಜಿಲ್ಲೆಯ ದೇವದುರ್ಗ ಪುರಸಭೆಯಲ್ಲಿ ಕಳೆದ 10-15 ವರ್ಷಗಳಿಂದ ಸುದೀರ್ಘವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೈತ ಸಂಘದ ಅಧ್ಯಕ್ಷರಾದ ಹನುಮಂತ್ರಾಯ ದೊರೆ ಸಿಪ್ಪತ್ತಿಗೆರ ಅವರು ಪ್ರಶ್ನಿಸಿದಾಗ, ಪಿಡಿ ಈರಣ್ಣ ಎಂಬ ಅಧಿಕಾರಿಯು ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಮುನ್ನೆಲೆಗೆ ಬಂದಿದೆ.

ಲಭ್ಯವಿರುವ ಆಡಿಯೋದಲ್ಲಿ, ಹನುಮಂತ್ರಾಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ “ಏನು ಕ್ರಮ ತಗೊಂಡಿದ್ದೀರಿ?” ಎಂದು ಕೇಳಿದಾಗ, ಅಧಿಕಾರಿಗಳು “ನಾವು ಇನ್ನು ಯಾವುದೇ ಕ್ರಮ ತಗೊಂಡಿಲ್ಲ” ಎಂದು ನಿರ್ಲಕ್ಷ್ಯದ ಧಾಟಿಯಲ್ಲಿ ಉತ್ತರಿಸಿದ್ದಾರೆ. ಮುಂದೆ ಹನುಮಂತ್ರಾಯ ಅವರು, “ಕ್ರಮ ಕೈಗೊಳ್ಳಲು ಆಗದಿದ್ದರೆ ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡಿ, ಮುಂದಿನ ಹೋರಾಟ ಅಥವಾ ಕ್ರಮಕ್ಕೆ ಅನುಕೂಲವಾಗುತ್ತದೆ” ಎಂದು ಕೋರಿಕೊಂಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯು, “ನಾವು ಯಾವುದನ್ನೂ ಬರೆದುಕೊಡುವುದಿಲ್ಲ, ಆಗಲ್ಲ ಅಂತ ಬಾಯಿ ಮಾತಲ್ಲೇ ಹೇಳುತ್ತಿದ್ದೇವಲ್ಲ” ಎಂದು ಖಾರವಾಗಿ ಉತ್ತರಿಸಿ, ಲಿಖಿತ ಪತ್ರ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದರ ಜೊತೆಗೆ, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಾರ್ವಜನಿಕರು ಅಥವಾ ರೈತ ಸಂಘಟನೆಯ ಅಧ್ಯಕ್ಷರು ಕೇಳುವ ಪ್ರಶ್ನೆಗಳಿಗೆ ಈ ರೀತಿ ಬೇಜವಾಬ್ದಾರಿಯಿಂದ ಉತ್ತರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    2 hrs ago
  • ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆಗೆ ಸೂಕ್ತ ಸಮಯವಾಗಿದ್ದರೂ ಮಳೆಯಿಲ್ಲದೆ ಮಣ್ಣಿನಲ್ಲಿ ತೇವಾಂಶವೂ ಇಲ್ಲವಾಗಿದ್ದು, ಕಳೆದ ವರ್ಷದ ಉತ್ತಮ ಮಳೆಯ ನಿರೀಕ್ಷೆ ಹುಸಿಯಾಗಿದೆ. ರೈತರು ಆಕಾಶದತ್ತ ಮುಖಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ; ಮಳೆ ಕೊರತೆಯಿಂದ ಪೂರ್ವ ಹಂಗಾಮಿನ ಬೆಳೆಗಳ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಮುಂಗಾರಿನ ನಂಬಿಕೆಯಲ್ಲಿ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದರೂ ಮಳೆ ಬಾರದ ಕಾರಣ ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಬಿತ್ತನೆ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೆಲವು ರೈತರು ಹತ್ತಿ ಬಿತ್ತನೆ ಮಾಡಿದ್ದರೂ ಸರಿಯಾಗಿ ಮಳೆ ಬರದ ಕಾರಣ ನಾಟಿ ಸಂಪೂರ್ಣವಾಗಿ ಆಗಿಲ್ಲ; ಕೆಲವರು ಎರಡು ಬಾರಿ ಬಿತ್ತನೆ ಮಾಡಿದರೂ ಮಳೆ ಕೈಕೊಟ್ಟಿದೆ. ಈಗಾಗಲೇ ಟ್ರ್ಯಾಕ್ಟರ್ ಬಾಡಿಗೆ ಮತ್ತು ಇತರ ಕೆಲಸಗಳಿಗೆ ರೈತರು ಸಾಲ ಮಾಡಿ ಹಣ ಖರ್ಚು ಮಾಡಿದ್ದು, ಮಳೆ ಬಾರದಿದ್ದರೆ ಈ ಖರ್ಚು ಸಂಪೂರ್ಣ ನಷ್ಟವಾಗುತ್ತದೆ ಎಂದು ರೈತ ವರ್ಗ ಆತಂಕ ವ್ಯಕ್ತಪಡಿಸಿದೆ. ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಹತ್ತಿ ಬೀಜ ಬಿತ್ತನೆ ಮಾಡಿದ ರೈತರಲ್ಲಿ ಬೀಜ ಹುಸಿಹೋಗುವ ಆತಂಕ ಮನೆಮಾಡಿದೆ. ಇದೇ ವೇಳೆ, ರೈತರ ಜಮೀನುಗಳಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ನೀಡದ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಅವೈಜ್ಞಾನಿಕವಾಗಿ ತಮ್ಮ ಮನಸಿಗೆ ಬಂದಂತೆ ಆದೇಶಗಳನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ, ಕಲಬುರಗಿ ಜಿಲ್ಲೆಯ ಜೇವರ್ಗಿ, ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳ ರಸಗೊಬ್ಬರ ಅಂಗಡಿಗಳಲ್ಲಿ ಡಿಎಪಿ 1800 ರೂಪಾಯಿಗಳಿಗೆ ಹಾಗೂ ಯೂರಿಯಾ 400 ರಿಂದ 500 ರೂಪಾಯಿಗಳಿಗೆ ಮಾರಾಟವಾಗುತ್ತಿವೆ ಎಂದು ರಸಗೊಬ್ಬರ ಖರೀದಿಸಿದ ರೈತರೇ ಹೇಳಿದ್ದಾರೆ. ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಸಿಗುತ್ತಿಲ್ಲ ಎಂದು ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಈ ಮೌನದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರಗಳ ಪಾಲು ಎಷ್ಟಿರಬಹುದು ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ರೈತ ಮುಖಂಡ ನಿಂಗಣ್ಣ ಕರಡಿ ಯಕ್ಷಿಂತಿ ಅವರು, ಅವೈಜ್ಞಾನಿಕ ಆದೇಶಗಳನ್ನು ನಿಲ್ಲಿಸಿ ಜಿಲ್ಲಾಡಳಿತ ಪ್ರತಿ ಎಕರೆಗೆ ಒಂದು ಯೂರಿಯಾ ಮತ್ತು ಒಂದು ಡಿಎಪಿ ನೀಡಬೇಕು ಹಾಗೂ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಂಗಾರು ಮಳೆ ಬಾರದೆ ರೈತರು ತೀವ್ರ ಸಂಕಷ್ಟದಲ್ಲಿದ್ದು, ಹೀಗೆ ಮುಂದುವರೆದರೆ ಕೃಷಿ ಬಿಟ್ಟು ಬೆಂಗಳೂರು, ಮಹಾರಾಷ್ಟ್ರದಂತಹ ಪಟ್ಟಣಗಳಿಗೆ ಬದುಕಲು ವಲಸೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚರ ವಹಿಸಿ ರೈತರಿಗೆ ಏನು ಸೌಲಭ್ಯ ಬೇಕು, ಏನು ಕೊರತೆ ಆಗಿದೆ ಎಂಬುದನ್ನು ಅರಿತು ರೈತರ ಪರವಾಗಿ ಕೆಲಸ ಮಾಡಿ, ಅವರ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
    1
    ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆಗೆ ಸೂಕ್ತ ಸಮಯವಾಗಿದ್ದರೂ ಮಳೆಯಿಲ್ಲದೆ ಮಣ್ಣಿನಲ್ಲಿ ತೇವಾಂಶವೂ ಇಲ್ಲವಾಗಿದ್ದು, ಕಳೆದ ವರ್ಷದ ಉತ್ತಮ ಮಳೆಯ ನಿರೀಕ್ಷೆ ಹುಸಿಯಾಗಿದೆ. ರೈತರು ಆಕಾಶದತ್ತ ಮುಖಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ; ಮಳೆ ಕೊರತೆಯಿಂದ ಪೂರ್ವ ಹಂಗಾಮಿನ ಬೆಳೆಗಳ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಮುಂಗಾರಿನ ನಂಬಿಕೆಯಲ್ಲಿ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದರೂ ಮಳೆ ಬಾರದ ಕಾರಣ ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಬಿತ್ತನೆ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೆಲವು ರೈತರು ಹತ್ತಿ ಬಿತ್ತನೆ ಮಾಡಿದ್ದರೂ ಸರಿಯಾಗಿ ಮಳೆ ಬರದ ಕಾರಣ ನಾಟಿ ಸಂಪೂರ್ಣವಾಗಿ ಆಗಿಲ್ಲ; ಕೆಲವರು ಎರಡು ಬಾರಿ ಬಿತ್ತನೆ ಮಾಡಿದರೂ ಮಳೆ ಕೈಕೊಟ್ಟಿದೆ. ಈಗಾಗಲೇ ಟ್ರ್ಯಾಕ್ಟರ್ ಬಾಡಿಗೆ ಮತ್ತು ಇತರ ಕೆಲಸಗಳಿಗೆ ರೈತರು ಸಾಲ ಮಾಡಿ ಹಣ ಖರ್ಚು ಮಾಡಿದ್ದು, ಮಳೆ ಬಾರದಿದ್ದರೆ ಈ ಖರ್ಚು ಸಂಪೂರ್ಣ ನಷ್ಟವಾಗುತ್ತದೆ ಎಂದು ರೈತ ವರ್ಗ ಆತಂಕ ವ್ಯಕ್ತಪಡಿಸಿದೆ. ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಹತ್ತಿ ಬೀಜ ಬಿತ್ತನೆ ಮಾಡಿದ ರೈತರಲ್ಲಿ ಬೀಜ ಹುಸಿಹೋಗುವ ಆತಂಕ ಮನೆಮಾಡಿದೆ.

ಇದೇ ವೇಳೆ, ರೈತರ ಜಮೀನುಗಳಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ನೀಡದ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಅವೈಜ್ಞಾನಿಕವಾಗಿ ತಮ್ಮ ಮನಸಿಗೆ ಬಂದಂತೆ ಆದೇಶಗಳನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ, ಕಲಬುರಗಿ ಜಿಲ್ಲೆಯ ಜೇವರ್ಗಿ, ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳ ರಸಗೊಬ್ಬರ ಅಂಗಡಿಗಳಲ್ಲಿ ಡಿಎಪಿ 1800 ರೂಪಾಯಿಗಳಿಗೆ ಹಾಗೂ ಯೂರಿಯಾ 400 ರಿಂದ 500 ರೂಪಾಯಿಗಳಿಗೆ ಮಾರಾಟವಾಗುತ್ತಿವೆ ಎಂದು ರಸಗೊಬ್ಬರ ಖರೀದಿಸಿದ ರೈತರೇ ಹೇಳಿದ್ದಾರೆ. ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಸಿಗುತ್ತಿಲ್ಲ ಎಂದು ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಈ ಮೌನದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರಗಳ ಪಾಲು ಎಷ್ಟಿರಬಹುದು ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ರೈತ ಮುಖಂಡ ನಿಂಗಣ್ಣ ಕರಡಿ ಯಕ್ಷಿಂತಿ ಅವರು, ಅವೈಜ್ಞಾನಿಕ ಆದೇಶಗಳನ್ನು ನಿಲ್ಲಿಸಿ ಜಿಲ್ಲಾಡಳಿತ ಪ್ರತಿ ಎಕರೆಗೆ ಒಂದು ಯೂರಿಯಾ ಮತ್ತು ಒಂದು ಡಿಎಪಿ ನೀಡಬೇಕು ಹಾಗೂ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಂಗಾರು ಮಳೆ ಬಾರದೆ ರೈತರು ತೀವ್ರ ಸಂಕಷ್ಟದಲ್ಲಿದ್ದು, ಹೀಗೆ ಮುಂದುವರೆದರೆ ಕೃಷಿ ಬಿಟ್ಟು ಬೆಂಗಳೂರು, ಮಹಾರಾಷ್ಟ್ರದಂತಹ ಪಟ್ಟಣಗಳಿಗೆ ಬದುಕಲು ವಲಸೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚರ ವಹಿಸಿ ರೈತರಿಗೆ ಏನು ಸೌಲಭ್ಯ ಬೇಕು, ಏನು ಕೊರತೆ ಆಗಿದೆ ಎಂಬುದನ್ನು ಅರಿತು ರೈತರ ಪರವಾಗಿ ಕೆಲಸ ಮಾಡಿ, ಅವರ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
    user_ನಿಂಗಣ್ಣ ಕರಡಿ ಯಕ್ಷಿಂತಿ
    ನಿಂಗಣ್ಣ ಕರಡಿ ಯಕ್ಷಿಂತಿ
    ವಡಗೇರಾ, ಯಾದಗಿರಿ, ಕರ್ನಾಟಕ•
    4 hrs ago
  • ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸನ್ಮಾನ್ಯ ಶಾಸಕಿ ಶ್ರೀಮತಿ ಕರೆಮ್ಮ ಜಿ. ನಾಯಕ ಅವರು ಕರ್ನಾಟಕ ಟಿವಿ ವತಿಯಿಂದ ನೀಡಲಾದ '2025ರ ಜನನಾಯಕಿ - ಕಲ್ಯಾಣ ಕರ್ನಾಟಕ ವಿಭಾಗ' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ಗೌರವವು ತಮ್ಮ ಜೀವನದ ಸ್ಮರಣೀಯ ಕ್ಷಣವಾಗಿದ್ದು, ಅಪಾರ ಸಂತಸ ತಂದಿದೆ ಎಂದು ತಿಳಿಸಿದರು. ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಕರ್ನಾಟಕ ಟಿವಿಯ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗದವರಿಗೆ ಶಾಸಕಿ ಕರೆಮ್ಮ ಹೃತ್ತೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸಿದರು. ಮುಂದುವರೆದು ಮಾತನಾಡುತ್ತಾ, ತಮ್ಮ ನೆಚ್ಚಿನ ನಾಯಕರಾದ ಶ್ರೀ ಬಸವರಾಜ ಹೊರಟ್ಟಿ ಅವರ ಹಸ್ತದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ತಮ್ಮಲ್ಲಿ ಇನ್ನಷ್ಟು ಖುಷಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಈ ಪ್ರಶಸ್ತಿಯು, ತಮ್ಮನ್ನು ಗುರುತಿಸಿದ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡ ಅಪ್ಪಾಜಿ ಹಾಗೂ ತಮ್ಮ ಗೆಲುವಿಗೆ ಕಾರಣರಾದವರನ್ನು ಸ್ಮರಿಸಿದೆ ಎಂದು ಅವರು ತಿಳಿಸಿದರು.
    1
    ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸನ್ಮಾನ್ಯ ಶಾಸಕಿ ಶ್ರೀಮತಿ ಕರೆಮ್ಮ ಜಿ. ನಾಯಕ ಅವರು ಕರ್ನಾಟಕ ಟಿವಿ ವತಿಯಿಂದ ನೀಡಲಾದ '2025ರ ಜನನಾಯಕಿ - ಕಲ್ಯಾಣ ಕರ್ನಾಟಕ ವಿಭಾಗ' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ಗೌರವವು ತಮ್ಮ ಜೀವನದ ಸ್ಮರಣೀಯ ಕ್ಷಣವಾಗಿದ್ದು, ಅಪಾರ ಸಂತಸ ತಂದಿದೆ ಎಂದು ತಿಳಿಸಿದರು. ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಕರ್ನಾಟಕ ಟಿವಿಯ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗದವರಿಗೆ ಶಾಸಕಿ ಕರೆಮ್ಮ ಹೃತ್ತೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸಿದರು.

ಮುಂದುವರೆದು ಮಾತನಾಡುತ್ತಾ, ತಮ್ಮ ನೆಚ್ಚಿನ ನಾಯಕರಾದ ಶ್ರೀ ಬಸವರಾಜ ಹೊರಟ್ಟಿ ಅವರ ಹಸ್ತದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ತಮ್ಮಲ್ಲಿ ಇನ್ನಷ್ಟು ಖುಷಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಈ ಪ್ರಶಸ್ತಿಯು, ತಮ್ಮನ್ನು ಗುರುತಿಸಿದ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡ ಅಪ್ಪಾಜಿ ಹಾಗೂ ತಮ್ಮ ಗೆಲುವಿಗೆ ಕಾರಣರಾದವರನ್ನು ಸ್ಮರಿಸಿದೆ ಎಂದು ಅವರು ತಿಳಿಸಿದರು.
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    4 hrs ago
  • ಯಾದಗಿರಿ ನಗರದಲ್ಲಿ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ.
    1
    ಯಾದಗಿರಿ ನಗರದಲ್ಲಿ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    5 hrs ago
  • ಹುಣಸಗಿ ತಾಲೂಕಿನ ರಾಜಕೊಳ್ಳುರಿನಲ್ಲಿ ನೆರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಯೋಜನೆ 100 ದಿನಗಳ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಸವರಾಜ ದರ್ಶನ್, ಮಲ್ಲಿಕಾರ್ಜುನ ಯಮ್ನೂರಿ, ಸುನಿತಾ ಶಿವು, ಮಲ್ಲಿಕಾರ್ಜುನ, ಮೀನಾಕ್ಷಿ, ನಿಗಮ್ಮ, ದೇವಮ್ಮ, ದುರ್ಗಮ್ಮ, ಬಸವ, ಬಸಮ್ಮ, ಶ್ರೀದೇವಿ, ಅನಿಲ, ಮಲ್ಲಮ್ಮ, ಪರ್ಸುರಾಂ ಸೇರಿದಂತೆ ಹಲವು ಜನರು ಭಾಗವಹಿಸಿದ್ದರು.
    3
    ಹುಣಸಗಿ ತಾಲೂಕಿನ ರಾಜಕೊಳ್ಳುರಿನಲ್ಲಿ ನೆರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಯೋಜನೆ 100 ದಿನಗಳ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಸವರಾಜ ದರ್ಶನ್, ಮಲ್ಲಿಕಾರ್ಜುನ ಯಮ್ನೂರಿ, ಸುನಿತಾ ಶಿವು, ಮಲ್ಲಿಕಾರ್ಜುನ, ಮೀನಾಕ್ಷಿ, ನಿಗಮ್ಮ, ದೇವಮ್ಮ, ದುರ್ಗಮ್ಮ, ಬಸವ, ಬಸಮ್ಮ, ಶ್ರೀದೇವಿ, ಅನಿಲ, ಮಲ್ಲಮ್ಮ, ಪರ್ಸುರಾಂ ಸೇರಿದಂತೆ ಹಲವು ಜನರು ಭಾಗವಹಿಸಿದ್ದರು.
    user_ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    Electrician ಹುಣಸಗಿ, ಯಾದಗಿರಿ, ಕರ್ನಾಟಕ•
    9 hrs ago
  • ಯಡ್ರಾಮಿ ತಾಲೂಕಿನ ಸಾಥಖೇಡ ಗ್ರಾಮದಲ್ಲಿ ಇಂದು ಮೊಹರಂ ಹಬ್ಬದ ಇಸ್ಲಾಮಿಕ್ 7ನೇ ತಾರೀಕಿನಂದು ಅದ್ಧೂರಿ ಸವಾರಿ ನಡೆಯಿತು. ಈ ಸಂದರ್ಭದಲ್ಲಿ, ಸಾಥಖೇಡದ ಶ್ರೀ ಈರಣ್ಣ ಮುತ್ಯಾ ಅವರು ಸಹಸ್ರಾರು ಭಕ್ತರ ಮಧ್ಯೆ, ಜಾತ್ರಾಯಲ್ಲಿ ಮನೆಯಿಂದ ಸವಾರಿಯಲ್ಲಿ ರಭಸದಿಂದ ಓಡೋಡಿ ಬಂದರು. ಅವರು ಲಾಲ್ ಸಾಹೇಬರ ದೇವರನ್ನು ಸ್ವೀಕರಿಸಿ ಮಾಸಮ್ಮಾಯಿ ಗುಡಿಯಲ್ಲಿ ಹೇಳಿಕೆ ಮಾಡಿದರು. ಈ ಇಡೀ ಪ್ರಕ್ರಿಯೆ ನಡೆಯುವಾಗ, ಭಕ್ತರ “ಲಾಲ್ ಸಾಹೇಬಕಿ ದೋಸ್ತರ ಹೋದಿನ್” ಎಂಬ ಜಯಘೋಷ ಮುಗಿಲು ಮುಟ್ಟಿತ್ತು, ಇದು ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿತು.
    1
    ಯಡ್ರಾಮಿ ತಾಲೂಕಿನ ಸಾಥಖೇಡ ಗ್ರಾಮದಲ್ಲಿ ಇಂದು ಮೊಹರಂ ಹಬ್ಬದ ಇಸ್ಲಾಮಿಕ್ 7ನೇ ತಾರೀಕಿನಂದು ಅದ್ಧೂರಿ ಸವಾರಿ ನಡೆಯಿತು. ಈ ಸಂದರ್ಭದಲ್ಲಿ, ಸಾಥಖೇಡದ ಶ್ರೀ ಈರಣ್ಣ ಮುತ್ಯಾ ಅವರು ಸಹಸ್ರಾರು ಭಕ್ತರ ಮಧ್ಯೆ, ಜಾತ್ರಾಯಲ್ಲಿ ಮನೆಯಿಂದ ಸವಾರಿಯಲ್ಲಿ ರಭಸದಿಂದ ಓಡೋಡಿ ಬಂದರು. ಅವರು ಲಾಲ್ ಸಾಹೇಬರ ದೇವರನ್ನು ಸ್ವೀಕರಿಸಿ ಮಾಸಮ್ಮಾಯಿ ಗುಡಿಯಲ್ಲಿ ಹೇಳಿಕೆ ಮಾಡಿದರು. ಈ ಇಡೀ ಪ್ರಕ್ರಿಯೆ ನಡೆಯುವಾಗ, ಭಕ್ತರ “ಲಾಲ್ ಸಾಹೇಬಕಿ ದೋಸ್ತರ ಹೋದಿನ್” ಎಂಬ ಜಯಘೋಷ ಮುಗಿಲು ಮುಟ್ಟಿತ್ತು, ಇದು ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿತು.
    user_Parashuram Mudabal B
    Parashuram Mudabal B
    Lawyer ಜೇವರ್ಗಿ, ಕಲಬುರಗಿ, ಕರ್ನಾಟಕ•
    23 hrs ago
  • ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ನರಸಪ್ಪ ಭಂಡಾರಿ ಅವರು ಸರ್ಕಾರದ 'ಕರಡು ನಿಯಮಗಳು-2026' ಅನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂಬತ್ತು ಮತ್ತು ಹತ್ತನೇ ತರಗತಿಗಳ ಪಾಠ ಬೋಧನೆಗಾಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲು ಹೊರಡಿಸಿರುವ ಈ ನಿಯಮಗಳು ಅತ್ಯಂತ ಅವೈಜ್ಞಾನಿಕವಾಗಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ದ್ವಂದ್ವ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಓದುತ್ತಿರುವ ಲಕ್ಷಾಂತರ ಬಡ, ಗ್ರಾಮೀಣ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ನೀಟ್, ಜೆ.ಇ.ಇ, ಸಿಇಟಿ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಪಿಯು ಉಪನ್ಯಾಸಕರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದಾರೆ ಎಂದು ನರಸಪ್ಪ ಭಂಡಾರಿ ವಿವರಿಸಿದರು. ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವುದರಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡು, ಗ್ರಾಮೀಣ ಪ್ರತಿಭೆಗಳಿಗೆ ಸಿಗಬೇಕಾದ ಸೂಕ್ತ ಮಾರ್ಗದರ್ಶನ ತಪ್ಪಿ ಹೋಗುತ್ತದೆ ಮತ್ತು ಅವರ ಭವಿಷ್ಯ ಪ್ರಪಾತಕ್ಕೆ ತಳ್ಳಿದಂತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೇ ಹೊರತು, ಪಿಯು ಉಪನ್ಯಾಸಕರ ಸ್ವತಂತ್ರ ಅಸ್ತಿತ್ವವನ್ನು ಹಾಳು ಮಾಡಬಾರದು ಎಂದು ಅವರು ಆಗ್ರಹಿಸಿದರು. ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗೆ ನಿಯೋಜಿಸುವ ಈ ತಿದ್ದುಪಡಿಯು ಅವೈಜ್ಞಾನಿಕವಾಗಿದ್ದು, ರಾಯಚೂರಿನಲ್ಲಿ ಇದಕ್ಕೆ ಅಸಮದಾನ ವ್ಯಕ್ತವಾಗಿದೆ.
    1
    ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ನರಸಪ್ಪ ಭಂಡಾರಿ ಅವರು ಸರ್ಕಾರದ 'ಕರಡು ನಿಯಮಗಳು-2026' ಅನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂಬತ್ತು ಮತ್ತು ಹತ್ತನೇ ತರಗತಿಗಳ ಪಾಠ ಬೋಧನೆಗಾಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲು ಹೊರಡಿಸಿರುವ ಈ ನಿಯಮಗಳು ಅತ್ಯಂತ ಅವೈಜ್ಞಾನಿಕವಾಗಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ದ್ವಂದ್ವ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಓದುತ್ತಿರುವ ಲಕ್ಷಾಂತರ ಬಡ, ಗ್ರಾಮೀಣ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ನೀಟ್, ಜೆ.ಇ.ಇ, ಸಿಇಟಿ ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಪಿಯು ಉಪನ್ಯಾಸಕರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದಾರೆ ಎಂದು ನರಸಪ್ಪ ಭಂಡಾರಿ ವಿವರಿಸಿದರು. ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವುದರಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡು, ಗ್ರಾಮೀಣ ಪ್ರತಿಭೆಗಳಿಗೆ ಸಿಗಬೇಕಾದ ಸೂಕ್ತ ಮಾರ್ಗದರ್ಶನ ತಪ್ಪಿ ಹೋಗುತ್ತದೆ ಮತ್ತು ಅವರ ಭವಿಷ್ಯ ಪ್ರಪಾತಕ್ಕೆ ತಳ್ಳಿದಂತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೆ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೇ ಹೊರತು, ಪಿಯು ಉಪನ್ಯಾಸಕರ ಸ್ವತಂತ್ರ ಅಸ್ತಿತ್ವವನ್ನು ಹಾಳು ಮಾಡಬಾರದು ಎಂದು ಅವರು ಆಗ್ರಹಿಸಿದರು. ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗೆ ನಿಯೋಜಿಸುವ ಈ ತಿದ್ದುಪಡಿಯು ಅವೈಜ್ಞಾನಿಕವಾಗಿದ್ದು, ರಾಯಚೂರಿನಲ್ಲಿ ಇದಕ್ಕೆ ಅಸಮದಾನ ವ್ಯಕ್ತವಾಗಿದೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.