ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಮಂದಿ ಸಾವು... ಇಬ್ಬರ ಸ್ಥಿತಿ ಗಂಭೀರ ಮೈಸೂರು:ಕೆ .ಆರ್ .ನಗರ ತಾಲೂಕಿನ ಸಮೀಪದ ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಜನ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೃಷ್ಣರಾಜನಗರ ಸಮೀಪದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ವೀಕ್ಷಿಸಲು 8ಮಂದಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದಾಗ,ಆರು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಐಮನ್(13), ಯಾಸಿನ್(23), ನೇಹಾನ್ (22), ತಮಿಳುನಾಡು ಊಟಿಯ ಫಾತಿಮಾ(30), ಉಮೆರ್(5), ಕೆ.ಆರ್.ನಗರದ ಕೆ.ಆಫೀಫ (13) ಮೃತಪಟ್ಟ ದುರ್ದೈವಿಗಳು. ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ರವಾನಿಸಲಾಗಿದೆ. ವಿಷಯ ತಿಳಿದ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮೃತರ ಮಾಹಿತಿ ಪಡೆದರು. ಸಾವಿನ ವಿಷಯ ತಿಳಿದು ಸ್ಥಳೀಯರು ಆಸ್ಪತ್ರೆ ಮುಂಭಾಗ ಜಮಾಯಿಸಿದರು. ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ನಾಗೇಶ್, ಮಲ್ಲಿಕ್ , ಕೆ.ಆರ್.ನಗರ ಪೊಲೀಸ್ ಠಾಣೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. *ಸಿಎಂರಿಂದ ಸಂತಾಪ,ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಣೆ* ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಮಂದಿ ಸಾವು... ಇಬ್ಬರ ಸ್ಥಿತಿ ಗಂಭೀರ ಮೈಸೂರು:ಕೆ .ಆರ್ .ನಗರ ತಾಲೂಕಿನ ಸಮೀಪದ ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಜನ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೃಷ್ಣರಾಜನಗರ ಸಮೀಪದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ವೀಕ್ಷಿಸಲು 8ಮಂದಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದಾಗ,ಆರು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಐಮನ್(13), ಯಾಸಿನ್(23), ನೇಹಾನ್ (22), ತಮಿಳುನಾಡು ಊಟಿಯ ಫಾತಿಮಾ(30), ಉಮೆರ್(5), ಕೆ.ಆರ್.ನಗರದ ಕೆ.ಆಫೀಫ (13) ಮೃತಪಟ್ಟ ದುರ್ದೈವಿಗಳು. ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ರವಾನಿಸಲಾಗಿದೆ. ವಿಷಯ ತಿಳಿದ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮೃತರ ಮಾಹಿತಿ ಪಡೆದರು. ಸಾವಿನ ವಿಷಯ ತಿಳಿದು ಸ್ಥಳೀಯರು ಆಸ್ಪತ್ರೆ ಮುಂಭಾಗ ಜಮಾಯಿಸಿದರು. ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ನಾಗೇಶ್, ಮಲ್ಲಿಕ್ , ಕೆ.ಆರ್.ನಗರ ಪೊಲೀಸ್ ಠಾಣೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. *ಸಿಎಂರಿಂದ ಸಂತಾಪ,ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಣೆ* ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ನಂಜನಗೂಡು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಮೂವರಿಗೆ ಗಂಭೀರ ಗಾಯಗೊಂಡು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ. ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನ (16) ಮೃತ ದುರ್ದೈವಿ. ಮಹದೇವಸ್ವಾಮಿ ತನ್ನ ಪತ್ನಿ, ಮಗಳು ಮತ್ತು ಮಗನ ಜೊತೆ ಬೈಕ್ ನಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಾಪಸ್ ಮಡುವಿನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಹೆಡಿಯಾಲ ಮತ್ತು ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಾಲ್ವರು ಬಿದ್ದಿದ್ದಾರೆ. ಈ ವೇಳೆ ನಾಲ್ವರಿಗೂ ಗಂಭೀರ ಗಾಯಗಳಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಸಿಂಚನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಂಚನ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಪಘಾತ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಪಟ್ಟಣ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವಣ್ಣ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದ ಶಾಸಕರು ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವುಗಳು ನಂತರ ಮರೆಯುತ್ತೇವೆ. ಸ್ವಾರ್ಥ ಮತ್ತು ನಾನು ಮೇಲು ಎಂಬ ನಾನತ್ವಗಳನ್ನು ಮೈಗೂಡಿಸಿಕೊಂಡರೆ. ಬಸವಣ್ಣ ರವರ ಸಮಾಜ ಸುಧಾರಣೆ ಆಗುವ ನಿಟ್ಟಿನಲ್ಲಿ ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ನೀವು ನಡೆಯಿರಿ ಅದನ್ನು ನೋಡಿ ನಮ್ಮ ಮುಂದಿನ ಪೀಳಿಗೆ ಕಲಿಯುತ್ತದೆ. ಇಂದು ನಾವು ನಮ್ಮ ಮಕ್ಕಳ ಮುಂದೆ ಎನು ಮಾಡುತ್ತೇವೆ ಅದನ್ನಗ ಅವರು ಸಹ ಅನುಸರಿಸುತ್ತಾರೆ. ಆಗಾಗಿ ಮಹನೀಯರ ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗದೆ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಎಂದರು ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ಪಟ್ಟಣದಲ್ಲಿ ಆಚರಣೆ ಮಾಡುವ ಬಸವೇಶ್ವರರ ಜಯಂತಿಗೆ ನನ್ನ ಸಂಪೂರ್ಣ ಸಹಕಾರವಿದೆ. ಅದೇ ರೀತಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡಿ. ನಿಮ್ಮ ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಇದೆ ಸಮಯದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್,ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಾದ ರೇಖಾ,ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್,ತಾಲೂಕು ಉಪಾಧ್ಯಕ್ಷರಾದ ಪ್ರತಿಮ ಮಹದೇವ್,ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ಮಾಜಿ ಚಾಮುಲ್ ಅಧ್ಯಕ್ಷರಾದ ಗುರುಮಲ್ಲಪ್ಪ,ಜಿಲ್ಲಾ ನಿರ್ದೇಶಕರಾದ ಬಸವರಾಜು,ಸಮುದಾಯದ ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ,ಟಿ ಸದಾಶಿವ ಮೂರ್ತಿ,ಡಿ. ಕೆ ರಾಜು,ಉದ್ದನೂರು ಗಿರೀಶ್, ಜಿಕೆ ಹೊಸೂರು ಪ್ರಮೋದ್, ವಿನೋದ್,ಉಮೇಶ್,ಹಾಗೂ ಇನ್ನಿತರರು ಇದ್ದರು..4
- ಮೈಸೂರು ಹನು ಫ್ಯಾಬ್ರಿಕೇಷನ್, ಇಲ್ಲಿ ರೈತರಿಗೆ ಸಹಾಯ ವಾಗುವ ಬೈಕ್ ಟ್ರಾಲಿ, ಎತ್ತಿನ ಗಾಡಿ, ಕಬ್ಬಿಣ ತಯಾರಿ ಆಗುವ ಹೂವಿನ ಅಲಂಕಾರ ಚಿತ್ರಗಳು ಇವುಗಳನ್ನು ಇಲ್ಲಿ ತಯಾರಿ ಮಾಡಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಸಂಪರ್ಕ ಮಾಡಿ :- +9191648653184
- ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರಶಿವಯೋಗಿಗಳರವರ ಕರ್ತೃ ಗದ್ದುಗೆ ಆಮಾವಾಸ್ಯೆ ವಿಶೇಷ ಪೂಜೆ -ದರ್ಶನಕ್ಕ ಹರಿದು ಬಂದ ಜನಸಾಗರ • ಜಗದ್ಗುರು ಶ್ರೀವೀರಸಿಂಹಾಸನ ಮಹಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ಅರ್ಶೀವಾದ ಪಡೆದು ಪುನಿತರಾದ ಭಕ್ತರು ನಂಜನಗೂಡು :ಆಮಾವಾಸ್ಯೆ ಶುಕ್ರವಾರದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆ ದರ್ಶನಕ್ಕ ಅಪಾರ ಜನರು ಅಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆಗೆ ಅಪಾರ ಭಕ್ತ ಸಮೂಹವೇ ಅಗಮಿಸಿ ದರ್ಶನ ಪಡೆದು ನಂತರ ಪರಮ ಪೂಜ್ಯರ ಅರ್ಶೀವಾದ ಪಡೆದರು. ಶುಕ್ರವಾರ ನಡೆದ ವಿಶೇಷ ಪೂಜೆಯಲ್ಲಿ ಲಿಂಗೈಕ್ಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಹಾಗೂ ಆದಿ ಜಗದ್ಗುರುಗಳ ಉತ್ಸವಮೂರ್ತಿಗೆ ಶ್ರೀ ನಂಜುAಡೇಶ್ವರ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು,ಹೂವಿನ ಅಲಂಕಾರದ ವಿಶೇಷ ದರ್ಶನ ಎಲ್ಲರ ಭಕ್ತರ ಮನಸೂರಗೊಂಡಿತು. ಮಹಾ ಮಂಗಳಾರತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಕತೃ ಗದ್ದುಗಳಿಗೆ ಉತ್ಸವ ಮೂರ್ತಿಗಳಿಗೆ ಶ್ರೀ ನಂಜುAಡೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದರು ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಭಕ್ತರಿಗೂ ಆಶೀರ್ವದಿಸಿದರು . ಅದರಲ್ಲೂ ಈ ಬಾರಿ ಬಸವ ಜಯಂತಿ ನಡೆಯುತ್ತಿರುವುದರಿಂದ ರಾಜ್ಯದ ಹಲವೆಡೆಯಿಂದ ಪೂಜ್ಯರನ್ನು ಆಹ್ವಾನಿಸಲು ತಂಡೋಪ ತಂಡವಾಗಿ ಸಾವಿರಾರು ಜನರು ಆಗಮಿಸಿ, ಪೂಜ್ಯರ ದರ್ಶನ ಪಡೆಯಲು ಅವರ ಆಹ್ವಾನಿಸಲು ಜನ ಸಾಗರವೇ ನೆರೆದಿತ್ತು.ಈ ನಡುವೆ ನಾವುಗಳು ಕರ್ತೃ ಗದ್ದುಗೆ ದರ್ಶನ ಪಡೆದು ಪೂಜ್ಯರನ್ನು ದಿ ಯುನೈಟಡ್ ಅಕಾಡೆಮಿ ನೂತನ ಶಾಲೆಯ ಉದ್ಘಾಟನೆಗೆ ಅಹ್ವಾನಿಸಿದೆವು,ಪರಮಪೂಜ್ಯರು ನಮ್ಮ ಅಹ್ವಾನವನ್ನು ಸ್ವೀಕರಿಸಿ ಅಗಮಿಸುವ ಅರ್ಶೀವಾದ ನೀಡಿದರು.ಇದು ನಮ್ಮ ಪುಣ್ಯವಾಗಿದೆ,1
- ಹನೂರು: ಉಡುತೊರೆಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿಕೊಂಡು ಪಾರಾದ ಕಾಡಾನೆ ಅಸ್ವಸ್ಥಗೊಂಡು ಮೇಲಕ್ಕೆ ಏಳಲಾಗದೆ ಸಂಕಷ್ಟದಲ್ಲಿದೆ. ಮಲೆ ಮಹದೇಶ್ವರ ವನ್ಯಧಾಮದಿಂದ ನೀರಿಗಾಗಿ ಬಂದ ಮೂರು ಆನೆಗಳಲ್ಲಿ ಎರಡು ಸುರಕ್ಷಿತವಾಗಿ ಕಾಡು ಸೇರಿದ್ದರೆ, ಮತ್ತೊಂದು ಆನೆ ದಡ ಸೇರಿದ್ದರೂ ಮೆಲಕ್ಕೆ ಏಳಲಾಗದೆ ದುರ್ಬಲಗೊಂಡಿದೆ. ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಸಾಕಾನೆ ‘ಮಹೇಂದ್ರ’ ಸಹಾಯದಿಂದ ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. .1
- ಹನೂರು: "12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ," ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಸ್ವಾರ್ಥ ಬಿಡಿ, ಕಾಯಕ ನಂಬಿ: ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಅದನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಮತ್ತು 'ನಾನು' ಎಂಬ ಅಹಂಭಾವವನ್ನು ಬಿಟ್ಟು, 'ಕಾಯಕವೇ ಕೈಲಾಸ' ಎಂಬ ತತ್ವದಡಿ ನಡೆದರೆ ಸಮಾಜ ಸುಧಾರಣೆ ಸಾಧ್ಯ. ಮುಂದಿನ ಪೀಳಿಗೆಗೆ ಮಾದರಿಯಾಗಿ: ಇಂದು ನಾವು ಮಾಡುವ ಕೆಲಸಗಳನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಪೋಷಕರು ಮತ್ತು ಹಿರಿಯರು ಮಹನೀಯರ ತತ್ವಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಪ್ರತಿಮೆ ನಿರ್ಮಾಣಕ್ಕೆ ಭರವಸೆ: ಪಟ್ಟಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡುವಂತೆ ಕೋರಿದ ಶಾಸಕರು, ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. "ಮಹನೀಯರ ಜಯಂತಿಗಳು ಒಂದು ದಿನದ ಆಚರಣೆಯಾಗಬಾರದು. ಅವರ ಸಿದ್ದಾಂತಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ." — ಎಂ.ಆರ್. ಮಂಜುನಾಥ್, ಶಾಸಕರು. ಗಣ್ಯರ ಉಪಸ್ಥಿತಿ:ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮ ಮಹದೇವ್ ಉಪಸ್ಥಿತರಿದ್ದರು. ಅಲ್ಲದೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ. ಸದಾಶಿವ ಮೂರ್ತಿ, ಡಿ.ಕೆ ರಾಜು, ಉದ್ದನೂರು ಗಿರೀಶ್, ಪ್ರಮೋದ್, ವಿನೋದ್, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ವರದಿ ಉಸ್ಮಾನ್ ಖಾನ್3
- ಕರಬೂಜ ಹಣ್ಣಿನ ಜ್ಯೂಸ್ (Muskmelon Juice)*ಹಬ್ಬಗಳಲ್ಲಿ ಮಾಡುವಂತಹ ನಿಮಿಷದಲ್ಲಿ ಈ ಕರ್ಬೂಜ ಹಣ್ಣಿನ ಜೂಸ್ ಮಾಡಿ ಕುಡಿಯಿರಿ | #ಕರ್ಬೂಜ #Milk #ಖರಬೂಜ #ಹಣ್ಣಿನಜ್ಯೂಸು | #KharbujaJuice recipe | #MuskMelonJuic ಬೇಸಿಗೆಯ ಅತ್ಯಂತ ತಂಪಾದ ಮತ್ತು ಆರೋಗ್ಯಕರ ಪಾನೀಯವಾಗಿದೆ. ಇದನ್ನು ಸುಲಭವಾಗಿ ಮಾಡಲು ಕರಬೂಜದ ತಿರುಳು, ಹಾಲು ಅಥವಾ ನೀರು, ಸಕ್ಕರೆ/ಜೇನುತುಪ್ಪ ಮತ್ತು ಐಸ್ ಕ್ಯೂಬ್‌ಗಳನ್ನು ಬ್ಲೆಂಡರ್‌ನಲ್ಲಿ ನುಣ್ಣಗೆ ರುಬ್ಬಿ, ತಕ್ಷಣವೇ ಸೇವಿಸಿ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಬಿಪಿ ಕಂಟ್ರೋಲ್ ಮಾಡಲು ಸಹಕಾರಿಯಾಗಿದೆ.1
- ಮಲೆಮಹದೇಶ್ವರ ವನ್ಯಜೀವಿ ಧಾಮದ ಹನೂರು ಬಫರ್ ವಲಯಕ್ಕೆ ಸೇರಿದ ಉಡುತೊರೆ ಹಳ್ಳ ಜಲಾಶಯಕ್ಕೆ ನೀರು ಕುಡಿಯಲೆಂದು 4 ಕಾಡಾನೆಗಳು ಬಂದಿದ್ದವು. ಆ ಪೈಕಿ ಮೂರು ಆನೆಗಳು ಕೆಸರಿ ನಲ್ಲಿ ಸಿಲುಕಿಕೊಂಡಿದ್ದವು. ಸಾವು ಬದುಕಿನ ಜತೆ ಹೋರಾಡುತ್ತಾ ಘೀಳಿ ಡುತ್ತಿದ್ದವು. ಅದನ್ನು ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಭಾನುವಾರಮಧ್ಯಾಹ್ನ ಗಮನಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾಮಿಸಿದ ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಭಾಸ್ಕರ್, ಎಸಿಎಫ್ ವಿರಾಜ್ ಹೊಸೂರ್, ವಲಯ ಅರಣ್ಯಾಧಿಕಾರಿ ಜಿತೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ, ಆನೆಗಳ ರಕ್ಷಣೆಗೆ ಮುಂದಾದರು. ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ನೂರಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ನಿತ್ರಾಣದಿಂದ ಚೇತರಿಕೆ: ಆನೆಗಳು ಕೆಸರಿನಲ್ಲಿ ಸಿಲುಕಿದ್ದು ಯಾವಾಗ ಎಂಬ ಖಚಿತ ಮಾಹಿತಿ ಇಲ್ಲ. ಆದರೆ ಹಲವು ಗಂಟೆಗಳ ಕಾಲ ನೀರಿನಲ್ಲಿಯೇ ಇದ್ದಿದ್ದರಿಂದ ಆನೆಗಳು ನಿತ್ರಾಣಗೊಂಡಿದ್ದವು. ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡವು ಎನ್ನಲಾಗಿದೆ. ಸಾಕಾನೆ ಮಹೇಂದ್ರನ ಸಹಾಯ: ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಆನೆಗಳಿಗೆ ಮೊದಲಿಗೆ ಕಲ್ಲಂಗಡಿ, ಕಬ್ಬು ಇನ್ನಿತರ ಆಹಾರ ಪದಾರ್ಥಗಳನ್ನು ಒದಗಿಸಲಾಯಿತು. ಬಳಿಕ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ನಂತರ ನುರಿತ ಬೊಟ್ ಮ್ಯಾನ್ ಗಳ ಸಹಾಯದಿಂದ ಅರಣ್ಯ, ಅಗ್ನಿಶಾಮಕ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ, ತೆಪ್ಪದಲ್ಲಿ ಆನೆಗಳ ಬಳಿ ತೆರಳಿದರು. ಒಂದು ಆನೆಗೆ ಬೆಲ್ಟ್ ಹಾಕಿ ಟ್ರ್ಯಾಕ್ಟರ್ ಸಹಾಯದಿಂದ ಮೇಲಕ್ಕೆ ಎತ್ತಲಾಯಿತು. ಇನ್ನೊಂದು ಆನೆ ಸ್ವಯಂ ಶಕ್ತಿಯಿಂದ ತಾನಾಗಿಯೇ ಕೆಸರಿನಿಂದ ಬಿಡಿಸಿಕೊಂಡು ಕಾಡಿನತ್ತ ಹೊರಟಿತು. ಶಕ್ತಿಹೀನವಾಗಿದ್ದ ಮತ್ತೊಂದು ಆನೆಯನ್ನು ಕೆಸರಿನಿಂದ ಮೇಲೆತ್ತಲು ಸಹಾಯಕ್ಕಾಗಿ ಮತ್ತಿಗೋಡು ಶಿಬಿರದಿಂದ ಸಾಕಾನೆ ಮಹೇಂದ್ರನನ್ನು ಕರೆಸಲಾಯಿತು. ರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.4