ಶಿಕಾರಿಪುರ.ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ. ಶಿಕಾರಿಪುರ ತಾಲೂಕಿನ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ, ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡವನ್ನು ವೀಕ್ಷಿಸಿದರು. ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ಧಿ, ಬ್ಲಡ್ ಬ್ಯಾಂಕ್ ಸ್ಥಾಪನೆ, ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಗುಣಮಟ್ಟ, ವೈದ್ಯರು ಹಾಗೂ ಸಿಬ್ಬಂದಿಯ ಸಮಯಪಾಲನೆ, ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಂದ ದೊರೆಯುತ್ತಿರುವ ಸ್ಪಂದನೆ, ಔಷಧಿಗಳ ಲಭ್ಯತೆ ಹಾಗೂ ದಾಸ್ತಾನು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದರು. ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯು ಕೇವಲ ಶಿಕಾರಿಪುರ ತಾಲೂಕಿನ ಜನರಿಗಷ್ಟೇ ಸೀಮಿತವಾಗಿಲ್ಲ. ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳು ಹಾಗೂ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದ್ದರಿಂದ ಎಲ್ಲರಿಗೂ ಗುಣಮಟ್ಟದ, ಸಮಯೋಚಿತ ಮತ್ತು ಸ್ಪಂದನಾಶೀಲ ಆರೋಗ್ಯ ಸೇವೆ ದೊರೆಯುವಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನೀಡುತ್ತಿರುವ ಚಿಕಿತ್ಸಾ ಸೇವೆಯನ್ನು ಪ್ರಶಂಸಿಸಿದ ಅವರು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಿರಂಜನ್, ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕಾರಿಪುರ.ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ. ಶಿಕಾರಿಪುರ ತಾಲೂಕಿನ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ, ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡವನ್ನು ವೀಕ್ಷಿಸಿದರು. ಸಭೆಯಲ್ಲಿ
ಆಸ್ಪತ್ರೆಯ ಅಭಿವೃದ್ಧಿ, ಬ್ಲಡ್ ಬ್ಯಾಂಕ್ ಸ್ಥಾಪನೆ, ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಗುಣಮಟ್ಟ, ವೈದ್ಯರು ಹಾಗೂ ಸಿಬ್ಬಂದಿಯ ಸಮಯಪಾಲನೆ, ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಂದ ದೊರೆಯುತ್ತಿರುವ ಸ್ಪಂದನೆ, ಔಷಧಿಗಳ ಲಭ್ಯತೆ ಹಾಗೂ ದಾಸ್ತಾನು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದರು. ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯು ಕೇವಲ ಶಿಕಾರಿಪುರ ತಾಲೂಕಿನ ಜನರಿಗಷ್ಟೇ
ಸೀಮಿತವಾಗಿಲ್ಲ. ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳು ಹಾಗೂ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದ್ದರಿಂದ ಎಲ್ಲರಿಗೂ ಗುಣಮಟ್ಟದ, ಸಮಯೋಚಿತ ಮತ್ತು ಸ್ಪಂದನಾಶೀಲ ಆರೋಗ್ಯ ಸೇವೆ ದೊರೆಯುವಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು ಎಂದು
ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನೀಡುತ್ತಿರುವ ಚಿಕಿತ್ಸಾ ಸೇವೆಯನ್ನು ಪ್ರಶಂಸಿಸಿದ ಅವರು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಿರಂಜನ್, ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
- ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು1
- We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 5811101
- ಪ್ರಧಾನಿ ಶ್ರೀ Narendra Modi ಅವರು ವಿವೇಕ ಸ್ಮಾರಕದಲ್ಲಿ ಯೋಗ ಮತ್ತು ಧ್ಯಾನ ಸಭಾಂಗಣ ಹಾಗೂ ಪ್ರದರ್ಶನ ಸಭಾಂಗಣವನ್ನು ಉದ್ಘಾಟಿಸಿ, ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಪಟದ ಮುಂದೆ ಶ್ರದ್ಧಾ-ಭಕ್ತಿಯಿಂದ ಧ್ಯಾನ ಮಗ್ನರಾಗಿ ಅವರನ್ನು ಸ್ಮರಿಸಿದರು.1
- Press ಎಂದು ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಪತ್ರಕರ್ತರು ರಂದು ಪ್ರೆಸ್ ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪತ್ರಕರ್ತರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರು ತಮ್ಮ ಗುರುತಿಗಾಗಿ PRESS ಎಂಬ ನಾಮ ಫಲಕ ಹಾಕಿಸಿಕೊಂಡಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮೀಡಿಯಾ ಸಂಬಂಧಿಸಿದವರು ಹೊರತು ಪಡಿಸಿ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಗಳ ಮೇಲೆ ಪ್ರೆಸ್ (PRESS) ಎಂಬ ಬೋರ್ಡ್ ಹಾಕಿಕೊಂಡು ವಾಹನಗಳಲ್ಲಿ ಚಲಿಸುತ್ತಿದ್ದು ಕಂಡು ಬಂದಿರುತ್ತದೆ.1
- ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಇ.ಎ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ:* ***********" ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಇ.ಎ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಅಭ್ಯರ್ಥಿಗಳಿಗೆ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿದಂತೆ ಬಹು ಗುರುತಿನ ಪರಿಶೀಲನೆಗೆ ಅಭ್ಯರ್ಥಿಗಳು ಒಳಪಡಬೇಕು. ಇದಕ್ಕೆ ಅನುವಾಗುವಂತೆ ಪರೀಕ್ಷೆ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಯಾವುದೇ ರೀತಿಯ ಪಠ್ಯ ಸಾಮಗ್ರಿಗಳು, ಚೀಟಿಗಳು, ಜಾಮಿಟ್ರಿ, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಪೆನ್‍ಡ್ರೈವ್‍ಗಳು, ಎರೆಸೇರ್, ಲಾಗ್ ಟೇಬಲ್ ಸೇರಿದಂತೆ ಎಲೆಕ್ಟ್ರಾನಿಕ್ ಪೆನ್ ಸ್ಕ್ಯಾನರ್, ವಾಲೆಟ್, ಗಾಗಲ್ಸ್, ಕೈ ಚೀಲಗಳು, ಬೆಲ್ಟ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಮುಂತಾದ ಸಂವಹನ ಸಾಧನಗಳನ್ನು ಮರೆಮಾಡುವ ಮೂಲಕ ನ್ಯಾಯೋಚಿತವಲ್ಲದ ವಿಧಾನಗಳಿಗೆ ಬಳಸಬಹುದಾದ ಇತರೆ ವಸ್ತುಗಳು, ಮೊಬೈಲ್, ಬ್ಲೂಟೂತ್, ಇಯರ್ ಪೋನ್, ಮೈಕ್ರೋಫೋನ್, ಪೇಜರ್ ಸೇರಿದಂತೆ ಆಧುನಿಕ ಸಂವಹನ ಸಾಧನಗಳು, ಯಾವುದೇ ರೀತಿಯ ಗಡಿಯಾರ, ಕೈ ಗಡಿಯಾರ, ಬಳೆ, ಕ್ಯಾಮರಾ, ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ್ ಬಾಟೆಲ್ ನಿಷೇಧಿತ ವಸ್ತುಗಳಾಗಿವೆ. ಅಭ್ಯರ್ಥಿಗಳು ಉದ್ದ ತೋಳಿನ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಅರ್ಧ ತೋಳಿನ ಬಟ್ಟೆಗಳನ್ನು ಮಾತ್ರ ಧರಿಸಿರಬೇಕು. ಶಿರೋವಸ್ತ್ರ ಹಾಗೂ ಮುಖ ಮುಚ್ಚುವ ಉಡುಪುಗಳು, ಟೋಪಿ ಅಥವಾ ಯಾವುದೇ ರೀತಿಯ ತಲೆ ಹೊದಿಕೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. ಯಾವುದೇ ರೀತಿಯ ಲೋಹದ ವಸ್ತುಗಳು ಅಥವಾ ಆಭರಣಗಳನ್ನು ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಶೂ ಧರಿಸುವುದಕ್ಕೆ ಅವಕಾಶವಿರುವುದಿಲ್ಲ. ತೆಳುವಾದ ಅಡಿಭಾಗವಿರುವ ಸ್ಯಾಂಡಲ್ಸ್ ಅಥವಾ ಚಪ್ಪಲಿಗಳನ್ನು ಮಾತ್ರ ಧರಿಸಬೇಕು. ಶ್ರವಣ ಸಾಧನಗಳು ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಶ್ರವಣ ಸಾಧನ ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಸಾಧನಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಇದರೊಂದಿಗೆ ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.2
- ಮಳೆಯಲ್ಲೂ ಕರ್ತವ್ಯಕ್ಕೆ ಆದ್ಯತೆ; ಕೆಲಸದ ಪ್ರಗತಿ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಹಾಗೂ ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಕಾಮಗಾರಿಯ ಕುರಿತು ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.1
- ವೇಗವಾಗಿ ಬಂದು ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು. ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು ಹಾವೇರಿ : ವೇಗವಾಗಿ ಬಂದ ಕಾರೊಂದು ಮುಂದೆ ಚಲಿಸುತ್ತಿದ್ದ ಆಟೋ ಮತ್ತು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 6 ಕುರಿಗಳು ಹಾಗೂ ಆಟೋದಲ್ಲಿ ಕುಳಿತಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ಹಾವೇರಿ ಆರ್ ಟಿ ಓ ಕಛೇರಿ ಹತ್ತಿರ ಜರುಗಿದೆ. ವೇಗವಾಗಿ ಬಂದ ಕಾರು ಮುಂದೆ ಚಲಿಸುತ್ತಿದ್ದ ಕುರಿಗಳು ಹಾಗೂ ಆಟೋಗೆ ವೇಗವಾಗಿ ಡಿಕ್ಕಿ ಆದ ಪರಿಣಾಮವಾಗಿ ಸ್ಥಳದಲ್ಲಿಯೇ ಆರು ಕುರಿಗಳು ಹಾಗೂ ಒಂದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು, ಕೆಲ ಕಾಲ ಉದ್ವಿಗ್ನ ವಾತಾವರಣವಿದ್ದರೂ ಪೋಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಅಕ್ರೊಷದ ವಾತಾವರಣವನ್ನ ಸಮಾಧಾನ ಪಡಿಸಿದರು ಎನ್ನಲಾಗಿದೆ.1