ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು
ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು
- ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ಸೊರಬ: ದೇಶಕ್ಕೆ ಅನ್ನ ನೀಡುವ ರೈತ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಆದರೆ ಈ ವರ್ಷ ಮಳೆಯ ಕೊರತೆಯಿಂದ ರೈತ ಆತಂಕ ಪಡುವಂತಾಗಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಗೂ ನಾಟಿ ಮಾಡುವ ಮಹಿಳೆಯರಿಗೆ ಹಲವು ಸಲಕರಣೆ ನೀಡಲಾಗಿದೆ ಎಂದು ದಂತ ವೈದ್ಯ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್ ಎಚ್.ಈ. ಹೇಳಿದರು. ತಾಲೂಕಿನ ಕೊಡಕಣಿಯ ವೀರಭದ್ರಪ್ಪ ಗೌಡರ ಹೊಲದಲ್ಲಿ ನಡೆದ ‘ನಾಟಿ ಸಂಭ್ರಮ' ಕಾರ್ಯಕ್ರಮದಲ್ಲಿ ನಾಟಿ ಮಾಡುವ ಮಹಿಳೆಯರಿಗೆ ರೋಟರಿ ವತಿಯಿಂದ ಹಲವು ವಸ್ತುಗಳನ್ನು ನೀಡಿ ಅವರೊಂದಿಗೆ ನಾಟಿ ಮಾಡುವ ಮೂಲಕ ಅವರು ಮಾತನಾಡಿದರು. ರೈತ ಇಂದು ಸಂಕಷ್ಟ ಅನುಭವಿಸು ವಂತಾಗಿದೆ. ರೈತರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಾಲತೇಶ್ ಕೊಡಕಣಿ ಮಾತನಾಡಿ, ರೋಟರಿ ಸಂಸ್ಥೆ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇನ್ನು ಮುಂದೆ ಯೂ ಇದೇ ರೀತಿ ರೈತಸ್ನೇಹಿಯಾಗಿ ಕಾರ್ಯಕ್ರಮ ಮಾಡುತ್ತದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಾಲತೇಶ್ ಕೊಡಕಣಿ, ಕಾರ್ಯದರ್ಶಿ ಪ್ರಕಾಶ್ ಬಿಳವಗೋಡು, ಡಾ। ನಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ರೋಟರಿ ಮಾಜಿ ಅಧ್ಯಕ್ಷರಾದ ಸಂತೋಷ್, ವೀರಭದ್ರಪ್ಪ ಗೌಡ, ಪರಶುರಾಮ್, ಹಾಲಮ್ಮ, ಶೃತಿ, ಪದ್ಮಾ, ಜಯಮ್ಮ, ಅನ್ನಪೂರ್ಣ, ಶಿಲ್ಪಾ ಕುಮಾರ್ ಮೊದಲಾದವರಿದ್ದರು1
- ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಅಂತಿಮ ಹಂತದ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಚಿತ್ರದುರ್ಗದಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಆಗಸ್ಟ್ 2 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9,592 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಲಿದ್ದಾರೆ. ಇನ್ನೂ ಈಗಾಗಲೆvಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೂಕ್ತ ಭದ್ರತೆ ಮತ್ತು ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಿದ್ದು ಪ್ರಶ್ನೆ ಪತ್ರಿಕೆಗಳ ಭದ್ರತೆ ಹಾಗೂ ಪಾಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ತ್ರಿಸದಸ್ಯ ಸಮಿತಿ ರಚಿಸಲಾಗಿದೆ.1
- ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ಚಿತ್ರದುರ್ಗ : ನಗರದ ದವಳಗಿರಿ ಬಡಾವಣೆಯ ಮೂರನೇ ಹಂತದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಪೆಟ್ಟಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮವಾಗಿ ಇಡೀ ಬಡಾವಣೆಯಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸ್ಥಳೀಯರ ಆತಂಕ: ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಟ್ರಾನ್ಸ್‌ಫಾರ್ಮರ್‌ನಿಂದ ಭಾರಿ ಪ್ರಮಾಣದಲ್ಲಿ ಕಿಡಿಗಳು ಸಿಡಿದು, ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳ ಗಮನಕ್ಕೆ ಮನವಿ:ವಿದ್ಯುತ್ ಕೈಕೊಟ್ಟಿರುವುದರಿಂದ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು. ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್ ಅನ್ನು ದುರಸ್ತಿಗೊಳಿಸಿ, ಬಡಾವಣೆಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.3
- ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ . ಮಾಧ್ಯಮ ರಂಗಕ್ಕೆ ಸಂಬಂಧಿಸಿಲ್ಲದ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಪತ್ರಕರ್ತರು ಮತ್ತು ಮಾಧ್ಯಮ ಕ್ಷೇತ್ರದ ಸಿಬ್ಬಂದಿ ತಮ್ಮ ಗುರುತಿಗಾಗಿ ವಾಹನಗಳ ಮೇಲೆ ‘PRESS’ ಎಂಬ ನಾಮಫಲಕವನ್ನು ಬಳಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಹಾಗೂ ಇತರೆ ವಾಹನಗಳ ಮೇಲೆ ‘PRESS’ ಬೋರ್ಡ್ ಹಾಕಿಕೊಂಡು.ಸಂಚರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಸಾರ್ವಜನಿಕರು ನಂಬರ್ ಪ್ಲೇಟ್ ಹಾಗೂ ವಾಹನಗಳ ಮೇಲೆ ಅಕ್ರಮವಾಗಿ ‘ಪ್ರೆಸ್’ ಎಂದು ಬರೆಸಿಕೊಂಡು ಚಲಾಯಿಸುತ್ತಿರುವುದನ್ನು ತಡೆಯಲು ಜಿಲ್ಲಾದ್ಯಂತ ವಿಶೇಷ ಅಭಿಯಾನ ನಡೆಸಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ‘ಸ್ಪೆಷಲ್ ಡ್ರೈವ್’ ನಡೆಸುವ ಮೂಲಕ ಇಂತಹ ವಾಹನಗಳನ್ನು ಪತ್ತೆ ಹಚ್ಚಿ, ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.1
- ಹಾನಗಲ್. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಶಡಗರವಳ್ಳಿ ನೂತನವಾಗಿ ಆಯ್ಕೆ. 3 ವರ್ಷಗಳ ಅವಧಿಗೆ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಒಟ್ಟು 20 ಜನ ಸದಸ್ಯರನ್ನೋಳಗೊಂಡ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಇದಾಗಿದ್ದು, ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು1
- ಪ್ರಧಾನಿ ಶ್ರೀ Narendra Modi ಅವರು ವಿವೇಕ ಸ್ಮಾರಕದಲ್ಲಿ ಯೋಗ ಮತ್ತು ಧ್ಯಾನ ಸಭಾಂಗಣ ಹಾಗೂ ಪ್ರದರ್ಶನ ಸಭಾಂಗಣವನ್ನು ಉದ್ಘಾಟಿಸಿ, ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಪಟದ ಮುಂದೆ ಶ್ರದ್ಧಾ-ಭಕ್ತಿಯಿಂದ ಧ್ಯಾನ ಮಗ್ನರಾಗಿ ಅವರನ್ನು ಸ್ಮರಿಸಿದರು.1
- Press ಎಂದು ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಪತ್ರಕರ್ತರು ರಂದು ಪ್ರೆಸ್ ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪತ್ರಕರ್ತರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರು ತಮ್ಮ ಗುರುತಿಗಾಗಿ PRESS ಎಂಬ ನಾಮ ಫಲಕ ಹಾಕಿಸಿಕೊಂಡಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮೀಡಿಯಾ ಸಂಬಂಧಿಸಿದವರು ಹೊರತು ಪಡಿಸಿ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಗಳ ಮೇಲೆ ಪ್ರೆಸ್ (PRESS) ಎಂಬ ಬೋರ್ಡ್ ಹಾಕಿಕೊಂಡು ವಾಹನಗಳಲ್ಲಿ ಚಲಿಸುತ್ತಿದ್ದು ಕಂಡು ಬಂದಿರುತ್ತದೆ.1
- ವೇಗವಾಗಿ ಬಂದು ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು. ಕಾರ್ ಡಿಕ್ಕಿ : ಮಗು ಸೇರಿ ಆರು ಕುರಿಗಳು ಸ್ಥಳದಲ್ಲೇ ಸಾವು ಹಾವೇರಿ : ವೇಗವಾಗಿ ಬಂದ ಕಾರೊಂದು ಮುಂದೆ ಚಲಿಸುತ್ತಿದ್ದ ಆಟೋ ಮತ್ತು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 6 ಕುರಿಗಳು ಹಾಗೂ ಆಟೋದಲ್ಲಿ ಕುಳಿತಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ಹಾವೇರಿ ಆರ್ ಟಿ ಓ ಕಛೇರಿ ಹತ್ತಿರ ಜರುಗಿದೆ. ವೇಗವಾಗಿ ಬಂದ ಕಾರು ಮುಂದೆ ಚಲಿಸುತ್ತಿದ್ದ ಕುರಿಗಳು ಹಾಗೂ ಆಟೋಗೆ ವೇಗವಾಗಿ ಡಿಕ್ಕಿ ಆದ ಪರಿಣಾಮವಾಗಿ ಸ್ಥಳದಲ್ಲಿಯೇ ಆರು ಕುರಿಗಳು ಹಾಗೂ ಒಂದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು, ಕೆಲ ಕಾಲ ಉದ್ವಿಗ್ನ ವಾತಾವರಣವಿದ್ದರೂ ಪೋಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಅಕ್ರೊಷದ ವಾತಾವರಣವನ್ನ ಸಮಾಧಾನ ಪಡಿಸಿದರು ಎನ್ನಲಾಗಿದೆ.1