Shuru
Apke Nagar Ki App…
ನಂಜನಗೂಡಿನಲ್ಲಿ ಅಪರಿಚಿತ ವಾಹನ ಡಿಕ್ಕಿ: ಜಿಂಕೆ ದುರಂತವಾಗಿ ಸಾವು ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಮುಖ್ಯ ರಸ್ತೆಯ ತಾಲೂ ಕಿನ ನೇರಳೆ ಗೇಟ್ ಬಳಿ ನಡೆದಿದೆ. ಸುಮಾರು ಎರಡೂವರೆ ವರ್ಷದ ಹೆಣ್ಣು ಜಿಂಕೆ ರಸ್ತೆ ದಾಟುತ್ತಿದ್ದ ವೇಳೆ ಅಪ ರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ವಿಷಯ ತಿಳಿದು ಸ್ಥಳಕ್ಕೆ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಿತಿನ್ ಕುಮಾರ್ ಭೇಟಿ ನೀಡಿ ಜಿಂಕೆ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.
Ashwini
ನಂಜನಗೂಡಿನಲ್ಲಿ ಅಪರಿಚಿತ ವಾಹನ ಡಿಕ್ಕಿ: ಜಿಂಕೆ ದುರಂತವಾಗಿ ಸಾವು ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಮುಖ್ಯ ರಸ್ತೆಯ ತಾಲೂ ಕಿನ ನೇರಳೆ ಗೇಟ್ ಬಳಿ ನಡೆದಿದೆ. ಸುಮಾರು ಎರಡೂವರೆ ವರ್ಷದ ಹೆಣ್ಣು ಜಿಂಕೆ ರಸ್ತೆ ದಾಟುತ್ತಿದ್ದ ವೇಳೆ ಅಪ ರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ವಿಷಯ ತಿಳಿದು ಸ್ಥಳಕ್ಕೆ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಿತಿನ್ ಕುಮಾರ್ ಭೇಟಿ ನೀಡಿ ಜಿಂಕೆ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.
More news from ಕರ್ನಾಟಕ and nearby areas
- ಮಳವಳ್ಳಿ: ಇತಿಹಾಸ ಪ್ರಸಿದ್ದ ತಾಲೂಕಿನ ೩ ದಿನಗಳ ಚಿಲ್ಲಾಪುರ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ. ಮಳವಳ್ಳಿ:ತಾಲೂಕಿನ ಇತಿಹಾಸ ಪ್ರಸಿದ್ದ ಚಿಲ್ಲಾಪುರ ಸಿದ್ದಪ್ಪಾಜಿ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಂಪ್ರದಾಯಬದ್ದವಾಗಿ ಖಂಡಾಯಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಏ.೨ ರಂದು ಬೆಳಿಗ್ಗೆ ೭.೩೦ ರಿಂದ ೮.೪೫ ಗಂಟೆಗೆ ಪುಣ್ಯಾಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿಯೊAದಿಗೆ ಅರಂಭಗೊAಡು ಏ.೫ ರವರೆಗೆ ಭಕ್ತಿಪೂರ್ವಕವಾಗಿ ನಡೆಯುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಮುತ್ತತ್ತಿರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಅರಂಭಗೊAಡಿತ್ತು. ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನನಂತರ ಉತ್ಸವದೊಂದಿಗೆ ಸ್ವಾಮಿಯವರನ್ನು ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ಕರೆತರಲಾಯಿತು,ನಂತರ ಹಲಗೂರು ವಿಶ್ವಕರ್ಮ ಕುಲಭಾಂದವರು ಚಂದ್ರಮAಡೋಲೋತ್ಸವ ಬೆಳಗಿಸಲಿದ್ದು ,ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ, ಟ್ರ‍್ಯಾಕ್ಟರ್ ಮುಖಾಂತರ ಹಲಗೂರಿನ ಪಂಚವಾಲರ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಚಿಲ್ಲಾಪುರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಸ್ವಾಮಿ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಚಿಲ್ಲಾಪುರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದ ನಂತರ ಬಂದ ಭಕ್ತಾದಿಗಳಿಗೆ ರಾತ್ರಿ ಫಲಹಾರ ನಡೆಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ರಾಮಚಂದ್ರಚಾರಿ ಮಾತನಾಡುತಾ ್ತ೧೨ನೇ ಶತಮಾನದಲ್ಲಿ ಸಿದ್ದಪ್ಪಾಜಿಯವರು ಹಲಗೂರಿನ ಚಿಲ್ಲಾಪುರಕ್ಕೆ ಕಬ್ಬಿಣದ ಭಿಕ್ಷೆಗಾಗಿ ಬರುತ್ತಾರೆ.ಆ ಸಮಯದಲ್ಲಿ ಹಲವಾರು ಪವಾಡಗಳು ನಡೆದು ಸಿದ್ದಪ್ಪಾಜಿಯವರು ಗೆದ್ದು ಕಬ್ಬಿಣವನ್ನು ತೆಗೆದುಕೊಂಡು ಹಾರೆ ಗುದ್ದಲಿಗಳನ್ನು ಮಾಡಿಕೊಂಡು ತಮ್ಮ ಗುರುಗಳಾದ ಮಂಟೇಸ್ವಾಮಿಯವರ ನೆಲಮಾಳಿಗೆ ಗದ್ದುಗೆಗೆ ಹೋಗುತ್ತಾರೆ .ಹಲಗೂರು ಪವಾಡ ಕ್ಷೇತ್ರವಾಗಿದೆ.ಇದು ೪೪ನೇ ವಾರ್ಷಿಕೋತ್ಸವ. ನಾವು ಹಲಗೂರಿನವರು ಮತ್ತು ಜಿಲ್ಲಾಪುರದವರು ಸೇರಿ ಈ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು ಏಪ್ರಿಲ್ ೩ ರಂದು ಶುಕ್ರವಾರ ಬೆ.೬ ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿಯು ನಡೆಯಲಿದೆ.ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಎರ್ಪಡಿಸಿದೆ. ಎಂದರು. ಏಪ್ರಿಲ್ ೪ ರಂದು ಶನಿವಾರ ಬೆಳಿಗ್ಗೆ ೬ ಗಂಟೆಯಿAದ ಚಿಲ್ಲಾಪುರದ ಕುಲಬಾಂಧವರಿAದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಬೆ.೯ ಗಂಟೆಗೆ ಹಲಗೂರು ಕುಲಭಾಂದವರಿAದ ಶ್ರೀ ಸ್ವಾಮಿಯ ಜಯಂತ್ಯೋತ್ಸವ, ಶ್ರೀ ಮುತ್ತಾಂಜನೇಯೋತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಸುವುದರ ಜೊತೆಗೆ ಚಂದ್ರಮAಡಲ, ಸಾಲಗತ್ತಿ ಪೂಜೆ ಬಸಪ್ಪನ ಪೂಜೆ ಸಂಜೆ ನಾಟಕವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಪಿ.ಈಶಕುಮಾರ್ ,ಕಾರ್ಯದರ್ಶಿ ರಾಮಚಂದ್ರ ,ಎಚ್. ಕೆ. ಶಿವಾಚಾರಿ, ಕಾರ್ಯದರ್ಶಿ ಸೇರಿದಂತೆ ಅನಂತಸ್ವಾಮಿ, ಅಪ್ಪಾಜಿ ,ಉಮೇಶ ಮತ್ತು ಇತರರು ಇದ್ದರು.1
- ಗೋಪಿನಾಥಂ ಚೆಕ್ ಪೋಸ್ಟ್ ಬಳಿ ಕಾಡಾನೆಗಳ ಹಾರಾಟ: ಸಾರ್ವಜನಿಕರಲ್ಲಿ ಆತಂಕ ಹನೂರು: ತಾಲ್ಲೂಕಿನ ಪಾಲಾರ್ ಸಮೀಪದ ಗೋಪಿನಾಥಂ ಚೆಕ್ ಪೋಸ್ಟ್ ಬಳಿ ಕಾಡಾನೆಗಳ ಗುಂಪು ನೀರಿಗಾಗಿ ಬಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತೀವ್ರ ಬಿಸಿಲು ಮತ್ತು ನೀರಿನ ಕೊರತೆಯಿಂದ ಕಾಡಾನೆಗಳು ಬಾಣಕೇಬೆ ಕೆರೆಯಲ್ಲಿ ಕುಡಿಯಲು ಹೊರಬಂದಿದ್ದು, ರಸ್ತೆಗಳ ಬಳಿ ತಿರುಗಾಡುತ್ತಿರುವುದು ಗಮನ ಸೆಳೆದಿದೆ. ಸ್ಥಳೀಯರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡುಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಸ್ಥಳೀಯರು, ಪರಿಸರ ಪ್ರೇಮಿಗಳು ಕೂಡ ಕಾಡಾನೆಗಳು ಊರು-ರಸ್ತೆಗಳತ್ತ ಬಾರದಂತೆ, ಅರಣ್ಯ ಪ್ರದೇಶದಲ್ಲೇ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ಆಗ್ರಹಿಸಿದ್ದಾರೆ. ವಿಶೇಷಜ್ಞರು, ಈ ರೀತಿಯ ಘಟನೆಗಳು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.1
- Post by ಅರವಿಂದ್ ರಾಜೀವ್1
- ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದ್ದು, ಚಾಲಕರು ಗ್ಯಾಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಕೊತ್ತನೂರು ಗ್ಯಾಸ್ ಬಂಕ್ ಬಳಿ ಕಿಲೋಮೀಟರ್‌ಗಟ್ಟಲೆ ಆಟೋಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು. ಹೊಸಹಳ್ಳಿ, ಮೂಡಲಪಾಳ್ಯ, ರಾಜಾಜಿನಗರ, ವಿಜಯನಗರ ಮತ್ತು ಚಾಮರಾಜಪೇಟೆ ಭಾಗಗಳಲ್ಲೂ ಉದ್ದನೆಯ ಸಾಲುಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದವು. ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ ₹500 ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹ ಕೇಳಿಬರುತ್ತಿದೆ.1
- कर्नाटक में बस की टक्कर से यात्रियों के घायल होने से चार लोग घायल हुए, जिनमें एक बच्चा भी शामिल है। एक चौंकाने वाली घटना में, बुधवार की सुबह कर्नाटक के हावेरी में एक तेज रफ्तार बस ने बस स्टैंड पर इंतजार कर रहे यात्रियों को कुचल दिया, जिससे एक दो साल का बच्चा और तीन अन्य लोग घायल हो गए। यह दुर्घटना सुबह करीब 7 बजे सेंट्रल बस स्टैंड पर हुई, जब लोग प्लेटफार्म पर खड़े होकर आने वाली बस के गंतव्य का बोर्ड देख रहे थे।1
- ದೇವನಹಳ್ಳಿ ಗ್ಯಾಸ್ ಸಮಸ್ಯೆ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ. ಯುದ್ಧ ನಡೆಯುತ್ತಲೇ ಇದೆ, ಇನ್ನೂ ನಿಂತಿಲ್ಲ. ಚುನಾವಣೆ ಇರುವುದರಿಂದ ಅಧಿಕಾರಿಗಳನ್ನ ಕರೆಸಿ ಮೀಟಿಂಗ್ ಮಾಡಲಿಕ್ಕೆ ಆಗಲಿಲ್ಲ. 5 ನೇ ತಾರೀಕು ಸಾಧ್ಯವಾದರೆ ಮೀಟಿಂಗ್ ಮಾಡುತ್ತೇನೆ. 25 ದಿನಕ್ಕೆ ನಗರದಲ್ಲಿ, 45 ದಿನಕ್ಕೆ ಹಳ್ಳಿಯಲ್ಲಿ ಸಿಲಿಂಡರ್ ಕೊಡಲಾಗುತ್ತದೆ. ಅದರಲ್ಲಿ ಏನೂ ತೊಂದರೆ ಇಲ್ಲ, ಇದರಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಯಾಗಿದೆ. ಆಟೋಗ್ಯಾಸ್ ನಲ್ಲಿ 3 ಸಾವಿರ ಸಿಲಿಂಡರ್ ದಿನ ಕೊಡುತ್ತಿದ್ದೇವೆ ಆಟೋದವರು ಪ್ರತಿ ನಿತ್ಯ ಖಾಸಗಿಯವರ ಬಳಿ ತೆಗೆದುಕೊಳ್ಳುತ್ತಿದ್ದರು. ಈಗ ರೇಟ್ ಹೆಚ್ಚಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ. ಸರ್ಕಾರಿ ಕಂಪನಿಗಳಲ್ಲಿ ತೆಗೆದುಕೊಳ್ಳುವವರಿಗೆ ಯಾವುದೇ ತೊಂದರೆ ಆಗಿಲ್ಲ. ಖಾಸಗಿ ಕಂಪನಿಯವರಿಗೂ ಹೇಳಿದ್ದೇವೆ. ಹೆಚ್ಚು ಹಣ ತೆಗೆದುಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ ಇರೋದರಲ್ಲಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ದೇವನಹಳ್ಳಿಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಹೇಳಿಕೆ1
- ಮಳವಳ್ಳಿ:ಮಾತೃಶ್ರೀ ಅಮ್ಮನವರು ಜ್ಞಾನವಿಕಾಸ ಯೋಜನೆಯ ಮೂಲಕ ಲಕ್ಷಾಂತರ ಬಡಮಹಿಳೆಯರಿಗೆ ನೆರವು-ಯೋಜನಾಧಿಕಾರಿ ಲೋಕೇಶ್ ಹೇಳಿಕೆ • ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬ –ಜಿಲ್ಲೆಯ ೫೨೭ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ- ಎಂ.ಶಿವಕುಮಾರ್ ಹೇಳಿಕೆ ಮಳವಳ್ಳಿ:ಜ್ಞಾನ ವಿಕಾಸ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕ ಮಹಿಳೆಯರಿಗೆ ಜೀವನ ರೂಪಿಸಿದ ಶ್ರೀ ಕ್ಷೇತ್ರ ದರ್ಮಸ್ಥಳದ ಮಾತೃಶ್ರೀ ಅಮ್ಮನವರ ಜೀವನ , ಸೇವೆ,ಕೊಡುಗೆ,ಯೋಜನೆಗಳು ದಾರಿದೀಪವಾಗಿವೆ ಎಂದು ಯೋಜನಾಧಿಕಾರಿ ಲೋಕೇಶ್ ಹೇಳಿದರು. ಪಟ್ಟಣದ ಎನ್‌ಇ.ಎಸ್.ಬಡಾವಣೆಯಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆವತಿಯಿಂದ ಮಾತೃಶ್ರೀ ಅಮ್ಮನವರ ಜನ್ಮ ದಿನದ ಅಂಗವಾಗಿ ಅಯೋಜಿಸಿದ್ದ ಮಾಶಾಸನ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ಮಾತೃಶ್ರೀ ಅಮ್ಮನವರು ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಸುಮಾರು ೩೦ ಕಾರ್ಯಕ್ರಮಗಳ ಮೂಲಕ ಬಡ,ನಿರ್ಗತಿಕ ಮಹಿಳಾ ಸಮುದಾಯಕ್ಕೆ ನೆರವಾಗುವಂತಹ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ನೀಡುತ್ತಿದ್ದಾರೆಂದರು. ಬಾಕ್ಸ್ ಸುದ್ದಿ: ಜ್ಞಾನವಿಕಾಸ ಯೋಜನೆಗಳ ಅನುಷ್ಠಾನ: ರಾಜ್ಯದಾದ್ಯಂತ ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಾತೃಶ್ರೀ ಅಮ್ಮನವರು ಮಹಿಳಾ ಸಬಲೀಕರಣಕ್ಕಾಗಿ ಜ್ವಲಂತ ವಿಷಯಗಳ ಮಾಹಿತಿ ಸಂಗ್ರಹಣೆ,ನಾನು ಓದಿದ ಪುಸ್ತಕಗಳ ವಿಮರ್ಶೆ,ಸರಕಾರಿ ಯೋಜನೆಗಳು,ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ,ನಹಿಳೆಯರ ಹಕ್ಕ ಮತ್ತು ಕಾನೂನು ,ಪೌಷ್ಠಿಕ ಅಹಾರ ಅರಿವು ಕಾರ್ಯಕ್ರಮ,ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ,ಮಹಿಳಾ ಕೇಂದ್ರಗಳ ವಾರ್ಷಿಕೋತ್ಸವ,ಮಹಿಳೆಯರಿಗೆ ಅರಿವು ಮೂಡಿಸುವ ಚಲನಚಿತ್ರ ಕಾರ್ಯಕ್ರಮ,ಮಹಿಳೆಯರಿಗಾಗಿ ಆದ್ಯಯನ ಪ್ರವಾಸ,ಸಾರ್ವಜನಿಕರಿಗೆ ಅರಿವು ಮೂಡಿಸಲು ಬೀದಿ ನಾಟಕ ಅಯೋಜನೆ,ಸೃಜನ ಶೀಲ ಕಾರ್ಯಕ್ರಮ,ಮಕ್ಕಳಿಗೆ ಟ್ಯೂಷನ್ ಕ್ಲಾಸ್,ಮಹಿಳೆಯರಿಗೆ ಹೊಲಿಗೆ ತರಬೇತಿ,ಸ್ವುದ್ಯೋಗ ಪ್ರೇರಣಾ ಶಿಬಿರ,ಜ್ಞಾನ ವಿಕಾಸ ಯುಟ್ಯೂಬ್ ಅಭಿಯಾನ,ಅಜ್ಜಿ ಕೈತುತ್ತು, ಕಾರ್ಯಕ್ರಮ,ಕ್ಷೇತ್ರ ಅದ್ಯಯನ ಪ್ರವಾಸ,ವಿಶೇಷ ದಿನಗಳ ಆಚರಣೆ,ಆರೋಗ್ಯ ತಪಾಸಣೆ ಶಿಬಿರ,ಮೆನ್ಸೆ÷್ಟöÊಲ್ ಕಪ್ ಅಭಿಯಾನ,ವಾತ್ಸಲ್ಯ ಮಾಹಿತಿ ಕಾರ್ಯಕ್ರಮ,ಗೆಳತಿ ಮಾಹಿತಿ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ,ವಾತ್ಸಲ್ಯ ಪಲಾನುಭವಿಗಳಿಗೆ ಶೌಚಾಲಯ ರಚನೆ,ವಾತ್ಸಲ್ಯ ಪಾತ್ರೆ ಹಾಗೂ ಬಟ್ಟೆಕಿಟ್ ವಿತರಣೆ ಕಾರ್ಯಕ್ರಮ,ವಾತ್ಸಲ್ಯ ಫುಡ್ ಮಿಕ್ಸ್ ಕಾರ್ಯಕ್ರಮ,ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ,ಜನಮಂಗಳ ಪರಿಕರ ವಿತರಣೆ ಸೇರಿದಮತೆ ಮಾತೃಸ್ರೀ ಅಮ್ಮನವರು ಸುಮಾರು ೩೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ರಾಜ್ಯದ ಲಕ್ಷಾಂತರ ಬಡ ನಿರ್ಗತಿಕೆ ಮಹಿಳೆಯರಿಗೆ ಅಸರಯಾಗಿದ್ದಾರೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ ಪಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸಿ ಮಾತನಾಡಿ ಮಾತೃಸ್ರೀ ಅಮ್ಮನವರ ಹುಟ್ಟು ಹಬ್ಬವನ್ನು ರಾಜ್ಯದಾದ್ಯಂತ ಅಚರಣೆ ಮಾಡುತ್ತಿದ್ದು ಅದರಲ್ಲೂ ಮಂಡ್ಯ ಜಿಲ್ಲೆಯ ಮಳವಳ್ಳಿ,ಮಂಡ್ಯ,ನಾಗಮAಗಲ,ಮದ್ದೂರು,ಹೊಸಹಳ್ಳಿ,ಭಾರತಿನಗರ ಸೇರಿದಂತೆ ೬ ವಲಯ ವ್ಯಾಪ್ತಿಯಲ್ಲಿ ಒಟ್ಟು ೫೨೭ ಮಾಶಾಸನ ಪಲಾನುಭವಿಗಳಿಗೆ ಅಭಿಮಾನಿಗಳು,ಸೇವಾ ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ. ಮಾತೃಶ್ರೀ ಅಮ್ಮನವರ ಜನ್ಮ ದಿನ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ,ಪೂಜ್ಯ ಖಾವಂದರ ದಿವ್ಯಶಕ್ತಿಯಾಗಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜ್ಞಾನ ವಿಕಾಸ ಯೋಜನೆಗಳನ್ನು ಅನುಷ್ಟಾಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ನಿರ್ಗತಿಕ ಮಹಿಳೆಯರಿಗೆ ಅಸರೆಯಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೆಲಸ ಮಾಡುತ್ತಿರುವುದು ಮಾದರಿಎ ಂದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶೈಲ,ಮೇಲ್ವಿಚಾರಕಿ ಪ್ರಮೀಳ,ಸೇವಾ ಪ್ರತಿನಿಧಿ ರುಕ್ಮಿಣಿ ಸೇರಿದಂತೆ ಮಾಶಾಸನ ಪಲಾನುಭವಿಗಳು ಸ್ಥಳಿಯ ಮುಖಂಡರು,ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಚಿತ್ರ-೨ ಎಂ ಎಲ್ ವಿ೧ ಮಳವಳ್ಳಿ ಪಟ್ಟಣದಲ್ಲಿ ಮಾತೃಶ್ರೀ ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಮಾಶಾಸನ ಪಲಾನುಭವಿಗೆ ಯೋಜನಾಧಿಕಾರಿ ಲೋಕೆಶ್ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಶಿವಕುಮಾರ್ ಹಣ್ಣು ಹಂಪಲ ವಿತರಿಸಿದರು1
- ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,1
- Post by ಅರವಿಂದ್ ರಾಜೀವ್1