Shuru
Apke Nagar Ki App…
ಆಟೋ ಗ್ಯಾಸ್ ಕೊರತೆಗೆ ಚಾಲಕರ ಸಂಕಷ್ಟ ನಗರದಾದ್ಯಂತ ಉದ್ದನೆಯ ಸಾಲು, ಆಕ್ರೋಶ ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದ್ದು, ಚಾಲಕರು ಗ್ಯಾಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಕೊತ್ತನೂರು ಗ್ಯಾಸ್ ಬಂಕ್ ಬಳಿ ಕಿಲೋಮೀಟರ್‌ಗಟ್ಟಲೆ ಆಟೋಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು. ಹೊಸಹಳ್ಳಿ, ಮೂಡಲಪಾಳ್ಯ, ರಾಜಾಜಿನಗರ, ವಿಜಯನಗರ ಮತ್ತು ಚಾಮರಾಜಪೇಟೆ ಭಾಗಗಳಲ್ಲೂ ಉದ್ದನೆಯ ಸಾಲುಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದವು. ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ ₹500 ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹ ಕೇಳಿಬರುತ್ತಿದೆ.
Veega News Kannada
ಆಟೋ ಗ್ಯಾಸ್ ಕೊರತೆಗೆ ಚಾಲಕರ ಸಂಕಷ್ಟ ನಗರದಾದ್ಯಂತ ಉದ್ದನೆಯ ಸಾಲು, ಆಕ್ರೋಶ ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದ್ದು, ಚಾಲಕರು ಗ್ಯಾಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಕೊತ್ತನೂರು ಗ್ಯಾಸ್ ಬಂಕ್ ಬಳಿ ಕಿಲೋಮೀಟರ್‌ಗಟ್ಟಲೆ ಆಟೋಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು. ಹೊಸಹಳ್ಳಿ, ಮೂಡಲಪಾಳ್ಯ, ರಾಜಾಜಿನಗರ, ವಿಜಯನಗರ ಮತ್ತು ಚಾಮರಾಜಪೇಟೆ ಭಾಗಗಳಲ್ಲೂ ಉದ್ದನೆಯ ಸಾಲುಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದವು. ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ ₹500 ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹ ಕೇಳಿಬರುತ್ತಿದೆ.
More news from ಕರ್ನಾಟಕ and nearby areas
- ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಿದ್ದ ಕೊರೆಂಡನ್ ಏರ್ ಲೈನ್ಸ್ ವಿಮಾನದಲ್ಲಿ ಅವ್ಯವಸ್ಥೆ ಉಂಟಾಗಿ ಪ್ರಯಾಣಿಕರು ತೀವ್ರ ಪರದಾಡಿದರು. ವಿಮಾನ ಹತ್ತಿದ ಬಳಿಕ ಪ್ರಯಾಣಿಕರನ್ನು ಸುಮಾರು ಒಂದು ಗಂಟೆ ರನ್‌ವೇಯಲ್ಲಿ ಕಾಯಿಸಲಾಗಿದ್ದು, ಬಳಿಕ ಟೇಕ್‌ಆಫ್‌ಗೆ ಅನುಮತಿ ಸಿಗದ ಕಾರಣ ವಿಮಾನ ರದ್ದುಪಡಿಸಲಾಗಿದೆ ಎಂದು ಘೋಷಿಸಲಾಯಿತು. ಈ ಅಚಾನಕ್ ನಿರ್ಧಾರದಿಂದ ಆಕ್ರೋಶಗೊಂಡ ಪ್ರಯಾಣಿಕರು ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ತಕ್ಷಣ ಬದಲಿ ವಿಮಾನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.1
- Post by ಅರವಿಂದ್ ರಾಜೀವ್1
- कर्नाटक में बस की टक्कर से यात्रियों के घायल होने से चार लोग घायल हुए, जिनमें एक बच्चा भी शामिल है। एक चौंकाने वाली घटना में, बुधवार की सुबह कर्नाटक के हावेरी में एक तेज रफ्तार बस ने बस स्टैंड पर इंतजार कर रहे यात्रियों को कुचल दिया, जिससे एक दो साल का बच्चा और तीन अन्य लोग घायल हो गए। यह दुर्घटना सुबह करीब 7 बजे सेंट्रल बस स्टैंड पर हुई, जब लोग प्लेटफार्म पर खड़े होकर आने वाली बस के गंतव्य का बोर्ड देख रहे थे।1
- ದೇವನಹಳ್ಳಿ ಗ್ಯಾಸ್ ಸಮಸ್ಯೆ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ. ಯುದ್ಧ ನಡೆಯುತ್ತಲೇ ಇದೆ, ಇನ್ನೂ ನಿಂತಿಲ್ಲ. ಚುನಾವಣೆ ಇರುವುದರಿಂದ ಅಧಿಕಾರಿಗಳನ್ನ ಕರೆಸಿ ಮೀಟಿಂಗ್ ಮಾಡಲಿಕ್ಕೆ ಆಗಲಿಲ್ಲ. 5 ನೇ ತಾರೀಕು ಸಾಧ್ಯವಾದರೆ ಮೀಟಿಂಗ್ ಮಾಡುತ್ತೇನೆ. 25 ದಿನಕ್ಕೆ ನಗರದಲ್ಲಿ, 45 ದಿನಕ್ಕೆ ಹಳ್ಳಿಯಲ್ಲಿ ಸಿಲಿಂಡರ್ ಕೊಡಲಾಗುತ್ತದೆ. ಅದರಲ್ಲಿ ಏನೂ ತೊಂದರೆ ಇಲ್ಲ, ಇದರಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಯಾಗಿದೆ. ಆಟೋಗ್ಯಾಸ್ ನಲ್ಲಿ 3 ಸಾವಿರ ಸಿಲಿಂಡರ್ ದಿನ ಕೊಡುತ್ತಿದ್ದೇವೆ ಆಟೋದವರು ಪ್ರತಿ ನಿತ್ಯ ಖಾಸಗಿಯವರ ಬಳಿ ತೆಗೆದುಕೊಳ್ಳುತ್ತಿದ್ದರು. ಈಗ ರೇಟ್ ಹೆಚ್ಚಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ. ಸರ್ಕಾರಿ ಕಂಪನಿಗಳಲ್ಲಿ ತೆಗೆದುಕೊಳ್ಳುವವರಿಗೆ ಯಾವುದೇ ತೊಂದರೆ ಆಗಿಲ್ಲ. ಖಾಸಗಿ ಕಂಪನಿಯವರಿಗೂ ಹೇಳಿದ್ದೇವೆ. ಹೆಚ್ಚು ಹಣ ತೆಗೆದುಕೊಂಡರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ ಇರೋದರಲ್ಲಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ದೇವನಹಳ್ಳಿಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಹೇಳಿಕೆ1
- ಮಾಗಡಿ : ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು. ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ ಖಾತೆಗೆ 70 ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ. ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು. ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.3
- ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ 'ಆಪರೇಷನ್ ಎಪಿಕ್ ಪ್ಯೂರಿ' ಎನ್ನುವ ಹೆಸರಿನಲ್ಲಿ ದಾಳಿ ನಡೆಸಿತು. ಇದೊಂದು ಕ್ಷಿಪ್ರ ಹಾಗೂ ನಿರ್ಣಾಯಕ ಕಾರ್ಯಾಚರಣೆಯಾಗಿದ್ದು ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಈಗ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದ್ದೆ. ಸಾಕಷ್ಟು ನಾಶ ನಷ್ಟಗಳು ಸಂಭವಿಸಿವೆ.ಹೊರ್ಮುಜ್ ಜಲಸಂಧಿಯ ಮುಚ್ಚಲಾಗಿದೆ. ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 126 ಡಾಲರ್ ತಲುಪಿದೆ. ನ್ಯಾಟೊ ಒಕ್ಕೂಟವು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಿಂದಲೇ ಯುದ್ಧಕ್ಕೆ ಬೆಂಬಲ ಸಿಗುತ್ತಿಲ್ಲ. ಟ್ರಂಪ್ ಮನವಿಗೂ ಸೊಪ್ಪು ಹಾಕುತ್ತಿಲ್ಲ. ನಿರ್ದಿಷ್ಟ ಗುರಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಾಚರಣೆ ಈಗ, ಅಮೆರಿಕದ ಕಾರ್ಯತಂತ್ರದಲ್ಲಿ ಆಳವಾದ ವೈರುಧ್ಯಗಳನ್ನು ಬಯಲು ಮಾಡಿದೆ. ಇದು ಯುದ್ಧಭೂಮಿಯಿಂದ ಬಹಳ ದೂರದಲ್ಲಿರುವ ದೇಶಗಳ ಮೇಲೆ ಭಾರಿ ಆರ್ಥಿಕ ಹೊರೆಗಳನ್ನು ಹೇರುತ್ತಿದೆ.true news kolar1
- KOLAR. khatarpala..KOLAR1
- ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದ್ದು, ಚಾಲಕರು ಗ್ಯಾಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಕೊತ್ತನೂರು ಗ್ಯಾಸ್ ಬಂಕ್ ಬಳಿ ಕಿಲೋಮೀಟರ್‌ಗಟ್ಟಲೆ ಆಟೋಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದವು. ಹೊಸಹಳ್ಳಿ, ಮೂಡಲಪಾಳ್ಯ, ರಾಜಾಜಿನಗರ, ವಿಜಯನಗರ ಮತ್ತು ಚಾಮರಾಜಪೇಟೆ ಭಾಗಗಳಲ್ಲೂ ಉದ್ದನೆಯ ಸಾಲುಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದವು. ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ ₹500 ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸರ್ಕಾರದ ವಿರುದ್ಧ ಆಗ್ರಹ ಕೇಳಿಬರುತ್ತಿದೆ.1