logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ತಾತಗುಣಿ ಬಳಿ ಭದ್ರತಾ ಆತಂಕ | ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ 🚨 ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ತಾತಗುಣಿ ಬಳಿ ಭದ್ರತಾ ಆತಂಕ | ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ ರಾಮನಗರ : ಪ್ರಧಾನಿ Narendra Modi ಅವರು ಸಂಚರಿಸಿದ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಗ್ಗಲೀಪುರದ ತಾತಗುಣಿ ಬಳಿಯ Art of Living Foundation ಆಶ್ರಮದಲ್ಲಿ ನಡೆದ 45ನೇ ವಾರ್ಷಿಕೋತ್ಸವ ಹಾಗೂ ಗುರುಜಿ Sri Sri Ravi Shankar ಅವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ತೆರಳುವ ಮುನ್ನ ಈ ಘಟನೆ ಬೆಳಕಿಗೆ ಬಂದಿದೆ. ಪ್ರಧಾನಿಗಳ ಆಗಮನಕ್ಕೆ ಸುಮಾರು ಒಂದೂವರೆ ಗಂಟೆ ಮೊದಲು ನೈಸ್ ರಸ್ತೆ ಜಂಕ್ಷನ್ ಸಮೀಪ, ರಸ್ತೆಯಿಂದ ಸುಮಾರು 20–25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಕಂಡುಬಂದಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಪರಿಶೀಲಿಸಿದಾಗ ಅದರೊಳಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ತಕ್ಷಣವೇ ಆಂಟಿ ಸಬೊಟೇಜ್ ಚೆಕ್ (ASC) ತಂಡ ಸ್ಥಳಕ್ಕೆ ದೌಡಾಯಿಸಿ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ ಕಲ್ಲು ಕ್ವಾರಿ ಸ್ಫೋಟಗಳಿಗೆ ಬಳಸುವ ಜಿಲೆಟಿನ್ ಕಡ್ಡಿಗಳಾಗಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. “ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಹೇಗೆ ಬಂದವು, ಯಾರು ಇಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕರೆ ಮಾಡಿ ಮಾಹಿತಿ ನೀಡಿದ ವ್ಯಕ್ತಿಯ ಪಾತ್ರವೂ ಪರಿಶೀಲನೆಯಲ್ಲಿದೆ” ಎಂದು ಕೇಂದ್ರ ವಲಯ ಡಿಐಜಿ ಗಿರೀಶ್ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಕಲ್ಲು ಕ್ವಾರಿಗಳು ಹಾಗೂ ಸ್ಫೋಟಕ ಗೋದಾಮುಗಳ ಮೇಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಹಾಗೂ ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ. #NarendraModi #Bengaluru #Ramanagara #SecurityAlert #GelatinSticks #BreakingNews #KarnatakaNews #ArtOfLiving #PoliceInvestigation #Tataguni

1 hr ago
user_Karunadu News Update
Karunadu News Update
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
1 hr ago
0d71c594-928c-48ee-9ac4-aad2952e8a88

ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ತಾತಗುಣಿ ಬಳಿ ಭದ್ರತಾ ಆತಂಕ | ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ 🚨 ಪ್ರಧಾನಿ ಮೋದಿ ಸಂಚರಿಸಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ತಾತಗುಣಿ ಬಳಿ ಭದ್ರತಾ ಆತಂಕ | ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ ರಾಮನಗರ : ಪ್ರಧಾನಿ Narendra Modi ಅವರು ಸಂಚರಿಸಿದ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಗ್ಗಲೀಪುರದ ತಾತಗುಣಿ ಬಳಿಯ Art of Living Foundation ಆಶ್ರಮದಲ್ಲಿ ನಡೆದ 45ನೇ ವಾರ್ಷಿಕೋತ್ಸವ ಹಾಗೂ ಗುರುಜಿ Sri Sri Ravi Shankar ಅವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ತೆರಳುವ ಮುನ್ನ ಈ ಘಟನೆ ಬೆಳಕಿಗೆ ಬಂದಿದೆ. ಪ್ರಧಾನಿಗಳ ಆಗಮನಕ್ಕೆ ಸುಮಾರು ಒಂದೂವರೆ ಗಂಟೆ ಮೊದಲು ನೈಸ್ ರಸ್ತೆ ಜಂಕ್ಷನ್ ಸಮೀಪ, ರಸ್ತೆಯಿಂದ ಸುಮಾರು 20–25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಕಂಡುಬಂದಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಪರಿಶೀಲಿಸಿದಾಗ ಅದರೊಳಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ತಕ್ಷಣವೇ ಆಂಟಿ ಸಬೊಟೇಜ್ ಚೆಕ್ (ASC) ತಂಡ ಸ್ಥಳಕ್ಕೆ ದೌಡಾಯಿಸಿ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ ಕಲ್ಲು ಕ್ವಾರಿ ಸ್ಫೋಟಗಳಿಗೆ ಬಳಸುವ ಜಿಲೆಟಿನ್ ಕಡ್ಡಿಗಳಾಗಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. “ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಹೇಗೆ ಬಂದವು, ಯಾರು ಇಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕರೆ ಮಾಡಿ ಮಾಹಿತಿ ನೀಡಿದ ವ್ಯಕ್ತಿಯ ಪಾತ್ರವೂ ಪರಿಶೀಲನೆಯಲ್ಲಿದೆ” ಎಂದು ಕೇಂದ್ರ ವಲಯ ಡಿಐಜಿ ಗಿರೀಶ್ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಕಲ್ಲು ಕ್ವಾರಿಗಳು ಹಾಗೂ ಸ್ಫೋಟಕ ಗೋದಾಮುಗಳ ಮೇಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಹಾಗೂ ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ. #NarendraModi #Bengaluru #Ramanagara #SecurityAlert #GelatinSticks #BreakingNews #KarnatakaNews #ArtOfLiving #PoliceInvestigation #Tataguni

More news from ಕರ್ನಾಟಕ and nearby areas
  • ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!.......... ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏 ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
    1
    ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ… ಮಾನವೀಯತೆಯೂ ಹೌದು!..........
ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮೂಡಿಗೆರೆ ಜನಪ್ರಿಯ ಶಾಸಕಿ ನಯನ ಮೋಟಮ್ಮ. 🙏
ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದು ನಿಜವಾದ ಉದಾಹರಣೆ.
    user_Karunadu News Update
    Karunadu News Update
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    5 hrs ago
  • ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    1
    ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಾಪುರ ರಸ್ತೆಯು ಹದಗೆಟ್ಟಿದ್ದು, ಇಲ್ಲಿನ ಜನರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_Suresh
    Suresh
    Grain Distributor ಮಾನ್ವಿ, ರಾಯಚೂರು, ಕರ್ನಾಟಕ•
    9 hrs ago
  • ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.
    1
    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಶ್ರೀಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿದರು. ಈ ವೃತ್ತದ ಲೋಕಾರ್ಪಣೆಯು ಸ್ಥಳೀಯ ಸಮುದಾಯಕ್ಕೆ ಮಹತ್ವದ ಸಂಕೇತವಾಗಿದೆ.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    10 hrs ago
  • ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಂಚಾರಕ್ಕೆ ಅಡಚಣೆ ಆಗಿರುವುದರಿಂದ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ಪರವಾನಗಿಯನ್ನು ರದ್ದುಪಡಿಸಿ, ಅಕ್ರಮ ಶೇಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಂದಪ್ಪ ಪಿ. ಮಡ್ಡಿ (ಕರವೇ ತಾಲೂಕು ಅಧ್ಯಕ್ಷರು), ರಂಗಣ್ಣ ಕೋಲ್ಕಾರ್, ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ಮೌನೇಶ್ ದೇಸಾಯಿ, ರಾಮಣ್ಣ ತೆಗ್ಗಳ್ಳಿ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಬಸವ (ಗ್ರಾಮ ಪಂಚಾಯತ್ ಸದಸ್ಯರು), ಬಸಮ್ಮ (ಗ್ರಾಮ ಪಂಚಾಯತ್ ಸದಸ್ಯರು), ರಮೇಶ್, ರಂಗಪ್ಪ ಬಂಡಿ, ಭೀಮಣ್ಣ ನಾಯಕ್ (ತಾಲೂಕು ಸಂಚಾಲಕರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ತಮ್ಮಣ್ಣ, ವೆಂಕಟೇಶ್ (ಜಾಲಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು. 🖋️ ವರದಿ:ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
    1
    ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ 
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಘಟಕ ಹಾಗೂ ಜಾಲಹಳ್ಳಿ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಾಲಹಳ್ಳಿಯ ವಾರ್ಡ್ ನಂ. 07ರಲ್ಲಿ ಮಹಿಳೆಯರು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮುಖ್ಯ ರಸ್ತೆಗೆ ಅಡ್ಡವಾಗಿ ಅನಧಿಕೃತವಾಗಿ ಶೇಡ್ ಹಾಗೂ ಮನೆ ನಿರ್ಮಾಣ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದರು. ರಂಗಯ್ಯ ತಂದೆ ಶಿವಪ್ಪ ವಂದಲಿ ಹಾಗೂ ಶಿವನ ತಂದೆ ಶಿವಪ್ಪ ಅವರು ಅಕ್ರಮವಾಗಿ ಶೇಡ್ ನಿರ್ಮಾಣ ಮಾಡಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಶೇಡ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗಳು ಹಾದು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೂ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರ ಸಂಚಾರಕ್ಕೆ ಅಡಚಣೆ ಆಗಿರುವುದರಿಂದ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ಪರವಾನಗಿಯನ್ನು ರದ್ದುಪಡಿಸಿ, ಅಕ್ರಮ ಶೇಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಂದಪ್ಪ ಪಿ. ಮಡ್ಡಿ (ಕರವೇ ತಾಲೂಕು ಅಧ್ಯಕ್ಷರು), ರಂಗಣ್ಣ ಕೋಲ್ಕಾರ್, ಗುರುನಾಥ್ ರೆಡ್ಡಿ (ತಾಲೂಕು ಪ್ರಧಾನ ಕಾರ್ಯದರ್ಶಿ), ಮೌನೇಶ್ ದೇಸಾಯಿ, ರಾಮಣ್ಣ ತೆಗ್ಗಳ್ಳಿ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಬಸವ (ಗ್ರಾಮ ಪಂಚಾಯತ್ ಸದಸ್ಯರು), ಬಸಮ್ಮ (ಗ್ರಾಮ ಪಂಚಾಯತ್ ಸದಸ್ಯರು), ರಮೇಶ್, ರಂಗಪ್ಪ ಬಂಡಿ, ಭೀಮಣ್ಣ ನಾಯಕ್ (ತಾಲೂಕು ಸಂಚಾಲಕರು), ಅಮರೇಶ್ (ಹೋಬಳಿ ಉಪಾಧ್ಯಕ್ಷರು), ತಮ್ಮಣ್ಣ, ವೆಂಕಟೇಶ್ (ಜಾಲಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದರು.
🖋️ ವರದಿ:ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    5 hrs ago
  • ಜೈಭೀಮ್ ನ್ಯೂಸ್ ಚಾನಲ್‌ನ ರಾಜ್ಯ ಸಮಿತಿಗೆ ಜಾಕಿರಾ ಹುಸೇನ್ ಅಧ್ಯಕ್ಷರಾಗಿ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಚಾನಲ್‌ನ 4ನೇ ವಾರ್ಷಿಕೋತ್ಸವ ಮತ್ತು 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಘಟಪ್ರಭದಲ್ಲಿ ಈ ಸಮಿತಿ ರಚಿಸಲಾಯಿತು.
    2
    ಜೈಭೀಮ್ ನ್ಯೂಸ್ ಚಾನಲ್‌ನ ರಾಜ್ಯ ಸಮಿತಿಗೆ ಜಾಕಿರಾ ಹುಸೇನ್ ಅಧ್ಯಕ್ಷರಾಗಿ ಮತ್ತು ಮಲ್ಲಿಕಾರ್ಜುನ ಛಲವಾದಿ ರಾಜಾನಕೊಲ್ಲೂರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಚಾನಲ್‌ನ 4ನೇ ವಾರ್ಷಿಕೋತ್ಸವ ಮತ್ತು 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಘಟಪ್ರಭದಲ್ಲಿ ಈ ಸಮಿತಿ ರಚಿಸಲಾಯಿತು.
    user_ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    ಮಲ್ಲಿಕಾರ್ಜುನ ಚಲವಾದಿ ರಾಜನಕೋಳೂರು
    Electrician ಹುಣಸಗಿ, ಯಾದಗಿರಿ, ಕರ್ನಾಟಕ•
    7 hrs ago
  • ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    1
    ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪೈಪ್ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    23 hrs ago
  • ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ. ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ‌ಕನ್ನಡ ಸಾಹಿತ್ಯ ಪರಿಷತ್ತಿನ ‌ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ‌ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‌ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.
    2
    ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ.

ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು.
ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ  ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ  ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು.
ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ  ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ‌ಕನ್ನಡ ಸಾಹಿತ್ಯ ಪರಿಷತ್ತಿನ ‌ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ‌ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ‌ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    4 hrs ago
  • ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದ ಶ್ರೀಗಳು ಇಳಕಲ್: ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ.ಮಹಾಂತ ಶ್ರೀಗಳ ೮ನೇ ಪುಣ್ಯಸ್ಮರಣೆ ನಿಮಿತ್ತ ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದರು. ಶರಣ ಸಿದ್ಧಾಂತ ವಿದ್ಯಾಪೀಠದಡಿ ಭಾನುವಾರ ಗ್ರಾಮದಲ್ಲಿ ಮಹಾಂತ ಜೋಳಿಗೆಯೊಂದಿಗೆ ಶ್ರೀಗಳು ಸಂಚಾರ ನಡೆಸಿದರು. ಮನೆ, ಮನೆಗೆ ತೆರಳಿ ಭಕ್ತರಿಗೆ ದುಶ್ಚಟಗಳನ್ನು ತ್ಯಜಿಸಲು ಸಲಹೆ ನೀಡಿದರು. ಅಲ್ಲದೇ ಕೆಲ ಯುವಕರು ಸ್ವ ಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಹೇಳಿ ಮಹಾಂತ ಜೋಳಿಗೆ ಮೇಲೆ ಪ್ರಮಾಣ ಮಾಡಿದರು. "ಚಿಕ್ಕ ಕೊಡಗಲಿ ಗ್ರಾಮ ಭಕ್ತಿಯ ಬೀಡು. ಯುವಕರು ಸೇರಿದಂತೆ ಎಲ್ಲರೂ ದುಶ್ಚಟಗಳನ್ನು ತ್ಯಜಿಸಿ ಅರೋಗ್ಯಯುತ ಬದುಕು ಸಾಗಿಸಬೇಕು,'' ಎಂದು ಗುರುಮಹಾಂತ ಶ್ರೀಗಳು ಸಲಹೆ ನೀಡಿದರು. ಈ ವೇಳೆ ಗ್ರಾಮದ ಅಯರು ಮತ್ತು ಭಕ್ತರು ಇದ್ದರು.
    1
    ಹೆಗಲಿಗೆ ಮಹಾಂತ ಜೋಳಿಗೆ 
ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದ ಶ್ರೀಗಳು 

ಇಳಕಲ್: ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ.ಮಹಾಂತ ಶ್ರೀಗಳ ೮ನೇ ಪುಣ್ಯಸ್ಮರಣೆ ನಿಮಿತ್ತ ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟ ಬೇಡಿದರು.
ಶರಣ ಸಿದ್ಧಾಂತ ವಿದ್ಯಾಪೀಠದಡಿ ಭಾನುವಾರ ಗ್ರಾಮದಲ್ಲಿ ಮಹಾಂತ ಜೋಳಿಗೆಯೊಂದಿಗೆ ಶ್ರೀಗಳು ಸಂಚಾರ ನಡೆಸಿದರು.
ಮನೆ, ಮನೆಗೆ ತೆರಳಿ ಭಕ್ತರಿಗೆ ದುಶ್ಚಟಗಳನ್ನು ತ್ಯಜಿಸಲು ಸಲಹೆ ನೀಡಿದರು. ಅಲ್ಲದೇ ಕೆಲ ಯುವಕರು ಸ್ವ ಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಹೇಳಿ ಮಹಾಂತ ಜೋಳಿಗೆ ಮೇಲೆ ಪ್ರಮಾಣ ಮಾಡಿದರು. "ಚಿಕ್ಕ ಕೊಡಗಲಿ ಗ್ರಾಮ ಭಕ್ತಿಯ ಬೀಡು. ಯುವಕರು ಸೇರಿದಂತೆ ಎಲ್ಲರೂ ದುಶ್ಚಟಗಳನ್ನು ತ್ಯಜಿಸಿ ಅರೋಗ್ಯಯುತ ಬದುಕು ಸಾಗಿಸಬೇಕು,'' ಎಂದು ಗುರುಮಹಾಂತ ಶ್ರೀಗಳು ಸಲಹೆ ನೀಡಿದರು. ಈ ವೇಳೆ ಗ್ರಾಮದ ಅಯರು ಮತ್ತು ಭಕ್ತರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.