ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿ ಸಿ ಬಿ ಎಸ್ ಇ ಫಲಿತಾಂಶ 2026 ನೇ ಸಾಲಿನ 10ನೇ ತರಗತಿ ಸಿ ಬಿ ಎಸ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಳಕಲ್ ಸಮೀಪದ ತೊಂಡಿಹಾಳ ದಲ್ಲಿರುವ ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ, ಒಟ್ಟು ವಿದ್ಯಾರ್ಥಿಗಳು 80, ಡಿಸ್ಟಿಂಕ್ಷನ್ 35 ವಿದ್ಯಾರ್ಥಿಗಳು, ಫಸ್ಟ್ ಕ್ಲಾಸ್ 40 ವಿದ್ಯಾರ್ಥಿಗಳು, ಸೆಕೆಂಡ್ ಕ್ಲಾಸ್ 5 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದಾರೆ. ಪ್ರಥಮ ಸ್ಥಾನವನ್ನು ಮಾನಸ ಹುನಕುಂಟಿ 90%, ದ್ವಿತೀಯ ಸ್ಥಾನವನ್ನು ಭೂಮಿಕಾ ವೀರಾಪುರಮಠ 89%, ತೃತೀಯ ಸ್ಥಾನವನ್ನು ಪೂರ್ವಿ ಡಂಬಳ 87.40%, ಪಡೆದಿದ್ದಾರೆ ಎಂದು ಪ್ರಾಚಾರ್ಯರು ಪತ್ರಿಕೆಗೆ ತಿಳಿಸಿದರು. ಶಾಲೆಯ ಫಲಿತಾಂಶವು ಉತ್ತಮವಾಗಿ ಬಂದಿದ್ದು ಸಾಧನೆಗೈದ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ ಚೇರ್ಮನ್ನರಾದ ವಿಜಿ ಕೂಡಲಗಿಮಠ, ಮತ್ತು ಆಡಳಿತಾಧಿಕಾರಿಗಳಾದ ಶೋಭಾ ಕೂಡಲಗಿಮಠ, ಶಾಲೆಯ ಪ್ರಾಚಾರ್ಯರಾದ ಅರವಿಂದ್ ಮರಳಿ ಮತ್ತು ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿ ಸಿ ಬಿ ಎಸ್ ಇ ಫಲಿತಾಂಶ 2026 ನೇ ಸಾಲಿನ 10ನೇ ತರಗತಿ ಸಿ ಬಿ ಎಸ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಳಕಲ್ ಸಮೀಪದ ತೊಂಡಿಹಾಳ ದಲ್ಲಿರುವ ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ, ಒಟ್ಟು ವಿದ್ಯಾರ್ಥಿಗಳು 80, ಡಿಸ್ಟಿಂಕ್ಷನ್ 35 ವಿದ್ಯಾರ್ಥಿಗಳು, ಫಸ್ಟ್ ಕ್ಲಾಸ್ 40 ವಿದ್ಯಾರ್ಥಿಗಳು, ಸೆಕೆಂಡ್ ಕ್ಲಾಸ್ 5 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದಾರೆ. ಪ್ರಥಮ ಸ್ಥಾನವನ್ನು ಮಾನಸ ಹುನಕುಂಟಿ 90%, ದ್ವಿತೀಯ ಸ್ಥಾನವನ್ನು ಭೂಮಿಕಾ ವೀರಾಪುರಮಠ 89%, ತೃತೀಯ ಸ್ಥಾನವನ್ನು ಪೂರ್ವಿ ಡಂಬಳ 87.40%, ಪಡೆದಿದ್ದಾರೆ ಎಂದು ಪ್ರಾಚಾರ್ಯರು ಪತ್ರಿಕೆಗೆ ತಿಳಿಸಿದರು. ಶಾಲೆಯ ಫಲಿತಾಂಶವು ಉತ್ತಮವಾಗಿ ಬಂದಿದ್ದು ಸಾಧನೆಗೈದ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಸೆಂಟ್ರಲ್ ಸ್ಕೂಲ್ ನ ಚೇರ್ಮನ್ನರಾದ ವಿಜಿ ಕೂಡಲಗಿಮಠ, ಮತ್ತು ಆಡಳಿತಾಧಿಕಾರಿಗಳಾದ ಶೋಭಾ ಕೂಡಲಗಿಮಠ, ಶಾಲೆಯ ಪ್ರಾಚಾರ್ಯರಾದ ಅರವಿಂದ್ ಮರಳಿ ಮತ್ತು ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
- ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.1
- ಕುಷ್ಟಗಿ:- ಈ ರಾಜ್ಯದಲ್ಲಿ ಪ್ರತಿ ಮನೆಗೊಂದು ಪೂಜಾ ಮಂದಿರಗಳು ಇರುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದಲ್ಲಿ ಕೂಡ ಪ್ರತಿ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯಾಧ್ಯಕ್ಷ ಡಾ. ಮಾನಸ ಹೇಳಿದರು. ಇಲ್ಲಿನ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಇವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕ ಅಂದರೆ ಬರೀ ಪುಸ್ತಕ ಅಲ್ಲ; ಅದು ಜ್ಞಾನದ ಆಗರ. ನಾವು ಜ್ಞಾನದ ವಾರಸುದಾರರು. ಹಾಗಾಗಿ ಹಿರಿಯರು ಮನೆಯಲ್ಲಿ ಪೂಜಾ ಮನೆ ಮಾಡಿದ್ದಾರೆ. ನಾವು ಪೂಜಾ ಮನೆ ಪಕ್ಕ ಒಂದು ಗ್ರಂಥಾಲಯ ಕಟ್ಟೋಣ, ಪುಸ್ತಕ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ, ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ನಾಗರಾಜ ಹೀರಾ, ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ ಹಾಗೂ ಇತರರು ಇದ್ದರು. ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ ಜೀವನಸಾಬ ವಾಲೀಕಾರ ಅವರು ನಿರೂಪಿಸಿದರು. *2
- ಕರ್ನಾಟಕದ ಜನರೇ ಎಚ್ಚರ ಹಕ್ಕಿ ಜ್ವರ ಕಂಡು ಬಂದಿದೆ ಕೋಳಿ ಮಾಸವನ್ನು ತಿನ್ನೋವರಿಗೆ ನಿಲ್ಲಸಬೇಕು ಎಂದು ಹೇಳಿದರು1
- ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಜಿಲ್ಲಾ ಜಾಗೃತಿ ಸಮಿತಿ ಯಾದಗಿರಿುಸ್ತಕ ಪ್ರಾಧಿಕಾರ ಬೆಂಗಳೂರು ಜಿಲ್ಲಾ ಜಾಗೃತಿ ಸಮಿತಿ ಯಾದಗಿರಿ ಇವರ ವತಿಯಿಂದ ಮನೆಗೊಂದು ಗ್ರಂಥಾಲಯ ಎಂಬ ಕಾರ್ಯಕ್ರಮವನ್ನು ಹುಣಸಗಿ ತಾಲೂಕಿನ ರಾಜನಕೋಳೂರ ಗ್ರಾಮದಲ್ಲಿ ದಿನಾಂಕ 16.4.2026 ಸಾಯಂಕಾಲ ರಾಜ್ಯ ಪ್ರಶಸ್ತಿ ಪುರಸ್ಕೃತರ ಶ್ರೀ ಆಮಲಿಂಗೇಶ್ವರ ಉಚಿತ ಸಂಗೀತ ಪಾಠ ಶಾಲೆ ಪ್ರಾಂಶುಪಾಲರಾದ ಹಾಗೂ ಆಕಾಶವಾಣಿ ಕಲಾವಿದರು ಶ್ರೀ ಅಮಯ್ಯಸ್ವಾಮಿ ಎಲ್ ಹಿರೇಮಠ ಇವರ ಮನೆಯಲ್ಲಿ ಜರುಗಿತು ಇವರ ಮನೆಯಲ್ಲಿ ಪುಸ್ತಕ ಸಂಗ್ರಹ ಗ್ರಂಥಾಲಯ ಮಾಡಿಕೊಂಡಿದ್ದಾರೆ ಮತ್ತು ಇನ್ನೊಬ್ಬ ಪುಸ್ತಕ ಪ್ರೇಮಿ , ಸಾಮಾಜಿಕ ಕಾರ್ಯಕರ್ತರಾದ ಸಂಗನಗೌಡ ಧನರಡ್ಡಿ ಇವರು ಕೂಡ ಮನೆಯಲ್ಲಿ ಪುಸ್ತಕ ಗ್ರಂಥಾಲಯವನ್ನು ಮಾಡಿಕೊಂಡಿದ್ದಾರೆ ಇಬ್ಬರು ಮಹನೀಯರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ- ಮಾನಸ್ ಮೈಸೂರ ಅವರು ಅಭಿನಂದಿಸಿ ಅವರಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಪ್ರಕಾಶ ಎಸ್ ಅಂಗಡಿ ಈ ಕಾರ್ಯಕ್ರಮದ ರೂಪ- ರೇಶದ ಹಾಗೂ ಉದ್ದೇಶವನ್ನು ತಿಳಿಸಿದರು ಈ ಅಭಿನಂದನಾ ಸಮಾರಂಭದಲ್ಲಿ ಊರಿನ ಹಿರಿಯರಾದ ಸಂಗನಗೌಡ ಮಾಗನೂರ, ಭೀಮನಗೌಡ ಪಾಟೀಲ್, ಸೋಮನಗೌಡ ಗುಳಬಾಳ, ತಿರುಪತಿ ಸಾಹುಕಾರ್ ಮಲ್ಲಿಕಾರ್ಜುನಗೌಡ ಮುರಾಳ,ಶ್ರೀಶೈಲ್ ಬಬಲೇಶ್ವರ ,ಅಮರಯ್ಯಸ್ವಾಮಿ ಹಿರೇಮಠ,ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀ ನೀಲಕಂಠ ಹೊನ್ಕಲ್ ಇನ್ನುಳಿದ ಗಣ್ಯ ಮಾನ್ಯರು ಉಪಸ್ಥಿತರಿದ್ದರು ಈಗಾಗಲೇ ದಿನಾಂಕ 13.01.2025ರ ಸೋಮುವಾರ ಸನ್ಮಾನ್ಯ ಮುಖ್ಯಮಂತ್ರಿಗಳ ಮನೆಯಲ್ಲಿ ಲಕ್ಷಯೋಜನೆಯ ಮೊದಲ ಗ್ರಂಥಾಲಯ ಅಸ್ತಿತ್ವಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ಸರಕಾರ 224 ಹಾಲಿ ಶಾಸಕರು ಸಚಿವರು ವಿಧಾನ ಪರಿಷತ್ ಸದಸ್ಯರು ಲೋಕಸಭಾ ಸದಸ್ಯರ ಮನೆಯಲ್ಲೂ ಅಸ್ತಿತ್ವಕ್ಕೆ ಬರುತ್ತದೆ ಹೀಗೆ ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ವಾರಸುದಾರರನ್ನು ಗೌರವಿಸುವ ಉತ್ತೇಜಿಸುವ ಸಲುವಾಗಿ ಪ್ರಾಧಿಕಾರ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೂ ನಾಕು ಜನ ವಿದ್ವಾಂಸರ ಹೆಸರಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಈ ವಾರ್ಷಿಕ ಪ್ರಶಸ್ತಿಗಳನ್ನು ಪುಸ್ತಕ ದಿನಾಚರಣೆ ದಿನದಂದು ಸನ್ಮಾನ ಮುಖ್ಯ ಮಾಡಿಸುವ ಯೋಜನೆ ಇದೆ1
- Post by Onlinetv24x71
- ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ1
- ಬೆಂಗಳೂರು. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗಾಗಿ ಮಾಡಿದ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೈ ಚಾಚುವ ಕೆಲಸ ಮಾಡುತ್ತಿದ್ದಾರೆ ಸಂಬಂಧ ಪಟ್ಟ ಸಚಿವರು ಏನ್ ಮಾಡ್ತಾರೋ ಗೊತ್ತಿಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ದೋಸ್ತಿತಿ ಹೇಗಿದೆ ನೋಡಿ ಕರ್ನಾಟಕದ ಜನರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಯಾವ ಸರ್ಕಾರ ತರಬೇಕು ಯಾರು ಕೆಲಸ ಮಾಡುತ್ತಾರೆ ಅಂತವರಿಗೆ ಹುಡುಕಿ ವೋಟ್ ಮಾಡಿ.1