logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಯಾದಗಿರಿ ಬದಲಾಗಬೇಕು, ವಲಸೆಗೆ ಬ್ರೇಕ್, ಸ್ಥಳೀಯರಿಗೆ ಉದ್ಯೋಗ: ಹಣಮೇಗೌಡರ ಹೊಸ ಕನಸು* *ಹಿಂದುಳಿದ ಹಣೆಪಟ್ಟಿ ಕಳಚಲಿ; ಯಾದಗಿರಿ ಅಭಿವೃದ್ಧಿಯ ಮುಂಚೂಣಿಗೆ ಬರಲಿ!* *ಯಾದಗಿರಿ: ಸೆಪ್ಟೆಂಬರ್ 17* ಉದ್ಯೋಗಕ್ಕಾಗಿ ಯುವಕರು ಜಿಲ್ಲೆ ತೊರೆಯುವ ಪರಿಸ್ಥಿತಿಗೆ ಶಾಶ್ವತ ವಿರಾಮ, ರೈತರಿಗೆ ಕೃಷಿಯ ಜೊತೆಗೆ ಉಪಕಸುಬುಗಳ ಮೂಲಕ ಹೆಚ್ಚುವರಿ ಆದಾಯ, ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ ಹಾಗೂ ಸ್ಥಳೀಯ ಸಂಪನ್ಮೂಲಗಳ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆ—ಇವುಗಳ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿಯ ಮುಂಚೂಣಿಗೆ ತರುವ ಸಮಗ್ರ ಸಂಕಲ್ಪವನ್ನು ಸಮಾಜ ಚಿಂತಕ ಹಾಗೂ ಕ್ಷೇತ್ರದ ಹಿತೈಷಿ ಹಣಮೇಗೌಡ ಬೀರನಕಲ್ ಅವರು ಮುಂದಿಟ್ಟಿದ್ದಾರೆ. ಯಾದಗಿರಿ ಕ್ಷೇತ್ರದ ಭವಿಷ್ಯದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ನಮ್ಮ ನೆಲದ ಸಂಪತ್ತು ನಮ್ಮಲ್ಲಿಯೇ ಉಳಿಯಬೇಕು. ಉದ್ಯೋಗಕ್ಕಾಗಿ ಯುವಕರು ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ಬದಲಾಗಬೇಕು” ಎಂದು ಹೇಳಿದ್ದಾರೆ. ಸ್ಥಳೀಯ ಸಂಪನ್ಮೂಲಗಳನ್ನು ಸ್ಥಳೀಯವಾಗಿಯೇ ಬಳಸಿಕೊಂಡು ಯುವಜನತೆಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಕಡಚೂರ–ಬೂದಿಹಾಳ ಕೈಗಾರಿಕಾ ಪ್ರದೇಶ ಹಾಗೂ ಜವಳಿ ಪಾರ್ಕ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಳಿಸಿ, ಶೇ.80ರಷ್ಟು ಉದ್ಯೋಗಾವಕಾಶಗಳನ್ನು ಜಿಲ್ಲೆಯ ಸ್ಥಳೀಯ ಯುವಜನತೆಗೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಜಿಲ್ಲೆಯ ತೊಗರಿ, ಭತ್ತ, ಹತ್ತಿ ಹಾಗೂ ಶೇಂಗಾ ಸೇರಿದಂತೆ ಪ್ರಮುಖ ಕೃಷಿ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಬೃಹತ್ ಸಂಸ್ಕರಣಾ ಘಟಕಗಳು ಮತ್ತು ಮಿಲ್‌ಗಳನ್ನು ಸ್ಥಾಪಿಸಿದರೆ ರೈತರಿಗೆ ಉತ್ತಮ ಮಾರುಕಟ್ಟೆ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. *ರೈತನೇ ಕೇಂದ್ರಬಿಂದು*; ಕೃಷಿಯೊಂದರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪ್ರತಿ ರೈತ ಕುಟುಂಬಕ್ಕೂ ಹೈನುಗಾರಿಕೆ, ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳಿಗೆ ಉತ್ತೇಜನ ನೀಡುವ ಚಿಂತನೆ ಹೊಂದಿರುವುದಾಗಿ ಹಣಮೇಗೌಡ ತಿಳಿಸಿದ್ದಾರೆ. ಹೈನುಗಾರಿಕೆ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಮೂಲಕ ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಮತ್ತಷ್ಟು ಸುಸ್ಥಿರಗೊಳಿಸುವುದು ತಮ್ಮ ಗುರಿಯಾಗಿದೆ ಎಂದಿದ್ದಾರೆ. PKPS ಹಾಗೂ DCC ಬ್ಯಾಂಕ್‌ಗಳ ಮೂಲಕ ದೊರೆಯುವ ಶೂನ್ಯ ಬಡ್ಡಿ ಸಾಲ, ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳು ಹಾಗೂ ಹೈನುಗಾರಿಕೆ–ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಗೆ ದೊರೆಯುವ ಸರ್ಕಾರಿ ಸಹಾಯಧನ, ಲಸಿಕೆ, ವಿಮೆ ಮತ್ತು ಸಾಲ ಸೌಲಭ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ತಲುಪಿಸುವ ವಿಶೇಷ ಜಾಗೃತಿ ಅಭಿಯಾನ ಅಗತ್ಯವಿದೆ ಎಂದು ಹೇಳಿದ್ದಾರೆ. ಕೃಷ್ಣಾ ಮತ್ತು ಭೀಮಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಪಿಕ್‌ಅಪ್ ಡ್ಯಾಮ್‌ಗಳು ಹಾಗೂ ನೀರು ಸಂಗ್ರಹಣಾ ಯೋಜನೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜೊತೆಗೆ ಕೃಷಿಗೆ ನೀರಿನ ಭದ್ರತೆ ಕಲ್ಪಿಸಬಹುದು. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಿ, ಬೆಂಬಲ ಬೆಲೆ ಸೌಲಭ್ಯ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಬೇಕು ಎಂಬುದು ತಮ್ಮ ಆಶಯವಾಗಿದೆ ಎಂದಿದ್ದಾರೆ. *ಬಡ ಕುಟುಂಬಗಳ ಬೆನ್ನಿಗೆ ನಿಲ್ಲುವ ಪ್ರಯತ್ನ*; ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗೆ ಮುಂದಾಗಿರುವ ಹಣಮೇಗೌಡ ಬೀರನಕಲ್, ಕಾನಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ವಿವಾಹದಂತಹ ಸಾಮಾಜಿಕ ಜವಾಬ್ದಾರಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ತಮ್ಮ ಸಾಮಾಜಿಕ ಕಾಳಜಿಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಶಿವಪುರ ಗ್ರಾಮದ ರೈತರು ಎದುರಿಸುತ್ತಿರುವ ಜಮೀನು ಹಕ್ಕಿನ ಸಮಸ್ಯೆಯ ಪರಿಹಾರಕ್ಕೂ ನಿರಂತರವಾಗಿ ಧ್ವನಿ ಎತ್ತಿದ್ದು, ಉಳುಮೆ ಮಾಡುತ್ತಿದ್ದ ಜಮೀನುಗಳಿಗೆ ಕಾನೂನುಬದ್ಧ ದಾಖಲೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವುದಾಗಿ ಹೇಳಿದ್ದಾರೆ. ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಕೈಬಿಡದೆ, ಪರಿಹಾರ ದೊರೆಯುವವರೆಗೆ ಹೋರಾಟ ನಡೆಸುವುದು ತಮ್ಮ ಜವಾಬ್ದಾರಿ ಎಂದಿದ್ದಾರೆ. *ಶಿಕ್ಷಣ–ಆರೋಗ್ಯಕ್ಕೂ ವಿಶೇಷ ಆದ್ಯತೆ*; ಬಡತನದ ಕಾರಣಕ್ಕೆ ಯಾವುದೇ ಮಗುವಿನ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ IAS, KAS, PSI ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರೆಯುವಂತೆ ಡಿಜಿಟಲ್ ಗ್ರಂಥಾಲಯ ಹಾಗೂ ಉಚಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆಯನ್ನೂ ಹೊಂದಿದ್ದಾರೆ. ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ಕ್ಯಾಥ್‌ಲ್ಯಾಬ್ ಹಾಗೂ ಕ್ರಿಟಿಕಲ್ ಕೇರ್ ಯುನಿಟ್ ಸ್ಥಾಪನೆಗೆ ಆದ್ಯತೆ ನೀಡಬೇಕು. ತಾಲೂಕು ಮಟ್ಟದಲ್ಲೇ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಉಚಿತ ತಪಾಸಣೆ ದೊರೆಯಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಗತ್ಯ ICU ಹಾಸಿಗೆಗಳು ಹಾಗೂ 24 ಗಂಟೆಗಳ ಪರಿಣಿತ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. *ಜನರ ಸಮಸ್ಯೆಗೆ 24/7 ಪರಿಹಾರ ಕೇಂದ್ರ*; ಕುಡಿಯುವ ನೀರು, ವಿದ್ಯುತ್, ರಸ್ತೆ, ಪಡಿತರ, ಆರೋಗ್ಯ ಸೇರಿದಂತೆ ಮೂಲಭೂತ ಸಮಸ್ಯೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆಯುವ ಪರಿಸ್ಥಿತಿ ತಪ್ಪಿಸಲು 24/7 ಸಾರ್ವಜನಿಕ ಕುಂದುಕೊರತೆ ಪರಿಹಾರ ಕೇಂದ್ರ ಹಾಗೂ ಉಚಿತ ಸಹಾಯವಾಣಿ ಆರಂಭಿಸುವ ಉದ್ದೇಶವಿದೆ ಎಂದು ಹಣಮೇಗೌಡ ತಿಳಿಸಿದ್ದಾರೆ. ಸಾರ್ವಜನಿಕರ ದೂರುಗಳಿಗೆ ನಿಗದಿತ ಕಾಲಮಿತಿಯಲ್ಲಿ ಸ್ಪಂದಿಸಿ ಪರಿಹಾರ ಒದಗಿಸುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಕಾನೂನು ಸುವ್ಯವಸ್ಥೆಯಲ್ಲೂ ಜನಸ್ನೇಹಿ ಕ್ರಮಗಳಿಗೆ ಆದ್ಯತೆ ನೀಡಿ, ತಾಲೂಕು ಮಟ್ಟದಲ್ಲಿ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಬೆಳೆಸುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದ್ದಾರೆ. *ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸುವ ಕನಸು*; ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜೊತೆಗೆ ರೈತರು, ಜಾನುವಾರುಗಳು ಹಾಗೂ ಪ್ರಾಣಿ–ಪಕ್ಷಿಗಳಿಗೆ ನೀರಿನ ಲಭ್ಯತೆ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಕನಸನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮ ಕೈಲಾದ ನೆರವು ನೀಡುತ್ತಿದ್ದು, ಜಿಲ್ಲೆಯ ವಿವಿಧ ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಹಾಯಧನ ನೀಡುತ್ತಿರುವುದಾಗಿ ಹೇಳಿದ್ದಾರೆ. ದೇವಸ್ಥಾನಗಳು ಗ್ರಾಮೀಣ ಸಮಾಜದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಪ್ರಮುಖ ಕೇಂದ್ರಗಳಾಗಿವೆ ಎಂಬುದು ತಮ್ಮ ನಿಲುವು ಎಂದು ತಿಳಿಸಿದ್ದಾರೆ. *“ಬದಲಾವಣೆಯ ಭವಿಷ್ಯ ಯುವಕರ ಕೈಯಲ್ಲಿದೆ*” ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅತ್ಯಗತ್ಯ. ಮುನ್ನಾಲೋಚನೆಯೊಂದಿಗೆ ಜಿಲ್ಲೆಯ ಸಂಪತ್ತನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು. “ಯುವಕರೇ, ನಿಮ್ಮ ಕೈಯಲ್ಲಿದೆ ಈ ಬದಲಾವಣೆಯ ಭವಿಷ್ಯ. ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ” ಎಂದು ಹಣಮೇಗೌಡ ಬೀರನಕಲ್ ಹೇಳಿದ್ದಾರೆ. ರೈತರು, ಯುವಕರು, ಮಹಿಳೆಯರು, ಬಡವರು, ವಿದ್ಯಾರ್ಥಿಗಳು ಹಾಗೂ ದುರ್ಬಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಯಾದಗಿರಿಯನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುವುದು ತಮ್ಮ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದ್ದಾರೆ. “ನಮ್ಮ ನೆಲದ ಸಂಪತ್ತು ನಮ್ಮಲ್ಲಿಯೇ ಇದೆ. ಅದನ್ನು ರಕ್ಷಿಸಿ, ವಲಸೆಗೆ ಶಾಶ್ವತ ಮುಕ್ತಿ ನೀಡಿ, ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುವುದು ನಮ್ಮ ಸಂಕಲ್ಪ.” — ಹಣಮೇಗೌಡ ಬೀರನಕಲ್

2 hrs ago
user_ರಾಜಶೇಖರ.ಎನ್.ಮಾಲಿಪಾಟೀಲ
ರಾಜಶೇಖರ.ಎನ್.ಮಾಲಿಪಾಟೀಲ
Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
2 hrs ago
e173d584-ab94-43e6-b811-287fd8ce548d

*ಯಾದಗಿರಿ ಬದಲಾಗಬೇಕು, ವಲಸೆಗೆ ಬ್ರೇಕ್, ಸ್ಥಳೀಯರಿಗೆ ಉದ್ಯೋಗ: ಹಣಮೇಗೌಡರ ಹೊಸ ಕನಸು* *ಹಿಂದುಳಿದ ಹಣೆಪಟ್ಟಿ ಕಳಚಲಿ; ಯಾದಗಿರಿ ಅಭಿವೃದ್ಧಿಯ ಮುಂಚೂಣಿಗೆ ಬರಲಿ!* *ಯಾದಗಿರಿ: ಸೆಪ್ಟೆಂಬರ್ 17* ಉದ್ಯೋಗಕ್ಕಾಗಿ ಯುವಕರು ಜಿಲ್ಲೆ ತೊರೆಯುವ ಪರಿಸ್ಥಿತಿಗೆ ಶಾಶ್ವತ ವಿರಾಮ, ರೈತರಿಗೆ ಕೃಷಿಯ ಜೊತೆಗೆ ಉಪಕಸುಬುಗಳ ಮೂಲಕ ಹೆಚ್ಚುವರಿ ಆದಾಯ, ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ ಹಾಗೂ ಸ್ಥಳೀಯ ಸಂಪನ್ಮೂಲಗಳ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆ—ಇವುಗಳ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿಯ ಮುಂಚೂಣಿಗೆ ತರುವ ಸಮಗ್ರ ಸಂಕಲ್ಪವನ್ನು ಸಮಾಜ ಚಿಂತಕ ಹಾಗೂ ಕ್ಷೇತ್ರದ ಹಿತೈಷಿ ಹಣಮೇಗೌಡ ಬೀರನಕಲ್ ಅವರು ಮುಂದಿಟ್ಟಿದ್ದಾರೆ. ಯಾದಗಿರಿ ಕ್ಷೇತ್ರದ ಭವಿಷ್ಯದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ನಮ್ಮ ನೆಲದ ಸಂಪತ್ತು ನಮ್ಮಲ್ಲಿಯೇ ಉಳಿಯಬೇಕು. ಉದ್ಯೋಗಕ್ಕಾಗಿ ಯುವಕರು ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ಬದಲಾಗಬೇಕು” ಎಂದು ಹೇಳಿದ್ದಾರೆ. ಸ್ಥಳೀಯ ಸಂಪನ್ಮೂಲಗಳನ್ನು ಸ್ಥಳೀಯವಾಗಿಯೇ ಬಳಸಿಕೊಂಡು ಯುವಜನತೆಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಕಡಚೂರ–ಬೂದಿಹಾಳ ಕೈಗಾರಿಕಾ ಪ್ರದೇಶ ಹಾಗೂ ಜವಳಿ ಪಾರ್ಕ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಳಿಸಿ, ಶೇ.80ರಷ್ಟು ಉದ್ಯೋಗಾವಕಾಶಗಳನ್ನು ಜಿಲ್ಲೆಯ ಸ್ಥಳೀಯ ಯುವಜನತೆಗೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಜಿಲ್ಲೆಯ ತೊಗರಿ, ಭತ್ತ, ಹತ್ತಿ ಹಾಗೂ ಶೇಂಗಾ ಸೇರಿದಂತೆ ಪ್ರಮುಖ ಕೃಷಿ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಬೃಹತ್ ಸಂಸ್ಕರಣಾ ಘಟಕಗಳು ಮತ್ತು ಮಿಲ್‌ಗಳನ್ನು ಸ್ಥಾಪಿಸಿದರೆ ರೈತರಿಗೆ ಉತ್ತಮ ಮಾರುಕಟ್ಟೆ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. *ರೈತನೇ ಕೇಂದ್ರಬಿಂದು*; ಕೃಷಿಯೊಂದರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ

1860c002-b8b1-459f-8a53-ca8431baf96c

ಪ್ರತಿ ರೈತ ಕುಟುಂಬಕ್ಕೂ ಹೈನುಗಾರಿಕೆ, ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳಿಗೆ ಉತ್ತೇಜನ ನೀಡುವ ಚಿಂತನೆ ಹೊಂದಿರುವುದಾಗಿ ಹಣಮೇಗೌಡ ತಿಳಿಸಿದ್ದಾರೆ. ಹೈನುಗಾರಿಕೆ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಮೂಲಕ ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಮತ್ತಷ್ಟು ಸುಸ್ಥಿರಗೊಳಿಸುವುದು ತಮ್ಮ ಗುರಿಯಾಗಿದೆ ಎಂದಿದ್ದಾರೆ. PKPS ಹಾಗೂ DCC ಬ್ಯಾಂಕ್‌ಗಳ ಮೂಲಕ ದೊರೆಯುವ ಶೂನ್ಯ ಬಡ್ಡಿ ಸಾಲ, ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳು ಹಾಗೂ ಹೈನುಗಾರಿಕೆ–ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಗೆ ದೊರೆಯುವ ಸರ್ಕಾರಿ ಸಹಾಯಧನ, ಲಸಿಕೆ, ವಿಮೆ ಮತ್ತು ಸಾಲ ಸೌಲಭ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ತಲುಪಿಸುವ ವಿಶೇಷ ಜಾಗೃತಿ ಅಭಿಯಾನ ಅಗತ್ಯವಿದೆ ಎಂದು ಹೇಳಿದ್ದಾರೆ. ಕೃಷ್ಣಾ ಮತ್ತು ಭೀಮಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಪಿಕ್‌ಅಪ್ ಡ್ಯಾಮ್‌ಗಳು ಹಾಗೂ ನೀರು ಸಂಗ್ರಹಣಾ ಯೋಜನೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜೊತೆಗೆ ಕೃಷಿಗೆ ನೀರಿನ ಭದ್ರತೆ ಕಲ್ಪಿಸಬಹುದು. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಿ, ಬೆಂಬಲ ಬೆಲೆ ಸೌಲಭ್ಯ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಬೇಕು ಎಂಬುದು ತಮ್ಮ ಆಶಯವಾಗಿದೆ ಎಂದಿದ್ದಾರೆ. *ಬಡ ಕುಟುಂಬಗಳ ಬೆನ್ನಿಗೆ ನಿಲ್ಲುವ ಪ್ರಯತ್ನ*; ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗೆ ಮುಂದಾಗಿರುವ ಹಣಮೇಗೌಡ ಬೀರನಕಲ್, ಕಾನಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ವಿವಾಹದಂತಹ ಸಾಮಾಜಿಕ ಜವಾಬ್ದಾರಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ತಮ್ಮ ಸಾಮಾಜಿಕ ಕಾಳಜಿಯ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಶಿವಪುರ

f1e6814d-4e0d-4154-a2e6-ab1171e52dc5

ಗ್ರಾಮದ ರೈತರು ಎದುರಿಸುತ್ತಿರುವ ಜಮೀನು ಹಕ್ಕಿನ ಸಮಸ್ಯೆಯ ಪರಿಹಾರಕ್ಕೂ ನಿರಂತರವಾಗಿ ಧ್ವನಿ ಎತ್ತಿದ್ದು, ಉಳುಮೆ ಮಾಡುತ್ತಿದ್ದ ಜಮೀನುಗಳಿಗೆ ಕಾನೂನುಬದ್ಧ ದಾಖಲೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವುದಾಗಿ ಹೇಳಿದ್ದಾರೆ. ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಕೈಬಿಡದೆ, ಪರಿಹಾರ ದೊರೆಯುವವರೆಗೆ ಹೋರಾಟ ನಡೆಸುವುದು ತಮ್ಮ ಜವಾಬ್ದಾರಿ ಎಂದಿದ್ದಾರೆ. *ಶಿಕ್ಷಣ–ಆರೋಗ್ಯಕ್ಕೂ ವಿಶೇಷ ಆದ್ಯತೆ*; ಬಡತನದ ಕಾರಣಕ್ಕೆ ಯಾವುದೇ ಮಗುವಿನ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ IAS, KAS, PSI ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರೆಯುವಂತೆ ಡಿಜಿಟಲ್ ಗ್ರಂಥಾಲಯ ಹಾಗೂ ಉಚಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆಯನ್ನೂ ಹೊಂದಿದ್ದಾರೆ. ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ಕ್ಯಾಥ್‌ಲ್ಯಾಬ್ ಹಾಗೂ ಕ್ರಿಟಿಕಲ್ ಕೇರ್ ಯುನಿಟ್ ಸ್ಥಾಪನೆಗೆ ಆದ್ಯತೆ ನೀಡಬೇಕು. ತಾಲೂಕು ಮಟ್ಟದಲ್ಲೇ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಉಚಿತ ತಪಾಸಣೆ ದೊರೆಯಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅಗತ್ಯ ICU ಹಾಸಿಗೆಗಳು ಹಾಗೂ 24 ಗಂಟೆಗಳ ಪರಿಣಿತ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. *ಜನರ ಸಮಸ್ಯೆಗೆ 24/7 ಪರಿಹಾರ ಕೇಂದ್ರ*; ಕುಡಿಯುವ ನೀರು, ವಿದ್ಯುತ್, ರಸ್ತೆ, ಪಡಿತರ, ಆರೋಗ್ಯ ಸೇರಿದಂತೆ ಮೂಲಭೂತ ಸಮಸ್ಯೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆಯುವ ಪರಿಸ್ಥಿತಿ ತಪ್ಪಿಸಲು 24/7 ಸಾರ್ವಜನಿಕ ಕುಂದುಕೊರತೆ ಪರಿಹಾರ ಕೇಂದ್ರ ಹಾಗೂ ಉಚಿತ ಸಹಾಯವಾಣಿ ಆರಂಭಿಸುವ ಉದ್ದೇಶವಿದೆ ಎಂದು ಹಣಮೇಗೌಡ ತಿಳಿಸಿದ್ದಾರೆ. ಸಾರ್ವಜನಿಕರ ದೂರುಗಳಿಗೆ ನಿಗದಿತ ಕಾಲಮಿತಿಯಲ್ಲಿ ಸ್ಪಂದಿಸಿ ಪರಿಹಾರ ಒದಗಿಸುವ ವ್ಯವಸ್ಥೆ

34ba6b93-4126-44d0-a897-a6be77f13409

ರೂಪಿಸುವ ಅಗತ್ಯವಿದೆ. ಕಾನೂನು ಸುವ್ಯವಸ್ಥೆಯಲ್ಲೂ ಜನಸ್ನೇಹಿ ಕ್ರಮಗಳಿಗೆ ಆದ್ಯತೆ ನೀಡಿ, ತಾಲೂಕು ಮಟ್ಟದಲ್ಲಿ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಬೆಳೆಸುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದ್ದಾರೆ. *ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸುವ ಕನಸು*; ಮಳೆನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜೊತೆಗೆ ರೈತರು, ಜಾನುವಾರುಗಳು ಹಾಗೂ ಪ್ರಾಣಿ–ಪಕ್ಷಿಗಳಿಗೆ ನೀರಿನ ಲಭ್ಯತೆ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಕನಸನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮ ಕೈಲಾದ ನೆರವು ನೀಡುತ್ತಿದ್ದು, ಜಿಲ್ಲೆಯ ವಿವಿಧ ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಹಾಯಧನ ನೀಡುತ್ತಿರುವುದಾಗಿ ಹೇಳಿದ್ದಾರೆ. ದೇವಸ್ಥಾನಗಳು ಗ್ರಾಮೀಣ ಸಮಾಜದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಪ್ರಮುಖ ಕೇಂದ್ರಗಳಾಗಿವೆ ಎಂಬುದು ತಮ್ಮ ನಿಲುವು ಎಂದು ತಿಳಿಸಿದ್ದಾರೆ. *“ಬದಲಾವಣೆಯ ಭವಿಷ್ಯ ಯುವಕರ ಕೈಯಲ್ಲಿದೆ*” ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅತ್ಯಗತ್ಯ. ಮುನ್ನಾಲೋಚನೆಯೊಂದಿಗೆ ಜಿಲ್ಲೆಯ ಸಂಪತ್ತನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು. “ಯುವಕರೇ, ನಿಮ್ಮ ಕೈಯಲ್ಲಿದೆ ಈ ಬದಲಾವಣೆಯ ಭವಿಷ್ಯ. ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ” ಎಂದು ಹಣಮೇಗೌಡ ಬೀರನಕಲ್ ಹೇಳಿದ್ದಾರೆ. ರೈತರು, ಯುವಕರು, ಮಹಿಳೆಯರು, ಬಡವರು, ವಿದ್ಯಾರ್ಥಿಗಳು ಹಾಗೂ ದುರ್ಬಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಯಾದಗಿರಿಯನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಕೊಂಡೊಯ್ಯುವುದು ತಮ್ಮ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದ್ದಾರೆ. “ನಮ್ಮ ನೆಲದ ಸಂಪತ್ತು ನಮ್ಮಲ್ಲಿಯೇ ಇದೆ. ಅದನ್ನು ರಕ್ಷಿಸಿ, ವಲಸೆಗೆ ಶಾಶ್ವತ ಮುಕ್ತಿ ನೀಡಿ, ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುವುದು ನಮ್ಮ ಸಂಕಲ್ಪ.” — ಹಣಮೇಗೌಡ ಬೀರನಕಲ್

More news from ಕರ್ನಾಟಕ and nearby areas
  • ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    1
    ಯಾದಗಿರಿ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಅಪ್ಲೋಡ್ ಮತ್ತು ರೇಷನ್ ಕಾರ್ಡ್ ಕೆವೈಸಿ ಮಾಡಲು ಬೆಂಗಳೂರಿನಿಂದ ಆಗಮಿಸಿ ಒಳಗಡೆ ಕರ್ನಾಟಕ 1 ನಲ್ಲಿ ಬೆಳಗ್ಗೆ 3:00 ಯಿಂದ ಯಾದಗಿರಿಯ ತಾಲೂಕಿನ ಕಚೇರಿಯ ಒಳಗಡೆ ಜನ ಜಾತ್ರೆ ಆಗಿದೆ ಬೆಂಗಳೂರಿನಲ್ಲಿ ಬಂದು ಲೈನ್ ಅಲ್ಲಿ ನಿಂತುಕೊಂಡು ಆದರೂ ಕೂಡ ಸರಿಯಾಗಿ ನೆಟ್ವರ್ಕ್ ಇಲ್ಲ ಮತ್ತು ಜನರು ಕಿತ್ತಿ ಹಾಡುತ್ತಿದ್ದರೆ ಜಿಲ್ಲೆಯ 16 ವರ್ಷ ಆದರೂ ಕೂಡ ಜಿಲ್ಲಾ ಆಡಳಿತ ಇದನ್ನು ಗಮನಿಸಿ ಸರಿಪಡಿಸಬೇಕು ಈಗಾಗಲೇ ಯಾತಗಿರಿ ಜಿಲ್ಲೆಯ ಬರಗಲ ಆಗಿದೆ ಬೆಳೆ ಇಲ್ಲದ ಕಾರಣ ರೈತರು ಸಾಲ ಮಾಡಿ ಬೆಂಗಳೂರಿನಲ್ಲಿ ದುಡಿ ದುಡಿಯುತ್ತಾ ಇದ್ದರೂ ಕೂಡ ಈ ಕೆವೈಸಿ ರೇಷನ್ ಕಾರ್ಡ್ ಸಲುವಾಗಿ ಜಿಲ್ಲೆಗೆ ಆಗಮಿಸಿ ತಿದ್ದು ಇದನ್ನು ಬಹಳ ರೈತರು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಬೆಳಗ್ಗೆ ಮೂರು ಗಂಟೆಯಿಂದ ಸಾಲಗಿ ನಿಲ್ಲುತ್ತದೆ ಇದು ಯಾವ ಶಾಪ ರೈತರ ಗೋಳು ವರು ಯಾರು ಇಲ್ಲ ಸರ್ಕಾರವೇ ಕಣ್ಣು ಮುಚ್ಚಿ ಕುಂತಿದೆ ಜನ ಆಕ್ರೋಶ
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    10 hrs ago
  • YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..! ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
    1
    YADGIR NEWS||ನೀರು ಬೇಕಾಗಿದೆ, ನೀರು ಬಿಡಿ||ಅನ್ನದಾತರ ಭಜನೆ ಮುಖಾಂತರ|| ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಹೋರಾಟ..!
ಯಾದಗಿರಿ: ರಾಜ್ಯದಲ್ಲಿ ಆವರಿಸಿರುವ ಭೀಕರ ಬರದ ಹಿನ್ನೆಲೆಯಲ್ಲಿ ಬತ್ತಿಹೋದ ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಭಜನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಬದ್ದೆಪಲ್ಲಿ ಹಾಗೂ ಮಲ್ಕಪನಳ್ಳಿ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಬಿಜೆಎನ್‌ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಸಮರ್ಪಕವಾಗಿ ತುಂಬಿಲ್ಲ ಎಂದು ಆರೋಪಿಸಿದರು. ಮಳೆ ಕೈಕೊಟ್ಟ ಪರಿಣಾಮ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೆರೆ ನೀರನ್ನು ನಂಬಿ ಬೆಳೆ ಹಾಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಗೂ ಜಾನುವಾರುಗಳಿಗಾಗಿ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು, “ನೀರು ಬೇಕಾಗಿದೆ, ನೀರು ಬಿಡಿ” ಎಂದು ಭಜನೆ ಮಾಡಿ ಪ್ರತಿಭಟಿಸಿದರು. ಕೆರೆಗಳು ತುಂಬುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
    user_ಪೃಥ್ವಿ ಮಾಧ್ಯಮ
    ಪೃಥ್ವಿ ಮಾಧ್ಯಮ
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    10 hrs ago
  • ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    1
    ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!

ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.

ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.

ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!
ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.
ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.
“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    12 hrs ago
  • ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಾಣ ಮಾಡಿದ್ದು ತೆರವುಗೊಳಿಸಲು ಆಗ್ರಹ ಅವೈಜ್ಞಾನಿಕವಾಗಿ ಟೋಲ್ ತುರ್ತಾಗಿ ತೆರವುಗೊಳಿಸಿ ಮುಂದಾಗುವ ಅವಘಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯ. ಅವೈಜ್ಞಾನಿಕವಾಗಿ ಟೋಲ್‌ನಿಂದ ಸಾಕಷ್ಟು ಬಡ ಚಾಲಕರು ಜೀವ ಬಲಿಯಾಗಿದ್ದು ಇನ್ನಷ್ಟು ಜೀವ ಬಲಿಯಾಗಬೇಕು ? ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ. ಯಾದಗಿರಿ : ಬಡ ವಾಹನ ಚಾಲಕರ ನಿರಂತರ ಜೀವ ತೆಗೆಯುತ್ತಿರುವ ಯಾದಗಿರಿ ರಾಯಚೂರು ಹೆದ್ದಾರಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್‌ನ್ನು ತುರ್ತಾಗಿ ತೆರವುಗೊಳ್ಳಿಸಿ ಇಂದೇ ಆದ ಅನಾವುತಗಳನ್ನು ಇನ್ನು ಮುಂದೇ ಅನಾವುತಗಳನ್ನು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ಮತ್ತು ನಾಗಲಾಪುರ ಮಧ್ಯದಲ್ಲಿ ಬರುವ ಯಾದಗಿರಿ ರಾಯಚೂರು ಹೋಗುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಬೇಟಿ ನೀಡಿ ಪರಿಶೀಲಿಸಿದ ನಂತರ ರೈತರ ಮತ್ತು ವಾಹನ ಸವಾರರ ಜೊತೆ ಚರ್ಚಿಸಿ ನಂತರ ದೀಡಿರ್‌ನ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಈ ಟೋಲ್‌ನಲ್ಲಿ ವಿದ್ಯುತ್ ಲೈಟ್, ಸ್ಟೀಕರ್ ಸರಿಯಾಗಿ ಅಳವಡಸದೆ ಅವೈಜ್ಞಾನಿಕವಾಗಿ ನಿರ್ಮಿಸಿ ಈ ಟೋಲ್‌ನಲ್ಲಿ ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷವಹಿಸಿರುವುದು ಇದು ನಾಚೀಗೇಡಿನ ಸಂಗತಿ ಎಂದು ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರೂ ವಾಹನಗಳು ಸಂಚಾರ ಮಾಡುತ್ತಿದ್ದು ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲನ ಕಾರಣ ಬಡವ ಜೀವಗಳು ಬಲಿಯಾಗುತ್ತಿದ್ದು ಸಂಬAಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಇನ್ನೆಷ್ಟು ಬಡಜೀವಿಗಳನ್ನು ಬಲಿಪಶು ಮಾಡುತ್ತಿದ್ದಿರಿ ಎಂದು ಕಾರವಾಗಿ ಪ್ರಶ್ನಿಸಿದರು. ತಕ್ಷಣ ಟೋಲ್‌ನ್ನು ತೆರವುಗೊಳ್ಳಿಸಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಟೋಲ್ ಸ್ಥಳದಲ್ಲೇ ಮುಖ್ಯ ರಸ್ತೆ ತಡೆದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಬದಲ್ಲಿ ಮಲ್ಲೇಶಿ, ಪವನ. ತಿಪ್‌ಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ ಮೋನಪ್ಪ ಮಲ್ಲಪ್ಪ ಚಂದ್ರು ಸಿದ್ದು ತಿಮ್ಮಪ್ಪ ಮಲ್ಲಪ್ಪ ಆನಂದ ಭೀಮಪ್ಪ ಮಲ್ಲಪ್ಪ ಸಾಬು ಮಲ್ಲಪ್ಪ ಸೇರಿದಂತೆ ಅನೇಕು ಇದ್ದರು
    2
    ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಾಣ ಮಾಡಿದ್ದು ತೆರವುಗೊಳಿಸಲು ಆಗ್ರಹ
ಅವೈಜ್ಞಾನಿಕವಾಗಿ ಟೋಲ್ ತುರ್ತಾಗಿ ತೆರವುಗೊಳಿಸಿ ಮುಂದಾಗುವ ಅವಘಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯ.
ಅವೈಜ್ಞಾನಿಕವಾಗಿ ಟೋಲ್‌ನಿಂದ ಸಾಕಷ್ಟು ಬಡ ಚಾಲಕರು ಜೀವ ಬಲಿಯಾಗಿದ್ದು ಇನ್ನಷ್ಟು ಜೀವ ಬಲಿಯಾಗಬೇಕು ? ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್  ಆರೋಪಿಸಿದ್ದಾರೆ. 
ಯಾದಗಿರಿ : ಬಡ ವಾಹನ ಚಾಲಕರ ನಿರಂತರ ಜೀವ ತೆಗೆಯುತ್ತಿರುವ ಯಾದಗಿರಿ ರಾಯಚೂರು ಹೆದ್ದಾರಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್‌ನ್ನು ತುರ್ತಾಗಿ ತೆರವುಗೊಳ್ಳಿಸಿ ಇಂದೇ ಆದ ಅನಾವುತಗಳನ್ನು ಇನ್ನು ಮುಂದೇ ಅನಾವುತಗಳನ್ನು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ
ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ಮತ್ತು ನಾಗಲಾಪುರ ಮಧ್ಯದಲ್ಲಿ ಬರುವ ಯಾದಗಿರಿ ರಾಯಚೂರು ಹೋಗುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲ್ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಬೇಟಿ ನೀಡಿ ಪರಿಶೀಲಿಸಿದ ನಂತರ ರೈತರ ಮತ್ತು ವಾಹನ ಸವಾರರ ಜೊತೆ ಚರ್ಚಿಸಿ ನಂತರ ದೀಡಿರ್‌ನ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಈ ಟೋಲ್‌ನಲ್ಲಿ ವಿದ್ಯುತ್ ಲೈಟ್, ಸ್ಟೀಕರ್ ಸರಿಯಾಗಿ ಅಳವಡಸದೆ ಅವೈಜ್ಞಾನಿಕವಾಗಿ ನಿರ್ಮಿಸಿ ಈ ಟೋಲ್‌ನಲ್ಲಿ ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷವಹಿಸಿರುವುದು ಇದು ನಾಚೀಗೇಡಿನ ಸಂಗತಿ ಎಂದು ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರೂ ವಾಹನಗಳು ಸಂಚಾರ ಮಾಡುತ್ತಿದ್ದು ಅವೈಜ್ಞಾನಿಕವಾಗಿ ನಿರ್ಮಿಸಿದ ಟೋಲನ ಕಾರಣ ಬಡವ ಜೀವಗಳು ಬಲಿಯಾಗುತ್ತಿದ್ದು ಸಂಬAಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಇನ್ನೆಷ್ಟು ಬಡಜೀವಿಗಳನ್ನು ಬಲಿಪಶು ಮಾಡುತ್ತಿದ್ದಿರಿ ಎಂದು ಕಾರವಾಗಿ ಪ್ರಶ್ನಿಸಿದರು.
ತಕ್ಷಣ ಟೋಲ್‌ನ್ನು ತೆರವುಗೊಳ್ಳಿಸಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಟೋಲ್ ಸ್ಥಳದಲ್ಲೇ ಮುಖ್ಯ ರಸ್ತೆ ತಡೆದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಬದಲ್ಲಿ ಮಲ್ಲೇಶಿ, ಪವನ. ತಿಪ್‌ಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ ಮೋನಪ್ಪ ಮಲ್ಲಪ್ಪ ಚಂದ್ರು ಸಿದ್ದು ತಿಮ್ಮಪ್ಪ ಮಲ್ಲಪ್ಪ ಆನಂದ ಭೀಮಪ್ಪ ಮಲ್ಲಪ್ಪ ಸಾಬು ಮಲ್ಲಪ್ಪ ಸೇರಿದಂತೆ ಅನೇಕು ಇದ್ದರು
    user_Raghu
    Raghu
    ಯಾದಗಿರಿ, ಯಾದಗಿರಿ, ಕರ್ನಾಟಕ•
    13 hrs ago
  • ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ, ಪೈನಲ್ ವಾಲಿಬಾಲ್ ಪಂದ್ಯ ಪ್ರಗತಿ ಕಾಲೇಜು ರೋಚಕ ಜಯ ಪಟ್ಟಣದ ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯಾದಗಿರಿ ಹಾಗೂ ಪ್ರಗತಿ ಪದವಿ ಪೂರ್ವ ಕಾಲೇಜು ಗುರುಮಠಕಲ್ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಪೈನಲ್ ವಾಲಿಬಾಲ್ ಪಂದ್ಯ ಪ್ರಗತಿ vs ಎಸ್.ವಿ ಪದವಿ ಪೂರ್ವ ಕಾಲೇಜು ಗುರುಮಠಕಲ್, ಬಾಲಕರ ಪ್ರಗತಿ ಪದವಿ ಪೂರ್ವ ಕಾಲೆಜು ಜಯ
    1
    ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ, ಪೈನಲ್ ವಾಲಿಬಾಲ್ ಪಂದ್ಯ  ಪ್ರಗತಿ ಕಾಲೇಜು ರೋಚಕ ಜಯ
ಪಟ್ಟಣದ ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ  ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯಾದಗಿರಿ ಹಾಗೂ ಪ್ರಗತಿ ಪದವಿ ಪೂರ್ವ ಕಾಲೇಜು ಗುರುಮಠಕಲ್ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಪೈನಲ್ ವಾಲಿಬಾಲ್  ಪಂದ್ಯ ಪ್ರಗತಿ vs ಎಸ್.ವಿ ಪದವಿ  ಪೂರ್ವ ಕಾಲೇಜು ಗುರುಮಠಕಲ್,  ಬಾಲಕರ  
ಪ್ರಗತಿ ಪದವಿ ಪೂರ್ವ ಕಾಲೆಜು ಜಯ
    user_Yankatappa
    Yankatappa
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    1 hr ago
  • ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು. ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಅವ್ಯವಸ್ಥೆಯ ಆಗರವಾದ ಸಂತೆ ಆವರಣ ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು. ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು. ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು. ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಒಂದು ವಾರದ ಗಡುವು ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು. ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    4
    ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು.
ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ
ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ
ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.
ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಅವ್ಯವಸ್ಥೆಯ ಆಗರವಾದ ಸಂತೆ ಆವರಣ
ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು.
ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು.
ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ
ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು.
ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ
ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು.
ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಒಂದು ವಾರದ ಗಡುವು
ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು.
ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    16 hrs ago
  • ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    1
    ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ
ಯಾದಗಿರಿ-ರಾಯಚೂರು ಹೆದ್ದಾರಿಯ ಆರ್.
ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    14 hrs ago
  • ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ
    1
    ಯಾದಗಿರಿ ನಾಳೆ ಸೆಪ್ಟೆಂಬರ್ 17 ರಂದು ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಜಯಂತಿಯ ಶುಭಾಶಯಗಳು ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಇವರ ಶ್ರಮ ದಿಂದ ವಿಶ್ವಕರ್ಮ ಜಯಂತಿಯ ಆಚರಿಸುವಂತೆ ಅದು ಸೆಪ್ಟೆಂಬರ್ 17 ರಂದು ವಿಶ್ವಕರ್ಮರ ಹಬ್ಬ ಅಂತೆ ಮನೆ ಮನೆಯಲ್ಲಿ ವಿಶ್ವಕರ್ಮರು ಭಾವಚಿತ್ರಕ್ಕೆ ಪೂಜ್ಯ ಮಾಡಲು ಸೃಷ್ಟಿಕರ್ತನಾದ ಪ್ರೀತಿ ನಂಜುಂಡಿ ಇವರ ಶ್ರಮ
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.