logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ : ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಚಿತ್ರದುರ್ಗದ ಮಹಿಳೆ..‌ಕಾರಣವೇನು? ಶಿವಮೊಗ್ಗ : ಆಕೆ ಗಂಡ ಜೆಸಿಬಿ ಆಪರೇಟರ್, ದೂರದ ಕೋಟೆನಾಡಿನ ಹಳ್ಳಿಯೊಂದರ ನಿವಾಸಿ...ಮೂರು ಮಕ್ಕಳೊಂದಿಗೆ ಸವಳಂಗದ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದಳು..ಆದರೆ ಇದ್ದಕ್ಕಿದ್ದಂತೆ ಮನೆಯಲ್ಲಿ ಗಂಡನ ಜಗಳ ಆಡಿದ್ದಾಳೆ..ಬಳಿಕ ತನ್ನ ಮೂರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾಳೆ. ಈ ಘಟನೆ ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ  ಅರಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊಸುರೂ ಗ್ರಾಮದ ಭವಾನಿ ಆತ್ಮಹತ್ಯೆಕ್ಕೆ ಯತ್ನಿಸಿದವಳು.  ಇಲ್ಲಿ ರೈಲ್ವೆ ಟ್ರ್ಯಾಕ್ ಇದ್ದು, ಇದರ ಮೇಲೆ ತನ್ನ ಮೂವರ ಮಕ್ಕಳ ಜತೆ ನಡೆದುಕೊಂಡು ಹೋಗಿದ್ದಾಳೆ. ನಂತರ ಸೆರೆಗಿಗೆ ಮಗುವೊಂದನ್ನು ಕಟ್ಟಿಕೊಂಡು ತುಂಗಾ ನದಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳೀಯರು ತಾಯಿ ಭವಾನಿ ಹಾಗೂ ಒಂದು ಮಗುವನ್ನು ರಕ್ಷಿಸಿದ್ದಾರೆ. ಮಕ್ಕಳಿಗಾಗಿ ತಾಯಿಯ ಆಕ್ರಂದನ "ನನ್ನ ಇನ್ನಿಬ್ಬರು ಮಕ್ಕಳನ್ನು ರಕ್ಷಿಸಿ" ಎಂದು ತಾಯಿ ನದಿಯ ದಂಡೆಯಲ್ಲಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದು, ಸ್ಥಳೀಯರು ಮಕ್ಕಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಶೋಧ ಕಾರ್ಯ ಮಂಗಳವಾರವೂ ಮುಂದುವರೆದಿದೆ. ಸದ್ಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಘಟನೆ ವಿವರ ಭವಾನಿ, ಸಾನ್ವಿಕಾ (6), ತನ್ವಿಕಾ (4) ಮತ್ತು ಹನ್ನೊಂದು ತಿಂಗಳ ಗಂಡು ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ಹೋಗುವುದನ್ನು ನವೀನ್‌ ಎಂಬುವವರು ಗಮನಿಸಿದ್ದರು. ಹಳಿಯ ಮೇಲೆ ಹೋಗದಂತೆ ಕೂಗಿ ಹೇಳಿದ್ದರು. ಅಷ್ಟರಲ್ಲಿ ಭವಾನಿ, ಇಬ್ಬರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಗಂಡು ಮಗುವಿನ ಜೊತೆಗೆ ತಾನು ಹೊಳೆಗೆ ಹಾರಿದ್ದರು. ಇದನ್ನು ಗಮನಿಸಿದ ನವೀನ್‌ ಕೂಡಲೆ ನದಿಗೆ ಹಾರಿ ತಾಯಿ ಮತ್ತು ಗಂಡು ಮಗುವನ್ನು ರಕ್ಷಿಸಿದ್ದಾರೆ.ಘಟನೆಯ ಮಾಹಿತಿ ತಿಳಿದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭವಾನಿ‌ಮತ್ತು 11 ವರ್ಷದ ಮಗುವನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.  ದೇವಸ್ಥಾನದ ಬಳಿ ಭದ್ರತೆ ಇದ್ದರೂ ಘಟನೆ ಅರಕೇಶ್ವರ ದೇವಸ್ಥಾನದ ಬಳಿ ಭದ್ರತೆಗಾಗಿ ಸೆಕ್ಯುರಿಟಿ ಸಿಬ್ಬಂದಿ ಇದ್ದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಈ ವರ್ಷದಲ್ಲೇ ಇಂತಹ ಘಟನೆಗಳು ಮೂರು ಬಾರಿ ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದು, ನದಿ ಪ್ರದೇಶದ ಬಳಿ ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

17 hrs ago
user_Nandheesh kumar ac
Nandheesh kumar ac
ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
17 hrs ago
1df07a4b-2295-420f-902a-0eddc4dabc1c

ಶಿವಮೊಗ್ಗ : ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಚಿತ್ರದುರ್ಗದ ಮಹಿಳೆ..‌ಕಾರಣವೇನು? ಶಿವಮೊಗ್ಗ : ಆಕೆ ಗಂಡ ಜೆಸಿಬಿ ಆಪರೇಟರ್, ದೂರದ ಕೋಟೆನಾಡಿನ ಹಳ್ಳಿಯೊಂದರ ನಿವಾಸಿ...ಮೂರು ಮಕ್ಕಳೊಂದಿಗೆ ಸವಳಂಗದ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದಳು..ಆದರೆ ಇದ್ದಕ್ಕಿದ್ದಂತೆ ಮನೆಯಲ್ಲಿ ಗಂಡನ ಜಗಳ ಆಡಿದ್ದಾಳೆ..ಬಳಿಕ ತನ್ನ ಮೂರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾಳೆ. ಈ ಘಟನೆ ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ  ಅರಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊಸುರೂ ಗ್ರಾಮದ ಭವಾನಿ ಆತ್ಮಹತ್ಯೆಕ್ಕೆ ಯತ್ನಿಸಿದವಳು.  ಇಲ್ಲಿ ರೈಲ್ವೆ ಟ್ರ್ಯಾಕ್ ಇದ್ದು, ಇದರ ಮೇಲೆ ತನ್ನ ಮೂವರ ಮಕ್ಕಳ ಜತೆ ನಡೆದುಕೊಂಡು ಹೋಗಿದ್ದಾಳೆ. ನಂತರ ಸೆರೆಗಿಗೆ ಮಗುವೊಂದನ್ನು ಕಟ್ಟಿಕೊಂಡು ತುಂಗಾ ನದಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳೀಯರು ತಾಯಿ ಭವಾನಿ ಹಾಗೂ ಒಂದು ಮಗುವನ್ನು ರಕ್ಷಿಸಿದ್ದಾರೆ. ಮಕ್ಕಳಿಗಾಗಿ ತಾಯಿಯ ಆಕ್ರಂದನ "ನನ್ನ ಇನ್ನಿಬ್ಬರು ಮಕ್ಕಳನ್ನು ರಕ್ಷಿಸಿ" ಎಂದು ತಾಯಿ ನದಿಯ ದಂಡೆಯಲ್ಲಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದು, ಸ್ಥಳೀಯರು ಮಕ್ಕಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಶೋಧ ಕಾರ್ಯ ಮಂಗಳವಾರವೂ ಮುಂದುವರೆದಿದೆ. ಸದ್ಯ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಘಟನೆ ವಿವರ ಭವಾನಿ, ಸಾನ್ವಿಕಾ (6), ತನ್ವಿಕಾ (4) ಮತ್ತು ಹನ್ನೊಂದು ತಿಂಗಳ

67915012-4cdb-4a2b-9857-b4798ea2fd35

ಗಂಡು ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ಹೋಗುವುದನ್ನು ನವೀನ್‌ ಎಂಬುವವರು ಗಮನಿಸಿದ್ದರು. ಹಳಿಯ ಮೇಲೆ ಹೋಗದಂತೆ ಕೂಗಿ ಹೇಳಿದ್ದರು. ಅಷ್ಟರಲ್ಲಿ ಭವಾನಿ, ಇಬ್ಬರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಗಂಡು ಮಗುವಿನ ಜೊತೆಗೆ ತಾನು ಹೊಳೆಗೆ ಹಾರಿದ್ದರು. ಇದನ್ನು ಗಮನಿಸಿದ ನವೀನ್‌ ಕೂಡಲೆ ನದಿಗೆ ಹಾರಿ ತಾಯಿ ಮತ್ತು ಗಂಡು ಮಗುವನ್ನು ರಕ್ಷಿಸಿದ್ದಾರೆ.ಘಟನೆಯ ಮಾಹಿತಿ ತಿಳಿದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭವಾನಿ‌ಮತ್ತು 11 ವರ್ಷದ ಮಗುವನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.  ದೇವಸ್ಥಾನದ ಬಳಿ ಭದ್ರತೆ ಇದ್ದರೂ ಘಟನೆ ಅರಕೇಶ್ವರ ದೇವಸ್ಥಾನದ ಬಳಿ ಭದ್ರತೆಗಾಗಿ ಸೆಕ್ಯುರಿಟಿ ಸಿಬ್ಬಂದಿ ಇದ್ದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಈ ವರ್ಷದಲ್ಲೇ ಇಂತಹ ಘಟನೆಗಳು ಮೂರು ಬಾರಿ ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದು, ನದಿ ಪ್ರದೇಶದ ಬಳಿ ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

More news from ಕರ್ನಾಟಕ and nearby areas
  • ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ
    1
    ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ
ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    6 hrs ago
  • ಶಿವಮೊಗ್ಗ-ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಅಭಿನಂದನೆಗಳ ಮಹಾಪುರ ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಹುಂಚ ಹೋಬಳಿಯ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ 2026ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ, ಹೊಸನಗರದ ರಾಜರತ್ನ ಪುನೀತ್ ರಾಜಕುಮಾ‌ರ್ ಅಭಿಮಾನಿ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಭಿಮಾನಿ ಬಳಗದವರು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಸಮಟಗಾರು ಶಾಲೆಗೆ ತೆರಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಅವರನ್ನು ಅವರ ಸಹೋದ್ಯೋಗಿಗಳು ಹಾಗೂ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ರತ್ನಕುಮಾರಿ ಅವರ ಸೇವೆ, ಕರ್ತವ್ಯನಿಷ್ಠೆ ಹಾಗೂ ದೂರದೃಷ್ಟಿಯನ್ನು ಗಣ್ಯರು ಶ್ಲಾಘಿಸಿದರು. ದೇಶದ 48 ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಆಯ್ಕೆಯಾಗಿರುವುದು ಶಿವಮೊಗ್ಗ ಜಿಲ್ಲೆ ಹಾಗೂ ಹೊಸನಗರ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದು ಅಭಿನಂದನಾ ಸಮಾರಂಭ ದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
    1
    ಶಿವಮೊಗ್ಗ-ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಅಭಿನಂದನೆಗಳ ಮಹಾಪುರ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಹುಂಚ ಹೋಬಳಿಯ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ 2026ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ, ಹೊಸನಗರದ ರಾಜರತ್ನ ಪುನೀತ್ ರಾಜಕುಮಾ‌ರ್ ಅಭಿಮಾನಿ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಭಿಮಾನಿ ಬಳಗದವರು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಸಮಟಗಾರು ಶಾಲೆಗೆ ತೆರಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಅವರನ್ನು ಅವರ ಸಹೋದ್ಯೋಗಿಗಳು ಹಾಗೂ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ರತ್ನಕುಮಾರಿ ಅವರ ಸೇವೆ, ಕರ್ತವ್ಯನಿಷ್ಠೆ ಹಾಗೂ ದೂರದೃಷ್ಟಿಯನ್ನು ಗಣ್ಯರು ಶ್ಲಾಘಿಸಿದರು. ದೇಶದ 48 ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಆಯ್ಕೆಯಾಗಿರುವುದು ಶಿವಮೊಗ್ಗ ಜಿಲ್ಲೆ ಹಾಗೂ ಹೊಸನಗರ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದು ಅಭಿನಂದನಾ ಸಮಾರಂಭ ದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    20 hrs ago
  • ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.
    4
    ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ
ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು.
ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 min ago
  • ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಹಿನ್ನೆಲೆ 12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮ ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ವೇಳೆ ಜಮಾತೆ ಇಸ್ಲಾಮೀ ಹಿಂದ್‌ನ ಸಂಚಾಲಕರಾದ ಷಫೀವುಲ್ಲಾ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಅಂಗವಾಗಿ ಆಗಸ್ಟ್-26 ರಿಂದ ಸೆಪ್ಟೆಂಬರ್-06 ರವರೆಗೆ 12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಷಫೀವುಲ್ಲಾ ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಪ್ರವಾದಿ ಮಹಮ್ಮದ್ ಜನತೆಗೆ ನೀಡಿದಂತಹ ವಿವಿಧ ನೀತಿಯ ಸಂದೇಶಗಳನ್ನು ಜನತೆಗೆ ಮುಟ್ಟಿಸುವುದು ಅಲ್ಲದೇ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯವನ್ನು ಮಾಡಲಾಗುವುದು.ಪ್ರವಾದಿ ಮಹಮ್ಮದ್ ರವರು ಕೇವಲ ರಾಜಕೀಯವಾಗಿ ಇರದೇ ಆಧ್ಯಾತ್ಮಿಕ, ಬೌದ್ಧಿಕ, ನೈತಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯಾಗಿದ್ದರು. ಇದೊಂದು ಅಪ್ಪಟ ಮಾನವೀಯ ಕ್ರಾಂತಿಯಾಗಿದೆ.ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅಳವಡಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ... ಈ ವಿಷಯವನ್ನು ಸಮುದಾಯಕ್ಕೆ ತಿಳಿಸಲು 06 ಜನರ ಸಮಿತಿ ಒಂದನ್ನು ರಚನೆ ಮಾಡಿ ಪ್ರತಿ ತಾಲ್ಲೂಕು, ಗ್ರಾಮ, ಹೋಬಳಿಗಳಿಗೆ ಹೋಗುವುದರ ಮೂಲಕ ಅಲ್ಲಿನ ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು. ಗೋಷ್ಟಿಯಲ್ಲಿಜುಬೇದಾಅನ್ಸರಿರಹಮತ್‌ವುಲ್ಲಾ,ಸಿರಾಜ್‌ವು ದ್ದೀನ್,ಮುಸ್ತಾಕ್‌ಅಹಮದ್‌ ಭಾಗವಹಿಸಿದ್ದರು
    1
    ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಹಿನ್ನೆಲೆ  12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮ
ಚಿತ್ರದುರ್ಗದ ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಆಚರಣೆ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ವೇಳೆ ಜಮಾತೆ ಇಸ್ಲಾಮೀ ಹಿಂದ್‌ನ ಸಂಚಾಲಕರಾದ ಷಫೀವುಲ್ಲಾ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಪ್ರವಾದಿ ಮಹಮ್ಮದ್ ರವರ 1500ನೇ ಜನ್ಮದಿನದ ಅಂಗವಾಗಿ ಆಗಸ್ಟ್-26 ರಿಂದ ಸೆಪ್ಟೆಂಬರ್-06 ರವರೆಗೆ 12 ದಿನಗಳ ಕಾಲ ಸೀರತ್ ಅಭಿಯಾನದ ಅಂಗವಾಗಿ ಕ್ರಾಂತಿಯ ಜ್ಯೋತಿ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಷಫೀವುಲ್ಲಾ ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಪ್ರವಾದಿ ಮಹಮ್ಮದ್ ಜನತೆಗೆ ನೀಡಿದಂತಹ ವಿವಿಧ ನೀತಿಯ ಸಂದೇಶಗಳನ್ನು ಜನತೆಗೆ ಮುಟ್ಟಿಸುವುದು ಅಲ್ಲದೇ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯವನ್ನು ಮಾಡಲಾಗುವುದು.ಪ್ರವಾದಿ ಮಹಮ್ಮದ್ ರವರು ಕೇವಲ ರಾಜಕೀಯವಾಗಿ ಇರದೇ ಆಧ್ಯಾತ್ಮಿಕ, ಬೌದ್ಧಿಕ, ನೈತಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯಾಗಿದ್ದರು. ಇದೊಂದು ಅಪ್ಪಟ ಮಾನವೀಯ ಕ್ರಾಂತಿಯಾಗಿದೆ.ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅಳವಡಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ... ಈ ವಿಷಯವನ್ನು ಸಮುದಾಯಕ್ಕೆ ತಿಳಿಸಲು 06 ಜನರ ಸಮಿತಿ ಒಂದನ್ನು ರಚನೆ ಮಾಡಿ ಪ್ರತಿ ತಾಲ್ಲೂಕು, ಗ್ರಾಮ, ಹೋಬಳಿಗಳಿಗೆ ಹೋಗುವುದರ ಮೂಲಕ ಅಲ್ಲಿನ ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿಜುಬೇದಾಅನ್ಸರಿರಹಮತ್‌ವುಲ್ಲಾ,ಸಿರಾಜ್‌ವು ದ್ದೀನ್,ಮುಸ್ತಾಕ್‌ಅಹಮದ್‌ ಭಾಗವಹಿಸಿದ್ದರು
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸ್ ಪಥಸಂಚಲನ. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಡಿವೈಎಸ್ ಪಿ ಸತ್ಯನಾರಾಯಣ ರಾವ್ ಇವರ ನೇತೃತ್ವದಲ್ಲಿ ಪೊಲೀಸರು ಪರೇಡ್ ಹಾಗೂ ಪಥಸಂಚಲನ ನಡೆಸಲಾಯಿತು.. ನಗರದ ಪೋಲೀಸ್ ಠಾಣೆಯಿಂದ ಹೊರಟ ಪೋಲೀಸ್ ಪಥ ಸಂಚಲನ ಅಂಬೇಡ್ಕರ್ ಸರ್ಕಲ್, ನೆಹರು ವೃತ್ತ, ದಿಂದ ಬಳ್ಖಾರಿ ಮುಖ್ಯರಸ್ತೆಯಿಂದ ಪಾವಗಡ ರಸ್ತೆ,ಮಹದೇವಿ ರಸ್ತೆ ಹಿರಿಯೂರು ಚಿತ್ರದುರ್ಗ ಮುಖ್ಯ ರಸ್ತೆಗೆ ತಲುಪಿ ಮತ್ತೆ ಸಂಗೊಳ್ಳಿ ರಾಯಣ್ಣ ರಸ್ತೆಯಿಂದ ಗಾಂಧಿ ನಗರದ ಮುಖ್ಯ ರಸ್ತೆಯಿಂದ ಸೋಮುಗುದ್ದು ರಸ್ತೆಯವರಗೆ ಸಂಚರಿಸಿ ನಂತರ ಪೊಲೀಸ್ ಠಾಣೆವರ್ಗೂ ಪಥ ಸಂಚಲನ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ ಪಿ ಎಂಜೆ.ಸತ್ಯನಾರಾಯಣ ರಾವ್.ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ಪಿಎಸ್ಐ ಶಿವರಾಜ್ ಹಾಗೂ ಕೆ.ಎಸ್ ಆರ್ ಪಿ ತುಕ್ಕಡ್ಡಿ,.ಪೋಲೀಸ್ ಸಿಬ್ಬಂದಿಗಳು ಮತ್ತು ಹೊಂಗಾಡ್ಸ ಗಳು‌ ಪಥಸಂಚಲ ಇದ್ದರು
    1
    ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು  ಪೋಲೀಸ್ ಪಥಸಂಚಲನ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ  ಡಿವೈಎಸ್ ಪಿ ಸತ್ಯನಾರಾಯಣ ರಾವ್ ಇವರ ನೇತೃತ್ವದಲ್ಲಿ ಪೊಲೀಸರು ಪರೇಡ್ ಹಾಗೂ ಪಥಸಂಚಲನ ನಡೆಸಲಾಯಿತು..
ನಗರದ ಪೋಲೀಸ್ ಠಾಣೆಯಿಂದ  ಹೊರಟ ಪೋಲೀಸ್  ಪಥ ಸಂಚಲನ ಅಂಬೇಡ್ಕರ್ ಸರ್ಕಲ್, ನೆಹರು  ವೃತ್ತ, ದಿಂದ ಬಳ್ಖಾರಿ ಮುಖ್ಯರಸ್ತೆಯಿಂದ ಪಾವಗಡ ರಸ್ತೆ,ಮಹದೇವಿ ರಸ್ತೆ ಹಿರಿಯೂರು ಚಿತ್ರದುರ್ಗ  ಮುಖ್ಯ ರಸ್ತೆಗೆ   ತಲುಪಿ ಮತ್ತೆ  ಸಂಗೊಳ್ಳಿ ರಾಯಣ್ಣ  ರಸ್ತೆಯಿಂದ ಗಾಂಧಿ ನಗರದ ಮುಖ್ಯ ರಸ್ತೆಯಿಂದ  ಸೋಮುಗುದ್ದು ರಸ್ತೆಯವರಗೆ  ಸಂಚರಿಸಿ ನಂತರ ಪೊಲೀಸ್ ಠಾಣೆವರ್ಗೂ ಪಥ ಸಂಚಲನ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ ಪಿ ಎಂಜೆ.ಸತ್ಯನಾರಾಯಣ ರಾವ್.ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ 
ಪಿಎಸ್ಐ ಶಿವರಾಜ್ ಹಾಗೂ ಕೆ.ಎಸ್ ಆರ್ ಪಿ ತುಕ್ಕಡ್ಡಿ,.ಪೋಲೀಸ್  ಸಿಬ್ಬಂದಿಗಳು ಮತ್ತು ಹೊಂಗಾಡ್ಸ ಗಳು‌ ಪಥಸಂಚಲ ಇದ್ದರು
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ------------- ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 27 ಪಂಚಾಯಿತಿಗಳಲ್ಲೂ ಸಂಘ ರಚನೆ: ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.
    1
    ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ
‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ
-------------
ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
27 ಪಂಚಾಯಿತಿಗಳಲ್ಲೂ ಸಂಘ ರಚನೆ:
ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    10 hrs ago
  • ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಫ್ಲೋ......
    1
    ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೊಬೈಲ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರ ಮೊಬೈಲ್ ಫೋನನ್ನು ಕಳ್ಳನೊಬ್ಬ ಎಗರಿಸಿ ಪರಾರಿಯಾದ ಘಟನೆ ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ದಾಖಲಾಗಿದ್ರು. ರೋಗಿಯ ಸಂಬಂಧಿಗಳು ರಾತ್ರಿ ವೇಳೆ ನಿದ್ರೆಗೆ ಜಾರಿದ್ದ ವೇಳೆ ಖದೀಮ ತನ್ನ ಕೈಚಳಕ ತೋರಿದ್ದು, ಮೆಲ್ಲನೇ ಮೊಬೈಲ್ ಫೋನನ್ನ ಎತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಕಳ್ಳನ ಖರಾಮತ್ತು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿರಿಯೂರು ಸರಕಾರಿ ಆಸ್ಪತ್ರೆಯಲ್ಲಿ  ರೋಗಿಗಳು ಎಷ್ಟು  ಸುರಕ್ಷಿತ ಎನ್ನುವ ಚರ್ಚೆಗಳು ಪ್ರಾರಂಬವಾಗಿದ್ದು, ಸಧ್ಯ ಕಳ್ಳತನ ಘಟನೆಗಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಫ್ಲೋ......
    user_ನ್ಯೂಸ್ ಕಿಂಗ್
    ನ್ಯೂಸ್ ಕಿಂಗ್
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    9 hrs ago
  • ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ಧಾಖಲಾಗಿದ್ದು ಈ ವೇಳೆ ರೋಗಿಯ ಸಂಬಂದಿಕರೊಬ್ಬರು ನೆನ್ನೆ ತಡರಾತ್ರಿ ನಿದ್ರೆಗೆ ಜಾರಿದ್ದು ಈ ವೇಳೆ ಕಳ್ಳನೊಬ್ಬ ಆಸ್ಪತ್ರೆ ವಾರ್ಡ್ ಗೆ ಬಂದಿದ್ದು ಮಲಗಿದ್ದ ರೋಗಿಯ ಸಂಬಂದಿ ಕದುರಪ್ಪ ಎಂಬುವವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕದ್ದು ಪರಾರಿಯಾಗಿದ್ದು ಈ ಒಂದು ದೃಶ್ಯಗಳು ಆಸ್ಪತ್ರೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ‌ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಂಬಂದಿಕರು ಎಷ್ಟು ಸೇಫ್ ಎಂಬುದು ಸಾರ್ವಜನಿಕರಲ್ಲಿ ಪ್ರಷ್ನೆ ಮೂಡಿಸಿದೆ. ಇನ್ನೂ ಈ ಸಂಬಂದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.
    1
    ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ
ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ  ಚಿಕಿತ್ಸೆಗೆಂದು ರೋಗಿಯೊಬ್ಬರು ಧಾಖಲಾಗಿದ್ದು ಈ ವೇಳೆ ರೋಗಿಯ ಸಂಬಂದಿಕರೊಬ್ಬರು ನೆನ್ನೆ ತಡರಾತ್ರಿ ನಿದ್ರೆಗೆ ಜಾರಿದ್ದು ಈ ವೇಳೆ ಕಳ್ಳನೊಬ್ಬ ಆಸ್ಪತ್ರೆ ವಾರ್ಡ್ ಗೆ ಬಂದಿದ್ದು ಮಲಗಿದ್ದ ರೋಗಿಯ ಸಂಬಂದಿ ಕದುರಪ್ಪ ಎಂಬುವವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕದ್ದು ಪರಾರಿಯಾಗಿದ್ದು ಈ ಒಂದು ದೃಶ್ಯಗಳು ಆಸ್ಪತ್ರೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ‌ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಂಬಂದಿಕರು ಎಷ್ಟು ಸೇಫ್ ಎಂಬುದು ಸಾರ್ವಜನಿಕರಲ್ಲಿ ಪ್ರಷ್ನೆ ಮೂಡಿಸಿದೆ. ಇನ್ನೂ ಈ ಸಂಬಂದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.