Shuru
Apke Nagar Ki App…
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ನನ್ನ ಸಹೋದ್ಯೋಗಿ ಮಿತ್ರರಿಗೆ, ಹಾಗೆಯೇ ವಿಧಾನಸಭಾ ಸಭಾಧ್ಯಕ್ಷರಾಗಿ ಹಾಗೂ ಉಪಸಭಾಧ್ಯಕ್ಷರಾಗಿ, ವಿಧಾನಪರಿಷತ್ ಸಭಾಪತಿಯಾಗಿ ಹಾಗೂ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಲ್ಲಾ ನಾಯಕರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಅಪಾರ ರಾಜಕೀಯ ಅನುಭವ ಹಾಗೂ ಬದ್ಧತೆ ನಮ್ಮ ಸರ್ಕಾರದ ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮತ್ತು ಶಕ್ತಿ ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲರೂ ಒಟ್ಟಾಗಿ ನಿಭಾಯಿಸೋಣ. ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ಬಲಿಷ್ಠ ಕರ್ನಾಟಕಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ.
ಸುನೀಲ್ ಲ್ ಬೆಟಗೇರಿ
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ನನ್ನ ಸಹೋದ್ಯೋಗಿ ಮಿತ್ರರಿಗೆ, ಹಾಗೆಯೇ ವಿಧಾನಸಭಾ ಸಭಾಧ್ಯಕ್ಷರಾಗಿ ಹಾಗೂ ಉಪಸಭಾಧ್ಯಕ್ಷರಾಗಿ, ವಿಧಾನಪರಿಷತ್ ಸಭಾಪತಿಯಾಗಿ ಹಾಗೂ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಲ್ಲಾ ನಾಯಕರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಅಪಾರ ರಾಜಕೀಯ ಅನುಭವ ಹಾಗೂ ಬದ್ಧತೆ ನಮ್ಮ ಸರ್ಕಾರದ ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮತ್ತು ಶಕ್ತಿ ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲರೂ ಒಟ್ಟಾಗಿ ನಿಭಾಯಿಸೋಣ. ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ಬಲಿಷ್ಠ ಕರ್ನಾಟಕಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ.
More news from ಕರ್ನಾಟಕ and nearby areas
- ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಾವೇರಿ ಶಾಸಕ, ಶ್ರೀರುದ್ರಪ್ಪ ಲಮಾಣಿ.1
- ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮುಂಡರಗಿ ಹಾಗೂ ಕಪ್ಪತ್ತಹಿಲ್ಸ್ ಅರಣ್ಯ ವಲಯ, ಮುಂಡರಗಿ ಇವರ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಸಮಾವೇಶ ಹಾಗೂ ಕಪ್ಪತ್ತಗುಡ್ಡ ಕುರಿತು ಕವಿಗೋಷ್ಠಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಸಾಹಿತ್ಯದ ಬೆಳಕನ್ನು ಸಮಾಜದ ಮೂಲೆಮೂಲೆಗೂ ಹರಡುತ್ತಿರುವ ಎಲ್ಲ ಕವಿಮಿತ್ರರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮ ಬರಹಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ, ನಿಮ್ಮ ಕಾವ್ಯಧಾರೆ ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬೆಳೆಸಲಿ. ಕವಿ ಮನಸ್ಸುಗಳು ಜಾಗೃತಿಯಾದರೆ ಸಮಾಜ ಜಾಗೃತಿಯಾಗುತ್ತದೆ ಸಾಹಿತ್ಯ ಅರಳಿದರೆ ಸಂಸ್ಕೃತಿ ಉಳಿಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ1
- ಗಾಜನೂರು ಜಲಾಶಯ ಭರ್ತಿ: ತುಂಗಾ ಉಕ್ಕಿ ಹರಿದು ತೋಟಗಳು ಜಲಾವೃತ.... ನಿರಂತರ ಮಳೆಯ ಎಫೆಕ್ಟ್: ಮತ್ತೂರಿನಲ್ಲಿ ಪ್ರವಾಹದ ಆತಂಕ ಹೆಚ್ಚಳ1
- ಕೂಡ್ಲಿಗಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ವತಿಯಿಂದ ಹಿತ ಚಿಂತನಾ ಸಭೆ ಕೂಡ್ಲಿಗಿ: ವಾಲ್ಮೀಕಿ ಸಮುದಾಯದ ಸಂಘಟನೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ಸಮುದಾಯದ ಪ್ರಗತಿಗೆ ಅತ್ಯಗತ್ಯವಾಗಿದೆ. ಶಿಕ್ಷಣವೇ ಪ್ರಬಲ ಅಸ್ತ್ರ, ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾನತೆ ಹಾಗೂ ಹಕ್ಕುಗಳನ್ನು ಸಾಧಿಸಲು ಸಾಧ್ಯ ಎಂದು ಹಿರಿಯ ವಕೀಲರಾದ ಡಾ. ಟಿ. ಓಂಕಾರಪ್ಪ ಹೇಳಿದರು. ತಾಲೂಕಿನ ಗಾಣಗಟ್ಟೆ ಗ್ರಾಮದ ಶ್ರೀ ಮಾಯಮ್ಮ ದೇವಿಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲ್ಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ವತಿಯಿಂದ ಹಿತ ಚಿಂತನಾ ಸಭೆ ಆಯೋಜನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸು. 80-90 ಸಾವಿರದ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯದ ಮತ ಸಂಖ್ಯೆ ಇದ್ದು, ಸು.15 ವರ್ಷಗಳಿಂದ ವಾಲ್ಮೀಕಿ ಸಮುದಾಯದಲ್ಲಿ ಸಂಘಟನೆ ನಿಷ್ಕ್ರಿಯವಾಗಿದ್ದು, ಗ್ರಾಮೀಣ ಭಾಗವಾದ ಉಜ್ಜಿನಿ, ಹೊಸಹಳ್ಳಿ, ಗುಡೇಕೋಟೆ, ಹುಡೇಂ, ಮಟ್ಟದಲ್ಲಿ ಯಾವುದೇ ಸಭೆ, ಜಯಂತಿ, ಸಂಘಟನೆ ಇಲ್ಲದೇ, ಇರುವುದನ್ನು ನಾವು ನೋಡಬಹುದು. ಹೀಗಾಗಿ, ವಾಲ್ಮೀಕಿ ಸಮುದಾಯವನ್ನು ರಾಜಕೀಯ ಭಿನ್ನಾಭಿಪ್ರಾಯ ಮರೆತು, ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನಿಂದ ಮುನ್ನಡೆಸಲು, ಸರ್ವ ರೀತಿಯಲ್ಲಿ ಒಮ್ಮತದಿಂದ ಸಮುದಾಯದ ಏಳಿಗೆಗಾಗಿ ಶ್ರಮಿಸಲು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ವೇಳೆ ನಿವೃತ್ತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಮಾತನಾಡಿ, ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬ ಹಿರಿಯರು, ಮುಖಂಡರು, ಯುವಕರು, ವಾಲ್ಮೀಕಿ ಸಮುದಾಯದ ಸಂಘಟನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸೋಣ. ವಾಲ್ಮೀಕಿ ಸಮುದಾಯ ಅಂದರೇ, ಕೂಡ್ಲಿಗಿ ಮಟ್ಟದಲ್ಲಿ ಅಷ್ಟೇ, ಜಯಂತಿಗೆ, ಕುಣಿತಕ್ಕೆ ಸೀಮಿತವಾಗದೇ, ಹಳ್ಳಿಗಳ ಮಟ್ಟದಲ್ಲಿ ವಾಲ್ಮೀಕಿ ಸಮುದಾಯದ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ಸಮುದಾಯವೂ ವಿವಿಧ ಕ್ಷೇತ್ರಗಳಲ್ಲಿ ಏಳಿಗೆ ಶ್ರಮಿಸಲು ಧ್ವನಿಯಾಗೋಣ ಎಂದರು. ಈ ಸಂದರ್ಭದಲ್ಲಿ ಚೋರನೂರು ಅಡಿವೆಪ್ಪ, ತಳವಾರ ಶರಪ್ಪ, ಹೊಸಹಳ್ಳಿ ಸಿದ್ದಣ್ಣ, ಕೆಡಿಪಿ ಸದಸ್ಯ ಪಾಪಣ್ಣ ಯರಗುಂಡ್ಲಹಟ್ಟಿ, ಕೆ ದಿಬ್ಬದಹಳ್ಳಿ ಗೋವಿಂದಪ್ಪ, ಬಸವರಾಜ, ಜಿ. ಓಬಣ್ಣ, ಕುರಿಹಟ್ಟಿ ರಾಮಣ್ಣ, ಗುಂಡುಮುಣುಗು ಮಂಜಣ್ಣ, ಹುಬ್ಬಳ್ಳಿ ವೆಂಕಟೇಶ, ಪಸಲು ಪಾಲಯ್ಯ, ಗುತ್ತಿಗೆದಾರರು ಗಾಣಗಟ್ಟೆ ಮಹಾಂತೇಶ, ಮಾಜಿ ಗ್ರಾ. ಪಂ. ಅಧ್ಯಕ್ಷ ಮಹಾಂತೇಶ್, ಹುಲಿಕೆರೆ ಮಾರಪ್ಪ, ಕಂಡಕ್ಟರ್ ಬಸವರಾಜ, ರೈತ ಮುಖಂಡರಾದ ಮಾರಪ್ಪ, ಉಜ್ಜಿನಿ ರಂಗಪ್ಪ, ಸಕಲಾಪುರದಹಟ್ಟಿ ಹರೀಶ್, ತೂಲಹಳ್ಳಿ ಬಸವರಾಜ, ಕೆ. ದಿಬ್ಬದಹಳ್ಳಿ ವೆಂಕಟೇಶ, ಸಿಎಸ್ ಪುರ ಮಲಿಯಪ್ಪ, ಮಾಡ್ಲನಾಯಕನಹಳ್ಳಿ ಧನಂಜಯ್, ತಿಪ್ಪೇಸ್ವಾಮಿ, ಬೊಮ್ಮಲಿಂಗಣ್ಣ, ಗುಣಸಾಗರ ಕೊಟ್ರೇಶ, ಹುಡೇಂ ಬಸಣ್ಣ, ಡಾ. ಸಿದ್ದೇಶ ಕಾತ್ರಿಕೆಹಟ್ಟಿ, ನಾಗರಕಟ್ಟೆ ದೇವೇಂದ್ರಪ್ಪ ಸೇರಿದಂತೆ ಗಾಣಗಟ್ಟೆ ಗ್ರಾಮದ ಹಿರಿಯರು, ತಾಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.1
- ಕೂಡ್ಲಿಗಿ :ವೈಜ್ಞಾನಿಕತೆ ಸಕಾರಾತ್ಮಕ ಕ್ರಿಯಾಶೀಲತೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಸೂಚನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ :ವೈಜ್ಞಾನಿಕತೆ ಸಕಾರಾತ್ಮಕ ಕ್ರಿಯಾಶೀಲತೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಸೂಚನೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಕಾರಾತ್ಮಕತೆ ಕ್ರಿಯಾಶೀಲತೆ ಮನೋಭಾವ ಬೆಳಸಬೇಕು , ಹಾಗೂ ಗುಣಮಟ್ಟ ಶಿಕ್ಷಣ ನೀಡಬೇಕಿದೆ ಎಂದು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಮುಖ್ಯ ಶಿಕ್ಷಕರಿಗೆ ಸೂಚಿಸಿದರು. ಅವರು ಆ 1ರಂದು , ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಜರುಗಿದ. ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ , 2026 ನೇ ಸಾಲಿನ SSLC ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಸರ್ಕಾರಿ ಸರ್ಕಾರಿ ಅನುದಾನಿತ ಅನುದಾನ ರಹಿತ , ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರಲಿರುವ ಪುಟ್ಟರಂಗ ಶೆಟ್ಟಿ, ಡಾ.ಅಜಯ್ ಸಿಂಗ್, ನರೇಂದ್ರ ಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ರಘುಮೂರ್ತಿ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ, ರಿಜ್ವಾನ ಅರ್ಷದ್, ಸಂತೋಷ್ ಲಾಡ್, ಲಕ್ಷ್ಮಣ ಸವದಿ ಹಾಗೂ ವಿಧಾನಸಭೆ ಅಧ್ಯಕ್ಷ ಹುದ್ದೆಗೆ ಆಭ್ಯರ್ಥಿ ಆಗಿರುವ ಜಿ.ಎಸ್. ಪಾಟೀಲ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು. ಎಲ್ಲರನ್ನೂ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.1
- ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದ ಬೆಂಬಲಿಗರು.1
- ಸಿಂದಗಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಇಲ್ಲಿದೆ ವಿಡಿಯೋ.... ಸಿಂದಗಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಇಲ್ಲಿದೆ ವಿಡಿಯೋ..1