ಶ್ರೀಮಂತಿಕೆ ಶಾಶ್ವತವಲ್ಲ, ದಾನಧರ್ಮ ಮಾತ್ರ ಶಾಶ್ವತ: ಚಂದ್ರಶೇಖರ ಮಹಾಸ್ವಾಮೀಜಿ. ವೀರಶೈವ ಲಿಂಗಾಯತ ನೌಕರರ ತಾಲೂಕು ಸಮಾವೇಶ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ನಿವೃತ್ತ ನೌಕರರಿಗೆ ಸನ್ಮಾನ. ತುರುವೇಕೆರೆ: ಮನುಷ್ಯನಿಗೆ ಶ್ರೀಮಂತಿಕೆ ಎಂಬುದು ಎಂದೂ ಶಾಶ್ವತವಲ್ಲ. ಇಂದು ಕೈತುಂಬ ಸಂಪತ್ತಿದ್ದವರು ನಾಳೆ ಬರಿಗೈಯಾಗಬಹುದು. ಆದರೆ ಶ್ರೀಮಂತಿಕೆ ಇದ್ದ ಸಂದರ್ಭದಲ್ಲಿ ಮಾಡಿದ ದಾನಧರ್ಮಗಳು ಮಾತ್ರ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ ಏರ್ಪಡಿಸಲಾಗಿತ್ತು. ಇದೇ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀಮಂತಿಕೆ ಯಾವ ಕಾಲಕ್ಕೂ ಒಳ್ಳೆಯದಲ್ಲ; ಅದು ಮನುಷ್ಯನನ್ನು ದೇವರಿಂದಲೂ ದೂರ ಮಾಡುತ್ತದೆ ಎಂದು ಎಚ್ಚರಿಸಿ. ಈ ಹಿಂದೆ ಅಪಾರ ಶ್ರೀಮಂತಿಕೆ ಹೊಂದಿದ್ದವರು ಇಂದು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಹಲವು ನಿದರ್ಶನಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಸ್ವಾಮೀಜಿ ನೆನಪಿಸಿದರು. ಶ್ರೀಮಂತಿಕೆಯ ಸೊಕ್ಕಿನಲ್ಲಿ ದೇವಸ್ಥಾನಗಳಿಗೆ ತಮ್ಮ ಹೆಸರು ಹಾಕಿ ಕಿರೀಟ, ಆಭರಣ ನೀಡಿದವರು ಮುಂದೆ ಯಾವ ಸ್ಥಿತಿಗೆ ತಲುಪಿದರು ಎಂಬುದನ್ನೂ ಸಮಾಜ ನೋಡಿದೆ ಎಂದು ಉದಾಹರಿಸಿದ ಅವರು, ಆದ್ದರಿಂದ ಕೈಯಲ್ಲಿ ಸಂಪತ್ತಿರುವಾಗ ಅಹಂಕಾರಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ, ವಿನಮ್ರತೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು. ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಮಾಜ ಸೇವೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಸ್ವಾಮೀಜಿ, ಲಿಂಗಾಯತ ಧರ್ಮವು ಎಲ್ಲಾ ಸಮಾಜದ ಜನರೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ ಎಂದರು. ಕೆಳವರ್ಗದ ಜನರನ್ನೂ ಆತ್ಮೀಯತೆಯಿಂದ ಕಾಣುವ ಸಮುದಾಯ ಲಿಂಗಾಯತವಾಗಿದ್ದು, ನಾವುಗಳು ಕೇವಲ ಜಾತಿ, ಮತ, ಧರ್ಮ ಎಂಬ ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದೇವೆ ಅಷ್ಟೆ; ವಾಸ್ತವದಲ್ಲಿ ಜಗತ್ತಿನಲ್ಲಿ ಎಲ್ಲವೂ ಶಿವಮಯ, ಲಿಂಗಮಯ ಎಂದು ಬಣ್ಣಿಸಿದರು. ಯಾವುದೇ ಜಾತಿಯವರಾಗಿದ್ದರೂ ಉತ್ತಮ ನಡತೆಯಿಂದ, ಶ್ರದ್ಧೆಯಿಂದ ದೇವರ ಆಚರಣೆ ಪಾಲಿಸುವವರೆಲ್ಲರೂ ನಿಜ ಅರ್ಥದಲ್ಲಿ ಲಿಂಗವಂತರೇ ಆಗಿದ್ದಾರೆ ಎಂದು ಪ್ರತಿಪಾದಿಸಿ ವೀರಶೈವ ಲಿಂಗಾಯತದ ಒಳಪಂಗಡಗಳ ಬಗ್ಗೆಯೂ ಮಾತನಾಡಿದ ಅವರು, ಈಗ ಒಳಪಂಗಡಗಳ ನಡುವಿನ ಗೆರೆಗಳು ಕ್ರಮೇಣ ಅಳಿದುಹೋಗುತ್ತಿವೆ ಎಂದರು. ಎಲ್ಲರೂ ಒಂದೇ ಲಿಂಗಾಯತ ಸಮುದಾಯದವರಾಗಿ ಒಳಪಂಗಡಗಳ ನಡುವೆಯೇ ಹೆಣ್ಣು-ಗಂಡು ಕೊಟ್ಟು ತಂದು ಮಾವ, ಬಾಮೈದ, ಅಣ್ಣ-ತಮ್ಮಂದಿರಂತಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಸಾಧಕಿ, ಅಮ್ಮಸಂದ್ರದ ಕು.ಚಿನ್ಮಯಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ಮಯಿ, ಪೋಷಕರು ತಮ್ಮ ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸ ಮತ್ತು ಅಂಕಗಳಿಕೆಗಾಗಿಯೇ ಒತ್ತಡ ಹೇರುವುದನ್ನು ಬಿಟ್ಟು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು. ತಾವು ವಿದ್ಯಾಭ್ಯಾಸದ ಸಂದರ್ಭದಲ್ಲಿ ತರಗತಿಗೇ ಟಾಪರ್ ಆಗಿದ್ದುದನ್ನು ನೆನಪಿಸಿಕೊಂಡ ಅವರು, ವಿದ್ಯೆಯ ಜೊತೆಜೊತೆಗೇ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದುದಾಗಿ ತಿಳಿಸಿದರು. ವೈದ್ಯ ವೃತ್ತಿಯಲ್ಲಿದ್ದರೂ ಕ್ರೀಡೆಯನ್ನು ಎಂದಿಗೂ ಕೈಬಿಡದೆ, ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮೆರೆದುದಾಗಿ ವಿವರಿಸಿದ ಚಿನ್ಮಯಿ, ಇಂದಿನ ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದು ಸ್ಫೂರ್ತಿದಾಯಕ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರಯ್ಯ, ಎ.ಎಂ.ಶಿವಶಂಕರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಹರ್ಷ ಮನೆ ಮಾಡಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಸೇರಿದಂತೆ ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್, ವೆಂಕಟಾಪುರ ಯೋಗೀಶ್, ದೇವರಾಜು, ತೀರ್ಥ ಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾ ಸುರೇಶ್, ಮಂಜುಳಾ ಉಮಾಮಹೇಶ್, ದೀಪು ಶಾಲೆಯ ಮುಖ್ಯ ಶಿಕ್ಷಕ ನಟೇಶ್ ಹಾಗೂ ಶಿಕ್ಷಕ ಲೋಕೇಶ್ ಕುಮಾರ್ ಇದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರು, ಪೋಷಕರು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಶ್ರೀಮಂತಿಕೆ ಶಾಶ್ವತವಲ್ಲ, ದಾನಧರ್ಮ ಮಾತ್ರ ಶಾಶ್ವತ: ಚಂದ್ರಶೇಖರ ಮಹಾಸ್ವಾಮೀಜಿ. ವೀರಶೈವ ಲಿಂಗಾಯತ ನೌಕರರ ತಾಲೂಕು ಸಮಾವೇಶ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ನಿವೃತ್ತ ನೌಕರರಿಗೆ ಸನ್ಮಾನ. ತುರುವೇಕೆರೆ: ಮನುಷ್ಯನಿಗೆ ಶ್ರೀಮಂತಿಕೆ ಎಂಬುದು ಎಂದೂ ಶಾಶ್ವತವಲ್ಲ. ಇಂದು ಕೈತುಂಬ ಸಂಪತ್ತಿದ್ದವರು ನಾಳೆ ಬರಿಗೈಯಾಗಬಹುದು. ಆದರೆ ಶ್ರೀಮಂತಿಕೆ ಇದ್ದ ಸಂದರ್ಭದಲ್ಲಿ ಮಾಡಿದ ದಾನಧರ್ಮಗಳು ಮಾತ್ರ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ ಏರ್ಪಡಿಸಲಾಗಿತ್ತು. ಇದೇ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀಮಂತಿಕೆ ಯಾವ ಕಾಲಕ್ಕೂ ಒಳ್ಳೆಯದಲ್ಲ; ಅದು ಮನುಷ್ಯನನ್ನು ದೇವರಿಂದಲೂ ದೂರ ಮಾಡುತ್ತದೆ ಎಂದು ಎಚ್ಚರಿಸಿ. ಈ ಹಿಂದೆ ಅಪಾರ ಶ್ರೀಮಂತಿಕೆ ಹೊಂದಿದ್ದವರು ಇಂದು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಹಲವು ನಿದರ್ಶನಗಳನ್ನು ನಾವು ಕಣ್ಣಾರೆ
ಕಂಡಿದ್ದೇವೆ ಎಂದು ಸ್ವಾಮೀಜಿ ನೆನಪಿಸಿದರು. ಶ್ರೀಮಂತಿಕೆಯ ಸೊಕ್ಕಿನಲ್ಲಿ ದೇವಸ್ಥಾನಗಳಿಗೆ ತಮ್ಮ ಹೆಸರು ಹಾಕಿ ಕಿರೀಟ, ಆಭರಣ ನೀಡಿದವರು ಮುಂದೆ ಯಾವ ಸ್ಥಿತಿಗೆ ತಲುಪಿದರು ಎಂಬುದನ್ನೂ ಸಮಾಜ ನೋಡಿದೆ ಎಂದು ಉದಾಹರಿಸಿದ ಅವರು, ಆದ್ದರಿಂದ ಕೈಯಲ್ಲಿ ಸಂಪತ್ತಿರುವಾಗ ಅಹಂಕಾರಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ, ವಿನಮ್ರತೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು. ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಮಾಜ ಸೇವೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಸ್ವಾಮೀಜಿ, ಲಿಂಗಾಯತ ಧರ್ಮವು ಎಲ್ಲಾ ಸಮಾಜದ ಜನರೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ ಎಂದರು. ಕೆಳವರ್ಗದ ಜನರನ್ನೂ ಆತ್ಮೀಯತೆಯಿಂದ ಕಾಣುವ ಸಮುದಾಯ ಲಿಂಗಾಯತವಾಗಿದ್ದು, ನಾವುಗಳು ಕೇವಲ ಜಾತಿ, ಮತ, ಧರ್ಮ ಎಂಬ ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದೇವೆ ಅಷ್ಟೆ; ವಾಸ್ತವದಲ್ಲಿ ಜಗತ್ತಿನಲ್ಲಿ ಎಲ್ಲವೂ ಶಿವಮಯ, ಲಿಂಗಮಯ ಎಂದು ಬಣ್ಣಿಸಿದರು. ಯಾವುದೇ ಜಾತಿಯವರಾಗಿದ್ದರೂ ಉತ್ತಮ ನಡತೆಯಿಂದ, ಶ್ರದ್ಧೆಯಿಂದ ದೇವರ ಆಚರಣೆ ಪಾಲಿಸುವವರೆಲ್ಲರೂ ನಿಜ ಅರ್ಥದಲ್ಲಿ ಲಿಂಗವಂತರೇ ಆಗಿದ್ದಾರೆ ಎಂದು ಪ್ರತಿಪಾದಿಸಿ ವೀರಶೈವ ಲಿಂಗಾಯತದ ಒಳಪಂಗಡಗಳ ಬಗ್ಗೆಯೂ ಮಾತನಾಡಿದ ಅವರು, ಈಗ ಒಳಪಂಗಡಗಳ ನಡುವಿನ ಗೆರೆಗಳು ಕ್ರಮೇಣ ಅಳಿದುಹೋಗುತ್ತಿವೆ ಎಂದರು. ಎಲ್ಲರೂ ಒಂದೇ ಲಿಂಗಾಯತ ಸಮುದಾಯದವರಾಗಿ ಒಳಪಂಗಡಗಳ
ನಡುವೆಯೇ ಹೆಣ್ಣು-ಗಂಡು ಕೊಟ್ಟು ತಂದು ಮಾವ, ಬಾಮೈದ, ಅಣ್ಣ-ತಮ್ಮಂದಿರಂತಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಸಾಧಕಿ, ಅಮ್ಮಸಂದ್ರದ ಕು.ಚಿನ್ಮಯಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ಮಯಿ, ಪೋಷಕರು ತಮ್ಮ ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸ ಮತ್ತು ಅಂಕಗಳಿಕೆಗಾಗಿಯೇ ಒತ್ತಡ ಹೇರುವುದನ್ನು ಬಿಟ್ಟು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು. ತಾವು ವಿದ್ಯಾಭ್ಯಾಸದ ಸಂದರ್ಭದಲ್ಲಿ ತರಗತಿಗೇ ಟಾಪರ್ ಆಗಿದ್ದುದನ್ನು ನೆನಪಿಸಿಕೊಂಡ ಅವರು, ವಿದ್ಯೆಯ ಜೊತೆಜೊತೆಗೇ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದುದಾಗಿ ತಿಳಿಸಿದರು. ವೈದ್ಯ ವೃತ್ತಿಯಲ್ಲಿದ್ದರೂ ಕ್ರೀಡೆಯನ್ನು ಎಂದಿಗೂ ಕೈಬಿಡದೆ, ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮೆರೆದುದಾಗಿ ವಿವರಿಸಿದ ಚಿನ್ಮಯಿ, ಇಂದಿನ ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದು ಸ್ಫೂರ್ತಿದಾಯಕ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರಯ್ಯ, ಎ.ಎಂ.ಶಿವಶಂಕರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು
ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಹರ್ಷ ಮನೆ ಮಾಡಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಸೇರಿದಂತೆ ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್, ವೆಂಕಟಾಪುರ ಯೋಗೀಶ್, ದೇವರಾಜು, ತೀರ್ಥ ಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾ ಸುರೇಶ್, ಮಂಜುಳಾ ಉಮಾಮಹೇಶ್, ದೀಪು ಶಾಲೆಯ ಮುಖ್ಯ ಶಿಕ್ಷಕ ನಟೇಶ್ ಹಾಗೂ ಶಿಕ್ಷಕ ಲೋಕೇಶ್ ಕುಮಾರ್ ಇದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರು, ಪೋಷಕರು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
- ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ: "ನನ್ನ ಮತದಾನ ನನ್ನ ಹಕ್ಕು" ಅಭಿಯಾನದಡಿ ಜಾಗೃತಿ ಮೂಡಿಸಿದ ಮುರುಳೀಧರ್ ಹಾಲಪ್ಪ. ಎಸ್‌ಐಆರ್ ಸಮಸ್ಯೆ ಪರಿಹಾರಕ್ಕೆ ಕೆಪಿಸಿಸಿ ತಾಂತ್ರಿಕ ತಂಡ ಸಜ್ಜು - ಮತದಾರರಿಗೆ ಸಹಕಾರದ ಭರವಸೆ. ತುರುವೇಕೆರೆ: ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ "ನನ್ನ ಮತದಾನ ನನ್ನ ಹಕ್ಕು" ಎಂಬ ಶೀರ್ಷಿಕೆಯಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಅತ್ಯಮೂಲ್ಯವಾದುದು ಎಂದು ಪ್ರತಿಪಾದಿಸಿದರು. ಚುನಾವಣಾ ಆಯೋಗ ಪ್ರಸ್ತುತ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಮತದಾರರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನಿರ್ಲಕ್ಷ್ಯ ಬೇಡ ಎಂದ ಮುರುಳೀಧರ್ ಹಾಲಪ್ಪ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ ಅವರು, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಫಾರಂಗಳನ್ನು ಸಕಾಲದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತದಾರರು, ಹಿರಿಯ ನಾಗರಿಕರು ಹಾಗೂ ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರು ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಸಮಸ್ಯೆಗಳಿಗೆ ಕೆಪಿಸಿಸಿ ತಂಡದ ನೆರವು ಎಸ್‌ಐಆರ್ ಫಾರಂ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲು ಕೆಪಿಸಿಸಿಯಿಂದ ಪ್ರತ್ಯೇಕ ತಾಂತ್ರಿಕ ತಂಡವನ್ನು ರಚಿಸಲಾಗಿದೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು. ಫಾರಂ ಭರ್ತಿ ಮಾಡಲು ಸಾಧ್ಯವಾಗದವರು, ದಾಖಲೆಗಳ ಅಪ್‌ಲೋಡ್ ಸಂಬಂಧ ಗೊಂದಲಕ್ಕೊಳಗಾದವರು ಈ ತಂಡವನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರಿಗೂ ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಹಲವು ಮಂದಿ ಮತದಾರರು ಪಾಲ್ಗೊಂಡು, ತಮ್ಮ ಎಸ್‌ಐಆರ್ ಸಂಬಂಧಿತ ಸಂದೇಹಗಳನ್ನು ಪರಿಹರಿಸಿಕೊಂಡರು. ಮತದಾನದ ಹಕ್ಕಿನ ಮಹತ್ವದ ಕುರಿತು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ತಾಲ್ಲೂಕಿನಾದ್ಯಂತ ಮುಂದುವರಿಯಲಿವೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ಯಾರಂಟಿ ಸಮೇತ ಅಧ್ಯಕ್ಷ ಗುಡ್ಡೆನಹಳ್ಳಿ ಪ್ರಸನ್ನ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಟಿಎನ್ ಶಿವರಾಜ್, ತಾಲೂಕು ಸೇವಾ ದಳದ ಅಧ್ಯಕ್ಷ ಕುಮಾರ್ ಕೊಂಡಜ್ಜಿ, ನಂಜುಂಡಪ್ಪ ಗುಡ್ಡೇನಹಳ್ಳಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ ಮಹೇಶ್, ಉದಯ್ ಕುಮಾರ್ ಅರಳಿಕೆರೆ,ಮುಖಂಡ ಜೋಗಿ ಪಾಳ್ಯ ಶಿವರಾಜ್, ಮೇಲನಹಳ್ಳಿ ಮಂಜಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಕೀರ್ತಿರಾಜ್, ಕಾಂತರಾಜ್ ಅರಸ್, ಸ್ವರ್ಣ ಕುಮಾರ್, ಪುಟ್ಟರಾಜ್, ಸತೀಶ್ ಸೇರಿದಂತೆ ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಇದ್ದರು.4
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದಲ್ಲಿ ತಾಲೂಕಿಗೆ ಹೇಮೆ ತಂದವರಾರು ಎಂಬ ಬಗ್ಗೆ ಚರ್ಚೆ ಕಾವೇರಿದೆ1
- ತಡರಾತ್ರಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಜೊತೆ ಚರ್ಚೆ ನಡೆಸಿದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮಮತಾ ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರು ಹಾಗೂ ಬಾಕಿ ಉಳಿದಿರುವ ನಾಲೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ ಮುಂಭಾಗ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದಿದೆ. ತಡರಾತ್ರಿ ಧರಣಿ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮಮತಾ ಭೇಟಿ ನೀಡಿ ಪ್ರತಿಭಟನಾನಿರತ ರೈತರೊಂದಿಗೆ ಚರ್ಚೆ ನಡೆಸಿದರು. ರೈತರ ಸಮಸ್ಯೆಗಳು, ಹೇಮಾವತಿ ನಾಲೆ ಕಾಮಗಾರಿ ವಿಳಂಬ ಹಾಗೂ ನೀರಾವರಿ ಯೋಜನೆಯ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ರೈತರು ಹಲವು ವರ್ಷಗಳಿಂದ ಹೇಮಾವತಿ ನೀರಿಗಾಗಿ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು. ರೈತರ ಅಹವಾಲುಗಳನ್ನು ಆಲಿಸಿದ ತಹಶೀಲ್ದಾರ್ ಮಮತಾ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಷಯ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೀಗ ರೈತರ ಅಹೋರಾತ್ರಿ ಧರಣಿ ಮುಂದುವರಿದಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ. ಹೇಮಾವತಿ ನಾಲೆ ಯೋಜನೆ ಹಲವು ವರ್ಷಗಳಿಂದ ವಿಳಂಬವಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಿದೆ.1
- ಎಸ್ ಐ ಆರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಮುರುಳಿಧರ್ ಹಾಲಪ್ಪ ಜೊತೆಗೆ ತುರುವೇಕೆರೆ: ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ "ನನ್ನ ಮತದಾನ ನನ್ನ ಹಕ್ಕು" ಎಂಬ ಶೀರ್ಷಿಕೆಯಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಅತ್ಯಮೂಲ್ಯವಾದುದು ಎಂದು ಪ್ರತಿಪಾದಿಸಿದರು. ಚುನಾವಣಾ ಆಯೋಗ ಪ್ರಸ್ತುತ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಮತದಾರರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನಿರ್ಲಕ್ಷ್ಯ ಬೇಡ ಎಂದ ಮುರುಳೀಧರ್ ಹಾಲಪ್ಪ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ ಅವರು, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಫಾರಂಗಳನ್ನು ಸಕಾಲದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತದಾರರು, ಹಿರಿಯ ನಾಗರಿಕರು ಹಾಗೂ ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರು ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಸಮಸ್ಯೆಗಳಿಗೆ ಕೆಪಿಸಿಸಿ ತಂಡದ ನೆರವು ಎಸ್‌ಐಆರ್ ಫಾರಂ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲು ಕೆಪಿಸಿಸಿಯಿಂದ ಪ್ರತ್ಯೇಕ ತಾಂತ್ರಿಕ ತಂಡವನ್ನು ರಚಿಸಲಾಗಿದೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು. ಫಾರಂ ಭರ್ತಿ ಮಾಡಲು ಸಾಧ್ಯವಾಗದವರು, ದಾಖಲೆಗಳ ಅಪ್‌ಲೋಡ್ ಸಂಬಂಧ ಗೊಂದಲಕ್ಕೊಳಗಾದವರು ಈ ತಂಡವನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರಿಗೂ ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಹಲವು ಮಂದಿ ಮತದಾರರು ಪಾಲ್ಗೊಂಡು, ತಮ್ಮ ಎಸ್‌ಐಆರ್ ಸಂಬಂಧಿತ ಸಂದೇಹಗಳನ್ನು ಪರಿಹರಿಸಿಕೊಂಡರು. ಮತದಾನದ ಹಕ್ಕಿನ ಮಹತ್ವದ ಕುರಿತು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ತಾಲ್ಲೂಕಿನಾದ್ಯಂತ ಮುಂದುವರಿಯಲಿವೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತ ಅಧ್ಯಕ್ಷ ಗುಡ್ಡೆನಹಳ್ಳಿ ಪ್ರಸನ್ನ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಟಿಎನ್ ಶಿವರಾಜ್, ತಾಲೂಕು ಸೇವಾ ದಳದ ಅಧ್ಯಕ್ಷ ಕುಮಾರ್ ಕೊಂಡಜ್ಜಿ, ನಂಜುಂಡಪ್ಪ ಗುಡ್ಡೇನಹಳ್ಳಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ ಮಹೇಶ್, ಉದಯ್ ಕುಮಾರ್ ಅರಳಿಕೆರೆ,ಮುಖಂಡ ಜೋಗಿ ಪಾಳ್ಯ ಶಿವರಾಜ್, ಮೇಲನಹಳ್ಳಿ ಮಂಜಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಕೀರ್ತಿರಾಜ್, ಕಾಂತರಾಜ್ ಅರಸ್, ಸ್ವರ್ಣ ಕುಮಾರ್, ಪುಟ್ಟರಾಜ್, ಸತೀಶ್ ಸೇರಿದಂತೆ ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಇದ್ದರು. ವರದಿ ಸುರೇಶ್ ಬಾಬು ಎಂ ತುರುವೇಕೆರೆ.1
- ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕುಣಿಗಲ್ ನ ರಂಗನಾಥ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ಕುಣಿಗಲ್ ರಂಗನಾಥ ಸ್ಕೇಟಿಂಗ್ ಕ್ಲಬ್ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ನಮ್ಮ ಬಳಿ ಸ್ಕೇಟಿಂಗ್ ತರಬೇತಿಗೆ ಕಳುಹಿಸಿದ್ದಿರಿ ನಾವು ನಮ್ಮ ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಕಡಿಮೆ ಸವಲತ್ತು ಬಳಸಿ ಸ್ಕೇಟಿಂಗ್ ತರಬೇತಿ ಯನ್ನು ನೀಡುತ್ತಿದ್ದು ನಮ್ಮ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ನಿಮ್ಮೆಲ್ಲರ ಸಹಕಾರದಿಂದ ರಾಜ್ಯಮಟ್ಟದ ಸ್ಕೇಟಿಂಗ್ನಲ್ಲಿ ಭಾಗವಹಿಸಿದ್ದಾರೆ1
- tumkur hanumanthapura jathre kollapuradamma,,&karugalamma jathre tumkur jathre1
- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದಪ್ರಯುಕ್ತಉಚಿತ ಸಮವಸ್ತ್ರಹಾಗೂಸಿಹಿ ವಿತರಣೆ ಮಂಡ್ಯ- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದ ಮುನ್ನ ದಿನವಾದ ಇಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಅವರಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸಿಹಿ ವಿತರಣೆ,ಮತ್ತು ಸಾರ್ವಜನಿಕ ರಿಗೆಉಚಿತವಾಗಿ ನೀಡುವ ಚಾಮುಂಡೇಶ್ವರಿಯ ಭಾವಚಿತ್ರವುಳ್ಳ ಗ್ರೀಟಿಂಗ್ಸ್ ಅನ್ನು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಮಂಡ್ಯ ರಕ್ಷಣಾವೇದಿಕೆ ಜಗದ ಮಾತೆ ಚಾಮುಂಡಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಜೀವನದಲ್ಲಿ ಉತ್ತಮವಾಗಿರಲಿ ಬೇಡಿತು. ಈ ಸಂದರ್ಭದಲ್ಲಿ . ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ,ಶಂಕರ ಬಾಬು ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ,ಎಚ್ ಜಗದೀಶ್ ಗೌಡ ರೈತರ ಶಾಲೆಯ ಸಂಸ್ಥಾಪಕರಾದ ಗಂಜಾಂಸತ್ಯಮೂರ್ತಿ ಜಗದೀಶ್ ಚಂದನ್ ಇತರಿದ್ದರು1
- ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ------------------- ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ. ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.1