ಎಸ್ ಐ ಆರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಮುರುಳಿಧರ್ ಹಾಲಪ್ಪ ಜೊತೆಗೆ ತುರುವೇಕೆರೆ: ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ "ನನ್ನ ಮತದಾನ ನನ್ನ ಹಕ್ಕು" ಎಂಬ ಶೀರ್ಷಿಕೆಯಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಅತ್ಯಮೂಲ್ಯವಾದುದು ಎಂದು ಪ್ರತಿಪಾದಿಸಿದರು. ಚುನಾವಣಾ ಆಯೋಗ ಪ್ರಸ್ತುತ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಮತದಾರರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನಿರ್ಲಕ್ಷ್ಯ ಬೇಡ ಎಂದ ಮುರುಳೀಧರ್ ಹಾಲಪ್ಪ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ ಅವರು, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಫಾರಂಗಳನ್ನು ಸಕಾಲದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತದಾರರು, ಹಿರಿಯ ನಾಗರಿಕರು ಹಾಗೂ ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರು ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ತಾಂತ್ರಿಕ ಸಮಸ್ಯೆಗಳಿಗೆ ಕೆಪಿಸಿಸಿ ತಂಡದ ನೆರವು ಎಸ್‌ಐಆರ್ ಫಾರಂ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲು ಕೆಪಿಸಿಸಿಯಿಂದ ಪ್ರತ್ಯೇಕ ತಾಂತ್ರಿಕ ತಂಡವನ್ನು ರಚಿಸಲಾಗಿದೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು. ಫಾರಂ ಭರ್ತಿ ಮಾಡಲು ಸಾಧ್ಯವಾಗದವರು, ದಾಖಲೆಗಳ ಅಪ್‌ಲೋಡ್ ಸಂಬಂಧ ಗೊಂದಲಕ್ಕೊಳಗಾದವರು ಈ ತಂಡವನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರಿಗೂ ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಹಲವು ಮಂದಿ ಮತದಾರರು ಪಾಲ್ಗೊಂಡು, ತಮ್ಮ ಎಸ್‌ಐಆರ್ ಸಂಬಂಧಿತ ಸಂದೇಹಗಳನ್ನು ಪರಿಹರಿಸಿಕೊಂಡರು. ಮತದಾನದ ಹಕ್ಕಿನ ಮಹತ್ವದ ಕುರಿತು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ತಾಲ್ಲೂಕಿನಾದ್ಯಂತ ಮುಂದುವರಿಯಲಿವೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತ ಅಧ್ಯಕ್ಷ ಗುಡ್ಡೆನಹಳ್ಳಿ ಪ್ರಸನ್ನ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಟಿಎನ್ ಶಿವರಾಜ್, ತಾಲೂಕು ಸೇವಾ ದಳದ ಅಧ್ಯಕ್ಷ ಕುಮಾರ್ ಕೊಂಡಜ್ಜಿ, ನಂಜುಂಡಪ್ಪ ಗುಡ್ಡೇನಹಳ್ಳಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ ಮಹೇಶ್, ಉದಯ್ ಕುಮಾರ್ ಅರಳಿಕೆರೆ,ಮುಖಂಡ ಜೋಗಿ ಪಾಳ್ಯ ಶಿವರಾಜ್, ಮೇಲನಹಳ್ಳಿ ಮಂಜಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಕೀರ್ತಿರಾಜ್, ಕಾಂತರಾಜ್ ಅರಸ್, ಸ್ವರ್ಣ ಕುಮಾರ್, ಪುಟ್ಟರಾಜ್, ಸತೀಶ್ ಸೇರಿದಂತೆ ಕಾರ್ಯಕರ್ತರುಗಳು ಹಾಗೂ ಸಾರ್ವಜನಿಕರು ಇದ್ದರು. ವರದಿ ಸುರೇಶ್ ಬಾಬು ಎಂ ತುರುವೇಕೆರೆ.

- ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ------------------- ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ. ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.1
- ಗೃಹ ಜ್ಯೋತಿ ಮನೆ ಮನೆ ಸಮೀಕ್ಷೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು ಗ್ರಾಹಕರು ತಪ್ಪದೆ ಬೆಸ್ಕಾಂ ಸಿಬ್ಬಂದಿಗೆ ಅಧಿಕೃತ ದಾಖಲೆಗಳನ್ನು ತೋರಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ್ ತಿಳಿಸಿದರು. ಕುಣಿಗಲ್ - ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ ಗೃಹ ಜ್ಯೋತಿ ಯೋಜಯ ಮನೆ ಮನೆ ಸಮೀಕ್ಷೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು ಕುಣಿಗಲ್ ತಾಲೂಕಿನಲ್ಲಿ 65,366 ಫಲಾನುಭವಿಗಳಿದ್ದು, 42,698 ಅರ್ಜಿಗಳು ಸಲ್ಲಿಕೆಯಾಗಿದೆ, 22668 ಬಾಕಿ ಉಳಿದಿವೆ, ಶೇಕಡವಾರು 65.32% ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಕುಣಿಗಲ್ ಬೆಂಗಳೂರು ವಿದ್ಯುತ್ ಕಂಪನಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ್ ತಿಳಿಸಿದರು.1
- ಶ್ರೀಮಂತಿಕೆ ಶಾಶ್ವತವಲ್ಲ, ದಾನಧರ್ಮ ಮಾತ್ರ ಶಾಶ್ವತ: ಚಂದ್ರಶೇಖರ ಮಹಾಸ್ವಾಮೀಜಿ. ವೀರಶೈವ ಲಿಂಗಾಯತ ನೌಕರರ ತಾಲೂಕು ಸಮಾವೇಶ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ನಿವೃತ್ತ ನೌಕರರಿಗೆ ಸನ್ಮಾನ. ತುರುವೇಕೆರೆ: ಮನುಷ್ಯನಿಗೆ ಶ್ರೀಮಂತಿಕೆ ಎಂಬುದು ಎಂದೂ ಶಾಶ್ವತವಲ್ಲ. ಇಂದು ಕೈತುಂಬ ಸಂಪತ್ತಿದ್ದವರು ನಾಳೆ ಬರಿಗೈಯಾಗಬಹುದು. ಆದರೆ ಶ್ರೀಮಂತಿಕೆ ಇದ್ದ ಸಂದರ್ಭದಲ್ಲಿ ಮಾಡಿದ ದಾನಧರ್ಮಗಳು ಮಾತ್ರ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ಶಿವಬಸವ ನೌಕರರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ ಏರ್ಪಡಿಸಲಾಗಿತ್ತು. ಇದೇ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವೆಯಿಂದ ನಿವೃತ್ತರಾದ ನೌಕರರಿಗೆ ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಂದ್ರಶೇಖರ ಮಹಾಸ್ವಾಮೀಜಿ, ಶ್ರೀಮಂತಿಕೆ ಯಾವ ಕಾಲಕ್ಕೂ ಒಳ್ಳೆಯದಲ್ಲ; ಅದು ಮನುಷ್ಯನನ್ನು ದೇವರಿಂದಲೂ ದೂರ ಮಾಡುತ್ತದೆ ಎಂದು ಎಚ್ಚರಿಸಿ. ಈ ಹಿಂದೆ ಅಪಾರ ಶ್ರೀಮಂತಿಕೆ ಹೊಂದಿದ್ದವರು ಇಂದು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಹಲವು ನಿದರ್ಶನಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಸ್ವಾಮೀಜಿ ನೆನಪಿಸಿದರು. ಶ್ರೀಮಂತಿಕೆಯ ಸೊಕ್ಕಿನಲ್ಲಿ ದೇವಸ್ಥಾನಗಳಿಗೆ ತಮ್ಮ ಹೆಸರು ಹಾಕಿ ಕಿರೀಟ, ಆಭರಣ ನೀಡಿದವರು ಮುಂದೆ ಯಾವ ಸ್ಥಿತಿಗೆ ತಲುಪಿದರು ಎಂಬುದನ್ನೂ ಸಮಾಜ ನೋಡಿದೆ ಎಂದು ಉದಾಹರಿಸಿದ ಅವರು, ಆದ್ದರಿಂದ ಕೈಯಲ್ಲಿ ಸಂಪತ್ತಿರುವಾಗ ಅಹಂಕಾರಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ, ವಿನಮ್ರತೆಯಿಂದ ನಡೆದುಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು. ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಮಾಜ ಸೇವೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಸ್ವಾಮೀಜಿ, ಲಿಂಗಾಯತ ಧರ್ಮವು ಎಲ್ಲಾ ಸಮಾಜದ ಜನರೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುವ ಮೂಲಕ ಬಸವಣ್ಣನವರ ಆಶಯಗಳನ್ನು ಈಡೇರಿಸುತ್ತಿದೆ ಎಂದರು. ಕೆಳವರ್ಗದ ಜನರನ್ನೂ ಆತ್ಮೀಯತೆಯಿಂದ ಕಾಣುವ ಸಮುದಾಯ ಲಿಂಗಾಯತವಾಗಿದ್ದು, ನಾವುಗಳು ಕೇವಲ ಜಾತಿ, ಮತ, ಧರ್ಮ ಎಂಬ ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದೇವೆ ಅಷ್ಟೆ; ವಾಸ್ತವದಲ್ಲಿ ಜಗತ್ತಿನಲ್ಲಿ ಎಲ್ಲವೂ ಶಿವಮಯ, ಲಿಂಗಮಯ ಎಂದು ಬಣ್ಣಿಸಿದರು. ಯಾವುದೇ ಜಾತಿಯವರಾಗಿದ್ದರೂ ಉತ್ತಮ ನಡತೆಯಿಂದ, ಶ್ರದ್ಧೆಯಿಂದ ದೇವರ ಆಚರಣೆ ಪಾಲಿಸುವವರೆಲ್ಲರೂ ನಿಜ ಅರ್ಥದಲ್ಲಿ ಲಿಂಗವಂತರೇ ಆಗಿದ್ದಾರೆ ಎಂದು ಪ್ರತಿಪಾದಿಸಿ ವೀರಶೈವ ಲಿಂಗಾಯತದ ಒಳಪಂಗಡಗಳ ಬಗ್ಗೆಯೂ ಮಾತನಾಡಿದ ಅವರು, ಈಗ ಒಳಪಂಗಡಗಳ ನಡುವಿನ ಗೆರೆಗಳು ಕ್ರಮೇಣ ಅಳಿದುಹೋಗುತ್ತಿವೆ ಎಂದರು. ಎಲ್ಲರೂ ಒಂದೇ ಲಿಂಗಾಯತ ಸಮುದಾಯದವರಾಗಿ ಒಳಪಂಗಡಗಳ ನಡುವೆಯೇ ಹೆಣ್ಣು-ಗಂಡು ಕೊಟ್ಟು ತಂದು ಮಾವ, ಬಾಮೈದ, ಅಣ್ಣ-ತಮ್ಮಂದಿರಂತಹ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಸಾಧಕಿ, ಅಮ್ಮಸಂದ್ರದ ಕು.ಚಿನ್ಮಯಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ಮಯಿ, ಪೋಷಕರು ತಮ್ಮ ಮಕ್ಕಳ ಮೇಲೆ ಕೇವಲ ವಿದ್ಯಾಭ್ಯಾಸ ಮತ್ತು ಅಂಕಗಳಿಕೆಗಾಗಿಯೇ ಒತ್ತಡ ಹೇರುವುದನ್ನು ಬಿಟ್ಟು, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು. ತಾವು ವಿದ್ಯಾಭ್ಯಾಸದ ಸಂದರ್ಭದಲ್ಲಿ ತರಗತಿಗೇ ಟಾಪರ್ ಆಗಿದ್ದುದನ್ನು ನೆನಪಿಸಿಕೊಂಡ ಅವರು, ವಿದ್ಯೆಯ ಜೊತೆಜೊತೆಗೇ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದುದಾಗಿ ತಿಳಿಸಿದರು. ವೈದ್ಯ ವೃತ್ತಿಯಲ್ಲಿದ್ದರೂ ಕ್ರೀಡೆಯನ್ನು ಎಂದಿಗೂ ಕೈಬಿಡದೆ, ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮೆರೆದುದಾಗಿ ವಿವರಿಸಿದ ಚಿನ್ಮಯಿ, ಇಂದಿನ ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದು ಸ್ಫೂರ್ತಿದಾಯಕ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರಯ್ಯ, ಎ.ಎಂ.ಶಿವಶಂಕರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಹರ್ಷ ಮನೆ ಮಾಡಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಲಿಂಗಾಯತ ನೌಕರರ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಬಿ.ಇ.ಒ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಯುವ ಘಟಕ ಅಧ್ಯಕ್ಷ ನಿಜಗುಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಸೇರಿದಂತೆ ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್, ವೆಂಕಟಾಪುರ ಯೋಗೀಶ್, ದೇವರಾಜು, ತೀರ್ಥ ಕುಮಾರ್, ವಕೀಲ ನಾಗೇಶ್, ಯಜಮಾನ್ ಮಹೇಶ್, ಅರಳಿಕೆರೆ ಲೋಕೇಶ್, ದೇವಮ್ಮ ಶಂಕರಪ್ಪ, ಮಾಚೇನಹಳ್ಳಿ ಲೋಕೇಶ್, ಲೋಕಮ್ಮನಹಳ್ಳಿ ಕಾಂತರಾಜು, ದುಂಡಾ ಸುರೇಶ್, ಮಂಜುಳಾ ಉಮಾಮಹೇಶ್, ದೀಪು ಶಾಲೆಯ ಮುಖ್ಯ ಶಿಕ್ಷಕ ನಟೇಶ್ ಹಾಗೂ ಶಿಕ್ಷಕ ಲೋಕೇಶ್ ಕುಮಾರ್ ಇದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರು, ಪೋಷಕರು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.4
- ಏರ್ಪೋರ್ಟ್ ನಿಂದ ಹೊರಬಂದ ರಣದೀಪ್ ಸಿಂಗ್ ಸುರ್ಜೇವಾಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರಿನತ್ತ ಹೊರಟ ಸುರ್ಜೇವಾಲ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ.3
- ಸಂತೋಷ್ ಲಾಡ್‌ಗೆ ಮತ್ತೆ ಸಚಿವ ಸ್ಥಾನ! ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ! ಸಂತೋಷ್ ಲಾಡ್‌ಗೆ ಮತ್ತೆ ಸಚಿವ ಸ್ಥಾನ! ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ!1
- ಕುಣಿಗಲ್ ತಾಲೂಕಿನಲ್ಲಿ 65.32 ಪ್ರಗತಿ ಕಂಡಿದೆ ಎ ಇ ಇ ಪುರುಷೋತ್ತಮ್ ಕುಣಿಗಲ್ ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ ಗೃಹ ಜ್ಯೋತಿ ಯೋಜಯ ಮನೆ ಮನೆ ಸಮೀಕ್ಷೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು ಕುಣಿಗಲ್ ತಾಲೂಕಿನಲ್ಲಿ 65,366 ಫಲಾನುಭವಿಗಳಿದ್ದು, 42,698 ಅರ್ಜಿಗಳು ಸಲ್ಲಿಕೆಯಾಗಿದೆ, 22668 ಬಾಕಿ ಉಳಿದಿವೆ, ಶೇಕಡವಾರು 65.32% ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಕುಣಿಗಲ್ ಬೆಂಗಳೂರು ವಿದ್ಯುತ್ ಕಂಪನಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ್ ತಿಳಿಸಿದರು.1
- ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ ಚಿಕ್ಕನಾಯಕನಹಳ್ಳಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ ---------------------- ಚಿಕ್ಕನಾಯಕನಹಳ್ಳಿ: ತಾಲ್ಲೂಕಿಗೆ ಹೇಮಾವತಿ ನೀರು ಹರಿಸಬೇಕು ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಶಾಸಕ ಬಿ.ಲಕ್ಕಪ್ಪ ಅವರು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಸೂಕ್ತ ಆಶ್ವಾಸನೆ ನೀಡದಿದ್ದರೆ 'ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಂದ್' ನಡೆಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತ ರೈತರೊಂದಿಗೆ ನೆಲದ ಮೇಲೆ ಕುಳಿತು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗಮನ ಸೆಳೆಯಲು ತೀವ್ರ ಹೋರಾಟ: "ಸುಮ್ಮನೆ ಬಂದು ಕುಳಿತು, ಎದ್ದು ಹೋಗುವಂತಹ ಹೋರಾಟದಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಅದರ ಗಮನ ಸೆಳೆಯಬೇಕಾದರೆ ಅತ್ಯಂತ ಪರಿಣಾಮಕಾರಿಯಾದ ನಿಲುವು ತಳೆಯಬೇಕಾಗಿದೆ. ನೀರಾವರಿ ಸೌಲಭ್ಯ ಸಿಗುವವರೆಗೂ ಹಾಗೂ ಸರ್ಕಾರದ ಸ್ಪಷ್ಟ ಆಶ್ವಾಸನೆ ಸಿಗುವವರೆಗೂ ಈ ಹೋರಾಟವನ್ನು ಅರ್ಧಕ್ಕೆ ಕೈಬಿಡಬಾರದು" ಎಂದು ಹೇಳಿದರು. ರಾಜಕೀಯ ರಹಿತ ಬೆಂಬಲ, ತಾಲ್ಲೂಕು ಬಂದ್‌ಗೆ ಕರೆ: "ಈ ಹೋರಾಟದಲ್ಲಿ ಯಾವುದೇ ಪಕ್ಷ ಅಥವಾ ರಾಜಕೀಯವಿಲ್ಲ. ಇದು ಇಡೀ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರ ಬದುಕಿನ ಪ್ರಶ್ನೆ. ರೈತರು ಒಗ್ಗಟ್ಟಾಗಿ ನಿಲ್ಲಬೇಕು. ಅಗತ್ಯಬಿದ್ದರೆ ಇಡೀ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬಂದ್ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕಾಗಿದೆ" ಎಂದು ಕರೆ ನೀಡಿದರು. ರೈತರ ಜೊತೆ ಕೊನೆಯವರೆಗೂ ನಿಲ್ಲುವ ಅಭಯ: "ನಾನು ಮೊದಲಿನಿಂದಲೂ ನೀರಾವರಿ ಯೋಜನೆಗಳ ಬಗ್ಗೆ ಹಾಗೂ ರೈತರ ಪರವಾಗಿ ಆಸಕ್ತಿ ಹೊಂದಿರುವವನು. ಹಿಂದೆ ಹಲವು ಬಾರಿ ಹೋರಾಟ ನಡೆಸಿದರೂ ಸೂಕ್ತ ಫಲಿತಾಂಶ ಸಿಕ್ಕಿಲ್ಲ. ಆದರೆ ಈಗ ರೈತ ಸಂಘಟನೆಗಳು ಆರಂಭಿಸಿರುವ ಈ ಹೋರಾಟ ತಾರ್ಕಿಕ ಅಂತ್ಯ ಕಾಣಲೇಬೇಕು. ರೈತರ ಈ ನ್ಯಾಯಯುತ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದು, ಸಂಪೂರ್ಣ ಬೆಂಬಲ ನೀಡುತ್ತೇನೆ" ಎಂದು ರೈತರಿಗೆ ಧೈರ್ಯ ತುಂಬಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ನೂರಾರು ರೈತರು ಹಾಗೂ ಸ್ಥಳೀಯ ಸಾರ್ವಜನಿಕರು ಹಸಿರು ಶಾಲು ಧರಿಸಿ ಭಾಗವಹಿಸಿದ್ದು, ಸ್ಥಳದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.1
- ಚಾಮುಂಡೇಶ್ವರಿ ತಾಯಿಯ ಜನ್ಮವರ್ದಂತಿ ಮಹೋತ್ಸವ ಅಂಗವಾಗಿ ಕೊಲ್ಲಾಪುರದಮ್ಮ ದೇವಿಯ ಉತ್ಸವ ಅನ್ನಸಂತರ್ಪಣೆ ಹೆಬ್ಬೂರು, ಶ್ರೀ ಚಾಮುಂಡೇಶ್ವರಿ ತಾಯಿಯ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ದಿನಾಂಕ 4.08.2026 ನೇ ಮಂಗಳವಾರ ಹೆಬ್ಬೂರು ಶ್ರೀ ಕೊಲ್ಲಾಪುರದಮ್ಮ ದೇವಿಯ ಮೆರವಣಿಗೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.1
- ಹುಬ್ಬಳ್ಳಿ ಕಾರವಾರ ರಸ್ತೆ ಬದಿಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ ಹುಬ್ಬಳ್ಳಿ ಕಾರವಾರ ರಸ್ತೆ ಬದಿಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ1