ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಅಗತ್ಯ: ಜಯಂತಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಅಗತ್ಯ: ಜಯಂತಿ ಗುಬ್ಬಿ: ಮಹಿಳೆಯರು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು. ಸ್ವ ಉದ್ಯೋಗದ ಕುರಿತು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯೋಜನಾಧಿಕಾರಿ ಜಯಂತಿ ಹೇಳಿದರು. ಕಡಬ ಹೋಬಳಿಯ ಬೋಚಿಹಳ್ಳಿ ಗ್ರಾಮದ ದೀಪ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದ ಅವರು, ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ತಮ್ಮ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರದ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್‌ಬಿಐ ಬ್ಯಾಂಕ್‌ನ ರಾಷ್ಟ್ರೀಯ ಸಾಕ್ಷರತಾ ಆಂದೋಲನದ ಸಂಚಾಲಕರಾದ ನಾಗರಾಜ್ ಅವರು ಬ್ಯಾಂಕಿಂಗ್ ವ್ಯವಹಾರಗಳು, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY) ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಕುರಿತು ಮಾಹಿತಿ ನೀಡಿದರು. ಅಲ್ಲದೆ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ಆನ್‌ಲೈನ್ ವಂಚನೆಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಭವ್ಯ ಅವರು ಸೀರೆ ಫೋಲ್ಡಿಂಗ್ ಹಾಗೂ ಮೆಹಂದಿ ಹಾಕುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಸ್ವ ಉದ್ಯೋಗದ ಮೂಲಕ ಮಹಿಳೆಯರು ತಮ್ಮ ಕೌಶಲ್ಯವನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಟ್ರೈನಿಂಗ್ ಸಂಸ್ಥೆಯ ಮೇಲ್ವಿಚಾರಕರಾದ ಶ್ರೀಮತಿ ಅನುರಾಧ, ಗ್ರಾಮ ಪಂಚಾಯಿತಿ ಸದಸ್ಯರಾದ ತಿಪ್ಪೇಗೌಡಸ್ವಾಮಿ, ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಆಶಾ, ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾ ಪ್ರತಿನಿಧಿ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

- ಬೇಸಿಗೆ ಬಂದರೆ ನಮ್ಮಲ್ಲಿ ಜಾನುವಾರುಗಳಿಗೆ ಹುಲ್ಲು ಸಿಗುವುದೇಲ ಕಷ್ಟ ಹೊರ ರಾಷ್ಟ್ರದಲ್ಲಿ ಇಂತಹ ಆಹಾರ ನೀಡುತ್ತಿದ್ದಾರೆ.1
- ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದ ಸಚಿವ ಹೆಚ್.ಸಿ.ಬಾಲಕೃಷ್ಣ ನಗರದ ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಪೌರಾಢಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಚ್.ಸಿ.ಬಾಲಕೃಷ್ಣ ಉದ್ಘಾಟನೆ ನೇರವೇರಿಸಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು , ನಮ್ಮ ಯುವ ಜನಾಂಗ ಸಂಸತ್ತು ಹಾಗೂ ವಿಧಾನ ಸಭೆ ಕಲಾಪಗಳಲ್ಲಿ ಯಾವ ರೀತಿ ಚರ್ಚೆ ಮಾಡಬೇಕು, ಯಾವ ರೀತಿ ಪಾಲ್ರ್ಗೊಳ್ಳಬೇಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಯಾವ ರೀತಿ ಪ್ರಸ್ತಾಪ ಮಾಡಬೇಕು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಇನ್ನೂ ತಿಂಗಳ ಕಾಲಾವಕಾಶದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಸಂಸತ್ತ ಕಾರ್ಯಕ್ರಮ ಅಯೋಜಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ಆದೇಶ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು1
- ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ... ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು.. ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು2
- ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ| Veega News Kannada ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ1
- ಹೆದ್ದಾರಿಯಲ್ಲಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ದೇವನಹಳ್ಳಿ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.2
- ರಾಜಕಾರಣ ಮಾಡಲು ಬಿಜೆಪಿ ನಾಯಕರು ಮಂಡ್ಯಕ್ಕೆ ಬರುತ್ತಿದ್ದಾರೆ - ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಂಡ್ಯ-ಮದ್ದೂರಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಉಸ್ತುವಾರಿ ಸಚಿವ ಚಲುವಾರಾಯಸ್ವಾಮಿ, ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಬಾರದ ಬಿಜೆಪಿ ನಾಯಕರು, ಗಣೇಶ ವಿಸರ್ಜನೆ ನೆಪದಲ್ಲಿ ರಾಜಕಾರಣ ಮಾಡಲು ಮಂಡ್ಯಕ್ಕೆ ಬರುತ್ತಿದ್ದಾರೆ ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಗಣೇಶನನ್ನು ಹೇಗೆ ವಿಸರ್ಜಿಸಬೇಕು ಎಂಬುದು ಗೊತ್ತಿದೆ, ಬಿಜೆಪಿಯವರಿಂದ ಕಲಿಯ ಬೇಕಿಲ್ಲ ರಾಜಕೀಯವಾಗಿ ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಬಿಜೆಪಿ ಇಲ್ಲಿ ರಾಜಕೀಯ ಮಾಡಲು ಬರುತ್ತಿದೆ, ಅವರು ಜಿಲ್ಲೆ ಪ್ರವೇಶಿಸದಂತೆ ಪೊಲೀಸ್ ಭದ್ರತೆ ಒದಗಿಸಿ ವಾಪಸ್ ಕಳುಹಿಸಲಾಗುವುದು ಎಂದುಚಲುವರಾಯಸ್ವಾಮಿ ಗಣೇಶ ವಿಸರ್ಜನೆಗೆ ಬರುತ್ತಿರುವ ಬಾಜಪಾ ನಾಯಕರಿಗೆ ಎಚ್ಚರಿಕೆ ನೀಡಿದರು.1
- ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .1
- ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ :ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ: ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ .ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು1