ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದ ಸಚಿವ ಹೆಚ್.ಸಿ.ಬಾಲಕೃಷ್ಣ ನಗರದ ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಪೌರಾಢಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಚ್.ಸಿ.ಬಾಲಕೃಷ್ಣ ಉದ್ಘಾಟನೆ ನೇರವೇರಿಸಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು , ನಮ್ಮ ಯುವ ಜನಾಂಗ ಸಂಸತ್ತು ಹಾಗೂ ವಿಧಾನ ಸಭೆ ಕಲಾಪಗಳಲ್ಲಿ ಯಾವ ರೀತಿ ಚರ್ಚೆ ಮಾಡಬೇಕು, ಯಾವ ರೀತಿ ಪಾಲ್ರ್ಗೊಳ್ಳಬೇಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಯಾವ ರೀತಿ ಪ್ರಸ್ತಾಪ ಮಾಡಬೇಕು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಇನ್ನೂ ತಿಂಗಳ ಕಾಲಾವಕಾಶದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಸಂಸತ್ತ ಕಾರ್ಯಕ್ರಮ ಅಯೋಜಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ಆದೇಶ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದ ಸಚಿವ ಹೆಚ್.ಸಿ.ಬಾಲಕೃಷ್ಣ ನಗರದ ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಪೌರಾಢಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಚ್.ಸಿ.ಬಾಲಕೃಷ್ಣ ಉದ್ಘಾಟನೆ ನೇರವೇರಿಸಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು , ನಮ್ಮ ಯುವ ಜನಾಂಗ ಸಂಸತ್ತು ಹಾಗೂ ವಿಧಾನ ಸಭೆ ಕಲಾಪಗಳಲ್ಲಿ ಯಾವ ರೀತಿ ಚರ್ಚೆ ಮಾಡಬೇಕು, ಯಾವ ರೀತಿ ಪಾಲ್ರ್ಗೊಳ್ಳಬೇಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಯಾವ ರೀತಿ ಪ್ರಸ್ತಾಪ ಮಾಡಬೇಕು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಇನ್ನೂ ತಿಂಗಳ ಕಾಲಾವಕಾಶದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಸಂಸತ್ತ ಕಾರ್ಯಕ್ರಮ ಅಯೋಜಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ಆದೇಶ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು
- ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದ ಸಚಿವ ಹೆಚ್.ಸಿ.ಬಾಲಕೃಷ್ಣ ನಗರದ ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಪೌರಾಢಳಿತ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಚ್.ಸಿ.ಬಾಲಕೃಷ್ಣ ಉದ್ಘಾಟನೆ ನೇರವೇರಿಸಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು , ನಮ್ಮ ಯುವ ಜನಾಂಗ ಸಂಸತ್ತು ಹಾಗೂ ವಿಧಾನ ಸಭೆ ಕಲಾಪಗಳಲ್ಲಿ ಯಾವ ರೀತಿ ಚರ್ಚೆ ಮಾಡಬೇಕು, ಯಾವ ರೀತಿ ಪಾಲ್ರ್ಗೊಳ್ಳಬೇಕು ಹಾಗೂ ರಾಷ್ಟ್ರೀಯ ಸಮಸ್ಯೆಗಳನ್ನು ಯಾವ ರೀತಿ ಪ್ರಸ್ತಾಪ ಮಾಡಬೇಕು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಇನ್ನೂ ತಿಂಗಳ ಕಾಲಾವಕಾಶದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಮಕ್ಕಳ ಸಂಸತ್ತ ಕಾರ್ಯಕ್ರಮ ಅಯೋಜಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ಆದೇಶ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು1
- ದೊಡ್ಡಆಲಹಳ್ಳಿಯಲ್ಲಿ ಗೌರಿ–ಗಣೇಶ ಹಬ್ಬ ಆಚರಣೆ: ಮಹಿಳೆಯರೊಂದಿಗೆ ಸರಳವಾಗಿ ಬೆರೆತ ಸಿಎಂ ಪತ್ನಿ ಶ್ರೀಮತಿ ಉಷಾ ಕನಕಪುರ: ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದಲ್ಲಿ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಅವರು ತಂಬಿಟ್ಟಿನ ಆರತಿಯೊಂದಿಗೆ ಆಗಮಿಸಿ ನಾಗರಕಲ್ಲಿಗೆ ತನಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಯವರ ಪತ್ನಿ ಎಂಬ ಯಾವುದೇ ಅಹಂ ಪ್ರದರ್ಶಿಸದೆ, ಗ್ರಾಮದ ಮಹಿಳೆಯರೊಂದಿಗೆ ಸಾಮಾನ್ಯ ಮಹಿಳೆಯಂತೆ ಬೆರೆತು ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗ್ರಾಮೀಣ ಸಂಪ್ರದಾಯದಂತೆ ನಾಗರಕಲ್ಲಿಗೆ ಪೂಜೆ ಸಲ್ಲಿಸಿ, ಕುಟುಂಬ ಹಾಗೂ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದರು. ಪೂಜೆ ಬಳಿಕ ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಉಷಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ವೇಳೆ ಉಷಾ ಅವರು ಗ್ರಾಮದ ಮಹಿಳೆಯರೊಂದಿಗೆ ಆತ್ಮೀಯವಾಗಿ ಬೆರೆತು, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಉಷಾ ಅವರ ಸರಳತೆ ಹಾಗೂ ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಬೆರೆತ ನಡೆ ಸ್ಥಳೀಯರ ಗಮನ ಸೆಳೆಯಿತು1
- ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು. ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನದ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ ಛಲ ಬಿಡದೆ ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.1
- ರಾಜಕಾರಣ ಮಾಡಲು ಬಿಜೆಪಿ ನಾಯಕರು ಮಂಡ್ಯಕ್ಕೆ ಬರುತ್ತಿದ್ದಾರೆ - ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಂಡ್ಯ-ಮದ್ದೂರಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಉಸ್ತುವಾರಿ ಸಚಿವ ಚಲುವಾರಾಯಸ್ವಾಮಿ, ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಬಾರದ ಬಿಜೆಪಿ ನಾಯಕರು, ಗಣೇಶ ವಿಸರ್ಜನೆ ನೆಪದಲ್ಲಿ ರಾಜಕಾರಣ ಮಾಡಲು ಮಂಡ್ಯಕ್ಕೆ ಬರುತ್ತಿದ್ದಾರೆ ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಗಣೇಶನನ್ನು ಹೇಗೆ ವಿಸರ್ಜಿಸಬೇಕು ಎಂಬುದು ಗೊತ್ತಿದೆ, ಬಿಜೆಪಿಯವರಿಂದ ಕಲಿಯ ಬೇಕಿಲ್ಲ ರಾಜಕೀಯವಾಗಿ ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಬಿಜೆಪಿ ಇಲ್ಲಿ ರಾಜಕೀಯ ಮಾಡಲು ಬರುತ್ತಿದೆ, ಅವರು ಜಿಲ್ಲೆ ಪ್ರವೇಶಿಸದಂತೆ ಪೊಲೀಸ್ ಭದ್ರತೆ ಒದಗಿಸಿ ವಾಪಸ್ ಕಳುಹಿಸಲಾಗುವುದು ಎಂದುಚಲುವರಾಯಸ್ವಾಮಿ ಗಣೇಶ ವಿಸರ್ಜನೆಗೆ ಬರುತ್ತಿರುವ ಬಾಜಪಾ ನಾಯಕರಿಗೆ ಎಚ್ಚರಿಕೆ ನೀಡಿದರು.1
- ಹಲಗೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಬ್ರಹ್ಮನ್ ಮಠದಲ್ಲಿ ಸ್ವರ್ಣ ಗೌರಿಗೆ ವಿಶೇಷ ಪೂಜೆ ಹಲಗೂರು ಬೃಹನ್ಮಠದಲ್ಲಿ ಸ್ವರ್ಣಗೌರಿಗೆ ವಿಶೇಷ ಪೂಜೆ. ಹಲಗೂರು: ಇಲ್ಲಿನ ಮಠದ ಬೀದಿಯಲ್ಲಿರುವ ಬೃಹನ್ಮಠದಲ್ಲಿ ಸ್ವರ್ಣ ಗೌರಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವಂತೆ ಸ್ವರ್ಣಗೌರಿಯಲ್ಲಿ ಪ್ರಾರ್ಥಿಸಿದರು. ಸೋಮವಾರ ಸಮೀಪದ ಶಿಂಷಾ ನದಿಯ ದಡದಲ್ಲಿ ಬೆಳಗಿನ ಪ್ರಾಂತ್ಯಕಾಲದ ಬ್ರಹ್ಮ ಮುಹೂರ್ತದಲ್ಲಿ ಅರಸಿನದಿಂದ ತಯಾರಿಸಿದ ಸ್ವರ್ಣ ಗೌರಿಯನ್ನು ತಂದು ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಹಲಗೂರಿನ ಬೃಹನ್ಮಠಕ್ಕೆ ತಂದಾಗ ಮುತ್ತೈದೆಯರು ಆರತಿ ಎತ್ತಿ ವಿಶೇಷವಾಗಿ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬರಮಾಡಿಕೊಂಡರು. ಶ್ರೀ ವಿದ್ಯಾ ಗಣಪತಿ ದೇವಸ್ಥಾನದ ಪ್ರಸಾದ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಶಿಂಷಾ ನದಿಯಿಂದ ಅರಸಿನ ಮತ್ತು ಮರಳಿನಿಂದ ಸ್ವರ್ಣ ಗೌರಿಯನ್ನು ಮಾಡಿಕೊಂಡು ಮಠಕ್ಕೆ ತರಲಾಯಿತು. ನಂತರ ಗೃಹಿಣಿಯರು ವಿಶೇಷವಾಗಿ ಪೂಜೆ ಸಲ್ಲಿಸುತಿದ್ದರೆ ಎಂದರು. ಸ್ವರ್ಣ ಗೌರಿ ಭಕ್ತ ಮಂಡಳಿಯ ತೋಂಟದಾರ್ಯ ನಾಗೇಂದ್ರ ಮಾತನಾಡಿ 2026 ನೇ ಸಾಲಿನ ಸ್ವರ್ಣ ಗೌರಿ ಮಹೋತ್ಸವವನ್ನು ನಮ್ಮ ಸ್ವರ್ಣಗೌರಿ ಭಕ್ತ ಮಂಡಳಿ ವತಯಿಂದ ಆಚರಿಸಿಕೊಂಡು ಬಂದು 14ನೇ ಸೋಮವಾರ ದಿನದಿಂದ ಪ್ರತಿದಿನ ಸಂಜೆ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಿ ಮಹಾಮಂಗಳಾರತಿ ನಂತರ ಪ್ರಸಾದ ವಿನಯೋಗಿಸಲಾಗುತ್ತದೆ. ಮತ್ತು ಸೆಪ್ಟೆಂಬರ್ 22ನೇ ಮಂಗಳವಾರ ಸ್ವರ್ಣ ಗೌರಿಯನ್ನು ಮುತ್ತಿನ ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮುಖಾಂತರ ವಿಸರ್ಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸ್ವರ್ಣ ಗೌರಿಯ ಕೃಪೆಗೆ ಪಾತರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ವರ್ಣ ಗೌರಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.1
- ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ| Veega News Kannada ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ1
- ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .1
- ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ :ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ: ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ .ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು1