logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಬ್ಬಿ ತಾಲೂಕಿನ ಪತ್ರಾವುತನಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಗುಬ್ಬಿ ಭಾರತ ಸುಸಂಸ್ಕೃತ ರಾಷ್ಟ್ರ ಇಡೀ ವಿಶ್ವವೇ ಭಾರತದ ಸಂಸ್ಕೃತಿಯನ್ನು ಅನುಸರಿಸುತ್ತಿದೆ ಪ್ರತಿಯೊಬ್ಬರೂ ಧರ್ಮ ದಾರಿತವಾಗಿ ಬದುಕನ್ನು ಸಾಗಿಸುವುದು ಸೂಕ್ತ ಎಂದು ಶಿಡ್ಲೇಕೋಣ ಶ್ರೀ ವಾಲ್ಮೀಕಿ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಸಂಜಯ್ ಕುಮಾರ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಪತ್ರಾವುತನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸುಂದರವಾದ ದೇವಾಲಯಗಳನ್ನು ಕಟ್ಟಿದರೆ ಸಾಲದು ಸುಂದರವಾದ ಬದುಕನ್ನು ಕಟ್ಟಿಕೊಂಡು ಸಂಸ್ಕಾರವಂತರಾಗಿ ಬದುಕಬೇಕೆಂದು ತಿಳಿಸಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಧಾರ್ಮಿಕ ಪ್ರಜ್ಞೆ ಮೂಡಿಸಿ ಸಾಮಾಜಿಕ ಅರಿವು ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಶಕ್ತಿ ದೇವತೆ ಮಾರಮ್ಮನವರ ಮೂಲವನ್ನ ತಿಳಿಸಿದ ಶ್ರೀಗಳು ಪೂಜೆ ಆಡಂಬರವಾಗಿರಬಾರದು ಮೌಲ್ಯದಿಂದ ಕೂಡಿರಬೇಕು ಅರಿವಿನಿಂದ ಬದುಕಿದರೆ ದೇವರು ತಾನಾಗಿಯೇ ಒಲಿದು ಬರುತ್ತಾನೆ ಎಂದರು. ಬದುಕಿನಲ್ಲಿ ದುಡಿಯುವುದು ಅರ್ಥಪೂರ್ಣವಾಗಿರಬೇಕು ದುಡಿಮೆಯ ಒಂದು ಅಂಶ ಧರ್ಮಕ್ಕೆ ಮೀಸಲಿಡಬೇಕು, ದುಶ್ಚಟಗಳಿಂದ ದೂರ ಇರಬೇಕು ಎಂದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಅಂತಹ ಒಗ್ಗಟ್ಟು ನಿಮ್ಮ ಗ್ರಾಮದಲ್ಲಿ ಎದ್ದು ಕಾಣುತ್ತದೆ ಎಂದರು. ಇದೆ ಸಂದರ್ಭದಲ್ಲಿ ದೇವರುಗಳ ಉತ್ಸವ ಅದ್ದೂರಿಯಾಗಿ ನೆರವೇರಿತು, ಬಂದಿದ್ದ ಭಕ್ತಾದಿಗಳಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಪಟ್ಟಿ ಲಕ್ಕಮ್ಮದೇವಿ ಪ್ರಧಾನ ಅರ್ಚಕರಾದ ಗೋವಿಂದರಾಜು, ದಯಾನಂದ ಗೌಡ, ಪಣಗಾರ್ ಮೋಹನ್ ಕುಮಾರ್, ಚಿಕ್ಕ ರಂಗಯ್ಯ, ಗಂಗಾಧರಪ್ಪ ವತ್ಸಲ ಕುಮಾರ್, ಚಿಕ್ಕಮ್ಮ ಶ್ರೀ ರಂಗಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಪುಟ್ಟರಾಜು, ಸದಸ್ಯರಾದ ಶಿವಣ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಣ್ಣ, ವಕೀಲರಾದ ಜಯ ರಂಗಯ್ಯ ಸಿ ರಮೇಶ್ ಪಿ ಎಸ ಐ ನಾಗರಾಜು, ರಮೇಶ್ ರಾವ್, ಏನ್ ಉಮೇಶ್, ಕಾಂತರಾಜು, ಖಜಾಂಚಿ ಸುರೇಶ್, ಕಮಿಟಿ ಅಧ್ಯಕ್ಷ ಕಿಟ್ಟಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಶ್ರೀ ರಂಗಯ್ಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.

2 hrs ago
user_ಪ್ರಸನ್ನ ದೊಡ್ಡಗುಣಿ
ಪ್ರಸನ್ನ ದೊಡ್ಡಗುಣಿ
ಗುಬ್ಬಿ, ತುಮಕೂರು, ಕರ್ನಾಟಕ•
2 hrs ago

ಗುಬ್ಬಿ ತಾಲೂಕಿನ ಪತ್ರಾವುತನಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಗುಬ್ಬಿ ಭಾರತ ಸುಸಂಸ್ಕೃತ ರಾಷ್ಟ್ರ ಇಡೀ ವಿಶ್ವವೇ ಭಾರತದ ಸಂಸ್ಕೃತಿಯನ್ನು ಅನುಸರಿಸುತ್ತಿದೆ ಪ್ರತಿಯೊಬ್ಬರೂ ಧರ್ಮ ದಾರಿತವಾಗಿ ಬದುಕನ್ನು ಸಾಗಿಸುವುದು ಸೂಕ್ತ ಎಂದು ಶಿಡ್ಲೇಕೋಣ ಶ್ರೀ ವಾಲ್ಮೀಕಿ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಸಂಜಯ್ ಕುಮಾರ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಪತ್ರಾವುತನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸುಂದರವಾದ ದೇವಾಲಯಗಳನ್ನು ಕಟ್ಟಿದರೆ ಸಾಲದು ಸುಂದರವಾದ ಬದುಕನ್ನು ಕಟ್ಟಿಕೊಂಡು ಸಂಸ್ಕಾರವಂತರಾಗಿ ಬದುಕಬೇಕೆಂದು ತಿಳಿಸಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಧಾರ್ಮಿಕ ಪ್ರಜ್ಞೆ ಮೂಡಿಸಿ ಸಾಮಾಜಿಕ ಅರಿವು ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಶಕ್ತಿ ದೇವತೆ ಮಾರಮ್ಮನವರ ಮೂಲವನ್ನ ತಿಳಿಸಿದ ಶ್ರೀಗಳು ಪೂಜೆ ಆಡಂಬರವಾಗಿರಬಾರದು ಮೌಲ್ಯದಿಂದ ಕೂಡಿರಬೇಕು ಅರಿವಿನಿಂದ ಬದುಕಿದರೆ ದೇವರು ತಾನಾಗಿಯೇ ಒಲಿದು ಬರುತ್ತಾನೆ ಎಂದರು. ಬದುಕಿನಲ್ಲಿ ದುಡಿಯುವುದು ಅರ್ಥಪೂರ್ಣವಾಗಿರಬೇಕು ದುಡಿಮೆಯ ಒಂದು ಅಂಶ ಧರ್ಮಕ್ಕೆ ಮೀಸಲಿಡಬೇಕು, ದುಶ್ಚಟಗಳಿಂದ ದೂರ ಇರಬೇಕು ಎಂದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಅಂತಹ ಒಗ್ಗಟ್ಟು ನಿಮ್ಮ ಗ್ರಾಮದಲ್ಲಿ ಎದ್ದು ಕಾಣುತ್ತದೆ ಎಂದರು. ಇದೆ ಸಂದರ್ಭದಲ್ಲಿ ದೇವರುಗಳ ಉತ್ಸವ ಅದ್ದೂರಿಯಾಗಿ ನೆರವೇರಿತು, ಬಂದಿದ್ದ ಭಕ್ತಾದಿಗಳಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಪಟ್ಟಿ ಲಕ್ಕಮ್ಮದೇವಿ ಪ್ರಧಾನ ಅರ್ಚಕರಾದ ಗೋವಿಂದರಾಜು, ದಯಾನಂದ ಗೌಡ, ಪಣಗಾರ್ ಮೋಹನ್ ಕುಮಾರ್, ಚಿಕ್ಕ ರಂಗಯ್ಯ, ಗಂಗಾಧರಪ್ಪ ವತ್ಸಲ ಕುಮಾರ್, ಚಿಕ್ಕಮ್ಮ ಶ್ರೀ ರಂಗಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಪುಟ್ಟರಾಜು, ಸದಸ್ಯರಾದ ಶಿವಣ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಣ್ಣ, ವಕೀಲರಾದ ಜಯ ರಂಗಯ್ಯ ಸಿ ರಮೇಶ್ ಪಿ ಎಸ ಐ ನಾಗರಾಜು, ರಮೇಶ್ ರಾವ್, ಏನ್ ಉಮೇಶ್, ಕಾಂತರಾಜು, ಖಜಾಂಚಿ ಸುರೇಶ್, ಕಮಿಟಿ ಅಧ್ಯಕ್ಷ ಕಿಟ್ಟಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಶ್ರೀ ರಂಗಯ್ಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.

More news from ಕರ್ನಾಟಕ and nearby areas
  • ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗ ಸಂಘ ಉದ್ಘಾಟನಾ ಕಾರ್ಯಕ್ರಮ ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರುವ ವಿವಿಧ ಪ್ರಗತಿಪರ ಕಾರ್ಯಕ್ರಮಗಳ ಕುರಿತಂತೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು ಇದೆ ಸಂದರ್ಭದಲ್ಲಿ ಶಾಸಕ ಸಿ ಬಿ ಸುರೇಶ್ ಬಾಬು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
    1
    ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗ ಸಂಘ ಉದ್ಘಾಟನಾ ಕಾರ್ಯಕ್ರಮ
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರುವ ವಿವಿಧ ಪ್ರಗತಿಪರ ಕಾರ್ಯಕ್ರಮಗಳ ಕುರಿತಂತೆ  ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ  ಶಾಸಕ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟನೆ ಮಾಡಿ  ಮಾತನಾಡಿದರು ಇದೆ ಸಂದರ್ಭದಲ್ಲಿ ಶಾಸಕ ಸಿ ಬಿ ಸುರೇಶ್ ಬಾಬು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    1 hr ago
  • ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ --------------------- ​ಹುಳಿಯಾರು ಪೇಪರ್ ಕಿರಣ್ ನ್ಯೂಸ್: ಗೌರಿ ಹಬ್ಬವೆಂದರೆ ಸಾಕು ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ-ಸಂತೋಷ. ಅದರಲ್ಲೂ ಮದುವೆಯಾಗಿ ಹೊಸ ಮನೆಗೆ ತೆರಳಿರುವ ಹೆಣ್ಣು ಮಕ್ಕಳಿಗೆ ಈ ಹಬ್ಬದ ತವರಿನ ನೆನಪುಗಳು ದುಪ್ಪಟ್ಟು ಖುಷಿ ನೀಡುತ್ತವೆ. ವರ್ಷಕ್ಕೊಮ್ಮೆ ತವರು ಮನೆಯಿಂದ ತಂದೆ-ತಾಯಿ, ಅಣ್ಣ-ತಮ್ಮಂದಿರು ಪ್ರೀತಿಯಿಂದ ಬಂದು ಬಾಗಿನ ನೀಡುವುದು, ಅಥವಾ ಹೆಣ್ಣು ಮಗಳನ್ನು ತವರಿಗೆ ಕರೆತಂದು ಉಪಚರಿಸುವುದು ಯುಗಯುಗಗಳಿಂದ ಬೆಳೆದುಬಂದ ಭಾವನಾತ್ಮಕ ಪರಂಪರೆಯಾಗಿದೆ. ​ಬಡತನವಿರಲಿ, ಸಿರಿತನವಿರಲಿ; ಪ್ರತಿಯೊಂದು ಕುಟುಂಬವೂ ತಮ್ಮ ಶಕ್ತಿಸಾರವಾಗಿ ಗೌರಿ ಹಬ್ಬವನ್ನು ಆಚರಿಸಿ ಮಗಳ ಸಂತೋಷಕ್ಕಾಗಿ ಶ್ರಮಿಸುತ್ತದೆ. ಈ ಹಬ್ಬವು ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಕೊಂಡಿಯಾಗಿದೆ. ​ಬಾಗಿನದ ಮಹತ್ವ ಮತ್ತು ಶ್ರೀಮಂತ ಸಂಸ್ಕೃತಿ ​ಗೌರಿ ಹಬ್ಬದಲ್ಲಿ ನೀಡುವ 'ಬಾಗಿನ' ಕೇವಲ ವಸ್ತುಗಳ ಮೂಟೆಯಲ್ಲ, ಅದು ತವರಿನ ಅಕ್ಷಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ. ​ಬಾಗಿನದ ಸಾಮಗ್ರಿಗಳು: ಮೊರದಲ್ಲಿ ಅರಿಶಿನ, ಕುಂಕುಮ, ಬಳೆ, ಕನ್ನಡಿ, ಬಾಚಣಿಕೆ, ಕಪ್ಪು ದಾರ, ಅಕ್ಕಿ, ಬೇಳೆ ಧಾನ್ಯಗಳು, ಬೆಲ್ಲ, ತೆಂಗಿನಕಾಯಿ ಹಾಗೂ ಮಂಗಳ ದ್ರವ್ಯಗಳನ್ನು ಜೋಡಿಸಿ ಪೂಜಿಸಲಾಗುತ್ತದೆ. ​ಮಂಗಳ ಗೌರಿ ಪೂಜೆ: ಸುಮಂಗಲಿಯರು ತಮ್ಮ ಮುತ್ತೈದೆತನ, ಕುಟುಂಬದ ಕ್ಷೇಮ ಹಾಗೂ ಐಶ್ವರ್ಯಕ್ಕಾಗಿ ಸ್ವರ್ಣ ಗೌರಿಯನ್ನು ನಿಷ್ಠೆಯಿಂದ ಪೂಜಿಸಿ, ಹಿರಿಯ ಮುತ್ತೈದೆಯರಿಗೆ ಹಾಗೂ ತಾಯಿಗೆ ಬಾಗಿನ ನೀಡಿ ಆಶೀರ್ವಾದ ಪಡೆಯುತ್ತಾರೆ. ​ಭಾವನಾತ್ಮಕ ಬೆಸುಗೆ: ಮದುವೆಯಾಗಿ ಬೇರೆ ಮನೆಗೆ ಹೋದ ಮಗಳು ಕ್ಷೇಮವಾಗಿರಲಿ, ಆಕೆಯ ಸಂಸಾರದಲ್ಲಿ ಧಾನ್ಯ-ಧನ ಸಂಪತ್ತು ಸದಾ ಸಮೃದ್ಧವಾಗಿರಲಿ ಎಂಬ ಹಾರೈಕೆ ಈ ಬಾಗಿನದ ಹಿಂದಿರುವ ಮುಖ್ಯ ಉದ್ದೇಶ. ​ಸಂಪ್ರದಾಯದ ಉಳಿವಿಗೆ ಗ್ರಾಮೀಣ ಜನರ ಶ್ರಮ ​ಬದಲಾಗುತ್ತಿರುವ ಆಧುನಿಕ ಯುಗದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ಗೌರಿ ಹಬ್ಬದ ಕಳೆ ಕುಂದಿಲ್ಲ. ಹಬ್ಬದ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಆಭರಣ ಹಾಗೂ ತವರಿನ ತಿನಿಸುಗಳನ್ನು ನೀಡಿ ಸತ್ಕರಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವೆಂದೇ ಭಾವಿಸಲಾಗಿದೆ. ​ಸಾಮಾಜಿಕವಾಗಿ ಎಷ್ಟೇ ಆಧುನಿಕತೆ ಬಂದರೂ, ತವರು ಮನೆಯಿಂದ ಬರುವ ಬಾಗಿನಕ್ಕಾಗಿ ಕಾಯುವ ಹೆಣ್ಣು ಮಗಳ ಕಣ್ಣಿನ ಕಾತುರ ಮತ್ತು ಅದನ್ನು ನೀಡುವಾಗ ಹೆತ್ತವರ ಮೊಗದಲ್ಲಿ ಮೂಡುವ ತೃಪ್ತಿ ನಮ್ಮ ಸಂಸ್ಕೃತಿಯ ಸಜೀವ ಸಾಕ್ಷಿಯಾಗಿದೆ. ಬಾಂಧವ್ಯದ ಬೆಸುಗೆಯಾಗಿರುವ ಈ ಗೌರಿ ಹಬ್ಬವು ನಾಡಿನಾದ್ಯಂತ ಸೌಹಾರ್ದತೆ ಮತ್ತು ಪ್ರೀತಿಯನ್ನು ಪಸರಿಸುತ್ತಿದೆ.
    1
    ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ
ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ
---------------------
​ಹುಳಿಯಾರು ಪೇಪರ್ ಕಿರಣ್ ನ್ಯೂಸ್: ಗೌರಿ ಹಬ್ಬವೆಂದರೆ ಸಾಕು ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ-ಸಂತೋಷ. ಅದರಲ್ಲೂ ಮದುವೆಯಾಗಿ ಹೊಸ ಮನೆಗೆ ತೆರಳಿರುವ ಹೆಣ್ಣು ಮಕ್ಕಳಿಗೆ ಈ ಹಬ್ಬದ ತವರಿನ ನೆನಪುಗಳು ದುಪ್ಪಟ್ಟು ಖುಷಿ ನೀಡುತ್ತವೆ. ವರ್ಷಕ್ಕೊಮ್ಮೆ ತವರು ಮನೆಯಿಂದ ತಂದೆ-ತಾಯಿ, ಅಣ್ಣ-ತಮ್ಮಂದಿರು ಪ್ರೀತಿಯಿಂದ ಬಂದು ಬಾಗಿನ ನೀಡುವುದು, ಅಥವಾ ಹೆಣ್ಣು ಮಗಳನ್ನು ತವರಿಗೆ ಕರೆತಂದು ಉಪಚರಿಸುವುದು ಯುಗಯುಗಗಳಿಂದ ಬೆಳೆದುಬಂದ ಭಾವನಾತ್ಮಕ ಪರಂಪರೆಯಾಗಿದೆ.
​ಬಡತನವಿರಲಿ, ಸಿರಿತನವಿರಲಿ; ಪ್ರತಿಯೊಂದು ಕುಟುಂಬವೂ ತಮ್ಮ ಶಕ್ತಿಸಾರವಾಗಿ ಗೌರಿ ಹಬ್ಬವನ್ನು ಆಚರಿಸಿ ಮಗಳ ಸಂತೋಷಕ್ಕಾಗಿ ಶ್ರಮಿಸುತ್ತದೆ. ಈ ಹಬ್ಬವು ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಕೊಂಡಿಯಾಗಿದೆ.
​ಬಾಗಿನದ ಮಹತ್ವ ಮತ್ತು ಶ್ರೀಮಂತ ಸಂಸ್ಕೃತಿ
​ಗೌರಿ ಹಬ್ಬದಲ್ಲಿ ನೀಡುವ 'ಬಾಗಿನ' ಕೇವಲ ವಸ್ತುಗಳ ಮೂಟೆಯಲ್ಲ, ಅದು ತವರಿನ ಅಕ್ಷಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
​ಬಾಗಿನದ ಸಾಮಗ್ರಿಗಳು: ಮೊರದಲ್ಲಿ ಅರಿಶಿನ, ಕುಂಕುಮ, ಬಳೆ, ಕನ್ನಡಿ, ಬಾಚಣಿಕೆ, ಕಪ್ಪು ದಾರ, ಅಕ್ಕಿ, ಬೇಳೆ ಧಾನ್ಯಗಳು, ಬೆಲ್ಲ, ತೆಂಗಿನಕಾಯಿ ಹಾಗೂ ಮಂಗಳ ದ್ರವ್ಯಗಳನ್ನು ಜೋಡಿಸಿ ಪೂಜಿಸಲಾಗುತ್ತದೆ.
​ಮಂಗಳ ಗೌರಿ ಪೂಜೆ: ಸುಮಂಗಲಿಯರು ತಮ್ಮ ಮುತ್ತೈದೆತನ, ಕುಟುಂಬದ ಕ್ಷೇಮ ಹಾಗೂ ಐಶ್ವರ್ಯಕ್ಕಾಗಿ ಸ್ವರ್ಣ ಗೌರಿಯನ್ನು ನಿಷ್ಠೆಯಿಂದ ಪೂಜಿಸಿ, ಹಿರಿಯ ಮುತ್ತೈದೆಯರಿಗೆ ಹಾಗೂ ತಾಯಿಗೆ ಬಾಗಿನ ನೀಡಿ ಆಶೀರ್ವಾದ ಪಡೆಯುತ್ತಾರೆ.
​ಭಾವನಾತ್ಮಕ ಬೆಸುಗೆ: ಮದುವೆಯಾಗಿ ಬೇರೆ ಮನೆಗೆ ಹೋದ ಮಗಳು ಕ್ಷೇಮವಾಗಿರಲಿ, ಆಕೆಯ ಸಂಸಾರದಲ್ಲಿ ಧಾನ್ಯ-ಧನ ಸಂಪತ್ತು ಸದಾ ಸಮೃದ್ಧವಾಗಿರಲಿ ಎಂಬ ಹಾರೈಕೆ ಈ ಬಾಗಿನದ ಹಿಂದಿರುವ ಮುಖ್ಯ ಉದ್ದೇಶ.
​ಸಂಪ್ರದಾಯದ ಉಳಿವಿಗೆ ಗ್ರಾಮೀಣ ಜನರ ಶ್ರಮ
​ಬದಲಾಗುತ್ತಿರುವ ಆಧುನಿಕ ಯುಗದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ಗೌರಿ ಹಬ್ಬದ ಕಳೆ ಕುಂದಿಲ್ಲ. ಹಬ್ಬದ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಆಭರಣ ಹಾಗೂ ತವರಿನ ತಿನಿಸುಗಳನ್ನು ನೀಡಿ ಸತ್ಕರಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವೆಂದೇ ಭಾವಿಸಲಾಗಿದೆ.
​ಸಾಮಾಜಿಕವಾಗಿ ಎಷ್ಟೇ ಆಧುನಿಕತೆ ಬಂದರೂ, ತವರು ಮನೆಯಿಂದ ಬರುವ ಬಾಗಿನಕ್ಕಾಗಿ ಕಾಯುವ ಹೆಣ್ಣು ಮಗಳ ಕಣ್ಣಿನ ಕಾತುರ ಮತ್ತು ಅದನ್ನು ನೀಡುವಾಗ ಹೆತ್ತವರ ಮೊಗದಲ್ಲಿ ಮೂಡುವ ತೃಪ್ತಿ ನಮ್ಮ ಸಂಸ್ಕೃತಿಯ ಸಜೀವ ಸಾಕ್ಷಿಯಾಗಿದೆ. ಬಾಂಧವ್ಯದ ಬೆಸುಗೆಯಾಗಿರುವ ಈ ಗೌರಿ ಹಬ್ಬವು ನಾಡಿನಾದ್ಯಂತ ಸೌಹಾರ್ದತೆ ಮತ್ತು ಪ್ರೀತಿಯನ್ನು ಪಸರಿಸುತ್ತಿದೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    5 hrs ago
  • ಚಿಕ್ಕನಾಯಕನಹಳ್ಳಿ: ಅಗಸರಹಳ್ಳಿಯಲ್ಲಿ ಕಿರಾತಕ ಕಿಡಿಗೇಡಿಗಳಿಂದ ಅಡಿಕೆ ಸಸಿಗಳ ಸರ್ವ ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿದ್ದ ನೂರಾರು ಅಡಿಕೆ ಸಸಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ಹಾಕಿ ವಿಕೃತಿ ಮೆರೆದಿರುವ ಘಟನೆ ಬುಧವಾರ ನಡೆದಿದೆ. ಗ್ರಾಮದ ಪುಟ್ಟಬಸವಯ್ಯ ಅವರ ಮಗ ಚಂದ್ರಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಚಂದ್ರಣ್ಣ ಅವರು ತಮ್ಮ ಜಮೀನಿನಲ್ಲಿ ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಸಸಿಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಕಷ್ಟಪಟ್ಟು ಬೆಳೆಸಿದ್ದ ಸಸಿಗಳು ನಾಶವಾಗಿರುವುದನ್ನು ಕಂಡು ರೈತ ಚಂದ್ರಣ್ಣ ಕಣ್ಣೀರು ಹಾಕಿದ್ದು, ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. "ಯಾರೊಂದಿಗೂ ಹಗೆತನವಿರಲಿಲ್ಲ, ಈ ರೀತಿ ಬೆಳೆ ನಾಶ ಮಾಡಿ ಹೊಟ್ಟೆಗೆ ಹೊಡೆದಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ನನಗೆ ಪರಿಹಾರ ಕೊಡಿಸಬೇಕು" ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ರೈತನಿಗೆ ಬೆಂಬಲವಾಗಿ ನಿಂತು, ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
    1
    ಚಿಕ್ಕನಾಯಕನಹಳ್ಳಿ: ಅಗಸರಹಳ್ಳಿಯಲ್ಲಿ  ಕಿರಾತಕ ಕಿಡಿಗೇಡಿಗಳಿಂದ ಅಡಿಕೆ ಸಸಿಗಳ ಸರ್ವ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿದ್ದ ನೂರಾರು ಅಡಿಕೆ ಸಸಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ಹಾಕಿ ವಿಕೃತಿ ಮೆರೆದಿರುವ ಘಟನೆ ಬುಧವಾರ ನಡೆದಿದೆ.
ಗ್ರಾಮದ ಪುಟ್ಟಬಸವಯ್ಯ ಅವರ ಮಗ ಚಂದ್ರಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಚಂದ್ರಣ್ಣ ಅವರು ತಮ್ಮ ಜಮೀನಿನಲ್ಲಿ ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಸಸಿಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ.
ಕಷ್ಟಪಟ್ಟು ಬೆಳೆಸಿದ್ದ ಸಸಿಗಳು ನಾಶವಾಗಿರುವುದನ್ನು ಕಂಡು ರೈತ ಚಂದ್ರಣ್ಣ ಕಣ್ಣೀರು ಹಾಕಿದ್ದು, ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. "ಯಾರೊಂದಿಗೂ ಹಗೆತನವಿರಲಿಲ್ಲ, ಈ ರೀತಿ ಬೆಳೆ ನಾಶ ಮಾಡಿ ಹೊಟ್ಟೆಗೆ ಹೊಡೆದಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ನನಗೆ ಪರಿಹಾರ ಕೊಡಿಸಬೇಕು" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ರೈತನಿಗೆ ಬೆಂಬಲವಾಗಿ ನಿಂತು, ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
    user_ಶಿವಕುಮಾರ್.ಎಸ್ ಸೋರಲಮಾವು
    ಶಿವಕುಮಾರ್.ಎಸ್ ಸೋರಲಮಾವು
    Local News Reporter ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    16 hrs ago
  • ಕೊರಟಗೆರೆ ನ್ಯೂಸ್ — ಸಂಕೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಕುಬೇರ ಗಣಪತಿ ಪ್ರತಿಷ್ಠಾಪನೆ ಹಾಗೂ  ದೇವಸ್ಥಾನ ಉದ್ಘಾಟನೆ.. ಕೊರಟಗೆರೆ ನ್ಯೂಸ್ — ಸಂಕೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಕುಬೇರ ಗಣಪತಿ ಪ್ರತಿಷ್ಠಾಪನೆ ಹಾಗೂ  ದೇವಸ್ಥಾನ ಉದ್ಘಾಟನೆ.. ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ 9 ವರ್ಷಗಳ ಕಾಲ ಗ್ರಾಮಸ್ಥರು ಕಂಡಿದ್ದ ಕನಸು ಇದೀಗ ನನಸಾಗಿದೆ. ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ನೂತನ ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮಠಾಧೀಶರು, ಗಣ್ಯರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ವಾಯ್ಸ್ ಓವರ್: ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು. ಗ್ರಾಮಸ್ಥರ ಸುಮಾರು 9 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡಿರುವ ನೂತನ ದೇವಸ್ಥಾನವು ಗ್ರಾಮಸ್ಥರ ಭಕ್ತಿ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ, ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಹಾಗೂ ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗವಹಿಸಿ ಕುಬೇರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ದೇವಸ್ಥಾನವನ್ನು ಉದ್ಘಾಟಿಸಿದರು. ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ: ಪ್ರತಿಯೊಂದು ಹಳ್ಳಿಯಲ್ಲೂ ಸಿರಿವಂತರು ಹಾಗೂ ಅನುಕೂಲಸ್ಥರು ತಮ್ಮ ಒಳ್ಳೆಯ ಮನಸ್ಸಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ದೇವಸ್ಥಾನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೇಂದ್ರಗಳಾಗಿದ್ದು, ಇದೇ ರೀತಿ ಪ್ರತಿಯೊಂದು ಗ್ರಾಮದಲ್ಲೂ ಉತ್ತಮ ಶಾಲೆಗಳಿರಬೇಕು. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ನಮ್ಮ ಆಚಾರ-ವಿಚಾರಗಳ ಅರಿವು ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಮೇಲಿದೆ. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂದರು. ಉದ್ಯಮಿ ನೀಲೇಶ್ ಮಾತನಾಡಿ: ನಾವು ಎಲ್ಲೇ ಇದ್ದರೂ, ಹೇಗೆ ಇದ್ದರೂ, ನಾವು ಹುಟ್ಟಿದ ಗ್ರಾಮವನ್ನು ಮರೆಯಬಾರದು. ನಮ್ಮ ಗ್ರಾಮಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗ್ರಾಮಗಳ ಅಭಿವೃದ್ಧಿಗೆ ಆರ್ಥಿಕ ಸಹಾಯದ ಜೊತೆಗೆ ಸಮಯ, ಶ್ರಮ ಹಾಗೂ ಮಾರ್ಗದರ್ಶನ ನೀಡುವ ಮೂಲಕವೂ ಸೇವೆ ಸಲ್ಲಿಸಬಹುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಡಾ. ಹನುಮಂತನಾಥ ಸ್ವಾಮೀಜಿ ಆಶೀರ್ವಚನ ನೀಡಿ: 48 ದಿನಗಳ ಕಾಲ ನಿಷ್ಠೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನ ಪೂಜೆ ಮಾಡಿದರೆ ಭಗವಂತನ ಅನುಗ್ರಹ ದೊರೆಯುತ್ತದೆ. ಆದರೆ ದೇವರ ಅನುಗ್ರಹ ಪಡೆಯುವ ಜೊತೆಗೆ ತಂದೆ-ತಾಯಿಯ ಸೇವೆ ಮಾಡುವುದು ಅತ್ಯಂತ ಮುಖ್ಯ. ಹಿರಿಯರನ್ನು ಗೌರವಿಸಿ, ಸತ್ಯ, ಧರ್ಮ ಹಾಗೂ ನೀತಿಯ ಮಾರ್ಗದಲ್ಲಿ ಜೀವನ ನಡೆಸಬೇಕು. ಭಕ್ತಿ ನಮ್ಮ ಬದುಕಿಗೆ ದಾರಿ ತೋರಿಸುವ ಶಕ್ತಿಯಾಗಬೇಕು ಎಂದು ತಿಳಿಸಿದರು. ಶ್ರೀ ವೀರ ಬಸವಲಿಂಗ ಸ್ವಾಮೀಜಿ ಮಾತನಾಡಿ: ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲ, ಸಂಸ್ಕಾರವಂತರನ್ನಾಗಿಯೂ ಬೆಳೆಸಬೇಕು. ಮೊಬೈಲ್ ಮತ್ತು ಟಿವಿಯ ಬಳಕೆಯನ್ನು ಕಡಿಮೆ ಮಾಡಿ, ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನು ಕಲಿಸಬೇಕು. ‘ಎ’ ಎಂದರೆ ಅಪ್ಪ-ಅಮ್ಮ, ‘ಬಿ’ ಎಂದರೆ ಬಂಧು-ಬಳಗ ಎಂಬಂತೆ ಸಂಬಂಧಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ತಂದೆ-ತಾಯಿ, ಗುರುಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಕರೆ ನೀಡಿದರು. ಉದ್ಯಮಿ ಶ್ರೀನಾಗ್ ಮಾತನಾಡಿ: ಸಂಕೇನಹಳ್ಳಿ ಗ್ರಾಮದಲ್ಲಿ ‘ಕುಬೇರ ಗಣಪತಿ’ ಎಂಬ ಹೆಸರು ಬರಲು ಪ್ರಮುಖ ಕಾರಣ ಗ್ರಾಮಸ್ಥರ ಭಕ್ತಿ, ಒಗ್ಗಟ್ಟು ಮತ್ತು ಸಂಕಲ್ಪ. ಗ್ರಾಮಸ್ಥರೆಲ್ಲರೂ ಒಂದಾಗಿ ನಿಂತು ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಇದು ಕೇವಲ ದೇವಸ್ಥಾನವಲ್ಲ, ಗ್ರಾಮದ ಜನರ ಒಗ್ಗಟ್ಟಿನ ಪ್ರತೀಕವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ವಾಯ್ಸ್ ಓವರ್: ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಕೇನಹಳ್ಳಿ, ಗೋಕುಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಬೇರ ಗಣಪತಿಯ ದರ್ಶನ ಪಡೆದು ಪುನೀತರಾದರು. ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರಿಂದ ಇಡೀ ಸಂಕೇನಹಳ್ಳಿ ಗ್ರಾಮವು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು. ಆಂಕರ್ ಔಟ್ರೋ: ಒಂಬತ್ತು ವರ್ಷಗಳ ಗ್ರಾಮಸ್ಥರ ಕನಸು ನನಸಾಗಿದ್ದು, ನೂತನ ಕುಬೇರ ಗಣಪತಿ ದೇವಸ್ಥಾನ ಇದೀಗ ಭಕ್ತರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿದೆ. ಗ್ರಾಮಸ್ಥರ ಒಗ್ಗಟ್ಟು ಮತ್ತು ಭಕ್ತಿಗೆ ಈ ದೇವಸ್ಥಾನ ಸಾಕ್ಷಿಯಾಗಿದೆ.
    3
    ಕೊರಟಗೆರೆ ನ್ಯೂಸ್ — ಸಂಕೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಕುಬೇರ ಗಣಪತಿ ಪ್ರತಿಷ್ಠಾಪನೆ ಹಾಗೂ  ದೇವಸ್ಥಾನ ಉದ್ಘಾಟನೆ..
ಕೊರಟಗೆರೆ ನ್ಯೂಸ್ — ಸಂಕೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಕುಬೇರ ಗಣಪತಿ ಪ್ರತಿಷ್ಠಾಪನೆ ಹಾಗೂ  ದೇವಸ್ಥಾನ ಉದ್ಘಾಟನೆ..
ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ 9 ವರ್ಷಗಳ ಕಾಲ ಗ್ರಾಮಸ್ಥರು ಕಂಡಿದ್ದ ಕನಸು ಇದೀಗ ನನಸಾಗಿದೆ. ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ನೂತನ ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮಠಾಧೀಶರು, ಗಣ್ಯರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ವಾಯ್ಸ್ ಓವರ್:
ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.
ಗ್ರಾಮಸ್ಥರ ಸುಮಾರು 9 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡಿರುವ ನೂತನ ದೇವಸ್ಥಾನವು ಗ್ರಾಮಸ್ಥರ ಭಕ್ತಿ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ, ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಹಾಗೂ ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗವಹಿಸಿ ಕುಬೇರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ದೇವಸ್ಥಾನವನ್ನು ಉದ್ಘಾಟಿಸಿದರು.
ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ:
ಪ್ರತಿಯೊಂದು ಹಳ್ಳಿಯಲ್ಲೂ ಸಿರಿವಂತರು ಹಾಗೂ ಅನುಕೂಲಸ್ಥರು ತಮ್ಮ ಒಳ್ಳೆಯ ಮನಸ್ಸಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ದೇವಸ್ಥಾನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೇಂದ್ರಗಳಾಗಿದ್ದು, ಇದೇ ರೀತಿ ಪ್ರತಿಯೊಂದು ಗ್ರಾಮದಲ್ಲೂ ಉತ್ತಮ ಶಾಲೆಗಳಿರಬೇಕು. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ನಮ್ಮ ಆಚಾರ-ವಿಚಾರಗಳ ಅರಿವು ಬೆಳೆಸುವ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಮೇಲಿದೆ. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂದರು.
ಉದ್ಯಮಿ ನೀಲೇಶ್ ಮಾತನಾಡಿ:
ನಾವು ಎಲ್ಲೇ ಇದ್ದರೂ, ಹೇಗೆ ಇದ್ದರೂ, ನಾವು ಹುಟ್ಟಿದ ಗ್ರಾಮವನ್ನು ಮರೆಯಬಾರದು. ನಮ್ಮ ಗ್ರಾಮಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗ್ರಾಮಗಳ ಅಭಿವೃದ್ಧಿಗೆ ಆರ್ಥಿಕ ಸಹಾಯದ ಜೊತೆಗೆ ಸಮಯ, ಶ್ರಮ ಹಾಗೂ ಮಾರ್ಗದರ್ಶನ ನೀಡುವ ಮೂಲಕವೂ ಸೇವೆ ಸಲ್ಲಿಸಬಹುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಡಾ. ಹನುಮಂತನಾಥ ಸ್ವಾಮೀಜಿ ಆಶೀರ್ವಚನ ನೀಡಿ:
48 ದಿನಗಳ ಕಾಲ ನಿಷ್ಠೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನ ಪೂಜೆ ಮಾಡಿದರೆ ಭಗವಂತನ ಅನುಗ್ರಹ ದೊರೆಯುತ್ತದೆ. ಆದರೆ ದೇವರ ಅನುಗ್ರಹ ಪಡೆಯುವ ಜೊತೆಗೆ ತಂದೆ-ತಾಯಿಯ ಸೇವೆ ಮಾಡುವುದು ಅತ್ಯಂತ ಮುಖ್ಯ. ಹಿರಿಯರನ್ನು ಗೌರವಿಸಿ, ಸತ್ಯ, ಧರ್ಮ ಹಾಗೂ ನೀತಿಯ ಮಾರ್ಗದಲ್ಲಿ ಜೀವನ ನಡೆಸಬೇಕು. ಭಕ್ತಿ ನಮ್ಮ ಬದುಕಿಗೆ ದಾರಿ ತೋರಿಸುವ ಶಕ್ತಿಯಾಗಬೇಕು ಎಂದು ತಿಳಿಸಿದರು.
ಶ್ರೀ ವೀರ ಬಸವಲಿಂಗ ಸ್ವಾಮೀಜಿ ಮಾತನಾಡಿ:
ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲ, ಸಂಸ್ಕಾರವಂತರನ್ನಾಗಿಯೂ ಬೆಳೆಸಬೇಕು. ಮೊಬೈಲ್ ಮತ್ತು ಟಿವಿಯ ಬಳಕೆಯನ್ನು ಕಡಿಮೆ ಮಾಡಿ, ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನು ಕಲಿಸಬೇಕು. ‘ಎ’ ಎಂದರೆ ಅಪ್ಪ-ಅಮ್ಮ, ‘ಬಿ’ ಎಂದರೆ ಬಂಧು-ಬಳಗ ಎಂಬಂತೆ ಸಂಬಂಧಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ತಂದೆ-ತಾಯಿ, ಗುರುಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಕರೆ ನೀಡಿದರು.
ಉದ್ಯಮಿ ಶ್ರೀನಾಗ್ ಮಾತನಾಡಿ:
ಸಂಕೇನಹಳ್ಳಿ ಗ್ರಾಮದಲ್ಲಿ ‘ಕುಬೇರ ಗಣಪತಿ’ ಎಂಬ ಹೆಸರು ಬರಲು ಪ್ರಮುಖ ಕಾರಣ ಗ್ರಾಮಸ್ಥರ ಭಕ್ತಿ, ಒಗ್ಗಟ್ಟು ಮತ್ತು ಸಂಕಲ್ಪ. ಗ್ರಾಮಸ್ಥರೆಲ್ಲರೂ ಒಂದಾಗಿ ನಿಂತು ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಇದು ಕೇವಲ ದೇವಸ್ಥಾನವಲ್ಲ, ಗ್ರಾಮದ ಜನರ ಒಗ್ಗಟ್ಟಿನ ಪ್ರತೀಕವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ವಾಯ್ಸ್ ಓವರ್:
ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಕೇನಹಳ್ಳಿ, ಗೋಕುಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಬೇರ ಗಣಪತಿಯ ದರ್ಶನ ಪಡೆದು ಪುನೀತರಾದರು.
ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರಿಂದ ಇಡೀ ಸಂಕೇನಹಳ್ಳಿ ಗ್ರಾಮವು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ಆಂಕರ್ ಔಟ್ರೋ:
ಒಂಬತ್ತು ವರ್ಷಗಳ ಗ್ರಾಮಸ್ಥರ ಕನಸು ನನಸಾಗಿದ್ದು, ನೂತನ ಕುಬೇರ ಗಣಪತಿ ದೇವಸ್ಥಾನ ಇದೀಗ ಭಕ್ತರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿದೆ. ಗ್ರಾಮಸ್ಥರ ಒಗ್ಗಟ್ಟು ಮತ್ತು ಭಕ್ತಿಗೆ ಈ ದೇವಸ್ಥಾನ ಸಾಕ್ಷಿಯಾಗಿದೆ.
    user_Mutthuraj Raj
    Mutthuraj Raj
    Photographer ಕೊರಟಗೆರೆ, ತುಮಕೂರು, ಕರ್ನಾಟಕ•
    19 hrs ago
  • ಸಿಂಪಲ್ ಮ್ಯಾಚ್..
    1
    ಸಿಂಪಲ್ ಮ್ಯಾಚ್..
    user_JAYASIMHA.M.K{JAISEE}
    JAYASIMHA.M.K{JAISEE}
    Farmer Nelamangala, Bengaluru Rural•
    1 hr ago
  • ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. 7 ಗಂಟೆಯ ವಿಮಾನದಲ್ಲಿ ಪ್ರಯಾಣ. AI2654 ವಿಮಾನದ ಮೂಲಕ ಪ್ರಯಾಣ. ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ. ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    1
    ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ.
ದೇವನಹಳ್ಳಿ 
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ.
7 ಗಂಟೆಯ ವಿಮಾನದಲ್ಲಿ ಪ್ರಯಾಣ.
AI2654 ವಿಮಾನದ ಮೂಲಕ ಪ್ರಯಾಣ.
ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ.
ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ 
ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ 
ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
  • ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ದಾಖಲು ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ದಾಖಲು
    1
    ಪುನೀತ್ ಕೆರೆಹಳ್ಳಿ ಹಾಗೂ ಅವರ 
ಬೆಂಬಲಿಗರ ವಿರುದ್ಧ ದೂರು ದಾಖಲು 
ಪುನೀತ್ ಕೆರೆಹಳ್ಳಿ ಹಾಗೂ ಅವರ 
ಬೆಂಬಲಿಗರ ವಿರುದ್ಧ ದೂರು ದಾಖಲು
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಗುಬ್ಬಿ ತಾಲೂಕಿನ ಪತ್ರಾವುತನಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಗುಬ್ಬಿ ಭಾರತ ಸುಸಂಸ್ಕೃತ ರಾಷ್ಟ್ರ ಇಡೀ ವಿಶ್ವವೇ ಭಾರತದ ಸಂಸ್ಕೃತಿಯನ್ನು ಅನುಸರಿಸುತ್ತಿದೆ ಪ್ರತಿಯೊಬ್ಬರೂ ಧರ್ಮ ದಾರಿತವಾಗಿ ಬದುಕನ್ನು ಸಾಗಿಸುವುದು ಸೂಕ್ತ ಎಂದು ಶಿಡ್ಲೇಕೋಣ ಶ್ರೀ ವಾಲ್ಮೀಕಿ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಸಂಜಯ್ ಕುಮಾರ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಪತ್ರಾವುತನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸುಂದರವಾದ ದೇವಾಲಯಗಳನ್ನು ಕಟ್ಟಿದರೆ ಸಾಲದು ಸುಂದರವಾದ ಬದುಕನ್ನು ಕಟ್ಟಿಕೊಂಡು ಸಂಸ್ಕಾರವಂತರಾಗಿ ಬದುಕಬೇಕೆಂದು ತಿಳಿಸಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಧಾರ್ಮಿಕ ಪ್ರಜ್ಞೆ ಮೂಡಿಸಿ ಸಾಮಾಜಿಕ ಅರಿವು ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಶಕ್ತಿ ದೇವತೆ ಮಾರಮ್ಮನವರ ಮೂಲವನ್ನ ತಿಳಿಸಿದ ಶ್ರೀಗಳು ಪೂಜೆ ಆಡಂಬರವಾಗಿರಬಾರದು ಮೌಲ್ಯದಿಂದ ಕೂಡಿರಬೇಕು ಅರಿವಿನಿಂದ ಬದುಕಿದರೆ ದೇವರು ತಾನಾಗಿಯೇ ಒಲಿದು ಬರುತ್ತಾನೆ ಎಂದರು. ಬದುಕಿನಲ್ಲಿ ದುಡಿಯುವುದು ಅರ್ಥಪೂರ್ಣವಾಗಿರಬೇಕು ದುಡಿಮೆಯ ಒಂದು ಅಂಶ ಧರ್ಮಕ್ಕೆ ಮೀಸಲಿಡಬೇಕು, ದುಶ್ಚಟಗಳಿಂದ ದೂರ ಇರಬೇಕು ಎಂದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಅಂತಹ ಒಗ್ಗಟ್ಟು ನಿಮ್ಮ ಗ್ರಾಮದಲ್ಲಿ ಎದ್ದು ಕಾಣುತ್ತದೆ ಎಂದರು. ಇದೆ ಸಂದರ್ಭದಲ್ಲಿ ದೇವರುಗಳ ಉತ್ಸವ ಅದ್ದೂರಿಯಾಗಿ ನೆರವೇರಿತು, ಬಂದಿದ್ದ ಭಕ್ತಾದಿಗಳಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಪಟ್ಟಿ ಲಕ್ಕಮ್ಮದೇವಿ ಪ್ರಧಾನ ಅರ್ಚಕರಾದ ಗೋವಿಂದರಾಜು, ದಯಾನಂದ ಗೌಡ, ಪಣಗಾರ್ ಮೋಹನ್ ಕುಮಾರ್, ಚಿಕ್ಕ ರಂಗಯ್ಯ, ಗಂಗಾಧರಪ್ಪ ವತ್ಸಲ ಕುಮಾರ್, ಚಿಕ್ಕಮ್ಮ ಶ್ರೀ ರಂಗಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಪುಟ್ಟರಾಜು, ಸದಸ್ಯರಾದ ಶಿವಣ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಣ್ಣ, ವಕೀಲರಾದ ಜಯ ರಂಗಯ್ಯ ಸಿ ರಮೇಶ್ ಪಿ ಎಸ ಐ ನಾಗರಾಜು, ರಮೇಶ್ ರಾವ್, ಏನ್ ಉಮೇಶ್, ಕಾಂತರಾಜು, ಖಜಾಂಚಿ ಸುರೇಶ್, ಕಮಿಟಿ ಅಧ್ಯಕ್ಷ ಕಿಟ್ಟಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಶ್ರೀ ರಂಗಯ್ಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.
    1
    ಗುಬ್ಬಿ ತಾಲೂಕಿನ ಪತ್ರಾವುತನಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ
ಗುಬ್ಬಿ ಭಾರತ ಸುಸಂಸ್ಕೃತ ರಾಷ್ಟ್ರ ಇಡೀ ವಿಶ್ವವೇ ಭಾರತದ ಸಂಸ್ಕೃತಿಯನ್ನು ಅನುಸರಿಸುತ್ತಿದೆ ಪ್ರತಿಯೊಬ್ಬರೂ ಧರ್ಮ ದಾರಿತವಾಗಿ ಬದುಕನ್ನು ಸಾಗಿಸುವುದು ಸೂಕ್ತ ಎಂದು ಶಿಡ್ಲೇಕೋಣ ಶ್ರೀ ವಾಲ್ಮೀಕಿ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಸಂಜಯ್ ಕುಮಾರ ಮಹಾಸ್ವಾಮಿಗಳು ತಿಳಿಸಿದರು.     
ಗುಬ್ಬಿ ತಾಲೂಕಿನ  ಚೇಳೂರು ಹೋಬಳಿ ಪತ್ರಾವುತನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಆದಿಶಕ್ತಿ ಮಾರಮ್ಮ ದೇವಿಯವರ ಚರಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸುಂದರವಾದ ದೇವಾಲಯಗಳನ್ನು ಕಟ್ಟಿದರೆ ಸಾಲದು ಸುಂದರವಾದ ಬದುಕನ್ನು ಕಟ್ಟಿಕೊಂಡು ಸಂಸ್ಕಾರವಂತರಾಗಿ ಬದುಕಬೇಕೆಂದು ತಿಳಿಸಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಧಾರ್ಮಿಕ ಪ್ರಜ್ಞೆ ಮೂಡಿಸಿ ಸಾಮಾಜಿಕ ಅರಿವು ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಶಕ್ತಿ ದೇವತೆ ಮಾರಮ್ಮನವರ ಮೂಲವನ್ನ ತಿಳಿಸಿದ ಶ್ರೀಗಳು ಪೂಜೆ ಆಡಂಬರವಾಗಿರಬಾರದು ಮೌಲ್ಯದಿಂದ ಕೂಡಿರಬೇಕು ಅರಿವಿನಿಂದ ಬದುಕಿದರೆ ದೇವರು ತಾನಾಗಿಯೇ ಒಲಿದು ಬರುತ್ತಾನೆ ಎಂದರು.   ಬದುಕಿನಲ್ಲಿ ದುಡಿಯುವುದು ಅರ್ಥಪೂರ್ಣವಾಗಿರಬೇಕು ದುಡಿಮೆಯ ಒಂದು ಅಂಶ ಧರ್ಮಕ್ಕೆ ಮೀಸಲಿಡಬೇಕು, ದುಶ್ಚಟಗಳಿಂದ ದೂರ ಇರಬೇಕು ಎಂದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಅಂತಹ ಒಗ್ಗಟ್ಟು ನಿಮ್ಮ ಗ್ರಾಮದಲ್ಲಿ ಎದ್ದು ಕಾಣುತ್ತದೆ ಎಂದರು.                     
ಇದೆ ಸಂದರ್ಭದಲ್ಲಿ   ದೇವರುಗಳ ಉತ್ಸವ ಅದ್ದೂರಿಯಾಗಿ ನೆರವೇರಿತು, ಬಂದಿದ್ದ ಭಕ್ತಾದಿಗಳಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು. 
ಕಾರ್ಯಕ್ರಮದಲ್ಲಿ ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಪಟ್ಟಿ ಲಕ್ಕಮ್ಮದೇವಿ ಪ್ರಧಾನ ಅರ್ಚಕರಾದ ಗೋವಿಂದರಾಜು, ದಯಾನಂದ ಗೌಡ, ಪಣಗಾರ್ ಮೋಹನ್ ಕುಮಾರ್, ಚಿಕ್ಕ ರಂಗಯ್ಯ, ಗಂಗಾಧರಪ್ಪ ವತ್ಸಲ ಕುಮಾರ್, ಚಿಕ್ಕಮ್ಮ ಶ್ರೀ ರಂಗಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಪುಟ್ಟರಾಜು, ಸದಸ್ಯರಾದ ಶಿವಣ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಣ್ಣ, ವಕೀಲರಾದ ಜಯ ರಂಗಯ್ಯ ಸಿ ರಮೇಶ್  ಪಿ ಎಸ ಐ ನಾಗರಾಜು, ರಮೇಶ್ ರಾವ್, ಏನ್ ಉಮೇಶ್, ಕಾಂತರಾಜು, ಖಜಾಂಚಿ ಸುರೇಶ್, ಕಮಿಟಿ ಅಧ್ಯಕ್ಷ ಕಿಟ್ಟಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಶ್ರೀ ರಂಗಯ್ಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.